Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಎಚ್ಎಎಲ್ ನಿಂದ ಭಾರತೀಯ ವಾಯುಪಡೆಗೆ ಸುಖೋಯ್-30ಎಂಕೆಐ ಯುದ್ಧ ವಿಮಾನದ ಮೊದಲ AL-31FP ಏರೋ ಎಂಜಿನ್ ಹಸ್ತಾಂತರ

ಸುಖೋಯ್-30ಎಂಕೆಐ ಯುದ್ಧ ವಿಮಾನದಲ್ಲಿನ ಹಳೆಯ ಎಂಜಿನ್ ಅನ್ನು ಬದಲಾಯಿಸುವ ಕಾರ್ಯತಂತ್ರದ ಭಾಗವಾಗಿ ಎಚ್ಎಎಲ್ ಒಟ್ಟು ಎಎಲ್-31ಎಫ್ ಪಿ ವರ್ಗದ 240 ಎಂಜಿನ್ ಗಳನ್ನು ತಯಾರಿಸಲು ಭಾರತೀಯ ವಾಯುಪಡೆಯೊಂದಿಗೆ ಸೆ.09ರಂದು ಒಪ್ಪಂದಕ್ಕೆ ಸಹಿ ಹಾಕಿತ್ತು.

by Bengaluru Wire Desk
October 1, 2024
in Bengaluru Focus, News Wire, Public interest
Reading Time: 1 min read
0
Su-30MKI

ಸುಖೋಯ್-30ಎಂಕೆಐ ಯುದ್ಧ ವಿಮಾನದ ಸಾಂದರ್ಭಿಕ ಚಿತ್ರ. (ಚಿತ್ರಕೃಪೆ : ವಿಕಿಪೀಡಿಯಾ)

ಬೆಂಗಳೂರು/ಕೋರಾಪುಟ್, ಅ.1 www.bengaluruwire.com : ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತುಂಬಿರುವ ಸುಖೋಯ್-30ಎಂಕೆಐ (Su-30MKI) ಯುದ್ಧ ವಿಮಾನದಲ್ಲಿನ ಹಳೆಯ ಎಂಜಿನ್ ಅನ್ನು ಬದಲಾಯಿಸುವ ಕಾರ್ಯತಂತ್ರದ ಭಾಗವಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಒಡಿಶಾದಲ್ಲಿನ ಕೊರಾಪುಟ್ ನಲ್ಲಿ ತಯಾರಿಸಿದ ಮೊದಲ ಎಎಲ್-31ಎಫ್ ಪಿ (AL-31FP Aero Engine) ಏರೊ ಎಂಜಿನ್ ಅನ್ನು ಭಾರತೀಯ ವಾಯು ಪಡೆ (Indian Air Force) ಗೆ ಹಸ್ತಾಂತರಿಸಿತು.

