Sunday, September 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

  • Bengaluru Focus

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

KASHMIR SHARADA TEMPLE | ಕಾಶ್ಮೀರದ ಗಡಿ ದೇವಸ್ಥಾನಕ್ಕೆ ಶೃಂಗೇರಿ ಪೀಠದಿಂದ ಪಂಚಲೋಹ ಶಾರದಾ ವಿಗ್ರಹ ಹಸ್ತಾಂತರ

ಕಾಶ್ಮೀರದ ಶಾರದಾ ಸಂರಕ್ಷಣಾ ಸಮಿತಿಯವರಿಗೆ ಆಶೀರ್ವವಾದ ಮಾಡಿ 100 ಕೆಜಿ ತೂಕದ 3 ಅಡಿಯ ಸುಂದರ ಶಾರದಾ ವಿಗ್ರಹವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶೃಂಗೇರಿ ಮಠದ ಜಗದ್ಗುರುಗಳು ಹಸ್ತಾಂತರಿಸಿದರು.

by Bengaluru Wire Desk
October 5, 2022
in News Wire, Public interest
Reading Time: 2 mins read
0
ಕಾಶ್ಮೀರದ ತೀತ್ವಾಲ್ ನ ನೂತನ ಶಾರದಾ ದೇವಸ್ಥಾನಕ್ಕೆ ಶೃಂಗೇರಿ ಮಠದಿಂದ ನೀಡುತ್ತಿರುವ ಶಾರದಾ ದೇವಿ ಪಂಚಲೋಹ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿರುವ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮಿಗಳು. ಚಿತ್ರಕೃಪೆ : ಶೃಂಗೇರಿ ಮಠ

ಕಾಶ್ಮೀರದ ತೀತ್ವಾಲ್ ನ ನೂತನ ಶಾರದಾ ದೇವಸ್ಥಾನಕ್ಕೆ ಶೃಂಗೇರಿ ಮಠದಿಂದ ನೀಡುತ್ತಿರುವ ಶಾರದಾ ದೇವಿ ಪಂಚಲೋಹ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿರುವ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮಿಗಳು. ಚಿತ್ರಕೃಪೆ : ಶೃಂಗೇರಿ ಮಠ

ಶೃಂಗೇರಿ, ಅ.5 www.bengaluruwire : ಕಾಶ್ಮೀರ ನಿಯಂತ್ರಣ ರೇಖೆ ತೀತ್ವಾಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಶಾರದಾ ಯಾತ್ರೆ ದೇವಸ್ಥಾನಕ್ಕಾಗಿ ವಿಜಯದಶಮಿಯ ದಿನವಾದ ಬುಧವಾರ ಇಲ್ಲಿ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಶೃಂಗೇರಿ ಶಾರದಾ ಪೀಠದ ಹಿರಿಯ ಶ್ರೀಗಳಾದ ಶ್ರೀ ಭಾರತೀ ತೀರ್ಥ ಸ್ವಾಮಿಜಿ ಹಾಗೂ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮಿಜಿಯವರು ಶಾರದಾ ಮೂರ್ತಿಯನ್ನು ಕಾಶ್ಮೀರ ಉಳಿಸಿ ಶಾರದಾ ಸಮಿತಿಯವರಿಗೆ ಆಶೀರ್ವದಿಸಿ ಹಸ್ತಾಂತರಿಸಿದರು.

ವಿಜಯದಶಮಿಯ ಶುಭದಿನ ದಂದು ಬೆಳಗ್ಗೆ ಶೃಂಗೇರಿಯಲ್ಲಿ ನಡೆದ ಪವಿತ್ರ ಕಾರ್ಯಕ್ರಮದಲ್ಲಿ 100 ಕೆಜಿ ತೂಕದ ಈ 3 ಅಡಿ ತೂಕದ ಸುಂದರ ಶಾರದಾ ದೇವಿಯ ಮೂರ್ತಿಗೆ ಉಭಯ ಶ್ರೀಗಳು ಪೂಜೆ ನೆರವೇರಿಸಿದರು. ಬಳಿಕ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು, ಬಳಿಕ ಸೇವ್ ಶಾರದಾ ಸಮಿತಿ ಅಧ್ಯಕ್ಷ ರವೀಂದರ್ ಪಂಡಿತ ಅವರ ನೇತೃತ್ವದ ನಿಯೋಗಕ್ಕೆ ಮೂರ್ತಿಯನ್ನು ನೀಡಿದರು. ಮುಂದಿನ ವರ್ಷದ ಆರಂಭದಲ್ಲಿ ತೀತ್ವಾಲ್ ಗೆ ಈ ಮೂರ್ತಿಯನ್ನು ಯಾತ್ರೆಯಲ್ಲಿ ಕೊಂಡೊಯ್ದು, ಅಲ್ಲಿನ  ಹೊಸ ಶಾರದಾ ಯಾತ್ರಾ ದೇವಸ್ಥಾನದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಪಂಚಲೋಹದ ಶಾರದಾ ವಿಗ್ರಹ, ಅದರ ಪೀಠ ಹಾಗೂ ಪ್ರಭಾವಳಿ ಸೇರಿದಂತೆ ಒಟ್ಟು 400 ಕೆಜಿ ತೂಕವನ್ನು ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾರದಾ ಉಳಿಸಿ ಸಮಿತಿ ಸಂಸ್ಥಾಪಕ ರವೀಂದರ್ ಪಂಡಿತ್, 1947 ರ ತೀತ್ವಾಲ್‌ನಲ್ಲಿ ಕಳೆದುಹೋದ ಪರಂಪರೆಯನ್ನು ಮರಳಿ ಪಡೆಯಲು ಶೃಂಗೇರಿ ಮಠವು ತಮ್ಮ ಸಮಿತಿಗೆ ಬೆಂಬಲ ನೀಡಿದಕ್ಕಾಗಿ ತಾವು ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

