Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW Reality Check | Karnataka Guest House | ಮಂತ್ರಾಲಯದಲ್ಲಿ ಕರ್ನಾಟಕದ ಲೋಕೋಪಯೋಗಿ ಕಾಂಟ್ರಾಕ್ಟರ್ ಮಹಾತ್ಮೆ : ಮುಜರಾಯಿ ಇಲಾಖೆ ಕಳಪೆ ಅತಿಥಿಗೃಹ ಕಟ್ಟಡ ನಿರ್ಮಾಣದಲ್ಲಿ ಕೋಟಿ ಕೋಟಿ ಲೂಟಿ ಶಂಕೆ!!

50 ಕೊಠಡಿಗಳಿದ್ದರೂ ಒಂದರಲ್ಲೂ ಮೂಲಸೌಕರ್ಯವಿಲ್ಲ | ಕರೆಂಟ್ ಕಣ್ಣಾಮುಚ್ಚಾಲೆ, ಸ್ವಿಚ್ ಮುಟ್ಟಿದ್ರೆ ಭಕ್ತರಿಗೆ ಕರೆಂಟ್ ಶಾಕ್ | ಲೋಕಪಯೋಗಿ ಇಲಾಖೆ ಗುತ್ತಿಗೆದಾರನ ಕಳಪೆ ಕರ್ಮಕಾಂಡದ ಬಗ್ಗೆ ಲೋಕಾಯುಕ್ತ ದೂರು ಸಾಧ್ಯತೆ

by Bengaluru Wire Desk
June 15, 2024
in Bengaluru Focus, BW Special, News Wire, Public interest
Reading Time: 2 mins read
1

ಮಂತ್ರಾಲಯ, ಜೂ.15 www.bengaluruwire.com : ಭಕ್ತರ ಅನುಕೂಲಕ್ಕೆಂದು ಕರ್ನಾಟಕದ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ 2022ರಲ್ಲಿ ಉದ್ಘಾಟಿಸಿರುವ 50 ಕೊಠಡಿಗಳ ನೂತನ ಅತಿಥಿಗೃಹ ಹಲವು ಅವ್ಯವಸ್ಥೆಗಳ ಅಗರವಾಗಿದೆ. ಕಟ್ಟಡ ನಿರ್ಮಾಣದಲ್ಲಿ ಕಳಪೆ ಸಾಮಗ್ರಿ ಬಳಸಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಇಡೀ ಕಟ್ಟಡಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ. ವೆಚ್ಚದ ಮಾಡಿದರೂ ಇಡೀ ಕಟ್ಟಡ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ಕಣ್ಣಿಗೆ ರಾಚುತ್ತದೆ. ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಸಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ನೂತನ ಕಟ್ಟಡದ ಅಡಿಪಾಯದಲ್ಲಿ ತೀಕ್ಷ್ಣವಾದ ಬಿರುಕು ಮೂಡಿದ್ದರೆ, ಕಟ್ಟಡದ ಕಿಟಕಿ ಭಾಗದ ಗೋಡೆಗಳು, ಥಾರಸಿ ಭಾಗದಲ್ಲಿ ನೀರು ಜಿನುಗುತ್ತಿದೆ. ಕಳಪೆ ಗುಣಮಟ್ಟದ ಪೇಯಿಂಟ್ ಹಾಕಿರುವುದು ಗಮನಕ್ಕೆ ಬರುತ್ತದೆ. ಕಟ್ಟಡದ ಆವರಣದಲ್ಲಿ ಗಿಡಗಂಟಿಗಳು ಬೆಳದಿದ್ದರೂ ಅದನ್ನು ತೆರವು ಮಾಡುವ ಗೋಜಿಗೆ ಇಲಾಖೆ ಸಿಬ್ಬಂದಿ ಗಮನ ಹರಿಸುತ್ತಿಲ್ಲ. ಅತಿಥಿಗೃಹದ ಹಲವು ಕೊಠಡಿಗಳಲ್ಲಿ ಕಿಟಕಿ ಗಾಜುಗಳು ಕಿತ್ತುಬಂದಿದೆ. ಕೆಲವು ಕಡೆ ಗಾಜುಗಳನ್ನೇ ಅಳವಡಿಸಿಲ್ಲ.

