Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW EXCLUSIVE | ಬಿಎಚ್ ಇಎಲ್ ಜಂಕ್ಷನ್ ನಿರ್ಮಾಣ ಹಂತದ ನೈಸ್ ಲಿಂಕ್ ರಸ್ತೆ, ಮೈಸೂರು ರೋಡ್ ಟ್ರಾಫಿಕ್ ಗೆ ಸಿಗಲಿದೆಯಾ ಮುಕ್ತಿ? : ನಿಮ್ಮ 55 ನಿಮಿಷ ಸಮಯ ಉಳಿತಾಯ ಹೇಗೆ?

ಹೊಸಕೆರೆಹಳ್ಳಿ ಟೋಲ್ ಪ್ಲಾಜಾದಿಂದ ಮೈಸೂರು ರಸ್ತೆ ಬಿಎಚ್ ಇಎಲ್ ಜಂಕ್ಷನ್ ಮಧ್ಯದ 1.4 ಕಿ.ಮೀ ಉದ್ದ ರಸ್ತೆ ಪೈಕಿ ಪ್ರಸ್ತುತ ನೈಸ್ ನಿಂದ 400 ಮೀ. ಕಾಮಗಾರಿ ನಡೆಯುತ್ತಿದೆ. | ಸರ್ಕಾರದಿಂದ ಭೂಮಿ ಹಸ್ತಾಂತರವಾಗದೆ ನಿಂತಿದೆ 13 ಕಿ.ಮೀ ನೈಸ್ ಎಕ್ಸ್ ಪ್ರೆಸ್ ವೇ

by Bengaluru Wire Desk
June 30, 2024
in Bengaluru Focus, BW Special, Public interest
Reading Time: 2 mins read
0

ಬೆಂಗಳೂರು, ಜೂ.30 www.bengaluruwire.com : ಮೈಸೂರು ರಸ್ತೆಯಿಂದ ಹೊಸಕೆರೆಹಳ್ಳಿ ನೈಸ್ ರಸ್ತೆ ಟೋಲ್ ರಸ್ತೆಗೆ ಲಿಂಕ್ ರಸ್ತೆ ನಿರ್ಮಾಣ ಬಹುದಿನಗಳಿಂದ ಬಾಕಿ ಉಳಿದಿತ್ತು. ಆ ಬಾಕಿ ಕಾಮಗಾರಿ ಇದೀಗ ಕಳೆದ ಒಂದು ತಿಂಗಳಿಂದ ಆರಂಭವಾಗಿದ್ದು,ಬಿಎಚ್ ಇಎಲ್ ಜಂಕ್ಷನ್ ನಿಂದ ಚಾಲನೆ ದೊರೆತಿದೆ. ಈ ಲಿಂಕ್ ರಸ್ತೆ ಪೂರ್ಣವಾದರೆ ವಾಹನ ಸವಾರರ 55 ನಿಮಿಷ ಉಳಿತಾಯವಾಗಲಿದೆ.

ಹೊಸಕೆರೆಹಳ್ಳಿ ಟೋಲ್ ಪ್ಲಾಜಾದಿಂದ ಮೈಸೂರು ರಸ್ತೆ ಬಿಎಚ್ ಇಎಲ್ ಜಂಕ್ಷನ್ ಮಧ್ಯದ 1.4 ಕಿ.ಮೀ ಉದ್ದ ರಸ್ತೆಯ ಪೈಕಿ 60 ಮೀಟರ್ ಅಗಲದ 1 ಕಿ.ಮೀ ರಸ್ತೆಯನ್ನು 12 ವರ್ಷಗಳ ಹಿಂದೆಯೇ ನೈಸ್ ಅಭಿವೃದ್ಧಿಪಡಿಸಿತ್ತು. ಆದರೆ ಪಿಇಎಸ್ ಕಾಲೇಜು ಜಂಕ್ಷನ್ ನಿಂದ ಬಿಎಚ್ ಇಎಲ್ ಜಂಕ್ಷನ್ ತನಕದ 400 ಮೀ. ರಸ್ತೆ ಕಾಮಗಾರಿಗಾಗಿ ಎರಡು ಕಡೆಗಳಲ್ಲಿ, ಸರ್ಕಾರದ ಭೂಮಿ ನೈಸ್ ಗೆ ಹಸ್ತಾಂತರಿಸದ ಕಾರಣ ಲಿಂಕ್ ರಸ್ತೆ ಅಪೂರ್ಣವಾಗಿತ್ತು. ವೃಷಭಾವತಿ ರಾಜಕಾಲುವೆಯ ಮೇಲೆ ಸೇತುವೆ ನಿರ್ಮಿಸಿ ಹಲವು ವರ್ಷಗಳಾಗಿತ್ತು.

