Friday, April 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    Karnataka Lokayukta | ಕರ್ನಾಟಕ ಲೋಕಾಯುಕ್ತಕ್ಕೆ 40ರ ಸಂಭ್ರಮ: ಏಪ್ರಿಲ್ 18ರಂದು ಸಾರ್ಥಕ ಪಯಣದ ಕಾರ್ಯಕ್ರಮ

  • Bengaluru Focus

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

    ಬಿಟ್‌ಕಾಯಿನ್ ಹಗರಣದ ಕಿಚ್ಚು: ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರರ ನಿವಾಸದ ಮೇಲೆ ಇಡಿ ದಾಳಿ, ಪರಿಶೀಲನೆ

    CLEA Conference | ಬೆಂಗಳೂರು ಘೋಷಣೆ: 2047ರ ವೇಳೆಗೆ ಸುಸ್ಥಿರ ಇಂಧನ ಮತ್ತು ಇಂಧನ ನ್ಯಾಯಕ್ಕೆ ಸಂಕಲ್ಪ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW EXCLUSIVE | Illegal Bulk Waste Mixing | ಕಸದ ಆಟೋ ಟಿಪ್ಪರ್, ಕಾಂಪ್ಯಾಕ್ಟರ್ ನಲ್ಲಿ ಬೃಹತ್  ಕಸ ಉತ್ಪಾದಕರ ಘನತ್ಯಾಜ್ಯ ಅಕ್ರಮ ಸೇರ್ಪಡೆ : ನಗರದ ಕಸ ವಿಂಗಡಣಾ ಕಾರ್ಯ ಶೇ.37ರಷ್ಟು ಮಾತ್ರ!! ಏನಿದರ ಹಿಂದಿನ ಸತ್ಯ!!??

ಸಾರ್ವಜನಿಕರಿಂದ ಮನೆ ಮನೆಯಿಂದ ಹಸಿ ಕಸ- ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುವ ಆಟೋ ಟಿಪ್ಪರ್ ಗಳು | ಪಾಲಿಕೆ ನಿಯೋಜಿತ ಆಟೋ ಟಿಪ್ಪರ್ ಮತ್ತು ಖಾಸಗಿ ಟಿಪ್ಪರ್ ಗಳಿಂದ ಕಾಂಪ್ಯಾಕ್ಟರ್ ಗೆ ಅಕ್ರಮವಾಗಿ ಬಲ್ಕ್ ಜನರೇಟರ್ ಗಳ ಮಿಶ್ರಿತ ಕಸ ರವಾನೆ | SWM – BSWML – ಕಾಂಟ್ರಾಕ್ಟರ್ ಗಳ ಅಲಿಖಿತ ಭ್ರಷ್ಟ ಒಪ್ಪಂದ | ತಿಂಗಳಿಗೆ ಕೋಟ್ಯಾಂತರ ರೂಪಾಯಿ ಅವ್ಯವಹಾರ ಶಂಕೆ

by Bengaluru Wire Desk
March 17, 2024
in Bengaluru Focus, BW Special, Photo Gallery
Reading Time: 3 mins read
1
ಬಿಬಿಎಂಪಿಯ ಆಟೋ ಟಿಪ್ರರ್ ನಿಂದ ಕಾಂಪ್ಯಾಕ್ಟರ್ ಗೆ ಘನತ್ಯಾಜ್ಯ ವರ್ಗಾವಣೆ ಮಾಡುತ್ತಿರುವ ಸಾಂದರ್ಭಿಕ ಚಿತ್ರ

ಬಿಬಿಎಂಪಿಯ ಆಟೋ ಟಿಪ್ರರ್ ನಿಂದ ಕಾಂಪ್ಯಾಕ್ಟರ್ ಗೆ ಘನತ್ಯಾಜ್ಯ ವರ್ಗಾವಣೆ ಮಾಡುತ್ತಿರುವ ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.17 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಸೂಕ್ತ ರೀತಿ ಕಸ ವಿಂಗಡಣೆಯಾಗುತ್ತಿಲ್ಲ. ವರ್ಷಂಪ್ರತಿ ಕಸ ಸಂಗ್ರಹಣೆ, ಸಾಗಣೆ ಮತ್ತು ವಿಲೇವಾರಿಗಾಗಿ ಪಾಲಿಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದರೂ ನಗರದಲ್ಲಿ ಸೂಕ್ತ ರೀತಿಯಲ್ಲಿ ಹಸಿ ಕಸ, ಒಣಕಸ ಮತ್ತು ಸ್ಯಾನಿಟರಿ ಕಸ ವಿಂಗಡಣೆ ಸೂಕ್ತ ರೀತಿ ಆಗುತ್ತಿಲ್ಲ ಎಂಬ ಆಘಾತಕಾರಿ ಅಂಶವು ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಫೆಬ್ರವರಿ ತಿಂಗಳ ದತ್ತಾಂಶವನ್ನು ಗಮನಿಸಿದಾಗ ಕಂಡು ಬಂದಿದೆ. ನಗರದಲ್ಲಿ ಕಸ ವಿಂಗಡಣೆ ಕಾರ್ಯ ಶೇ.37 ರಷ್ಟು ಮಾತ್ರ ಆಗುತ್ತಿದೆ.

