Thursday, September 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಕಸ್ತೂರಿ ರಂಗನ್ ವರದಿ: ಗ್ರಾಮ ಮಟ್ಟದಲ್ಲಿ ಭೌತಿಕ ಸರ್ವೇಗೆ ಕೇಂದ್ರಕ್ಕೆ 1 ವರ್ಷ ಕಾಲಾವಕಾಶ ಕೋರಿಕೆ; ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

  • Bengaluru Focus

    ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

    GBA News | ಲಾಲ್‌ಬಾಗ್ ಎದುರು ನಂದಿನಿ ಮಳಿಗೆ ಅಕ್ರಮ: ಕಾನೂನು ಸಮರ ನಡೆಸುವುದಾಗಿ ಎನ್‌ಆರ್‌ ರಮೇಶ್ ಎಚ್ಚರಿಕೆ

    STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    GBA News | ​ಬೆಂಗಳೂರಿಗರಿಗೆ ‘ಇ-ಆಸ್ತಿ 2.0’ ಡಿಜಿಟಲ್ ಕೊಡುಗೆ; ಅಕ್ರಮ ಕಟ್ಟಡಗಳಿಗೆ ಆಯುಕ್ತರ ಚಾಟಿ

    BW SPECIAL | ಖಜಾನೆ ಖಾಲಿ: ಬೆಂಗಳೂರಿನಲ್ಲಿ ಆಸ್ತಿ ಖಾತಾ, ತೆರಿಗೆಗೆ ‘ಸಾಫ್ಟ್‌ವೇರ್ ಶುಲ್ಕ’ ಬಾಸುಂಡೆ; ಕನ್ನಡಿಗರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ

    Bunts Sangha | ಬೆಂಗಳೂರು ಬಂಟರ ಸಂಘ ಚುನಾವಣೆ: ಅಧ್ಯಕ್ಷರಾಗಿ ದೀಪಕ್ ಶೆಟ್ಟಿ, ​ಉಪಾಧ್ಯಕ್ಷರಾಗಿ ಮಧುಕರ್ ಶೆಟ್ಟಿ ಆಯ್ಕೆ

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Bharath Gaurav Scheme | ಕಾಶಿಯಾತ್ರೆ ಕೈಗೊಳ್ಳುವ ಕರ್ನಾಟಕದ ಯಾತ್ರಾರ್ಥಿಗಳಿಗೆ ಖುಷಿ ಸುದ್ದಿ : 40 ದಿನದಲ್ಲಿ ಸಿದ್ದವಾಗುತ್ತಿದೆ ಹಲವು ವೈಶಿಷ್ಟ್ಯತೆಯ ರೈಲ್ವೆ ಕೋಚ್

ಭಾರತ್ ಗೌರವ್ ರೈಲು ಪರಿಕಲ್ಪನೆ ಹಿನ್ನಲೆಯಲ್ಲಿ ರಾಜ್ಯದ ಯೋಜನೆ ಜಾರಿ | ಬೆಂಗಳೂರಿನಿಂದ 14 ಕೋಚ್ ಗಳ ರೈಲು ವಾರಣಾಸಿಗೆ | ಪ್ರತಿವರ್ಷ 30 ಸಾವಿರ ಯಾತಾರ್ಥಿಗಳಿಗೆ ಅನುಕೂಲ | 15 ಸಾವಿರ ರೂ. ಯಾತ್ರಾ ಶುಲ್ಕದಲ್ಲಿ ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ 5 ಸಾವಿರ ರೂ. ಸಬ್ಸೀಡಿ

by Bengaluru Wire Desk
July 11, 2022
in News Wire, Public interest
Reading Time: 1 min read
0
ಭಾರತ್ ಗೌರವ್ ರೈಲಿನ ಸಾಂದರ್ಭಿಕ ಚಿತ್ರ

ಭಾರತ್ ಗೌರವ್ ರೈಲಿನ ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.11 www.bengaluruwire.com : ಕಾಶಿಯಾತ್ರೆ ಕೈಗೊಳ್ಳುವ ಪ್ರಯಾಣಿಕರಿಗಾಗಿ ಪ್ರಧಾನಮಂತ್ರಿಗಳ ಭಾರತ್ ಗೌರವ್ ರೈಲು ಪರಿಕಲ್ಪನೆ ಹಿನ್ನಲೆಯಲ್ಲಿ, ರಾಜ್ಯದಲ್ಲಿಯೂ ಚಾಲನೆ ನೀಡಲಾಗಿದ್ದು, ಸೋಮವಾರ, ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ನಗರದ ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿನ ಭಾರತ್ ಗೌರವ್ ರೈಲಿನ ಮೊದಲ ರೇಕ್ ಅನ್ನು ಪರಿಶೀಲಿಸಿದರು.

