Saturday, April 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    Karnataka Lokayukta | ಕರ್ನಾಟಕ ಲೋಕಾಯುಕ್ತಕ್ಕೆ 40ರ ಸಂಭ್ರಮ: ಏಪ್ರಿಲ್ 18ರಂದು ಸಾರ್ಥಕ ಪಯಣದ ಕಾರ್ಯಕ್ರಮ

  • Bengaluru Focus

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

    ಬಿಟ್‌ಕಾಯಿನ್ ಹಗರಣದ ಕಿಚ್ಚು: ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರರ ನಿವಾಸದ ಮೇಲೆ ಇಡಿ ದಾಳಿ, ಪರಿಶೀಲನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BBMP News | ಅಕ್ರಮ ಕಟ್ಟಡ ವ್ಯತಿರಿಕ್ತ ಭಾಗಗಳ ತೆರವು ವಿಷಯದಲ್ಲಿ 2020ರ ಬಿಬಿಎಂಪಿ ಮಾಸಿಕ ಸಭೆಯ ನಿರ್ಣಯ ಮೂಲೆಗುಂಪು?

2020ರ ಸೆ.8ರಂದು ಪಾಲಿಕೆ ಮಾಸಿಕ ಸಭೆಯಲ್ಲಿ ಕೈಗೊಂಡು ಸರ್ವಾನುಮತದ ನಿರ್ಣಯದಂತೆ ನಗರ ಯೋಜನೆಯ ವಿಭಾಗದಲ್ಲಿ ಅಧಿಕಾರ ಪ್ರತ್ಯಾಯೋಜನೆಗಳನ್ನು ಹೊರಡಿಸುವಂತೆ, ಉಳಿದ ಆದೇಶಗಳನ್ನು ಕೂಡಲೇ ಹಿಂಪಡೆಯುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

by Bengaluru Wire Desk
November 12, 2024
in Bengaluru Focus, Public interest
Reading Time: 1 min read
0
GBA Head Office Image

ಜಿಬಿಎ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ.

ಬೆಂಗಳೂರು, ನ.12 www.bengaluruwire.com : ರಾಜಧಾನಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ತೆರವುಗೊಳಿಸುವಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರು ವಿಭಿನ್ನವಾದ ಆದೇಶಗಳನ್ನು ಈ ಕೂಡಲೇ ಹಿಂಪಡೆದು 2020ರ ಸೆ.8ರಂದು (ವಿಷಯ ಸಂಖ್ಯೆ : 10(301) 2020-21) ಪಾಲಿಕೆ ಮಾಸಿಕ ಸಭೆಯಲ್ಲಿ ಕೈಗೊಂಡು ಸರ್ವಾನುಮತದ ನಿರ್ಣಯದಂತೆ ನಗರ ಯೋಜನೆಯ ವಿಭಾಗದಲ್ಲಿ ಅಧಿಕಾರ ಪ್ರತ್ಯಾಯೋಜನೆಗಳನ್ನು ಹೊರಡಿಸುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ಕಟ್ಟಡಗಳ ನಕ್ಷೆ ಮಂಜೂರಾತಿಯನ್ನು ಯಾವ ಪ್ರಾಧಿಕಾರ ನೀಡುತ್ತದೆಯೋ ಆ ಪ್ರಾಧಿಕಾರವೇ ಕಟ್ಟಡ ನಿರ್ಮಾಣದ ಸಮಯದಲ್ಲಿ ಪರಿಶೀಲನೆ ಮಾಡಿ ವ್ಯತಿರಿಕ್ತ ನಿರ್ಮಾಣ ಕಂಡುಬಂದಲ್ಲಿ ಬೈಲಾಗಳಲ್ಲಿ ಇರುವಂತೆ ಕ್ರಮ ವಹಿಸುವ ಜವಾಬ್ದಾರಿ ನಿರ್ವಹಿಸತಕ್ಕದ್ದು ಎಂದು ಮುಖ್ಯ ಆಯುಕ್ತರಿಗೆ ನೀಡಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಉಚ್ಛ ನ್ಯಾಯಾಲಯ, ಮಾಹಿತಿ ಹಕ್ಕು ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಜವಾಬ್ದಾರಿಯನ್ನು ಕಟ್ಟಡ ನಕ್ಷೆ ಮಂಜೂರಾತಿ ನೀಡಿರುವ ಪ್ರಾಧಿಕಾರವೇ ನಿರ್ವಹಿಸತಕ್ಕದ್ದು ಹಾಗೂ ಮಂಜೂರಾತಿ ನೀಡಿರುವ ಪ್ರಾಧಿಕಾರವನ್ನು ಹೊರತುಪಡಿಸಿ ಅನುಮೋದನೆ ನೀಡಿರದ ಇನ್ನೊಂದು ಪ್ರಾಧಿಕಾರಕ್ಕೆ ಅಧಿಕಾರ ಪ್ರತ್ಯಾಯೋಜಿಸತಕ್ಕದ್ದಲ್ಲ ಎಂಬುದಾಗಿ ಪಾಲಿಕೆಯ 2020ರ ಸೆ.8ರ ಮಾಸಿಕ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವಾಗಿದೆ.

ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಜನ ಪ್ರತಿನಿಧಿಗಳ ಅಧಿಕೃತ ಸಭೆಯಲ್ಲಿ ತೀರ್ಮಾನವಾದ ವಿಷಯವನ್ನು ಬದಿಗೆ ತಳ್ಳಿ ನಿಯಮಬಾಹಿರವಾದ ಪ್ರತ್ಯಾಯೋಜನೆ ನೀಡುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೌಕರರ ಹಿತಾಸಕ್ತಿಗೆ ವಿರುದ್ಧವಾದ ಆದೇಶವನ್ನು 2021ರ ನ.6 ರಂದು ಪಾಲಿಕೆ ಮುಖ್ಯ ಆಯುಕ್ತರು ವಲಯ ಆಯುಕ್ತರುಗಳ ಮೂಲಕ ನೀಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ನಗರ ಯೋಜನೆ ವಿಭಾಗದಲ್ಲಿ ಎರಡು ಪಟ್ಟು ಹೆಚ್ಚು ಅಧಿಕಾರಿಗಳ ನಿಯೋಜನೆ:

“ನಗರ ಯೋಜನೆ ಇಲಾಖೆ”ಯಲ್ಲಿ ಒಟ್ಟು ಅನುಮೋದಿತ ಹುದ್ದೆಗಳಿಗಿಂತ (Sanctioned Post) ಎರಡು ಪಟ್ಟು ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರ ಪೈಕಿ ಶೇ. 95 ರಷ್ಟು ಅಧಿಕಾರಿಗಳು ಎರವಲು ಸೇವೆ ಅಡಿಯಲ್ಲಿ ರಾಜ್ಯ ಸರ್ಕಾರದ ನಗರ ಯೋಜನೆ ಮತ್ತು ಪಿಡಬ್ಲ್ಯುಡಿ ಇಲಾಖೆಗಳಿಂದ ಬಂದವರೇ ಆಗಿದ್ದಾರೆ. ಈ ಎರವಲು ಸೇವೆ ಅಡಿಯಲ್ಲಿ ಬಿಬಿಎಂಪಿಗೆ ನಿಯೋಜನೆಯಾಗಿರುವವರ ಪೈಕಿ ಹತ್ತಾರು ಮಂದಿ ಕಾನೂನುಬಾಹಿರವಾಗಿ ಐದು ವರ್ಷಗಳಿಗಿಂತಲೂ ಹೆಚ್ಚು ಅವಧಿಯಿಂದ ಪಾಲಿಕೆಯಲ್ಲೇ ಉಳಿದುಕೊಂಡಿದ್ದಾರೆ. ಡೆನ್ಮಾರ್ಕ್ ಹುಲ್ಲುಗಾವಲಿನಂತೆ ಅಕ್ರಮ ಹಣ ಕಬಳಿಸಲು ವಿಪುಲವಾದ ಅವಕಾಶಗಳಿರುವುದರಿಂದ ಪಾಲಿಕೆಯ “ನಗರ ಯೋಜನೆ ಇಲಾಖೆ”ಗೆ ಸಚಿವರುಗಳಿಗೆ ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿರುವ ಭ್ರಷ್ಟ ಹಿರಿಯರಿಗೆ ಕೋಟ್ಯಾಂತರ ರೂಪಾಯಿ ಹಣವನ್ನು ಲಂಚದ ರೂಪದಲ್ಲಿ ನೀಡಿ ಬಿಬಿಎಂಪಿಗೆ ನಿಯೋಜನೆಗೊಳ್ಳುತ್ತಿದ್ದಾರೆ.