ರಾಜಧಾನಿಯಲ್ಲಿ ದಿನಂಪ್ರತಿ 5500 ಮೆಟ್ರಿಕ್ ಟನ್ ಎಲ್ಲಾ ವಿಧವಾದ ಕಸ ಉತ್ಪತ್ತಿಯಾದರೂ ಅರ್ಧಕ್ಕಿಂತ ಹೆಚ್ಚು ಭಾಗ ಅಂದರೆ ಸರಾಸರಿ 3100 ರಿಂದ 3200 ಮೆಟ್ರಿಕ್ ಟನ್ ಮಿಶ್ರಿತ ಕಸ ಮಿಟಗಾನಹಳ್ಳಿ ಭೂಭರ್ತಿ ಘಟಕದ ಒಡಲು ಸೇರುತ್ತಿದೆ. ನೂರಾರು ಕೋಟಿ ಕರ್ಚು ಮಾಡಿ ಪಾಲಿಕೆ 6 ತ್ಯಾಜ್ಯ ಸಂಸ್ಕರಣಾ ಕೇಂದ್ರ ತೆರೆದರೂ ಒಟ್ಟಾರೆ 8 ಪ್ಲಾಂಟ್ ಗಳಿಗೆ ಪ್ರತಿದಿನ ಸರಾಸರಿ ಹೋಗ್ತಿರೋದು ಸರಾಸರಿ 1600 ಮೆಟ್ರಿಕ್ ಟನ್ ಕಸ ಮಾತ್ರ.

ಬಿಬಿಎಂಪಿಯ ಆಟೋ ಟಿಪ್ಪರ್ ಸಾಂದರ್ಭಿಕ ಚಿತ್ರ.

ಫೆಬ್ರವರಿ ತಿಂಗಳ 29ನೇ ತಾರೀಖಿನಂದು ಹಸಿಕಸ ತ್ಯಾಜ್ಯ ಸಂಸ್ಕರಣಾ ಘಟಕಗಳಾದ ಚಿಕ್ಕನಾಗಮಂಗಲ, ದೊಡ್ಡಬಿದರಕಲ್ಲು, ಕನ್ನಹಳ್ಳಿ, ಲಿಂಗಧೀರನಹಳ್ಳಿ, ಸೀಗೇಹಳ್ಳಿ, ಸುಬ್ಬರಾಯನಪಾಳ್ಯ, ಮಿಟಗಾನಹಳ್ಳಿ, ಕೆಸಿಡಿಸಿ ಹಾಗೂ ಎಂಎಸ್ ಜಿಪಿ ಘಟಕಗಳಲ್ಲಿ 1,678.76 ಮೆಟ್ರಿಕ್ ಟನ್ ಕಸ ಸಂಸ್ಕರಣೆಯಾದರೆ, ಅದೇ ದಿನ 2,866.73 ಮೆಟ್ರಿಕ್ ಟನ್ ಗಳಷ್ಟು ಮಿಶ್ರಿತ ಕಸ ಮಿಟಗಾನಹಳ್ಳಿ ಭೂಭರ್ತಿ ಘಟಕದ ಒಡಲು ಸೇರಿತ್ತು. ಅಂದರೆ 8 ಕಸ ಸಂಸ್ಕರಣಾ ಘಟಕಗಳಿಗೆ ಕೇವಲ 36.93% ರಷ್ಟು ಹಸಿಕಸ ಸಂಸ್ಕರಣೆ ಮಾಡಲಾಗಿತ್ತು. 63.06% ರಷ್ಟು ಕಸ ಮಿಟಗಾನಹಳ್ಳಿ ಕ್ವಾರಿಗೆ ಕಾಂಪ್ಯಾಕ್ಟರ್ ನಲ್ಲಿ ತಂದು ಸುರಿಯಲಾಗಿತ್ತು. ಇನ್ನು ಮಾ.17ರಂದು ಇದೇ 8 ಹಸಿಕಸ ತ್ಯಾಜ್ಯ ಸಂಸ್ಕರಣಾ ಪ್ಲಾಂಟ್ ಗಳಿಗೆ ಒಟ್ಟಾರೆ 1630.8 ಮೆಟ್ರಿಕ್ ಟನ್ ಕಸ (ಒಟ್ಟಾರೆ ಹಸಿ ಮತ್ತು ಮಿಶ್ರಿತ ಕಸದಲ್ಲಿ ಶೇ.35.75) ರವಾನೆಯಾದರೆ, ಮಿಟಗಾನಹಳ್ಳಿಗೆ 2,930.41 ಮೆಟ್ರಿಕ್ ಟನ್ ಕಸ (ಒಟ್ಟಾರೆ ಹಸಿ ಮತ್ತು ಮಿಶ್ರಿತ ಕಸದಲ್ಲಿ ಶೇ.64.25) ವರ್ಗಾವಣೆಯಾಗಿದೆ. ಅಂದರೆ ನಗರದಲ್ಲಿ ಸೂಕ್ತ ರೀತಿಯಲ್ಲಿ ಹಸಿಕಸ ವಿಂಗಡಣೆಯಾಗುತ್ತಿಲ್ಲ ಎಂದು ಈ ದತ್ತಾಂಶದಿಂದ ತಿಳಿದು ಬರುತ್ತಿದೆ.

