Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

AeroIndia2023 | ಏರೊ ಇಂಡಿಯಾ ಚಮತ್ಕಾರಿಕ ವೈಮಾನಿಕ ಪೂರ್ವಾಭ್ಯಾಸಕ್ಕೆ ನೋಡುಗರು ಫಿದಾ !!

ಇದೇ ಮೊದಲ ಬಾರಿಗೆ ಸಮಾಜ ಕಲ್ಯಾಣ ಇಲಾಖೆಯು, ದೇವನಹಳ್ಳಿಯಲ್ಲಿನ ಕುಂದಾಣದ ಮೊರಾರ್ಜಿ ವಸತಿ ಶಾಲೆಯ 200 ಶಾಲಾ‌ ಮಕ್ಕಳಿಗೆ ಏರ್ ಶೋ‌ ವೀಕ್ಷಿಸಲು ಅವಕಾಶ ಕಲ್ಪಿಸಿತ್ತು.

by Bengaluru Wire Desk
February 11, 2023
in BW Special, News Wire, Public interest
Reading Time: 2 mins read
0

ಬೆಂಗಳೂರು, ಫೆ.11 www.bengaluruwire.com : ಕಿವಿಗಡಚ್ಚಿಕ್ಕುವ ಶಬ್ದ ಕೇಳುವ ಮುನ್ನವೇ ಆಕಾಶದಲ್ಲಿ‌ ಕಂಡು ಆ ಲೋಹದ ಹಕ್ಕಿ ಮಾಯವಾಗುತ್ತಿತ್ತು. ಅಗಸದಲ್ಲಿ ಇನ್ನೆರಡು ವಿಮಾನಗಳು ಹಾರುತ್ತಲೇ ಗಾಳಿಯಲ್ಲಿ ಹೊಗೆಯಿಂದ ಹೃದಯ ಆಕೃತಿ ಮೂಡಿಸುತ್ತಿದ್ದವು. ಒಂದರ ಮೇಲೊಂದು ಹೆಲಿಕಾಪ್ಟರ್ ಗಳು ಚಲಿಸುತ್ತಲೇ ಸಮರಕ್ಕೆ ಸನ್ನದ್ಧವಾಗುವಂತೆ ಸಾಗುತ್ತಿದ್ದವು.

ಇದು ಯಲಹಂಕ ಏರೊ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ  ಪೂರ್ವಭಾವಿಯಾಗಿ ಯುದ್ಧವಿಮಾನಗಳು, ಹೆಲಿಕಾಪ್ಟರ್ ಗಳು ನೀಲಾಕಾಶದಲ್ಲಿ ಪೂರ್ಣ ರೀತಿಯ ಪೂರ್ವಾಭ್ಯಾಸ ನಡೆಸಿದ ಸಂದರ್ಭದಲ್ಲಿ ಕಂಡು ಬಂದ ಕೆಲವು ದೃಶ್ಯಗಳಿವು.

14ನೇ ಆವೃತ್ತಿಯ ಏರ್ ಶೋ ಫೆ.13 ರಿಂದ ಐದು ದಿನಗಳ ಕಾಲ ನಗರದಲ್ಲಿ ನಡೆಯಲಿದ್ದು, ಶನಿವಾರ ವಾಯುಪಡೆ, ನೌಕಾಪಡೆ, ಸೇನಾಪಡೆ ಹಾಗೂ ಮಾಧ್ಯಮ ಹಾಗೂ ಅವರ ಕುಟುಂಬದವರಿಗೆ ವೈಮಾನಿಕ ಕಸರತ್ತು ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ಬೆಳಗ್ಗೆ 8.30ರ ಒಳಗಾಗಿ ವಾಯುನೆಲೆಯ ಪಕ್ಕದ ನಿಟ್ಟೆ ಕಾಲೇಜು ರಸ್ತೆಯ ಕಡೆಯಿಂದ ಗೇಟ್ ನಂಬರ್ 8 ಹಾಗೂ 8ಎ ಪ್ರವೇಶದ್ವಾರದ ಮೂಲಕ ಪ್ರವೇಶ ಕಲ್ಪಿಸಲಾಗಿತ್ತು.

