Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | Bangalore Water Supply Analysis | ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಂಕಷ್ಟ : ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ; ಟ್ಯಾಂಕರ್ ಮಾಫಿಯಾಕ್ಕೆ ಹಬ್ಬದೂಟ

ಬೆಂಗಳೂರಿಗೆ ಪ್ರತಿದಿನ ಸಾಮಾನ್ಯವಾಗಿ ಕಾವೇರಿ ನೀರು ಹಾಗೂ ಸರ್ಕಾರಿ- ಖಾಸಗಿ ಬೋರ್ ವೆಲ್‌ನಿಂದ ಒಟ್ಟಾರೆ 2050 ದಶಲಕ್ಷ ಲೀ. ನೀರು ಸಿಗ್ತಿತ್ತು. ಆದ್ರೀಗ ಬೋರ್ ವೆಲ್‌ಗಳಲ್ಲಿ ಅಂತರ್ಜಲ ಕಡಿಮೆಯಾಗಿ 200 ಎಂಎಲ್ ಡಿ ಕೊರತೆಯಾಗಿದೆ. ಬೇಸಿಗೆಯಲ್ಲಿ ಇನ್ನು 100 ಎಂಎಲ್ ಡಿ ಕಡಿಮೆಯಾಗಲಿದೆ.

by Bengaluru Wire Desk
February 7, 2024
in Bengaluru Focus, BW Special, Public interest
Reading Time: 3 mins read
0

ಬೆಂಗಳೂರು, ಫೆ.7 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿಯ ಬೇಸಿಗೆ ಬರುವ ಮುಂಚೆಯೇ ಎಲ್ಲೆಡೆ ಕುಡಿಯುವ ನೀರಿನ ಆಹಾಕಾರ ಕಂಡುಬರುತ್ತಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.

ಕಳೆದ ವರ್ಷ ಬೆಂಗಳೂರು ಸೇರುದಂತೆ ರಾಜ್ಯದಲ್ಲಿ ತೀವ್ರ ರೂಪದ ಮಳೆಯ ಕೊರತೆ ಕಂಡುಬಂದಿದ್ದು ಹಲವು ಕಡೆ ಕೆರೆ ಕಟ್ಟೆಗಳು ಬರಿದಾಗಿದ್ದವು. ಇದೀಗ ಬೇಸಿಗೆಯು ಹತ್ತಿರದಲ್ಲಿದೆ. ಅಂತರ್ಜಲ ಮಟ್ಟ ಕುಸಿದಿರುವ ಕಾರಣಕ್ಕೆ ನಗರದಲ್ಲಿ ಈಗಾಗಲೇ ಬಿಬಿಎಂಪಿಯು ಕೊರೆಸಿರುವ ಕೊಳವೆಬಾವಿಗಳು ಸೇರಿದಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಿರ್ವಹಣೆ ಮಾಡುತ್ತಿರುವ 11,816 ಬೋರ್ ವೆಲ್‌ಗಳಲ್ಲಿ 750ಕ್ಕೂ ಹೆಚ್ಚು ನೀರಿಲ್ಲದೆ ಸ್ಥಗಿತಗೊಂಡಿದೆ. ಉಳಿದವು ಈ ಹಿಂದೆ ನೀರು ಪೂರೈಕೆಗಾಗಿ ಮೋಟಾರ್ ಚಾಲನೆ ಮಾಡಿದರೆ ಎಂಟು ಕಾರ್ಯನಿರ್ವಹಿಸುತ್ತಿದ್ದವು ಈಗ ನಾಲ್ಕು ಗಂಟೆಗೆ ಅದರ ಸಾಮರ್ಥ್ಯ ಇಳಿಕೆಯಾಗಿದೆ. 

