Saturday, September 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

  • Bengaluru Focus
    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

KIAL Airport News | 2022-23ರ ಅವಧಿಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ 31.91 ದಶಲಕ್ಷ ಜನರ ಪ್ರಯಾಣ

ಈ ವರ್ಷದ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ, ಬೆಂಗಳೂರು ವಿಮಾನ ನಿಲ್ದಾಣವು 17.4 ದಶಲಕ್ಷ ಗುಲಾಬಿಗಳನ್ನು ರಫ್ತು ಮಾಡಿತ್ತು | ದೇಶ- ವಿದೇಶಗಳ 100 ಸ್ಥಳಗಳಿಗೆ ವಿಮಾನಯಾನ ಸೇವೆ

by Bengaluru Wire Desk
April 18, 2023
in Bengaluru Focus, News Wire, Public interest
Reading Time: 1 min read
0

ಬೆಂಗಳೂರು, ಏ.18 www.bengaluruwire.com : ನಗರದ ಕೆಂಪೇಗೌಡ ಅಂತರರಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2022-23ರ ಅವಧಿಯಲ್ಲಿ ಒಟ್ಟು 31.91 ದಶಲಕ್ಷ ಪ್ರಯಾಣಿಕರು ಪ್ರಯಾಣಿಸುವ ಮೂಲಕ ನಿರೀಕ್ಷೆಗೂ ಮೀರಿದ ದಾಖಲೆ ನಿರ್ಮಿಸಿದೆ. ಜೊತೆಗೆ, ಬಹುಬೇಗನೆ ಹಾಳಾಗುವ (Perishable) ಸರಕು ಸಾಗಣೆಯಲ್ಲೂ ತನ್ನ ಮುಂಚೂಣಿಯನ್ನು ಕಾಯ್ದಿರಿಸಿಕೊಂಡಿದೆ.

2022-23 ವಾರ್ಷಿಕ ಅವಧಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಒಟ್ಟು 31.91 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, 28.12 ದಶಲಕ್ಷ ದೇಶೀಯ ಮತ್ತು 3.78 ದಶಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆ ಕಂಡುಬಂದಿದೆ. ದೇಶೀಯ (DOM) ವಲಯವು ಶೇ. 85ರಷ್ಟು ಬೆಳವಣಿಗೆ ದಾಖಲಿಸಿದ್ದರೆ, ಅಂತಾರಾಷ್ಟ್ರೀಯ (INT) ವಲಯವು ಶೇ. 245ರಷ್ಟು ಬೆಳವಣಿಗೆ ಕಂಡಿದೆ.

ಇನ್ನು, ಸರಕು ಸಾಗಣೆ (Cargo) ವಿಭಾಗಕ್ಕೆ ಬಂದರೆ, ಬೆಂಗಳೂರು ವಿಮಾನ ನಿಲ್ದಾಣವು ಸತತ ಎರಡನೇ ವರ್ಷವೂ ಭಾರತದಲ್ಲಿ ಪೆರಿಷಬಲ್‌ ಸರಕು ಸಾಗಣೆಯಲ್ಲಿ ಮೊದಲ ವಿಮಾನ ನಿಲ್ದಾಣವಾಗಿ ಮುಂದುವರೆದಿದೆ.

ಬಿಐಎಎಲ್‌ನ ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, ಈ ವಾರ್ಷಿಕ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿನ ಚೇತರಿಕೆ ಅತ್ಯಂತ ಸಂತಸ ಮೂಡಿಸಿದೆ. ವಾಯುಯಾನ ಉದ್ಯಮದ ಚೇತರಿಕೆಯು ಒಂದು ಅಸಾಧಾರಣ ಕಾರ್ಯವಾಗಿದೆ. ನಮ್ಮ ಪ್ರಯಾಣಿಕರು, ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣದ ಸಹಾಯ ಹಾಗೂ ಸರ್ಕಾರಿ ಸಂಸ್ಥೆಗಳ ಅಚಲ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಪ್ರಮುಖ ಮಾರ್ಗಗಳ ಮರು-ಪರಿಚಯ ಮತ್ತು ಪ್ರಮುಖ ವ್ಯಾಪಾರ ಮತ್ತು ವಿರಾಮ ಸ್ಥಳಗಳ ನಡುವೆ ಹೊಸ ಸಂಪರ್ಕಗಳ ಸೇರ್ಪಡೆಯು ತ್ವರಿತ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.