27 ವಿಭಾಗಗಳಲ್ಲಿ ಫೆಬ್ರವರಿ ತಿಂಗಳ ಕೇಸ್ ಸ್ಟಡಿ :

2024ರ ಫೆಬ್ರವರಿ ತಿಂಗಳು ನಗರದ 27 ವಿಭಾಗಗಳಲ್ಲಿನ 198 ವಾರ್ಡ್ ಗಳಲ್ಲಿ ಫೆಬ್ರವರಿ ತಿಂಗಳು ಸರಾಸರಿಯಾಗಿ 4,227 ಮೆಟ್ರಿಕ್ ಟನ್ ಕಸ ಸಂಗ್ರಹವಾದರೆ ಕೇವಲ ಶೇಕಡ 37.01ರಷ್ಟು ಕಸವನ್ನು ಮಾತ್ರ ವಿಂಗಡಿಸಲಾಗಿದೆ. ಉಳಿದೆಲ್ಲವೂ ಮಿಶ್ರಿತ ಕಸವಾಗಿದೆ ಎಂದರೆ ಬೆಂಗಳೂರು ಘನತ್ಯಾಜ್ಯ ವಿಲೇವಾರಿ ಕಂಪನಿ ಮತ್ತು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಭಾಗ ತಿಂಗಳಿಗೆ ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ಖರ್ಚು ಮಾಡಿದರೂ, ಹಸಿಕಸ, ಒಣಕಸ ಸಂಗ್ರಹದಲ್ಲಿ ಬಹುತೇಕ ವಿಫಲವಾಗಿರುವುದು ಈ ದತ್ತಾಂಶದಿಂದ ಕಂಡು ಬಂದಿದೆ. ಪಾಲಿಕೆಯಲ್ಲಿ 5500 ಆಟೋ ಟಿಪ್ಪರ್ ಗಳನ್ನು 750 ಮಂದಿಗೊಂದು ಕ್ಲಸ್ಟರ್ ನಂತೆ ನಿಯೋಜಿಸಲಾಗಿದೆ. ಈ ಆಟೋ ಟಿಪ್ಪರ್ ಗಳು ಪ್ರತಿಯೊಂದು ಮನೆಯಿಂದ ಪ್ರತಿದಿನ ಕಸ ಸಂಗ್ರಹಿಸಿ ಹತ್ತಿರದ ಟ್ರಾನ್ಸ್ ಫರ್ ಸ್ಟೇಷನ್ ಬಳಿ ಟಿಪ್ಪರ್ ಗಳಿಗೆ ಕಸವನ್ನು ನೀಡುತ್ತಿದೆ.