ಇದೊಂದು ಐತಿಹಾಸಿಕ ಕ್ಷಣ :

“1947 ರಲ್ಲಿ ತೀತ್ವಾಲ್‌ನಲ್ಲಿ ದಾಳಿಯ ಸಮಯದಲ್ಲಿ ಇಲ್ಲಿನ ಧರ್ಮಶಾಲಾ ಮತ್ತು ಸಿಖ್ ಗುರುದ್ವಾರ ಸಂಪೂರ್ಣವಾಗಿ ದಹಿಸಲ್ಪಟ್ಟಿತ್ತು. 2021 ರ ಸೆಪ್ಟೆಂಬರ್‌ನಲ್ಲಿ ನಮ್ಮ ವಾರ್ಷಿಕ ಯಾತ್ರೆಯಲ್ಲಿ ನಾವು ಸ್ಥಳೀಯರಿಂದ ದೇವಸ್ಥಾನಕ್ಕೆ ಭೂಮಿಯನ್ನು ಪಡೆದುಕೊಂಡಿದ್ದೆವು.  ಸ್ವಾತಂತ್ರ್ಯ ಪೂರ್ವದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಶಾರದಾ ಪೀಠವು ಸೇರ್ಪಡೆಯಾಗಿತ್ತು. ಹಾಗಾಗಿ ಅಧಿಕೃತ ಚಾರ್ರಿ ಮುಬಾರಕ್, ಆ ದಿನಗಳಲ್ಲಿ ತೀತ್ವಾಲ್‌ನಿಂದ ಚಿಲ್ಹಾನಾ ಮೂಲಕ ಆಗ ಶಾರದಾ ಪೀಠಕ್ಕೆ ಹೋಗುತ್ತಿದ್ದರು.” ಎಂದು ತಿಳಿಸಿದರು.

ಈಗ ತೀತ್ವಾಲ್ ನಲ್ಲಿಯೇ ಶಾರದಾ ಯಾತ್ರೆಯ ಪರಿಕ್ರಮ ಪ್ರಾರಂಭವಾಗುವ ಸ್ಥಳದಲ್ಲಿಯೇ ಶಾರದಾ ದೇವಿ ದೇವಸ್ಥಾನ ನಿರ್ಮಿಸುತ್ತಿದ್ದು, ಆ ದೇವಸ್ಥಾನಕ್ಕೆ ಶೃಂಗೇರಿ ಪೀಠದಿಂದ ಪಂಚಲೋಹದ ವಿಗ್ರಹ ಪಡೆಯುತ್ತಿರುವುದು ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ರವೀಂದರ್ ಪಂಡಿತ ಹೇಳಿದರು.

ಶಾರದಾ ದೇವಿ ಪಂಚಲೋಹ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿರುವ ಶ್ರೀ ವಿಧುಶೇಖರ ಭಾರತೀ ಶ್ರೀಗಳು

ಪಾರಂಪರಿಕ ದೇವಾಲಯದ ಕಾಮಗಾರಿಯು ಈ ನವೆಂಬರ್‌ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಹಾಗೂ ಪ್ರತಿಷ್ಠಾಪನೆ ಮತ್ತು ಅಂತಿಮ ಉದ್ಘಾಟನೆಗಾಗಿ ಮೂರ್ತಿಯನ್ನು ಮುಂದಿನ ವರ್ಷದ ಆರಂಭದಲ್ಲಿ ತೀತ್ವಾಲ್‌ಗೆ ಕೊಂಡೊಯ್ಯಲಾಗುತ್ತದೆ. ಏತನ್ಮಧ್ಯೆ, ಸಮಿತಿಯು ಸಿಖ್ ಗುರುದ್ವಾರವನ್ನು ನಿರ್ಮಿಸುತ್ತಿದೆ.  ಅದರ ಕೆಲಸವು ಬಹುತೇಕ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ಮುಂದಿನ ವರ್ಷ ನೂತನ ದೇವಸ್ಥಾನದ ಕುಂಭಾಭಿಷೇಕ :

