Sunday, August 2, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Kashmir Sri Sharada Temple Idol | ಕಾಶ್ಮೀರ ಗಡಿಯ ಪುರವಾಸಿನಿ ಗುಡಿಗೆ ಶೃಂಗೇರಿ ಶಾರದಾ ವಿಗ್ರಹ ಅ.5ಕ್ಕೆ ಹಸ್ತಾಂತರ

ಕಾಶ್ಮೀರದ ತೀತ್ವಾಲ್ ನಲ್ಲಿನ ಶ್ರೀ ಶಾರದಾ ದೇವಿ ದೇವಸ್ಥಾನ ಕಾಮಗಾರಿ ಶೇ.75ರಷ್ಟು ಪೂರ್ಣ | ನವೆಂಬರ್ ವೇಳೆಗೆ ದೇವಸ್ಥಾನದ ಕಾಮಗಾರಿ ಪೂರ್ಣ | ಶ್ರೀ ಶಾರದಾ ದೇಗುಲಕ್ಕೆ ತೆರಳಲು 300 ಮೀಟರ್ ರಸ್ತೆ ನಿರ್ಮಿಸದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಸರ್ಕಾರ | ಶಾರದಾ ಸಂರಕ್ಷಣಾ ಸಮಿತಿ ಮನವಿಗೆ ಸ್ಪಂದಿಸದ ಸರ್ಕಾರ

by Bengaluru Wire Desk
October 5, 2022
in News Wire, Public interest
Reading Time: 2 mins read
0
ಕಾಶ್ಮೀರದ ತೀತ್ವಾಲ್ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶಾರದಾ ದೇವಸ್ಥಾನ ಕಾಮಗಾರಿಯ ಚಿತ್ರ

ಕಾಶ್ಮೀರದ ತೀತ್ವಾಲ್ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶಾರದಾ ದೇವಸ್ಥಾನ ಕಾಮಗಾರಿಯ ಚಿತ್ರ

ಬೆಂಗಳೂರು, ಅ.1 www.bengaluruwire.com : ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಕಟ್ಟ ಕಡೆಯ ಹಳ್ಳಿ ತೀತ್ವಾಲ್ ನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶಾರದಾ ದೇವಿಯ ದೇವಸ್ಥಾನಕ್ಕೆ, ಶೃಂಗೇರಿಯ ಶ್ರೀ ಶಾರದಾಪೀಠದಿಂದ ಪಂಚಲೋಹದ ಶಾರಾದಾ ದೇವಿಯ ವಿಗ್ರಹವನ್ನು, ಕಾಶ್ಮೀರ ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿ (Save Sharada Committee Kashmir)ಯ ನಿಯೋಗಕ್ಕೆ ಇದೇ ಅ.5ರ ವಿಜಯದಶಮಿಯ ದಿನ ಸಾಂಕೇತಿಕವಾಗಿ ಹಸ್ತಾಂತರಿಸಲಾಗುತ್ತಿದೆ.

ಶೃಂಗೇರಿಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಕಾಶ್ಮೀರದ ಗಡಿಭಾಗದ ತೀತ್ವಾಲ್ ನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶಾರದಾ ದೇವಿ ದೇವಸ್ಥಾನ ಸೇವ್ ಶಾರದಾ ಸಮಿತಿಯ ಅಧ್ಯಕ್ಷ ರವೀಂದ್ರ ಪಂಡಿತ್ ನೇತೃತ್ವದ ನಿಯೋಗಕ್ಕೆ ಸಾಂಕೇತಿಕವಾಗಿ ಹಸ್ತಾಂತರಿಸಿ ಆಶೀರ್ವಾದ ನೀಡಲಿದ್ದಾರೆ ಎಂದು ಸಮಿತಿ ಬೆಂಗಳೂರು ವೈರ್ ಗೆ ತಿಳಿಸಿದೆ.