  • ಮನೆಗಳಿಂದ ಕಸ ವಿಂಗಡಿಸಿ ನೀಡುತ್ತಿದ್ದಾರೆ
  • ಅಂತಿಮವಾಗಿ ಕಾಂಪ್ಯಾಕ್ಟರ್ ಗೆ ಸಾಗಣೆ ಸಂದರ್ಭ ಮಿಕ್ಸಿಂಗ್
ಮಿಟಗಾನಹಳ್ಳಿಯ ಭೂಭರ್ತಿ ಘಟಕದ ಸಾಂದರ್ಭಿಕ ಚಿತ್ರ.

ರಾಜಧಾನಿಯಲ್ಲಿ ಮನೆಗಳಿಂದ ಹಸಿಕಸವನ್ನು ಸಾರ್ವಜನಿಕರಿಂದ ಪ್ರತ್ಯೇಕವಾಗಿ ಸಂಗ್ರಹಿಸಿ ಅದೇ ಹಸಿಕಸವನ್ನು ನಗರದ ಬೇರೆ ಬೇರೆ ಭಾಗದಲ್ಲಿರುವ ಪಾಲಿಕೆ, ಕೆಸಿಡಿಸಿ ಹಾಗೂ ಖಾಸಗಿ ಎಂಎಸ್ ಜಿಪಿಯಂತಹ ಹಸಿಕಸ ಸಂಸ್ಕರಣೆ ಮಾಡುವ ಸ್ಥಾವರಗಳಿಗೆ ಹೋಗುತ್ತಿದ್ದರೆ ಪ್ರತಿ ದಿನ ಕೇವಲ 1,650 ಮೆಟ್ರಿಕ್ ಟನ್ ಗಳಷ್ಟು ಮಾತ್ರ ಕಡಿಮೆ ಹಸಿಕಸ ಮಾತ್ರ ಸಂಸ್ಕರಣೆಯಾಗುತ್ತಿರಲಿಲ್ಲ. ಅದರ ಪ್ರಮಾಣ ಇನ್ನೂ ಹೆಚ್ಚಾಗುತ್ತಿತ್ತು. ಮೂಲದಲ್ಲೇ ಹಸಿಕಸ ಸಾರ್ವಜನಿಕರು ವಿಂಗಡಣೆ ಮಾಡಿ ಕೊಡುತ್ತಿದ್ದಾರೆ. ಆದರೆ ಅನಧಿಕೃತವಾಗಿ ಬೃಹತ್ ಕಸ ಉತ್ಪಾದಕರು ತಮ್ಮ ಘನತ್ಯಾಜ್ಯವನ್ನು ಮನೆ ಮನೆಯಿಂದ ಹಸಿಕಸ, ಒಣಕಸ ಸಂಗ್ರಹಿಸುವ ಬಿಬಿಎಂಪಿಯ ಆಟೋ ಟಿಪ್ಪರ್ ಗಳಿಗಾಗಲಿ ಅಥವಾ ಕಾಂಪ್ಯಾಕ್ಟರ್ ಗಳಿಗಾಗಲಿ ನೀಡುವಂತಿಲ್ಲ.

ಮಿಕ್ಸೆಡ್ ಕಸಕ್ಕಾಗಿ ಅಪವಿತ್ರ ಮೈತ್ರಿ – ಕೋಟ್ಯಾಂತರ ರೂ. ಅವ್ಯಹಾರ :