ನೈಋತ್ಯ ರೈಲ್ವೆಯ ವಾಣಿಜ್ಯ, ಪ್ರಯಾಣಿಕರ ಸೌಕರ್ಯಗಳು ಹಾಗು ಕ್ಯಾಟರಿಂಗ್ ಮುಖ್ಯ ವ್ಯವಸ್ಥಾಪಕ ಡಾ.ಅನುಪ್ ದಯಾನಂದ ಸಾಧು,  ಮುಖ್ಯ ರೋಲಿಂಗ್ ಸ್ಟಾಕ್ ಎಂಜಿನಿಯರ್ ಆರ್.ವಿ.ಎನ್. ಶರ್ಮಾ ಜೊತೆ ರೈಲಿಗೆ ಬೇಕಾದ ಅಗತ್ಯ ಮಾರ್ಪಾಡುಗಳು ಮತ್ತು ಇತರ ಅವಶ್ಯಕತೆಗಳ ಬಗ್ಗೆ ಚರ್ಚಿಸಿದರು.

ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ನಲ್ಲಿ ಭಾರತ್ ಗೌರವ್ ಯೋಜನೆಗೆ ಮೀಸಲಾದ ರೈಲನ್ನು ಪರಿಶೀಲಿಸುತ್ತಿರುವುದು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಪ್ರಧಾನಮಂತ್ರಿಗಳ ಭಾರತ್ ಗೌರವ್ ರೈಲು ಉತ್ತಮ ಪರಿಕಲ್ಪನೆಯಾಗಿದೆ. ಜೀವನದಲ್ಲಿ ಒಮ್ಮೆಯಾದರು ಕಾಶಿಯಾತ್ರೆ ಕೈಗೊಳ್ಳಬೇಕೆಂಬುದು ಜನರ ಆಸೆ ಆಗುತ್ತದೆ. ಇದನ್ನು ಪೂರೈಸಬೇಕೆನ್ನುವ ಜನರ ಆಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

ಭಾರತ್ ಗೌರವ್ ರೈಲಿನ ವೈಶಿಷ್ಟ್ಯವೇನು ?

ಈ ಯೋಜನೆಗಾಗಿ ರಾಜ್ಯ ಸರ್ಕಾರವು 15 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಭಾರತ್ ಗೌರವ್ ರೈಲು ಬೆಂಗಳೂರಿನಿಂದ ವಾರಣಾಸಿಗೆ ಅಯೋಧ್ಯೆ ಮತ್ತು ಪ್ರಯಾಗರಾಜ್‌ನಲ್ಲಿ ನಿಲುಗಡೆಯೊಂದಿಗೆ ಚಲಿಸುತ್ತದೆ. ಕೇವಲ 7 ದಿನಗಳಲ್ಲಿ 4,161 ಕಿಮೀಗಳನ್ನು ಕ್ರಮಿಸುತ್ತದೆ. ರೈಲು ಒಟ್ಟು 14 ಕೋಚ್‌ಗಳಿಂದ ಕೂಡಿದೆ. ಎಸಿ-3 ಟೈರ್ 11 ಕೋಚ್‌ಗಳು ಇದರಲ್ಲಿ ಇರಲಿದೆ. ರೈಲಿನಲ್ಲಿರುವ ಯಾತ್ರಾರ್ಥಿಗಳಿಗೆ ಪ್ರಯಾಣದ ಸಮಯದಲ್ಲಿ ಭಜನೆ ಮಾಡಲು ಅನುಕೂಲವಾಗುವಂತೆ ಒಂದು ಕೋಚ್ ಅನ್ನು ದೇವಾಲಯವಾಗಿ ಪರಿವರ್ತಿಸಲಾಗುತ್ತದೆ ಎಂದು ರೈಲಿನ ವೈಶಿಷ್ಟ್ಯತೆಗಳ ಬಗ್ಗೆ ಸಚಿವರು ವಿವರಿಸಿದರು

ಕಾಶಿಯಾತ್ರೆ ಶುಲ್ಕ 15 ಸಾವಿರ ರೂ. :

ಪ್ರವಾಸದ ಒಟ್ಟು ಶುಲ್ಕ 15,000 ರೂ. ಆಗಲಿದೆ. ಅದರಲ್ಲಿ 5,000 ರೂ. ಸಬ್ಸಿಡಿಯನ್ನು ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವ್ಯಕ್ತಿಗಳಿಗೆ ನೀಡಲಾಗುತ್ತದೆ. ರೈಲಿನ ಎಲ್ಲಾ 11 ಬೋಗಿಗಳಲ್ಲಿ ಕರ್ನಾಟಕದ ದೇವಾಲಯಗಳ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರತಿ ವರ್ಷ 30,000 ಜನರಿಗೆ ಈ ಪ್ರಯೋಜನವನ್ನು ನೀಡಲು ಸರ್ಕಾರ ಯೋಜಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

40- 45 ದಿನಗಳಲ್ಲಿ ಮೈಸೂರು ಕಾರ್ಯಾಗಾರದಲ್ಲಿ ರೈಲು ರೇಕ್ ಸಿದ್ಧ :

