Sunday, September 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

  • Bengaluru Focus

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

HEALTH TIPS | ಚಳಿಗಾಲದಲ್ಲಿ ಇಂತಹ ತಪ್ಪುಗಳನ್ನು ಮಾಡಲು ಹೋಗದಿರಿ : ಆರೋಗ್ಯ ಹದಗೆಡಲಿದೆ ; ಆಯುರ್ವೇದಲ್ಲಿನ ಸರಳ ಪರಿಹಾರವೇನು? ಇಲ್ಲಿದೆ ತಜ್ಞ ವೈದ್ಯರ ಸಲಹೆ

ಚಳಿಗಾಲದಲ್ಲಿ ಸಾಮಾನ್ಯವಾಗಿ ಅಸ್ತಮಾ, ಸೋರಿಯಾಸಿಸ್, ನೆಗಡಿ- ಕೆಮ್ಮು, ಬ್ರಾಂಕೈಟಿಸ್ ನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಎಚ್ಚರಿಕೆ ವಹಿಸಿ ಮನೆ ಮದ್ದು ಮಾಡಿ. ಮನೆಮದ್ದು ಮಾಡಿ ಆರೋಗ್ಯ ನಿರ್ವಹಣೆ ಮಾಡಿಕೊಂಡರು ಉತ್ತಮ. ರೋಗ ಉಲ್ಬಣವಾಗಿದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಒಳಿತು ಅಂತಾರೆ ಆಯುರ್ವೇದ ತಜ್ಞರಾದ ಡಾ.ಮಂಗಳಾ ಜ್ಯೋತ್ಸ್ನಾ.

by Bengaluru Wire Desk
October 6, 2022
in BW Special, Public interest
Reading Time: 7 mins read
0
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದ ಹವಾಮಾನಕ್ಕೆ ತಕ್ಕಂತೆ ಆಯುರ್ವೇದದಲ್ಲಿ ಒಂದು ವರ್ಷವನ್ನು ಆರು ಋತುಗಳಾಗಿ ವಿಂಗಡಿಸಲಾಗಿದೆ. ವಸಂತ, ಗ್ರೀಷ್ಮ, ವರ್ಷ , ಶರದ್‌, ಹೇಮಂತ, ಶಿಶಿರ ಋತು, ಇವುಗಳಲ್ಲಿ ಶಿಶಿರ-ವಸಂತ-ಗ್ರೀಷ್ಮ ಋತುಗಳು ಆದಾನಕಾಲ(ಉತ್ತರಾಯಣ) ಹಾಗೂ ವರ್ಷ-ಶರದ್-ಹೇಮಂತ ಋತುಗಳು ವಿಸರ್ಗಾಕಾಲ(ದಕ್ಷಿಣಾಯನ). ಹೇಮಂತ-ಶಿಶಿರ ಋತುಗಳು ಚಳಿಗಾಲ – ಸಾಮಾನ್ಯವಾಗಿ ನವೆಂಬರ್‌ಮಧ್ಯದಿಂದ ಮಾರ್ಚ್‌ಮಧ್ಯದವರೆಗೆ ಇರುತ್ತದೆ. ಈ ಋತುವಿನಲ್ಲಿ ವಾತಾವರಣ ತಣ್ಣಗಿರುತ್ತದೆ ಮತ್ತು ಗಾಳಿಯ ತೀಕ್ಷ್ಣತೆ ಹೆಚ್ಚಿರುತ್ತದೆ.

