Saturday, April 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    Karnataka Lokayukta | ಕರ್ನಾಟಕ ಲೋಕಾಯುಕ್ತಕ್ಕೆ 40ರ ಸಂಭ್ರಮ: ಏಪ್ರಿಲ್ 18ರಂದು ಸಾರ್ಥಕ ಪಯಣದ ಕಾರ್ಯಕ್ರಮ

  • Bengaluru Focus

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

    ಬಿಟ್‌ಕಾಯಿನ್ ಹಗರಣದ ಕಿಚ್ಚು: ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರರ ನಿವಾಸದ ಮೇಲೆ ಇಡಿ ದಾಳಿ, ಪರಿಶೀಲನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | ಕೋಲ್ಡ್ ಸ್ಟೋರೇಜ್ ಸೇರಿದ ಬಿಡಿಎ ಕೆಂಪೇಗೌಡ ಲೇಔಟ್ ಕಾಮಗಾರಿ!! : ಅರ್ಜಿ ಸಮಿತಿ ಗಡುವು ಪಾಲಿಸಲು ವಿಫಲ

ಬೀದಿ ದೀಪ ಬೇಕೆಂದರೆ ಮನೆಗಳ ಮೀಟರ್ ಗೆ ಸಂಪರ್ಕ ಕೊಡ್ತಾರೆ | ಮೂರೇ ತಿಂಗಳಲ್ಲಿ ಉಕ್ಕಿ ಬರುತ್ತೆ ಮ್ಯಾನ್ ಹೋಲ್ | ರಿಯಲ್ ಎಸ್ಟೇಟ್ ಪ್ರಾಧಿಕಾರ ನೀಡಿದ ಗಡುವು ಪಾಲಿಸಲು ವಿಫಲ | ಪದೇ ಪದೇ ಗಡುವು ಮೀರುವ ಪ್ರಾಧಿಕಾರದ ಹೇಳಿಕೆ ಎಷ್ಟು ಸರಿ?

by Bengaluru Wire Desk
November 8, 2024
in Bengaluru Focus, BW Special, Public interest
Reading Time: 3 mins read
0
ಬಿಡಿಎ ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿ ಕುರಿತ ಸಾಂದರ್ಭಿಕ ಗ್ರಾಫಿಕ್ ಚಿತ್ರ.

ಬಿಡಿಎ ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿ ಕುರಿತ ಸಾಂದರ್ಭಿಕ ಗ್ರಾಫಿಕ್ ಚಿತ್ರ.

ಬೆಂಗಳೂರು, ನ.08 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bangalore Development Authority) ನಾಡಪ್ರಭು ಕೆಂಪೇಗೌಡ ಬಡಾವಣೆ (NPKL) ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಯ ಸೆಪ್ಟೆಂಬರ್ 2023 ರಂದು ಕೊಟ್ಟ 14 ತಿಂಗಳುಗಳ ಗಡುವಿನ ಒಳಗೆ ಸಂಪೂರ್ಣವಾಗಿ ಲೇಔಟ್ ಅಭಿವೃದ್ಧಿ ಮಾಡುತ್ತೇನೆಂಬ ವಾಗ್ದಾನವು ಹುಸಿಯಾಗಿದೆ.