ನೈಸ್ ಲಿಂಕ್ ರಸ್ತೆಗೆ ಸಂಪರ್ಕ ಕಲ್ಪಿಸುವ ಹಾದಿಯಲ್ಲಿ ಕೆಲವು ಜಾಗ ಕೈಗಾರಿಕೆ ಇಲಾಖೆ ನೈಸ್ ರಸ್ತೆಗೆ ಜಾಗ ಬಿಟ್ಟುಕೊಡಲು ಒಪ್ಪಿರಲಿಲ್ಲ. ಹೀಗಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಇತ್ತೀಚೆಗಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಕೈಗೊಂಡ ಸಂದರ್ಭದಲ್ಲಿ ಗಾಳಿ ಆಂಜನೇಯ ದೇವಸ್ಥಾನದ ಬಳಿಯ ರಾಜಕಾಲುವೆ ಪರಿಶೀಲನೆ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಅಧಿಕಾರಿಗಳು ಜಾಗವನ್ನು ನೈಸ್ ಗೆ ಒದಗಿಸದ ಕಾರಣಕ್ಕೆ ಅರ್ಧಕ್ಕೆ ನಿಂತಿರುವ ನೈಸ್ ಕಾಮಗಾರಿ ಮುಗಿಸಲು ಭೂಮಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆನಂತರ ಸರ್ಕಾರಿ ಜಾಗವನ್ನು ನೈಸ್ ಗೆ ಹಸ್ತಾಂತರಿಸಿದ ಮೇಲೆ ಲಿಂಕ್ ರಸ್ತೆ ಕಾಮಗಾರಿ ವೇಗ ಪಡೆದುಕೊಂಡಿದೆ.

ಹೊಸ ಲಿಂಕ್ ರಸ್ತೆಯಿಂದ 55 ನಿಮಿಷ ಸಮಯ ಉಳಿತಾಯ : 

ಸದ್ಯ ವಾಹನ ದಟ್ಟಣೆ ಅವಧಿಯಲ್ಲಿ‌ ಬಿಎಚ್ ಇಎಲ್ ಜಂಕ್ಷನ್ ನಿಂದ ವಾಹನಗಳು ಸಾಮಾನ್ಯ ರಸ್ತೆಯಲ್ಲಿ ಸಾಗಿ ಮೈಸೂರು ರಸ್ತೆ ನೈಸ್ ಜಂಕ್ಷನ್ ತನಕ ಸಾಗಲು ಒಂದೂ ಕಾಲು ಗಂಟೆ ಹಿಡಿಯುತ್ತದೆ. ಆದರೆ ಮೈಸೂರು ರಸ್ತೆ ಬಿಎಚ್ ಇಎಲ್ ಜಂಕ್ಷನ್ ನೈಸ್ ಲಿಂಕ್ ರಸ್ತೆ ಪೂರ್ಣಗೊಂಡ ಮೇಲೆ, ಆ ರಸ್ತೆಯಿಂದ ಹೊಸಕೆರೆಹಳ್ಳಿ ನೈಸ್ ರಸ್ತೆಯ ಟೋಲ್ ಮೂಲಕ ಪ್ರವೇಶ ಪಡೆದು ಮೈಸೂರು ರಸ್ತೆ ನೈಸ್ ಜಂಕ್ಷನ್ ಬಳಿಯ ಗಣಪತಿ ದೇವಸ್ಥಾನದ ಬಳಿಯ ಎಕ್ಸ್ ಪ್ರೆಸ್ ವೇ ರಸ್ತೆಯನ್ನು ಕೇವಲ 20 ನಿಮಿಷದಲ್ಲಿ ತಲುಪಬಹುದು. ಇದರಿಂದ ವಾಹನ ಸವಾರರ 55 ನಿಮಿಷ ಒಂದು ಮಾರ್ಗದಲ್ಲಿ ಸಮಯ ಉಳಿತಾಯವಾಗುತ್ತದೆ.

