Wednesday, April 29, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

  • Bengaluru Focus

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW Special | Liquor Sales In Karnataka | 11 ತಿಂಗಳಲ್ಲಿ 81.72 ಕೋಟಿ ಲೀ. ಮದ್ಯ ಮಾರಾಟ : ಅಬಕಾರಿ ಇಲಾಖೆಗೆ ಹರಿದು ಬಂತು 27,000 ಕೋಟಿ ರೂ. ರಾಜಸ್ವ!!  

ಕಳೆದ ವರ್ಷಕ್ಕೆ ಹೋಲಿಸಿದರೆ ಎಷ್ಟು ಐಎಂಎಲ್ ಹಾಗೂ ಬಿಯರ್ ಮಾರಾಟ ಹೆಚ್ಚಾಗಿದೆ ಗೊತ್ತಾ? | ಅಕ್ರಮ ಮದ್ಯ ಹಂಚುವಿಕೆ ಚುನಾವಣಾ ಆಯೋಗ ಹದ್ದಿನ ಕಣ್ಣು

by Bengaluru Wire Desk
March 24, 2023
in BW Special, News Wire
Reading Time: 1 min read
0
ಸೂಚನೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (ಸಾಂದರ್ಭಿಕ ಚಿತ್ರ)

ಸೂಚನೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (ಸಾಂದರ್ಭಿಕ ಚಿತ್ರ)

ಬೆಂಗಳೂರು, ಮಾ.24 www.bengaluruwire.com  : ರಾಜ್ಯದಲ್ಲಿ ಈ ಆರ್ಥಿಕ ವರ್ಷದಲ್ಲಿ ಫೆಬ್ರವರಿವರೆಗೆ ಬರೋಬ್ಬರಿ 81.72 ಕೋಟಿ ಲೀ. ಮದ್ಯ ಮತ್ತು ಬಿಯರ್ ಮಾರಾಟವಾಗಿದೆ. ಮದ್ಯಪ್ರಿಯರು ಅತಿಹೆಚ್ಚು ಮದ್ಯ ಖರೀದಿಸಿದ ಕಾರಣ ರಾಜ್ಯ ಸರ್ಕಾರದ ಆದಾಯವೂ ಹೆಚ್ಚಾಗಿದೆ. 11 ತಿಂಗಳ ಅವಧಿಯಲ್ಲಿ ಅಬಕಾರಿ ಇಲಾಖೆಗೆ ಬರೋಬ್ಬರಿ 27,032 ಕೋಟಿ ರೂ. ರಾಜಸ್ವ ಹರಿದು ಬಂದಿದೆ. ಇಲಾಖೆಯ ಉನ್ನತ ಮೂಲದ ಮಾಹಿತಿ ಪ್ರಕಾರ ಮಾರ್ಚ್ ತಿಂಗಳ 23ರ ವರೆಗೆ ಇಲಾಖೆಗೆ 29,000 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಈ ಮಾಸಾಂತ್ಯದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

ರಾಜ್ಯ ಸರ್ಕಾರವು ಈ ಹಿಂದೆ ನೀಡಿದ ವಾರ್ಷಿಕ 29,000 ಕೋಟಿ ರೂ.ಗಳ ಗುರಿಯನ್ನು ಅಬಕಾರಿ ಇಲಾಖೆ ತಲುಪಿದಂತಾಗಿದೆ. ಆದರೆ ಪರಿಷ್ಕೃತ ಗುರಿ 32,000 ಕೋಟಿ ರೂ.ನಷ್ಟು ರಾಜಸ್ವ ಸಂಗ್ರಹವಾಗುವುದು ಬಹುತೇಕ ಅನುಮಾನವಾಗಿದೆ. ರಾಜ್ಯದಲ್ಲಿ ತೈಲ ಬೆಲೆ, ದೈನಂದಿನ ಧವಸ ಧಾನ್ಯಗಳ ರೇಟ್, ಗ್ಯಾಸ್ ಹೀಗೆ ಎಲ್ಲಾ ಬೆಲೆಯೂ ಒಂದೇ ಸಮನೆ ಏರಿಕೆಯಾಗುತ್ತಿದೆ. ಆದರೆ ಈ ಬೆಲೆ ಏರಿಕೆ ಇದ್ಯಾವುದೂ ಮದ್ಯ ಮಾರಾಟಕ್ಕೆ ತೊಂದರೆಯಾಗಿಲ್ಲ. 2022ರ ಏಪ್ರಿಲ್ ನಿಂದ 2023ರ ಫೆಬ್ರವರಿಗಿನ ಅವಧಿಯಲ್ಲಿ 54.78 ಕೋಟಿ ಲೀ. ಭಾರತೀಯ ತಯಾರಿತ ಮದ್ಯ (IML – ಐಎಂಎಲ್) ಹಾಗೂ 26.94 ಕೋಟಿ ಲೀ. ಬಿಯರ್ ಭರ್ಜರಿ ಮಾರಾಟವಾಗಿ ಅಬಕಾರಿ ಇಲಾಖೆಗೆ ಉತ್ತಮ ಆದಾಯ ಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮದ್ಯದ ಮಾರಾಟದಲ್ಲಿ ಶೇ.13.94ರಷ್ಟು ಬೆಳವಣಿಗೆ ಕಂಡು ಬಂದಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ. ಅಂದರೆ ಇಲಾಖೆ ಆದಾಯ ಹೆಚ್ಚಾಗಿರುವುದು ಕಂಡು ಬಂದಿದೆ. ಐಎಮ್ಎಲ್ ಮದ್ಯವಿರುವ ಒಂದು ರಟ್ಟಿನ ಬಾಕ್ಸ್ ನಲ್ಲಿ 8.64 ಲೀ. ಮದ್ಯವಿದ್ದರೆ, ಒಂದು ಬಿಯರ್ ರಟ್ಟಿನ ಬಾಕ್ಸ್ ನಲ್ಲಿ 7.8 ಲೀ. ಮದ್ಯವಿರುತ್ತದೆ.