ಅಂತಿಮವಾಗಿ ಪಾಲಿಕೆಯ ಘನತ್ಯಾಜ್ಯ ವಿಲೇವಾರಿಯ ಭ್ರಷ್ಟ ಎಂಜಿನಿಯರ್ ಗಳು, ಅಧಿಕಾರಿಗಳು ಮತ್ತು ಕಾಂಟ್ರಾಕ್ಟರ್ ಗಳ ಚಿತಾವಣೆಯಿಂದ ಆಟೋಗಳು ಮತ್ತು ಖಾಸಗಿ ಆಟೋಗಳು ತಮ್ಮ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಕಸ ಉತ್ಪಾದಿಸುವ ಅಪಾರ್ಟ್ ಮೆಂಟ್, ಹೋಟೆಲ್, ರೆಸ್ಟೋರೆಂಟ್, ಫ್ಯಾಕ್ಟರಿ ಮತ್ತಿತರ ಕಡೆಗಳಿಂದ ಮಿಶ್ರಿತ ಕಸವನ್ನು ದುಬಾರಿ ಹಣವನ್ನು ಅಕ್ರಮವಾಗಿ ಪಡೆದು, ಅದನ್ನು ಬಿಬಿಎಂಪಿಯ ಕಸದ ಕಾಂಪ್ಯಾಟರ್ ಗಳಿಗೆ ಹಸಿಕಸದೊಂದಿಗೆ, ಮಿಶ್ರಿತ ಕಸವನ್ನು ಅನಧಿಕೃತವಾಗಿ ಸೇರಿಸುತ್ತಿದ್ದಾರೆ ಎಂಬುದಕ್ಕೆ ಈ ಕೆಳಗಿನ 27 ವಿಭಾಗಗಳಲ್ಲಿ ನಡೆದಿರುವ ಕಸ ವಿಂಗಡಣೆ ವಿವರವೇ ಸಾಕ್ಷಿಯಾಗಿದೆ. ಒಂದು ವಾರ್ಡ್ ಅಲ್ಲ ಬರೋಬ್ಬರಿ 198 ವಾರ್ಡ್ ಗಳಲ್ಲಿ ಬಹುತೇಕ ಕಡೆ ಈ ಅವ್ಯವಹಾರ ದಂಧೆ ರೂಪದಲ್ಲಿ ನಡೆಯುತ್ತಿದೆ.

ಕಸ ಸಾಗಣೆಗೆ ಕಾಂಟ್ರಾಕ್ಟರ್ ಒಂದೆಡೆ ಬಿಬಿಎಂಪಿಯಿಂದ ಬಿಲ್ ಪಡೆಯುವುದಲ್ಲದೆ, ಬಲ್ಕ್ ಜನರೇಟರ್ ಗಳಿಂದ ಮಿಕ್ಸೆಡ್ ಕಸ ಪಡೆದಿದ್ದಕ್ಕೆ ಅಲ್ಲಿಂದಲೂ ಹಣ ಪಡೆದು ಬಿಬಿಎಂಪಿ ಹಣದಲ್ಲಿ ಅದನ್ನು ಕಸದ ಕ್ವಾರಿಗೆ ಸಾಗಣೆ ಮಾಡಿ ಎರಡೆರಡು ಕಡೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಕಮಾಯಿ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ನೂರಾರು ಕೋಟಿ ಅವ್ಯವಹಾರ ಪಾಲಿಕೆಯಲ್ಲಿ ನಡೆದು ಹೋಗುತ್ತಿದೆ. ಇಲ್ಲದಿದ್ದರೆ ರಾಜಧಾನಿ ಬೆಂಗಳೂರಿನಲ್ಲಿ ಕಸ ವಿಂಗಡಣಾ ಕಾರ್ಯ ಕೇವಲ 37 ಪರ್ಸೆಂಟ್ ನಷ್ಟಾಗುತ್ತಿರಲಿಲ್ಲ. ಮಿಟಗಾನಹಳ್ಳಿ ಭೂಭರ್ತಿ ಘಟಕದ ಕಲ್ಲು ಕ್ವಾರಿಗೆ ಪ್ರತಿದಿನ 2800 ರಿಂದ 3500 ಮೆಟ್ರಿಕ್ ಟನ್ ಮಿಶ್ರಿತ ಕಸ ಭೂಮಿಯ ಒಡಲನ್ನು ಸೇರುತ್ತಿರಲಿಲ್ಲ.

ಇದನ್ನೂ ಓದಿ : BW SPECIAL | ED COMPLAINT | ಬಿಬಿಎಂಪಿ ಪ್ರಧಾನ ಎಂಜಿನಿಯರ್ ವಿರುದ್ಧ EDಯಲ್ಲಿ ದೂರು ದಾಖಲು : ಕಾಂಟ್ರಾಕ್ಟರ್ ನಿಂದ ಪತ್ನಿಯ ಬ್ಯಾಂಕ್ ಖಾತೆ ಮೂಲಕ ಹಣ ಪಡೆದ ಆರೋಪ– ಒಬ್ಬ ಅಧಿಕಾರಿಗೇ ಹಲವು ಮಹತ್ವದ ಹುದ್ದೆ ಎಷ್ಟು ಸರಿ?

