ಬೆಂಗಳೂರು, ಮಾ.03 www.bengaluruwire.com : ಕರ್ನಾಟಕ ರಾಜ್ಯ ಖೊ-ಖೊ ಸಂಸ್ಥೆಯ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಲೋಕೇಶ್ವರ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮಂಜುನಾಥ್ ಜಿ.ವೈ., ಜಗದೀಶ್, ಮುರಳೀಧರ್ ಕೆ. ಬಿ. ಭೀಮಣ್ಣ, ಜಯರಾಂ ಆಯ್ಕೆಯಾಗಿದ್ದಾರೆ. ಅವರೊಂದಿಗೆ ಗೌರವ ಕಾರ್ಯದರ್ಶಿಯಾಗಿ ರಾಮಲಿಂಗಪ್ಪ, ಖಜಾಂಚಿಯಾಗಿ ಶೋಭಾ ನಾರಾಯಣ್, ಜಂಟಿ ಕಾರ್ಯದರ್ಶಿಯಾಗಿ ಟಿ. ಕರಿಬಸಪ್ಪ ಹಾಗೂ ಜೋಸೆಫ್ ವೇದಕುಮಾರ್ ಗೆಲುವು ಸಾಧಿಸಿದ್ದಾರೆ. ಸಂಸ್ಥೆಯ ಆಡಳಿತಾವಧಿ ಮುಂದಿನ ನಾಲ್ಕು ವರ್ಷಗಳ ಕಾಲ ಇರಲಿದೆ ಎಂದು ಖೊ ಖೊ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.






