ಏಕೆಂದರೆ ನ.07ಕ್ಕೆ ಸಮಿತಿ ನೀಡಿದ ಗಡುವು ಅಂತ್ಯವಾಗಿದೆ. ಅಲ್ಲಿಗೆ ಸಮಿತಿ ನೀಡಿದ ಸಮಯದ ಮಿತಿಗೂ ಬಿಡಿಎ ಅಧಿಕಾರಿಗಳು ಕ್ಯಾರೇ ಅಂದಿಲ್ಲ. ಎನ್ ಪಿಕೆಎಲ್ 1 ರಿಂದ 9ನೇ ಬ್ಲಾಕ್ ಗಳಿದ್ದು, ಆ ಪೈಕಿ ಕೇವಲ 7ನೇ ಬ್ಲಾಕ್ ನಲ್ಲಷ್ಟೇ ಶೇ.80ರಷ್ಟು ಕಾಮಗಾರಿ ಪೂರ್ಣಗೊಳಿಂಡಿದ್ದು, ಒಂದೇ ಒಂದು ಬ್ಲಾಕ್ ನಲ್ಲೂ ಶೇ.100ರಷ್ಟು ಕಾಮಗಾರಿ ಮುಗಿದಿಲ್ಲ. ಹೀಗಾಗಿ ಇದೊಂದು ರೀತಿಯಲ್ಲಿ ಬಿಡಿಎನ ಕೋಲ್ಟ್ ಸ್ಟೋರೇಜ್ ಸೇರಿದ ಯೋಜನೆಯಂತಾಗಿದೆ. ಅರ್ಜಿ ಸಮಿತಿ ಛೀಮಾರಿಯಿಂದ ತಪ್ಪಿಸಿಕೊಳ್ಳಲು ನೆಪಮಾತ್ರಕ್ಕೆ ಬಿಡಿಎ ಎಂಜಿನಿಯರಿಂಗ್ ಅಧಿಕಾರಿಗಳು 7ನೇ ಬ್ಲಾಕ್ ಒಂದರಲ್ಲಿ ಅಭಿವೃದ್ಧಿ ತೋರಿಸಿ ಉಳಿದ ಬ್ಲಾಕ್ ಗಳಲ್ಲಿ ಕೆಲಸ ನಡೆಯುತ್ತದೆಯೆಂದು ಬಿಂಬಿಸಲು ಈ ನಾಟಕ ಆಡುತ್ತಿದೆ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತವೇದಿಕೆ ಟೀಕಿಸಿದೆ.

ಕೆಂಪೇಗೌಡ ಬಡಾವಣೆಯ ಅಭಿವೃದ್ಧಿ ಬಗ್ಗೆ ಬಿಡಿಎ ಅಧಿಕಾರಿಗಳಿಗೆ ಇರುವ ನಿರ್ಲಕ್ಷ್ಯಕ್ಕೆ ಸಾಕ್ಷಿಯಂತಿರುವ ಬಡಾವಣೆಯಲ್ಲಿ ಅಳವಡಿಸಿರುವ ಬೋರ್ಡ್ ಮುರಿದು ಬಿದ್ದಿರುವುದು.

 ಕೇವಲ ಬ್ಲಾಕ್ 7 ರಲ್ಲಿ ಮಾತ್ರ ಎಲ್ಲಾ ರೀತಿಯ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಆದರೆ 5ನೇ ಬ್ಲಾಕ್ ಮತ್ತು 6 ನೇ ಬ್ಲಾಕ್ ನಲ್ಲಿ ರಸ್ತೆಯ ಕಾಮಗಾರಿಯು ಕುಂಟುತ್ತಾ ಸಾಗಿದೆ. ಅಲ್ಲದೆ ಉಳಿದ 8 ಬ್ಲಾಕ್ ಗಳ ಕಾಮಗಾರಿಗಳು ಪೂರ್ಣಗೊಳ್ಳಲು ಮತ್ತಷ್ಟು ವರ್ಷಗಳು ಬೇಕಾಗುವ ಪರಿಸ್ಥಿತಿ ಇದೆ. ರಸ್ತೆ, ವಿದ್ಯುತ್, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆಗಳ ಕೊರತೆಯಿಂದಾಗಿ 29,000 ನಿವೇಶನಗಳಲ್ಲಿ ಕೇವಲ 20 ರಿಂದ 30 ಮನೆಗಳ  ನಿರ್ಮಾಣವಾಗುತ್ತಿದೆ. ಮನೆ ಕಟ್ಟಲು ಮುಂದೆ ಬರುವವರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಪ್ರಾಧಿಕಾರ ಹೇಳಿಕೊಳ್ಳುತ್ತದೆ ಆದರೆ ಅದು ಕೊಟ್ಟ ಭರವಸೆಗಳೆಲ್ಲಾ ಸುಳ್ಳಾಗಿದೆ. ನಿವೇಶನದಾರರು ಮೂಲಭೂತ ಸೌಕರ್ಯಗಳ ಕೊರತೆಯಲ್ಲಿಯೇ ಮನೆ ಕಟ್ಟಿ ವಾಸಮಾಡಬೇಕಾದ ಪರಿಸ್ಥಿತಿ ಇದೆ.