ಆದರೆ ಪ್ರಸ್ತುತ ಬಿಎಚ್ ಇಎಲ್ ಜಂಕ್ಷನ್, ನಾಯಂಡಹಳ್ಳಿ ಜಂಕ್ಷನ್  (ಮೇಲ್ಸತುವೆ ಹೊರತುಪಡಿಸಿ), ಆರ್.ಆರ್.ನಗರ ಸಿಗ್ನಲ್, ಬೆಂಗಳೂರು ವಿಶ್ವವಿದ್ಯಾಲಯ ಸಿಗ್ನಲ್, ಆರ್.ವಿ.ಕಾಲೇಜು, ಕೆಂಗೇರಿ ಬಸ್ ಸ್ಟ್ಯಾಂಡ್ ಸಿಗ್ನಲ್ ಬಳಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿ ಪೀಕ್ ಹವರ್ ನಲ್ಲಿ ಈ ಭಾಗದಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಸವಾಲಾಗಿದೆ.

ನೈಸ್ ಲಿಂಕ್ ರೋಡ್ ಕಾರಣ ಮೈಸೂರು ರಸ್ತೆ ಟ್ರಾಫಿಕ್ ಗೆ ಸಿಗಲಿದೆ ಮುಕ್ತಿ :

ಬಿಎಚ್ ಇಎಲ್ ಜಂಕ್ಷನ್ ನಲ್ಲಿ (ಬೆಂಗಳೂರು ನಿಂದ ಮೈಸೂರು ಕಡೆಗಿನ ಮಾರ್ಗ) ಎಡಬದಿ ನೈಸ್ ಲಿಂಕ್ ರಸ್ತೆ ಕಾಮಗಾರಿ ನಡೆಯುತ್ತಿರುವ ದೃಶ್ಯ.

