Monday, June 15, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

  • Bengaluru Focus

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Life Style

ದೇಶದಲ್ಲಿಲ್ಲ ಆಹಾರ ಕೊರತೆ; ಜನರಿಗೆ ಬೇಕಿಲ್ಲ ಚಿಂತೆ : ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ

ಅಕ್ಕಿ 356.42 ಲಕ್ಷ ಮೆಟ್ರಿಕ್ ಟನ್, ಗೋಧಿ 383.32 ಲ.ಮೆ.ಟನ್ ದಾಸ್ತಾನು; ಸಕ್ಕರೆ 257 ಲ.ಮೆ.ಟನ್ ಉತ್ಪಾದನೆ | ವರ್ತಕರು, ಜನಸಾಮಾನ್ಯರು ವದಂತಿಗೆ ಕಿವಿಗೊಡದಿರಲಿ

by Bengaluru Wire Desk
May 9, 2025
in Life Style, News Wire
Reading Time: 1 min read
0

ನವದೆಹಲಿ, ಮೇ.09 www.bengaluruwire.com : ದೇಶದಲ್ಲಿ ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ದುಪ್ಪಟ್ಟು ದಾಸ್ತಾನಿದೆ. ಎಲ್ಲೂ ಕೂಡಾ ಕೊರತೆಯಿಲ್ಲ, ಜನಸಾಮಾನ್ಯರು, ವರ್ತಕರು ಯಾರೂ ಈ ಬಗ್ಗೆ ಚಿಂತಿತರಾಗಬೇಕಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ಅಕ್ಕಿ, ಗೋಧಿ, ಸಕ್ಕರೆ, ಕಡಲೆ, ತೊಗರಿ, ಮಸೂರ್, ಹೆಸರುಕಾಳು, ಖಾದ್ಯ ತೈಲ ಹೀಗೆ ಪ್ರತಿಯೊಂದೂ ಕೂಡಾ ಸಾಕಷ್ಟು ದಾಸ್ತಾನಿದೆ. “ಆಹಾರ ಪದಾರ್ಥ ಕೊರತೆಯಿದೆ” ಎನ್ನುವುದು ಕೇವಲ ಸುಳ್ಳು ವದಂತಿ. ಇದಕ್ಕೆ ಯಾರೂ ಕಿವಿಗೊಡಬಾರದು, ಭಯಭೀತರಾಗಬಾರದು ಹಾಗೂ ವರ್ತಕರೂ ಹೆಚ್ಚು ಹೆಚ್ಚು ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ಸಂಗ್ರಹಣೆ, ದಾಸ್ತಾನು ಮಾಡಿಟ್ಟುಕೊಳ್ಳಬಾರದು ಎಂದು ಕರೆ ನೀಡಿದ್ದಾರೆ.

ದೇಶದಲ್ಲಿ ಎಲ್ಲಿಯೂ ಆಹಾರ ಧಾನ್ಯ, ಅಗತ್ಯ ವಸ್ತುಗಳ ಕೊರತೆ ಇರುವುದಿಲ್ಲ. ಅಗತ್ಯಕ್ಕಿಂತ ಹೆಚ್ಚು ಆಹಾರ ಧಾನ್ಯ ಖರೀದಿಗೆ ಮಾರುಕಟ್ಟೆಗಳಲ್ಲಿ ಮುಗಿಬೀಳುವ ಅವಶ್ಯಕತೆಯಿಲ್ಲ ಎಂದ ಸಚಿವರು, ವಿನಾಕಾರಣ ಯಾರಾದರೂ ಸುಳ್ಳು ವದಂತಿ ಹರಡಲು ಯತ್ನಿಸಿದರೆ ಹಾಗೂ ವರ್ತಕರು ಹೆಚ್ಚು ಹೆಚ್ಚು ಸಂಗ್ರಹ ಮಾಡಿಟ್ಟುಕೊಂಡರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಅಥವಾ ವ್ಯಾಪಾರ ಸಂಸ್ಥೆಗಳು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ಸಹ ನೀಡಿದೆ ಎಂದಿದ್ದಾರೆ.

ಆಹಾರ ಧಾನ್ಯ ದುಪ್ಪಟ್ಟು ಸಂಗ್ರಹವಿದೆ- ವದಂತಿ ನಂಬಬೇಡಿ:

ದೇಶದಲ್ಲಿ ಎಲ್ಲೆಡೆಯೂ ದುಪ್ಪಟ್ಟು ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ಸಂಗ್ರವಿದೆ. ಸಾಕಷ್ಟು ದಾಸ್ತಾನಿದೆ. ಹಾಗಿದ್ದರೂ “ಕೊರತೆಯಿದೆ ಎಂದು ಯಾರಾದರೂ ಅಪಪ್ರಚಾರ ಮಾಡಿದಲ್ಲಿ, ಸಂದೇಶಗಳನ್ನು ರವಾನಿಸಿದಲ್ಲಿ ಯಾರೂ ನಂಬಬಾರದು. ಅಗತ್ಯ ಮಾನದಂಡಗಳನ್ನು ಮೀರಿದ  ಸಂದೇಶಗಳಿಗೆ ಗಮನ ಕೊಡಬೇಡಿ ಎಂದು ಸಚಿವ ಜೋಶಿ ಕರೆ ನೀಡಿದ್ದಾರೆ.

