Saturday, June 13, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | ಬೆಂಗಳೂರು ಏರ್ ಪೋರ್ಟಿನಲ್ಲಿ ಬೆಸ್ಕಾಂ ಸ್ಥಾಪಿಸಿದ ದೇಶದ ಮೊದಲ ಸೋಲಾರ್ ಚಾರ್ಜಿಂಗ್ ಇವಿ ಹಬ್ ಸದ್ಯದಲ್ಲೇ ಪ್ರಾರಂಭ

by Bengaluru Wire Desk
November 27, 2024
in Bengaluru Focus, BW Special, Public interest
Reading Time: 2 mins read
0
KIAL Solar Ev Charging Hub

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಿರುವ ಸೋಲಾರ್ ಇವಿ ಚಾರ್ಜಿಂಗ್ ಸ್ಟೇಷನ್.

ಬೆಂಗಳೂರು, ನ.27 www.bengaluruwire.com : ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport – KIAL)ದ ಸಮೀಪ ದೇಶದಲ್ಲೇ ಪ್ರಥಮ ಬಾರಿಗೆ ಬೆಸ್ಕಾಂ ಸಂಸ್ಥೆಯು ಸೌರಮೇಲ್ಛಾವಣಿ ಮರುಬಳಕೆ ಬ್ಯಾಟರಿ ಆಧಾರಿತ ಇವಿ-ಚಾರ್ಜಿಂಗ್ ಕೇಂದ್ರ (Solar Roof top enabled second life battery backed Ev charging Station) ವನ್ನು ನಿರ್ಮಾಣ ಮಾಡುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳಲಿದೆ.

ಕೆಐಎಎಲ್ ಸಮೀಪ 400 ಕಿ. ವ್ಯಾ ಸಾಮರ್ಥ್ಯದ 23 ವಿದ್ಯುತ್ ಚಾಲಿತ ಕಾರುಗಳನ್ನು ಒಂದೇ ಬಾರಿ ಚಾರ್ಜಿಂಗ್‌ ಮಾಡುವ ಬೃಹತ್‌ ಇವಿ ಚಾರ್ಜಿಂಗ್‌ ಹಬ್‌ ಒಟ್ಟು 560 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ. 45 ಕೆ.ವಿ ಸಾಮರ್ಥ್ಯದ ತಲಾ 2 ಲೈಫ್‌ ಬ್ಯಾಟರಿಗಳನ್ನೊಳಗೊಂಡಿದೆ. ಬೆಳಗಿನ ಹೊತ್ತು ಸೌರ ವಿದ್ಯುತ್‌ ಅನ್ನು ಸಂಗ್ರಹ ಮಾಡಿ ದಿನದ 24 ಗಂಟೆಗಳ ಕಾಲ ಇವಿ ಚಾರ್ಜಿಂಗ್‌ ಸೌಲಭ್ಯ ನೀಡುವ ದೇಶದ ಮೊದಲ ಚಾರ್ಜಿಂಗ್‌ ಸ್ಟೇಷನ್‌ ಇದಾಗಿದೆ.

ಬೆಸ್ಕಾಂ ಸಂಸ್ಥೆಯು ಕೇಂದ್ರ ಸರ್ಕಾರ, ಗಿಜ್ ಇಂಡಿಯಾ, ಬಾಷ್ ಹಾಗೂ ನೂನಮ್ ಎಂಬ ಸಂಸ್ಥೆಯ ಸಹಯೋಗದಲ್ಲಿ ಪೈಲೆಟ್ ಆಧಾರಿತವಾಗಿ ಈ ಇವಿ ಚಾರ್ಜಿಂಗ್ ಸ್ಟೇಷನ್ ಅನ್ನು ಪ್ರಾರಂಭಿಸುತ್ತಿದೆ. 45 ಕಿಲೋ ವ್ಯಾಟ್ ಸಾಮರ್ಥ್ಯವುಳ್ಳ 81 ಸೌರಫಲಕಗಳಿಂದ ದಿನಕ್ಕೆ ಗರಿಷ್ಠ 160 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಈ ಇವಿ ಚಾರ್ಜಿಂಗ್ ಕೇಂದ್ರವನ್ನು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.