ಅಗಸದಲ್ಲಿ ಯುದ್ಧ ವಿಮಾನಗಳ ಪೂರ್ವಭ್ಯಾಸ ಸಾಹಸ ಪ್ರದರ್ಶನ ವೀಕ್ಷಿಸಲು ಆಗಮಿಸಿದ ಜನಸ್ತೋಮ

ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯ ವೈಮಾನಿಕ ಪ್ರದರ್ಶನ :
ಬೆಳಗ್ಗೆ 9:30 ರಿಂದಲೇ ಪೂರ್ಣರೂಪದ ಪೂರ್ವಸಿದ್ಧತಾ ವೈಮಾನಿಕ ಪ್ರದರ್ಶನ ಆರಂಭವಾಗಿ 12 ಗಂಟೆಯವರೆಗೆ ನಡೆಯಿತು. ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆಯಲ್ಲಿ ಎಚ್ ಎಎಲ್ ನಿರ್ಮಿತ 15 ಹೆಲಿಕಾಪ್ಟರ್ ಯಲಹಂಕ ವಾಯುನೆಲೆಯಲ್ಲಿ ನಡೆಸಿದ ವ್ಯವಸ್ಥಿತ ಹಾರಾಟ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯಿತು.

ಎಚ್ ಎಎಲ್ ನಿರ್ಮಿತ ಹೆಲಿಕಾಪ್ಟರ್ ಪ್ರದರ್ಶನ

ತಲಾ 6 ಸುಧಾರಿತ ಹಗುರ ಹೆಲಿಕಾಪ್ಟರ್ (ALH), ಹಗುರ ಉಪಯೋಗಿ ಹೆಲಿಕಾಪ್ಟರ್ (LUH) ಹಾಗೂ ಮೂರು ಹಗುರ ಯುದ್ಧ ಹೆಲಿಕಾಪ್ಟರ್ (LCH) ಬಾನಲ್ಲಿ ತಮ್ಮ ವೈಮಾನಿಕ ಕಸರತ್ತು ಪ್ರದರ್ಶಿಸಿದವು. ಬೆಳಗ್ಗೆಯಿಂದಲೇ ಬಿಸಿಲ ಝಳವಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಲೋಹದಹಕ್ಕಿಗಳ ಪ್ರೇಮಿಗಳು, ಆಕಾಶದತ್ತ ನೋಟ ಹರಿಸಿ ಕ್ಷಣ ಕ್ಷಣಕ್ಕೂ ತರಹೇವಾರಿ ಹೆಲಿಕಾಪ್ಟರ್ ಹಾಗೂ ವಿಮಾನಗಳ ಪ್ರದರ್ಶನವನ್ನು ನೋಡುತ್ತಾ ತಮ್ಮನ್ನೇ ತಾವು‌ ಮರೆತಿದ್ದರು. ಹಲವರು ತಮ್ಮ ಮೊಬೈಲ್‌ನಲ್ಲಿ ವೈಮಾನಿಕ ಪ್ರದರ್ಶನವನ್ನು ಸೆರೆಹಿಡಿದಿದ್ದರು.

ಅಮೆರಿಕ ನಿರ್ಮಿತ ಗ್ಲೋಬ್ ಮಾಸ್ಟರ್ ದೇಶೀಯ ರಕ್ಷಣಾಪಡೆಗೆ ಸೇರ್ಪಡೆಯಾಗಿದ್ದು, ಸೂರ್ಯ ಕಿರಣ್ ಜೊತೆ ರಾಜ ಗಾಂಭೀರ್ಯದಲ್ಲಿ ಹಾರಾಟ ನಡೆಸಿತು.