ಪಾಲಿಕೆ, ಮಂಡಳಿ ಹಾಗೂ ಖಾಸಗಿ ಬೋರ್ ವೆಲ್ ಗಳಿಂದ ಒಟ್ಟಾರೆ ಪ್ರತಿದಿನ ಲಭ್ಯವಾಗುತ್ತಿದ್ದ 600 ದಶಲಕ್ಷ ಲೀ. (Millon Liter Per Day – MLD) ನೀರಿನ ಪೈಕಿ 200 ಎಂಎಲ್ ಡಿ ನೀರು ಕೊರತೆಯಾಗಿದೆ. ಈಗ ಸದ್ಯ ಲಭ್ಯವಿರುವ 400 ಎಂಎಲ್ ಡಿ ಪೈಕಿ 100 ಎಂಎಲ್ ಡಿಯಷ್ಟು ನೀರು ಮುಂಬರುವ ಬೇಸಿಗೆಯಲ್ಲಿ ಕಡಿಮೆಯಾಗಲಿದೆ. ಇದರಿಂದ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿದೆ. ರಾಜ್ಯ ಸರ್ಕಾರ ಬೆಂಗಳೂರು ನಗರಕ್ಕೆ ಫೆಬ್ರವರಿಯಿಂದ ಜೂನ್ ವರೆಗೆ ಕುಡಿಯುವ ನೀರಿಗಾಗಿ ಕಾವೇರಿಯಿಂದ 10 ಎಂಎಲ್ ಡಿ ನೀರನ್ನು ಮೀಸಲಿಟ್ಟಿದೆ. ಹೀಗಾಗಿ ಇದೊಂದು ಸಮಾಧಾನಕರ ವಿಷಯ. 

ಸಾಮಾನ್ಯವಾಗಿ ಬೆಂಗಳೂರು ಜಲಮಂಡಳಿಯು 575 ಚದ ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 1.6 ಎಂಎಲ್ ಡಿಯಷ್ಟು ಕಾವೇರಿ ನೀರನ್ನು ನಗರಕ್ಕೆ ಪೂರೈಸುತ್ತಿದೆ. ಅಂದರೆ ಪ್ರತಿದಿನ 10.15 ಲಕ್ಷ ಮನೆಗಳಿಗೆ 1450 ದಶಲಕ್ಷ ಲೀಟರ್ ಕಾವೇರಿ ನೀರು ಪೂರೈಸುತ್ತಿದ್ದರೆ, ಮಂಡಳಿ ನಿರ್ವಹಣೆ ಮಾಡುತ್ತಿರುವ ಹಾಗೂ ಖಾಸಗಿ ಬೋರ್ ವೆಲ್ ನಿಂದ 600 ದಶಲಕ್ಷ ಲೀ. ನೀರು ನಗರಕ್ಕೆ ಲಭ್ಯವಾಗುತ್ತಿತ್ತು. ಆದರೆ ಈ ಚಿತ್ರಣ ಈಗ ಬದಲಾಗಿದೆ.

2021ರಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉತ್ತಮ ಮಳೆಯಾದ ಕಾರಣ ಅಂತರ್ಜಲ ಮಟ್ಟ ಏರಿಕೆಯಾಗಿತ್ತು. ಆದರೆ 2023ರಲ್ಲಿ ಮಳೆ ಕೊರತೆಯಾದ ಕಾರಣ ಬೆಂಗಳೂರು ಪೂರ್ವ, ಉತ್ತರ ಭಾಗ, ನಗರದ ಕೇಂದ್ರಭಾಗಗಳಲ್ಲಿ ಬೋರ್ ವೆಲ್ ನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇದನ್ನು ಬೆಂಗಳೂರು ಹೊರವಲಯ ಪ್ರದೇಶದಲ್ಲಿನ ಟ್ಯಾಂಕರ್ ಮಾಫಿಯಾ ಹಣ ಲೂಟಿಗೆ ಬಳಸಿಕೊಳ್ಳಲು ಆರಂಭಿಸಿವೆ. 

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ :

“ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ. ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಲಿದೆ. ಈಗಾಗಲೇ ಬಿಡಬ್ಲ್ಯುಎಸ್ ಎಸ್ ಬಿ ಹಾಗೂ ಖಾಸಗಿ ಕೊಳವೆಬಾವಿಗಳಲ್ಲಿ 200 ಎಂಎಲ್ ಡಿ ನೀರು ಕಡಿಮೆಯಾಗಿದೆ. ಈಗ ಲಭ್ಯವಿರುವ 400 ಎಂಎಲ್ ಡಿಯಲ್ಲಿ ಮುಂದೆ 100 ದಶಲಕ್ಷ ಲೀ. ನೀರು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನು ನಿಭಾಯಿಸಲು ನಗರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಿ, ಕೈಗಾರಿಕೆಗಳಿಗೆ ಪುನರ್ಬಳಕೆ ನೀರನ್ನು ಮಾತ್ರ ನೀಡಲು ನಿರ್ಧರಿಸಿದ್ದೇವೆ” ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

