Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

  • Bengaluru Focus

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | #AirShow 2023 | ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ವಿಪತ್ತು ನಿರ್ವಹಣೆಗೆ ಹೈಟೆಕ್ ಭೌಗೋಳಿಕ ತಂತ್ರಜ್ಞಾನ ವ್ಯವಸ್ಥೆ

ನೈಜ ಸಮಯದಲ್ಲಿನ ಭೌಗೋಳಿಕ ದತ್ತಾಂಶಗಳು ಹಾಗೂ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳು ವಿಪತ್ತು ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯನ್ನು ಬಲಗೊಳಿಸಿ ಜೀವಹಾನಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಗಳನ್ನು ತಡೆಗಟ್ಟುತ್ತದೆ. |ಈ ನಿಟ್ಟಿನಲ್ಲಿ ಜಿಯೋಸ್ಪಾಟಿಯಲ್ ತಂತ್ರಜ್ಞಾನ ಮಹತ್ವದ್ದಾಗಿದೆ.

by Bengaluru Wire Desk
February 8, 2023
in Bengaluru Focus, BW Special, News Wire
Reading Time: 2 mins read
0
ಯಲಹಂಕ ವೈಮಾನಿಕ ಪ್ರದರ್ಶನ ಸ್ಥಳದಲ್ಲಿರುವ ಸಂಯೋಜಿತ ಸಂವಹನ ನಿಯಂತ್ರಣ ಕೇಂದ್ರದ ಚಿತ್ರ

ಯಲಹಂಕ ವೈಮಾನಿಕ ಪ್ರದರ್ಶನ ಸ್ಥಳದಲ್ಲಿರುವ ಸಂಯೋಜಿತ ಸಂವಹನ ನಿಯಂತ್ರಣ ಕೇಂದ್ರದ ಚಿತ್ರ

ಬೆಂಗಳೂರು, ಫೆ.8 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಫೆ.13ರಿಂದ ಐದು ದಿನಗಳ ಕಾಲ ನಡೆಯುವ 14ನೇ ಆವೃತ್ತಿಯ ಏರೋ ಇಂಡಿಯಾ ಪ್ರದರ್ಶನದಲ್ಲಿ ವಿಪತ್ತು ನಿರ್ವಹಣೆಗಾಗಿ ಇದೇ ಮೊದಲ ಬಾರಿಗೆ ಕರ್ನಾಟಕ ಭೌಗೋಳಿಕ ತಂತ್ರಜ್ಞಾನ ವ್ಯವಸ್ಥೆ (Geospatial) ಆಧಾರಿತ ವಿಪತ್ತು ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿ ಅಳವಡಿಸಿಕೊಂಡಿದೆ.

ದ್ವೈವಾರ್ಷಿಕ ಏರ್ ಶೋ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿಯಿಂದ ಕೂಡಿದ ವೈಮಾನಿಕ ಪ್ರದರ್ಶನ ಸ್ಥಳದಲ್ಲಿ ಆಕಸ್ಮಿಕವಾಗಿ ಉಂಟಾಗುವ ವಿಮಾನ ಅಪಘಾತ, ಬಾಂಬ್ ಸ್ಫೋಟ, ಕಾಲ್ತುಳಿತ, ಅಗ್ನಿ ಅವಘಡ ಇತ್ಯಾದಿ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು  2005ರ ವಿಪತ್ತು ನಿರ್ವಹಣಾ ಕಾಯ್ದೆಯಡಿ, ಕಂದಾಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರವು ಈಗಾಗಲೇ ವಿಪತ್ತು ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿದೆ. ಈ ಬಾರಿ ವಿಪತ್ತು ನಿರ್ವಹಣೆಯಲ್ಲಿ ಆಧುನಿಕ ತಂತ್ರಜ್ಞಾನ, ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ ಮತ್ತು ದೂರ ಸಂವೇದಿ ವಿಜ್ಞಾನ ಆಧಾರಿತ ವ್ಯವಸ್ಥೆಯನ್ನು ಬಳಸಿಕೊಂಡು ಅತ್ಯಾಧುನಿಕ ವಿಪತ್ತು ನಿರ್ವಹಣಾ ಯೋಜನೆಯನ್ನು ತಯಾರಿಸಿದೆ.