ಶೃಂಗೇರಿ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ವಿ.ಆರ್.ಗೌರಿಶಂಕರ ಅವರು ಮಾತನಾಡಿ, ಹೊಸ ಶಾರದಾ ದೇವಿ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಸನಾತನ ಧರ್ಮದ ಅನುಯಾಯಿಗಳಿಗೆ ಹೆಮ್ಮೆಯ ವಿಚಾರವಾಗಿದೆ. ಸನಾತನ ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬರು ಈ ಪ್ರಮುಖ ಯೋಜನೆಗೆ ಬೆಂಬಲ ನೀಡಬೇಕಾಗಿರುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. 1200 ವರ್ಷಗಳ ಹಿಂದೆ ಆದಿ ಶಂಕರಾಚಾರ್ಯರು ಈಗಿನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶ್ರೀ ಶಾರದಾ ಸರ್ವಜ್ಞ ಪೀಠಕ್ಕೆ ಭೇಟಿ ನೀಡಿ ಅವರೋಹಣ ನಡೆಸಿದರು. ಹಿಂದುಗಳ ಪವಿತ್ರ ಸ್ಥಳವಾದ ಶ್ರೀ ಸರ್ವಜ್ಞ ಪೀಠಕ್ಕೆ ನಿರಂತರವಾಗಿ ಯಾತ್ರೆ ಆರಂಭಿಸುವ ಬಗ್ಗೆ ಪ್ರಯತ್ನಗಳು ನಡೆದಿದೆ. ಶೃಂಗೇರಿ ಜಗದ್ಗುರುಗಳ ಆಶೀರ್ವಾದಿಂದ ಮುಂದಿನ ವರ್ಷ ನೂತನ ದೇವಸ್ಥಾನದ ಕುಂಭಾಭಿಷೇಕ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದ್ದಾರೆ.

ಶಾರದಾ ಯಾತ್ರೆ ಪುನಃ ಆರಂಭಿಸುವ ಉದ್ದೇಶ :

ಶೃಂಗೇರಿ ಮಠದ ಶ್ರೀಗಳಿಂದ ಕಾಶ್ಮೀರದ ಶಾರದಾ ಸಂರಕ್ಷಣಾ ಸಮಿತಿಯವರಿಗೆ ಶಾರದಾ ವಿಗ್ರಹ ಹಸ್ತಾಂತರಿಸಿದ ಕ್ಷಣ

ಕಾಶ್ಮೀರದ ಶಾರದಾ ಸಂರಕ್ಷಣಾ ಸಮಿತಿಯ ಸಂಚಾಲಕ ಹಾಗೂ ಹಿರಿಯ ಪತ್ರಕರ್ತ ಮಂಜುನಾಥ ಶರ್ಮ ಮಾತನಾಡಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇದ್ದ ಐತಿಹಾಸಿಕ ಶ್ರೀ ಶಾರದಾ ದೇವಿ ದೇವಸ್ಥಾನ ಆಕ್ರಮಣಕಾರರ ದಾಳಿಗೆ ಭಗ್ನಗೊಂಡ ಬಳಿಕ, ಆ ತಾಯಿಗೆ ನೆಲೆ ಇಲ್ಲದೆ ಪೂಜೆಯು ನಿಂತು ಹೋಗಿತ್ತು. ಹಾಗಾಗಿ ಅಲ್ಲಿನ ಪರಂಪರೆಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಗಡಿ ಗ್ರಾಮ ತೀತ್ವಾಲ್ ನಲ್ಲಿ ಶಾರದಾ ದೇವಸ್ಥಾನ ನಿರ್ಮಾಣ ಮಾಡುವ ಯೋಜನೆ ಬಗ್ಗೆ ಶೃಂಗೇರಿ ಮಠದ ಉಭಯ ಶ್ರೀಗಳು ಸಮ್ಮತಿ ಸೂಚಿಸಿ, ತಮ್ಮ ಬೆಂಬಲವನ್ನು ಘೋಷಿಸಿದರು. ಅದಾದ ಬಳಿಕ ಮಠದ ಭಕ್ತರು, ದೇವಿಯ ಅನುಯಾಯಿಗಳ ನೆರವಿನಿಂದ ಕೇವಲ 5 ತಿಂಗಳ ದಾಖಲೆ ಅವಧಿಯಲ್ಲಿ ದೇವಸ್ಥಾನದ ಕಲ್ಲಿನ ಕಟ್ಟಡದ ನಿರ್ಮಾಣ ಕಾಮಗಾರಿ ಮುಗಿಸಿ, ಮೇಲ್ಛಾವಣಿ ಕೆಲಸ ಭರದಿಂದ ನಡೆಯುತ್ತಿದೆ ಎಂದು ವಿವರಿಸಿದರು.

