Thursday, June 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

13th Bengaluru International Film Festival | ವರ್ಚುವಲ್ ಮಾದರಿಯಲ್ಲಿ ಚಲನಚಿತ್ರೋತ್ಸವ ಮಾಡುವುದು ಸರಿಯಲ್ಲ : ನಿರ್ದೇಶಕ ಎನ್.ಆರ್.ನಂಜುಂಡೇಗೌಡ

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ "ಬೆಳ್ಳಿರೇಖೆ" ಬುಲಿಟಿನ್ ಬಿಡುಗಡೆ

by Bengaluru Wire Desk
March 6, 2022
in Bengaluru Focus
Reading Time: 1 min read
0

ಬೆಂಗಳೂರು, (www.bengaluruwire.com) : ನಗರದಲ್ಲಿ ನಡೆಯುತ್ತಿರುವ 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ನಾಲ್ಕನೇ ದಿನವಾದ ಇಂದು ಒರಾಯನ್ ಮಾಲ್ ನಲ್ಲಿ ಕನ್ನಡ ಮತ್ತು ಕನ್ನಡೇತರ ಚಲನಚಿತ್ರ ನಿರ್ದೇಶಕರಿಂದ ಎರಡು ಪ್ರತ್ಯೇಕ ಪತ್ರಿಕಾಗೋಷ್ಠಿ ಹಾಗೂ ಚಲನಚಿತ್ರೋತ್ಸವದ “ಬೆಳ್ಳಿರೇಖೆ” ಬುಲಿಟಿನ್ ಬಿಡುಗಡೆಯಾದವು.

ಕನ್ನಡ, ಏಷ್ಯನ್ ಹಾಗೂ ಚಿತ್ರಭಾರತಿ ವಿಭಾಗಗಳ ಸ್ಪರ್ಧೆಯಲ್ಲಿ ಉಳಿದ ಚಿತ್ರಗಳ ಎದುರು ಅತಿಹೆಚ್ಚು ಪ್ರವೇಶ ಪಡೆದ ಚಿತ್ರಗಳಾದ “ಗಿಳಿಯು ಪಂಜರದೊಳಗಿಲ್ಲ”, “ಭುಗಿಲು”, “ಸ್ಟಾಕರ್”, “ಜಗನ್ನಥದಾಸರು” ಚಿತ್ರ ನಿರ್ದೇಶಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಇದೇ ವೇಳೆ ಮಾತನಾಡಿದ “ಮೈ ಚಿಲ್ಡ್ರನ್ ಇಂಡಿಯಾ ಡಾಟ್ ಕಾಮ್” ಮಕ್ಕಳ ಸಿನಿಮಾ ನಿರ್ದೇಶಕ ನಂಜುಂಡೇಗೌಡ ಮಾತನಾಡಿ, ಚಿತ್ರೋತ್ಸವಗಳಲ್ಲಿ ಚಿತ್ರಗಳನ್ನು ಆನ್ ಲೈನ್, ಒಟಿಟಿ ಅಥವಾ ಹೈಬ್ರೀಡ್ ನಂತಹ ವರ್ಚುವಲ್ ಮಾದರಿಯಲ್ಲಿ ನೋಡುವುದು, ಪ್ರದರ್ಶಿಸುವುದು ಸರಿಯಲ್ಲ. ಪ್ರೇಕ್ಷಕರು ಚಿತ್ರೋತ್ಸವಕ್ಕೆ ಬಂದು ಖುದ್ದಾಗಿ ಭೇಟಿ ಮಾಡಿ ನೋಡಿದಾಗ ಮಾತ್ರ ಆ ಚಿತ್ರೋತ್ಸವ ಯಶಸ್ವಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಕರೋನಾ ಮೂರನೇ ಅಲೆಯ ಬಳಿಕ ಒತ್ತಡದಲ್ಲಿ ಆರಂಭವಾದಾಂತೆ ಕಂಡರೂ, ಅದರ ಯಶಸ್ವಿಗೆ ಚಲನಚಿತ್ರೋತ್ಸವ ತಂಡ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ದೇಶ ವಿದೇಶಗಳ ಚಲನಚಿತ್ರ ಪ್ರದರ್ಶನದ ಶೆಡ್ಯೂಲ್ ಮಾಡುವ ತ್ರಾಸದಾಯಕ ಕೆಲಸವನ್ನು ಚಿತ್ರೋತ್ಸವ‌ ತಂಡ ಉತ್ತಮವಾಗಿ ನಿರ್ವಹಿಸಿದೆ. ಸಿನಿಮಾ ಪ್ರದರ್ಶನದ ಶೆಡ್ಯೂಲ್ ಮಾಡುವುದು ಒಂದು ಕಲೆ ಎಂದರು.