ಇದು ಹಳ್ಳಿ ರಸ್ತೆಯಲ್ಲ, ಬಿಡಿಎ ಎನ್ ಕೆಪಿಎಲ್ ಬಡಾವಣೆಯ ದುಸ್ಥಿತಿ.

ಬೀದಿ ದೀಪ ಬೇಕೆಂದರೆ ಮನೆಗಳ ಮೀಟರ್ ಗೆ ಸಂಪರ್ಕ ಕೊಡ್ತಾರೆ :

ಇಡೀ 1 ರಿಂದ 9ನೇ ಬ್ಲಾಕ್ ನಲ್ಲಿ 29,000 ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಿದ್ದರೂ ಇನ್ನೂ ಪರಿಪೂರ್ಣವಾಗಿ ವಿದ್ಯುತ್ ಜಾಲ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ಮನೆ ಕಟ್ಟುವವರು ಬೆಸ್ಕಾಂ ದೂರದಲ್ಲೆಲ್ಲೋ ಹಾಕಿರುವ ವಿದ್ಯುತ್ ವೈರ್ ನಿಂದ ಕರೆಂಟ್ ಪಡೆದುಕೊಳ್ಳಬೇಕಾಗಿದೆ. ಇದರಿಂದ ಅಲ್ಲಿ ಮನೆ ಕಟ್ಟುವವರು ಹೆಚ್ಚುವರಿಯಾಗಿ 20 ರಿಂದ 30 ಸಾವಿರ ಕರ್ಚು ಮಾಡುವಂತಾಗಿದೆ. ಒಂದು ವಿದ್ಯುತ್ ಉಪ ಕೇಂದ್ರವು ನಿರ್ಮಾಣ ಹಂತದಲ್ಲಿದೆ. ಆದರೆ ಕಳೆದ ಎರಡುವರೆ ವರ್ಷಗಳಿಂದ ಆ ಕೇಂದ್ರದ ಕೆಲಸವು ಪೂರ್ಣಗೊಳ್ಳದೆ ನಿವೇಶನದಾರರು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವಂತಾಗಿದೆ. ಮನೆ ಕಟ್ಟುವ ರಸ್ತೆಯಲ್ಲಿ ಬೀದಿ ದೀಪವಿದ್ದರೆ ಮನೆ ಕಟ್ಟುತ್ತಿರುವವ ಮನೆ ಮೀಟರ್ ಸಂಪರ್ಕಿಸಲಾಗುತ್ತಿದೆ ಎಂದರೆ ಇಲ್ಲಿನ ಅಭಿವೃದ್ಧಿ ಕೆಲಸಗಳು ಎಷ್ಟು ಹಳ್ಳ ಹಿಡಿದಿದೆ ಎಂಬುದು ಮನದಟ್ಟಾಗುತ್ತದೆ.