ಆದ್ದರಿಂದ ಜೀರ್ಣ ಶಕ್ತಿಯೂ ಸಹ ಜಾಸ್ತಿಯಾಗಿರುತ್ತದೆ. ಹಾಗಾಗಿ ಸರಿಯಾದ ಆಹಾರವನ್ನು ನೀಡದೇ ಹೋದಲ್ಲಿ ಈ ವೃದ್ಧಿಯಾಗಿರುವ ಜೀರ್ಣ ಶಕ್ತಿ ಅನೇಕ ಶಾರೀರಿಕ ತೊಂದರೆಗಳಿಗೆ ಎಡೆಮಾಡಿಕೊಡುತ್ತದೆ. ಈ ಋತುವಿನಲ್ಲಿ ಹೇಳಿರುವ ಆಹಾರ – ವಿಹಾರಗಳನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳದೇ ಹೋದಲ್ಲಿ ನಂತರದ ಋತುಗಳಲ್ಲಿ ಅಥವಾ ಅದೇ ಋತುವಿನಲ್ಲಿ ವಾತ ಮತ್ತು ಕಫದ ತೊಂದರೆಗಳು ಉಂಟಾಗುತ್ತದೆ.

 ಸಾಮಾನ್ಯವಾಗಿ ಚಳಿಗಾಲದಲ್ಲಿ (Winter Season) ಕಂಡುಬರುವ ಆರೋಗ್ಯ ಸಮಸ್ಯೆಗಳೆಂದರೆ, ಗಂಟಲು ಕೆರೆತ, ಗಂಟಲು ನೋವು, ನೆಗಡಿ – ಕೆಮ್ಮು, ಸೈನಸೈಟಿಸ್‌, ಕಿವಿಯ ಸೋಂಕಿನ ತೊಂದರೆಗಳು, ಮೈಗ್ರೇನ್‌ ತೊಂದರೆಗಳು, ನ್ಯುಮೋನಿಯಾ, ಬ್ರಾಂಕೈಟಿಸ್‌, ಅಸ್ತಮಾ ತೊಂದರೆಗಳು, ವಯಸ್ಸಾದವರಲ್ಲಿ ಮಂಡಿನೋವು,ಕೀಲು ನೋವು, ಚರ್ಮದ ತೊಂದರೆಗಳಂದರೆ – ಒಣಗಿದ ಚರ್ಮ, ಅತಿಯಾದ ಚರ್ಮದ ಕೆರೆತ, ಮೊದಲೇ ಸೋರಿಯಾಸಿಸ್‌ ಅಥವಾ ಅಟೋಪಿಕ್‌ ಡರ್ಮಟೈಟಿಸ್‌ ನಂತಹ ತೊಂದರೆಗಳಿಂದ ಬಳಲುತ್ತಿದ್ದರೆ ಅವು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.

ಆರೋಗ್ಯವನ್ನು ಕಾಪಾಡಿಕೊಳ್ಳಲು ಏನನ್ನು ಮಾಡಬೇಕು?

ಆಹಾರ –

•             ಹುಳಿ, ಲವಣ, ಮಧುರ ಆಹಾರಗಳು. (ದಾಳಿಂಬೆ, ಕಿತ್ತಳೆಹಣ್ಣು, ಅನ್ನ, ಪಾಯಸ ಇತ್ಯಾದಿ)

ಸಾಂದರ್ಭಿಕ ಚಿತ್ರ

•             ಜಿಡ್ಡಿನ ಅಂಶವುಳ್ಳ ಪದಾರ್ಥಗಳು. (ತುಪ್ಪ, ಬೆಣ್ಣೆ, ಎಣ್ಣೆ, ಎಳ್ಳು, ಹಾಲು ಇತ್ಯಾದಿ)

•             ನಿಧಾನವಾಗಿ ಜೀರ್ಣವಾಗುವ ಪದಾರ್ಥಗಳು. (ಮಾಂಸ, ಪನ್ನೀರ್‌, ಉದ್ದಿನ ಪದಾರ್ಥಗಳು)

•             ಉಷ್ಣ ಪದಾರ್ಥಗಳು. (ಬಿಸಿ ಆಹಾರ, ದೇಹದ ಉಷ್ಣ ಹೆಚ್ಚಿಸುವ ಪದಾರ್ಥಗಳು)