ಸೌರಮೇಲ್ಛಾವಣಿ ಮರುಬಳಕೆ ಬ್ಯಾಟರಿ ಆಧಾರಿತ ಇವಿ-ಚಾರ್ಜಿಂಗ್ ಕೇಂದ್ರದ ಚಿತ್ರ.

ಡಿಸಿ ಚಾರ್ಜಿಂಗ್‌  ಸೌಲಭ್ಯ:

50 ಕಿ. ವ್ಯಾಟ್‌  ಸಾಮರ್ಥ್ಯದ 5 ಕಂಬೈನ್ಡ್‌ ಚಾರ್ಜಿಂಗ್‌  ಸಿಸ್ಟಮ್‌ (ಸಿಸಿಎಸ್‌) -2  ಜಾರ್ಜರ್‌ ಗಳು, 30 ಕಿಲೋ ವ್ಯಾಟ್‌ ಸಾಮರ್ಥ್ಯದ ನಾಲ್ಕು ಡಿಸಿ-001 ಚಾರ್ಜರ್‌ ಗಳು, 7.5 ಕಿಲೋ ವ್ಯಾಟ್‌ ಸಾಮರ್ಥ್ಯದ 2 ಟೈಪ್‌ -2 ಚಾರ್ಜರ್‌ ಗಳು ಹಾಗೂ 1 ಎಸಿ-001 3.3 ಕಿ.ವ್ಯಾ ಜಾರ್ಜರ್‌ಗಳನ್ನು ಇಲ್ಲಿ ಅಳವಡಿಸಲಾಗಿದ್ದು, 560 ಮೀಟರ್‌ ವಿಸ್ತಿರ್ಣದ ಜಾಗದಲ್ಲಿ ಒಟ್ಟು 23 ವಾಹನಗಳನ್ನು ಏಕಕಾಲಕ್ಕೆ ಚಾರ್ಜಿಂಗ್‌ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಇಲ್ಲಿ ಅಳವಡಿಕೆಯಾಗಿದೆ 81 ಸೌರ ಫಲಕಗಳು :

“ಈಗಾಗಲೇ ಇವಿ ಚಾರ್ಜಿಂಗ್ ಹಬ್ ನಲ್ಲಿ 81 ಸೌರಫಲಕಗಳನ್ನು ಅಳವಡಿಸಲಾಗಿದೆ, 6 ಸಿಂಗಲ್ ಫೇಸ್ ಹೈಬ್ರಿಡ್ ಇನ್ ವರ್ಟರ್, ಕಾರಿನಲ್ಲಿ ಬಳಸಿ ಅವಧಿ ಪೂರ್ಣವಾದ ಬ್ಯಾಟರಿಗಳನ್ನು ಮರುಬಳಕೆಗೆ ಯೋಗ್ಯವಾದ ರೀತಿಯಲ್ಲಿ ಸಿದ್ಧಪಡಿಸಿದ ಸೆಕೆಂಡ್ ಲೈಫ್ ಬ್ಯಾಟರಿಗಳನ್ನು ಸೋಲಾರ್ ವಿದ್ಯುತ್ ಸಂಗ್ರಹಿಸಿ ಇವಿ ವಾಹನಗಳು ಚಾರ್ಜಿಂಗ್ ಗಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಬ್ಯಾಟರಿಗಳಿಗೆ ತಗಲುವ ವೆಚ್ಚ ಕಡಿಮೆಯಿದ್ದು, ಒಟ್ಟಾರೆ 5 ವರ್ಷಗಳ ಕಾಲ ಅಥವಾ 2 ಸಾವಿರ ಸೈಕಲ್ಸ್ ರಂತೆ ವ್ಯಾರಂಟಿಯಿರಲಿದೆ ಎನ್ನುತ್ತಾರೆ ಬೆಸ್ಕಾಂ ಇವಿ ಕೋಶದ ಎಜಿಮ್ ವಿಜಯ್ ರಾವ್.