ದೇವಸ್ಥಾನ ಕಾಮಗಾರಿಗೆ ಸಣ್ಣ ಮೊತ್ತದ ದೇಣಿಗೆ ಸಂಗ್ರಹಕ್ಕೂ ಒತ್ತು :

ಈ ದೇವಸ್ಥಾನಕ್ಕೆ ನಾಲ್ಕು ಬಾಗಿಲುಗಳಿದ್ದು, ಇದು ಸನಾತನ ಧರ್ಮದಲ್ಲಿನ ನಾಲ್ಕು ವೇದಗಳ ಸಂಕೇತವಾಗಿದೆ. ವಿಶೇಷವಾಗಿ ದಾನಿಗಳಿಂದಲೇ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ಉದಾರ ದೇಣಿಗೆಯ ಅವಶ್ಯಕತೆಯಿದ್ದು, ವಿದ್ಯಾ ದೇವತೆ ಸರಸ್ವತಿ ಮಾತೆಗೆ ಒಂದು ದೇಗುಲ ನಿರ್ಮಿಸುವ ಸದುದ್ದೇಶವಿದೆ. ಹೀಗಾಗಿ ದೊಡ್ಡ ಮೊತ್ತದ ಜೊತೆಗೆ ಸಣ್ಣ ದೇಣಿಗೆ ಮಾಡಲು ಒತ್ತು ನೀಡಲಾಗಿದೆ. ತೀತ್ವಾಲ್ ಶಾರದಾ ದೇವಿ ದೇವಸ್ಥಾನದಲ್ಲಿ ಇನ್ನು ಮರದ ಬಾಗಿಲು ಕೆಲಸ, ಅರ್ಚಕರಿಗೆ ಮನೆ, ಯಾತ್ರಿಗಳಿಗೆ ಧರ್ಮಶಾಲೆ, ನೈವೇದ್ಯ ಸಿದ್ಧತೆಗೆ ಪಾಕಶಾಲೆ ಇತ್ಯಾದಿ ಕೆಲಸಗಳು ಬಾಕಿಯಿದೆ. ಈಗಲೂ ದಾನಿಗಳು ಮುಂದೆ ಬಂದು ಶಾರದಾ ದೇವಸ್ಥಾನ ನಿರ್ಮಾಣಕ್ಕೆ ಕಾಣಿಕೆ ಸಲ್ಲಿಸಬಹುದು ಎಂದು ಮಂಜುನಾಥ್ ಶರ್ಮ ವಿನಂತಿಸಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

‘ನಾದದ ನವನೀತ’ ಸಾಕ್ಷ್ಯಾಚಿತ್ರ ಪ್ರಶಸ್ತಿ ಕುರಿತ ವಿವಾದಕ್ಕೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ತೆರೆ

Next Post

#KantaraMovie | ಆರು ದಿನಗಳಲ್ಲೇ ‘ಕಾಂತಾರ’ ಸಿನಿಮಾ ಗಳಿಸಿದ್ದೆಷ್ಟು? ಎಷ್ಟು ಭಾಷೆಗಳಲ್ಲಿ ಸೆನ್ಸರ್ ಮಂಡಳಿಗೆ ಹೋಗಿದೆ? ಇಲ್ಲಿದೆ Special Report.

Next Post

#KantaraMovie | ಆರು ದಿನಗಳಲ್ಲೇ 'ಕಾಂತಾರ' ಸಿನಿಮಾ ಗಳಿಸಿದ್ದೆಷ್ಟು? ಎಷ್ಟು ಭಾಷೆಗಳಲ್ಲಿ ಸೆನ್ಸರ್ ಮಂಡಳಿಗೆ ಹೋಗಿದೆ? ಇಲ್ಲಿದೆ Special Report.

ಸಾಂದರ್ಭಿಕ ಚಿತ್ರ

BWSSB NEWS | ಬೆಂಗಳೂರಿನ ಈ ಭಾಗಗಳಲ್ಲಿ ನಾಳೆ ಕಾವೇರಿ ನೀರು ಪೂರೈಕೆ ಬಂದ್....!

Please login to join discussion

Like Us on Facebook

Follow Us on Twitter

Recent News

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

September 20, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d