ಲಂಚದ ಮೇಲ್ಮಟ್ಟದ ಅಧಿಕಾರಿಗಳಿಗೆ- ಶಿಕ್ಷೆ ವಾರ್ಡ್ ಮಟ್ಟದ ಅಧಿಕಾರಿಗೆ :

ಇಂತಹ ಭ್ರಷ್ಟ ಎಂಜಿನಿಯರ್ ಗಳು, ಬೃಹತ್ ಕಟ್ಟಡಗಳ ನಕ್ಷೆ ಮಂಜೂರಾತಿಗೆ, ಸ್ವಾಧಿನಾನುಭವ ಪ್ರಮಾಣಪತ್ರ ( Occupancy Certificate) ಮತ್ತು ಪ್ರಾರಂಭಿಕ ಪ್ರಮಾಣಪತ್ರ (Commencement Certificate) ಗಳನ್ನು ನೀಡಲು ಪ್ರತೀ ಚದರ ಅಡಿಗೆ ನಿಯಮಬಾಹಿರವಾಗಿ ನಿಗದಿಯಾದ ಪ್ರಮಾಣದ ಹಣ ಮತ್ತು ಸಹಾಯಕ ಅಭಿಯಂತರರಿಂದ ಹಿಡಿದು ಎಡಿಟಿಪಿ (ADTP). ಜೆಡಿಟಿಪಿ ( JDTP) ಹಾಗೂ ನಗರ ಯೋಜನೆ ಹೆಚ್ಚುವರಿ ನಿರ್ದೇಶಕರು (Additional Director Town Planning) ವರೆಗಿನ ಅಧಿಕಾರಿಗಳಿಗೆಂದು ಪ್ರತ್ಯೇಕವಾಗಿ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಎಂದು ಎನ್.ಆರ್.ರಮೇಶ್ ಟೀಕಿಸಿದ್ದಾರೆ.

ನಗರ ಯೋಜನೆ ವಿಭಾಗದ ಮೇಲ್ಮಟ್ಟದ ಅಧಿಕಾರಿಗಳು ಲಂಚ ಪಡೆದು, ಯಾವುದೇ ನಿಯಮಗಳನ್ನು ಪಾಲಿಸದೆಯೇ ನಕ್ಷೆ ಮಂಜೂರಾತಿ ನೀಡುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ನಿರ್ಮಿಸುತ್ತಿರುವ ಕಟ್ಟಡಗಳಿಗೆ ಸಂಬಂಧಿಸಿದಂತೆ ನೋಟಿಸ್ ಗಳನ್ನು ನೀಡುವ, ಆರ್ ಟಿಐ ಅರ್ಜಿಗಳಿಗೆ ಉತ್ತರಿಸುವುದು, ಆರ್ ಟಿಐ ನ್ಯಾಯಾಲಯದಲ್ಲಿ ಸಾವಿರಾರು ರೂಪಾಯಿ ದಂಡವನ್ನು ಪಾವತಿಸುವುದು ಮತ್ತು ಅಮಾನತು ದಂಡನೆಗೆ ಒಳಗಾಗುವುದು ಮಾತ್ರ ವಾರ್ಡ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಎಂಬುದು ವಿಪರ್ಯಾಸ ಎಂದು ವಾಸ್ತವವನ್ನು ರಮೇಶ್ ತಮ್ಮ ಮನವಿ ಪತ್ರದಲ್ಲಿ ಬಿಚ್ಚಿಟ್ಟಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಈ ಕೆಳಗಿನ ಅಂಶಗಳತ್ತ ಗಮನಹರಿಸಬೇಕಿದೆ :

1) ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ನೀಡಲಾಗುವ ಪ್ರಾಧಿಕಾರವು ತಮ್ಮ ವತಿಯಿಂದ ಮಂಜೂರಾತಿ ನೀಡುವ ಕಟ್ಟಡದ ಪ್ರಾರಂಭಿಕ ಹಂತದಿಂದ ಮುಕ್ತಾಯದವರೆಗೂ ಮೇಲ್ವಿಚಾರಣೆ ಹಾಗೂ ಕೆ.ಎಂ.ಸಿ. ಕಾಯ್ದೆ ಮತ್ತು ಕಟ್ಟಡ ನಿರ್ಮಾಣ ಬೈಲಾಗಳ (Building Byelaws)  ಪಾಲನೆಯ ಜವಾಬ್ದಾರಿ ನಿಭಾಯಿಸಬೇಕಾಗಿರುತ್ತದೆ.