ಕರೋನಾ ಸಂಕಷ್ಟ ಕಾಲದಲ್ಲಿ ಕಳೆದ ಎರಡು ವರ್ಷಗಳಲ್ಲಿ ಆನ್ ಲೈನ್ ಮೂಲಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಾವು ಪಾಲ್ಗೊಂಡಿದ್ದರೂ, ಭೌತಿಕವಾಗಿ ಚಿತ್ರೋತ್ಸವದಲ್ಲಿ ಪಾಲ್ಗೊಂಡಾಗ ಆಗುವ ಅನುಭವ ಆಗಿಲ್ಲ. ಆನ್ ಲೈನ್ ಮೂಲಕ ಚಲನಚಿತ್ರೋತ್ಸವ ನಡೆಸುವುದಾದರೆ, ಅದಿಕ್ಕೆ ಬೇರೆ ರೀತಿಯಲ್ಲಿ ಹೆಸರಿಡಬೇಕಾಗುತ್ತದೆ ಎಂದು ಅವರು ಚಲನಚಿತ್ರೋತ್ಸವ ಕುರಿತಂತೆ ವಿಶ್ಲೇಷಿಸಿದರು.

“ಜಗನ್ನಥದಾಸರು” ಚಿತ್ರದ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾತನಾಡಿ, ದಾಸ ಪರಂಪರೆಯ ಜಗನ್ನಥದಾಸರ ಬಗ್ಗೆ ಇರುವ ಐತಿಹ್ಯಗಳು ಹಾಗೂ ಕಥೆಗಳನ್ನು ಇಟ್ಟುಕೊಂಡು ಸಂಶೋಧನೆ ನಡೆಸಿ ಈ ಸಿನಿಮಾ ನಿರ್ಮಿಸಿದೆವು. ಈ ಪ್ರಯೋಗ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಮುಂದೆಯೂ ದಾಸ ಪರಂಪರೆಯ ಚಿತ್ರ ನಿರ್ಮಾಣವನ್ನು ನಿರ್ಮಿಸಲಿದ್ದೇವೆ ಎಂದು ಹೇಳಿದರು.

ಮೂಢನಂಬಿಕೆ, ಮೌಢ್ಯ, ಜ್ಯೋತಿಷ್ಯಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿ, “ಗಿಳಿಯು ಪಂಜರದೊಳಗಿಲ್ಲ” ಎಂಬ ಸಿನಿಮಾ ನಿರ್ಮಿಸಿದ್ದಾಗಿ ನಿರ್ದೇಶಕ ರಾಮದಾಸ ನಾಯ್ಡು ಹೇಳಿದರು.

ಕುಂದಾಪುರ ಕಡೆಯ ದಲಿತನೊಬ್ಬನ ಸ್ವಾತಂತ್ರ್ಯ ಹೋರಾಟ ಕಥೆಯನ್ನು ಪತ್ರಕರ್ತ ಚಾಂದ್ ಅವರ ಕಥೆ ಆಧರಿಸಿ ನಿರ್ದೇಶಕ ಚಂದ್ರಕಾಂತ ಕೋಡ್ಪಾಡಿ ತಾವು ನಿರ್ಮಿಸಿದ “ಭುಗಿಲು” ಚಿತ್ರದ ಬಗ್ಗೆ ಮಾತನಾಡಿದರು.

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ “ಬೆಳ್ಳಿರೇಖೆ” ಬುಲಿಟಿನ್ ಬಿಡುಗಡೆ ಸಂದರ್ಭ

“ಸ್ಟಾಕರ್” ಚಿತ್ರ ನಿರ್ದೇಶಕ ಕಿಶೋರ್ ಭಾರ್ಗವ್ ಮಾತನಾಡಿ, ಹದಿಹರೆಯದ ಹೆಣ್ಣಮಗಳೊಬ್ಬಳು ಸಿನಿಮಾ ಮಂದಿರಕ್ಕೆ ಹೋದಾಗ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿ ತಂದೆಯ ಸಂಪರ್ಕಕ್ಕೆ ಸಾಧ್ಯವಾಗದಿದ್ದಾಗ ಉಂಟಾದ ಆತಂಕ ಹಾಗೂ ಅನಂತರ ನಡೆಯುವ ತಿರುವುಗಳನ್ನು ಆಧರಿಸಿ ಚಿತ್ರ ನಿರ್ಮಿಸಿದ್ದಾಗಿ ಹೇಳಿದರು.