•             ಹಾಲಿನ ಪದಾರ್ಥಗಳು. (ಪಾಯಸ, ಪನ್ನೀರ್‌, ತುಪ್ಪ, ಬೆಣ್ಣೆ ಇತ್ಯಾದಿ)

•             ಕಬ್ಬಿನ ಪದಾರ್ಥಗಳು. (ಬೆಲ್ಲ, ಜೋನಿ ಬೆಲ್ಲ, ಸಕ್ಕರೆ, ಕಲ್ಲು ಸಕ್ಕರೆ)

•             ಅಕ್ಕಿ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳು. (ರೊಟ್ಟಿ, ದೋಸೆ, ಲಡ್ಡು)

•             ಗೋಧಿ ಹಿಟ್ಟಿನಿಂದ ತಯಾರಿಸಲ್ಪಟ್ಟ ಆಹಾರಗಳು. (ಪಾಯಸ, ಲಡ್ಡು, ಮೋದಕ, ಚಪಾತಿ)

•             ಮಾಂಸದ ರಸ(ಸೂಪ್‌). (ಪೌಷ್ಟಿಕಾಂಶವುಳ್ಳ ಪ್ರಾಣಿಯ ಮಾಂಸ, ಕೊಬ್ಬಿನಂಶವುಳ್ಳ ಪ್ರಾಣಿಯ ಮಾಂಸದ ರಸ)

ಈ ಆಹಾರಗಳನ್ನು ಹಸಿವೆಯನ್ನು ಗಮನದಲ್ಲಿರಿಸಿ ಸೇವಿಸಬೇಕು. ಒಮ್ಮೆ ಸೇವಿಸಿದ ಆಹಾರ ಜೀರ್ಣವಾದ ನಂತರವೇ ಪುನಃ ಆಹಾರ ಸೇವಿಸಬೇಕು. ಮತ್ತು ಈ ಋತುವಿನಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸದಿದ್ದರೆ ಶರೀರದ ಧಾತುಗಳಿಗೆ ಹಾನಿ ಉಂಟಾಗುತ್ತದೆ.

ವಿಹಾರ –

•             ಪ್ರತಿನಿತ್ಯ ಎಳ್ಳೆಣ್ಣೆಯಿಂದ ಅಭ್ಯಂಗ ಮಾಡಿ – ಶರೀರದ ಅಂಗ ಮರ್ದನ ಮಾಡಿಸಿಕೊಳ್ಳಬೇಕು – ನಂತರ ಔಷಧೀಯ ಪುಡಿಗಳಿಂದ ಉತ್ಸಾದನ ಮಾಡಿಕೊಳ್ಳಬೇಕು.

•             ನಿಯಮಿತವಾಗಿ ಮೂರ್ಧ್ನಿ ತೈಲ(ಎಣ್ಣೆ ಹಚ್ಚುವುದು, ಪಿಚು, ಬಸ್ತಿ, ಶಿರೋಧಾರಾ) ಅಭ್ಯಾಸ ಮಾಡಬೇಕು.

•             ಎಳೆ ಬಿಸಿಲಿಗೆ ಮೈ ಒಡ್ಡಬೇಕು.

•             ತಮ್ಮ ಶಕ್ತಿಯನ್ನು ಗಮನದಲ್ಲಿರಿಸಿಕೊಂಡು ವ್ಯಾಯಾಮ ಮಾಡಬಹುದು.

•             ಪಾದಾಘಾತ ಮಾಡಿಸಿಕೊಳ್ಳಬಹುದು.

•             ಹೆಚ್ಚು ಚಳಿಗಾಳಿಗೆ ಮೈಯನ್ನು ಒಡ್ಡಬಾರದು.

•             ಬೆಚ್ಚಗಿರಿಸುವ ಬಟ್ಟೆಗಳನ್ನು(ಹತ್ತಿಯ ಬಟ್ಟೆ/ದಪ್ಪಗೆ ಹೆಣೆದಿರುವ ಬಟ್ಟೆಗಳು/ವುಲ್ಲನ್‌ ಬಟ್ಟೆಗಳು) ಧರಿಸಬೇಕು.

