Saturday, August 1, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Hookah Ban In Karnataka | ರಾಜ್ಯಾದ್ಯಂತ ಹುಕ್ಕಾ ನಿಷೇಧಿಸಿ ಆರೋಗ್ಯ ಇಲಾಖೆ ಮಹತ್ವದ ಆದೇಶ – ಸಚಿವ ದಿನೇಶ್ ಗುಂಡೂರಾವ್ ದಿಟ್ಟ ಹೆಜ್ಜೆ

ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಹುಕ್ಕಾ ನಿಷೇಧಿಸಿ ಆದೇಶ ಹೊರಡಿಸಿದ ಸರ್ಕಾರ | ತಂಬಾಕು ರಹಿತ ಸ್ವಾದಭರಿತ ಹುಕ್ಕಾ ಉತ್ಪನ್ನಗಳ ಸೇವನೆ, ಮಾರಾಟಕ್ಕೂ ನಿಷೇಧ ಹೇರಿದ ಆರೋಗ್ಯ ಇಲಾಖೆ

by Bengaluru Wire Desk
February 8, 2024
in Bengaluru Focus, News Wire, Public interest
Reading Time: 1 min read
0

ಬೆಂಗಳೂರು, ಫೆ.8 www.bengaluruwire.com : ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ತಂಬಾಕು ರಹಿತ ಹುಕ್ಕಾ ಬಳಕೆ ಮತ್ತು ಮಾರಾಟ, ಸೇವನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. 

ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಕಳವಳ ವ್ಯಕ್ತಪಡಿಸುತ್ತಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹುಕ್ಕಾ ನಿಷೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಂಬಾಕು ರಹಿತ ಎಂದು ಹೇಳಿಕೊಂಡು‌ ನಡೆಯುತ್ತಿದ್ದ ಅನಾರೋಗ್ಯಕರ ಹುಕ್ಕಾ ಹಾವಳಿಗೆ ಕಡಿವಾಣ ಹಾಕಿದ್ದಾರೆ. 

ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಮತ್ತು ತಂಬಾಕು ಸಂಬಂಧಿತ ರೋಗಗಳ ಹೆಚ್ಚಳವನ್ನು ತಡೆಯುವ ನಿಟ್ಟಿನಲ್ಲಿ ಹುಕ್ಕಾ ಉತ್ಪನ್ನಗಳ ಮಾರಟ, ಸೇವನೆಯನ್ನು ನಿಷೇಧಿಸುತ್ತಿರುವುದಾಗಿ ಆರೋಗ್ಯ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ. ವಿಶ್ವ ಆರೋಗ್ಯ, ಸಂಸ್ಥೆ (WHO) ನಡೆಸಿರುವ ಗ್ಲೋಬಲ್ ಅಡಲ್ಟ್ಸ್ ಟೊಬ್ಯಾಕೊ ಸರ್ವೇ 2016-17, ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ ಶೇ.22.8 ವಯಸ್ಕರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಈ ಪೈಕಿ ಶೇ.8.8 ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ ಶೇ.23.9 ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಾಗಿ ಧೂಮಪಾನ ಮಾಡುತ್ತಾರೆ. ಇದು ರಾಜ್ಯದಲ್ಲಿ ತಂಬಾಕು ಸೇವನೆಯ ವ್ಯಾಪಕ ಅಪಾಯವನ್ನು ತೆರೆದಿಟ್ಟಿದ್ದು, ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

ಯುವ ಜನತೆಯು ಇತ್ತೀಚಿನ ವರ್ಷಗಳಲ್ಲಿ ತಂಬಾಕು ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಡಬ್ಲ್ಯುಎಚ್ ಒ ಗ್ಲೋಬಲ್ ಯೂತ್ ಟೊಬ್ಯಾಕೊ ಸರ್ವೇ (2019)ಯಲ್ಲಿ ದೃಢಪಟ್ಟಿದೆ. 13 ರಿಂದ15 ವರ್ಷ ವಯಸ್ಸಿನ ಸುಮಾರು ಐದನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ಹಲವು ಬಗೆಯ ತಂಬಾಕು ಸೇವಿಸುತ್ತಿದ್ದಾರೆ. ತಂಬಾಕು ಒಳಗೊಂಡ ಶಿಶಾ ಮತ್ತು “ಹರ್ಬಲ್” ಶಿಶಾ ಇವೆಲ್ಲವೂ ವಿಷಕಾರಿ ಹೊಗೆಯನ್ನು ಹೊರಸೂಸುವುದರಿಂದ ಕ್ಯಾನ್ಸರ್, ಹೃದ್ರೋಗ ಹಾಗೂ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ಮಹತ್ವದ ಅಂಶ ಸಂಶೋಧನೆಯಿಂದ ತಿಳಿದುಬಂದಿದೆ. 