ಇನ್ನು, ಪ್ರಯಾಣಿಕರ ಅನುಕೂಲಕ್ಕಾಗಿ ಚಾಲನೆ ನೀಡಿದ ಹೊಸ ಸೇವೆಗಳ ಪೈಕಿ, ಸಿಡ್ನಿಗೆ ಕ್ವಾಂಟಾಸ್‌ನ ಸೇವೆ, ಎಮಿರೇಟ್ಸ್‌ನಿಂದ ದೈನಂದಿನ ಏರ್‌ಬಸ್ A380 ಸೇವೆ ಆರಂಭ ಪ್ರಮುಖವಾಗಿದೆ.

ಟರ್ಮಿನಲ್ 2 (T2) ನ ಇತ್ತೀಚಿನ ಕಾರ್ಯಚರೆಣೆಯಿಂದಾಗಿ, ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಆದ್ಯತೆಯ ಗೇಟ್‌ವೇ ಆಗಿ ತನ್ನ ಸ್ಥಾನವನ್ನು ಕಾಪಾಡಿಕೊಳ್ಳಲು ಹಿಂದೆಂದಿಗಿಂತಲೂ ಉತ್ತಮವಾಗಿ ಸಜ್ಜಾಗಿದೆ. ಅಲ್ಲದೆ ಇಲ್ಲಿನ ಪ್ರಯಾಣಿಕರ ತೃಪ್ತಿ ಮತ್ತು ಅನುಕೂಲಕ್ಕಾಗಿ ಆದ್ಯತೆ ನೀಡುವುದನ್ನು ಮುಂದುವರಿಸುವುದರಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಹಾಗೂ ಉತ್ತಮಗೊಳಿಸುವ ತಮ್ಮ ಬದ್ಧತೆಯು ಅಚಲವಾಗಿ ಉಳಿದಿದೆ ಎಂದು ಅವರು ತಿಳಿಸಿದರು.

ಕೆಐಎಎಲ್ ಏರ್ ಪೋರ್ಟ್ (KIAL Airport) ಪಕ್ಷಿನೋಟ

ದೇಶ- ವಿದೇಶಗಳ 100 ಸ್ಥಳಗಳಿಗೆ ವಿಮಾನ ಸೇವೆ :
ಕೆಐಎಲ್ ವಿಮಾನ ನಿಲ್ದಾಣವು ಒಟ್ಟು 100 ಸ್ಥಳಗಳಿಗೆ, ಅಂದರೆ ದೇಶದಾದ್ಯಂತ 75 ಸ್ಥಳಗಳಿಗೆ ಮತ್ತು 25 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಹೊಂದಿದೆ. ಇದು ಸ್ಥಿರವಾದ ಚೇತರಿಕೆಗೆ ಕೊಡುಗೆ ನೀಡುತ್ತದೆ.

ಶೇ. 50.8 ಒಟ್ಟಾರೆ ಬೆಳವಣಿಗೆಯೊಂದಿಗೆ ವಾಯು ಸಾರಿಗೆ ಚಲನೆಗಳಲ್ಲಿ (ಎಟಿಎಂ) ಚೇತರಿಕೆ ಕಾಣುತ್ತಿದೆ. ದೇಶೀಯ ಎಟಿಎಂಗಳು ಶೇ.49.8ರಷ್ಟು ಬೆಳವಣಿಗೆ ಕಂಡರೆ ಅಂತಾರಾಷ್ಟ್ರೀಯ ಬೆಳವಣಿಗೆಯು ಶೇ.59.6 ರಷ್ಟಿದೆ. ಈ ವರ್ಷದ ಫೆಬ್ರವರಿ 26 ರಂದು, ಒಂದೇ ದಿನದಲ್ಲಿ 1,14,299 ಪ್ರಯಾಣಿಕರು ಪ್ರಯಾಣಿಸಿದ್ದು, ಇದು 2023ರ ವಾರ್ಷಿಕ ಅವಧಿಯಲ್ಲಿ ಅತಿ ಹೆಚ್ಚು ಎನ್ನಲಾಗಿದೆ.