•             ಮನೆಯೊಳಗೆ ನೇರವಾಗಿ ಗಾಳಿ ಬರುವುದನ್ನು ತಡೆಯಬೇಕು, ಮನೆಯ ವಾತಾವರಣ ಬೆಚ್ಚಗಿರಿಸಬೇಕು, ರೂಮ್‌ ಹೀಟರ್‌ಗಳನ್ನು ಮಿತವಾಗಿ ಬಳಸಬಹುದು.

•             ಎಲ್ಲ ಕೆಲಸಗಳಿಗೂ ಬಿಸಿ ನೀರನ್ನು ಉಪಯೋಗಿಸಬಹುದು.

•             ಕುಡಿಯುವುದಕ್ಕೆ ಹೆಚ್ಚು ಬಿಸಿ ಇರುವ ನೀರಿಗಿಂತ ಉಗುರು ಬೆಚ್ಚಗಿರುವ ನೀರನ್ನು ಉಪಯೋಗಿಸಬಹುದು.

ಈ ಮೇಲೆ ಹೇಳಿದ ವಿಷಯಗಳಲ್ಲಿ ಅಂಗ ಮರ್ದನ, ಉತ್ಸಾದನ, ಶಿರೋಪಿಚು-ಬಸ್ತಿ-ಧಾರಾ, ಪಾದಾಘಾತ ಇವುಗಳನ್ನು ಆಯುರ್ವೇದ ತಜ್ಞ ವೈದ್ಯರನ್ನು ಕಂಡು ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬಹುದು.

ಏನನ್ನು ಮಾಡಬಾರದು?

•             ತಣ್ಣಗಿನ ವಸ್ತುಗಳನ್ನು ಸೇವಿಸುವುದು.(ಐಸ್‌ಕ್ರೀಮ್‌, ಫ್ರಿಡ್ಜ್‌ನಲ್ಲಿ ಇರಿಸಿದ ವಸ್ತುಗಳು, ಮೊಸರು)

•             ಒಣ ಆಹಾರ ವಸ್ತುಗಳು. (ಬಿಸ್ಕೆಟ್‌, ರಸ್ಕ್‌, ಒಣಮೀನು – ಮಾಂಸ, ಬ್ರೆಡ್‌, ಕೇಕ್‌)

•             ಚಳಿಗಾಳಿಗೆ ಮೈ ಒಡ್ಡುವುದು.

•             ಹಸಿ ತರಕಾರಿ, ಹಸಿ ಮೊಳಕೆಕಾಳುಗಳು.

•             ಊಟ ಮಾಡದೇ ಇರುವುದು.

ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಕೆಲ ಔಷಧಿಗಳು –

•             ಗಂಟಲು ಕೆರೆತ/ನೋವು –

         ಉಪ್ಪು ಬಿಸಿ ನೀರಿನಲ್ಲಿ ಗಂಟಲು ಮುಕ್ಕಳಿಸುವುದು.

         ಬಿಸಿ ನೀರಿನ ಶಾಖ ತೆಗೆದು ಕೊಳ್ಳಬಹುದು.

         ಕಾಳು ಮೆಣಸು ಕಲ್ಲುಪ್ಪುಗಳನ್ನು ಬಾಯಲ್ಲಿ ಇಟ್ಟುಕೊಳ್ಳಬಹುದು.

ಸಾಂದರ್ಭಿಕ ಚಿತ್ರ

•             ನೆಗಡಿ ಮತ್ತು ಕೆಮ್ಮು –

         ಶುಂಠಿ, ಅರಿಶಿಣ, ಬೆಲ್ಲ, ಕಾಳುಮೆಣಸು ಹಾಕಿ ಕಷಾಯ ಮಾಡಿ ಸೇವಿಸಬಹುದು.

