Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | ಬಿಬಿಎಂಪಿ ನೀರು ಶುದ್ಧೀಕರಣ ಘಟಕಗಳಿಗೆ ಮೂಗುದಾರ : ಆರ್ ಆರ್ ನಗರ ವಲಯದಲ್ಲಿ 153 ಆರ್ ಒ ಪ್ಲಾಂಟ್ ನಿರ್ವಹಣೆಗೆ ಪ್ರತ್ಯೇಕ ಕೊಟೇಶನ್ ಆಹ್ವಾನ!! – ಶುದ್ಧ ನೀರಿನ ದರ ಕಡಿಮೆ?

ಜುಲೈ 15ರಿಂದ ನಗರದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿನ ಆರ್ ಒ ಪ್ಲಾಂಟ್ ಗಳನ್ನು ನಡೆಸುತ್ತಿರುವ ಏಜನ್ಸಿ ಅಥವಾ ವ್ಯಕ್ತಿಗಳು ಏಕಾ ಏಕಿ 20 ಲೀ. ನೀರಿನ ದರವನ್ನು 5 ರೂ.ನಿಂದ 20 ರೂ. ಏರಿಕೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. | ಆರ್ ಆರ್ ನಗರ ವಲಯದಲ್ಲಿ ಕರೆದಿರುವ ಟೆಂಡರ್ ನಲ್ಲಿ ನೀರಿನ ಪ್ರತಿ ಲೀ. ದರ 25 ಪೈಸೆಗಷ್ಟೆ ಸೀಮಿತ

by Bengaluru Wire Desk
December 26, 2023
in Bengaluru Focus, BW Special, Public interest
Reading Time: 2 mins read
0
ಬಿಬಿಎಂಪಿ ಕುಡಿಯುವ ನೀರು ಶುದ್ಧೀಕರಣ ಘಟಕದ ಸಾಂದರ್ಭಿಕ ಚಿತ್ರ.

ಬಿಬಿಎಂಪಿ ಕುಡಿಯುವ ನೀರು ಶುದ್ಧೀಕರಣ ಘಟಕದ ಸಾಂದರ್ಭಿಕ ಚಿತ್ರ.

ಬೆಂಗಳೂರು, ಡಿ.26 www.bengaluruwire.com : ನಗರ ಸ್ಥಳೀಯ ಸಂಸ್ಥೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಒಟ್ಟಾರೆ ಸಾವಿರಾರು ಕುಡಿಯುವ ನೀರು ಶುದ್ಧೀಕರಣ ಘಟಕ (RO Plants) ಗಳನ್ನು ಪಾಲಿಕೆ ವಿವಿಧ ಕೇಂದ್ರ, ರಾಜ್ಯ ಸರ್ಕಾರದ ಅನುದಾನಗಳಿಂದ ಸ್ಥಾಪಿಸಿದೆ. ಆದರೂ ಈ ಘಟಕಗಳನ್ನು ಸ್ಥಳೀಯ ವಾರ್ಡ್ ನಲ್ಲಿನ ಜನಪ್ರತಿನಿಧಿಗಳ ಹಿಂಬಾಲಕರೋ, ಪರಿಚಯಸ್ಥರೋ ನಿರ್ವಹಣೆ ಮಾಡುತ್ತಿದ್ದರೂ, ಪಾಲಿಕೆಗೆ ಇದರ ಮೇಲೆ ಯಾವುದೇ ನಿಯಂತ್ರಣವನ್ನೇ ಹೊಂದಿಲ್ಲ. ಈ ಘಟಕಗಳಿಂದ ಪಾಲಿಕೆಗೆ ನಯಾಪೈಸೆಯೂ ಲಾಭವಿಲ್ಲ.

ಇದೇ ಕಾರಣಕ್ಕೆ ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಎಲ್ಲಾ ವಲಯಗಳ ಆಯುಕ್ತರಿಗೆ ಆಯಾ ವಲಯ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಪಾಲಿಕೆ ಅನುದಾನಗಳಿಂದ ಬೋರ್ ವೆಲ್ ಕೊರೆಯಿಸಿ, ನೀರು ಶುದ್ಧೀಕರಣ ಘಟಕ ಸ್ಥಾಪನೆಯಾಗಿರುವುದರ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ಇದಲ್ಲದೆ ಈ ಮಾಹಿತಿಯ ಆಧಾರದ ಮೇಲೆ ಟೆಂಡರ್ ಕರೆದು ಅದರಲ್ಲಿ ಯಶಸ್ವಿಯಾದ ಬಿಡ್ ದಾರರಿಗೆ ನೀರು ಶುದ್ಧೀಕರಣ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ನೀಡಲು ಆದೇಶಿಸಿದ್ದಾರೆ.

