Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW Special | BBMP NEWS | ಪರ್ಮನೆಂಟ್ ಪ್ರಚಾರಕ್ಕೆ ಚರಂಡಿ ಸ್ಲಾಬ್ ಮೇಲೆ “MUNIRATHNA MLA” ಅಚ್ಚು…! : ಎಲೆಕ್ಷನ್ ಗಿಮಿಕ್ ಗೆ ಹೊಸ ತಂತ್ರ?

ಸಾರ್ವಜನಿಕರ ತೆರಿಗೆ ಹಣ ಬಳಸಿ ಶಾಸಕ ಮತ್ತು ಸಚಿವ ಮುನಿರತ್ನ ಅವರ ಹೆಸರನ್ನು ಸ್ಲಾಬ್ ಮೇಲೆ ಹಾಕಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತ | ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಜನಪ್ರತಿನಿಧಿಗಳ ಪಟ್ಟು

by Bengaluru Wire Desk
January 12, 2023
in Bengaluru Focus, BW Special, Public interest
Reading Time: 2 mins read
0
ಶಾಸಕ ಮುನಿರತ್ನ ಅವರ ಹೆಸರು ಇರುವ ಚರಂಡಿ ಮೇಲಿನ ಸ್ಲಾಬ್ ಚಿತ್ರ

ಶಾಸಕ ಮುನಿರತ್ನ ಅವರ ಹೆಸರು ಇರುವ ಚರಂಡಿ ಮೇಲಿನ ಸ್ಲಾಬ್ ಚಿತ್ರ

ಬೆಂಗಳೂರು, ಜು.27 www.bengaluruwire.com :  ಪ್ರಚಾರಕ್ಕಾಗಿ ಕೆಲವು ಜನಪ್ರತಿನಿಧಿಗಳು, ಅವರ ಬೆಂಬಲಿಗರು ಫ್ಲೆಕ್ಸ್, ಬ್ಯಾನರ್ಸ್ ನಿಷೇಧ ಹೇರಿದ್ರೂ ನಿಯಮ ಉಲ್ಲಂಘಿಸಿ ಊರು ತುಂಬಾ ಬ್ಯಾನರ್, ಬಂಟಿಂಗ್ಸ್ ಹಾಕೋದನ್ನು ನೋಡಿದ್ದೀವಿ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿನ ಜನಪ್ರತಿನಿಧಿಗಳು ಪ್ರಚಾರಕ್ಕಾಗಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಸುವ ವಾರ್ಡ್ ಕಾಮಗಾರಿಗಳಲ್ಲೂ ಶಾಶ್ವತವಾಗಿ ಅವರ ಹೆಸರು ಉಳಿಯುವಂತೆ ಮಾಡಲು ರಸ್ತೆ ಬದಿಯ ಮೋರಿ ಮೇಲಿನ ಪ್ರೀಕಾಸ್ಟ್ ಸ್ಲಾಬ್ ಆಯ್ದುಕೊಂಡಿದ್ದಾರೆ. 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಏಳೆಂಟು ತಿಂಗಳು ಬಾಕಿ ಇರುವಾಗಲೇ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಸಚಿವ ಮುನಿರತ್ನ ಅವರು ಮೋರಿ ಸಿಮೆಂಟ್ ಸ್ಲಾಬ್ ಮೇಲೆ “MUNIRATHNA MLA” ಎಂದು ಅಚ್ಚನ್ನು ಹಾಕಿಸಿ ಆ ಸ್ಲಾಬ್ ಗಳನ್ನು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಗಳಲ್ಲಿ ಹಾಕಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಪರ- ವಿರೋಧದ ಚರ್ಚೆಗೆ ನಾಂದಿ ಹಾಡಿದೆ.