ಪ್ರಮುಖ ಸ್ಥಳಗಳಿಗೆ ವಾಯುಯಾನ ವಿಸ್ತರಣೆ:
ಕೋವಿಡ್‌ ಪೂರ್ವಕ್ಕೆ ಹೋಲಿಸಿದರೆ ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಬೆಂಗಳೂರಿನಿಂದ ಶೇ.100 ಹೆಚ್ಚು ಕಾರ್ಯಾಚರಣೆಯನ್ನು ಮರು ಪ್ರಾರಂಭಿಸಿವೆ. ಹೆಚ್ಚುವರಿಯಾಗಿ, ವಿಮಾನ ನಿಲ್ದಾಣವು ಹಲವಾರು ಅಂತಾರಾಷ್ಟ್ರೀಯ ಮಾರ್ಗಗಳನ್ನು ಹೊಸದಾಗಿ ಸೇರ್ಪಡೆ ಮಾಡಿದೆ. ಉದಾಹರಣೆಗೆ, ಕ್ವಾಂಟಾಸ್ ಏರ್‌ವೇಸ್ ನಾಲ್ಕು ಸಾಪ್ತಾಹಿಕ ತಡೆರಹಿತ ಬೆಂಗಳೂರು-ಸಿಡ್ನಿ ವಿಮಾನವನ್ನು ಪ್ರಾರಂಭಿಸಿದೆ. ಎಮಿರೇಟ್ಸ್‌ನ A380 ಕಾರ್ಯಾಚರಣೆಗಳು, ಬೆಂಗಳೂರು-ಕುವೈತ್ ಮಾರ್ಗದಲ್ಲಿ ಎರಡು ಜಜೀರಾ ಏರ್‌ವೇಸ್, ಮಲಿಂಡೋ ಏರ್ (ಬೆಂಗಳೂರಿನ ಹೊಸ ವಾಹಕ ) ಪ್ರಾರಂಭಗೊಂಡಿದೆ.

ದೇಶೀಯ ವಿಮಾನ ಹಾರಾಟ :
ದೇಶೀಯ ವಿಭಾಗದಲ್ಲಿ, ಆಕಾಶ ಏರ್ ಮುಂಬೈ, ಕೊಚ್ಚಿ, ಅಹಮದಾಬಾದ್, ಚೆನ್ನೈ, ಪುಣೆ, ವೈಜಾಗ್, ಅಗರ್ತಲಾ, ಲಕ್ನೋ ಮತ್ತು ದೆಹಲಿಯಂತಹ 9 ವಲಯಗಳಿಗೆ 25 ದೈನಂದಿನ ನಿರ್ಗಮನದೊಂದಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇಂಡಿಗೋ ಶೇ. 57ರಷ್ಟು ವಿಮಾನ ಹಾರಾಟ ನಡೆಸುವ ಮೂಲಕ ಕೆಐಎಎಲ್ ವಿಮಾನ ನಿಲ್ದಾಣದಿಂದ ದೇಶೀಯ ಪ್ರಯಾಣಿಕರ ಮಾರುಕಟ್ಟೆಯನ್ನು ಮುನ್ನಡೆಸುತ್ತಿದೆ. ನಂತರ ಟಾಟಾ ಗ್ರೂಪ್ ಶೇ. 27ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಆಕಾಶ ಏರ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಕೇವಲ ಎಂಟು ತಿಂಗಳಲ್ಲಿ, ಬೆಂಗಳೂರು ಏರ್‌ಪೋರ್ಟ್‌ನ ದೇಶೀಯ ಕಾರ್ಯಾಚರಣೆಗಳಲ್ಲಿ ಶೇ.10ರಷ್ಟು ಮಾರುಕಟ್ಟೆ ಪಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪ್ರಮುಖ ವಾಯುಯಾನ ಗೇಟ್‌ವೇ :
ಬೆಂಗಳೂರು ವಿಮಾನ ನಿಲ್ದಾಣದ ವಿಶಾಲವಾದ ಸಂಪರ್ಕ ಪ್ರದೇಶವು 20 ಕ್ಕೂ ಹೆಚ್ಚು ನಗರಗಳಿಗೆ 75 ನಿಮಿಷಗಳ ಹಾರುವ ಅಂತರದಲ್ಲಿ ಸಂಪರ್ಕ ಕಲ್ಪಿಸುತ್ತದೆ ಮತ್ತು 100+ ದೈನಂದಿನ ವಿಮಾನಗಳನ್ನು ನೀಡುತ್ತದೆ. ವರ್ಗಾವಣೆ ದಟ್ಟಣೆಯನ್ನು ನಿರ್ಮಿಸುವಲ್ಲಿ ಮತ್ತು ಈ ಪ್ರದೇಶದಲ್ಲಿ ಪ್ರಮುಖ ವಾಯುಯಾನ ಗೇಟ್‌ವೇ ಆಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.