         ದೊಡ್ಡಪತ್ರೆ ಎಲೆಯನ್ನು ಉಪ್ಪು ಅಥವಾ ಜೇನುತುಪ್ಪದೊಂದಿಗೆ ಸೇವಿಸಬಹುದು.

         ಬಿಸಿ ನೀರಿನ ಶಾಖ/ಆವಿ ತೆಗೆದು ಕೊಳ್ಳಬಹುದು.

         ತುಳಸಿ ಎಲೆಯ ರಸವನ್ನು ಜೇನುತುಪ್ಪದೊಟ್ಟಿಗೆ ತೆಗೆದುಕೊಳ್ಳಬಹುದು.

         ಈರುಳ್ಳಿ ಮತ್ತು ಬೆಲ್ಲವನ್ನು ತಿನ್ನಬಹುದು.

ಜ್ವರ, ನ್ಯುಮೋನಿಯಾ, ಬ್ರಾಂಕೈಟಿಸ್‌, ಅಸ್ತಮಾ ತೊಂದರೆಗಳಿಗೆ ಅಧಿಕ ತಪಾಸಣೆಯ ಅಗತ್ಯವಿರುವುದರಿಂದ ವೈದ್ಯರನ್ನು ಕಾಣುವುದು ಸೂಕ್ತ.

•             ಕಿವಿನೋವು –

         ಬಿಸಿ ನೀರಿನ ಹಬೆ/ಆವಿ ತೆಗೆದು ಕೊಳ್ಳಬಹುದು.

         ಕಿವಿಯ ಸುತ್ತ ಬಿಸಿ ಬಟ್ಟೆಯ ಶಾಖ ತೆಗೆದುಕೊಳ್ಳಬಹುದು.

         ತಲೆಗೆ ಟೊಪ್ಪಿಯನ್ನು ಧರಿಸಬೇಕು.

         ಉಪ್ಪು ಬಿಸಿನೀರಿನಲ್ಲಿ ಗಂಟಲು ಮುಕ್ಕಳಿಸುವುದು.

ಕಿವಿಯಿಂದ ಕೀವು/ನೀರು ಸೋರುವುದು, ಕಿವಿ ಕೇಳಿಸದೇ ಇರುವುದು ಈ ತೊಂದರೆಗಳು ಉಂಟಾದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು.

•             ಸೈನಸ್‌ ತಲೆನೋವು –

         ಬಿಸಿ ನೀರಿನ ಶಾಖ/ಹಬೆ.

         ಪಿಪ್ಪಲಿಯೊಂದಿಗೆ ಜೇನುತುಪ್ಪ.

•             ಮೈಗ್ರೇನ್‌ ತಲೆನೋವು –

         ಖಾರ- ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು.

         ಹಸಿವೆಯನ್ನು ಗಮನದಲ್ಲಿಟ್ಟುಕೊಂಡು ಊಟ ಮಾಡಬೇಕು.

         ಅಳಲೇಕಾಯಿ ಪುಡಿ ಅರ್ಧ ಚಮಚ ಬಿಸಿನೀರಿನೊಟ್ಟಿಗೆ ಸೇವಿಸಬಹುದು.

         ಜೀರಿಗೆ ಮತ್ತು ಓಂ ಕಾಳು ಕಷಾಯ ಮಾಡಿ ಸೇವಿಸಬಹುದು.

•             ಮಂಡಿನೋವು/ಕೀಲುನೋವು –

         ಎಳ್ಳೆಣ್ಣೆಯಲ್ಲಿ ಅಭ್ಯಂಗ ಮಾಡಿ ಪ್ರತಿನಿತ್ಯ ಸ್ನಾನ ಮಾಡುವುದು.

         ನಿಯಮಿತ ವ್ಯಾಯಾಮ ಮಾಡುವುದು.