ಕಳೆದ ವರ್ಷಕ್ಕಿಂತ 3307.44 ಕೋಟಿ ರೂ. ಹೆಚ್ಚುವರಿ ಸಂಗ್ರಹ :

2022-23ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಗೆ 32,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಯನ್ನು ನೀಡಿದೆ. ಆದರೆ 2023ರ ಫೆಬ್ರವರಿ ವರೆಗೆ ಅಬಕಾರಿ ಇಲಾಖೆಯು 27,032 ಕೋಟಿ ರೂ.ನಷ್ಟು ರಾಜಸ್ವವನ್ನು ಸಂಗ್ರಹಿಸಿದೆ. 2021-22ನೇ ಸಾಲಿಗೆ ಹೋಲಿಸಿದರೆ ರಾಜಸ್ವ ಸಂಗ್ರಹದಲ್ಲಿ 3307.44 ಕೋಟಿ ರೂ. ನಷ್ಟು ಹೆಚ್ಚುವರಿಯಾಗಿ ಇಲಾಖೆಗೆ ಆದಾಯ ಬಂದಿದೆ.

ಗುಂಡು ಪ್ರಿಯರು ಈ 11 ತಿಂಗಳಲ್ಲಿ 54.78 ಕೋಟಿ ಲೀಟರ್ (596.50 ಲಕ್ಷ ರಟ್ಟಿನ ಬಾಕ್ಸ್) ನಷ್ಟು ಭಾರತೀಯ ತಯಾರಿತ ಮದ್ಯ (ಐಎಮ್ ಎಲ್)ವನ್ನು ಖರೀದಿಸಿದ್ದಾರೆ‌. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 37.54 ಲಕ್ಷದಷ್ಟು ಹೆಚ್ಚಿನ ಬಾಕ್ಸ್ ಮದ್ಯ ಮಾರಾಟವಾಗಿದೆ. ಇನ್ನು ವಿವಿಧ ಬ್ರಾಂಡ್ ಗಳ ಬಿಯರ್ ಖರೀದಿಗೆ ರಾಜ್ಯದಲ್ಲಿನ ಹೆಚ್ಚಿನ ಒಲವು ತೋರಿದ್ದಾರೆ. 2022-23ನೇ ಸಾಲಿನ ಏಪ್ರಿಲ್ ನಿಂದ ಫೆಬ್ರವರಿವರೆಗಿನ 11 ತಿಂಗಳಲ್ಲಿ 26.95 ಕೋಟಿ ಲೀ. ಬಿಯರ್ (345.48 ಲಕ್ಷ ರಟ್ಟಿನ ಬಾಕ್ಸ್) ಮಾರಾಟವಾಗಿದೆ. ಇದು 2021-22ರ ವರ್ಷದಲ್ಲಿ ಇದೇ ಅವಧಿಯಲ್ಲಿ ಕೇವಲ 17.97 ಕೋಟಿ ಲೀ.ನಷ್ಟು ಬಿಯರ್ (230.46 ಲಕ್ಷ ರಟ್ಟಿನ ಬಾಕ್ಸ್) ಮಾರಾಟವಾಗಿತ್ತು. ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ 8.97 ಕೋಟಿ ಲೀ. ಬಿಯರ್ ಹೆಚ್ಚುವರಿಯಾಗಿ ಮಾರಾಟವಾಗಿದೆ.

