Wednesday, September 16, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

  • Bengaluru Focus
    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

#Magadi Sri RanganathaSwamy Temple | ಮಾಗಡಿಯಲ್ಲಿದೆ “ಉದ್ಭವ ಸಾಲಿಗ್ರಾಮ” ರೂಪದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ : ತಿರುಪತಿಯಷ್ಟೇ ಪುಣ್ಯಫಲ – ಇಷ್ಟಾರ್ಥ ಸಿದ್ಧಿಯಾಗುತ್ತೆ ಇಲ್ಲಿ

ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಿರುವ ಮಾಂಡವ್ಯ ಕ್ಷೇತ್ರದಲ್ಲಿ ನೆಲನಿಂತಿದ್ದಾನೆ ಶ್ರೀ ರಂಗನಾಥ ಸ್ವಾಮಿ | ಮಾಂಡವ್ಯ ಋಷಿಗಳನ್ನು ಅನುಗ್ರಹಿಸಿ, ಆಶೀರ್ವದಿಸಿದ್ದರಿಂದ ಶ್ರೀ ಪಶ್ಚಿಮ ವೆಂಕಟಾಚಲಪತಿ ಸ್ವಾಮಿಯು ಮಾಂಡವ್ಯನಾಥನೆಂದು ನಂತರ ಶ್ರೀ ರಂಗನಾಥಸ್ವಾಮಿ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.

by Bengaluru Wire Desk
January 29, 2024
in BW Special, Public interest
Reading Time: 2 mins read
0
ಮಾಗಡಿ ತಾಲೂಕಿನ ತಿರುಮಲೆಯ ಮಾಂಡವ್ಯ ಕ್ಷೇತ್ರದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವರ ವಿಗ್ರಹ.

ಮಾಗಡಿ ತಾಲೂಕಿನ ತಿರುಮಲೆಯ ಮಾಂಡವ್ಯ ಕ್ಷೇತ್ರದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವರ ವಿಗ್ರಹ.

ಇಂದಿನ ತಿರುಮಲೆ, ಮಾಗಡಿ ಕ್ಷೇತ್ರವು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಸ್ವರ್ಣಾಚಲ-ಸ್ವರ್ಣಾದ್ರಿ ಪರ್ವತ- ಮಾಂಡವ್ಯಕುಟಿ-ಮಾಕುಟ-ಮಾಗುಡಿ ಎಂಬುದಾಗಿ ಕರೆಯಲ್ಪಟ್ಟ ಪುಣ್ಯ ಪವಿತ್ರ ಕ್ಷೇತ್ರ. ಇಲ್ಲಿನ ಶ್ರೀ ಕ್ಷೇತ್ರವು ಅಷ್ಟತೀರ್ಥಗಳಿಂದಲೂ, ಅಷ್ಟ ಪರ್ವತಗಳಿಂದಲೂ, ಪವಿತ್ರ ಕಣ್ವಾನದಿ ಹಾಗೂ ಸುಂದರಗಿರಿ ಕಾನನಗಳಿಂದ ಕೂಡಿದ ದಿವ್ಯ ಕ್ಷೇತ್ರ, ಮಾಂಡವ್ಯ, ಕಣ್ವ, ವಶಿಷ್ಠ, ಪುರಂಜಯ, ಶಾಪಾತಪ, ಪ್ರಹ್ಲಾದ-ಮುಂತಾದ ತಪಸ್ವಿಗಳ ತಪೋಭೂಮಿ.