ತೇಜಸ್ ಯುದ್ಧವಿಮಾನದ ವೈಮಾನಿಕ‌ ಸಾಹಸ ಪ್ರದರ್ಶನ

ಎಂದಿನಂತೆ ತೇಜಸ್ ಯುದ್ಧ ವಿಮಾನ ಶಬ್ದಾತೀತವಾಗಿ ಬಾನಲ್ಲಿ ಗೀಳಿಡುತ್ತಾ ಸಾಗುತ್ತಾ, ಮೇಲ್ಮುಖ, ಕೆಳಮುಖವಾಗಿ ವೇಗವಾಗಿ ಸಾಗುತ್ತಿದ್ದರೆ, ವೈಮಾನಿಕ ಪ್ರದರ್ಶನ ಸ್ಥಳದಲ್ಲಿದ್ದು ಅಗಸದತ್ತ ನೋಟ ಹರಿಸಿದವರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಸುಧಾರಿತ ಯುದ್ಧ ವಿಮಾನಕ್ಕೆ ಸಮರ್ಥ ಪೈಲೆಟ್ ಗಳನ್ನು ತಯಾರು ಮಾಡಲು ತರಬೇತಿ ನೀಡುವ ರಫಲ್ ಯುದ್ಧ ವಿಮಾನ ಪ್ರದರ್ಶನದ ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಹಾರಿ‌ ತನ್ನ ಚಮತ್ಕಾರವನ್ನು ತೋರಿತು.

ಪ್ರತಿ ಏರೊ ಇಂಡಿಯಾ ಪ್ರದರ್ಶನದಲ್ಲಿ ಜನರನ್ನು ತನ್ನತ್ತ ವಿಶೇಷವಾಗಿ ಸೆಳೆಯುವ ಸೂರ್ಯಕಿರಣ್ ವಿಮಾನ, ಕೆಲವೊಮ್ಮೆ ಭೂಮಿಯ ಸನಿಹಕ್ಕೆ, ಮತ್ತೋಮ್ಮೆ ಏಕಾಏಕಿ ಆಕಾಶದೆತ್ತರಕ್ಕೆ ಅತ್ಯಧಿಕ ವೇಗದಲ್ಲಿ ಸಾಗಿ, ಮಗದೊಮ್ಮೆ ವಿರುದ್ಧ ದಿಕ್ಕಿನಲ್ಲಿ ಸೂರ್ಯಕಿರಣ್ ವಿಮಾನವು ಸಾಗುತ್ತಿದ್ದರೆ ವಾಯುನೆಲೆಗೆ ಬಂದವರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಏರೊ ಇಂಡಿಯಾ ಪೂರ್ವಭ್ಯಾಸದಲ್ಲಿ ಗಮನ ಸೆಳೆದ ಡಕೋಟಾ ವಿಮಾನ :

‘ಡಕೋಟಾ ಡಿ.ಸಿ.3’ ಯುದ್ಧ ವಿಮಾನ ಪೂರ್ವಸಿದ್ಧತಾ ಹಾರಾಟ ನಡೆಸಲು ಆರಂಭಿಸಿದ ಕ್ಷಣದ ಚಿತ್ರ

ಏರ್ ಶೋನಲ್ಲಿ 74 ವರ್ಷಗಳ ಹಿಂದಿನ ‘ಡಕೋಟಾ ಡಿ.ಸಿ.3’ ಯುದ್ಧ ವಿಮಾನ ಪೂರ್ವಸಿದ್ಧತಾ ಹಾರಾಟ ನಡೆಸಿದಾಗ, ದೇಶದ ಅತ್ಯಂತ ಹಳೆಯ ವಿಮಾನವನ್ನು‌ ಕಂಡು ನೋಡುಗರು ಪುಳಕಿತರಾದರು. 1947ರಿಂದ 1971ರವರೆಗೆ ನಾಲ್ಕು ದಶಕಗಳ ಕಾಲ ಭಾರತ ಮಾತೆಗೆ ಸೇವೆ ಸಲ್ಲಿಸಿದ್ದ ‘ಡಕೋಟಾ ಡಿ.ಸಿ.3’ ಯುದ್ಧ ವಿಮಾನ ಹಾರಾಟಕ್ಕೆ ಅಸಮರ್ಥವಾಗಿ ಗುಜರಿಗೆ ಸೇರಿತ್ತು. ಈ ವಿಮಾನ ಬ್ರಿಟನ್‌ನಲ್ಲಿರುವುದನ್ನು ಅರಿತು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು 2011ರಿಂದ ಏಳು ವರ್ಷಗಳ ಕಾಲ ಅಲ್ಲೇ ಅದನ್ನು ದುರಸ್ತಿ ಮಾಡಿಸಿದರು. ನಂತರ ಬ್ರಿಟನ್‌ನಿಂದ ಒಂಬತ್ತು ದಿನಗಳ ಕಾಲ ಹಾರಾಟ ಮಾಡಿ ಕಳೆದ ವರ್ಷ ಭಾರತದ ನೆಲಕ್ಕೆ ಮುತ್ತಿಟ್ಟಈ ವಿಮಾನವನ್ನು ರಾಜೀವ್‌ ಚಂದ್ರಶೇಖರ್‌ ಅವರು 2018ರ ಫೆಬ್ರವರಿಯಲ್ಲಿ ಭಾರತೀಯ ವಾಯುಸೇನೆಗೆ (ಐಎಎಫ್‌) ಕಾಣಿಕೆಯಾಗಿ ಹಸ್ತಾಂತರಿಸಿದರು.

