Saturday, August 1, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Lokayukta Raid | ವ್ಯಾಪಕ ಭ್ರಷ್ಟಾಚಾರ ದೂರು ಹಿನ್ನಲೆ : ಬೆಂಗಳೂರು ನಗರ- ಗ್ರಾಮಾಂತರ 9 ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಎರಡೂ ಜಿಲ್ಲೆಗಳ ತಾಲ್ಲೂಕು ಕಚೇರಿಗಳ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ 599 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. | ಸೋಮವಾರವೂ ಕಡತ ಪರಿಶೀಲನೆ, ವಿಚಾರಣೆ ಮುಂದುವರಿಕೆ | ಯಲಹಂಕ ತಹಸೀಲ್ದಾರ್ ಕಚೇರಿ ಸಿಬ್ಬಂದಿಯಿಂದ ಕ್ರಿಕೆಟ್ ಮೋಜು- ಮಸ್ತಿ

by Bengaluru Wire Desk
January 20, 2024
in Bengaluru Focus, News Wire, Public interest
Reading Time: 1 min read
0

ಬೆಂಗಳೂರು, ಜ.20 www.bengaluruwire.com : ಬೆಂಗಳೂರು ನಗರ ಜಿಲ್ಲೆಯ ಐದು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕು ಕಚೇರಿಗಳ ಮೇಲೆ ಶನಿವಾರ ಏಕಕಾಲಕ್ಕೆ ದಾಳಿ ಮಾಡಿರುವ ಲೋಕಾಯುಕ್ತದ ಪೊಲೀಸ್ ಮತ್ತು ನ್ಯಾಯಾಂಗ ವಿಭಾಗದ ಅಧಿಕಾರಿಗಳು ಶೋಧ ನಡೆಸುತ್ತಿದ್ದು ಸೋಮವಾರವೂ ಪರಿಶೀಲನೆ ಮುಂದುವರೆಯಲಿದೆ.

ಭ್ರಷ್ಟಾಚಾರ, ದುರಾಡಳಿತ, ಅವ್ಯವಹಾರಗಳು, ತಹಸೀಲ್ದಾರ್ ಗಳು ಮಧ್ಯವರ್ತಿಗಳ ಮೂಲಕ ಕೆಲಸ ಮಾಡುತ್ತಿದ್ದಾರೆ, ಜಾತಿ, ಆದಾಯ ಪ್ರಮಾಣಪತ್ರ ವಿತರಿಸುವಲ್ಲಿ ವಿಳಂಬ, ಆರ್ ಆರ್ ಟಿ (ಪಹಣಿ ತಿದ್ದುಪಡಿ) ಪ್ರಕರಣಗಳಲ್ಲಿ ವಿವಾದ ಬಗೆಹರಿಸುವಲ್ಲಿ ಎರಡು ಮೂರು ವರ್ಷವಾದರೂ ಪೂರ್ಣಗೊಳಿಸುತ್ತಿಲ್ಲ, ಖಾತೆ ಬದಲಾವಣೆ, ಪೌತಿ ಖಾತೆ ಬದಲಾವಣೆ ಹೀಗೆ ನಾನಾ ವಿಚಾರಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿದ್ದವು. 

ಈ ದೂರುಗಳನ್ನು ಆಧರಿಸಿ ಲೋಕಾಯುಕ್ತ ಕಚೇರಿಯಲ್ಲಿ 9 ತಂಡಗಳನ್ನು ರಚಿಸಿ, ಒಂಭತ್ತು ಜನ ಜಿಲ್ಲಾ ನ್ಯಾಯಾಧೀಶರು, 9 ಎಸ್ ಪಿ ಹಾಗೂ ಡಿವೈಎಸ್ ಪಿ, ಇನ್ಸ್ ಪೆಕ್ಟರ್‌ ಸೇರಿದಂತೆ ಅಂದಾಜು ನೂರು ಜನ ಸಿಬ್ಬಂದಿ ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಈ ಶೋಧ ಕಾರ್ಯ ಕೈಗೊಂಡಿದ್ದಾರೆ. ಎರಡೂ ಜಿಲ್ಲೆಗಳ ತಾಲ್ಲೂಕು ಕಚೇರಿಗಳ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ 599 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಈ ಕಚೇರಿಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ಲೋಕಾಯುಕ್ತದ ಪೊಲೀಸರು ಗೋಪ್ಯ ತಪಾಸಣೆ ನಡೆಸಿ‌ ಮಾಹಿತಿ ಸಂಗ್ರಹಿಸಿದ್ದರು.

ಉಪಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಪೊಲೀಸರ ವರದಿಯನ್ನು ಆಧರಿಸಿ ಈ ಕಚೇರಿಗಳ ಮೇಲೆ ದಿಢೀರ್ ದಾಳಿಮಾಡಿ ಶೋಧ ನಡೆಸುವಂತೆ‌ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಆದೇಶಿಸಿದ್ದರು.

ಲೋಕಾಯುಕ್ತ ಬಿ.ಎಸ್. ಪಾಟೀಲ ಅವರು ಕಂದಾಯ ಭವನದಲ್ಲಿರುವ ಬೆಂಗಳೂರು ಉತ್ತರ, ದಕ್ಷಿಣ ತಾಲ್ಲೂಕು ಹಾಗೂ ಯಲಹಂಕ ಕಚೇರಿಗಳಲ್ಲಿ ಕಾರ್ಯಾಚರಣೆ ಪರಿಶೀಲಿಸಿದರು.

“ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ತಹಸೀಲ್ದಾರ್ ಹತ್ತು ದಿನವಾದರೂ ಕೆಲಸಕ್ಕೆ ಹಾಜರಾಗಿರಲಿಲ್ಲ. ಕಚೇರಿಯಲ್ಲಿ ಸಿಬ್ಬಂದಿ ಕೇಳಿದರೆ, ಕೋರ್ಟ್ ಹೋಗಿದ್ದಾರೆ ಎಂದಿದ್ದರು. ಸಕಾಲ ಅರ್ಜಿ ಬಾಕಯಿತ್ತು, ಹಲವು ಕಡತಗಳು ಹತ್ತು ದಿನವಾದರೂ ಈ ಕಚೇರಿಯಲ್ಲಿ ಸಹಿಗೆ ಬಾಕಿಯಿತ್ತು” ಎಂದು ಲೋಕಾಯುಕ್ತ ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಕೆಲಸದ ಅವಧಿಯಲ್ಲಿ ಯಲಹಂಕ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಕ್ರಿಕೆಟ್- ಮೋಜು ಮಸ್ತಿ :

ಯಲಹಂಕ ತಹಸೀಲ್ದಾರ್ ಕಚೇರಿ ಕೆಲಸದ ಅವಧಿಯಲ್ಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟವಾಡಿ ಕಾಲಹರಣ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ.