ಹೊಸ ರೀತಿಯ ಡಿಎಂ ಪ್ಲಾನ್ ಹೇಗೆ ಕೆಲಸ ಮಾಡುತ್ತೆ? :

ನೈಜ ಸಮಯದಲ್ಲಿನ ಭೌಗೋಳಿಕ ದತ್ತಾಂಶಗಳು ಹಾಗೂ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳು ವಿಪತ್ತು ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯನ್ನು ಬಲಗೊಳಿಸಿ ಜೀವಹಾನಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಗಳನ್ನು ತಡೆಗಟ್ಟುತ್ತದೆ. ಇದಕ್ಕಾಗಿ ವೈಮಾನಿಕ ಪ್ರದರ್ಶನದ ಹೊರಾಂಗಣ ಮತ್ತು ಒಳಾಂಗಣವನ್ನು ಪ್ರತಿ 2 ಕಿ.ಮೀ ವ್ಯಾಪ್ತಿ ಪ್ರದೇಶಗಳಲ್ಲಿನ ವಿಪತ್ತುಗಳನ್ನು ನಿರ್ವಹಿಸಲು ಭೌಗೋಳಿಕ ನಕ್ಷೆಯಾಧಾರಿತ ವಿಪತ್ತು ಮತ್ತು ತುರ್ತು ಪರಿಸ್ಥಿತಿಗಳನ್ನು ವರದಿ ಮಾಡಲು ಹಾಗೂ ಅವಶ್ಯವಿರುವ ಸಂಪನ್ಮೂಲಗಳನ್ನು ಗುರುತಿಸಲು ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ (KGIS) ಯನ್ನು ಬಳಸಲಾಗಿದೆ.

ವೈಮಾನಿಕ ಪ್ರದರ್ಶನದಂತಹ ಬೃಹತ್‌ ಕಾರ್ಯಕ್ರಮಗಳಲ್ಲಿ ನೈಜ ಸಮಯಾಧಾರಿತ, ಸ್ಥಳ ನಿರ್ದಿಷ್ಟ ಭೌಗೋಳಿಕ ಮಾಹಿತಿಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಭೌಗೋಳಿಕ ತಂತ್ರಜ್ಞಾನ ಆಧಾರಿತ ನಕ್ಷೆಗಳು, ಆ ಸ್ಥಳದ ನಿರ್ಧಿಷ್ಟ ದತ್ತಾಂಶಗಳು, ತಂತ್ರಾಂಶಗಳು ಹಾಗೂ ಮೊಬೈಲ್ ತಂತ್ರಾಂಶಗಳು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಅತ್ಯಗತ್ಯವಾಗುತ್ತದೆ.

ಯಲಹಂಕ ವಾಯುನೆಲೆ ಸುತ್ತಲಿನ ಪ್ರದೇಶ 9 ಗ್ರಿಡ್ ಗಳಾಗಿ ವಿಭಜನೆ :