ಡಕೋಟ ಯುದ್ಧ ವಿಮಾನದ ಇತಿಹಾಸ :
ಅಮೆರಿಕದ ಡಗ್ಲಸ್‌ ಏರ್‌ಕ್ರಾಫ್ಟ್‌ ಕಂಪನಿ 1935ರಲ್ಲಿ ಈ ವಿಮಾನ ವಿನ್ಯಾಸ ಮಾಡಿ ಉತ್ಪಾದನೆ ಆರಂಭಿಸಿತ್ತು. 27 ಮಂದಿಯನ್ನು ಹೊತ್ತೊಯ್ಯ ಬಲ್ಲ ಸಾಮರ್ಥ್ಯದ ಈ ವಿಮಾನ ಗಂಟೆಗೆ 346 ಕಿ.ಮೀ. ವೇಗದಲ್ಲಿ ಹಾರಬಲ್ಲದು.

ಪ್ರಥಮ ಬಾರಿಗೆ ಎಚ್ ಎಲ್ ಎಫ್ ಟಿ-42 ವಿಮಾನ‌ ಪ್ರದರ್ಶನ :

ಸೂರ್ಯಕಿರಣ್, ಎಂಐ17, ಹಗುರ ಉಪಯೋಗಿ ಹೆಲಿಕಾಪ್ಟರ್ (LUH), ಸುಧಾರಿತ ಹಗುರ ಹೆಲಿಕಾಪ್ಟರ್ ಎಂಕೆ3 (ALH-MKlll), ಹಗುರ ಯುದ್ಧ ಹೆಲಿಕಾಪ್ಟರ್ (LCH), ತೇಜಸ್ ಯುದ್ಧ ವಿಮಾನ, ಹಾಕ್,  ಸುಖೋಯ್, ಐಜೆಟಿ, ಎಚ್ ಟಿಟಿ-40 ತರಬೇತಿ ವಿಮಾನ, ಸುಖೋಯ್-30 ಎಂಕೆಐ, ಮಿಗ್-29, ಜಾಗ್ವಾರ್‌ ವೈಮಾನಿಕ ಪ್ರದರ್ಶನದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು‌ ಸಿದ್ಧವಾಗಿವೆ. ಎಚ್ ಎಎಲ್ ಇದೇ ಮೊದಲ ಬಾರಿಗೆ ಎಚ್ ಎಲ್ ಎಫ್ ಟಿ-42 (HLFT-42) ಮುಂದಿನ ತಲೆಮಾರಿನ ಸುಧಾರಿತ ಸೂಪರ್ ಸಾನಿಕ್ ತರಬೇತಿ ಜೆಟ್ ವಿಮಾನದ ಸಾಮರ್ಥ್ಯವನ್ನು ನೀಲಾಕಾಶದಲ್ಲಿ ಪ್ರದರ್ಶಿಸಲಿದೆ.

ಎಚ್ ಎಎಲ್ ಇದೇ ಮೊದಲ ಬಾರಿಗೆ ಎಚ್ ಎಲ್ ಎಫ್ ಟಿ-42 ವಿಮಾನದ ಸಾಮರ್ಥ್ಯ ಪ್ರದರ್ಶಿಸಲಿದೆ

ಮೊರಾರ್ಜಿ ವಸತಿ ಶಾಲಾ ಮಕ್ಕಳು ಏರ್ ಶೋನಲ್ಲಿ ಭಾಗಿ :