ಇಷ್ಟು ವರ್ಷಗಳ ಕಾಲ ಕೋಟ್ಯಾಂತರ ರೂಪಾಯಿ ಹಣ ಕರ್ಚು ಮಾಡಿದರೂ ಎಷ್ಟೋ ಕಡೆಗಳಲ್ಲಿ ಪಾಲಿಕೆ ಹಣ ಕರ್ಚಾಗುತ್ತಿದ್ದರೂ ಸೂಕ್ತ ರೀತಿಯಲ್ಲಿ ಘಟಕಗಳು ನಿರ್ವಹಣೆ ಆಗುತ್ತಿರಲಿಲ್ಲ. ಕೆಲವು ಕಡೆಗಳಲ್ಲಿ ನೀರಿನ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳಿದ್ದವು. ಇನ್ನು ಕೆಲವು ಕಡೆಗಳಲ್ಲಿ ಸರ್ಕಾರಿ ದಾಖಲೆ ಗಳಲ್ಲಿ ಮಾತ್ರ ಆರ್ ಪ್ಲಾಂಟ್ ಮಾಡಲಾಗಿತ್ತೇ ವಿನಃ ಭೌತಿಕವಾಗಿ ನೀರು ಶುದ್ಧೀಕರಣ ಘಟಕಗಳು ಅಸಲಿಗೇ ಸ್ಥಾಪನೆಯಾಗುತ್ತಲೇ ಇರಲಿಲ್ಲ. ಎಷ್ಟೋ ಘಟಕಗಳು ನಿರ್ವಹಣೆ ಕೊರತೆಯಿಂದ ಶಾಶ್ವತವಾಗಿ ಮುಚ್ಚಿ ಹೋಗಿವೆ. ಆದರೆ ಈ ಬಗ್ಗೆ ಬಿಬಿಎಂಪಿ ಬಳಿ ಅಧಿಕೃತ ದಾಖಲೆಗಳೇ ಇಲ್ಲ.

ಆರ್ ಒ ಘಟಕ ಅಕ್ರಮಗಳ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ :

ಹೀಗಾಗಿ ಈ ಬಗ್ಗೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಈ ಹಿಂದೆ ಬೆಂಗಳೂರಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರ ಮತ್ತು ಪಾಲಿಕೆ ಅನುದಾನದಿಂದ ನಿರ್ಮಾಣವಾಗಿರುವ ನೀರು ಶುದ್ಧೀಕರಣ ಘಟಕ ನಿರ್ಮಾಣ, ನಿರ್ವಹಣೆ ಹಾಗೂ ಗುಣಮಟ್ಟದಲ್ಲಿ ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ (Enforcement Directorate- ED) ಕ್ಕೆ ದೂರು ನೀಡಿದ್ದರು. ಈ ಕುರಿತಂತೆ ಬಿಬಿಎಂಪಿ ಮುಖ್ಯ ಪ್ರಧಾನ ಅಭಯಂತರರು ಈ ವರ್ಷದ ವಿಧಾನಸಭೆ ಚುನಾವಣೆಗೆ ಮುನ್ನ ಪಾಲಿಕೆಯ ವ್ಯಾಪ್ತಿಯಲ್ಲಿನ ಆರ್ ಒ ಘಟಕಗಳ ಮಾಹಿತಿಯನ್ನು ಹಾಗೂ ಕೆಲವು ಸಂಬಂಧಿಸಿದ ದಾಖಲೆಗಳನ್ನು ಜಾರಿ ನಿರ್ದೇಶನಾಲಯದ ತನಿಖೆಗಾಗಿ ನೀಡಿದ್ದರು, ಈ ಕುರಿತಂತೆ ಇನ್ನೂ ಕೂಡ ತನಿಖೆ ಮುಂದುವರಿದೆದೆ.