ದೇಶದಲ್ಲಿ ಏನೇನು? ಎಷ್ಟೆಷ್ಟು ದಾಸ್ತಾನಿದೆ? :

ದೇಶದಲ್ಲಿ ಪ್ರಸ್ತುತ ಅಕ್ಕಿ ದಾಸ್ತಾನು 356.42 ಲಕ್ಷ ಮೆಟ್ರಿಕ್ ಟನ್‌ಗಳಷ್ಟಿದೆ. 135 ಲಕ್ಷ ಮೆಟ್ರಿಕ್ ಟನ್ (Lakh Metric Tonnes- LMT) ಬಫರ್ ಮಾನದಂಡಕ್ಕೆ ವಿರುದ್ಧವಾಗಿ ದುಪ್ಪಟ್ಟು ದಾಸ್ತಾನಿದೆ. ಅದೇ ರೀತಿ, ಗೋಧಿ ದಾಸ್ತಾನು ಸಹ ಹೆಚ್ಚಿದೆ. 276 ಎಲ್‌ಎಂಟಿಯಷ್ಟಿದ್ದು ಬಫರ್ ಮಾನದಂಡಕ್ಕೆ ವಿರುದ್ಧವಾಗಿ 383.32 ಎಲ್‌ಎಂಟಿಯಷ್ಟು ಸಂಗ್ರವಿದ್ದು, ಇದು ಅಗತ್ಯ ಬಫರ್ ಮಾನದಂಡಗಳಿಗಿಂತ ಬಲವಾದ ಹೆಚ್ಚುವರಿಯನ್ನು ಪ್ರದರ್ಶಿಸುತ್ತಿದ್ದು, ರಾಷ್ಟ್ರವ್ಯಾಪಿ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.

ಇದಲ್ಲದೇ, ಭಾರತ ಸುಮಾರು 17 ಎಲ್‌ಎಂಟಿಯಷ್ಟು ಖಾದ್ಯ ತೈಲ ದಾಸ್ತಾನು ಹೊಂದಿದೆ. ದೇಶೀಯವಾಗಿ ಗರಿಷ್ಠ ಉತ್ಪಾದನಾ ಋತುವಿನಲ್ಲಿ ಸಾಸಿವೆ ಎಣ್ಣೆಯ ಲಭ್ಯತೆ ಹೇರಳವಾಗಿದ್ದು, ಖಾದ್ಯ ತೈಲ ಪೂರೈಕೆಗೆ ಪೂರಕವಾಗಿದೆ. ಪ್ರಸ್ತುತ ಸಕ್ಕರೆ ಋತುವು 79 ಎಲ್‌ಎಂಟಿ ಪ್ರಮಾಣದಷ್ಟು ಕ್ಯಾರಿ-ಓವರ್ ಸ್ಟಾಕ್‌ನೊಂದಿಗೆ ಪ್ರಾರಂಭವಾಗಿದ್ದು, 34 ಎಲ್‌ಎಂಟಿ ಎಥೆನಾಲ್ ಉತ್ಪಾದನೆಗೆ ಬಳಸಿದ ನಂತರವೂ 262 ಎಲ್‌ಎಂಟಿ ಪ್ರಮಾಣದಷ್ಟು ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಸುಮಾರು 257  ಎಲ್‌ಎಂಟಿ ಸಕ್ಕರೆಯನ್ನು ಈಗಾಗಲೇ ಉತ್ಪಾದಿಸಲಾಗಿದೆ. 280 ಎಲ್‌ಎಂಟಿ ದೇಶೀಯ ಬಳಕೆ ಮತ್ತು 10 ಎಲ್‌ಎಂಟಿ ರಫ್ತನ್ನು ಪರಿಗಣಿಸಿ, ಅಂತಿಮ ಸ್ಟಾಕ್ ಸುಮಾರು 50 ಎಲ್‌ಎಂಟಿ ನಿರೀಕ್ಷೆಯಿದೆ. ಇದು ಎರಡು ತಿಂಗಳ ಬಳಕೆಗಿಂತ ಹೆಚ್ಚು ಸಂಗ್ರಹವನ್ನು ತೋರ್ಪಡಿಸುತ್ತದೆ. ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಂದಾಗಿ 2025–26ರ ಸಕ್ಕರೆ ಋತುವಿನ ಉತ್ಪಾದನಾ ನಿರೀಕ್ಷೆಯೂ ಆಶಾದಾಯಕವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಅಂಕಿ-ಸಂಖ್ಯೆ ಸಹಿತ ವಿವರಿಸಿದ್ದಾರೆ.

WhatsApp Join our WhatsApp Channel
Previous Post

ಲೈಸೆನ್ಸ್ ಇಲ್ಲದ ವೈರ್‌ಲೆಸ್ ಉಪಕರಣಗಳ ಮಾರಾಟ : ಸಿಸಿಪಿಎನಿಂದ ಇ-ಕಾಮರ್ಸ್ ವೇದಿಕೆಗಳಿಗೆ 13 ನೋಟಿಸ್ ಜಾರಿ

Next Post

ಸುರಕ್ಷತೆ ದೃಷ್ಟಿಯಿಂದ ದೇಶದ ಈ 32 ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಬಂದ್!

Next Post

ಸುರಕ್ಷತೆ ದೃಷ್ಟಿಯಿಂದ ದೇಶದ ಈ 32 ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಬಂದ್!

Lavc57.107.100

ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಲು ಭಾರತೀಯ ಸಶಸ್ತ್ರ ಪಡೆಗಳು ಸರ್ವ ಸನ್ನದ್ಧ : ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್

Please login to join discussion

Like Us on Facebook

Follow Us on Twitter

Recent News

ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

June 14, 2026

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

June 14, 2026

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group