ಎಚ್ಎಎಲ್ ಒಟ್ಟು ಎಎಲ್-31ಎಫ್ ಪಿ ವರ್ಗದ 240 ಎಂಜಿನ್ ಗಳನ್ನು ತಯಾರಿಸಲು ಭಾರತೀಯ ವಾಯುಪಡೆಯೊಂದಿಗೆ ಸೆ.09ರಂದು ಒಪ್ಪಂದಕ್ಕೆ ಸಹಿ ಹಾಕಿದ್ದು, ಒಡಿಶಾದ ಕೊರಾಪುಟ್ ನಲ್ಲಿನ ಎಚ್ಎಎಲ್ ಎಂಜಿನ್ ತಯಾರಿಕಾ ಕಾರ್ಖಾನೆಯಲ್ಲಿ ಮಿಗ್ ಕಾಂಪ್ಲೆಕ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಕೇತ್ ಚತುರ್ವೇದಿ, ರಕ್ಷಣಾ ಉತ್ಪಾದನೆ (Defence Production) ವಿಭಾಗದ ಕಾರ್ಯದರ್ಶಿ ಸಂಜೀವ್ ಕುಮಾರ್ ಹಾಗೂ ಎಚ್ಎಎಲ್ ಪ್ರಧಾನ ವ್ಯವಸ್ಥಾಪಕ ಡಿ.ಕೆ.ಸುನಿಲ್ ಅವರ ಸಮ್ಮುಖದಲ್ಲಿ,  ಭಾರತೀಯ ವಾಯುಪಡೆಯ ಏರ್ ವೈಸ್ ಮಾರ್ಷಲ್ ಕೆ.ಹರಿಶಂಕರ್ ಅವರಿಗೆ ಮೊದಲ ಏರೋ ಎಂಜಿನ್ ಅನ್ನು ಹಸ್ತಾಂತರಿಸಿದರು. ಇದೇ ವೇಳೆ ಕೋರಾಪುಟ್ ಎಡಿಜಿ ಆರ್.ಬಿ.ನಾಗರಾಜ ಐಎಎಫ್ ಗೆ ನೂತನ ಎಂಜಿನ್ ಗೆ ಸಂಬಂಧಿಸಿದ ದಾಖಲೆಯನ್ನು ಹಸ್ತಾಂತರಿಸಿದರು.

ಒಡಿಶಾದ ಕೊರಾಪುಟ್ ನಲ್ಲಿನ ಎಚ್ಎಎಲ್ ಎಂಜಿನ್ ತಯಾರಿಕಾ ಕಾರ್ಖಾನೆಯಲ್ಲಿ ಮಿಗ್ ಕಾಂಪ್ಲೆಕ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಕೇತ್ ಚತುರ್ವೇದಿ ಭಾರತೀಯ ವಾಯುಪಡೆಯ ಏರ್ ವೈಸ್ ಮಾರ್ಷಲ್ ಕೆ.ಹರಿಶಂಕರ್ ಅವರಿಗೆ ಮೊದಲ ಏರೋ ಎಂಜಿನ್ ಅನ್ನು ಹಸ್ತಾಂತರಿಸಿದರು.

ಸೆಪ್ಟೆಂಬರ್ 2 ರಂದು ರಕ್ಷಣೆಗೆ ಸಂಬಂಧಿಸಿದ ಕ್ಯಾಬಿನೆಟ್ ಸಮಿತಿಯು ₹26,000 ಕೋಟಿಗೆ (US$3.1 ಶತಕೋಟಿ) ಇಂತಹ 240 ಎಂಜಿನ್‌ಗಳನ್ನು ಖರೀದಿಸಲು ಅನುಮೋದನೆ ನೀಡಿತ್ತು. ಅದರ ಮುಂದುವರೆದ ಭಾಗವಾಗಿ ಸೆ.9ರಂದು ಎಚ್ಎಎಲ್ ಮತ್ತು ಐಎಎಫ್ ನಡುವೆ ಒಪ್ಪಂದಕ್ಕೆ ಸಹಿ ಹಾಕಿದ್ದು, 8 ನೇ ವರ್ಷಗಳಲ್ಲಿ 240 ಏರೋ ಎಂಜಿನ್ ಗಳನ್ನು ಎಚ್ಎಎಲ್ ನ ಕೊರಾಪುಟ್ ನಲ್ಲಿ ತಯಾರಿಸಿ ವಾಯುಪಡೆಗೆ ನೀಡಲಾಗುತ್ತದೆ. ಈ ಎಂಜಿನ್ ಗಳಲ್ಲಿ ಶೇ.54ರಷ್ಟು ಸ್ವದೇಶಿ ತಂತ್ರಜ್ಞಾನವಿದೆ ಎಂದು ಮೂಲಗಳು ತಿಳಿಸಿವೆ.