ಹೀಗಾಗಿ ಯಲಹಂಕ ವಾಯುನೆಲೆ ಸುತ್ತಲಿನ ಪ್ರದೇಶಗಳ ಭೌಗೋಳಿಕ ವಿಶ್ಲೇಷಣೆಯನ್ನು ಕೈಗೊಂಡು, ಮೂಲ ನಕ್ಷೆಯನ್ನು ತಯಾರಿಸಲಾಗಿದೆ. ವಿಪತ್ತು ನಿರ್ವಹಣೆಗೆ ಅಗತ್ಯವಾದ ರೂಪುರೇಷೆ ಮತ್ತು ಯೋಜನೆಗಳನ್ನು ಒಳಗೊಂಡ ನಕ್ಷೆಗಳನ್ನು ಸಿದ್ಧಪಡಿಸಿದ್ದು,  ಒಟ್ಟಾರೆ ವೈಮಾನಿಕ ಪ್ರದರ್ಶನ ಪ್ರದೇಶವ್ಯಾಪ್ತಿಯನ್ನು ಹೊರಾಂಗಣ ಮತ್ತು ಒಳಾಂಗಣ ಗ್ರಿಡ್ ಮತ್ತು ಉಪಗ್ರಿಡ್‌ ಗಳನ್ನಾಗಿ ವಿಭಜಿಸಲಾಗಿದೆ. ಘಟನಾ ಸ್ಥಳದ ಮತ್ತು ಸುತ್ತಮುತ್ತಲಿನ 5 ಕಿ.ಮೀ ಪ್ರದೇಶವನ್ನು 5 ಕಿ.ಮೀx5 ಕಿ.ಮೀ ನಂತೆ ವಿಭಜಿಸಲಾಗಿದೆ. ಒಟ್ಟಾರೆ ಪ್ರದೇಶವನ್ನು 9 ಗ್ರಿಡ್ ಗಳನ್ನು ವಿಭಜಿಸಲಾಗಿದೆ.

ಪ್ರತಿ ಗ್ರಿಡ್, ಸಬ್ ಗ್ರಿಡ್ ಮತ್ತು ಮೈಕ್ರೋ ಗ್ರಿಡ್‌ಗಳನ್ನಾಗಿ ವಿಭಜಿಸಿ ಪ್ರತ್ಯೇಕ ಸಂಖ್ಯೆಗಳೊಂದಿಗೆ ಗುರುತಿಸಲಾಗಿದೆ. ಒಟ್ಟಾರೆ ದತ್ತಾಂಶವನ್ನು ಡಿಜಿಟಲ್‌ಗೊಳಿಸಲಾಗಿದ್ದು, ಸಂಪನ್ಮೂಲಗಳನ್ನು ಗುರುತಿಸುವಿಕೆ ಮತ್ತು ಸದ್ಬಳಕೆ, ಸಂಘಟಿತ ಪ್ರತಿಕ್ರಿಯೆಗಳು, ತಂಡಗಳ ನಿಯೋಜನೆ ಹಾಗೂ ಮಾರ್ಗಸೂಚಿಗಳನ್ನು ನೀಡಲು ಕರ್ನಾಟಕ ರಾಜ್ಯ ದೂರಸಂವೇಧಿ ಅನ್ವಯಿಕ ಕೇಂದ್ರವು ಪ್ರಪ್ರಥಮವಾಗಿ ಭೌಗೋಳಿಕ ತಂತ್ರಜ್ಞಾನ ಅಧಾರಿತ : http://kgis.ksrsac.in/aeroindia ಅಂತರ್ಜಾಲತಾಣವನ್ನು ಅಭಿವೃದ್ಧಿಪಡಿಸಿದ್ದು ಒಳಾಂಗಣ ಮತ್ತು ಹೊರಾಂಗಣ ವಿಪತ್ತು ನಿರ್ವಹಣೆ ಯೋಜನೆಗಳ ಎಲ್ಲಾ ಅಂಶಗಳನ್ನು ಪ್ರಸ್ತುತ ಪಡಿಸಲಾಗಿದೆ.

