Monday, September 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

  • Bengaluru Focus

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Cyber Crime News | ನಿಮ್ಮ ದುಡಿಮೆಯ ಹಣ ಸೈಲೆಂಟಾಗಿ ಸೈಬರ್ ವಂಚಕರ ಪಾಲಾಗುತ್ತಿದೆ ಎಚ್ಚರ : OTP ಬರದಂತೆ ಹಣ ಕದಿಯುವ ಖತರ್ ನಾಕ್ ಸೈಬರ್ ವಂಚಕರು!!: ಈ ಸಮಸ್ಯೆಗೆ ಇಲ್ಲಿದೆ ಪರಿಹಾರ

ದೇಶದಲ್ಲಿ 2019 ರಲ್ಲಿ 44,735, ಅದೇ ರೀತಿ 2020ನೇ ಇಸವಿಯಲ್ಲಿ 50,035 ಮತ್ತು 2021 ರಲ್ಲಿ 52,974 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದೆ ಎನ್ನುತ್ತದೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ.

by Bengaluru Wire Desk
October 13, 2023
in News Wire, Public interest
Reading Time: 1 min read
0
Online Use

ಸೈಬರ್ ಕ್ರೈಮ್ ಕುರಿತ ಗ್ರಾಫಿಕ್ ಚಿತ್ರ (ಸಾಂದರ್ಭಿಕ ಚಿತ್ರ)

ಬೆಂಗಳೂರು, ಅ.13 www.bengaluruwire.com : ಸೈಬರ್ ಕ್ರೈಮ್ ನಲ್ಲಿ ಇತ್ತೀಚೆಗೆ ಬ್ಯಾಂಕ್ ಖಾತೆ ಹೊಂದಿದವರ ಗಮನಕ್ಕೆ ಬಾರದೆ ಎಷ್ಟೋ ಜನರು ಹಣ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಹಣಕಾಸು ವಹಿವಾಟು ನಡೆಸುವವರು ಸೈಬರ್ ಅಪರಾಧ ಮಾಡುವವರ ಜಾಲಕ್ಕೆ ಸುಲಭವಾಗಿ ಸಿಕ್ಕಿಬೀಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಆಧಾರ್ ಕಾರ್ಡ್ ನೋಂದಾಯಿಸುವಾಗ ನಾವು ನೀಡಿದ ಬಯೋಮೆಟ್ರಿಕ್ಸ್ (ಬರಳಚ್ಚು) ಕಾರಣ ಎನ್ನುತ್ತಿದ್ದಾರೆ ಸೈಬರ್ ಕ್ರೈಮ್ ಪೊಲೀಸರು.

ಆಧಾರ್ ಕಾರ್ಡ್ ದತ್ತಾಂಶವನ್ನು ಬಳಸಿಕೊಂಡು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (Aadhar Enable Payment System – AEPS) ಮೂಲಕ ಹಣ ಪಾವತಿ, ಹಣ ತೆಗೆಯುವುದು, ನಗದು ಬಾಕಿ ವಿಚಾರಣೆ, ಹಣದ ಸಣ್ಣ ವಹಿವಾಟು ವಿವರ, ನಗದು ವರ್ಗಾವಣೆ, ದೃಢೀಕರಣ, ಭೀಮ್ ಆಧಾರ್ ಪೇ, ಇ-ಕೆವೈಸಿ, ಮೊಬೈಲ್ ಸಿಮ್ ಖರೀದಿ ಹೀಗೆ ಹಲವು ಸೇವೆಗಳನ್ನು ಪಡೆಯಬಹುದು. ಸೈಬರ್ ವಂಚಕರು ಆಧಾರ್ ಕಾರ್ಡ್ ನಲ್ಲಿರುವ ವ್ಯಕ್ತಿಯ ವೈಯುಕ್ತಿಕ ವಿವರವಾದ ಫಿಂಗರ್ ಪ್ರಿಂಟ್ (ಬೆರಳಚ್ಚು) ದತ್ತಾಂಶವನ್ನೇ ಕದ್ದು (Hack) ಆ ಮೂಲಕ ಯಾವುದೇ ಮೊಬೈಲ್ ಒಂದು ಬಾರಿಯ ಪಾಸ್ ವರ್ಡ್ (OTP) ಸಹಾಯವಿಲ್ಲದೇ, ವ್ಯಕ್ತಿಯ ಬ್ಯಾಂಕ್ ಖಾತೆ ಅಥವಾ ಹಣಕಾಸು ಸಂಸ್ಥೆಗಳಲ್ಲಿಟ್ಟ, ವ್ಯಾಲೇಟ್ ನಲ್ಲಿರುವ ಹಣವನ್ನು ದೋಚುತ್ತಿದ್ದಾರೆ.

