Saturday, August 1, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW EXCLUSIVE | BBMP White topping Roads | ಬೆಂಗಳೂರಿನ ಉದ್ಯಾನನಗರಿ ಪಟ್ಟಕ್ಕೆ ಕುತ್ತು : ಬಿಳಿ ಆನೆ ಸಾಕಲು ಹೊರಟ ಬಿಬಿಎಂಪಿ ; 1200 ಕೋಟಿ ರೂ. ಬೃಹತ್ ವೆಚ್ಚದಲ್ಲಿ ಮತ್ತೆ ಕಾಂಕ್ರೀಟ್ ರಸ್ತೆ

ಆತುರಾತುರವಾಗಿ ವೈಟ್ ಟಾಪಿಂಗ್ ರಸ್ತೆ ಟೆಂಡರ್ ಕರೆಯಲು ತೆರೆಮರೆಯಲ್ಲಿ ಸಿದ್ಧತೆ | ಪರೋಕ್ಷವಾಗಿ ಭ್ರಷ್ಟರ ಜೋಬು ತುಂಬಿಸಲು, ಪಾಲಿಕೆ ಆರ್ಥಿಕ ಸಂಪನ್ಮೂಲ ಬರಿದಾಗಲು ಕಾರಣವಾಗುವ ಯೋಜನೆ | ಸದ್ಯ ಸರ್ಕಾರ 800 ಕೋಟಿ + ಪಾಲಿಕೆ 1200 ಕೋಟಿ ರೂ. ಸೇರಿ 2,000 ಕೋಟಿ ರೂ. ವೈಟ್ ಟಾಪಿಂಗ್ ಗೆ ಮೀಸಲು

by Bengaluru Wire Desk
February 2, 2024
in Bengaluru Focus, BW Special, News Wire, Public interest
Reading Time: 1 min read
0

ಬೆಂಗಳೂರು, ಫೆ.2 www.bengaluruwire.com : ರಾಜಧಾನಿ ಬೆಂಗಳೂರಿನ ಮತ್ತಷ್ಟು ರಸ್ತೆಗಳನ್ನು ಕಾಂಕ್ರಿಟ್ ಮಯ ಮಾಡಲು ಬಿಬಿಎಂಪಿ ಹೊರಟಿದೆ. ನಗರದ ಆಸ್ತಿ ತೆರಿಗೆದಾರರ ಹಣದಲ್ಲಿ ಅತಿ ವೆಚ್ಚದಾಯಕವಾದ ಸುಮಾರು 1,200 ಕೋಟಿ ರೂ. ಮೊತ್ತದ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಿ ಸರ್ಕಾರದಿಂದ ಆತುರಾತುರವಾಗಿ ಅನುಮೋದನೆ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬ್ರ್ಯಾಂಡ್ ಬೆಂಗಳೂರು ಯೋಜನೆ ಹಿನ್ನಲೆಯಲ್ಲಿ ನಗರದ ಜನತೆಗೆ ಸುಗಮ ವಾಹನ ಸಂಚಾರ ಹಾಗೂ ಉತ್ತಮ ಪಾದಚಾರಿ ಮಾರ್ಗದ ಹೆಸರಿನಲ್ಲಿ 2023-24, 2024-25 ಹಾಗೂ 2025-26ನೇ ಇಸವಿಯಲ್ಲಿ ತಲಾ 400 ಕೋಟಿ ರೂ.ಗಳಂತೆ ಹೆಚ್ಚುವರಿ ನಿರೀಕ್ಷಿಸಿದ ಆಸ್ತಿ ತೆರಿಗೆಯನ್ನು ಆಧಾರವಾಗಿಟ್ಟುಕೊಂಡು ಪಾಲಿಕೆ ಸಂಪನ್ಮೂಲದಲ್ಲಿಯೇ ಈ ಯೋಜನೆಯನ್ನು ಕಾರ್ಯಗತ ಮಾಡಲು ರಾಜ್ಯ ಸರ್ಕಾರ ಜ.12ರಂದು ಒಪ್ಪಿಗೆ ನೀಡಿತ್ತು.‌ ಅದಕ್ಕೆ ಫೆ.1ರಂದು ನಡೆದ ಸಚಿವ ಸಂಪುಟ ಅನುಮೋದನೆಯ ಮುದ್ರೆಯು ಬಿದ್ದಂತಾಗಿದೆ.