ಪಾಲಿಕೆಯ ವಲಯ ವ್ಯಾಪ್ತಿಯ ಸಂಬಂಧಿಸಿದ ಎಂಜಿನಿಯರ್ ಗಳು ಆಮೆಗತಿಯಲ್ಲಿ ನೀರಿನ ಘಟಕಗಳ ಮಾಹಿತಿ, ದಾಖಲೆಗಳನ್ನು ಹಲವು ತಿಂಗಳುಗಳಿಂದ ಇನ್ನು ಜಾರಿ ನಿರ್ದೇಶನಾಲಯಕ್ಕೆ ನೀಡುತ್ತಲೇ ಇದ್ದಾರೆ. ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ವಿವಿಧ ಅನುದಾನಗಳಿಂದ ನಿರ್ವಹಿಸಿದ ಆರ್ ಒ ಪ್ಲಾಂಟ್ ಗಳ ಕುರಿತಂತೆ ಪಾಲಿಕೆ ಮುಖ್ಯ ಅಭಿಯಂತರ ಪ್ರಹ್ಲಾದ್ ಅವರಿಗೆ ಈ ಬಗ್ಗೆ ಪೂರ್ಣ ಮಾಹಿತಿಯೇ ಇಲ್ಲದಿರುವುದು ನಿಜಕ್ಕೂ ದುರಂತ.

ಆರ್ ಒ ಪ್ಲಾಂಟ್ ಒಂದರ ಒಳ ಆವರಣದ ಸಾಂದರ್ಭಿಕ ಚಿತ್ರ.

ಆರ್ ಒ ಘಟಕ ಪಾಲಿಕೆ ನಿಯಂತ್ರಣಕ್ಕೆ ಪಡೆಯಲು ಆರ್ ಆರ್ ನಗರ ವಲಯ ಪ್ರಯತ್ನ :

ಇನ್ನೊಂದೆಡೆ 8 ವಲಯಗಳ ಪೈಕಿ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ, ಎಚ್ಎಂಟಿ, ಲಕ್ಷ್ಮಿದೇವಿನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿನಗರ, ದೊಡ್ಡಬಿದರಕಲ್ಲು, ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ ಹಾಗೂ ಹೆಮ್ಮಿಗೆಪುರ ವಾರ್ಡ್ ಗಳ ವ್ಯಾಪ್ತಿಯಲ್ಲಿರುವ 153 ನೀರು ಶುದ್ಧೀ ಕರಣ ಘಟಕಗಳ ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಆಯಾ ವಾರ್ಡ್ ನಿವಾಸಿಯಾದವರಿಗೆ ವಹಿಸಲು ದರಪಟ್ಟಿ (ಕೊಟೇಶನ್) ಕರೆಯಲಾಗಿದೆ. ಇಷ್ಟು ದಿನಗಳ ವರೆಗೆ ಸರ್ಕಾರದ ಹಣದಲ್ಲಿ ನಿರ್ಮಿಸಿರುವ ಆರ್ ಒ ಪ್ಲಾಂಟ್ ಗಳು ಕೆಟ್ಟು ಹೋದರು, ಅಲ್ಲಿ ಗುಣಮಟ್ಟದ ನೀರು ಬರದಿದ್ದರೂ ಅದನ್ನು ನಿರ್ವಹಿಸುತ್ತಿದ್ದವರು ತಲೆ ಕೆಡೆಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ಪಾಲಿಕೆ ಬಳಿ ಆ ನೀರು ಶುದ್ಧೀಕರಣ ಘಟಕ ನಡೆಸುತ್ತಿದ್ದವರನ್ನು ನಿಯಂತ್ರಿಸಲು ಸೂಕ್ತ ಮಾರ್ಗಸೂಚಿ, ನಿಯಮಗಳಿರಲಿಲ್ಲ.