“ಜನರು ಆದಷ್ಟು ನೀರನ್ನು ಅನಗತ್ಯವಾಗಿ ಪೋಲು ಮಾಡದೆ ಮಿತವ್ಯಯಕಾರಿಯಾಗಿ ಬಳಸಬೇಕು. ನಗರದಲ್ಲಿ ನೀರಿನ ಸಮಸ್ಯೆ ಎದುರಾಗುವ 200 ಕ್ಲಸ್ಟರ್ ಗಳನ್ನು ಗುರ್ತಿಸಿದ್ದೇವೆ. ಇಲ್ಲೆಲ್ಲಾ ಬೇಸಿಗೆಯಲ್ಲಿ ಖಾಸಗಿಯವರಿಂದ ಖಾಲಿ ಟ್ಯಾಂಕರ್ ಗಳನ್ನು ಬಾಡಿಗೆಗೆ ಪಡೆದು ಜಲಮಂಡಳಿಯಿಂದ ಅಲ್ಲಿನ ಜನರಿಗೆ ಉಚಿತವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.

ಟ್ಯಾಂಕರ್ ನೀರಿಗೆ ಯಾವ್ಯಾವ ಕಡೆ ಎಷ್ಟು ದರ? :

ಕೆ.ಆರ್.ಪುರಂ ಸುತ್ತಮುತ್ತ ಒಂದು ಟ್ಯಾಂಕರ್ ನೀರಿಗೆ ಪ್ರಸ್ತುತ 900 ರೂ. ಇದೆ. ಅದು ಬೇಸಿಗೆಯಲ್ಲಿ 1000 ದಿಂದ 1,300 ರೂ. ತನಕ ಹೆಚ್ಚಾಗಬಹುದು. ಯಲಹಂಕ ಜಾಲ ಹೋಬಳಿಯಲ್ಲಿ ಈಗ 400-500 ರೂ. ಇದ್ದು ಬೇಸಿಗೆಯಲ್ಲಿ 800-900 ರೂ. ಏರಿಕೆಯಾಗಬಹುದು. ವೈಟ್ ಫೀಲ್ಡ್ ಸುತ್ತಮುತ್ತ ಸದ್ಯ 700-800 ರೂ. ಇದ್ದು ಬೇಸಿಗೆಯಲ್ಲಿ 1,200 ರೂ. ನಿಂದ 1,600 ರೂ. ತನಕ ಹೆಚ್ಚು ಮಾಡುತ್ತಾರೆ. ಬಿಟಿಎಮನ ಲೇಔಟ್ ಪ್ರದೇಶದಲ್ಲಿ ಒಂದು ಟ್ಯಾಂಕರ್ ನೀರು 600 ರೂ. ಇದ್ದು ಬೇಸಿಗೆಯಲ್ಲಿ 1,000 ರೂನಿಂದ 1,200ರೂ. ತನಕ ಏರಿಕೆಯಾಗಲಿದೆ. ವಾಟರ್ ಟ್ಯಾಂಕರ್ ನಲ್ಲಿ ನೀರು ಪೂರೈಸುವ ಖಾಸಗಿಯವರು ಯಾವುದೇ ಲಂಗು ಲಗಾಮಿಲ್ಲದೆ ದರ ಹೆಚ್ಚು ಮಾಡುತ್ತಾರೆ. 

ನಗರದ ಐದು ತಾಲೂಕುಗಳ ಪೈಕಿ ನಾಲ್ಕರಲ್ಲಿ ಅಂತರ್ಜಲ ಇಳಿಕೆ :