ಇದಕ್ಕೆ ಪರಿಹಾರವೇನು? :

ತಾವು ಕಷ್ಟಪಟ್ಟು ಕೂಡಿಟ್ಟ ಹಣವನ್ನು ಸೈಬರ್ ವಂಚಕರು ಹ್ಯಾಕ್ ಮಾಡುತ್ತಿರುವುದನ್ನು ತಪ್ಪಿಸಲು, https://myaadhaar.uidai.gov.in ಎಂಬ ವೆಬ್ ಸೈಟ್ ಮೂಲಕ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಬಯೋಮೆಟ್ರಿಕ್ ಲಾಕ್ ಮಾಡಬಹುದು ಅಥವಾ ನಿಮ್ಮ ಹತ್ತಿರದ ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ತೆರಳಿ ನಿಮ್ಮ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಅನ್ನು ಲಾಕ್ ಮಾಡಿಸಿ, ಸಾಧ್ಯವಾದಷ್ಟು ಫಿಂಗರ್ ಪ್ರಿಂಟ್ ಕೋರುವ ಯಾವುದೇ ಮೊಬೈಲ್ ಅಪ್ಲಿಕೇಷನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಬಳಕೆ ಮಾಡದಿದ್ದರೆ ಒಳಿತು. ಒಂದು ವೇಳೆ ನೀವು ಎಇಪಿಎಸ್ ಮೂಲಕ ವಂಚನೆಗೆ ಒಳಗಾದಲ್ಲಿ ತಕ್ಷಣವೇ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ https://cybercrime.gov.in ವೆಬ್ ಸೈಟ್ ನಲ್ಲಿ ನೇರವಾಗಿ ದೂರು ದಾಖಲಿಸಬಹುದು.

ಬಳ್ಳಾರಿ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಅ.10ರಂದು ಆಧಾರ್ ಆಧಾರಿತ ಬಯೋಮೆಟ್ರಿಕ್ ದತ್ತಾಂಶ ಬಳಸಿಕೊಂಡು ಸೈಬರ್ ವಂಚನೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಹೆಚ್ಚಿನ ಗಮನವಹಿಸುವಂತೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

ದೇಶದಲ್ಲಿ 2021ರಲ್ಲಿ 53 ಸಾವಿರ ಸೈಬರ್ ಅಪರಾಧ ಪ್ರಕರಣ ದಾಖಲು :