ಆದರೆ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆರ್ ಓ ಪ್ಲಾಂಟ್ ಅನ್ನು ಪಾಲಿಕೆ ಟೆಂಡರ್ ಕರೆದು ಸೂಕ್ತ ಷರತ್ತು, ಮಾರ್ಗಸೂಚಿಗಳನ್ನು ವಿಧಿಸಿ ಅರ್ಹರಾದವರಿಗೆ ಗುತ್ತಿಗೆ ನೀಡುವ ಮೂಲಕ ಹಳಿತಪ್ಪಿದ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ರಾಜರಾಜೇಶ್ವರಿ ನಗರ ವಲಯದ ಮೊತ್ತ ಮೊದಲ ಹೆಜ್ಜೆಯಿಟ್ಟಿದೆ. ಆದರೆ ಉಳಿದ ವಲಯಗಳಲ್ಲಿ ಹಳೆ ವ್ಯವಸ್ಥೆಯಿನ್ನೂ ಮುಂದುವರೆದಿದೆ. ಆರ್ ಆರ್ ನಗರ ವಲಯದಲ್ಲಿ 153 ಆರ್ ಒ ಪ್ಲಾಂಟ್ ಗಳ ವಿಳಾಸವನ್ನು ಭೌಗೋಳಿಕ ಮಾಹಿತಿ ಆಧಾರಿತ ವ್ಯವಸ್ಥೆಯ ಮೂಲಕ ತೆಗೆದುಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಸಾಮಾನ್ಯ ಜನರು ತಮ್ಮ ಹತ್ತಿರದ ಆರ್ ಒ ಪ್ಲಾಂಟ್ ಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ಆ ಮಾಹಿತಿಯನ್ನು ಪಾಲಿಕೆಯು ತನ್ನ ವೆಬ್ ಸೈಟ್ ನಲ್ಲಿ ನೀಡಲಿದೆ. ಆ ನಿಟ್ಟಿನಲ್ಲಿ ಆರ್ ಆರ್ ನಗರ ವಲಯ ಆಯುಕ್ತರು ಕ್ರಮ ವಹಿಸಿದ್ದಾರೆ.

ಆರ್ ಒ ಪ್ರತಿ ಲೀ. ನೀರಿನ ದರ 5 ರೂ.ಗೆ ನಿಗದಿ :

ಬೆಂಗಳೂರಿನ ರಾಜಾಜಿನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ನೀರು ಶುದ್ಧೀಕರಣ ಘಟಕಗಳಿಂದ ಪಡೆಯುವ ನೀರಿನ ದರವನ್ನು ಜುಲೈ 15ರಿಂದ ಬೆಲೆ ಏರಿಕೆ ಮಾಡಲಾಗಿದ್ದು, 5 ರೂ. ನ ಎರಡು ನಾಣ್ಯಗಳನ್ನು ಬಳಸಿ 20 ಲೀಟರ್ ನೀರು ತುಂಬಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ 2 ರೂಪಾಯಿ ನಿಗದಿ ಮಾಡಲಾಗಿತ್ತು. ಅಂದರೆ 2 ರೂಪಾಯಿ ನಾಣ್ಯ ಹಾಕಿ 20 ಲೀಟರ್ ನೀರು ತುಂಬಿಸಿಕೊಳ್ಳಬೇಕಿತ್ತು. ನಂತರ 5 ರೂಪಾಯಿಗೆ ಏರಿಸಲಾಯಿತು. ಆದರೆ ಜುಲೈ 15ರಂದ ಏಕಾಏಕಿ 10ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಮಧ್ಯೆ ರಾಜರಾಜೇಶ್ವರಿ ನಗರ ವಲಯದಲ್ಲಿ 5 ವಾರ್ಡ್ ಗಳಲ್ಲಿನ 80 ಆರ್ ಒ ಪ್ಲಾಂಟ್ ಗೆ ಕರೆದಿರುವ ಟೆಂಡರ್ ನಲ್ಲಿ ಪಾಲಿಕೆಯಿಂದ ಶುದ್ಧ ನೀರಿನ ದರವನ್ನು ಪ್ರತಿ ಲೀಟರ್ ಗೆ 25 ಪೈಸೆಯನ್ನು ನಿಗದಿಮಾಡಲಾಗಿದ್ದು, 20 ಲೀಟರ್ ನೀರಿಗೆ 5 ರೂ. ದರವಿರಲಿದೆ.