ಒಪ್ಪಂದಕ್ಕೆ ಸಹಿ ಹಾಕಿದ ಎರಡು ವಾರಗಳಲ್ಲಿ ಮೊದಲ ಎಂಜಿನ್ ಅನ್ನು ತಲುಪಿಸುವಲ್ಲಿ ಎಚ್ಎಎಲ್ ನ ಪ್ರಯತ್ನಗಳನ್ನು ರಕ್ಷಣಾ ಉತ್ಪಾದನೆ ವಿಭಾಗದ ಕಾರ್ಯದರ್ಶಿ ಸಂಜೀವ್ ಕುಮಾರ್ ಮುಕ್ತಕಂಠದಿಂದ ಶ್ಲಾಘಿಸಿದರು. “ಈ ಪ್ರಮುಖ ಮೈಲಿಗಲ್ಲು ಎಚ್ಎಎಲ್ ನ ಏರೋ ಎಂಜಿನ್ ಉತ್ಪಾದನಾ ಸಾಮರ್ಥ್ಯ ಮತ್ತು ಐಎಎಫ್ ನ ಸು-30ಎಂಕೆಐ ಯುದ್ಧವಿಮಾನ ಹಾರಾಟ ಬೆಂಬಲಿಸುವ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಕೋರಾಪುಟ್ ವಿಭಾಗವು ಏರೋ ಎಂಜಿನ್ ತಯಾರಿಕೆಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಂಡಿದೆ. ಜಾಗತಿಕ ಮಟ್ಟದ ಉನ್ನತ ಮೂಲಸೌಕರ್ಯವನ್ನು ಹೊಂದಿರುವುದು ಸಂತೋಷಕರ. ಎಚ್ಎಎಲ್ ನ ಕೋರಾಪುಟ್ ವಿಭಾಗವು ಕೇವಲ ಭಾರತೀಯ ವಾಯುಪಡೆ ಮಾತ್ರವಲ್ಲದೆ  ಜಾಗತಿಕ ಗ್ರಾಹಕರಿಗೂ ಎಂಜಿನ್ ರಫ್ತು ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದರು.

ಇದಲ್ಲದೆ ಅವರು ಕೊರಾಪುಟ್‌ನ ಉದ್ಯೋಗಿಗಳನ್ನು ಸ್ವಾವಲಂಬನೆಯ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಲು ಮತ್ತು ಗುಣಮಟ್ಟದ 4.0 ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.

240 ಇಂಜಿನ್‌ಗಳನ್ನು ಸಮಯೋಚಿತವಾಗಿ ತಲುಪಿಸಲು ಎಚ್ಎಎಲ್ ಬದ್ಧ :

ಎಚ್ಎಎಲ್ ನ ಸಿಎಂಡಿ ಡಾ. ಸುನಿಲ್ ತಮ್ಮ ಉದ್ಘಾಟನಾ ಭಾಷಣದಲ್ಲಿ, “240 ಇಂಜಿನ್‌ಗಳನ್ನು ಸಮಯೋಚಿತವಾಗಿ ತಲುಪಿಸಲು ಎಚ್ಎಎಲ್ ಬದ್ಧವಾಗಿದೆ. ಕೋರಾಪುಟ್ ವಿಭಾಗವು ಪೂರ್ವಭಾವಿಯಾಗಿ ಏರೋ ಎಂಜಿನ್ ತಯಾರಿಕೆಗೆ ಅಗತ್ಯವಾದ ಸಾಮಗ್ರಿಗಳನ್ನು ಸಂಗ್ರಹಿಸುತ್ತದೆ ಮತ್ತು ಐಎಎಫ್ ನ ನಿರೀಕ್ಷೆಗಳನ್ನು ಪೂರೈಸಲು ಸಾಮರ್ಥ್ಯ ವರ್ಧನೆಯತ್ತ ಕೆಲಸ ಮಾಡುತ್ತದೆ. ಸರ್ಕಾರವು ರೋಮಾಂಚಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಆತ್ಮನಿರ್ಭರತೆಯನ್ನು ರೂಪಿಸಿದೆ. ವಾಯುಯಾನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಇಂಜಿನ್ ಉತ್ಪಾದನಾ ಪ್ರಕ್ರಿಯೆಯಲ್ಲಿ, ಮುಂದಿನ 2-3 ವರ್ಷಗಳಲ್ಲಿ ಶೇ.40 ರಿಂದ 50 ಕ್ಕಿಂತ ಹೆಚ್ಚಿನ ಕೆಲಸದ ಪಾಲನ್ನು ಭಾರತೀಯ ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ. ರಕ್ಷಣಾ ಸಚಿವಾಲಯದ ಬೆಂಬಲ ಮತ್ತು ಮಾರ್ಗದರ್ಶನದೊಂದಿಗೆ, ನಾವು ರಕ್ಷಣೆಯಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಲು ಶ್ರಮಿಸುತ್ತೇವೆ ಮತ್ತು ವಿಕಸಿತ ಭಾರತದ ಕಡೆಗೆ ಎಚ್ಎಎಲ್ ಅನ್ನು ಕೊಂಡೊಯ್ಯುತ್ತೇವೆ” ಎಂದು ಅವರು ತಿಳಿಸಿದರು.