ಬೆಳಗ್ಗೆ 9.30 ರಿಂದ ಪೂರ್ವಾಹ್ನ 12 ಗಂಟೆಯವರೆಗೆ ಯಲಹಂಕ ವಾಯುನೆಲೆ‌ ಕೇಂದ್ರದಲ್ಲಿ ವಿಮಾನ, ಹೆಲಿಕಾಪ್ಟರ್ ಗಳು ನಡೆಸಿದ ನಡೆದ ಪೂರ್ವಭ್ಯಾಸ ಕಾರ್ಯವನ್ನು ಇದೇ ಮೊದಲ ಬಾರಿ ನೇರವಾಗಿ ಕಂಡ ದೇವನಹಳ್ಳಿ ಕುಂದಾಣ  ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಬಹಳ ಖುಷಿಪಟ್ಟರು. ಈ ಪೂರ್ವಸಿದ್ಧತಾ ವೈಮಾನಿಕ ಪ್ರದರ್ಶನದಲ್ಲಿ ಸರ್ಕಾರಿ ಶಾಲಾ ಮಕ್ಕಳು ಪಾಲ್ಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ್ ವಿಶೇಷ ಮುತುವರ್ಜಿ ವಹಿಸಿ ಸರ್ಕಾರಿ ಶಾಲಾ ಮಕ್ಕಳು ಈ ಮಹತ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಿದ್ದರು.

ಪೂರ್ವಸಿದ್ಧತಾ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಕುಂದಾಣ  ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು

ಈ ಏರ್ ಶೋ ಪೂರ್ವಭ್ಯಾಸ ಏರ್ ಶೋನಲ್ಲಿ ಭಾಗವಹಿಸಿದ
ಧನುಶ್, 9ನೇ ತರಗತಿಯ ವಿದ್ಯಾರ್ಥಿ ಧನುಶ್, “ಏರೊ ಇಂಡಿಯಾ ಶೋ ಚೆನ್ನಾಗಿತ್ತು, ಫಾರ್ಮೇಶನ್ ಚೆನ್ನಾಗಿ ಪ್ರದರ್ಶನ ಮಾಡಿದ್ದರು. ಇದೇ ಮೊದಲ ಬಾರಿಗೆ ಏರೊ ಶೋ‌ ನಲ್ಲಿ ಭಾಗವಹಿಸಿ ವಿಶೇಷ ಅನುಭವವಾಯ್ತು. ಸೂರ್ಯಕಿರಣ್ ವಿಮಾನಗಳು ಬಾನಿನಲ್ಲಿ‌ ರೂಪಿಸಿದ ಹಾರ್ಟ್ ಶೇಪ್ ಚೆನ್ನಾಗಿತ್ತು. ಏರೊ ಇಂಡಿಯಾ ಶೋಗೆ ನನ್ನದೊಂದು ಸಲ್ಯೂಟ್” ಎಂದು ಬೆಂಗಳೂರು ವೈರ್ ಜೊತೆ ತನ್ನ ಸಂತಸ ಹಂಚಿಕೊಂಡನು.

ಇನ್ನು ಅದೇ ಶಾಲೆಯ ವಿದ್ಯಾರ್ಥಿನಿ
ಯಶಸ್ವಿನಿ, “ಬೆಂಗಳೂರು ಗ್ರಾಮಾಂತರದಲ್ಲಿನ ಶಾಲಾ‌ಮಕ್ಕಳಿಗೆ ಏರ್ ಶೋನಲ್ಲಿ ಇಷ್ಟು ಸುಲಭವಾಗಿ ವೀಕ್ಷಿಸಲು ಅವಕಾಶ ಲಭಿಸುತ್ತೆ ಅಂತ ಅಂದುಕೊಂಡಿರಲಿಲ್ಲ. ಯಲಹಂಕ ವಾಯುನೆಲೆಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿ, ಏರ್ ಶೋ ಪ್ರದರ್ಶನ ಕಂಡು ಖುಷಿಯಾಯ್ತು. ಸೂರ್ಯಕಿರಣ್ ಶೋ ಚೆನ್ನಾಗಿತ್ತು. ಎರಡು ಸೂರ್ಯ ಕಿರಣ್ ಮುಖಾ ಮುಖಿಯಾಗಿ ಸಾಗಿದ್ದು ಸಖತ್ ರೋಮಾಂಚನವಾಯ್ತು. 7ನೇ ತರಗತಿಯಿಂದ 10ನೇ ತರಗತಿವರೆಗೆ ಒಟ್ಟು 200 ವಿದ್ಯಾರ್ಥಿಗಳು ನಮ್ಮ ಶಿಕ್ಷಕರೊಂದಿಗೆ ಬಂದಿದ್ದೆವು. ಜೀವನದಲ್ಲಿ ಇದೊಂದು ಅವಿಸ್ಮರಣೀಯ ದಿನ” ಎಂದು ಬಣ್ಣಿಸಿದರು.