“ಬಿಎಚ್ ಇಎಲ್ ಜಂಕ್ಷನ್ ಲಿಂಕ್ ರಸ್ತೆ ಪೂರ್ಣವಾದರೆ ನಾಯಂಡಹಳ್ಳಿ ಜಂಕ್ಷನ್ ನಿಂದ ಬನಶಂಕರಿ ಕಡೆಗೆ ಹೋಗುವ ವಾಹನಗಳು ಇದೇ ಲಿಂಕ್ ನಲ್ಲಿ ಟೋಲ್ ಇಲ್ಲದೆ ಬನಶಂಕರಿ, ಜಯನಗರ, ಪದ್ಮನಾಭನಗರದ ಕಡೆಗೆ ಸಾಗಬಹುದು.‌ ಹೀಗಾಗಿ ನಾಯಂಡಹಳ್ಳಿ ಜಂಕ್ಷನ್ ನಲ್ಲಿ ಅರ್ಧಕ್ಕರ್ಧ ವಾಹನ ಓಡಾಟ ಕಡಿಮೆಯಾಗುತ್ತೆ. ಅಲ್ಲದೆ ಪಿಇಎಸ್ ಕಾಲೇಜು ಬಳಿಯ ಹೊಸಕೆರೆಹಳ್ಳಿ ಟೋಲ್ ಮೂಲಕ ನೈಸ್ ರಸ್ತೆಯಲ್ಲಿ ಸಾಗಿ ಮೈಸೂರು ರಸ್ತೆ ನೈಸ್ ಜಂಕ್ಷನ್ ನಿಂದ ಹೊರಬರುವ ವಾಹನಗಳು ಗಣಪತಿ ದೇವಸ್ಥಾನ ಬಳಿಯ ಎಕ್ಸ್ ಪ್ರೆಸ್ ವೇ ರಸ್ತೆಯನ್ನು ಕೇವಲ 20 ನಿಮಿಷದಲ್ಲಿ ಬೇಗ ತಲುಪಬಹುದು. ಇದರಿಂದ  ಬಿಎಚ್ ಇಎಲ್ ಜಂಕ್ಷನ್ ನಿಂದ ಎಕ್ಸ್ ಪ್ರೆಸ್ ರಸ್ತೆ ಆರಂಭವಾಗುವ ಮಧ್ಯೆಯ ಟ್ರಾಫಿಕ್ ಸಾಕಷ್ಟು ಕಡಿಮೆಯಾಗಲಿದೆ. ವಾರ್ಷಿಕ ಅಂದಾಜು 100 ಕೋಟಿ ರೂ.ನಷ್ಟು ಇಂಧನ ಉಳಿತಾಯವಾಗುತ್ತೆ” ಎಂದು ಹೇಳುತ್ತಾರೆ ನೈಸ್ ರಸ್ತೆ ಅಧಿಕಾರಿಗಳು.

ಹೊಸಕೆರೆಹಳ್ಳಿ ಟೋಲ್ ಮೂಲಕ ನೈಸ್ ರಸ್ತೆಯಲ್ಲಿ ಸಾಗಿ ಮೈಸೂರು ರಸ್ತೆ ನೈಸ್ ಜಂಕ್ಷನ್ ನಿಂದ ಒಂದು ಮಾರ್ಗದಲ್ಲಿ ಹೋಗಿ ಬರಲು ಸದ್ಯ ದ್ವಿಚಕ್ರ ವಾಹನಕ್ಕೆ 30 ರೂ., ಕಾರಿಗೆ 100. ರೂ. ಶುಲ್ಕವಿದೆ.

ಸರ್ಕಾರದಿಂದ ಭೂಮಿ ಹಸ್ತಾಂತರವಾಗದೆ ನಿಂತಿದೆ ನೈಸ್ ಎಕ್ಸ್ ಪ್ರೆಸ್ ವೇ :

ಪ್ರಸ್ತುತ ಸೋಂಪುರ ಬಳಿಯ ನೈಸ್ ಕ್ಲೋವರ್ ಲೀಫ್ ಜಂಕ್ಷನ್ ನಿಂದ ಬಿಡದಿಯ ಕೈಗಾರಿಕಾ ಪ್ರದೇಶದ ತನಕದ 13 ಕಿ.ಮೀ ತನಕದ ನೈಸ್ ಎಕ್ಸ್ ಪ್ರೆಸ್ ವೇ ರಸ್ತೆಮಾರ್ಗ ನಿರ್ಮಾಣದ ಪೈಕಿ‌ ಮಧ್ಯ ಮಧ್ಯದಲ್ಲಿ ರಾಜ್ಯ ಸರ್ಕಾರದಿಂದ 95 ಎಕರೆ ಒಟ್ಟಾರೆ ಭೂಮಿ ನೈಸ್ ಸಂಸ್ಥೆಗೆ ಹಸ್ತಾಂತರವಾಗಬೇಕು. ಈಗಾಗಲೇ ಜಾಗ ಹಸ್ತಾಂತರಿಸಿದ ಕಡೆ ನಂದಿ ಇನ್ ಫ್ರಾಸ್ಟ್ರಕ್ಚರ್ ಸಂಸ್ಥೆಯು 5 ಕಿ.ಮೀ ರಸ್ತೆ ಮಾಡಿದೆ. ನೈಸ್ ಕ್ಲೋವರ್ ಲೀಫ್ ಜಂಕ್ಷನ್ ನಿಂದ ಅಗರದ ವರೆಗೆ ರಸ್ತೆ ಮಾಡಿ ಜಾಗ ಲಭ್ಯವಾಗದ ಕಾರಣ ರಸ್ತೆ ಡೆಡ್ ಎಂಡ್ ಆಗಿದೆ. 