ಬೆಂಗಳೂರು ನಗರ ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ನಾಲ್ಕು ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟವು ಕಳೆದ ವರ್ಷಕ್ಕೆ ಹೋಲಿಸಿದರೆ ಗಮನಾರ್ಹ ಕುಸಿತವನ್ನು ದಾಖಲಿಸಿದೆ.  ಬೆಂಗಳೂರಿನ ಅಂತರ್ಜಲ ನಿರ್ದೇಶನಾಲಯದ ಇತ್ತೀಚಿನ ಅಂತರ್ಜಲ ಮಟ್ಟದ ಏರಿಳಿತ ವರದಿಯ ಪ್ರಕಾರ, ಬೆಂಗಳೂರು ದಕ್ಷಿಣ, ಆನೇಕಲ್, ಬೆಂಗಳೂರು ಉತ್ತರ ಮತ್ತು ಯಲಹಂಕ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟವು ನೆಲಮಟ್ಟದಿಂದ 4 ಮೀಟರ್‌ಗಿಂತ ಹೆಚ್ಚು ಕುಸಿದಿದೆ. ನಾಲ್ಕು ತಾಲ್ಲೂಕುಗಳ ಪೈಕಿ (ಆನೇಕಲ್) ಒಂದರಲ್ಲಿ ಮಾತ್ರ ಈ ಪ್ರಮಾಣದ ನೀರಿನ ಮಟ್ಟದಲ್ಲಿ ಕುಸಿತ ದಾಖಲಾಗಿದೆ. 

ಆದರೆ, ನಾಲ್ಕು ಗ್ರಾಮಾಂತರ ತಾಲ್ಲೂಕುಗಳು ಉತ್ತಮವಾಗಿವೆ.  ಹೊಸಕೋಟೆಯಲ್ಲಿ ಅಂತರ್ಜಲ ಮಟ್ಟವು ನೆಲಮಟ್ಟದಿಂದ 4 ಮೀಟರ್‌ಗಳಷ್ಟು ಕೆಳಕ್ಕೆ ಬಂದಿದ್ದರೆ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯಲ್ಲಿ ಸುಮಾರು 2 ಮೀಟರ್‌ಗಳಷ್ಟು ನೀರಿನ ಮಟ್ಟ ಮೇಲ್ಮಟ್ಟಕ್ಕೆ ಬಂದು ಪರಿಸ್ಥಿತಿ ಸುಧಾರಿಸಿದೆ. ವರದಿಯ ಪ್ರಕಾರ, ಬಹುತೇಕ ತಾಲೂಕುಗಳಲ್ಲಿ ಅಂತರ್ಜಲವು ಈಗ ನೆಲಮಟ್ಟದಿಂದ 20-30 ಮೀಟರ್ ಕೆಳಗೆ ಲಭ್ಯವಿದೆ.  ಬೆಂಗಳೂರು ಪೂರ್ವ ಮತ್ತು ಆನೇಕಲ್‌ನಲ್ಲಿ ಮಾತ್ರ ನೆಲಮಟ್ಟದಿಂದ 30-40 ಮೀಟರ್ ಕೆಳಗೆ ತಲುಪಿದೆ.

ಬೋರ್ ವೆಲ್ ಕೊರೆಯುತ್ತಿರುವ ಸಾಂದರ್ಭಿಕ ಚಿತ್ರ.

ಕ್ಷಿಪ್ರ ನಗರೀಕರಣದಿಂದಾಗಿ ನೀರು ಒಳನುಸುಳದ ಮೇಲ್ಮೈಗಳ ಹೆಚ್ಚಳದಿಂದಾಗಿ ನಗರ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿಯಲು ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ. 

ಸರೋವರಗಳು ಅಂತರ್ಜಲವನ್ನು ಮರುಪೂರಣಗೊಳಿಸುತ್ತಿರುವಾಗ, ಜಲಮೂಲಗಳ ಸುತ್ತ ಎತ್ತರದ ನಿರ್ಮಿತ ಪ್ರದೇಶದಿಂದಾಗಿ ಈ ಅಂಶವು ಸಹ ರಾಜಿಯಾಗುತ್ತದೆ.

ಅತಿಯಾದ ಕಾಂಕ್ರಿಟೀಕರಣ ಅಂತರ್ಜಲ ಕುಸಿತಕ್ಕೆ ಕಾರಣ :