ಸಮಿತಿ ಅಧ್ಯಕ್ಷರಾದ ರವೀಂದ್ರ ಪಂಡಿತ್ ಚಿತ್ರ

“ಅ.5ರಂದು ಶೃಂಗೇರಿಯಲ್ಲಿ ಶ್ರೀ ಶಾರಾದಾ ಪೀಠದ ಜಗದ್ಗುರುಗಳು ಈ ಹಿಂದೆ ತಿಳಿಸಿದಂತೆ ಶ್ರೀ ಶಾರಾದಾ ದೇವಿಯ ಪಂಚಲೋಹದ ವಿಗ್ರಹ ಹಾಗೂ ಶ್ರೀ ಶಂಕರಾಚಾರ್ಯರ ಮೂರ್ತಿಗಳನ್ನು ಸಾಂಕೇತಿಕವಾಗಿ ಕಾಶ್ಮೀರ ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿಯ ನಿಯೋಗಕ್ಕೆ ಹಸ್ತಾಂತರಿಸಲಿದ್ದಾರೆ. ಈ ವಿಗ್ರಹಗಳನ್ನು ದೇವಸ್ಥಾನದ ಕಾಮಗಾರಿಗಳನ್ನು ಪೂರ್ಣವಾಗುವ ತನಕ ಶೃಂಗೇರಿ ಶಾರದಾಪೀಠದಲ್ಲಿಡಬೇಕಾ? ಅಥವಾ ಬೆಂಗಳೂರಿನಲ್ಲಿರುವ ಕಾಶ್ಮೀರ ಭವನದಲ್ಲಿಡಬೇಕಾ? ಎಂಬ ಬಗ್ಗೆ ನಿರ್ಧಾರವಾಗಿಲ್ಲ. ಜನವರಿ 15ರ ಸಂಕ್ರಮಣದ ನಂತರ ಈ ಮೂರ್ತಿಗಳನ್ನುಕಾಶ್ಮೀರಕ್ಕೆ ಕೊಂಡೊಯ್ಯಲಾಗುತ್ತದೆ. ಮುಂದಿನ ವರ್ಷದ ನವರಾತ್ರಿಯ ಮೊದಲ ದಿನ ದೇವಸ್ಥಾನವನ್ನು ಉದ್ಘಾಟನೆ ಮಾಡಲು ಚಿಂತನೆ ನಡೆಸಲಾಗಿದೆ” ಎಂದು ಸಮಿತಿಯ ಅಧ್ಯಕ್ಷರಾದ ರವೀಂದ್ರ ಪಂಡಿತ್ ಅವರು ಬೆಂಗಳೂರು ವೈರ್ ಗೆ ವಿವರಿಸಿದ್ದಾರೆ.

ಶ್ರೀ ಶಾರದಾ ದೇವಿಯ ಶಿಲೆಯಲ್ಲಿ ನಿರ್ಮಿಸುತ್ತಿರುವ ದೇವಸ್ಥಾನ ಕಾಮಗಾರಿ ಪರಿಸ್ಥಿತಿ ಅನುಕೂಲವಾಗಿದ್ದಲ್ಲಿ ಅಕ್ಟೋಬರ್ ವೇಳೆಗೆ ಪೂರ್ಣವಾಗಲಿದೆ ಎಂದು ಈ ಹಿಂದೆ ಬೆಂಗಳೂರಿನಲ್ಲಿ ಪ್ರತಿಕಾಗೋಷ್ಠಿ ನಡೆಸಿದ್ದ ಕಾಶ್ಮೀರ ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿ ತಿಳಿಸಿತ್ತು. ಆದರೆ ಈಗ ನವೆಂಬರ್ ವೇಳೆಗೆ ಶ್ರೀ ಶಾರದಾ ದೇವಿ ದೇವಸ್ಥಾನದ ಕಾಮಗಾರಿ ಪೂರ್ಣವಾಗಲಿದೆ ಎಂದವರು ಹೇಳಿದ್ದಾರೆ.

ಶ್ರೀ ಶಾರದಾ ದೇವಿ ದೇವಸ್ಥಾನ ಕಾಮಗಾರಿ ಶೇ.75ರಷ್ಟು ಪೂರ್ಣ :