ಒಂದೊಮ್ಮೆ ಈ 13 ಕಿ.ಮೀ ನೈಸ್ ಎಕ್ಸ್ ಪ್ರೆಸ್ ವೇ ಪೂರ್ಣವಾದರೆ ಮೈಸೂರು ಎಕ್ಸ್ ಪ್ರೆಸ್ ವೇ ಕಡೆಗೆ ಸಾಗುವ ವಾಹನಗಳು, ಬಿಡದಿ ಕೈಗಾರಿಕಾ ಪ್ರದೇಶ ಹಾಗೂ ಅದಕ್ಕೆ ಸಂಪರ್ಕಿಸುವ ರಸ್ತೆಗೆ ಬಂದು ಹೋಗುವ ಭಾರೀ ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದೆ. ಸಾಮಾನ್ಯ ರಸ್ತೆ ಮೇಲಿನ ದಟ್ಟಣೆ ಮತ್ತು ಒತ್ತಡವೂ ಕಡಿಮೆಯಾಗಲಿದೆ. 

ಎನ್ ಎಚ್ 275 ನೈಸ್ ಎಕ್ಸ್ ಪ್ರೆಸ್ ವೇ ಅಂತರ್ಗತ ಯೋಜನೆ :

ನೈಸ್ ಸಂಸ್ಥೆಯು ಇದೇ ಮೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಬಿಡದಿಯ ಈಗಲ್ ಟನ್ ಬಳಿಯಿಂದ ಮೈಸೂರು ರಸ್ತೆ ಎನ್ ಎಚ್ 275 ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಎಕ್ಸ್ ಪ್ರೆಸ್ ವೇ ಅಂತರ್ಗತ ರಸ್ತೆ ಯೋಜನೆ ನಿರ್ಮಿಸುವ ಸಂಬಂಧ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ ಎಂದು ನೈಸ್ ಮೂಲಗಳು ತಿಳಿಸಿವೆ. 

ಬಿಬಿಎಂಪಿ ಜಂಕ್ಷನ್ ಅಭಿವೃದ್ಧಿ ತಾತ್ಕಾಲಿಕವಾಗಿ ಸ್ಥಗಿತ :

ಈಗಾಗಲೇ  ಬಿಎಚ್ ಇಎಲ್ ವೃತ್ತದಲ್ಲಿ ಬಿಬಿಎಂಪಿ ಯೋಜನಾ ವಿಭಾಗದಿಂದ ನಡೆಯುತ್ತಿದ್ದ ಜಂಕ್ಷನ್ ಅಭಿವೃದ್ಧಿ ಕಾಮಗಾರಿ, ನೈಸ್ ಲಿಂಕ್ ರಸ್ತೆ ಕಾಮಗಾರಿ ಆರಂಭದ ಹಿನ್ನಲೆಯಲ್ಲಿ ಸ್ವಲ್ಪ ವಿಳಂಬವಾಗಿದ್ದು, ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ.

ಮೈಸೂರು, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ಕಡೆಯಿಂದ ಬರುವ ವಾಹನಗಳು ನೈಸ್ ರಸ್ತೆ ಮೂಲಕ ವಿಜಯನಗರದ ಕಡೆಗೆ ಹಾಗೂ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಪಕ್ಕದ ರಾಜಕಾಲುವೆ ಮೇಲಿನ ರಸ್ತೆಯ ಮೂಲಕ ಬೆಂಗಳೂರಿನ ಕಡೆಗೆ ಸಾಗುವ ಮಾರ್ಗದಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಕಂಡುಬರುವ ಸಾಧ್ಯತೆಯಿದೆ.