2) ಪಾಲಿಕೆಯಲ್ಲಿ ಚಾಲ್ತಿಯಲ್ಲಿರುವ ಕೆ.ಎಂ.ಸಿ. ಕಾಯ್ದೆ 1976 ರ ಕಲಂ. 321(1) & (2), 321(3) ಹಾಗೂ 462 ಅಡಿಯಲ್ಲಿ ಪಾಲಿಸಲಾಗುವ ನಿಯಮಗಳನ್ನು ಕಟ್ಟಡ ನಿಯಮ ಉಲ್ಲಂಘನೆ ಸಂಧರ್ಭದಲ್ಲಿ ಜಾರಿಗೊಳಿಸುವ ಅಧಿಕಾರವು ನಕ್ಷೆ ಮಂಜೂರಾತಿ ಪ್ರಾಧಿಕಾರಕ್ಕೆ ವಹಿಸಿಕೊಡಬೇಕಾಗಿರುತ್ತದೆ.

3) ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಕಲಂ 321(B) ಅನ್ವಯ ತಿದ್ದುಪಡಿ ನಿಯಮಾವಳಿಗಳಲ್ಲಿ ಸೂಚಿಸಲಾಗಿರುವಂತೆ ಕಟ್ಟಡಗಳ ಬೈಲಾ ಉಲ್ಲಂಘನೆಯಾದ ಸಂಧರ್ಭದಲ್ಲಿ ತತ್ಸಸಂಬಂಧ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಸಾಬೀತಾದಲ್ಲಿ ವಿಧಿಸಲಾಗುವ ದಂಡ ಹಾಗೂ ಶಿಕ್ಷೆಗಳ ವ್ಯಾಪ್ತಿಗೆ ನಕ್ಷೆ ಮಂಜೂರಾತಿ ಪ್ರಾಧಿಕಾರವೇ ಹೊಣೆಯಾಗ ಬೇಕಾಗಿರುತ್ತದೆ.

4) ಕಟ್ಟಡ ಮಾಲೀಕರು ಮಾಡಲ್ಪಡುವ ನಕ್ಷೆ ಉಲ್ಲಂಘನೆಗೆ ಮಾಲೀಕರು ಹಾಗೂ ಸಂಬಂಧಪಟ್ಟ ನಕ್ಷೆಗಾರರನ್ನು (Architects)  ಹೊಣೆಯಾಗಿಸಿ ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಕ್ಷೆ ಮಂಜೂರಾತಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವುದು ಅವಶ್ಯಕವಾಗಿರುತ್ತದೆ.

5) ನಕ್ಷೆ ಮಂಜೂರಾತಿ ಪ್ರಾಧಿಕಾರವು ಪ್ರಮುಖವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಹಾಲಿ ಇರುವ ಹಾಗೂ ಮುಚ್ಚಲಾಗಿರುವ ಮಳೆ ನೀರುಗಾಲುವೆಯ ಸಂಪೂರ್ಣ ನಕ್ಷೆಯನ್ನು ಗೂಗಲ್ ನಕ್ಷೆ (Google Map) ರೀತಿಯ ಡೇಟಾಬೇಸ್ ತಯಾರಿಸಿಕೊಂಡು ಕೇಂದ್ರ ಸರ್ಕಾರದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನಿಯಮಾವಳಿಗಳನ್ನು ಪಾಲಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.

6) ನಕ್ಷೆ ಮಂಜೂರಾತಿ ಪ್ರಾಧಿಕಾರವು ಕಟ್ಟಡ ನಿರ್ಮಾಣದ ಪ್ರಾರಂಭದಲ್ಲಿ ನೀಡಲಾಗುವ ಕಟ್ಟಡ ಪ್ರಾರಂಭಿಕ ಪ್ರಮಾಣ ಪತ್ರ (Commencement Certificate) ಹಾಗೂ ಮುಕ್ತಾಯದ ನಂತರ ನೀಡಲಾಗುವ ಸ್ವಾಧೀನಾನುಭವ ಪ್ರಮಾಣ ಪತ್ರ (Occupational Certificate) ಗಳನ್ನು ನೀಡುವ ಸಂದರ್ಭದಲ್ಲಿ ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಗಳನ್ನು ಒಳಗೊಂಡ ತಂಡ ರಚನೆಯಾದಲ್ಲಿ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಗೂ ನಿಯಮಗಳ ಸ್ಪಷ್ಟ ಪಾಲನೆ ಸಾಧ್ಯವಿದೆ.

7) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದಲ್ಲಿರುವಂತೆ ಹಾಗೂ ಬಿಎಂಟಿಎಫ್ (BMTF) ಇಲಾಖೆಯಂತಹ ಕಾನೂನು ಸುವ್ಯವಸ್ಥೆಯ ತಂಡವೊಂದನ್ನು ರಚಿಸಿ ನಕ್ಷೆ ಮಂಜೂರಾತಿ ಪ್ರಾಧಿಕಾರದ ಅಧೀನದಲ್ಲಿ ನೇಮಿಸಿದಲ್ಲಿ ನಿಯಮಗಳ ಪಾಲನೆ ಹಾಗೂ ದಂಡ ಸಂಹಿತೆಯ ಪಾಲನೆ ಮಾಡಿದಲ್ಲಿ ಅನಧಿಕೃತ ನಿರ್ಮಾಣಗಳಿಗೆ ಕಡಿವಾಣ ಹಾಕಬಹುದಾಗಿದೆ.

“ನಗರ ಯೋಜನೆ ಇಲಾಖೆ”ಗೆ ಎರವಲು ಸೇವೆ ಅಡಿಯಲ್ಲಿ ನಿಯೋಜನೆಗೊಂಡಿರುವ ಪರಮ ಭ್ರಷ್ಟ ಅಧಿಕಾರಿಗಳ ಹಿತಾಸಕ್ತಿಯನ್ನೇ ಪರಿಗಣಿಸಿರುವ ಪಾಲಿಕೆಯ ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳು, ಬಿಬಿಎಂಪಿಯ ಮೂಲ ಅಧಿಕಾರಿಗಳಿಗೆ ಶಿಕ್ಷೆ ನೀಡುತ್ತಿರುವುದು ನಿಜಕ್ಕೂ ದುರಂತ. ಈ ಹಿನ್ನಲೆಯಲ್ಲಿ ಕೂಡಲೇ 2020ರ ಸೆ.8ರಂದು ಪಾಲಿಕೆ ಮಾಸಿಕ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯದಂತೆ ನಗರ ಯೋಜನೆಯ ವಿಭಾಗದಲ್ಲಿ ಅಧಿಕಾರ ಪ್ರತ್ಯಾಯೋಜನೆಗಳನ್ನು ಹೊರಡಿಸುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.  

WhatsApp Join our WhatsApp Channel
Previous Post

E-Khata Application Video Guide | ಬಿಬಿಎಂಪಿ ನೀಡುವ ಇ-ಖಾತಾ ಪಡೆಯಬೇಕಾ? ಹೇಗೆ ಅರ್ಜಿ ಸಲ್ಲಿಸಬೇಕು, ದಾಖಲೆ ಅಪಲೋಡ್ ಮಾಡಬೇಕು? ಇಲ್ಲಿದೆ ಪೂರ್ಣ ಮಾಹಿತಿ

Next Post

ಜೈವಿಕ ಇಂಧನ ಮಿಶ್ರಣದಿಂದ ಕೃಷಿಗೆ ವರದಾನ : ಆಮದು ಬಿಲ್‌ನಲ್ಲಿ ಉಳಿತಾಯವಾಗುವ 91,000 ಕೋಟಿ ರೂ. ಕೃಷಿ ಕ್ಷೇತ್ರಕ್ಕೆ ಬಳಕೆ

Next Post

ಜೈವಿಕ ಇಂಧನ ಮಿಶ್ರಣದಿಂದ ಕೃಷಿಗೆ ವರದಾನ : ಆಮದು ಬಿಲ್‌ನಲ್ಲಿ ಉಳಿತಾಯವಾಗುವ 91,000 ಕೋಟಿ ರೂ. ಕೃಷಿ ಕ್ಷೇತ್ರಕ್ಕೆ ಬಳಕೆ

APAAR ID Card | ಆಧಾರ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ 'ಅಪಾರ್' ಕಾರ್ಡ್ ವಿತರಣಾ ಪ್ರಕ್ರಿಯೆಗೆ ಚಾಲನೆ

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group