ಟೆಂಡರ್ ದಾಖಲೆಯಲ್ಲೇನಿದೆ? :

ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಟೆಂಡರ್ ದಾಖಲೆಯಲ್ಲಿ, ಆರ್ ಒ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಆಯಾ ವಾರ್ಡ್ ಸ್ಥಳೀಯ ನಿವಾಸಿಯಾಗಿದ್ದು, ಆತ ಶಾಶ್ವತವಾಗಿ ಕರ್ನಾಟಕದಲ್ಲಿ ನೆಲಸಿರಬೇಕು, ನೀರು ಘಟಕದ ಬಗ್ಗೆ ಬಿಬಿಎಂಪಿಯಲ್ಲಿ ದೂರು ದಾಖಲಾದ 4 ಗಂಟೆಯ ಒಳಗೆ ಅದನ್ನು ನಿರ್ವಹಿಸದಿದ್ದರೆ, ಪ್ರತಿ ದೂರುಗಳಿಗೆ ಪ್ರತಿಸ್ಪಂದಿಸದ ಪ್ರಕರಣಗಳಿಗೆ ತಲಾ 500 ರೂ. ದಂಡ ವಿಧಿಸಲು ಟೆಂಡರ್ ಷರತ್ತುಗಳನ್ನು ತಿಳಿಸಲಾಗಿದೆ. ದಿನದ 24 ಗಂಟೆಯೂ ಮೂರು ಶಿಫ್ಟ್ ಗಳಲ್ಲಿ ಈ ಘಟಕಗಳು ರಿಪೇರಿ ಮಾಡುವ ಬಗ್ಗೆ ಕ್ರಮವಹಿಸಬೇಕು. ಪ್ರತಿ ತಿಂಗಳು ಆಯಾ ಘಟಕಗಳ ಯಶಸ್ವಿ ಬಿಡ್ ದಾರರು ನೀರಿನ ಗುಣಮಟ್ಟದ ಬಗ್ಗೆ ಪ್ರಯೋಗಾಲಯದಿಂದ ಪರೀಕ್ಷೆ ನಡೆಸಿ ಆರ್ ಆರ್ ನಗರ ವಲಯ ಸಂಬಂಧಿಸಿದ ಎಂಜಿನಿಯರ್ ಗಳಿಗೆ ಸಲ್ಲಿಸಬೇಕು. ಅಲ್ಲದೆ ಆರ್ ಪ್ಲಾಂಟ್ ಸೂಕ್ತ ರೀತಿ ಕಾರ್ಯನಿರ್ವಹಿಸಿ, ಗುಣಮಟ್ಟ ಹಾಗೂ ಸುರಕ್ಷಿತ ನೀರು ಸಾರ್ವಜನಿಕರಿಗೆ ವಿತರಿಸಲು ಅನುವಾಗವಂತೆ ವೈಜ್ಞಾನಿಕವಾಗಿ ನೀರು ಶುದ್ಧೀಕರಣ ಘಟಕವನ್ನು ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಮೂಲಾಗ್ರವಾಗಿ ಷರತ್ತುಗಳನ್ನು ವಿಧಿಸಲಾಗಿದೆ. ಡಿ.27ರಿಂದ ಬಿಡ್ ದಾಖಲೆಗಳನ್ನು ವಿತರಿಸುತ್ತಿದ್ದು,  ಜನವರಿ 4ರಂದು ಕೊಟೇಶನ್ ದಾಖಲೆ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಜ.5ರಂದು ಟೆಂಡರ್ ಬಿಡ್ ತೆರೆಯಲಾಗುತ್ತದೆ.

ಒಟ್ಟಿನಲ್ಲಿ ತಮಗೆ ಬೇಕಾದಂತೆ ಕಾನೂನು ರೂಪಿಸಿಕೊಂಡು ಶುದ್ಧ ಕುಡಿಯು ನೀರಿನ ವಿಷಯದಲ್ಲಿ ಬೇಕಾ ಬಿಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಖಾಸಗಿ ಏಜನ್ಸಿ ಮತ್ತು ವ್ಯಕ್ತಿಗಳಿಗೆ ಆರ್ ಒ ಪ್ಲಾಂಟ್ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿ ಆರ್ ಆರ್ ನಗರ ಶಿಸ್ತುಬದ್ಧ ನಿಯಮಗಳನ್ನು ರೂಪಿಸಿ, ಟೆಂಡರ್ ಕರೆದಿದೆ. ಆ ಮೂಲಕ ಇತರ ಬಿಬಿಎಂಪಿ ವಲಯಗಳಲ್ಲೂ ಇದೇ ಮಾದರಿಯು ಆದಷ್ಟು ಶೀಘ್ರವೇ ಅನುಷ್ಠಾನಗೊಂಡರೆ, ಶುದ್ಧ ಕುಡಿಯುವ ನೀರು ಕಡಿಮೆ ದರದಲ್ಲಿ ಬಡವರು, ಮಧ್ಯಮ ವರ್ಗದವರು, ಸಣ್ಣ ಹೋಟೆಲ್, ಉದ್ಯಮ ನಡೆಸುತ್ತಿರುವವರಿಗೆ ಅನುಕೂಲವಾಗಲಿದೆ.