  • ಶ್ರೀ ಶಾರದಾ ದೇವಿ ದೇವಸ್ಥಾನ ಕಾಮಗಾರಿಯ ಚಿತ್ರ

“ತೀತ್ವಾಲ್ ನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶಂಕರಾಚಾರ್ಯರು ನಿರ್ಮಿಸಿದ ನಾಲ್ಕು ಪೀಠಗಳನ್ನು ಪ್ರತಿನಿಧಿಸುವ 4 ದ್ವಾರಗಳನ್ನು ಹೊಂದಿರುವ ದೇವಸ್ಥಾನದ ಕಾಮಗಾರಿ ಶೇ.75ರಷ್ಟು ಪೂರ್ಣವಾಗಿದೆ. ಮುಖ್ಯ ದ್ವಾರಕ್ಕೆ ಉತ್ತಮ ಗುಣಮಟ್ಟದ ಬಾಗಿಲುಗಳನ್ನು ಅಳವಡಿಸಲಾಗಿದೆ. ಉಳಿದಂತೆ 3 ಬಾಗಿಲುಗಳನ್ನು ಅಳವಡಿಸುವ, ಗ್ರಾನೈಟ್ ನೆಲಹಾಸು, ಮೇಲ್ಛಾವಣಿ, ದೇವಸ್ಥಾನದ ಹೊರಗಿನ ಸೌಂದರ್ಯೀಕರಣ, ಗೇಟು ಮತ್ತು ಕಾಂಪೌಡ್ ನಿರ್ಮಾಣ ಕಾರ್ಯ ಬಾಕಿ ಉಳಿದಿದೆ. ದೇವಸ್ಥಾನದ ಪಕ್ಕದಲ್ಲಿ ಸಿಖ್ಖರ ಗುರುದ್ವಾರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಶಾರದಾ ದೇವಸ್ಥಾನದ ಕಾಮಗಾರಿ ನವೆಂಬರ್ ನಲ್ಲಿ ಪೂರ್ಣಗೊಳ್ಳಲಿದೆ” ಎಂದು ರವೀಂದ್ರ ಪಂಡಿತ್ ಅವರು ತಿಳಿಸಿದ್ದಾರೆ.

ಶ್ರೀ ಶಾರದಾ ದೇವಸ್ಥಾನಕ್ಕೆ ತೆರಳಲು ರಸ್ತೆ ನಿರ್ಮಿಸದ ಸ್ಥಳೀಯಾಡಳಿತ :

ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಸರ್ಕಾರಕ್ಕೆ ತೀತ್ವಾಲ್ ನಲ್ಲಿನ ಮುಖ್ಯರಸ್ತೆಯಿಂದ ಶಾರದಾ ದೇವಸ್ಥಾನದ ತನಕ 300 ಮೀಟರ್ ರಸ್ತೆ ನಿರ್ಮಿಸುವಂತೆ ಕಾಶ್ಮೀರ ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿ ಹಲವು ಬಾರಿ ಮನವಿ ಸಲ್ಲಿಸಿತ್ತು. ಜಮ್ಮು ಮತ್ತು ಕಾಶ್ಮೀರ ಸರ್ಕಾರ 65 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಸಮಗ್ರ ಯೋಜನಾ ವರದಿಯನ್ನು ತಯಾರಿಸಿಟ್ಟಿದೆ. ಆದರೆ ಈತನಕ ರಸ್ತೆ ಕಾಮಗಾರಿ ಆರಂಭಿಸಿಲ್ಲ. ಜಗತ್ತಿನಾದ್ಯಂತ ಶ್ರೀ ಶಾರದಾ ದೇವಿಯ ದೇವಸ್ಥಾನ ನಿರ್ಮಾಣಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾದರೂ, ಸ್ಥಳೀಯ ಸರ್ಕಾರ ಮಾತ್ರ ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಸಮಿತಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನ ನಿರ್ಮಾಣಕ್ಕೆ 2ನೇ ಡಿಸೆಂಬರ್ 2021ರಂದು ಭೂಮಿ ಪೂಜೆ ನೆರವೇರಿಸಿ, ಈ ವರ್ಷದ 26ನೇ ಮಾರ್ಚ್ ನಿಂದ ವಾಸ್ತವವಾಗಿ ಶ್ರೀ ದೇವರ ದೇಗುಲ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಬೆಂಗಳೂರಿನ ಹೊರವಲಯದ ಸೀಗೇಹಳ್ಳಿಯಲ್ಲಿ 12*12 ಅಡಿ ವಿಸ್ತೀರ್ಣದ ದೇವಸ್ಥಾನಕ್ಕೆ ಅಗತ್ಯವಾದ ಕಲ್ಲಿನ ಕಂಬಗಳು, ಹಾಗೂ ಕಲ್ಲಿನ ಚಪ್ಪಡಿಗಳು ಹಾಗೂ ಕೆತ್ತನೆಯಾದ ಕಂಬಗಳನ್ನು ಇಲ್ಲಿಂದಲೇ ಟ್ರಕ್ ನಲ್ಲಿ ಹರಸಾಹಸ ಪಟ್ಟು ತೀತ್ವಾಲ್ ನ ದೇವಸ್ಥಾನ ನಿರ್ಮಾಣ ಸ್ಥಳಕ್ಕೆ ಕೊಂಡೊಯ್ಯಲಾಗಿತ್ತು. ಸಾಗಣೆಗೆ ಅನುಕೂಲವಾಗುವಂತೆ ಕಲ್ಲಿನ ನಿರ್ಮಾಣಗಳನ್ನು 6-7 ಅಡಿಗಳಾಗಿ ವಿಭಜಿಸಲಾಗಿತ್ತು.