ಸಂಬಂಧ ಇಲಾಖೆಗಳ ಸಂಪನ್ಮೂಲಗಳ ನಿಯೋಜನೆ, ನಿರ್ಧಿಷ್ಟ ಪಡಿಸುವುದು, ದತ್ತಾಂಶಗಳ ನೊಂದಾಯಿಸುವುದು ಹಾಗೂ ನಕ್ಷೆಗಳನ್ನು ವಿಪತ್ತು ನಿರ್ಧಾರ ವ್ಯವಸ್ಥೆಗಳಿಗೆ ತಕ್ಕಂತೆ ನಕ್ಷೆಗಳನ್ನು ಪ್ರದರ್ಶಿಸಲು ವ್ಯವಸ್ಥೆಯನ್ನು ಕಲ್ಪಿಸಿದೆ. ವಿಪತ್ತು ಹಾಗೂ ತುರ್ತು ಪರಿಸ್ಥಿತಿಗಳನ್ನು ವರದಿ ಮಾಡಲು ಹಾಗೂ ಆವಶ್ಯವಿರುವ ಸಂಪನ್ಮೂಲಗಳನ್ನು ಗುರುತಿಸಿ ನೆರವಾಗಲು ಪ್ರತ್ಯೇಕ ಮೊಬೈಲ್‌ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದೆಲ್ಲದರಿಂದ ದುರ್ಘಟನೆಗಳಾದಾಗ ತುರ್ತಾಗಿ ಅವುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಅಲ್ಲದೆ ದುರಂತದಿಂದಾಗುವ ಹೆಚ್ಚಿನ ಹಾನಿಯನ್ನು ತಡೆಗಟ್ಟಬಹುದು.

ಸಂಭವನೀಯ ವಿಪತ್ತುಗಳು ಹಾಗೂ ಅಪಾಯಗಳು :

ವೈಮಾನಿಕ ಪ್ರದರ್ಶನ-2023ರ ಸಂದರ್ಭದಲ್ಲಿ ಕೋಡ್ 19, ಬೆಂಕಿ ಅವಘಡ, ಕಟ್ಟಡ ಕುಸಿತ, ಕಾಲ್ತುಳಿತ, ವಿಮಾನ ಅಪಘಾತ,  ಅಣುವಿಕಿರಣ ಅಪಾಯಗಳು, ಭಯೋತ್ಪಾದನೆ ಕೃತ್ಯ, ಡೋನ್ ದಾಳಿ ಅಥವಾ ಸೈಬರ್ ದಾಳಿ, ಹವಾಮಾನ ವೈಪರಿತ್ಯ, ಕುಡಿಯುವ ನೀರು ಹಾಗು ಆಹಾರದಲ್ಲಿ ವಿಷ ಸೇರ್ಪಡೆ ಸೇರಿದಂತೆ ನಾನಾ ಅಪಾಯಗಳು ಸಂಭವಿಸುವ ಸಾಧ್ಯತೆಗಳಿಗೆ ವಿಪತ್ತು ನಿರ್ವಹಣಾ ತಂಡ ಅವುಗಳಿಗೆ ಪ್ರತಿಕ್ರಿಯಿಸಲು ಸನ್ನದ್ಧ ಸ್ಥಿತಿಯಲ್ಲಿರುತ್ತದೆ.

ಸಂಯೋಜಿತ ಸಂವಹನ ನಿಯಂತ್ರಣ ಕೇಂದ್ರ :

ಸಂಯೋಜಿತ ಸಂವಹನ ನಿಯಂತ್ರಣ ಕೇಂದ್ರ (Integrated Communications Command Center- ICCC)ವು ಏರೋ ಇಂಡಿಯಾ ಪ್ರದರ್ಶನದಲ್ಲಿ ಆನ್ ಸೈಟ್ ಹಾಗೂ ಆಫ್ ಸೈಟ್ ನಲ್ಲಿ ಸಂಭವಿಸಬಹುದಾದ ದುರ್ಘಟನೆ ಅಥವಾ ವಿಪತ್ತು ನಿರ್ವಹಣೆಯಲ್ಲಿ ವಿವಿಧ ಇಲಾಖೆಗಳು, ತಂಡಗಳ ನಡುವೆ ನೈಜ ಸಮಯದಲ್ಲಿ ವೇಗವಾಗಿ ಹಾಗೂ ಸಮರ್ಥವಾದ ಸಂಯೋಜನೆ ಕೈಗೊಳ್ಳಲು ಅಗತ್ಯವಾದ ಪ್ರಮುಖ ಕೇಂದ್ರವಾಗಿದೆ. ಈ ಕೇಂದ್ರವನ್ನು ಯಲಹಂಕ ವಾಯುನೆಲೆಯಲ್ಲಿ ಈಗಾಗಲೇ ಸ್ಥಾಪನೆ ಮಾಡಲಾಗಿದೆ.