ತಂಬಾಕಿನ ಅತಿಯಾದ ಬಳಕೆಯಿಂದಾಗಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆಯೂ ಬೀಳುತ್ತಿದೆ. 35 ರಿಂದ 69 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿನ ತಂಬಾಕು ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗಾಗಿ ರಾಜ್ಯ ಸರ್ಕಾರವು  2011ರಲ್ಲಿ 983 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇದು ತಂಬಾಕು ಉತ್ಪನ್ನಗಳ ಬಳಕೆಗೆ ತಡೆಯೊಡ್ಡುವ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತದೆ. 

ತಂಬಾಕು ಬಳಕೆಯ ಮೂಲಕ ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗುತ್ತಿರುವುದು ಸರ್ಕಾರ ಗಮನಿಸಿದೆ. ಒಪಿಯಾಡ್ ಬಳಕೆಯಲ್ಲಿ  ಅತಿಯಾದ ಹೆಚ್ಚಳ ಮತ್ತು ತಂಬಾಕು ಸೇವನೆಯು ಮಾದಕ ವ್ಯಸನದೆಡೆಗಿನ ಮೊದಲ ಹೆಜ್ಜೆ ಎಂಬುದನ್ನು ವಿಶ್ವ ಡ್ರಗ್ಸ್ ವರದಿ-2022 ಯಲ್ಲಿ ಉಲ್ಲೇಖಿಸಲಾಗಿದೆ. 

ಹುಕ್ಕಾ ಸೇವನೆಯ ಅಪಾಯಗಳು ಸಿಗರೇಟ್ ಸೇವನೆಗಿಂತ ಹಲವು ಪಟ್ಟು ಹೆಚ್ಚಾಗಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಹುಕ್ಕಾ ಹೊಗೆಯು ನಿಕೋಟಿನ್, ಟಾರ್ ಮತ್ತು ಭಾರವಾದ ಲೋಹ ಸೇರಿದಂತೆ ಅನೇಕ ಹಾನಿಕಾರಕ ಪದಾರ್ಥಗಳನ್ನು ಹೊಂದಿದೆ. ಹುಕ್ಕಾ ಸೇವಿಸುವವರು ವಿವಿಧ ರೀತಿಯ ಕ್ಯಾನ್ಸರ್ ಮತ್ತು ಹೃದ್ರೋಗ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

ಶಿಕ್ಷಣ ಸಂಸ್ಥೆಗಳಿಗೆ ಸಮೀಪದಲ್ಲಿರುವ ಅಕ್ರಮ ಹುಕ್ಕಾ ಬಾರ್‌ಗಳು ಸೇರಿದಂತೆ ಹುಕ್ಕಾ ಮೇಲಿನ ನಿಷೇಧದಿಂದಾಗಿ ರಾಜ್ಯದಲ್ಲಿ ಹುಕ್ಕಾ ಬಾರ್‌ಗಳ ಬಾಗಿಲುಗಳು ಬಂದ್ ಆಗಲಿವೆ. ವಿಶೇಷವಾಗಿ, ರಾಜ್ಯ ಸರ್ಕಾರವು ಹೇರಿದ ನಿಷೇಧವು, ಕೋಟ್ಪಾ 2003 ಮತ್ತು ಬಾಲ ನ್ಯಾಯ ಕಾಯಿದೆ 2015 ಸೇರಿದಂತೆ ಕಾನೂನು ನಿಬಂಧನೆಗಳಿಂದ ಬೆಂಬಲಿತವಾಗಿದೆ. ಈ ನಿಯಮಗಳೆಲ್ಲವನ್ನೂ ಮೀರಿ ಹುಕ್ಕಾ ಬಾರ್‌ಗಳು ಇದುವರೆಗೂ ಕಾರ್ಯಾಚರಿಸುತ್ತಿತ್ತು.