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರ ಪಾಲಿಗೆ ಕಲ್ಪವೃಕ್ಷ. ಇಂತಹ ಪವಿತ್ರ ಸ್ಥಳಕ್ಕೆ ವರ್ಷಕ್ಕೆ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆ. ಹೀಗಾಗಿ ಹಿಂದಿನ ಕರ್ನಾಟಕದ ರಾಜ್ಯದ ಛತ್ರದ ಆವರಣದಲ್ಲಿನ ಹಳೆಯ ಕಟ್ಟಡ ಮುಚ್ಚಿ, 2022 ರಲ್ಲಿ ರಾಜ್ಯದ ಭಕ್ತರಿಗಾಗಿ ಆರಂಭಿಸಿದ 50 ಕೊಠಡಿಗಳಿರುವ ಅತಿಥಿಗೃಹದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ, ಇರುವ ಸಾಮಾನ್ಯ 30 ಕೊಠಡಿಗಳಲ್ಲಿ ಹಾಸಿಗೆ ಇದೆ. ಆದರೆ ಹೊದೆಯಲು ಹೊದಿಕೆ ಇಲ್ಲ. ಸ್ನಾನದ ಮನೆಯಲ್ಲಿ ಕೆಲವು ಕಡೆ ಗೀಸರ್ ಇದ್ದರೂ, ಯಾವುದೂ ಕಾರ್ಯ ನಿರ್ವಹಿಸುತ್ತಿಲ್ಲ. ಮೊದಲ ಅಂತಸ್ತಿನಲ್ಲಿ 10 ಡೀಲಕ್ಸ್ ಹವಾನಿಯಂತ್ರಣ ವ್ಯವಸ್ಥೆಯಿರದ ಕೊಠಡಿಗಳು, 10 ಎಸಿ ಕೊಠಡಿಗಳಿದ್ದರೂ, ಎಸಿ ಕಾರ್ಯನಿರ್ವಹಿಸುತ್ತಿಲ್ಲ.

ಹೀಗಾಗಿ ಭಕ್ತರಿಗೆ ಸ್ನಾನಕ್ಕೆ ಬಿಸಿ ನೀರು ಲಭ್ಯವಿಲ್ಲ. ದಿವ್ಯಾಂಗರು ಗಾಲಿ ಚೇರುಗಳಲ್ಲಿ ಬಂದರೆ ಕಟ್ಟಡ ಮೇಲ್ಭಾಗ ಏರಿಬರುವುದು ಕಷ್ಟ ಸಾಧ್ಯ. ಏಕೆಂದರೆ ಆ ರಾಂಪ್ ಹಲವು ಭಾಗಗಳಲ್ಲಿ ಕಿತ್ತುಬಂದಿದೆ. ಕಟ್ಟಡದ ಒಳ ಆವರಣದಲ್ಲಿ ಅಳವಡಿಸಿದ ದೀಪ, ಕಿತ್ತುಬಂದಿವೆ. ಇರುವ ಫ್ಯಾನ್ ಗಳನ್ನು ಕಿತ್ತು ಹಾಕಲಾಗಿದೆ. ಬರುವ ಭಕ್ತರ ಸುರಕ್ಷತೆಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿಲ್ಲ. ಕೇವಲ 10 ಸಿಬ್ಬಂದಿ ಕಾರ್ಯನಿರ್ವಹಸುವ ಈ ಅತಿಥಿಗೃಹದ ಅವ್ಯವಸ್ಥೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಧಾರ್ಮಿಕ ದತ್ತಿ ಇಲಾಖೆಯದ, ಮಂತ್ರಾಲಯ ಕರ್ನಾಟಕ ಅತಿಥಿಗೃಹದ ವ್ಯವಸ್ಥಾಪಕಿ ತ್ರಿವೇಣಿಯವರನ್ನು ಸಂಪರ್ಕಿಸಿದರೂ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