ಈ ಪತ್ರಿಕಾಗೋಷ್ಠಿ ಬಳಿಕ ಕೇರಳ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಮಾಯಾ ಅನಿಲ್‌ಕುಮಾರ್, ಬಂಗಾಳಿ ಮತ್ತು ಮಲಯಾಳಂ ಭಾಷೆಯ “ನಿಷಿದ್ದೊ” ಚಿತ್ರ ನಿರ್ದೇಶಕ ತಾರಾ ರಾಮಾನುಜಮ್, “ಅವನೊವಿಲೋನ” ಮಲಯಾಳಂ ಚಿತ್ರದ ನಿರ್ದೇಶಕರಾದ ಟಿ.ದೀಪೇಶ್, ಟಿ.ಗೋವಿಂದನ್ ಪತ್ರಿಕಾಗೋಷ್ಠಿ ನಡೆಸಿ ಚಿತ್ರೋದ್ಯಮದಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಪತ್ರಿಕಾಗೋಷ್ಠಿ ಬಳಿಕ 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ “ಬೆಳ್ಳಿರೇಖೆ” ಬುಲಿಟಿನ್ ಅನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ವಾರ್ತಾ ಇಲಾಖೆಯ ಹಿಮಂತ್, ಹಿರಿಯ ಪತ್ರಕರ್ತರಾದ ಗಂಗಾಧರ ಮುದಲಿಯಾರ್, ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತ ಆರ್.ಜೆ.ಹಳ್ಳಿ ನಾಗರಾಜ್ ಮತ್ತಿತರರು ಹಾಜರಿದ್ದರು.

ನಾಲ್ಕನೇ ದಿನದ ಚಲನಚಿತ್ರೋತ್ಸವ ಭಾನುವಾರದ ಕಾರಣ ಒರಾಯನ್ ಮಾಲ್ ನಲ್ಲಿ ದೇಶ- ವಿದೇಶಗಳ ಚಿತ್ರಪ್ರದರ್ಶನ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಚಿತ್ರಪ್ರೇಮಿಗಳು, ಚಲನಚಿತ್ರರಂಗದವರು, ಸಿನಿಮಾ ವಿದ್ಯಾರ್ಥಿಗಳು, ಪತ್ರಕರ್ತರು ಆಗಮಿಸಿದ್ದರು.

WhatsApp Join our WhatsApp Channel
Previous Post

Karnataka State Buget 2022-23 | ರಾಜ್ಯ ಸರ್ಕಾರದ 2022-23 ಬಜೆಟ್ ನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ. ಅನುದಾನ

Next Post

Vehicle Insurance TP Premium Will Hike | ಹೆಚ್ಚಾಗಲಿದೆ ನಿಮ್ಮ ಕಾರು, ದ್ವಿಚಕ್ರ ವಾಹನಗಳ ಥರ್ಡ್ ಪಾರ್ಟಿ ವಿಮಾ ಕಂತಿನ ಮೊತ್ತ..! : ಏ.1 ರಿಂದ ಜಾರಿಗೆ ಬರುವ ಸಾಧ್ಯತೆ

Next Post

Vehicle Insurance TP Premium Will Hike | ಹೆಚ್ಚಾಗಲಿದೆ ನಿಮ್ಮ ಕಾರು, ದ್ವಿಚಕ್ರ ವಾಹನಗಳ ಥರ್ಡ್ ಪಾರ್ಟಿ ವಿಮಾ ಕಂತಿನ ಮೊತ್ತ..! : ಏ.1 ರಿಂದ ಜಾರಿಗೆ ಬರುವ ಸಾಧ್ಯತೆ

ಸಾಂದರ್ಭಿಕ ಚಿತ್ರ

UPI Digital Payment | ನೀವು ಡಿಜಿಟಲ್ ಪೇಮೆಂಟ್ ವಿಧಾನದ ಮೂಲಕ ಹಣಪಾವತಿ ಮಾಡುತ್ತಿದ್ದರೆ ಈ ಸುದ್ದಿ ತಪ್ಪದೇ ನೋಡಿ...! ರಾಜ್ಯದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಬಳಕೆ, ವಂಚನೆ ಪ್ರಮಾಣ ಎಷ್ಟಿದೆ ಗೊತ್ತಾ?

Please login to join discussion

Like Us on Facebook

Follow Us on Twitter

Recent News

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026

Space News | ಬಾನಂಗಳದಲ್ಲಿ ಇಂದು ವಿಸ್ಮಯ: ಗುರು, ಶುಕ್ರನ ನಡುವೆ ಬಾಲಚಂದ್ರನ ದರ್ಶನ, ಬರಿಗಣ್ಣಿನಿಂದಲೇ ಕಣ್ತುಂಬಿಕೊಳ್ಳಿ

June 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group