ಹೆಬ್ಬಾಳ ವೃತ್ತದಿಂದ ಯಲಹಂಕ ವಾಯುನೆಲೆ ತನಕವೂ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಬೇಸತ್ತು ಹೋದರು.

ಯಲಹಂಕ ವಾಯುನೆಲೆ ಸುತ್ತಮುತ್ತ ಟ್ರಾಫಿಕ್ ದಟ್ಟಣೆ :
ವಾಯುಪಡೆಯ ಸಮೀಪ್ ಏರ್ ಶೋ ಹಿನ್ನಲೆಯಲ್ಲಿ ವಾಯುನೆಲೆಯ ಮುಖ್ಯ ಪ್ರವೇಶದ್ವಾರ ಬಳಿ ರಕ್ಷಣಾ ಪಡೆಯ ವಾಹನಗಳು ಓಡಾಡಲು ಪ್ರತ್ಯೇಕ ಬ್ಯಾರಿಕೇಡ್ ಅಳವಡಿಸಿದ ಕಾರಣ ಬೆಳಗ್ಗೆಯಿಂದಲೇ ಈ ಭಾಗದಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಕಂಡು ಬಂತು. ವಾಯುಪ್ರದರ್ಶನ ಸ್ಥಳಕ್ಕೆ ಬರಲು ಸಾವಿರಾರು ಜನ ಹರಸಾಹಸಪಟ್ಟರು. ಹೆಬ್ಬಾಳದಿಂದ ಯಲಹಂಕ ವಾಯುನೆಲೆ ದಾಟಿದರೂ ಎರಡೂ ಬದಿಯಲ್ಲೂ ವಾಹನ ದಟ್ಟಣೆ ಕಂಡು ಬಂತು.

WhatsApp Join our WhatsApp Channel
Previous Post

BW SPECIAL | BBMP Budget 2023-24 | ಬೆಂಗಳೂರಿನ ಬಜೆಟ್ ಸಲಹಾ ಸಭೆಗೆ ಬೆರಳೆಣಿಕೆ ಜನಪ್ರತಿನಿಧಿಗಳಷ್ಟೇ ಹಾಜರ್! ಇದರ ಹಿಂದಿನ ಕಾರಣ ಏನ್ ಗೊತ್ತಾ?

Next Post

BW EXCLUSIVE | #Lithium | ಜಮ್ಮು ಮತ್ತು ಕಾಶ್ಮೀರದಲ್ಲಿ ಲೀಥಿಯಂ ಖನಿಜ ನಿಕ್ಷೇಪ ಕಂಡು ಬಂದಿದ್ದು ಈಗಲ್ಲ 1997ರಲ್ಲಿ!! : ಜಿಎಸ್ಐ ನೀಡಿದ್ದ ಆ ವರದಿಯಲ್ಲೇನಿತ್ತು?

Next Post

BW EXCLUSIVE | #Lithium | ಜಮ್ಮು ಮತ್ತು ಕಾಶ್ಮೀರದಲ್ಲಿ ಲೀಥಿಯಂ ಖನಿಜ ನಿಕ್ಷೇಪ ಕಂಡು ಬಂದಿದ್ದು ಈಗಲ್ಲ 1997ರಲ್ಲಿ!! : ಜಿಎಸ್ಐ ನೀಡಿದ್ದ ಆ ವರದಿಯಲ್ಲೇನಿತ್ತು?

Aeroindia2023 |ಗಮನಿಸಿ…!! : ಫೆ.13 ರಿಂದ ಏರ್ ಶೋ ಹಿನ್ನಲೆ - ಹಲವು ಕಡೆ ತಾತ್ಕಾಲಿಕ ವಾಹನ ಸಂಚಾರದಲ್ಲಿ ಬದಲಾವಣೆ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group