“ಇಡೀ ಕಟ್ಟಡದಲ್ಲಿ ಸರಿಯಾಗಿ ಎಲೆಕ್ಟ್ರಿಕ್ ವೈರಿಂಗ್ ಮಾಡಿಲ್ಲ. ಹಾಗಾಗಿ ಕೆಲವು ಕಡೆ ಸ್ವಿಚ್ ಗಳನ್ನು ಮುಟ್ಟಿದರೂ ಕರೆಂಟ್ ಶಾಕ್ ಹೊಡೆಯುತ್ತದೆ. ಇದೇ ಕಾರಣಕ್ಕೆ ಇಡೀ ಕಟ್ಟಡದಲ್ಲಿ ಗೀಸರ್ ಅಳವಡಿಸಿದ ಸ್ವಿಚ್ ಗಳನ್ನು ತೆಗೆಯಲಾಗಿದೆ. ಹೀಗಾಗಿ ರೂಮ್ ಪಡೆಯುವರಿಗೆ ಸ್ನಾನಕ್ಕೆ ಬಿಸಿನೀರು ಲಭ್ಯವಿರಲ್ಲ” ಎಂದು ಅತಿಥಿಗೃಹದ ಸಿಬ್ಬಂದಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಗೋಡೆಗೆ ಹಾಕಿದ ಗುಣಮಟ್ಟವಿರದ ಬಣ್ಣಗಳನ್ನು ಹಾಕಿಲ್ಲ ಜೊತೆಗೆ ಗೋಡೆಯಲ್ಲಿ ತೇವದ ಅಂಶದಿಂದ ಬಣ್ಣ ಕಿತ್ತುಬಂದಿರುವುದನ್ನು ಕಾಣಬಹುದು.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ.  ಇಲ್ಲಿನ ಶ್ರೀಗಳ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.  ಇಲ್ಲಿನ ದೇವಾಲಯವು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನವಾಗಿದೆ. ಹೀಗಾಗಿ ಹಳೆಯ ಕಟ್ಟಡವು ಶಿಥಿಲವಾಗಿದ್ದರಿಂದ 2016-17 ರಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟಲು ಆರಂಭಿಸಿದರೂ, ಸಕಾಲದಲ್ಲಿ ಈ ಕಟ್ಟಡವನ್ನು ಪೂರ್ಣಗೊಳಿಸಲಿಲ್ಲ. ಒಳಂಗಾಣ ವಿನ್ಯಾಸ ಪೂರ್ಣಗೊಳಿಸಲು ಅನುದಾನ ಕೊರತೆಯಿಂದ ಒಂದೂವರೆ ಎರಡೂವರೆ ವರ್ಷ ವಿಳಂಬವಾಯಿತು. 2020-2021 ರಲ್ಲಿ ಕರೋನಾ ಬಂದ ಕಾರಣ ಕಟ್ಟಡ ಕಾಮಗಾರಿ ಕೆಲಸ ಸಂಪೂರ್ಣ ಸ್ಥಗಿತಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.

ಕಳಪೆ ಕಾಮಗಾರಿ ಬಗ್ಗೆ ಲೋಕಾಯುಕ್ತ ಸಂಸ್ಥೆಗೆ ಇಲಾಖೆಯಿಂದ ದೂರಿಗೆ ಕ್ರಮ :

“ಮಂತ್ರಾಲಯದಲ್ಲಿನ ಕರ್ನಾಟಕದ ಧಾರ್ಮಿಕ ದತ್ತಿ ಇಲಾಖೆಯ ನೂತನ ಕಟ್ಟಡ ನಿರ್ಮಾಣ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಇಲಾಖೆಯು ಗುತ್ತಿಗೆದಾರರಿಗೆ ಕಟ್ಟಡ ಕಟ್ಟಲು ಜವಾಬ್ದಾರಿ ನೀಡಿದ್ದು,  ಕಾಮಗಾರಿ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ. ಕಳೆದ ಮಾರ್ಚ್ ನಲ್ಲಿ ನಾನೇ ಸ್ವತಃ ನಮ್ಮ ಇಲಾಖೆಯಲ್ಲಿ ಎಂಜಿನಿಯರ್ ಗಳನ್ನು ಕರೆಸಿ ಕಟ್ಟಡ ಪರಿಶೀಲನೆ ನಡೆಸಿ‌ದಾಗ ಕಳಪೆ ಕಾಮಗಾರಿ ನಡೆಸಿರುವುದು ಕಂಡುಬಂದಿದೆ. ಈ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಲು ಮುಜರಾಯಿ ಇಲಾಖೆ ಕಾರ್ಯದರ್ಶಿಗಳಿಗೆ ಒಪ್ಪಿಗೆ ನೀಡುವಂತೆ ಪ್ರಸ್ತಾವನೆ ಮಂಡಿಸಲಾಗಿದೆ. ಒಪ್ಪಿಗೆ ದೊರೆತ ಕೂಡಲೇ ಲೋಕಾಯುಕ್ತ ಸಂಸ್ಥೆಗೆ ದೂರು ನೀಡುತ್ತೇವೆ.”