ಬಡಾವಣೆಯಾದ್ಯಂತ ಇನ್ನೂ ಮಣ್ಣಿನ ಕಚ್ಚಾ ರಸ್ತೆಗಳೆ ಇದೆ. ಮನೆಯಲ್ಲಿ ವಾಸ ಮಾಡಲು ಹಾಗೂ ಸಾಮಗ್ರಿ ಸಾಗಿಸಲು ಮಳೆಗಾಲದಲ್ಲಿ ಯಾವುದೇ ಬೆಟ್ಟ ಪ್ರದೇಶಗಳಲ್ಲಿ ಸರ್ಕಸ್ ಮಾಡಿಕೊಂಡು ಹೋಗುವ ಪರಿಸ್ಥಿತಿ ಇಲ್ಲೂ ಬಂದೊದಗಿದೆ. ಎಂಟು ತಿಂಗಳಗಳ ಹಿಂದೆ ಬಡಾವಣೆಯ ಬ್ಲಾಕ್ 5,6,7ನೇ ಬ್ಲಾಕ್ ಗಳಲ್ಲಿನ ರಸ್ತೆ ಡಾಂಬರೀಕರಣಕ್ಕಾಗಿ ಟೆಂಡರ್ ಅನ್ನು ಕರೆಯಲಾಗಿತ್ತು. ಆದರೆ ಕೇವಲ 7ನೇ ಬ್ಲಾಕ್ ನಲ್ಲಷ್ಟೇ ಕಾಮಗಾರಿಯು ನಡೆಯುತ್ತಿದೆ. 6ನೇ ಬ್ಲಾಕ್ ನಲ್ಲಿ ಈಗಷ್ಟೇ ಕಾಮಗಾರಿ ಆರಂಭವಾಗಿದೆ. 5ನೇ ಬ್ಲಾಕ್ ನಲ್ಲಿ ಡಾಂಬರೀಕರಣ ಕಾಮಗಾರಿ ಆರಂಭವಾಗಿಲ್ಲ. ಇನ್ನು ಉಳಿದ ಬಡಾವಣೆಗಳಲ್ಲಿ ಬೇರೆ ಕಾಮಗಾರಿಗಳು ಬಾಕಿಯಿರುವುದರಿಂದ ಇನ್ನೂ ಡಾಂಬರೀಕರಣದ ಟೆಂಡರನ್ನು ಕರೆಯಲಾಗಿಲ್ಲ ಎಂದು ಬಡಾವಣೆ ನಿವಾಸಿಗಳು ಎನ್ ಪಿಕೆಎಲ್ ಬಡಾವಣೆ ದುಸ್ಥಿತಿಯನ್ನು ವಿವರಿಸಿದ್ದಾರೆ.

ನಾಮಕಾವಸ್ಥೆಗೆ ಕೆಂಪೇಗೌಡ ಲೇಔಟ್ 7ನೇ ಬಡಾವಣೆಯಲ್ಲಿ ಟಾರ್ ಹಾಕಿದ ರಸ್ತೆಯ ಚಿತ್ರ.

ಮೂರೇ ತಿಂಗಳಲ್ಲಿ ಉಕ್ಕಿ ಬರುತ್ತೆ ಮ್ಯಾನ್ ಹೋಲ್ :