ಮಾಂಡವ್ಯ ಋಷಿಗಳು ಶ್ರೀ ಶ್ರೀನಿವಾಸ ದೇವರ ದರ್ಶನಕ್ಕಾಗಿ ತಿರುಪತಿ ಕ್ಷೇತ್ರಕ್ಕೆ ಯಾತ್ರೆ ಮಾಡಲು ಅಪೇಕ್ಷೆ ಪಟ್ಟು ಹೊರಟಿದ್ದರು,  ಆದರೆ ಶ್ರೀ ದೇವರ ದರ್ಶನವಾಗದೇ ಮನನೊಂದಾಗ ಶ್ರೀ ಶ್ರೀನಿವಾಸ ದೇವರ ಅಶರೀರವಾಣಿಯ ಆಜ್ಞೆಯಂತೆ ಮಾಂಡವ್ಯ ಋಷಿಗಳು ಈಗಿನ ಮಾಗಡಿಯಲ್ಲಿನ ತಿರುಮಲೆಯ ಸ್ವರ್ಣಾದ್ರಿ ಕ್ಷೇತ್ರದಲ್ಲಿ ಕುಟೀರವನ್ನು ಕಟ್ಟಿಕೊಂಡು ತಪಸ್ಸು ಮಾಡಿದರು. ಆಗ ಒಂದು ದಿನ ಸ್ವಪ್ನದಲ್ಲಿ ಶ್ರೀನಿವಾಸ ದೇವರು ಕಾಣಿಸಿಕೊಂಡು “ಉದ್ಭವ ಸಾಲಿಗ್ರಾಮ”ದ ರೂಪದಲ್ಲಿ ದರ್ಶನ ನೀಡಿ, ಸಾಲಿಗ್ರಾಮ ರೂಪಿಯಾದ ನನ್ನನ್ನು ನಿತ್ಯವೂ ಆರಾಧಿಸಿದರೆ ಇಷ್ಟಾರ್ಥ ಸಿದ್ದಿಯಾಗಿ ಮೋಕ್ಷವು ದೊರಕುವುದು ಎಂದು ಹೇಳಿದಂತಾಯಿತು. ಅದರಂತೆಯೇ “ಉದ್ಭವ ಸಾಲಿಗ್ರಾಮ”ವನ್ನು ಆರಾಧಿಸುತ್ತಿದ್ದರು. ನಂತರ ಪಶ್ಚಿಮಾಭಿಮುಖವಾಗಿ ಭಕ್ತಿಪ್ರದ ವಿಮಾನದಲ್ಲಿ ಶ್ರೀ ವೆಂಕಟಾಚಲಪತಿ ಸ್ವಾಮಿ ಹಾಗೂ ಪೂರ್ವದಿಕ್ಕಿಗೆ ಸರೋಜಲತಿಕಾ ರೂಪದಿಂದ ಲಕ್ಷ್ಮೀದೇವಿಯನ್ನು ಪಾಂಚರಾತ್ರಾಗಮ ರೀತಿಯಲ್ಲಿ ಪ್ರತಿಷ್ಠಾಪಿಸಿ ವಶಿಷ್ಠ ಮಹರ್ಷಿಗಳ ಜೊತೆಗೂಡಿ ಆರಾಧಿಸಿ ಮುಕ್ತಿಯನ್ನು ಪಡೆದರೆಂದು ಹೇಳಲಾಗಿದೆ.

ದೇವರ ಮೂರ್ತಿಯ ಮುಂಭಾಗ ದೀಪ ಉರಿಯುತ್ತಿರುವ ಸ್ಥಳದಲ್ಲಿ “ಉದ್ಭವ ಸಾಲಿಗ್ರಾಮ”ದ ರೂಪದಲ್ಲಿರುವ ಶ್ರೀ ರಂಗನಾಥಸ್ವಾಮಿಯನ್ನು ಕಾಣಬಹುದು.

ಮಾಂಡವ್ಯ ಋಷಿಗಳನ್ನು ಅನುಗ್ರಹಿಸಿ, ಆಶೀರ್ವದಿಸಿದ್ದರಿಂದ ಶ್ರೀ ಪಶ್ಚಿಮ ವೆಂಕಟಾಚಲಪತಿ ಸ್ವಾಮಿಯು ಮಾಂಡವ್ಯನಾಥನೆಂಬುದಾಗಿ ಹಾಗೂ ರೂಢಿಯಲ್ಲಿ ಶ್ರೀ ರಂಗನಾಥಸ್ವಾಮಿ ಎಂಬುದಾಗಿ ಈ ಕ್ಷೇತ್ರವು ಪ್ರಸಿದ್ದಿ ಪಡೆಯಿತು. ಇಲ್ಲಿರುವ “ಉದ್ಭವ ಸಾಲಿಗ್ರಾಮಕ್ಕೆ ಎಷ್ಟೇ ಕೊಡ ತೀರ್ಥವನ್ನು ಅಭಿಷೇಕ ಮಾಡಿದರೂ ಇಂದು ಹನಿಯೂ ಸಿಗದಂತೆ ಭೂಮಿಯಲ್ಲಿ ಇಂಗಿ ಹೋಗುತ್ತದೆ. ಅದು ಎಲ್ಲಿಗೆ ಹೋಗುತ್ತದೆ ಎಂದು ಇಲ್ಲಿಯವರೆಗೆ ತಿಳಿಯದೇ ಇರುವುದು ಇಂದು ಪವಾಡ. ಯಾರಿಗೆ ತಿರುಪತಿ ತಿಮ್ಮಪನ ದರ್ಶನ ಮಾಡಲು ಸಾಧ್ಯವಾಗುವುದಿಲ್ಲವೋ ಅಂತಹವರು ಈ ಕ್ಷೇತ್ರದಲ್ಲಿ ಉದ್ಭವ ಸಾಲಿಗ್ರಾಮ ಮತ್ತು ಶ್ರೀ ಪಶ್ಚಿಮ ವೆಂಕಟಾವಲಪತಿಯನ್ನು ದರ್ಶಿಸಿದರೆ ಅಲ್ಲಿಯಷ್ಟೇ ಪುಣ್ಯ, ಇಷ್ಟಾರ್ಥ ಫಲ ಸಿದ್ಧಿಸುವುದೆಂದು ಹೇಳಲಾಗಿದೆ. ಈ ಉದ್ಭವ ಸಾಲಿಗ್ರಾಮವನ್ನು ಶ್ರೀದೇವರ ಪಾದದ ಮುಂಭಾಗದ ಕೆಳಗೆ ಕಾಣಬಹುದಾಗಿದೆ.”