ಬೆಳಗ್ಗೆ ಹೊತ್ತು ಸೌರ ವಿದ್ಯುತ್- ರಾತ್ರಿ ಸೋಲಾರ್ ಸ್ಟೋರೇಜ್ ವಿದ್ಯುತ್ :

ಇವಿ ಚಾರ್ಜಿಂಗ್ ಸ್ಟೇಷನ್ ಒಳಗೆ ಸೆಕೆಂಡ್ ಲೈಫ್ ಬ್ಯಾಟರಿ, ಇನ್ ವರ್ಟರ್ ಅಳವಡಿಸಿರುವ ಚಿತ್ರ.

ಬೆಳಗಿನ ಹೊತ್ತು ಸೌರ ವಿದ್ಯುತ್ ಉತ್ಪಾದನೆಯಿಂದ ಇವಿ ವಾಹನಗಳಿಗೆ ಚಾರ್ಜಿಂಗ್ ಮಾಡಬಹುದು. ಚಾರ್ಜಿಂಗ್ ಮಾಡದಿದ್ದಾಗ ಉತ್ಪಾದನೆಯಾಗುವ ವಿದ್ಯುತ್ ಸೆಕೆಂಡ್ ಲೈಫ್ ಬ್ಯಾಟರಿಯಲ್ಲಿ ಸಂಗ್ರಹವಾಗಿ, ರಾತ್ರಿ ವೇಳೆ ಅದನ್ನು ಬಳಸಲಾಗುತ್ತದೆ. ಒಂದೊಮ್ಮೆ ಆ ಬ್ಯಾಟರಿ ಪೂರ್ತಿ ಚಾರ್ಜ್ ಆದರೆ, ಹೆಚ್ಚುವರಿ ಉತ್ಪಾದನೆಯಾಗುವ ಸೌರ ವಿದ್ಯುತ್ ಗ್ರಿಡ್ ಗೆ ಹೋಗಲಿದೆ. ಒಂದೊಮ್ಮೆ ಸೌರ ವಿದ್ಯುತ್ ಲಭ್ಯವಾಗದಿದ್ದಾಗ ಬೆಸ್ಕಾಂ ಗ್ರಿಡ್ ನಿಂದ ವಿದ್ಯುತ್ ಬಳಕೆ ಮಾಡಿ ಚಾರ್ಜಿಂಗ್ ಮಾಡುವ ರೀತಿ ಈ ಕೇಂದ್ರವನ್ನು ವಿನ್ಯಾಸ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಬೃಹತ್‌ ಚಾರ್ಜಿಂಗ್‌  ಸ್ಟೇಷನ್‌ ನಿರ್ಮಾಣಕ್ಕೆ ಅಂದಾಜು 4 ಕೋಟಿ ರೂ. ವೆಚ್ಚ ತಗಲಿದ್ದು, 2 ಲೈಫ್ ಬ್ಯಾಟರಿ ಅಳವಡಿಕೆಯಿಂದಾಗಿ ಸೋಲಾರ್‌ ನಿಂದ ಉತ್ಪತ್ತಿಯಾಗುವ ವಿದ್ಯುತ್‌ ಅನ್ನು ಸ್ಟೋರೆಜ್‌ ಮಾಡಬಹುದಾಗಿದೆ. ಹಾಗೆಯೇ ನೆಟ್‌ ಮೀಟರಿಂಗ್‌ ಅಳವಡಿಸಿರುವುದರಿಂದ ಹೆಚ್ಚುವರಿ ವಿದ್ಯುತ್‌ ಅನ್ನು ಗ್ರಿಡ್‌ ಗೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 400 ಕಿ. ವ್ಯಾಟ್‌ ಸಾಮರ್ಥ್ಯದ ಇವಿ ಚಾರ್ಜಿಂಗ್‌  ಸ್ಟೇಷನ್‌ ನಲ್ಲಿ 45 ಕಿ.ವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಅನ್ನು ಸೊಲಾರ್‌ ನಿಂದ ಉತ್ಪಾದಿಸಲು ಕ್ರಮ ವಹಿಸಲಾಗಿದೆ ಎಂದು ಬೆಸ್ಕಾಂ ಮತ್ತೊಬ್ಬ ಎಂಜಿನಿಯರ್ ತಿಳಿಸಿದ್ದಾರೆ.