ಯೋಜಿತ 4040 ಎಕರೆ ಬಡಾವಣೆಯಲ್ಲಿ, ಬಿಡಿಎ 2010 ರಿಂದ ಇಲ್ಲಿಯವರೆಗೆ 2200 ಎಕರೆ ಬಡಾವಣೆ ರೂಪಿಸುವಲ್ಲಿ ಯಶಸ್ವಿಯಾಗಿದೆ ಮತ್ತು 29000 ಸೈಟ್‌ಗಳನ್ನು ಹಂಚಿಕೆ ಮಾಡಿದೆ.  ಆದರೆ ಇನ್ನೂ 9 ಬ್ಲಾಕ್‌ಗಳ ಪೈಕಿ 8 ಬ್ಲಾಕ್‌ಗಳಲ್ಲಿ ಕಚ್ಚಾ ರಸ್ತೆಗಳಿವೆ.  ಮನೆಗಳಲ್ಲಿನ ಮ್ಯಾನ್ ಹೋಲ್ ಮೂರೇ ತಿಂಗಳಲ್ಲಿ ಉಕ್ಕಿಬರುತ್ತದೆ. ಮನೆ ಪೂರ್ಣವಾಗುವ ತನಕ ಒಳಚರಂಡಿ ವ್ಯವಸ್ಥೆಗೆ ಕಲ್ಪಿಸಲು ಬಿಡಿಎ ಅವಕಾಶ ಕಲ್ಪಿಸುವುದಿಲ್ಲ.ಕುಡಿಯಲು, ಇತರ ಕಾರ್ಯಕ್ಕೆ ಕುಡಿಯುವ ನೀರಿನ ಸರಬರಾಜಿನ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಬೋರ್ ವೆಲ್ ನೀರೇ ಗಟ್ಟಿ. ಬಿಡಿಎ ನಿಯಮಾವಳಿಗಳ ಪ್ರಕಾರ ಮನೆ ಕಟ್ಟಲು ನೀರನ್ನು ಪೂರೈಸುವುದಿಲ್ಲ ಆದರೆ ಮನೆ ಕಟ್ಟಿದ ನಂತರವೂ ಬಡಾವಣೆಯಲ್ಲಿ ನೀರನ್ನು ಪೂರೈಸಲು ಸಾಧ್ಯವಾಗಿರುವುದಿಲ್ಲ ಎಂದು ನಿವೇಶನದಾರರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ : BW EXCLUSIVE | ರಾಜ್ಯ ಸರ್ಕಾರ- ಬೆಂಗಳೂರು ವಿವಿ ನಿಯಮ ಉಲ್ಲಂಘನೆ : ಜ್ಞಾನಭಾರತಿ ಕ್ಯಾಂಪಸ್ 673 ಎಕರೆ ಜೀವ ವೈವಿಧ್ಯತಾ ವನಕ್ಕೆ ಗಂಡಾಂತರ!!

ಈ ರೀತಿ 1 ರಿಂದ 9ನೇ ಬ್ಲಾಕ್ ಗಳಲ್ಲಿ ಅದೆಷ್ಟೋ ಕಡೆ ಕಾಮಗಾರಿ ನಿಂತು ಗಿಡ- ಪೊದೆಗಳು ಬಂದಿವೆ.

ರಿಯಲ್ ಎಸ್ಟೇಟ್ ಪ್ರಾಧಿಕಾರ ನೀಡಿದ ಗಡುವು ಪಾಲಿಸಲು ವಿಫಲ :

ರಿಯಲ್ ಎಸ್ಟೇಟ್ ಪ್ರಾಧಿಕಾರವು 2018, 2020 ಹಾಗೂ 2021ರಲ್ಲಿ ಹೀಗೆ ಮೂರು ಬಾರಿ ನಾಡಪ್ರಭು ಕೆಂಪೇಗೌಡ ಬಡಾವಣೆ ಪೂರ್ಣಗೊಳಿಸಲು ಗಡುವು ವಿಸ್ತರಣೆ ಮಾಡಿದರೂ ಈ ತನಕವೂ ಅದನ್ನೂ ಬಿಡಿಎ ಅಧಿಕಾರಿಗಳು ಪಾಲಿಸಿಲ್ಲ. ಇನ್ನು ಕೂಡ 1,300 ಎಕರೆ ಭೂ ಸ್ವಾಧೀನ ಸಮಸ್ಯೆಯೂ ಬಗೆಹರಿದಿಲ್ಲ. ಒಂದರಿಂದ 5ನೇ ಬಡಾವಣೆ ವರೆಗಿನ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಎಲ್ ಎಂಡ್ ಟಿ ತೆಗೆದುಕೊಂಡಿದ್ದರೆ, 6 ರಿಂದ 9ನೇ ಬ್ಲಾಕ್ ಅಭಿವೃದ್ಧಿಪಡಿಸುವ ಕಾಮಗಾರಿ ಟೆಂಡರನ್ನು ಅಮೃತ ಕನ್ ಸ್ಟ್ರಕ್ಷನ್ ಎಂಬ ಸಂಸ್ಥೆಯು ಪಡೆದುಕೊಂಡಿದೆ. ಒಟ್ಟಾರೆ 1,600 ಕೋಟಿ ರೂ. ಮೊತ್ತದ ಯೋಜನೆಯಿದಾಗಿದ್ದರೂ. ಗುತ್ತಿಗೆದಾರರಿಗೂ ಕೋಟ್ಯಾಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದರಿಂದಾಗಿ ಹಾಗೂ ಸೂಕ್ತ ರೀತಿಯಲ್ಲಿ ಭೂಸ್ವಾಧೀನ ಮಾಡದ ಕಾರಣದಿಂದಾಗಿ ಕಾಮಗಾರಿಗಳು ಕುಂಟುತ್ತಾ ಸಾಗಿದ್ದರೆ, ಕೆಲವು ಕಡೆ ಕಾಮಗಾರಿಗಳು ನಿಂತು ಬಡಾವಣೆ ರಸ್ತೆಯಲ್ಲಿ ಆಳೆತ್ತರದ ಹುಲ್ಲುಗಳು ಬೆಳೆದು ಸಾರ್ವಜನಿಕರು ಆ ಭಾಗಗಳಲ್ಲಿ ಸರಿಯಾಗಿ ಸಂಚರಿಸದಂತಾಗಿದೆ.