– ಬಸವರಾಜೇಂದ್ರ, ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ

ಹಿಂದಿನ ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಯವರು ಆಗಸ್ಟ್ 2022 ರಲ್ಲಿ ಈ ಕಳಪೆ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಕರ್ನಾಟಕ ಭವನದಿಂದ ತೆರಳಲು ಕೇವಲ 5-10 ನಿಮಿಷ ಸಾಕು. ಬೃಂದಾವನದ ಸುತ್ತಮುತ್ತಲ ಭಾಗಗಳಲ್ಲಿ ಮಠದಿಂದ ಕಟ್ಟಿರುವ ಅತಿಥಿಗೃಹಗಳು ಸಾಕಷ್ಟಿವೆ. ಆದರೆ ಶ್ರಾವಣ ಮಾಸ, ರಾಯರ ಆರಾಧನಾ ಮಹೋತ್ಸವ, ಗುರುವಾರ ಮತ್ತಿತರ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಿ ಕೊಠಡಿಗಳು ಲಭ್ಯವಿರುವುದಿಲ್ಲ. ಆಗ ಮುಜರಾಯಿ ಇಲಾಖೆ ಈ ನೂತನ ಕಟ್ಟಡಗಳಲ್ಲಿ ಸೂಕ್ತ ಸೌಲಭ್ಯಗಳು ಇರದಿದ್ದರೂ, ಕರ್ನಾಟಕದ ಭಕ್ತರು ಅನಿವಾರ್ಯವಾಗಿ ಇಲ್ಲಿನ ಅತಿಥಿಗೃಹ ಬುಕ್ ಮಾಡಿ ಉಳಿದುಕೊಳ್ಳುವ ಪರಿಸ್ಥಿತಿಯಿದೆ.

ಕಟ್ಟಡದ ಮುಂಭಾಗದಲ್ಲಿ ಕಡಿಮೆ ಸಿಮೆಂಟ್ ಬಳಸಿ, ಕಳಪೆ ಕಾಮಗಾರಿ ನಡೆಸಿರುವ ಹಾಗೂ ಗುಣಮಟ್ಟವಿಲ್ಲದ ವಸ್ತುಗಳನ್ನು ಬಳಸಿರುವುದಕ್ಕೆ ಸಾಕ್ಷಿ.

ಮಂತ್ರಾಲಯದಲ್ಲಿನ ಹಳೆಯ ಕಟ್ಟಡವನ್ನು ಪೂರ್ತಿ ಕೆಡವಿ ಆ ಸ್ಥಳದಲ್ಲಿ ಹೊಸದಾಗಿ ಇಲಾಖೆ ವತಿಯಿಂದಲೇ ನೂತನ ಕಟ್ಟಡ ಕಟ್ಟುವ ಚಿಂತನೆ ನಡೆಸಿದ್ದೇವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಟ್ಟಾರೆ ಕಳಪೆ ಕಟ್ಟಡ ಕಾಮಗಾರಿ ನಡೆಸಿರುವ ಕಾಂಟ್ರಾಕ್ಟರ್ ಹಾಗೂ ಅದಕ್ಕೆ ಕಾರಣರಾಗಿರುವ ಲೋಕೋಪಯೋಗಿ ಇಲಾಖೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕಿದೆ. ಕರ್ನಾಟಕದಿಂದ ಬರುವ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು‌ ಕಲ್ಪಿಸುವ ಕೆಲಸವನ್ನು ಧಾರ್ಮಿಕ ದತ್ತಿ ಇಲಾಖೆಯವರು ಕೂಡಲೇ ಕೈಗೆತ್ತಿಕೊಳ್ಳಬೇಕಿದೆ. ಕಳಪೆಯಾಗಿರುವ ಈ ಕಟ್ಟಡದ ದೃಢತೆಯ ಹಾಗೂ ಸುರಕ್ಷತೆಯ ಬಗ್ಗೆ ಇಲಾಖೆ ವತಿಯಿಂದ ಕೂಡಲೇ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ಕಟ್ಟಡಕ್ಕೆ ಬರುವ ಯಾತ್ರಿಕರು ಆಗ್ರಹಿಸಿದ್ದಾರೆ.

Previous Post

Bangalore ORR Roads | ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋನಿಂದ, ಸರ್ವೀಸ್ ರಸ್ತೆ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿಗೆ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ

Next Post

Limca Book Of Records | ಭಾರತೀಯ ರೈಲ್ವೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ ಪಟ್ಟಿಗೆ ಸೇರ್ಪಡೆ

Next Post
ರೈಲ್ವೇ ನಿಲ್ದಾಣದ ಪ್ರಾತಿನಿಧಿಕ ಚಿತ್ರ

Limca Book Of Records | ಭಾರತೀಯ ರೈಲ್ವೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ ಪಟ್ಟಿಗೆ ಸೇರ್ಪಡೆ

STRR Hulikunte Toll | ದಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರ ಟೋಲ್ ರಸ್ತೆ ಪೂರ್ಣ ; ಹುಲಿಕುಂಟೆ ಸುಂಕ ವಸೂಲಿ ಕೇಂದ್ರ ಆರಂಭ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group