ಮೋರಿ ಸ್ಲಾಬ್ ಮೇಲೆ ಜನಪ್ರತಿನಿಧಿಯೊಬ್ಬರ ಹೆಸರು ಮತ್ತು ಹುದ್ದೆಯನ್ನು ಅಚ್ಚೊತ್ತಿಸಿರುವ ಪ್ರಕರಣ ಬಹುಶಃ ದೇಶದಲ್ಲೇ ಮೊದಲಿರಬೇಕು. ಮುಂದಿನ ದಿನಗಳಲ್ಲಿ ಬೇರೆ ಜನಪ್ರತಿನಿಧಿಗಳು ಇದೇ ಮಾರ್ಗ ಹಿಡಿದರೆ, ಸಾರ್ವಜನಿಕರ ತೆರಿಗೆ ಹಣದಲ್ಲಿ ಕೈಗೊಳ್ಳುವ ಕಾಮಗಾರಿಗಳ ಮೇಲೆ ಬರೀ ಜನಪ್ರತಿನಿಧಿಗಳ ಹೆಸರೇ ಕಣ್ಣಿಗೆ ರಾಚುವುದರಲ್ಲಿ ಆಶ್ಚರ್ಯವಿಲ್ಲ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಪ್ರಜ್ಞ ನಾಗರೀಕರು ಈ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರು ವೈರ್, ಶಾಸಕರಾದ ಮುನಿರತ್ನ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಸದ್ಯ ಯಶವಂತಪುರ, ಲಗ್ಗೆರೆ ವಾರ್ಡ್ ಗಳಲ್ಲಿನ ರಸ್ತೆಬದಿಯ ಕಾರ್ನರ್ ಗಳಲ್ಲಿ ಮೋರಿ ಮೇಲಿನ ಸ್ಲಾಬ್ ಗಳ ಮೇಲೆ ಶಾಸಕ ಮುನಿರತ್ನ ಎಂಬ ಆಂಗ್ಲಭಾಷೆಯಲ್ಲಿ ಹೆಸರಿರುವ 8 ಇಂಚು ದಪ್ಪ ಹಾಗೂ 2×4 ಹಾಗೂ 2×3 ಅಡಿಯ ಪ್ರೀಕ್ಯಾಸ್ಟ್ ಸ್ಲಾಬ್ ಹಾಕುವ ಕಾಮಗಾರಿ ಮುಗಿಸಲಾಗಿದ್ದು, ಸದ್ಯ ಜೆಪಿ ಪಾರ್ಕ್ ವಾರ್ಡ್ ನಲ್ಲಿ ರಸ್ತೆ ಬದಿಯ ಮೋರಿಯಲ್ಲಿನ ಹೂಳೆತ್ತಿ ಕಾರ್ನರ್ ಗಳಲ್ಲಿ ಪ್ರೀಕ್ಯಾಸ್ಟ್ ಸಿಮೆಂಟ್ ಸ್ಲಾಬ್ ಹಾಕಲಾಗುತ್ತಿದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮೋರಿ ಮೇಲೆ ಸ್ಲಾಬ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವ ಚಿತ್ರ

ಈತನಕ ಶಾಸಕ ಹೆಸರಿರುವ 300 ಸ್ಲಾಬ್ ಅಳವಡಿಕೆ :

“ಯಶವಂತಪುರ ವಾರ್ಡ್ ನಲ್ಲಿ ರಸ್ತೆಬದಿ ಮೋರಿಗಳಲ್ಲಿ ಹೂಳು ತೆಗೆದು, ಕಾರ್ನರ್ ಜಾಗದಲ್ಲಿ 300 ಪ್ರೀಕ್ಯಾಸ್ಟ್ ಸ್ಲಾಬ್ ಅಳವಡಿಸಲಾಗಿದೆ. ಶಾಸಕ ಮುನಿರತ್ನ ಅವರ ಹೆಸರನ್ನು ಸ್ಲಾಬ್ ಮೇಲೆ ಅಳವಡಿಸಲು ನಾವೇ ಸ್ವಯಂಪ್ರೇರಿತವಾಗಿ ಹಾಕಿರೋದು. ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇವೆ. ಕೆಲವು ಸಾರ್ವಜನಿಕರು ಸ್ಲಾಬ್ ಮೇಲೆ ಶಾಸಕರ ಹೆಸರಿದ್ದು, ಅದರ ಮೇಲೆ ತುಳಿದುಕೊಂಡು ಓಡಾಡೋಕೆ ಮುಜುಗರಪಡುತ್ತಿದ್ದಾರೆ. ಆ ಸ್ಲಾಬ್ ಹಾಗೂ ಸುತ್ತಮುತ್ತಲ ಜಾಗ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಆಲೋಚನೆ ಮಾಡಿದ್ದೇವೆ. ಕಾರ್ನರ್ ಸ್ಲಾಬ್ ಲಾರಿ ಮತ್ತಿತರ ದೊಡ್ಡ ಗಾಡಿಗಳು ಹಾದುಹೋಗುವಾಗ ಸ್ಲಾಬ್ ಹಾಳಾಗಬಾರದೆಂಬ ಕಾರಣಕ್ಕೆ 8 ಇಂಟು ದಪ್ಪದ ಸ್ಲಾಬ್ ಹಾಕಿದ್ದೇವೆ. ಉಳಿದೆಡೆ 6 ಇಂಚಿನ ಸ್ಲಾಬ್ ಹಾಕಿದ್ದೇವೆ.”