ಏರ್ ವೈಸ್ ಮಾರ್ಷಲ್ ಕೆ.ಹರಿಶಂಕರ್ ಅವರು ಮಾತನಾಡಿ, ಮಿಗ್-21 (MiG-21), ಮಿಗ್-29 (MiG-29) ಮತ್ತು ಐಎಎಫ್ ನ ಸು-30ಎಂಕೆಐ (Su-30MKI) ವರ್ಗದ ಯುದ್ಧ ವಿಮಾನಗಳನ್ನು ಬೆಂಬಲಿಸುವಲ್ಲಿ ಕೋರಾಪುಟ್ ವಿಭಾಗ ಮತ್ತು ಅದರ ಕಾರ್ಯಪಡೆಯ ಬಲವಾದ ಬದ್ಧತೆ, ಗಮನಾರ್ಹ ಕೊಡುಗೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಶ್ಲಾಘಿಸಿದರು. 

ಸುಖೋಯ್-30ಎಂಕೆಐ ವಿಮಾನ ಹಾಗೂ ಅದರ ಎಎಲ್-31ಎಫ್ ಪಿ ವರ್ಗದ ಏರೋ ಎಂಜಿನ್ ಚಿತ್ರ. (ಚಿತ್ರಕೃಪೆ : ವಿಕಿಪೀಡಿಯಾ)

ಕೋರಾಪುಟ್ ವಿಭಾಗದ ವಿಶೇಷತೆಯೇನು?:

ಸುಖೋಯ್ ಇಂಜಿನ್ ವಿಭಾಗ, ಕೊರಾಪುಟ್ ಒಂದು ಅತ್ಯಾಧುನಿಕ ವಿಭಾಗವಾಗಿದ್ದು, ಸು-30ಎಂಕೆಐ ವಿಮಾನಕ್ಕೆ ಅಗತ್ಯವಾಗಿರುವ ಎಂಜಿನ್ ತಯಾರಿಸಲು ಕಚ್ಚಾ ವಸ್ತುಗಳ ಹಂತದಿಂದ ಅಂತಿಮ ಎಂಜಿನ್‌ನವರೆಗೆ ಎಂಜಿನ್‌ಗಳನ್ನು ತಯಾರಿಸಲು ಎಚ್ಎಎಲ್ ನಿಂದ ರಚಿಸಲಾಗಿದೆ. ಎಂಜಿನ್ ಹಸ್ತಾಂತರ ಕಾರ್ಯಕ್ರಮದಲ್ಲಿ ಎಚ್ಎಎಲ್ ನ ಎಚ್‌ಆರ್ ಮತ್ತು ಹಣಕಾಸು ನಿರ್ದೇಶಕ ಎ.ಬಿ ಪ್ರಧಾನ್, ಒಡಿಶಾ ಸರ್ಕಾರದ ಕಾರ್ಯನಿರ್ವಾಹಕ ನಿರ್ದೇಶಕ (ಕೋರಾಪುಟ್) ಎಸ್ ಎಂ ಜೆನಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸು-30ಎಂಕೆಐ ಫೈಟರ್ ಏರ್ ಕ್ರಾಫ್ಟ್ ಬಗ್ಗೆ :