ದೇಶದಲ್ಲಿ ಅಪರಾಧಗಳ ಅಂಕಿ-ಅಂಶಗಳನ್ನು ಸಂಗ್ರಹಿಸಿ ಪ್ರಕಟಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB), ಭಾರತದಲ್ಲಿ ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಕೆಲವು ವಿವರಗಳನ್ನು ಬಹಿರಂಗಪಡಿಸಿದೆ. ಅದೇನೆಂದರೆ 2019 ರಲ್ಲಿ 44,735, ಅದೇ ರೀತಿ 2020ನೇ ಇಸವಿಯಲ್ಲಿ 50,035 ಮತ್ತು 2021 ರಲ್ಲಿ 52,974 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದೆ. ಇನ್ನು ಅದೇ ವರ್ಷಗಳಲ್ಲಿ ಸೈಬರ್ ವಂಚನೆ (Cyber Fraud) ಪ್ರಕರಣಗಳ ಸಂಖ್ಯೆ ಕ್ರಮವಾಗಿ 6,229, 10,395 ಮತ್ತು 14,007 ದಾಖಲಾಗಿದೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In, ಇದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಡಿಯಲ್ಲಿ ಬರುವ ಸಂಸ್ಥೆ)  2019ನೇ ಇಸವಿಯಲ್ಲಿ 11,58,208 ಹಾಗೂ 2020ನೇ ಇಸವಿಯಲ್ಲಿ 14,02,809 ಮತ್ತು 2021ನೇ ಸಾಲಿನಲ್ಲಿ ಒಟ್ಟು 13,91,457 ಸಂಖ್ಯೆಯ ಸೈಬರ್ ಭದ್ರತಾ ಘಟನೆಗಳು ಅಂದರೆ ಫಿಶಿಂಗ್, ದುರುದ್ದೇಶಪೂರಿತ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ರಾನ್ ಸಮ್ವೇರ್ (ransomware) ಪ್ರಕರಣಗಳು ನಡೆದಿದ್ದು, ಅದನ್ನು ಸಿಇಆರ್ ಟಿ-ಇನ್ ಗಮನಿಸಿ ಅವುಗಳನ್ನು ನಿರ್ವಹಿಸಿದೆ.

ದೇಶದಲ್ಲಿರೋದು ಕೇವಲ 312 ಸೈಬರ್ ಕ್ರೈಮ್ ಸ್ಟೇಷನ್ ಗಳು :

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ (ಎನ್‌ಬಿಎಫ್‌ಐ) ಸಂಗ್ರಹಿಸಿದ ಅಧಿಕೃತ ಮಾಹಿತಿ ಬಹಿರಂಗವಾಗಿದೆ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಐಗಳು ವರದಿ ಮಾಡಿದಂತೆ,  2021 ಆರ್ಥಿಕ ವರ್ಷದಲ್ಲಿ, ವಂಚನೆಯ ಪ್ರಕರಣಗಳು 7.05 ಲಕ್ಷದಷ್ಟಿದ್ದು, ಅದರ ಮೌಲ್ಯ 542.7 ಕೋಟಿ ರೂ.ಗಳಾಗಿದೆ. ಇನ್ನು ಆರ್ಥಿಕ ವರ್ಷ 2022 ರಲ್ಲಿ, ವಂಚನೆ ಪ್ರಕರಣಗಳು 12.27 ಲಕ್ಷಕ್ಕೆ ಏರಿತು, ಅದರ ಒಟ್ಟು ಮೌಲ್ಯವು 1,357.06 ಕೋಟಿ ರೂ., ಇನ್ನು 2023ನೇ ಆರ್ಥಿಕ ವರ್ಷದಲ್ಲಿ ಅವುಗಳ ಸಂಖ್ಯೆ 19.94 ಲಕ್ಷಕ್ಕೆ ಏರಿತು, ಈ ವಂಚನೆ ಪ್ರಕರಣಗಳ ಮೌಲ್ಯ 2,537.35 ಕೋಟಿ ರೂ.ಗಳಾಗಿತ್ತು. 2021 ರಲ್ಲಿ, ಎಟಿಎಂ ಮತ್ತು ಇತರರ ಪ್ರಕರಣಗಳಲ್ಲಿ ವರದಿಯಾದ ಒಟ್ಟು ವಂಚನೆಗಳ ಸಂಖ್ಯೆ ಸುಮಾರು 10.8 ಲಕ್ಷ, ವಂಚನೆಯಾದ ಮೌಲ್ಯ 1,119 ಕೋಟಿ ರೂ. ಅಂದರೆ, ಪ್ರತಿ 67,000 ಎಟಿಎಂ ವಹಿವಾಟಿಗೆ ಒಂದು ವಂಚನೆ ನಡೆಯುತ್ತಿದೆ. ಇದೊಂದು ಗಂಭೀರವಾದ ವಿಚಾರ. ಸೈಬರ್ ವಂಚನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೂ, ಭಾರತದಲ್ಲಿ ಕೇವಲ 312 ಸೈಬರ್ ಪೊಲೀಸ್ ಠಾಣೆಗಳು ಮತ್ತು ಅಪರಾಧಗಳನ್ನು ಎದುರಿಸಲು ಬಲವಾದ ಕಾನೂನುಗಳ ಕೊರತೆಯಿದೆ.