– ಸುರೇಶ್, ಗುತ್ತಿಗೆ ಸಂಸ್ಥೆಯ ಸೂಪರ್ ವೈಸರ್

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಸರ್ಕಾರ ಬಿಬಿಎಂಪಿಯ ವಾರ್ಡ್ ಕಾಮಗಾರಿ ನಡೆಸಲು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಬರೋಬ್ಬರಿ 208 ಕೋಟಿ ರೂ. ಹಣವನ್ನು ಮಂಜೂರು ಮಾಡಿದೆ. ರಾಜ್ಯ ಸರ್ಕಾರದ ಮಂತ್ರಿ ಸ್ಥಾನದಲ್ಲಿರುವ ಪ್ರಭಾವಿ ರಾಜಕಾರಣಿ ಮುನಿರತ್ನ ಅವರ ಸೂಚನೆಯಿಲ್ಲದೆ ರಾಜರಾಜೇಶ್ವರಿನ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕಾಮಗಾರಿಯು ನಡೆಯದು ಎಂಬ ಮಾತಿದೆ.  ಇಲ್ಲಿ ಗುತ್ತಿಗೆದಾರರ ಕಡೆಯವರು ಹೇಳುವಂತೆ ತಾವು ಸ್ವಯಂಪ್ರೇರಿತವಾಗಿ ಶಾಸಕರ ಹೆಸರನ್ನು ಸ್ಲಾಬ್ ಮೇಲೆ ಹಾಕಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನು ಶಾಸಕರ ಗಮನಕ್ಕೂ ತಂದಿದ್ದೇವೆ ಅಂತ ತಿಳಿಸಿದ್ದಾರೆ. ಇಷ್ಟೆಲ್ಲಾ ಗೊತ್ತಿದ್ದರೂ ಶಾಸಕ ಮುನಿರತ್ನ ಅವರು ಏಕೆ ಸುಮ್ಮನಿದ್ದರೂ? ಎಂಬ ಪ್ರಶ್ನೆ ಯಾರಿಗಾದರೂ ಕಾಡದೆಯಿರದು. ಇನ್ನೊಂದೆಡೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಶಾಸಕ ಮುನಿರತ್ನ ಹೆಸರನ್ನು ಮೋರಿ ಸ್ಲಾಬ್ ಮೇಲೆ ಹಾಕಲಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳು ಟೀಕೆ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ

ಬಿಬಿಎಂಪಿ ಮುಖ್ಯ ಆಯುಕ್ತರು ಕೂಡಲೇ ಕ್ರಮ ಕೈಗೊಳ್ಳಬೇಕು :

“ಹೈಕೋರ್ಟ್ ಆದೇಶದ ಪ್ರಕಾರ ಸಾರ್ವಜನಿಕರ ಕಾಮಗಾರಿಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಕದಂತೆ ನಿರ್ಬಂಧವಿದೆ. ಆದರೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮತ್ತು ಸಚಿವರಾದ ಮುನಿರತ್ನ, ತಮ್ಮ ವ್ಯಾಪ್ತಿಯ ವಾರ್ಡ್ ಕಾಮಗಾರಿಗಳಲ್ಲಿ ಮೋರಿ ಪ್ರೀಕ್ಯಾಸ್ಟ್ ಸಿಮೆಂಟ್ ಸ್ಲಾಬ್ ಮೇಲೆ ತಮ್ಮ ಹೆಸರು ಹಾಕುತ್ತಿರುವುದು ಸರಿಯಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ಈ ರೀತಿ ಪ್ರಚಾರ ಪಡೆಯುವುದು ಸೂಕ್ತವಲ್ಲ. ತಮ್ಮ ಸ್ವಂತ ಹಣ ಹಾಕಿ ಈ ಕಾಮಗಾರಿ ನಡೆಸಿದ್ದರೂ ಸಾರ್ವಜನಿಕ ಕಾಮಗಾರಿ ವಿಷಯದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.”

– ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರು

ರಸ್ತೆ ಎರಡು ಮೂಲೆ ಸೇರುವ ಜಾಗದಲ್ಲಿ ಸಿಮೆಂಟ್ ಕಾಂಕ್ರಿಟ್ ಇರುವ ಪ್ರೀಕ್ಯಾಸ್ಟ್ ಸ್ಲಾಬ್ ಅಳವಡಿಸಲು ಹೆಚ್ಚು ಆಸಕ್ತಿ ತೋರುವ ಗುತ್ತಿಗೆದಾರರು, ಹಲವು ಕಡೆಗಳಲ್ಲಿ ಮೋರಿ ಹೂಳು ತೆಗೆಯದೆ ಸ್ಲಾಬ್ ಅಳವಡಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಶಾಸಕರ ಹೆಸರನ್ನು ಶಾಶ್ವತವಾಗಿ ಸ್ಲಾಬ್ ಮೇಲೆ ಅಚ್ಚೊತ್ತಿಸಿರುವ ಕಾಮಗಾರಿ ನಡೆಸುತ್ತಿರುವ ಬಗ್ಗೆ ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯ ಚೀಫ್ ಎಂಜಿನಿಯರ್ ವಿಜಯ್ ಕುಮಾರ್ ಅವರನ್ನು ಬೆಂಗಳೂರು ವೈರ್ ಪ್ರಶ್ನಿಸಿತು.