ಈ ವಿಷಯದಲ್ಲಿ ಸಂಚಾರ ಪೊಲೀಸರು, ನೈಸ್ ರಸ್ತೆ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಂಚಾರ ವ್ಯವಸ್ಥೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ಸ್ಥಳದಲ್ಲಿ ಪುನಃ ಸಿಗ್ನಲ್ ಬಂದಲ್ಲಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿಯಲ್ಲಿ ಪುನಃ ಬದಲಾವಣೆ ಮಾಡುವ ಸಾಧ್ಯತೆಯಿದೆ.

ಜು.1 ರಿಂದ ಟೋಲ್ ಶುಲ್ಕದಲ್ಲಿ ಶೇ. 13ರಷ್ಟು ಹೆಚ್ಚಳ :

ಜುಲೈ 1 ರಿಂದ ಜಾರಿಗೆ ಬರುವಂತೆ ನೈಸ್ ಸಂಸ್ಥೆಯು ತನ್ನ ಎಲ್ಲಾ ರಸ್ತೆಗಳ ಟೋಲ್ ಶುಲ್ಕವನ್ನು ಶೇ.10ರಿಂದ 13ರಷ್ಟು ಏರಿಕೆ ಮಾಡಿದೆ. ಈ ಕುರಿತಂತೆ ಮಾಧ್ಯಮಗಳಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ. 2022ರಿಂದ ಪ್ರತಿ ವರ್ಷ ನೈಸ್ ಸಂಸ್ಥೆಯು ವರ್ಷಂಪ್ರತಿ ಟೋಲ್ ಶುಲ್ಕವನ್ನು ಹೆಚ್ಚಿಸುತ್ತಾ ಬಂದಿದೆ.

Previous Post

Karnataka Schemes | ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ : ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಯೋಜನೆಗಳ ಅನುಮೋದನೆಗೆ ಮನವಿ

Next Post

BW SPECIAL | ಬಿಬಿಎಂಪಿಯ ಕೌನ್ಸಿಲ್ ಸಭಾಂಗಣಕ್ಕೆ ಹೊಸರೂಪ : ಸಾಂಪ್ರದಾಯಿಕ ನೋಟ – ಆಧುನಿಕ ಸೌಲಭ್ಯ : ಜುಲೈ ಅಂತ್ಯದ ವೇಳೆಗೆ ಸಂಪೂರ್ಣ ಸಿದ್ಧ

Next Post
ಬಿಬಿಎಂಪಿಯ ನಾಡಪ್ರಭು ಕೆಂಪೇಗೌಡ ಕೌನ್ಸಿಲ್ ಸಭಾಂಗಣದ ನವೀಕೃತ ಒಳಾಂಗಣ ವಿನ್ಯಾಸದ ನೋಟ.

BW SPECIAL | ಬಿಬಿಎಂಪಿಯ ಕೌನ್ಸಿಲ್ ಸಭಾಂಗಣಕ್ಕೆ ಹೊಸರೂಪ : ಸಾಂಪ್ರದಾಯಿಕ ನೋಟ – ಆಧುನಿಕ ಸೌಲಭ್ಯ : ಜುಲೈ ಅಂತ್ಯದ ವೇಳೆಗೆ ಸಂಪೂರ್ಣ ಸಿದ್ಧ

BBMP White Topping Roads | ಬಿಬಿಎಂಪಿ ವ್ಯಾಪ್ತಿಯಲ್ಲಿ 15 ಪ್ಯಾಕೇಜ್‌ಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ಶೀಘ್ರ ಚಾಲನೆ : ತುಷಾರ್ ಗಿರಿನಾಥ್

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group