ಆರ್ ಒ ಘಟಕಗಳ ಏಜನ್ಸಿ ನಿಯಂತ್ರಣಕ್ಕೆ ಕ್ರಮ :

“ಶುದ್ಧ ಕುಡಿಯುವ ನೀರು ಘಟಕವನ್ನು ಸರ್ಕಾರದ ಅನುದಾನಗಳಿಂದ ಸ್ಥಾಪಿಸುತ್ತಿದ್ದರೂ, ಅದರ ನಿರ್ವಹಣೆ ಮತ್ತು ಕಾರ್ಯಾಚರಣೆ ನಡೆಸುತ್ತಿದ್ದ ಖಾಸಗಿ ಏಜನ್ಸಿ ಅಥವಾ ವ್ಯಕ್ತಿಗಳ ಮೇಲೆ ಬಿಬಿಎಂಪಿ ಯಾವುದೇ ನಿಯಂತ್ರಣ ಹಾಗೂ ಉಸ್ತುವಾರಿ ವಹಿಸಲು ಆಗುತ್ತಿರಲಿಲ್ಲ. ಹೀಗಾಗಿ ಆರ್ ಆರ್ ನಗರ ವಲಯದಲ್ಲಿನ ವಿವಿಧ ವಾರ್ಡ್ ಗಳ 153 ಆರ್ ಒ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಅರ್ಹರಾದವರಿಗೆ ನೀಡಲು ಕೊಟೇಶನ್ ಕರೆಯಲಾಗಿದೆ. ಈ ಮೂಲಕ ನೀರು ಘಟಕಗಳ ನಿರ್ವಹಣೆ, ನೀರಿನ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅರ್ಹ ಗುತ್ತಿಗೆದಾರರಿಗೆ ಗುತ್ತಿಗೆ ಕಾರ್ಯ ನೀಡಿ ಪಾಲಿಕೆಯು ಕ್ರಮ ವಹಿಸಲಿದೆ. “

ಸುರಾಳ್ಕರ್ ವಿಕಾಸ್ ಕಿಶೋರ್, ವಲಯ ಆಯುಕ್ತರು, ಬಿಬಿಎಂಪಿ ಆರ್ ಆರ್ ನಗರ ವಲಯ

WhatsApp Join our WhatsApp Channel
Previous Post

Hanuma Jayanthi | ಹನುಮ ಜಯಂತಿ : ಪ್ರಾಣದೇವರು ಜಾಗೃತವಾಗಿರುವ ಹೊಳೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ!!!

Next Post

BW SPECIAL | ಐಎಎಸ್ – ಕೆಎಎಸ್ ಅಧಿಕಾರಿಗಳ ನಡುವಿನ ಶೀಥಲ ಸಮರ : 9 ತಿಂಗಳಲ್ಲಿ 5 ಬಾರಿ ಅಮಾನತು ಶಿಕ್ಷೆಗೆ ಗುರಿಯಾದ ತಹಸೀಲ್ದಾರ್ – ಸಿಎಂ ಗೆ ದೂರು

Next Post

BW SPECIAL | ಐಎಎಸ್ - ಕೆಎಎಸ್ ಅಧಿಕಾರಿಗಳ ನಡುವಿನ ಶೀಥಲ ಸಮರ : 9 ತಿಂಗಳಲ್ಲಿ 5 ಬಾರಿ ಅಮಾನತು ಶಿಕ್ಷೆಗೆ ಗುರಿಯಾದ ತಹಸೀಲ್ದಾರ್ - ಸಿಎಂ ಗೆ ದೂರು

BBMP Property Tax | ಮಂತ್ರಿಮಾಲ್ ನಿಂದ 51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ : ಮಾಲ್ ಗೆ ಬೀಗ ಹಾಕಿದ ಬಿಬಿಎಂಪಿ - ನಗರದಲ್ಲಿ 6 ಲಕ್ಷ ಆಸ್ತಿ‌ ಮಾಲೀಕರಿಂದ 450 ಕೋಟಿ ರೂ. ಬಾಕಿ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group