ಚೋಳರ ಆಳ್ವಿಕೆ ಸಂದರ್ಭ 11-12ನೇ ಶತಮಾನದಲ್ಲಿ ಸ್ಥಾಪನೆ :

ಚೋಳರ ಕಾಲದಲ್ಲಿ 11-12ನೇ ಶತಮಾನದಲ್ಲಿ ದ್ರಾವಿಡ ಶೈಲಿಯಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಮುಂದೆ ಹೊಯ್ಸಳರು, ವಿಜಯನಗರದ ಅರಸರು, ಕೆಂಪೇಗೌಡರ ವಂಶಸ್ಥರು, ಮೈಸೂರಿನ ಅರಸರ ಆಳ್ವಿಕೆಗಳಲ್ಲಿ ದಾನ-ದತ್ತಿ- ಕೊಡುಗೆಗಳಿಂದ ದೇವಸ್ಥಾನದ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರುತ್ತಿತ್ತೆಂದು ಶಾಸನಗಳಲ್ಲಿ ಹೇಳಲಾಗಿದೆ. ಶಾಸನಗಳಲ್ಲಿ ಶ್ರೀ ಸ್ವಾಮಿಯನ್ನು “ತಿರುವೇಂಗಡನಾಥ” ಎಂದೂ ಕರೆಯಲಾಗಿದೆ. ಶ್ರೀದೇಗುಲದ ಪ್ರಾಕಾರದಲ್ಲಿ ಗರುಡ, ಆಂಜನೇಯ, ಸರೋಜಲತಿಕಾ ಲಕ್ಷ್ಮೀದೇವಿ ಅಮ್ಮನವರು, ಸೀತಮ್ಮನವರು, ಶ್ರೀರಾಮ, ಶ್ರೀ ಗೋಪಾಲಕೃಷ್ಣ, ಶ್ರೀ ಬೆಳೆಯೋ ರಂಗ, ಶ್ರೀ ಸುದರ್ಶನ ಆಳ್ವಾರ್, ಶ್ರೀ ವೈಷ್ಣವ ಪರಂಪರೆಯ ಆಳ್ವಾರ್ ಆಚಾರ್ಯರ  ಪ್ರತ್ಯೇಕ ಗುಡಿಗಳಿವೆ.

ಯಾವ್ಯಾವ ರೀತಿಯ ಪೂಜೆ- ಪುನಸ್ಕಾರಗಳು ಇಲ್ಲಿ ನಡೆಯುತ್ತೆ? :

ಶ್ರೀ ರಂಗನಾಥನ ದೇವಸ್ಥಾನದಲ್ಲಿ ಪ್ರತಿನಿತ್ಯ ಅರ್ಚನೆ, ವಿಶೇಷ ಹೂವಿನ ಅಲಂಕಾರಗಳು, ಪ್ರಸಾದ ಸೇವೆಗಳು, ಅಭಿಷೇಕ, ಪ್ರತ್ಯೇಕ/ಸಾಮೂಹಿಕ ಕಲ್ಯಾಣೋತ್ಸವ, ತಿರುಬೀದಿ ಉತ್ಸವ, ದೊಡ್ಡ ಗರುಡೋತ್ಸವ,  ಹುಣ್ಣಿಮೆಯಲ್ಲಿ ಸುದರ್ಶನ ಹೋಮ, ಪವಿತ್ರೋತ್ಸವ, ಶ್ರಾವಣ ಮಾಸದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಧನುರ್ಮಾಸದಲ್ಲಿ ವಿಶೇಷ ಕೊಠಾರೋತ್ಸವ ಪೂಜೆ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ವೈಕುಂಠ ಏಕಾದಶಿ, ಲಕ್ಷದೀಪೋತ್ಸವ, ಶ್ರೀ ಸ್ವಾಮಿಯವರ ಜಾತ್ರೆ ಮತ್ತು ಬ್ರಹ್ಮರಥೋತ್ಸವವು ಪ್ರತೀ ವರ್ಷ ಚೈತ್ರಮಾಸದಲ್ಲಿ ಹುಣ್ಣಿಮೆಗೆ ಮುಂಚೆ ಉತ್ತರಾ ನಕ್ಷತ್ರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಸಮಯದಲ್ಲಿ ಒಂದು ವಾರದ ಕಾಲ ದನ-ರಾಸುಗಳ ದೊಡ್ಡಜಾತ್ರೆ ಮತ್ತು ಎಲ್ಲಾ ಸಮುದಾಯದ ಭಕ್ತರು ಅರವಂಟಿಕೆಗಳಲ್ಲಿ ಅನ್ನಸಂತರ್ಪಣೆ ಮಾಡುತ್ತಾರೆ.