ಸು-30ಎಂಕೆಐ ಫೈಟರ್ ಏರ್ ಕ್ರಾಫ್ಟ್ ಎರಡು ಆಸನಗಳ, ಟ್ವಿನ್ ಜೆಟ್ ಮಲ್ಟಿರೋಲ್ ಏರ್ ಸುಪೀರಿಯಾರಿಟಿ ಯುದ್ಧವಿಮಾನವಾಗಿದ್ದು, ರಷ್ಯಾದ ವಿಮಾನ ತಯಾರಕ ಸಂಸ್ಥೆ ಸುಖೋಯ್ ಇದನ್ನು ಅಭಿವೃದ್ಧಿಪಡಿಸಿದೆ. ಭಾರತ ಮತ್ತು ರಷ್ಯಾ ರಕ್ಷಣಾ ಒಪ್ಪಂದದ ಭಾಗವಾಗಿ, ದೇಶದಲ್ಲಿ ಭಾರತೀಯ ವಾಯುಪಡೆಗಾಗಿ (IAF) ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಪರವಾನಗಿ ಪಡೆದಿದ್ದು, ದೇಶದಲ್ಲೇ ಇದನ್ನು ನಿರ್ಮಿಸುತ್ತದೆ. ಸು-30ಎಂಕೆಐ ಯುದ್ಧ ವಿಮಾನವು, ಸುಖೋಯ್ ಸು-30 (Sukhoi Su-30)ರ ರೂಪಾಂತರವಾಗಿದೆ. ಈ ಯುದ್ಧವಿಮಾನವು ಭಾರೀ ಹಾಗೂ ಎಲ್ಲಾ ಹವಾಮಾನಕ್ಕೆ ಹೊಂದಿಕೊಳ್ಳುವ, ದೀರ್ಘ-ಶ್ರೇಣಿಯ ಯುದ್ಧವಿಮಾನವಾಗಿದೆ.

WhatsApp Join our WhatsApp Channel
Previous Post

ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿನಿಂದ ಪರೀಕ್ಷಾರ್ಥ, ಸ್ವತ್ತಿನ ಇ-ಖಾತಾ ವಿತರಣೆ ಆರಂಭ : ಹೀಗೆ ಡೌನ್ ಲೋಡ್ ಮಾಡಿಕೊಳ್ಳಿ

Next Post

Science News | “ಧ್ವನಿ ತರಂಗಗಳು ಸಸ್ಯಗಳ ಬೆಳವಣಿಗೆ ಹೆಚ್ಚಿಸುತ್ತವೆ ; ಸೂಕ್ಷ್ಮಜೀವಿಗಳು ಸಂಗೀತಕ್ಕೆ ಪ್ರತಿಕ್ರಿಯಿಸುತ್ತವೆ”

Next Post

Science News | "ಧ್ವನಿ ತರಂಗಗಳು ಸಸ್ಯಗಳ ಬೆಳವಣಿಗೆ ಹೆಚ್ಚಿಸುತ್ತವೆ ; ಸೂಕ್ಷ್ಮಜೀವಿಗಳು ಸಂಗೀತಕ್ಕೆ ಪ್ರತಿಕ್ರಿಯಿಸುತ್ತವೆ"

Mysuru Dasara 2024 | ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ : ರಾಜವಂಶಸ್ಥರ ನವರಾತ್ರಿ ಖಾಸಗಿ ದರ್ಬಾರ್ ಹೇಗಿರುತ್ತೆ?

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group