ವಿಪತ್ತು ನಿರ್ವಹಣೆ- ಕಾರ್ಯಾಚರಣೆಗೆ ತಂಡಗಳ ನಿಯೋಜನೆ :

ವಾಯುಪಡೆಯ ವಿಪತ್ತು ನಿರ್ವಹಣೆ ತಂಡವು 21 ಅಧಿಕಾರಿಗಳು, 48 ಏರ್ ಮನ್‌ಗಳು, 10 ಎಂಟಿಡಿ  ಸಿಬ್ಬಂದಿ ಒಳಗೊಂಡಿದೆ. ಇವರಿಗೆ ಅಗತ್ಯ ರಕ್ಷಣಾ ಪರಿಕರ, ಸಲಕರಣೆಗಳನ್ನು ಒದಗಿಸಲಾಗಿದೆ. ಸಮಗ್ರ ವಿಪತ್ತು ನಿರ್ವಹಣೆಗಾಗಿ, ನಿರ್ದಿಷ್ಟ ಜವಾಬ್ದಾರಿಗಳನ್ನು ಒಳಗೊಂಡ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಿದೆ. ಆ ತಂಡದಲ್ಲಿ 92 ಸದಸ್ಯರನ್ನು ಒಳಗೊಂಡ 2 ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ತಂಡಗಳು, 120 ಸದಸ್ಯರನ್ನು ಒಳಗೊಂಡ 2 ತುರ್ತು ಕಾರ್ಯಚಾರಣೆ ತಂಡಗಳು, 80 ಸದಸ್ಯರನ್ನು ಒಳಗೊಂಡ ಕೇಂದ್ರಿಯ ಮತ್ತು ರಾಜ್ಯ ಪೋಲಿಸ್ ಮೀಸಲು ಪಡೆಗಳು, 35 ಸದಸ್ಯರನ್ನು ಒಳಗೊಂಡ 5 ವಿಧ್ವಂಸಕ ಕೃತ್ಯ ತಡೆ ತಂಡಗಳು, 7 ಸದಸ್ಯರನ್ನು ಒಳಗೊಂಡ 2 ಸ್ಫೋಟಕ ಅಥವಾ ಬಾಂಬ್ ಪತ್ತೆ ಮತ್ತು ವಿಲೇವಾರಿ ಸೈನಿಕರು, ರಾಜ್ಯ ತಂಡಗಳನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ 21 ಸದಸ್ಯರನ್ನು ಒಳಗೊಂಡ 3 ಸ್ಫೋಟಕ ಪತ್ತೆ ಸೈನಿಕರ ತಂಡಗಳನ್ನು ವಿಪತ್ತು ನಿರ್ವಹಣೆಗಾಗಿ ನಿಯೋಜಿಸಲಾಗಿದೆ.

ಹೊರಾಂಗಣ ವಿಪತ್ತು ನಿರ್ವಹಣೆ ವ್ಯವಸ್ಥೆ :

ವೈಮಾನಿಕ ಪ್ರದರ್ಶನ 2023 ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಲಹಂಕದ ಭಾರತೀಯ ವಾಯು ನೆಲೆಯ ಆವರಣದ ಹೊರಗೆ ಸಂಭವಿಸಬಹುದಾದ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಮತ್ತು ವಿಪತ್ತುಗಳನ್ನು ಸಮರ್ಪಕವಾಗಿ ಹಾಗೂ ರಚನಾತ್ಮಕವಾಗಿ ನಿರ್ವಹಿಸಲು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಸಂಬಂಧಪಟ್ಟ ಇಲಾಖೆಗಳ ಸಹಭಾಗಿತ್ವದಲ್ಲಿ ಹೊರಾಂಗಣ ವಿಪತ್ತು ನಿರ್ವಹಣೆ ಯೋಜನೆಯನ್ನು ರೂಪಿಸಿದೆ.