         ಕೀಲುಗಳು ಹಿಡಿದುಕೊಂಡಂತಾದಲ್ಲಿ – ಉಪ್ಪನ್ನು ಬಿಸಿಮಾಡಿ ದಪ್ಪ ಬಟ್ಟೆಯಲ್ಲಿ ಕಟ್ಟಿ ಶಾಖ ಕೊಡಬಹುದು.

ಕೀಲುಗಳಲ್ಲಿ ಊತ ಕಂಡುಬಂದಲ್ಲಿ ವೈದ್ಯರನ್ನು ಕಾಣೂವುದು ಸೂಕ್ತ.

•             ಅತಿಯಾಗಿ ಒಣಗಿದ ಚರ್ಮ –

         ಅಭ್ಯಂಗ ಮಾಡಿ ಸ್ನಾನ ಮಾಡುವುದು.

         ಒಣಗಿದ ಹಿಮ್ಮಡಿ – ನಿಯಮಿತವಾಗಿ ಎಣ್ಣೆ ಹಚ್ಚಿ – ಬಿಸಿನೀರಿನಲ್ಲಿ 15-20 ನಿಮಿಷದವರೆಗೆ ಇಟ್ಟು ತೆಗೆಯಬಹುದು.

         ಒಣಗಿದ ತುಟಿ – ತುಪ್ಪ/ಬೆಣ್ಣೆ/ಹಾಲಿನ ಕೆನೆ ಹಚ್ಚಬಹುದು.

ಸಾಂದರ್ಭಿಕ ಚಿತ್ರ

•             ಅತಿಯಾದ ಚರ್ಮದ ಕೆರೆತ –

         ನೆಲನೆಲ್ಲಿ ಗಿಡದ ಕಷಾಯ ಮಾಡಿ ಸೇವಿಸಬಹುದು.

         ದೊಡ್ಡ ಪತ್ರೆ ಎಲೆಯೊಂದಿಗೆ ಉಪ್ಪು/ಜೇನುತುಪ್ಪ ಸೇರಿಸಿ ಸೇವಿಸಬಹುದು.

         ಬೇವಿನ ಎಲೆಯನ್ನು ಸ್ನಾನದ ಬಿಸಿ ನೀರಿಗೆ ಸೇರಿಸಿ ಸ್ನಾನ ಮಾಡಬಹುದು.

         ಜೀರಿಗೆ ಕಷಾಯ ಸೇವಿಸಬಹುದು.

ಸೋರಿಯಾಸಿಸ್‌/ಅಟೋಪಿಕ್‌ ಡರ್ಮಾಟೈಟಿಸ್‌ ನಂತಹ ತೊಂದರೆಗಳಿಗೆ ಪಂಚಕರ್ಮ ಚಿಕಿತ್ಸೆಯ ಅಗತ್ಯವಿರುವುದರಿಂದ ವೈದ್ಯರನ್ನು ಕಾಣುವುದು ಸೂಕ್ತ.

ಮಕ್ಕಳ ಬಗ್ಗೆ ವಹಿಸಿ ವಿಶೇಷ ಕಾಳಜಿ :

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಮತ್ತು ಶರೀರದ ಬಲ ಕಡಿಮೆ ಇರುವುದರಿಂದ ರೋಗಗಳು ಬೇಗನೆ ಹರಡುತ್ತವೆ. ಹಾಗಾಗಿ ಮಕ್ಕಳಿಗೆ ವಿಶೇಷವಾಗಿ ಗಮನ ನೀಡಬೇಕು.

         ಬೆಚ್ಚಗಿನ ವಾತಾವರಣದಲ್ಲಿ ಇರಿಸಬೇಕು.

         ಸ್ವೆಟರ್‌/ಟೋಪ್ಪಿ/ಕೈ-ಕಾಲು ಗವಸುಗಳನ್ನು ಹಾಕಬೇಕು.