“2018, 2020 ಮತ್ತು 2021 ರ ರೇರಾ ಗಡುವುಗಳನ್ನು ಪಾಲಿಸಿಲ್ಲ, ಹೀಗಾಗಿ ಎನ್ ಪಿಕೆಎಲ್ ಪ್ರಾಜೆಕ್ಟ್, ರೇರಾ ಪ್ರಕಾರ ಡೀಫಾಲ್ಟ್ ಯೋಜನೆಯಾಗಿದೆ. ಅರ್ಜಿ ಸಮಿತಿಯು ನೀಡಿದ 2023 ಡಿಸೆಂಬರ್ ನಿಂದ 14 ತಿಂಗಳಲ್ಲಿ ಕೆಂಪೇಗೌಡ ಬಡಾವಣೆ ಸಂಪೂರ್ಣ ಅಭಿವೃದ್ಧಿಪಡಿಸುವಂತೆ ನೀಡಿದ ಅಂತಿಮ ಗಡುವನ್ನು ಪಾಲಿಸಲಾಗಿಲ್ಲ”

  • ಎಂ ಅಶೋಕ್, ಕಾರ್ಯದರ್ಶಿ, ಎನ್ ಪಿಕೆಎಲ್ ಮುಕ್ತ ವೇದಿಕೆ

2025ರ ಮಾರ್ಚ್ ವೇಳೆಗೆ ಬಡಾವಣೆ ನಿರ್ಮಾಣ ಕಾರ್ಯ ಪೂರ್ಣ!!! :

ಈ ಬಗ್ಗೆ ಬಿಡಿಎ ಎಂಜಿನಿಯರಿಂಗ್ ಸದಸ್ಯ ಶಾಂತಾರಾಜಣ್ಣ ಅವರನ್ನು ಪ್ರಶ್ನಿಸಿದರೆ, “ನಾಡಪ್ರಭು ಕೆಂಪೇಗೌಡ ಬಡಾವಣೆ ಅಭಿವೃದ್ಧಿಗಾಗಿ 1,600 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಗುತ್ತಿಗೆದಾರರಿಗೆ ಕೆಲ ವಾರಗಳ ಹಿಂದೆ ಬಾಕಿ ಹಣ ಪಾವತಿಸಲಾಗಿದೆ. ಬಡಾವಣೆಯಲ್ಲಿ ಇನ್ನು ಕಾಮಗಾರಿಗಳು ವೇಗ ಗತಿಯಲ್ಲಿ ನಡೆಯಲಿದೆ. ಹೈಕೋರ್ಟ್ ನಿಂದ  500 ಎಕರೆ ಭೂಸ್ವಾಧೀನಪಡಿಸಿಕೊಳ್ಳಲು ಬಿಡಿಎ ಪರವಾಗಿ ತೀರ್ಪು ಬಂದಿದೆ. ಹೀಗಾಗಿ ಹಂತ ಹಂತವಾಗಿ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಬಡಾವಣೆಯ ಅಭಿವೃದ್ಧಿಯನ್ನು ಮಾಡುತ್ತೇವೆ. ಮಾರ್ಚ್ 2025ರ ವೇಳೆಗೆ ಸಂಪೂರ್ಣವಾಗಿ ಕೆಂಪೇಗೌಡ ಲೇಔಟ್ ನಲ್ಲಿನ ಕಾಮಗಾರಿಗಳು ಪೂರ್ಣವಾಗಲಿದೆ. ಅರ್ಜಿ ಸಮಿತಿಗೂ ಈ ವಿಷಯದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ” ಎಂದು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಪದೇ ಪದೇ ಗಡುವು ಮೀರುವ ಪ್ರಾಧಿಕಾರದ ಹೇಳಿಕೆ ಎಷ್ಟು ಸರಿ? :