ಹೊರಾಂಗಣ ತುರ್ತು ವಿಪತ್ತು ನಿರ್ವಹಣಾ ಯೋಜನೆ ಸಿದ್ಧತೆ :

ವೈಮಾನಿಕ ಪ್ರದರ್ಶನ 2023 ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೊರಾಂಗಣ ವಿಪತ್ತು ನಿರ್ವಹಣೆ ವ್ಯವಸ್ಥೆಯನ್ನು ರೂಪಿಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತರ ಅಧ್ಯಕ್ಷತೆಯಲ್ಲಿ ಡಿ.12 ರಂದು ಭಾರತೀಯ ವಾಯುಸೇನೆ, ಎಚ್‌ಎಎಲ್, ಬಿಬಿಎಂಪಿ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಪೋಲಿಸ್, ಅಗ್ನಿಶಾಮಕ ಮತ್ತು ತುರ್ತುಸೇವೆ, ಕರ್ನಾಟಕ ದೂರಸಂವೇದಿ ಅನ್ವಯಿಕ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ಕೈಗೊಳ್ಳಲಾಯಿತು.

ವಿಪತ್ತು ನಿರ್ವಹಣಾ ಕೋಶ :

ವಿವತ್ತು ಘಟನೆ ಕಾರ್ಯಚರಣೆಯಡಿ ವಿಪತ್ತು ನಿರ್ವಹಣಾ ಕೋಶವನ್ನು ಸ್ಥಾಪಿಸಲಾಗಿದ್ದು, ಕಾರ್ಯಚಾರಣೆ ನಿಯಂತ್ರಣ ಕೇಂದ್ರಗಳೊಡನೆ ಕಾರ್ಯ ನಿರ್ವಹಿಸಲಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಅಗ್ನಿಶಾಮಕ, ಆರೋಗ್ಯ ಮತ್ತು ಸಂಬಂಧಪಟ್ಟ ಇಲಾಖೆಗಳ ಮೊಡಲ್ ಅಧಿಕಾರಿಗಳು ಕಾರ್ಯಚಾರಣೆ ನಿಯಂತ್ರಣ ಕೇಂದ್ರಗಳಲ್ಲಿ ಭಾರತೀಯ ವಾಯುಸೇನೆ ಸಿಬ್ಬಂದಿ ಜೊತೆ ನೇರ ಸಂಪರ್ಕ ಹಾಗೂ ಸಹಕಾರ ನೀಡಲಾಗುತ್ತದೆ. ವಿಪತ್ತು ನಿರ್ವಹಣಾ ಕೋಶದಲ್ಲಿ ವಿಪತ್ತು ನಿರ್ವಹಣಾ ಯೋಜನೆಗಳು, ರಕ್ಷಣೆ ಮತ್ತು ಸ್ಥಳಾಂತರ ಯೋಜನೆಗಳು, ವಿಪತ್ತು ನಿರ್ವಹಣೆ, ವೈದ್ಯಕೀಯ, ಅಗ್ನಿಶಾಮಕ, ಪೊಲೀಸ್, ಲೋಕೋಪಯೋಗಿ, ನೀರು ಸರಬರಾಜು, ವಿದ್ಯುತ್ ಹಾಗೂ ದೂರವಾಣಿ ಇಲಾಖೆಗಳ ಮುಖ್ಯಸ್ಥರುಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೊಬೈಲ್‌ ಸಂಪರ್ಕ ಸಂಖ್ಯೆಗಳ ಮಾಹಿತಿ ಲಭ್ಯವಿರುತ್ತದೆ.