ಶ್ರೀ ದೇವರ ಅಮೂಲ್ಯ ಆಭರಣಗಳು ತಾಲೂಕು ಖಜಾನೆಯಲ್ಲಿ ಭದ್ರ :

“ಮಾಗಡಿಯ ತಿರುಮಲೆ ಕ್ಷೇತ್ರದಲ್ಲಿನ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ರಾಜ ಮಹಾರಾಜರುಗಳು ನೀಡಿದ ಅಮೂಲ್ಯ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಿಶೇಷ ದಿನಗಳಂದು ಮಾಗಡಿ ತಾಲೂಕು ತಹಸೀಲ್ದಾರ್ ಅವರ ಅನುಮತಿಯ ಮೇರೆಗೆ ತಾಲೂಕು ಖಜಾನೆಯಿಂದ ಶ್ರೀ ಕ್ಷೇತ್ರಕ್ಕೆ ತಂದು ಶ್ರೀದೇವರಿಗೆ ಹಾಕಿ ಅಲಂಕಾರ ಮಾಡಲಾಗುತ್ತದೆ. ಉಳಿದ ಸಂದರ್ಭದಲ್ಲಿ ಬಿಗಿಭದ್ರತೆಯಲ್ಲಿ ತಾಲೂಕು ಖಜಾನೆಯಲ್ಲಿ ಈ ಆಭರಣಗಳನ್ನು ಇಡಲಾಗುತ್ತದೆ” ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಗೌಡ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಈ ದೇವಸ್ಥಾನದ ಹಿಂಭಾಗ ಸ್ಥಂಭಗಿರಿ ಎಂಬ ಬೆಟ್ಟದಲ್ಲಿ ಶ್ರೀ ಕಂಭದ ಯೋಗಾನರಸಿಂಹಸ್ವಾಮಿಯನ್ನು ಶ್ರೀಮನ್ನಾರಾಯಣನ ಪರಮಭಕ್ತನಾದ ಪ್ರಹ್ಲಾದನೇ ಪ್ರತಿಷ್ಠಾಪಿಸಿ, ಪೂಜಿಸಿದ್ದಾರೆಂದು ಬ್ರಹ್ಮಾಂಡ ಪುರಾಣದಲ್ಲಿ ಹೇಳಲಾಗಿದೆ. ಹೀಗೆ ಪುರಾಣ ಪ್ರಸಿದ್ಧ ಹಾಗೂ ಪ್ರಾಚೀನ ಶ್ರೀ ರಂಗನಾಥಸ್ವಾಮಿಯನ್ನು ದರ್ಶಿಸಿ, ಪೂಜಿಸಿದರೆ ಭಕ್ತರ ಮನೋಕಾಮನೆಗಳು ನೆರವೇರುವುದು ಎಂಬ ಪ್ರತೀತಿಯಿದೆ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Bigboss Season 10 Finale | ಬಿಗ್ ಬಾಸ್ ಸೀಸನ್ 10 ಫಲಿತಾಂಶ ಪ್ರಕಟ : ಕಾರ್ತಿಕ್ ಮಹೇಶ್ ವಿನ್ನರ್ ; ದ್ರೋಣ್ ಪ್ರತಾಪ್ ರನ್ನರ್

Next Post

BDA News | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎನ್.ಎ.ಹ್ಯಾರಿಸ್ ಅಧಿಕಾರ ಸ್ವೀಕಾರ

Next Post

BDA News | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎನ್.ಎ.ಹ್ಯಾರಿಸ್ ಅಧಿಕಾರ ಸ್ವೀಕಾರ

ಸಾಂದರ್ಭಿಕ ಚಿತ್ರ (ಕೃಪೆ : ಶಟರ್ ಸ್ಟಾಕ್)

PSI Exam Key Answers | ಪಿಎಸ್ಐ ಮರು ಪರೀಕ್ಷೆ ತಾತ್ಕಾಲಿಕ ಕೀ ಉತ್ತರ ಪ್ರಕಟ : ಕೀ ಉತ್ತರ ಹೀಗೆ ಪರಿಶೀಲಿಸಿ

Please login to join discussion

Like Us on Facebook

Follow Us on Twitter

Recent News

ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

September 15, 2026

ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

September 14, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

September 15, 2026

ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

September 14, 2026

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d