ಪಿಒಕೆ ಕಾಶ್ಮೀರದಲ್ಲಿ ತೀರ್ಥಯಾತ್ರೆ ಉದ್ದೇಶ :

1947ರ ಪೂರ್ವದಲ್ಲಿ ಭಾರತ – ಪಾಕಿಸ್ತಾನ ವಿಭಜನೆಗೆ ಮುಂಚೆ ಶ್ರೀ ಶಾರದಾ ದೇವಿ ದೇವಸ್ಥಾನಕ್ಕೆ ಪ್ರತಿವರ್ಷ ಹಿಂದೂಗಳು ಯಾತ್ರೆ ಕೈಗೊಳ್ಳುತ್ತಿದ್ದರು. ವಿಭಜನೆಯ ಬಳಿಕ ದೇವಸ್ಥಾನ ಸಂಪೂರ್ಣವಾಗಿ ನಾಶವಾಗಿ ಭಾರತದಿಂದ ಭಕ್ತಾದಿಗಳು ತೆರಳುತ್ತಿದ್ದ ಯಾತ್ರೆಯು ನಿಂತು ಹೋಗಿತ್ತು. ಹೀಗಾಗಿ ಪುನಃ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಶ್ರೀ ಶಾರದಾ ದೇವಸ್ಥಾನವಿರುವ ಸ್ಥಳಕ್ಕೆ ಪುನಃ ಯಾತ್ರೆ ಆರಂಭಿಸಲು ಅನುವಾಗುವಂತೆ, ಈ ಹಿಂದೆ ತೀರ್ಥಯಾತ್ರೆ ಪ್ರಾರಂಭವಾಗುತ್ತಿದ್ದ ತೀತ್ವಾಲ್ ಪ್ರದೇಶದ ಆ ಬೇಸ್ ಕ್ಯಾಂಪ್ ನಲ್ಲಿಯೇ ಶಾರದಾ ದೇವಸ್ಥಾನ ನಿರ್ಮಿಸಲಾಗುತ್ತಿದೆ.

WhatsApp Join our WhatsApp Channel
Previous Post

HEALTH TIPS | ಚಳಿಗಾಲದಲ್ಲಿ ಇಂತಹ ತಪ್ಪುಗಳನ್ನು ಮಾಡಲು ಹೋಗದಿರಿ : ಆರೋಗ್ಯ ಹದಗೆಡಲಿದೆ ; ಆಯುರ್ವೇದಲ್ಲಿನ ಸರಳ ಪರಿಹಾರವೇನು? ಇಲ್ಲಿದೆ ತಜ್ಞ ವೈದ್ಯರ ಸಲಹೆ

Next Post

ಇಲಾಖೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಜತ ಕಮಲ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ವಾರ್ತಾ ಇಲಾಖೆ : ಸಿಎಂ ಬೊಮ್ಮಾಯಿ ಶ್ಲಾಘನೆ

Next Post
ವಾರ್ತಾ ಇಲಾಖೆ ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಸ್ವೀಕರಿಸಿದ ರಜತ ಕಮಲ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರದರ್ಶಿಸುತ್ತಿರುವ ಇಲಾಖೆ ಆಯುಕ್ತ ಡಾ.ಹರ್ಷ ಪಿ.ಎಸ್

ಇಲಾಖೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಜತ ಕಮಲ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ವಾರ್ತಾ ಇಲಾಖೆ : ಸಿಎಂ ಬೊಮ್ಮಾಯಿ ಶ್ಲಾಘನೆ

ಬದನವಾಳು ಗ್ರಾಮದಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇಯ್ಕೆ ಮಾಡುತ್ತಿರುವುದನ್ನು ಪರಿಶೀಲಿಸಿದರು. ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೊತೆಗಿದ್ದರು.

ಗಾಂಧೀಜಿ ಬಂದಿದ್ದ ಬದನವಾಳು ಖಾದಿ ಕೇಂದ್ರಕ್ಕೆ ರಾಹುಲ್ ಭೇಟಿ : ಹತ್ಯಾಕಾಂಡ ನಡೆದ 3 ದಶಕಗಳ ಬಳಿಕ ಎರಡು ಸಮುದಾಯಗಳ ಜೊತೆ ಭೋಜನ ಸವಿದ ಕಾಂಗ್ರೆಸ್ ನಾಯಕ

Please login to join discussion

Like Us on Facebook

Follow Us on Twitter

Recent News

ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

August 1, 2026

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

August 1, 2026

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group