ಯಲಹಂಕ ವಾಯುನೆಲೆಯ ಪ್ರಧಾನ ಪ್ರವೇಶ ದ್ವಾರ (ಸಂಗ್ರಹ ಚಿತ್ರ)

ಪ್ರತಿದಿನ ಬೆಳಗ್ಗೆ ಸಂಜೆ ಸ್ಪೋಟಕ ಪತ್ತೆಗಾಗಿ ಪರಿಶೀಲನೆ :

ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ತಂಡ, ಕೇಂದ್ರಿಯ ಮತ್ತು ರಾಜ್ಯ ಮೀಸಲು ಪೊಲೀಸ್ ಪಡೆಗಳು ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ಮತ್ತು ತುರ್ತು ಕಾರ್ಯಚಾರಣೆ ತಲಾ 2 ತಂಡಗಳು, ವಿಷತ್ತು ಕಾರ್ಯಚಾರಣೆ ನಿಯಂತ್ರಣ ಕೇಂದ್ರದ

ಅಡಿಯಲ್ಲಿ ಕಾರ್ಯನಿರತವಾಗಿದ್ದು, ಅಗತ್ಯ ತುರ್ತು ಕಾರ್ಯಚರಣೆಗಳು, ಜನಸಂದಣಿ ಹಾಗೂ ವಿಪತ್ತು ಘಟನೆಗಳನ್ನು ನಿಯಂತ್ರಿಸಲು ತಕ್ಷಣವೇ ನಿಯಂತ್ರಿಸಲಿದೆ. ಬಾಂಬ್ ಪತ್ತೆ ದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ವೈಮಾನಿಕ ಪ್ರದರ್ಶನಗಳು ಆರಂಭಕ್ಕೂ ಮುನ್ನ ಮತ್ತು ಪ್ರದರ್ಶನಗಳ ನಂತರ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪರಿಶೀಲನೆ ನಡೆಸಲಿದೆ. ಅಲ್ಲದೇ ಸುಧಾರಿತ ಸ್ಫೋಟಕಗಳ ಪತ್ತೆ ಮತ್ತು ವಿಲೇವಾರಿ ಜವಾಬ್ದಾರಿಯನ್ನು ನಿರ್ವಹಸುತ್ತದೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜನೆಗೊಳ್ಳುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ವೈಮಾನಿಕ ಮತ್ತು ರಕ್ಷಣೆಗೆ ಸಂಬಂಧಿಸಿದ ಉದ್ಯಮಗಳು, ವೃತ್ತಿಪರತೆ, ಮಾರುಕಟ್ಟೆ, ನೂತನ ತಂತ್ರಜ್ಞಾನಗಳು ಹಾಗೂ ಅಭಿವೃದ್ಧಿಪಡಿಸುವ ಉತ್ಪಾದನೆಗಳ ಘೋಷಣೆ, ಜಾಹಿರಾತು, ಪ್ರಸಾರ, ಮನ್ನಣೆಗಳನ್ನು ಪಡೆಯಲು ಹಾಗೂ ಸಾರ್ವಜನಿಕ ವೈಮಾನಿಕ ಪ್ರದರ್ಶನಗಳಿಗೆ ವೇದಿಕೆಯನ್ನು ಕಲ್ಪಿಸುತ್ತದೆ. ಇದರಲ್ಲಿ ದೇಶೀಯ ಮತ್ತು ವಿದೇಶಿ ಪ್ರದರ್ಶಕರು, ಶಸ್ತ್ರಾಸ್ತ್ರ ಉತ್ಪಾದಕರು, ಉದ್ಯಮಿಗಳು ಭಾಗವಹಿಸುವ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣಾ ಯೋಜನೆಯು ಪ್ರಮುಖವಾಗಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರು ಹೀಗಂತಾರೆ :