“ಬೆಂಗಳೂರು ದಕ್ಷಿಣ ತಹಸೀಲ್ದಾರ್ ಕಚೇರಿಯಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಆರ್ ಆರ್ ಟಿ ಪ್ರಕರಣ ಬಾಕಿಯಿದ್ದು, ಯಲಹಂಕದಲ್ಲಿ ಅರ್ಧಕ್ಕರ್ಧ ಸಿಬ್ಬಂದಿಯಿರಲಿಲ್ಲ. ಗ್ರೇಡ್-2 ನಾಲ್ಕು ಜನ ಪೈಕಿ ಒಬ್ಬ ಅಧಿಕಾರಿಯೂ ಇರಲಿಲ್ಲ. ಗ್ರೇಡ್-2 ಒಬ್ಬರು ರಜೆ, ಮತ್ತೊಬ್ಬರು ಸರಿತಾ ಎಂಬ ಅಧಿಕಾರಿ ಮಧ್ಯಾಹ್ನದ ಮೇಲೆ ಕೆಲಸಕ್ಕೆ ಬಂದಿದ್ದರು.‌ ಇನ್ನೊಂದೆಡೆ ತಹಸೀಲ್ದಾರ್ ಕಚೇರಿಯವರು ಕೆಲಸದ ಅವಧಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಆಡುತ್ತಿದ್ದರು. ಪ್ರೋಟ್ ಕಾಲ್ ನೆಪಹೇಳಿ ಯಲಹಂಕ ತಹಸೀಲ್ದಾರ್ ಕಚೇರಿಗೆ ಬಂದಿರಲಿಲ್ಲ. ಇಲ್ಲಿ 2423 ಗಿಂತ ಹೆಚ್ಚು ಆರ್ ಆರ್ ಟಿ ಪ್ರಕರಣ ಬಾಕಿಯಿದೆ. ಈ ಬಗ್ಗೆ ಇಲಾಖಾವಾರು, ಯೋಜನೆವಾರು ಬಾಕಿಯಿರುವ ಪ್ರಕರಣಗಳ ಬಗ್ಗೆ ಪೂರ್ಣವಾಗಿ ಕೂಲಂಕುಷವಾಗಿ ಪರಿಶೀಲನೆ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಯಲಹಂಕ ತಹಸೀಲ್ದಾರ್ ಕಚೇರಿ ವಿರುದ್ದ ಲೋಕಾಯುಕ್ತರಿಂದ ಈಗಾಗಲೇ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಬೆಂಗಳೂರು ದಕ್ಷಿಣ ತಹಸೀಲ್ದಾರ್ ಕಚೇರಿಯಲ್ಲಿ ನೂರಕ್ಕೂ ಸಾರ್ವಜನಿಕರು ಕೆಲಸ ಆಗಿಲ್ಲ ಅಂತ ಲೋಕಾಯುಕ್ತಕ್ಕೆ ಸ್ಥಳದಲ್ಲೇ ದೂರು ನೀಡಿದರು. 

ಉಪಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಸೋಮವಾರವೂ ಲೋಕಾಯುಕ್ತ ಅಧಿಕಾರಿಗಳಿಂದ ಈ 9 ತಾಲೂಕು ಕಚೇರಿಗಳಲ್ಲಿ ಪರಿಶೀಲನೆ ನಡೆಯಲಿದೆ. ಲೋಕಾಯುಕ್ತರ ಕಚೇರಿ ಭೇಟಿಯ ವೇಳೆ ಲೋಕಾಯುಕ್ತ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಾಥ್.ಕೆ ಜೊತೆಗಿದ್ದರು.

WhatsApp Join our WhatsApp Channel
Previous Post

Karnataka Forest News | ರಾಜ್ಯದ ಕಾಡಂಚಿನ ಅಮೂಲ್ಯ ವೃಕ್ಷ ಸಂರಕ್ಷಣೆಗೆ ಕ್ರಮ : 3 ತಿಂಗಳಲ್ಲಿ ಮರಗಳಿಗೆ ಜಿಯೋಟ್ಯಾಗ್ ಮಾಡಲು ಗಡುವು

Next Post

#AyodhyaSriramandir | ಶ್ರೀರಾಮ ಲಲ್ಲಾನ ಪ್ರಾಣಪ್ರತಿಷ್ಠೆಗೆ ಭವ್ಯ ರಾಮಮಂದಿರದಲ್ಲಿ, ಹೂ-ದೀಪಾಲಂಕಾರಗಳಿಂದ ಸೃಷ್ಟಿಯಾಗಿದೆ ದೈವಿಕ ಲೋಕ!!!

Next Post

#AyodhyaSriramandir | ಶ್ರೀರಾಮ ಲಲ್ಲಾನ ಪ್ರಾಣಪ್ರತಿಷ್ಠೆಗೆ ಭವ್ಯ ರಾಮಮಂದಿರದಲ್ಲಿ, ಹೂ-ದೀಪಾಲಂಕಾರಗಳಿಂದ ಸೃಷ್ಟಿಯಾಗಿದೆ ದೈವಿಕ ಲೋಕ!!!

ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ತೆರಳಿದ ಮಾಜಿ ಪ್ರಧಾನಿ ದೇವೇಗೌಡ ಕುಟುಂಬ

Please login to join discussion

Like Us on Facebook

Follow Us on Twitter

Recent News

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026

BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

July 31, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026

BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

July 31, 2026

KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

July 31, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group