ಬಿಯರ್ ಮಾರಾಟದಲ್ಲಿ ಶೇ.49.91ರಷ್ಟು ಏರಿಕೆ :

ಕರೋನಾ ಸೋಂಕಿನ ತೀವ್ರತೆ ಕಡಿಮೆಯಾದ ಬಳಿಕ ಜನವರಿ ತಿಂಗಳಿನಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲೂ ಆರ್ಥಿಕ ಸಂಪನ್ಮೂಲ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಇದೇ ಹಾದಿಯಲ್ಲಿ ಅಬಕಾರಿ ಇಲಾಖೆಯೂ ಸಾಗುತ್ತಿದೆ. ಕಳೆದ ವರ್ಷದ ಏಪ್ರಿಲ್ ನಿಂದ 2023ರ ಫೆಬ್ರವರಿವರೆಗಿನ ಹನ್ನೊಂದು ತಿಂಗಳಿನಲ್ಲಿ ವಿವಿಧ ಬ್ರಾಂಡ್ ಗಳ ಐಎಂಎಲ್ ಮದ್ಯ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಬಿಯರ್ ಗೆ ಮದ್ಯಪ್ರಿಯರು ಹೆಚ್ಚು ಒತ್ತು ನೀಡಿರುವುದು ಕಂಡು ಬಂದಿದೆ. ಬಿಯರ್ ಮಾರಾಟ ಹೋದ ವರ್ಷಕ್ಕೆ ಹೋಲಿಸಿದರೆ ಈ 11  ತಿಂಗಳಿನಲ್ಲಿ ಶೇ.49.91ರಷ್ಟು ಹೆಚ್ಚಾಗಿದೆ. ಇನ್ನು ಭಾರತೀಯ ತಯಾರಿತ ಮದ್ಯ ಮಾರಾಟವು ಶೇ.6.29ರಷ್ಟು ಮಾತ್ರ ಏರಿಕೆ ದಾಖಲಿಸಿದೆ.

ಅಕ್ರಮ ಮದ್ಯ ಹಂಚಿಕೆಗೆ ಚುನಾವಣಾ ಆಯೋಗದ ಕಡಿವಾಣ?:

ರಾಜ್ಯದಲ್ಲಿ ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅವರ ಬೆಂಬಲಿಗರು ಮತದಾರರನ್ನು ತಮ್ಮ ಸೆಳೆಯಲು ಆಸೆ, ಆಮೀಷವೊಡ್ಡಲು ಅಕ್ರಮವಾಗಿ ಮದ್ಯ ಖರೀದಿ ಹಾಗೂ ಇತರ ಅನ್ಯ ಮಾರ್ಗಗಳಿಂದ ನಕಲಿ ಮದ್ಯವನ್ನು ಹಂಚುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ವಿಚಕ್ಷಣಾ ತಂಡಗಳನ್ನು ಈಗಾಗಲೇ ಸಿದ್ಧಪಡಿಸಿದ್ದು, ಅಕ್ರಮವಾಗಿ ಮದ್ಯ ಹಂಚುವಿಕೆಗೆ ಕಡಿವಾಣ ಹಾಕಲು ಆಯೋಗದ ಅಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳಿಗೂ ಸ್ಪಷ್ಟ ಸೂಚನೆಯನ್ನು ನೀಡಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.

WhatsApp Join our WhatsApp Channel
Previous Post

Income Tax News| ಆದಾಯ ತೆರಿಗೆ ಪಾವತಿದಾರರಿಗಾಗಿ ಹೊಸ ಮೊಬೈಲ್ ಆಪ್ ಪ್ರಾರಂಭಿಸಿದ ಐಟಿ : ಇದರ ವಿಶೇಷತೆಯೇನು?

Next Post

Congress Candidates First List | ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ – ಇಲ್ಲಿದೆ ಪೂರ್ಣ ಮಾಹಿತಿ

Next Post
ಕಾಂಗ್ರೆಸ್ ಪಕ್ಷದ ಲಾಂಛನ

Congress Candidates First List | ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ - ಇಲ್ಲಿದೆ ಪೂರ್ಣ ಮಾಹಿತಿ

Bengaluru International Film Festival2023 | ಮಾನವತೆಯ ನೂಲಿನಿಂದ ಹೆಣೆದ 'ಕೊರಮ' ತುಳು ಸಿನಿಮಾಗೆ ಚಿತ್ರ ರಸಿಕರು ಫಿದಾ

Please login to join discussion

Like Us on Facebook

Follow Us on Twitter

Recent News

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group