ಬೆಸ್ಕಾಂ ದೇಶದಲ್ಲೇ ಅತಿಹೆಚ್ಚು ಇವಿ ಸ್ಟೇಷನ್ ಹೊಂದಿದ ಕಂಪನಿ :

ಬೆಸ್ಕಾಂ ಸಂಸ್ಥೆಯು ಒಟ್ಟಾರೆಯಾಗಿ 5,765 ಇವಿ ಸ್ಟೇಷನ್ ಗಳನ್ನು ತೆರೆದಿದ್ದು ಇದು ಇಡೀ ರಾಷ್ಟ್ರದಲ್ಲಿಯೇ ಅತಿಹೆಚ್ಚು ಇವಿ ಚಾರ್ಜಿಂಗ್ ಕೇಂದ್ರಗಳನ್ನು ಹೊಂದುವ ಮೂಲಕ ಪ್ರಥಮ ಸ್ಥಾನದಲ್ಲಿದೆ, ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಬೆಸ್ಕಾಂ ಒಟ್ಟಾರೆ 4,462 ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆದಿದೆ. ಈ ಚಾರ್ಜಿಂಗ್‌  ಸ್ಟೇಷನ್‌ 24 ಗಂಟೆಗಳ ಕಾಲ ಕಾರ್ಯನಿರ್ಹಹಿಸಲಿದ್ದು, ವಾಹನ ಸವಾರರು ಇವಿ ಮಿತ್ರ ಆಪ್‌ ಬಳಸಿ ತಮ್ಮ ವಾಹನಗಳನ್ನು ಚಾರ್ಜಿಂಗ್‌  ಮಾಡಿಕೊಳ್ಳಬಹುದಾಗಿದೆ. ತಮ್ಮ ವಾಹನಗಳ ಚಾರ್ಜಿಂಗ್ ಗೆ ಪ್ರತಿ ಯೂನಿಟ್ ಡಿಸಿ ಚಾರ್ಜಿಂಗ್ ಗಾಗಿ 7.56 ರೂ. ಹಾಗೂ ಎಸಿ ಚಾರ್ಜಿಂಗ್ ಗಾಗಿ 7.76 ರೂ. ಹಣವನ್ನು ಬೆಸ್ಕಾಂ ನಿಗದಿಪಡಿಸಿದೆ.

ಶೀಘ್ರದಲ್ಲೇ ಇವಿ ಸೋಲಾರ್ ಹಬ್ ಲೋಕಾರ್ಪಣೆ :

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬೀಳಗಿ.

“ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿ ನಿತ್ಯ ನೂರಾರು ಇವಿ ವಾಹನಗಳು ಬಂದು ಹೋಗುತ್ತವೆ. ವಿಮಾನ ನಿಲ್ದಾಣದ ಬಳಿ 23 ಎಲೆಕ್ಟ್ರಿಕ್ ವಾಹನಗಳು ಏಕ ಕಾಲಕ್ಕೆ ಚಾರ್ಜಿಂಗ್ ಮಾಡಬಹುದಾದ, ಸೌರ ಆಧಾರಿತ ಬ್ಯಾಟರಿ ಸ್ಟೋರೇಜ್ ಇವಿ ಚಾರ್ಜಿಂಗ್‌  ಸ್ಟೇಷನ್‌ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಪರೀಕ್ಷಾರ್ಥ ಕಾರ್ಯಗಳು ನಡೆಯುತ್ತಿದೆ. ಈ ಕೇಂದ್ರವನ್ನು ಲೋಕಾರ್ಪಣೆ ಮಾಡಲು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಲ್ಲಿ ದಿನಾಂಕ ನಿಗದಿಗೆ ಮನವಿ ಮಾಡಿದ್ದೇವೆ. ಆದಷ್ಟು ಶೀಘ್ರದಲ್ಲೇ ಇವಿ ಚಾರ್ಜಿಂಗ್ ಸ್ಟೇಷನ್ ಅನ್ನು ಸಾರ್ವಜನಿಕ ಸೇವೆಗೆ ಅರ್ಪಿಸಲಾಗುತ್ತದೆ. ಹೆಚ್ಚೆಚ್ಚು ಪರಿಸರ ಸ್ನೇಹಿಯಾದ ಇವಿ ವಾಹನಗಳ ಬಳಕೆ ಉತ್ತೇಜಿಸಲು ಇಂಧನ ಸಚಿವರು ಚಾರ್ಜಿಂಗ್ ಸ್ಟೇಷನ್ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡಿದ್ದಾರೆ. ಈ ಪೈಲೆಟ್ ಯೋಜನೆಯಿಂದ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ಇವಿ ವಾಹನಗಳ ಬಳಕೆ ಉತ್ತೇಜನಕ್ಕೆ ಇದು ಸಹಕಾರಿಯಾಗಲಿದೆ.”

–           ಮಹಂತೇಶ್ ಬೀಳಗಿ, ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ

Previous Post

ಬೆಂಗಳೂರು : ನಿನ್ನೆ ಸಂಜೆಯಂತೆ ಇಂದೂ ಕೂಡ ಕೊರೆಯುವ ಚಳಿ ಸಾಧ್ಯತೆಯಿದೆ ಎಂದ ಹವಾಮಾನ ಇಲಾಖೆ

Next Post

BW SPECIAL | ಬಿಬಿಎಂಪಿಯಲ್ಲಿ ಬೆಳೆಯುತ್ತಿದೆ ಇ-ಖಾತಾ ಅರ್ಜಿ ಬಾಕಿ ಪ್ರಕರಣ : ನೌಕರರಿಗೆ ಗುರಿ ನಿಗದಿ – ಕಂದಾಯ ಅದಾಲತ್ ನಡೆಸಲು ಸೂಚನೆ

Next Post
GBA Head Office Image

BW SPECIAL | ಬಿಬಿಎಂಪಿಯಲ್ಲಿ ಬೆಳೆಯುತ್ತಿದೆ ಇ-ಖಾತಾ ಅರ್ಜಿ ಬಾಕಿ ಪ್ರಕರಣ : ನೌಕರರಿಗೆ ಗುರಿ ನಿಗದಿ - ಕಂದಾಯ ಅದಾಲತ್ ನಡೆಸಲು ಸೂಚನೆ

ಬಿಬಿಎಂಪಿಯ ಆಟೋ ಟಿಪ್ರರ್ ನಿಂದ ಕಾಂಪ್ಯಾಕ್ಟರ್ ಗೆ ಘನತ್ಯಾಜ್ಯ ವರ್ಗಾವಣೆ ಮಾಡುತ್ತಿರುವ ಸಾಂದರ್ಭಿಕ ಚಿತ್ರ

BW EXCLUSIVE | ಬಿಬಿಎಂಪಿ ವ್ಯಾಪ್ತಿಯಲ್ಲಿ ಜನರ ಜೋಬಿಗೆ ಭಾರವಾಗಲಿದೆ ತ್ಯಾಜ್ಯ ಬಳಕೆದಾರರ ಶುಲ್ಕ : ಅವೈಜ್ಞಾನಿಕ ಶುಲ್ಕ ನಿಗದಿ ಬಗ್ಗೆ ವ್ಯಾಪಕ ವಿರೋಧ : ಇಲ್ಲಿದೆ ಅಸಲಿ ಸತ್ಯ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group