“ನಾವು ನಗರ ವ್ಯವಸ್ಥೆಗಳಲ್ಲಿ ಹೆಚ್ಚು ಹೆಚ್ಚು ಜಾಗಗಳನ್ನು ಕಾಂಕ್ರೀಟೀಕರಣ ಮಾಡುತ್ತಿದ್ದೇವೆ ಮತ್ತು ನೆಲದಡಿಯಿಂದ ನೀರನ್ನು ಅತಿಯಾಗಿ ಹೊರತೆಗೆಯುತ್ತೇವೆ. ಉದಾಹರಣೆಗೆ ಬೆಂಗಳೂರು ಉತ್ತರ ತಾಲೂಕು ಅಂತರ್ಜಲವನ್ನು ಬಳಸಿಕೊಂಡು ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿದೆ. ಇಂತಹ ಮಾನವ ಚಟುವಟಿಕೆಗಳು ಈ ಪ್ರದೇಶದಲ್ಲಿ ಅಂತರ್ಜಲವನ್ನು ಕುಸಿಯುವಂತೆ ಮಾಡುತ್ತದೆ.  ನಾವು ಅಂತರ್ಜಲ ನೀರನ್ನು ಹೆಚ್ಚು ಹಿಂತೆಗೆದುಕೊಳ್ಳುವುದರಿಂದ ಮತ್ತು ಕಡಿಮೆ ರೀಚಾರ್ಜ್ ಮಾಡುತ್ತಿರುವುದರಿಂದ, ಸಮತೋಲನವು ಕ್ರಮೇಣ ಕುಸಿಯುತ್ತದೆ, ”ಎಂದು ನಗರ ಮೂಲದ ಪರಿಸರಶಾಸ್ತ್ರಜ್ಞರೊಬ್ಬರು ಹೇಳಿದ್ದಾರೆ.

ಅಕ್ರಮ ಬೋರ್ ವೆಲ್ ಮತ್ತು ಅತಿಯಾದ ಬೋರ್ ವೆಲ್ ನೀರಿನ ಬಳಕೆ, ಸಮಸ್ಯೆಗೆ ಕಾರಣ :

ಬೋರ್‌ವೆಲ್‌ಗಳ ನಿರಂತರ ಅಗೆಯುವಿಕೆ, ಅಂತರ್ಜಲ ನೀರಿನ ಮಟ್ಟ ಅತಿಯಾದ ಬಳಕೆಗೆ ಕಾರಣವಾಗುತ್ತದೆ. ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ತಜ್ಞರು ಕಳೆದ ಕೆಲವು ವರ್ಷಗಳಿಂದ ವೈಟ್‌ಫೀಲ್ಡ್ ಪ್ರದೇಶದಾದ್ಯಂತ ಅಕ್ರಮ ಬೋರ್‌ವೆಲ್ ಕೊರೆಯುವಿಕೆಯನ್ನು ಒತ್ತಿಹೇಳಿದ್ದಾರೆ.

“ಬೆಂಗಳೂರಿನಲ್ಲಿ ಅಂತರ್ಜಲ ಅತಿಯಾದ ಶೋಷಣೆಯ ವಲಯವಾಗಿರುವುದರಿಂದ ವಾಣಿಜ್ಯ ಬೋರ್‌ವೆಲ್‌ಗಳಿಗೆ ಯಾವುದೇ ಅನುಮತಿ ನೀಡಲಾಗಿಲ್ಲ ಮತ್ತು ದೇಶೀಯ ಬೋರ್‌ವೆಲ್‌ಗಳನ್ನು ಪಡೆಯುವುದು ಕಷ್ಟ.  ಆದರೆ ಬೋರ್‌ವೆಲ್‌ ಕೊರೆಯುವ ಕಾರ್ಯ ವರ್ಷಗಟ್ಟಲೆ ಎಡೆಬಿಡದೆ ನಡೆಯುತ್ತಿದೆ. ಅಕ್ರಮ ಪಿಜಿ ಕಟ್ಟಡಗಳಿಂದಾಗಿ ಕೊಳವೆಬಾವಿ ಕೊರೆಯುವಿಕೆ ಹೆಚ್ಚಾಗಿದೆ. ಈ ಸೈಟ್ ಮಾಲೀಕರ ವಿಶಿಷ್ಟ ವಿಧಾನವೆಂದರೆ ಅನುಮತಿಯಿಲ್ಲದೆ ಅನೇಕ ಬೋರ್‌ವೆಲ್‌ಗಳನ್ನು ಕೊರೆಯುವುದು ಮತ್ತು ನಂತರ ನೀರನ್ನು ನಿರ್ಮಾಣಕ್ಕೆ ಬಳಸುತ್ತಾರೆ” ಎಂದು ವೈಟ್‌ಫೀಲ್ಡ್‌ ನಿವಾಸಿಯೊಬ್ಬರು ಹೇಳಿದ್ದಾರೆ.