ಭಾರತ್ ಗೌರವ್ ಕಾಶಿಯಾತ್ರೆ ಕೈಗೊಳ್ಳುವ ರೈಲಿನ ಮಾದರಿಯ ಬಗ್ಗೆ ರೈಲಿನೊಳಗೆ ಕೂತು ಚರ್ಚಿಸುತ್ತಿರುವ ಸಚಿವೆ ಶಶಿಕಲಾ ಜೊಲ್ಲೆ, ಮುಜರಾಯಿ ಆಯುಕ್ತರಾದ ರೋಹಿಣಿ ಸಿಂಧೂರಿ ಮತ್ತು ರೈಲ್ವೆ ಅಧಿಕಾರಿಗಳು

40 ರಿಂದ 45 ದಿನಗಳಲ್ಲಿ ಮೈಸೂರು ಕಾರ್ಯಾಗಾರದಲ್ಲಿ ರೇಕ್ ಕೂಲಂಕಷವಾಗಿ ಪರಿಶೀಲಿಸಿ ಸಿದ್ಧಗೊಳಿಸಲಾಗುವುದು. ಭಾರತ್ ಗೌರವ್ ರೈಲನ್ನು ಬಳಕೆಯ ಹಕ್ಕಿನೊಂದಿಗೆ ಮುಜರಾಯಿ ಇಲಾಖೆಗೆ ಹಸ್ತಾಂತರಿಸಲಾಗುವುದು. ಇದರಿಂದ ರೈಲ್ವೆಗೆ ವಾರ್ಷಿಕ 20 ಕೋಟಿ ರೂ. ಆದಾಯ ಬರಲಿದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ಯಾತ್ರೆ ಕೈಗೊಳ್ಳುವ ಪ್ರಯಾಣಿಕರಿಗೆ ಅಗತ್ಯವಿರುವ ಆಹಾರ, ಅಡುಗೆ ಮತ್ತು ಇತರ ಮೂಲಭೂತ ಅವಶ್ಯಕತೆಗಳಂತಹ ಎಲ್ಲಾ ಬ್ಯಾಕ್ ಎಂಡ್ ವ್ಯವಸ್ಥೆಗಳನ್ನು ಮಾಡುತ್ತದೆ ಎಂದು ಡಾ.ಅನುಪ್ ದಯಾನಂದ್ ಸಾಧು ಅವರು ಮಾಹಿತಿ ನೀಡಿದರು.

               ಭಾರತ್ ಗೌರವ್ ರೈಲುಗಳು ಥೀಮ್ ಆಧಾರಿತ ಸರ್ಕ್ಯೂಟ್ ರೈಲುಗಳಾಗಿವೆ. ಅದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳವನ್ನು ಭಾರತ ಮತ್ತು ಪ್ರಪಂಚದ ಜನರಿಗೆ ಪ್ರದರ್ಶಿಸುತ್ತದೆ. ಕೇಂದ್ರ ಸರ್ಕಾರದ 2022-23ನೇ ಸಾಲಿನ ಬಜೆಟ್ ನಲ್ಲಿ ಭಾರತ್ ಗೌರವ್ ಯೋಜನೆ ಜಾರಿಗೆ ಬಂದಿದ್ದು, ಪ್ರತಿ ರಾಜ್ಯವು ತಮ್ಮದೇ ಪರಿಕಲ್ಪನೆ ಆಧಾರಿತ ಪ್ರವಾಸ ಮತ್ತು ಯಾತ್ರೆಗಳನ್ನು ಆಯೋಜಿಸುತ್ತಿವೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BBMP Ward Delimitation | ಬಿಬಿಎಂಪಿ 243 ವಾರ್ಡ್ ಪುನರ್ವಿಂಗಡಣೆ ಕರಡಿಗೆ 2500 ರಷ್ಟು ಭರಪೂರ ಆಕ್ಷೇಪಣೆ…!

Next Post

NASA Webb Telescope | ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ನಿಂದ ತೆಗೆದ ಬ್ರಹ್ಮಾಂಡದ ಮೊದಲ ನಿಖರ ಚಿತ್ರ ಅನಾವರಣ

Next Post

NASA Webb Telescope | ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ನಿಂದ ತೆಗೆದ ಬ್ರಹ್ಮಾಂಡದ ಮೊದಲ ನಿಖರ ಚಿತ್ರ ಅನಾವರಣ

NASA Webb Telescope First Images | ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ನಿಂದ ತೆಗೆದ ವಿಶ್ವದ ಅತ್ಯಪರೂಪದ ಚಿತ್ರಗಳನ್ನು ನೋಡಿ...!

Please login to join discussion

Like Us on Facebook

Follow Us on Twitter

Recent News

ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

September 24, 2026

ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

September 24, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

September 24, 2026

ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

September 24, 2026

GBA News | ಲಾಲ್‌ಬಾಗ್ ಎದುರು ನಂದಿನಿ ಮಳಿಗೆ ಅಕ್ರಮ: ಕಾನೂನು ಸಮರ ನಡೆಸುವುದಾಗಿ ಎನ್‌ಆರ್‌ ರಮೇಶ್ ಎಚ್ಚರಿಕೆ

September 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d