2024ರ ಫೆಬ್ರವರಿ ತಿಂಗಳ ಬಿಬಿಎಂಪಿ ವಿಭಾಗವಾರು ಕಸ ವಿಂಗಡಣೆ ವಿವರ
ವಿಭಾಗದ ಹೆಸರುಒಟ್ಟಾರೆ ಕಸ ಸಂಗ್ರಹ  (ಹಸಿ ಕಸ+ಮಿಶ್ರಿತ ಕಸ) ಮೆಟ್ರಿಕ್ ಟನ್ ಗಳಲ್ಲಿಒಟ್ಟಾರೆ ಕಸ ವಿಂಗಡಣೆ (ಶೇಕಡವಾರು)
1) ಬಸವನಗುಡಿ106.6434.63%
2) ಬೆಂಗಳೂರು ದಕ್ಷಿಣ196.9670.68%
3) ಬಿಟಿಎಂ ಬಡಾವಣೆ117.8440.67%
4) ಬ್ಯಾಟರಾಯನಪುರ86.2334.77%
5) ಚಾಮರಾಜಪೇಟೆ114.5839.40%
6) ಚಿಕ್ಕಪೇಟೆ190.248.28%
7) ಸಿ.ವಿ.ರಾಮನ್ ನಗರ123.5338.06%
8) ದಾಸರಹಳ್ಳಿ157.756.60%
9) ಗಾಂಧಿನಗರ162.212.35%
10) ಗೋವಿಂದರಾಜನಗರ137.640.65%
11) ಹೆಬ್ಬಾಳ148.3341.82%
12) ಜಯನಗರ132.0643.98%
13) ಕೆ.ಆರ್.ಪುರ276.3930.88%
14) ಮಹದೇವಪುರ280.7241.68%
15) ಮಹಾಲಕ್ಷ್ಮಿ ಲೇಔಟ್129.7542.94%
16) ಮಲ್ಲೇಶ್ವರ125.6426.32%
17) ಪದ್ಮನಾಭನಗರ139.7127.04%
18) ಪುಲಕೇಶಿನಗರ143.1723.76%
19) ರಾಜಾಜಿನಗರ96.4652.17%
20) ರಾಜರಾಜೇಶ್ವರಿನಗರ233.4140.37%
21) ಸರ್ವಜ್ಞನಗರ187.8631.64%
22) ಶಾಂತಿನಗರ125.7227.33%
23) ಶಿವಾಜಿನಗರ191.322.83%
24) ವಿಜಯನಗರ145.232.04%
25) ಯಲಹಂಕ89.5421.68%
26) ಯಶವಂತಪುರ146.0445.15%
27) ಬೊಮ್ಮನಹಳ್ಳಿ242.0471.75%
ಒಟ್ಟು ಸರಾಸರಿ422737.01%

ಯಾವ್ಯಾವ ವಿಭಾಗಗಳಲ್ಲಿ ಅತಿ ಕಡಿಮೆ ಕಸ ವಿಂಗಡಣೆ? :

ಇಡೀ ಬೆಂಗಳೂರಿನಲ್ಲಿ ಚಿಕ್ಕಪೇಟೆ ವಿಭಾಗದಲ್ಲಿ ಅತಿ ಕಡಿಮೆ ಅಂದರೆ ಕೇವಲ ಶೇ.8.28ರಷ್ಟು ಮಾತ್ರ ಕಸ ವಿಂಗಡಣೆ ಮಾಡಲಾಗುತ್ತಿದೆ. ಅದನ್ನು ಹೊರತುಪಡಿಸಿದರೆ ಗಾಂಧಿನಗರ ವಿಭಾಗದಲ್ಲಿ ಕೇವಲ ಶೇ.12.35ರಷ್ಟು ಕಸ ವಿಂಗಡಣೆಯಾಗುತ್ತಿದೆ. ಯಲಹಂಕದಲ್ಲಿ ಶೇ.21.68, ಶಿವಾಜಿನಗರದಲ್ಲಿ ಶೇ.22.83, ಪುಲಕೇಶಿನಗರದಲ್ಲಿ ಶೇ.23.76ರಷ್ಟು, ಮಲ್ಲೇಶ್ವರ ಶೇ.26.32, ಪದ್ಮನಾಭನಗರದಲ್ಲಿ ಶೇ.27.04ರಷ್ಟು ಹಾಗೂ ಶಾಂತಿನಗರದಲ್ಲಿ ಶೇ.27.33ರಷ್ಟು ಮಾತ್ರ ಕಸವನ್ನು ವಿಂಗಡಣೆ ಮಾಡಲಾಗುತ್ತಿದೆ.