ರಫ್ತಾಗುವ ಗುಲಾಬಿ ಹೂಗಳ ಚಿತ್ರ

ಸರಕು-ಸೇವೆ ಬೆಳವಣಿಗೆ:
ಬೆಂಗಳೂರು ಕಾರ್ಗೋ ವಿಮಾನ ನಿಲ್ದಾಣವು ಪ್ರಸಕ್ತ ವರ್ಷದಲ್ಲಿ ಜನವರಿ 2023 ರವರೆಗೆ 44,143 ಮೆಟ್ರಿಕ್ ಟನ್‌ (MT) ಮತ್ತು 2022 ರ ಅವಧಿಯಲ್ಲಿ 52,366 ಮೆಟ್ರಿಕ್ ಟನ್‌ (MT) ನಷ್ಟು ಪೆರಿಷಬಲ್‌ ಸರಕುಗಳನ್ನು ಸಂಸ್ಕರಿಸಿದೆ. ಬೆಂಗಳೂರು ಕಾರ್ಗೋ ಭಾರತದ ಶೇ.28 ಮತ್ತು ದಕ್ಷಿಣ ಭಾರತದ ಮಾರುಕಟ್ಟೆಯ ಶೇ.45 ರಷ್ಟು ಪೆರಿಷಬಲ್‌ ಸರಕುಗಳಿಗೆ ಕೊಡುಗೆ ನೀಡುತ್ತಿದೆ. ಅಗ್ರ ರಫ್ತು ಸರಕುಗಳಲ್ಲಿ ಪ್ರಮುಖವಾಗಿ ಕೋಳಿ ಉತ್ಪನ್ನಗಳು, ಹೂವು ಸೇರಿದಂತೆ ಹಲವು ಬಗೆಯ ಸರಕುಗಳು ಮುಂಚೂಣಿಯಲ್ಲಿವೆ.