“ಆನಂತರ, ಅವರು ನೂರಾರು ನಿವಾಸಿಗಳ ಅಗತ್ಯಗಳನ್ನು ಪೂರೈಸಲು ಬೋರ್‌ವೆಲ್‌ಗಳನ್ನು ಬಳಸುತ್ತಾರೆ.  ಮೇಲಿನ ನೀರಿನ ಕಳ್ಳತನ ಮತ್ತು ವಾಣಿಜ್ಯ ಶೋಷಣೆಯ ಪರಿಣಾಮವಾಗಿ, ಹೆಚ್ಚಿನ ಸಾರ್ವಜನಿಕ ಬೋರ್‌ವೆಲ್‌ಗಳು ಮತ್ತು ಮನೆಯ ಬೋರ್‌ವೆಲ್‌ಗಳು ಈಗ ಒಣಗಿವೆ ಮತ್ತು ಅನೇಕ ಪ್ರದೇಶಗಳು ಸಾರ್ವಜನಿಕ ನೀರು ಪೂರೈಕೆಯಿಲ್ಲದೆ ಉಳಿದಿವೆ ” ಎಂದು ವಾಸ್ತವ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಇದಲ್ಲದೆ, ತಜ್ಞರು, ನೀರಿನ ಟ್ಯಾಂಕರ್ ಮಾಫಿಯಾದಿಂದಾಗಿ ಅಂತರ್ಜಲ ಅತಿಯಾಗಿ ಬಳಕೆಯಾಗುತ್ತಿದೆ. ನೀರನ್ನು ಅತಿಯಾಗಿ ಭೂಮಿಯಿಂದ ಹೊರತೆಗೆಯುತ್ತಿರುವುದರಿಂದ ಅಂತರ್ಜಲ ಒಣಗುತ್ತಿದೆ. ಎಷ್ಟರ ಮಟ್ಟಿಗೆಂದರೆ ವಾರ್ಡ್ ಸಮಿತಿ ಸಭೆಗಳಲ್ಲಿ ಬತ್ತಿದ ಸಾರ್ವಜನಿಕ ಬೋರ್‌ವೆಲ್‌ಗಳ ಬಗ್ಗೆಯೇ ಅತಿಯಾಗಿ ಚರ್ಚೆಯಾಗುತ್ತಿದೆ. ನಿವಾಸಿಗಳು ವಾರ್ಡ್ ಸಮಿತಿ ಗುಂಪಿನಲ್ಲಿ ಬೋರ್‌ವೆಲ್ ಕೊರೆಯುವಿಕೆಯನ್ನು ವರದಿ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಅವುಗಳನ್ನು ನಿಲ್ಲಿಸಲು ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಕೆಜಿಡಬ್ಲ್ಯೂಎ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದ್ದಾರೆ, ಆದರೆ ಕೆಜಿಡಬ್ಲ್ಯೂಎ, ನಿರ್ದಿಷ್ಟವಾಗಿ ಕಾರ್ಯನಿರ್ವಹಿಸಲು ಬಹಳ ನಿಧಾನವಾಗಿದೆ, ”ಎಂದು ವೈಟ್ ಫೀಲ್ಡ್ ನ ಸ್ಥಳೀಯ ನಿವಾಸಿ ಮುರುಳಿ ಹೇಳಿದ್ದಾರೆ.

ಮಳೆನೀರು ಕೊಯ್ಲು + ಕೆರೆ ಸರಪಳಿ ಸಂಪರ್ಕ ಕಲ್ಪಿಸಿದರೆ ಸಮಸ್ಯೆ ಬಗೆಹರಿಯುತ್ತೆ :