“ನಾವು ಆಧುನಿಕ ತಂತ್ರಜ್ಞಾನಗಳ ಮೂಲಕ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸೂಕ್ತ ಸಂದರ್ಭದಲ್ಲಿ ವೇಗವಾಗಿ ನಿರ್ಧಾರ ಕೈಗೊಳ್ಳಲು ಸೂಕ್ತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ. ಬಿಕ್ಕಟ್ಟು ನಿರ್ವಹಣೆಗೆ ಸಹಾಯ ಮಾಡಲು ಇದೇ ಪ್ರಥಮ ಬಾರಿಗೆ ಏರೋ ಇಂಡಿಯಾ ಪ್ರದರ್ಶನ ನಡೆಯುವ ಸ್ಥಳದ ಜಿಯೋಸ್ಪೇಷಿಯಲ್ ಪರಿಸರದಲ್ಲಿ ರಿಮೋಟ್ ಸೆನ್ಸಿಂಗ್ ಡೇಟಾದೊಂದಿಗೆ ಸಂಯೋಜಿಸಿದ್ದೇವೆ. ನೈಜ ಸಮಯದ ಭೌಗೋಳಿಕ ಡೇಟಾವು ತುರ್ತು ಸಂದರ್ಭದಲ್ಲಿ ಸೂಕ್ತ ಪ್ರತಿಕ್ರಿಯೆಗಾಗಿ ಸಂಪನ್ಮೂಲಗಳ ಹಂಚಿಕೆಯನ್ನು ಸುಧಾರಿಸಬಹುದು. ಏರೋ ಇಂಡಿಯಾ (AERO INDIA) ಪ್ರದರ್ಶನದಲ್ಲಿ ದುರ್ಘಟನೆಗಳಾದ ಸಂದರ್ಭದಲ್ಲಿ ವಿಪತ್ತು ಮತ್ತು ತುರ್ತು ನಿರ್ವಹಣೆಗೆ ಸಾಂದರ್ಭಿಕ ಅರಿವು ಪ್ರಮುಖವಾಗಿದೆ. ಕ್ಷೇತ್ರದಲ್ಲಿರುವ ಸಂಬಂಧಪಟ್ಟ ತಂಡವು ಅಲ್ಲಿನ ಕ್ಷೇತ್ರದ ಪರಿಸ್ಥಿತಿಯನ್ನು ಸೆರೆಹಿಡಿಯುತ್ತದೆ. ಇದರಿಂದ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲ.”

  • ಡಾ.ಮನೋಜ್ ರಾಜನ್, ಆಯುಕ್ತರು, ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ
WhatsApp Join our WhatsApp Channel
Previous Post

Airport News | ಬೆಂಗಳೂರು ಏರ್ ಪೋರ್ಟ್: 2022ನೇ ಇಸವಿಯಲ್ಲಿ 27.50 ದಶಲಕ್ಷ ಪ್ರಯಾಣಿಕರ ಪ್ರಯಾಣ

Next Post

Turkey Earthquake Updates | ಟರ್ಕಿ ಭೂಕಂಪನದಿಂದ ನಲುಗಿದ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭ

Next Post
ಟರ್ಕಿಯ ಭೂಕಂಪನ ಪೀಡಿತ ಪ್ರದೇಶದ ದ್ರೋಣ್ ದೃಶ್ಯ

Turkey Earthquake Updates | ಟರ್ಕಿ ಭೂಕಂಪನದಿಂದ ನಲುಗಿದ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭ

BBMP News | ಹಲವು ಬೇಡಿಕೆ ಈಡೇರಿಕೆಗೆ ಪಾಲಿಕೆ ಅಧಿಕಾರಿ ನೌಕರರ ಸಂಘದ ಆಗ್ರಹ : ಬಿಬಿಎಂಪಿ ಕಚೇರಿಗಳು ಬಂದ್

Please login to join discussion

Like Us on Facebook

Follow Us on Twitter

Recent News

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group