ಇನ್ನು, ಫಾರ್ಮಾ, ಇಂಜಿನಿಯರಿಂಗ್ ಸರಕುಗಳು, ಸಿದ್ಧ ಉಡುಪುಗಳು ಮತ್ತು ಎಲೆಕ್ಟ್ರಿಕಲ್ ವಸ್ತುಗಳ ರಫ್ತಿನಲ್ಲಿಯೂ ಬೆಳವಣಿಗೆ ಕಂಡು ಬಂದಿದೆ. ಪ್ರೇಮಿಗಳ ದಿನಾಚರಣೆ (ವ್ಯಾಲೆಂಟೈನ್ಸ್ ಡೇ) ಸಮಯದಲ್ಲಿ, ಬೆಂಗಳೂರು ವಿಮಾನ ನಿಲ್ದಾಣವು 17.4 ದಶಲಕ್ಷ ಗುಲಾಬಿಗಳನ್ನು ರಫ್ತು ಮಾಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.14ರಷ್ಟು ಏರಿಕೆ ಸೂಚಿಸುತ್ತದೆ. ಮೇ 24, 2023 ರಿಂದ ಮುಂದಿನ 15 ವರ್ಷಗಳವರೆಗೆ ತನ್ನ ಕಾರ್ಗೋ ಟರ್ಮಿನಲ್‌ಗಳನ್ನು ನಿರ್ವಹಿಸಲು ಹೊಸ ಪಾಲುದಾರರ ನಿರೀಕ್ಷೆಯಲ್ಲಿದೆ. ಸುಮಾರು 1 ದಶಲಕ್ಷ ಮೆಟ್ರಿಕ್ ಟನ್‌ಗಳಷ್ಟು ಸರಕು ನಿರ್ವಹಣೆ ಸಾಮರ್ಥ್ಯ ಸೃಷ್ಟಿಸುವ ಗುರಿಯನ್ನು ಇವರು ಹೊಂದಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Science News | ನೂತನ ಗ್ಯಾಲಾಕ್ಸಿ ಎಆರ್ ಪಿ 220 ಸೆರೆ ಹಿಡಿದ ನಾಸಾ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

Next Post

Election News | ಬೆಂಗಳೂರಿನ ಮತದಾನ ಪ್ರಮಾಣ ಏರಿಕೆಗೆ ಚುನಾವಣಾ ಆಯೋಗದ ವಿಶಿಷ್ಠ ಪ್ರಯತ್ನ : ತೃತೀಯ ಲಿಂಗಿಗಳ ಬಳಕೆ

Next Post

Election News | ಬೆಂಗಳೂರಿನ ಮತದಾನ ಪ್ರಮಾಣ ಏರಿಕೆಗೆ ಚುನಾವಣಾ ಆಯೋಗದ ವಿಶಿಷ್ಠ ಪ್ರಯತ್ನ : ತೃತೀಯ ಲಿಂಗಿಗಳ ಬಳಕೆ

ಬಿಬಿಎಂಪಿ ಕೇಂದ್ರ ಕಚೇರಿ ಚಿತ್ರ

BBMP Property Tax | ಬೆಂಗಳೂರು ಆಸ್ತಿ ತೆರಿಗೆ ಮಾಲೀಕರೆ ಗಮನಿಸಿ!! ; ಏಪ್ರಿಲ್ 30ರ ಒಳಗೆ ಆಸ್ತಿ ತೆರಿಗೆ ಪಾವತಿಗೆ ಶೇ.5 ರಿಯಾಯಿತಿ

Please login to join discussion

Like Us on Facebook

Follow Us on Twitter

Recent News

ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

September 18, 2026

BW SPECIAL | ಅಂತಿಮ ಪಟ್ಟಿ ಪ್ರಕಟವಾದರೂ ಸಿಗದ ನೇಮಕಾತಿ ಆದೇಶ: 267 ಸರ್ಕಾರಿ ಕಾಲೇಜು ಪ್ರಾಂಶುಪಾಲರ ಅಭ್ಯರ್ಥಿಗಳ ಅತಂತ್ರ ಸ್ಥಿತಿ

September 18, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

September 18, 2026

BW SPECIAL | ಅಂತಿಮ ಪಟ್ಟಿ ಪ್ರಕಟವಾದರೂ ಸಿಗದ ನೇಮಕಾತಿ ಆದೇಶ: 267 ಸರ್ಕಾರಿ ಕಾಲೇಜು ಪ್ರಾಂಶುಪಾಲರ ಅಭ್ಯರ್ಥಿಗಳ ಅತಂತ್ರ ಸ್ಥಿತಿ

September 18, 2026
GBA Head Office Image

GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

September 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d