“ನಗರದಲ್ಲಿ ಮಳೆ ನೀರು ಕೊಯ್ಲು ಮಾಡಿದರೆ ನೀರು ಸಮಸ್ಯೆ ಎದುರಾಗಲ್ಲ. ಖಾಸಗಿ ಕಟ್ಡಡಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುತ್ತಾರೆ. ನಗರದಲ್ಲಿ ಒಂದೂವರೆ ಲಕ್ಷ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಮಾತ್ರವಿದೆ. ಯಲಹಂಕದಲ್ಲಿನ ರೈಲು ಗಾಲಿ ಕಾರ್ಖಾನೆ, ಬಿಐಎಎಲ್ ಏರ್ ಪೋರ್ಟ್ ಕಟ್ಟಡಗಳಲ್ಲಿ ಈ ಪದ್ಧತಿ ಅಳವಡಿಸಿಕೊಂಡ ಕಾರಣಕ್ಕೆ ಅಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ. ನಗರದಲ್ಲಿನ ಕೆರೆಗಳ ಸರಪಳಿಗಳಿಗೆ (ಒಂದು ಸರಪಳಿಯಲ್ಲಿ 30 ಕೆರೆಗಳಿರುತ್ತವೆ) ಪುನಃ ಸಂಪೂರ್ಣವಾಗಿ ಸಂಪರ್ಕ ಕಲ್ಪಿಸಿದರೆ ಕೆರೆಗಳಲ್ಲಿನ ಅಂತರ್ಜಲ ಮಟ್ಟ ಏರಿಕೆಯಾಗುತ್ತೆ.  ಕೆರೆಗಳ ಪುನರುತ್ಥಾನ ಹಾಗೂ ಮಳೆ ನೀರು ಕೊಯ್ಲು ಸರಿಯಾಗಿ ಅನುಷ್ಠಾನ ಮಾಡಿದರೆ ಜಲಮಂಡಳಿ ಈಗ ಪೂರೈಸುತ್ತಿರುವ ಕಾವೇರಿ ನೀರಿನಷ್ಟೆ ಪ್ರಮಾಣ ನಗರದಲ್ಲಿ ಈ ಎರಡು ಕೆಲಸಗಳಿಂದ ಲಭ್ಯವಾಗುತ್ತೆ. ನೀರಿನ ಮಿತವ್ಯಯ, ಮಳೆ ನೀರು ಸಂಗ್ರಹಕ್ಕೆ ಒತ್ತು ಕೊಡಬೇಕು. ಬಸವನಗುಡಿಯ ಬ್ಯೂಗಲ್ ರಾಕ್ ಆಶ್ರಮ ಸುತ್ತಮುತ್ತ ನೆಲಮಟ್ಟದಿಂದ 10-15 ಅಡಿಗೆಲ್ಲಾ ನೀರು ಸಿಗುತ್ತೆ.”

– ಮುಕುಂದ್, ಅಧ್ಯಕ್ಷರು, ಬೆಂಗಳೂರು ಪ್ರಜಾವೇದಿಕೆ

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

Gyanvapi Mosque | ಜ್ಞಾನವಾಪಿ ಮಸೀದಿ ನೆಲ ಮಾಳಿಗೆಯಲ್ಲಿ ಪೂಜೆಗೆ ನಿರ್ಬಂಧವಿಲ್ಲ : ಹೈಕೋರ್ಟ್ ; ಮುಚ್ಚಿದ ಇತರೆ ನೆಲಮಾಳಿಗೆಯಲ್ಲಿ ಎಎಸ್ ಐನಿಂದ ಸಮೀಕ್ಷೆಗಾಗಿ ವಾರಣಾಸಿ ನ್ಯಾಯಾಲಯಕ್ಕೆ ಅರ್ಜಿ – ಫೆ.15ಕ್ಕೆ ವಿಚಾರಣೆ

Next Post

Gruha Jyothi News | ಗೃಹಜ್ಯೋತಿ ಯೋಜನೆ ಶುಭಸುದ್ದಿ : ಬಾಡಿಗೆ ಮನೆ ಬದಲಾಯಿಸಿದ್ರಾ? ಸೇವಾಸಿಂಧು ಡಿ-ಲಿಂಕ್ ನಿಂದ ಯೋಜನೆ ಲಾಭ ಪಡೆಯಬಹುದು

Next Post

Gruha Jyothi News | ಗೃಹಜ್ಯೋತಿ ಯೋಜನೆ ಶುಭಸುದ್ದಿ : ಬಾಡಿಗೆ ಮನೆ ಬದಲಾಯಿಸಿದ್ರಾ? ಸೇವಾಸಿಂಧು ಡಿ-ಲಿಂಕ್ ನಿಂದ ಯೋಜನೆ ಲಾಭ ಪಡೆಯಬಹುದು

Hookah Ban In Karnataka | ರಾಜ್ಯಾದ್ಯಂತ ಹುಕ್ಕಾ ನಿಷೇಧಿಸಿ ಆರೋಗ್ಯ ಇಲಾಖೆ ಮಹತ್ವದ ಆದೇಶ - ಸಚಿವ ದಿನೇಶ್ ಗುಂಡೂರಾವ್ ದಿಟ್ಟ ಹೆಜ್ಜೆ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group