ಕಸದ ವಿಂಗಡಣೆ ಕಾರ್ಯ ಕಡಿಮೆಯಿದ್ದ ಕಡೆ ಮಿಶ್ರಿತ ಕಸದ ಅಕ್ರಮ ಹೆಚ್ಚಿರುವ ಶಂಕೆ :

ಯಾವ್ಯಾವ ವಿಭಾಗಗಳಲ್ಲಿ ಕಸದ ವಿಂಗಡಣೆ ಕಾರ್ಯ ಕಡಿಮೆಯಿದೆ ಅಲ್ಲೆಲ್ಲಾ ಬೃಹತ್ ಕಸದ ಉತ್ಪಾದಕರ ಘನತ್ಯಾಜ್ಯ ಅಕ್ರಮವಾಗಿ ಪಾಲಿಕೆಯ ಕಾಂಪ್ಯಾಕ್ಟರ್ ಗೆ ಸೇರ್ಪಡೆಯಾಗಿರುವ ಸಾಧ್ಯತೆಯು ಹೆಚ್ಚಿರುತ್ತದೆ. ಉಳಿದ ವಿಭಾಗಗಳಲ್ಲಿ ಹಸಿಕಸದ ಜೊತೆಗೆ ಮಿಶ್ರಿತ ಕಸವನ್ನು ಮಿಶ್ರಣ ಮಾಡಲಾಗುತ್ತಿಲ್ಲ ಎಂದಲ್ಲ. ಅಲ್ಲೂ ಸಹ ಸಾರ್ವಜನಿಕರಿಂದ ಸಂಗ್ರಹವಾಗುವ ಕಸದ ಜೊತೆಗೆ ಬಲ್ಕ್ ಜನರೇಟರ್ ಕಸವನ್ನು ಮಿಶ್ರಿಣ ಮಾಡಿ ಮಿಟಗಾಟನಹಳ್ಳಿಗೆ ಸೈಲೆಂಟಾಗಿ ಸಾಗಿಸಲಾಗುತ್ತಿದೆ ಎಂದು ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ. ಈ ಬಗ್ಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಸಮಗ್ರ ತನಿಖೆ ನಡೆಸಬೇಕಿದೆ. ಬಲ್ಕ್ ಜನರೇಟರ್, ಹಣ ಬಾಕ ಎಂಜಿನಿಯರ್ ಗಳು ಹಾಗೂ ಭ್ರಷ್ಟ ಗುತ್ತಿಗೆದಾರರ ನಡುವಿನ ಅಪವಿತ್ರ ಮೈತ್ರಿಯ ಸರಪಳಿಯನ್ನು ಮುರಿಯಬೇಕಿದೆ. ಆದರೆ ಈ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಇವರು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

Previous Post

#Puneeth Rajkumar Birthday | ಅಪ್ಪು ಇಲ್ಲದ 3ನೇ ವರ್ಷದ ಹುಟ್ಟುಹಬ್ಬ : “ರಾಜಕುಮಾರ”ನ ನೆನಪಿನಲ್ಲಿ ಅಭಿಮಾನಿಗಳಿಂದ ಸಮಾಜಮುಖಿ ಕೆಲಸ

Next Post

Reduced kerosene consumption | ದೇಶದಲ್ಲಿ 10 ವರ್ಷದಲ್ಲಿ ಶೇ.26ರಷ್ಟು ತಗ್ಗಿದ ಸೀಮೆಎಣ್ಣೆ ಬಳಕೆ ಪ್ರಮಾಣ

Next Post

Reduced kerosene consumption | ದೇಶದಲ್ಲಿ 10 ವರ್ಷದಲ್ಲಿ ಶೇ.26ರಷ್ಟು ತಗ್ಗಿದ ಸೀಮೆಎಣ್ಣೆ ಬಳಕೆ ಪ್ರಮಾಣ

ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

Bangalore 500 MLD Water Scarcity | “ಬೆಂಗಳೂರಿನಲ್ಲಿ ಪ್ರತಿನಿತ್ಯ 500 ಎಂಎಲ್ ಡಿ ನೀರಿನ ಕೊರತೆ” : ಮುಖ್ಯಮಂತ್ರಿ ಸಿದ್ದರಾಮಯ್ಯ

Please login to join discussion

Like Us on Facebook

Follow Us on Twitter

Recent News

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026

 ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group