“ಕಳೆದ 8 ವರ್ಷಗಳಿಂದ ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಪ್ರಾಧಿಕಾರ ಹೇಳುತ್ತಿದ್ದರೂ, 9 ಬ್ಲಾಕ್‌ಗಳ ಎಲ್ಲಾ ನಿವೇಶನದಾರರಿಂದ ಹಂತ ಹಂತವಾಗಿ ಹಣ ಪಡೆಯದೆ, 2016 ಮತ್ತು 2018ರಲ್ಲಿ ಅರ್ಹ ಫಲಾನುಭವಿಗಳಿಂದ ಬಿಡಿಎ ಪ್ರಾಧಿಕಾರವು, ನಿವೇಶನ ಹಂಚಿಕೆಗೆ ಎದುರಾಗಿ ಒಂದೇ ಬಾರಿಗೆ ಹಣ ಪಡೆದು ಕಾಮಗಾರಿ ಪೂರ್ಣಗೊಳಿಸದೆ ಪದೇ ಪದೇ ಗಡುವನ್ನು ಮೀರಿದ ಪ್ರಾಧಿಕಾರದ ಹೇಳಿಕೆ ಎಷ್ಟು ಸರಿ?”

  • ಚನ್ನಬಸವರಾಜ, ಅಧ್ಯಕ್ಷರು, ಎನ್ ಪಿಕೆಎಲ್ ಮುಕ್ತ ವೇದಿಕೆ

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

Previous Post

Waqf Land Row | ರೈತರಿಗೆ ವಕ್ಪ್ ಬೋರ್ಡ್ ನೊಟೀಸ್ ನೀಡಿರುವ ಕುರಿತು ಜೆಪಿಸಿಗೆ ಮಾಹಿತಿ ನೀಡಿದ್ದೇವೆ: ಬಸವರಾಜ ಬೊಮ್ಮಾಯಿ

Next Post

Food Adulteration | ಎಚ್ಚರ!! : ಕೇರಳದಿಂದ ಕರ್ನಾಟಕದಲ್ಲಿ ಮಾರಾಟವಾಗುವ ಈ 31 ತಿನಿಸುಗಳಲ್ಲಿ ಕೃತಕ ಬಣ್ಣ

Next Post
Mixed salty snacks. Flat lay table scene on a rustic wood background.

Food Adulteration | ಎಚ್ಚರ!! : ಕೇರಳದಿಂದ ಕರ್ನಾಟಕದಲ್ಲಿ ಮಾರಾಟವಾಗುವ ಈ 31 ತಿನಿಸುಗಳಲ್ಲಿ ಕೃತಕ ಬಣ್ಣ

KIAL Airport Flight Que

Viral Video News | ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯ : ಈಗ ಏರ್ ಪೋರ್ಟ್ ರನ್ ವೇ ಸರದಿ

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group