         ಎಲ್ಲ ಕೆಲಸಗಳಿಗೂ ಬಿಸಿನೀರನ್ನು ಉಪಯೋಗಿಸಬೇಕು.

         ಹೊರಗಿನ ತಿಂಡಿ/ಬೇಕರಿ ತಿಂಡಿ/ ಫ್ರಿಡ್ಜ್‌ನಲ್ಲಿ ಇರಿಸಿದ ತಿಂಡಿಗಳನ್ನು ಕೊಡಬಾರದು.

         ಹಣ್ಣು/ಬೇಯಿಸಿದ ತರಕಾರಿ-ಸೊಪ್ಪು/ತುಪ್ಪ/ಹಾಲು ಗಳನ್ನು ಕೊಡಬೇಕು.

         ನಿಯಮಿತವಾಗಿ ಅಭ್ಯಂಗ ಮಾಡಿಸಿ ಸ್ನಾನ ಮಾಡಿಸಬೇಕು.

         ಹಾಲು, ಅರಿಶಿಣ, ಬೆಲ್ಲದೊಂದಿಗೆ ಕೊಡಬಹುದು.

         ಅಳಲೇಕಾಯಿಯನ್ನು ತುಪ್ಪದಲ್ಲಿ ತೇಯ್ದು ಕೊಡಬಹುದು.

–

  • ಲೇಖನ ಬರಹಗಾರರು – ಡಾ.ಮಂಗಳ ಜ್ಯೋತ್ಸ್ನಾ ಜಿ.ಪಿ
    ಮಕ್ಕಳ ತಜ್ಞರು ಮತ್ತು ಉಪನ್ಯಾಸಕರು, ಶ್ರೀ ಕಾಲಭೈರವೇಶ್ವರ ಸ್ವಾಮಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BBMP Election 2022 | ಬಿಬಿಎಂಪಿ ವಾರ್ಡ್ ಮೀಸಲಾತಿ ನ.30 ರ ಒಳಗೆ ಪ್ರಕಟಿಸಿ ಡಿ.31ರ ಒಳಗೆ ಚುನಾವಣೆ ನಡೆಸಿ : ಹೈಕೋರ್ಟ್ – ಇಲ್ಲಿದೆ ಕಂಪ್ಲೀಟ್ ನ್ಯೂಸ್

Next Post

Kashmir Sri Sharada Temple Idol | ಕಾಶ್ಮೀರ ಗಡಿಯ ಪುರವಾಸಿನಿ ಗುಡಿಗೆ ಶೃಂಗೇರಿ ಶಾರದಾ ವಿಗ್ರಹ ಅ.5ಕ್ಕೆ ಹಸ್ತಾಂತರ

Next Post
ಕಾಶ್ಮೀರದ ತೀತ್ವಾಲ್ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶಾರದಾ ದೇವಸ್ಥಾನ ಕಾಮಗಾರಿಯ ಚಿತ್ರ

Kashmir Sri Sharada Temple Idol | ಕಾಶ್ಮೀರ ಗಡಿಯ ಪುರವಾಸಿನಿ ಗುಡಿಗೆ ಶೃಂಗೇರಿ ಶಾರದಾ ವಿಗ್ರಹ ಅ.5ಕ್ಕೆ ಹಸ್ತಾಂತರ

ವಾರ್ತಾ ಇಲಾಖೆ ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಸ್ವೀಕರಿಸಿದ ರಜತ ಕಮಲ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರದರ್ಶಿಸುತ್ತಿರುವ ಇಲಾಖೆ ಆಯುಕ್ತ ಡಾ.ಹರ್ಷ ಪಿ.ಎಸ್

ಇಲಾಖೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಜತ ಕಮಲ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ವಾರ್ತಾ ಇಲಾಖೆ : ಸಿಎಂ ಬೊಮ್ಮಾಯಿ ಶ್ಲಾಘನೆ

Please login to join discussion

Like Us on Facebook

Follow Us on Twitter

Recent News

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

September 20, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d