ರಾಜ್ಯದ ಜನತೆಯ ಆರೋಗ್ಯವನ್ನು ಸಂರಕ್ಷಿಸಲು ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಪಾಯಕಾರಿ ಅಂಶಗಳ ವಿರುದ್ಧದ ದಿಟ್ಟ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಹುಕ್ಕಾ ಬ್ಯಾನ್ ಮೂಲಕ ಕರ್ನಾಟಕದ ಮಾನ್ಯ ಆರೋಗ್ಯ ಸಚಿವರು ಪುನರುಚ್ಚರಿಸಿದ್ದಾರೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು, ಬಾ‌ರ್‌ಗಳು, ಲಾಂಜ್‌ಗಳು, ಕೆಫೆಗಳು, ಕ್ಲಬ್‌ಗಳು ಮತ್ತು ಇತರ ಸ್ಥಳಗಳಲ್ಲಿ ಹುಕ್ಕಾ ಬಳಕೆ, ಮಾರಾಟ ಮತ್ತು ಸೇವೆಯ ನಿಷೇಧವು ಯುವಜನರನ್ನು ಮಾದಕ ವ್ಯಸನದಿಂದ ಮತ್ತು ತಂಬಾಕಿನ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುವಲ್ಲಿ ನಿರ್ಣಾಯಕ ಹಂತವಾಗಿದೆ. 

ಎಲ್ಲಾ ಜವಾಬ್ದಾರಿಯುತ ನಾಗರಿಕರ ಬೆಂಬಲದೊಂದಿಗೆ, ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಪ್ರಮುಖ ಕಾಳಜಿಯಾಗಿರಿಸಿ ಕರ್ನಾಟಕ ಸರ್ಕಾರವು ಹುಕ್ಕಾ ಬ್ಯಾನ್ ಕುರಿತು ದಿಟ್ಟ ಕ್ರಮ ಕೈಗೊಂಡಿದೆ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

Gruha Jyothi News | ಗೃಹಜ್ಯೋತಿ ಯೋಜನೆ ಶುಭಸುದ್ದಿ : ಬಾಡಿಗೆ ಮನೆ ಬದಲಾಯಿಸಿದ್ರಾ? ಸೇವಾಸಿಂಧು ಡಿ-ಲಿಂಕ್ ನಿಂದ ಯೋಜನೆ ಲಾಭ ಪಡೆಯಬಹುದು

Next Post

BW EXCLUSIVE | ಬಿಬಿಎಂಪಿ ದಾಸರಹಳ್ಳಿ ವಲಯ : ಅಧಿಕಾರದ ಲಾಲಸೆಗೆ ಜಂಟಿ ಆಯುಕ್ತರ ಹುದ್ದೆಯೇ ಬದಲು!! – ಚೀಫ್ ಕಮಿಷನರ್ ಆಕ್ಷೇಪಕ್ಕೂ ಮೀರಿದ ಪ್ರಭಾವದ ಹಿಂದೆ ಯಾರಿದ್ದಾರೆ?

Next Post
ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಬಿಬಿಎಂಪಿ ದಾಸರಹಳ್ಳಿ ವಲಯದ ಅಪರ ಆಯುಕ್ತ ಹುದ್ದೆ ಉನ್ನತೀಕರಿಸಿ ಎಚ್.ಬಾಲಶೇಖರ್ ಅವರನ್ನು ವರ್ಗಾಯಿಸಿ ಹೊರಡಿಸಿರುವ ಅಧಿಸೂಚನೆ.

BW EXCLUSIVE | ಬಿಬಿಎಂಪಿ ದಾಸರಹಳ್ಳಿ ವಲಯ : ಅಧಿಕಾರದ ಲಾಲಸೆಗೆ ಜಂಟಿ ಆಯುಕ್ತರ ಹುದ್ದೆಯೇ ಬದಲು!! – ಚೀಫ್ ಕಮಿಷನರ್ ಆಕ್ಷೇಪಕ್ಕೂ ಮೀರಿದ ಪ್ರಭಾವದ ಹಿಂದೆ ಯಾರಿದ್ದಾರೆ?

ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

BBMP Property Tax | ಬಿಬಿಎಂಪಿ ವ್ಯಾಪ್ತಿಯಲ್ಲಿ ತಪ್ಪಾದ ವಲಯ ವರ್ಗೀಕರಣ ಆಸ್ತಿಗೆ ದುಪ್ಪಟ್ಟು ದಂಡವಿಲ್ಲ, ವ್ಯತ್ಯಾಸದ ಮೊತ್ತ- ಬ್ಯಾಂಕ್ ಬಡ್ಡಿದರ ಅನ್ವಯ

Please login to join discussion

Like Us on Facebook

Follow Us on Twitter

Recent News

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026

BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

July 31, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group