MLA ಹೆಸರಿನ ಸ್ಲಾಬ್ ಅಳವಡಿಕೆ ಬಗ್ಗೆ ದೂರುಗಳು ಬಂದಿದೆ :

“ರಾಜರಾಜೇಶ್ವರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ಅವರ ಹೆಸರನ್ನು ಮೋರಿ ಸ್ಲಾಬ್ ಮೇಲೆ ಹಾಕಲಾಗುತ್ತಿದೆ ಎಂಬ ಬಗ್ಗೆ ಎರಡು- ಮೂರು ದೂರುಗಳ ಬಂದಿದೆ. ಸಾರ್ವಜನಿಕ ಕಾಮಗಾರಿಗಳಲ್ಲಿ ಶಾಸಕರ ಫೊಟೋ ಹಾಕುವಂತಿಲ್ಲ ಎಂಬ ಬಗ್ಗೆ ತಿಳಿದಿದೆ. ಆದರೆ ಚರಂಡಿ ಕಾಮಗಾರಿಗಳಲ್ಲಿ ಶಾಸಕರ ಹೆಸರು ಅಚ್ಚೊತ್ತಿರುವ ಸ್ಲಾಬ್ ಅಳವಡಿಸುತ್ತಿರುವ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ.”

– ವಿಜಯ್ ಕುಮಾರ್, ಮುಖ್ಯ ಅಭಿಯಂತರರು, ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯ

ಪರ್ಮನೆಂಟ್ ಪ್ರಚಾರಕ್ಕೆ ನಗರದಲ್ಲಿರುವ ಎಲ್ಲಾ ಜನಪ್ರತಿನಿಧಿಗಳೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರವನ್ನು ಅನುಸರಿಸೋಕೆ ಶುರು ಮಾಡಿದ್ರೆ, ಬೆಂಗಳೂರಿನಲ್ಲಿ ಬ್ಯಾನರ್, ಬಂಟಿಂಗ್ಸ್, ಸಾರ್ವಜನಿಕ ಜಾಹೀರಾತು ನಿಷೇಧ ಮಾಡಿಯೂ ಪ್ರಯೋಜನ ಇಲ್ಲದಂತಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಜನಪ್ರತಿನಿಧಿಗಳ ಹೆಸರು, ಭಾವಚಿತ್ರವಿರುವ ಬಸ್ ಸ್ಟ್ಯಾಂಡ್, ರಸ್ತೆ ನಾಮಫಲಕ ಮತ್ತಿತರ ಕಡೆ ಟೇಪ್ ಹಾಕಿ ಅವುಗಳನ್ನು ಮುಚ್ಚಬಹುದು. ಆದರೆ ಪಾದಚಾರಿ ಮಾರ್ಗದಲ್ಲಿ ಊರಿಡಿ ಹಾಕಿರುವ ಸ್ಲಾಬ್ ಅನ್ನು ಹೇಗೆ ಮುಚ್ಚುತ್ತಾರೆ? ನಾಗರೀಕರ ತೆರಿಗೆ ಹಣದಲ್ಲಿ ಈ ರೀತಿ ಪ್ರಚಾರ ಮಾರ್ಗ ಹಿಡಿದಿರುವುದು ಸರಿಯೇ?

WhatsApp Join our WhatsApp Channel
Previous Post

Red sandalWood Seize | ನೀರಿನ ಸಂಪ್ ನಲ್ಲಿ ಬಚ್ಚಿಟ್ಟಿದ್ದರು 1693 ಕೆ.ಜಿ ರಕ್ತ ಚಂದನ‌ ವಶ: ಒಬ್ಬ ಅರೆಸ್ಟ್

Next Post

Free Power To SC- ST Families | ರಾಜ್ಯದ ಎಸ್ ಸಿ-ಎಸ್ ಟಿ ವಿದ್ಯುತ್ ಗ್ರಾಹಕರಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆ : ಈ ಸೌಲಭ್ಯ ಪಡೆಯುವುದು ಹೇಗೆ ?

Next Post
ಸಾಂದರ್ಭಿಕ ಚಿತ್ರ

Free Power To SC- ST Families | ರಾಜ್ಯದ ಎಸ್ ಸಿ-ಎಸ್ ಟಿ ವಿದ್ಯುತ್ ಗ್ರಾಹಕರಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆ : ಈ ಸೌಲಭ್ಯ ಪಡೆಯುವುದು ಹೇಗೆ ?

BJP Bommai Government | ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆಡಳಿತಕ್ಕೆ 100 ಮಾರ್ಕ್ಸ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Please login to join discussion

Like Us on Facebook

Follow Us on Twitter

Recent News

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group