ರಾನ್ ಸಮ್ವೇರ್ ಎಂದರೇನು? :

ರಾನ್ ಸಮ್ವೇರ್ ಒಂದು ರೀತಿಯ ಕ್ರಿಪ್ಟೋವೈರಲಾಜಿಕಲ್ ಮಾಲ್‌ವೇರ್ ಆಗಿದ್ದು ಅದು ವ್ಯಕ್ತಿಯೊಬ್ಬನ ವೈಯಕ್ತಿಕ ಡೇಟಾವನ್ನು ಪ್ರಕಟಿಸಲು ಅಥವಾ ಸುಲಿಗೆ ಪಾವತಿಸದ ಹೊರತು ಅವರಿಗೆ ತಮ್ಮ ಅಂತರ್ಜಾಲ ಖಾತೆಯ ಪ್ರವೇಶವನ್ನು ಶಾಶ್ವತವಾಗಿ ನಿರ್ಬಂಧಿಸುವ ಕುರಿತಂತೆ ಬೆದರಿಕೆ ಹಾಕುತ್ತದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

PM Narendra Modi | ಆದಿ ಕೈಲಾಸದ ಶಿಖರದ ಮುಂದೆ ಧ್ಯಾನದಲ್ಲಿ ತಲ್ಲೀನರಾದ ಪ್ರಧಾನಿ ನರೇಂದ್ರ ಮೋದಿ!!

Next Post

BW SPECIAL | ಬಿಬಿಎಂಪಿಯ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಗಳು ಭೂಗಳ್ಳರ ಪಾಲು?: ಗುತ್ತಿಗೆ ಕೊಟ್ಟ 372 ಸ್ವತ್ತುಗಳ ಬಗ್ಗೆ ಪಾಲಿಕೆ ಬಳಿಯಿಲ್ಲ ಸೂಕ್ತ ಮಾಹಿತಿ!! ಬೆಂಗಳೂರು ವೈರ್ ಹೊರಗೆಡುವುತ್ತಿದೆ ಗಂಭೀರ ವಿಚಾರ

Next Post
ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

BW SPECIAL | ಬಿಬಿಎಂಪಿಯ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಗಳು ಭೂಗಳ್ಳರ ಪಾಲು?: ಗುತ್ತಿಗೆ ಕೊಟ್ಟ 372 ಸ್ವತ್ತುಗಳ ಬಗ್ಗೆ ಪಾಲಿಕೆ ಬಳಿಯಿಲ್ಲ ಸೂಕ್ತ ಮಾಹಿತಿ!! ಬೆಂಗಳೂರು ವೈರ್ ಹೊರಗೆಡುವುತ್ತಿದೆ ಗಂಭೀರ ವಿಚಾರ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದೀಪ ಬೆಳಗುವ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಚಾಲನೆ ನೀಡಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟ ಸದಸ್ಯರು ಪಾಲ್ಗೊಂಡಿದ್ದರು.

Mysore Dasara 2023 | ನಾಡಹಬ್ಬ ದಸರಾ ಮಹೋತ್ಸವಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರಿಂದ ಚಾಲನೆ : ಸಾಂಸ್ಕೃತಿಕ ನಗರದಲ್ಲಿ ಕಳೆಗಟ್ಟಿದ ಸಂಭ್ರಮ

Please login to join discussion

Like Us on Facebook

Follow Us on Twitter

Recent News

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d