900 ಕೋಟಿ ರೂ. ಹಣವನ್ನು ನಗರದ 70 ರಸ್ತೆಗಳಲ್ಲಿ ವೈಟ್ ಟಾಪಿಂಗ್ ನಿರ್ಮಾಣಕ್ಕೆ, 91.50 ಕೋಟಿ ರೂ., ನಾಮಕಾವಸ್ತೆಗೆ  ಮಹದೇವಪುರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ತಲಾ 6 ರಸ್ತೆಗಳಂತೆ ಒಟ್ಟು 12 ರಸ್ತೆಗಳ ಡಾಂಬರೀಕರಣ, ಮಳೆನೀರು ಮೋರಿ ಅಭಿವೃದ್ಧಿ ಹಾಗೂ 200 ಕೋಟಿ ರೂ. ಹಣವನ್ನು ರಾಜಕಾಲುವೆ ರಕ್ಷಣೆ, ಅಭಿವೃದ್ಧಿ ಹಾಗೂ ಬಫರ್ ಜೋನ್‌ನಲ್ಲಿ ಹೊಸದಾಗಿ ರಸ್ತೆ ನಿರ್ಮಾಣ ಮತ್ತು ಟಾರ್ ಹಾಕಲು ಹಣ ನಿಗದಿಪಡಿಸಲಾಗಿದೆ.

ಈಗಾಗಲೇ ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳಲ್ಲಿ 800 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೊಂಡಿದೆ. ಅದರ ಜೊತೆಗೆ ಪಾಲಿಕೆ ಸ್ವಂತ ಸಂಪನ್ಮೂಲ 1,200 ಕೋಟಿ ಸೇರಿದರೆ ಒಟ್ಟಾರೆ ಬರೋಬ್ಬರಿ 2,000 ಕೋಟಿ ರೂ. ವೆಚ್ಚದಲ್ಲಿ ನಗರದ ರಸ್ತೆಗಳಿಗೆ ಶಾಶ್ವತವಾಗಿ ಕಾಂಕ್ರಿಟ್ ಮಯವಾಗುತ್ತೆ. ಕಾಂಕ್ರೀಟ್ ರಸ್ತೆಯಿಂದಾಗುವ ದುಷ್ಪರಿಣಾಮಗಳಲ್ಲಿ ರಸ್ತೆಯಲ್ಲಿ ನೀರು ಇಂಗದಿರುವುದು ಪ್ರಮುಖ ಸಮಸ್ಯೆಯಾಗಿದೆ. ವೈಟ್ ಟಾಪಿಂಗ್ ರಸ್ತೆಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಅಧ್ಯಯನ ಅಗತ್ಯವಿದೆ.

ಸರ್ಕಾರದ ಆದೇಶ ಪ್ರತಿ

ದೊಡ್ಡ ಯೋಜನೆಯಲ್ಲಿ ಸಣ್ಣ ಗುತ್ತಿಗೆದಾರರಿಗೆ ಅವಕಾಶವೇ ಇಲ್ಲ :

1200 ಕೋಟಿ ರೂ. ನಷ್ಟು ದೊಡ್ಡ ಮೊತ್ತದ ಯೋಜನೆಯಲ್ಲಿ ಪಾಲಿಕೆಯ ಸಣ್ಣ ಗುತ್ತಿಗೆದಾರರು ಟೆಂಡರ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ.‌ ಯಾಕಂದ್ರೆ ಇಲ್ಲಿ ಪ್ರತಿ ಕಾಮಗಾರಿಗಳ ಪ್ಯಾಕೇಜ್ ಕನಿಷ್ಠ ಮೊತ್ತ 100 ಕೋಟಿ ರೂ.ಗಳಿಗಿಂತ ಕಡಿಮೆಯಿರಬಾರದು ಎಂದು ಸರ್ಕಾರ ಷರತ್ತು ವಿಧಿಸಿದೆ.

ನಗರದಲ್ಲಿ 2023-24ನೇ ಸಾಲಿನ ಪಾಲಿಕೆ ಬಜೆಟ್ ನಲ್ಲಿ ಘೋಷಣೆ ಮಾಡಿದ ಶೇ.30ರಷ್ಟು ಅಂಶಗಳು ಅನುಷ್ಠಾನ ಆಗಿಲ್ಲ ಎನ್ನುತ್ತಿವೆ ಉನ್ನತ ಮೂಲಗಳು. ಯೋಜನೆ ಗೆ ಟೆಂಡರ್ ಪಡೆಯಲು ಹಾಗೂ ಯೋಜನೆ ಅನುಷ್ಠಾನ ಹಾಗೂ ಬಿಲ್ ಪಡೆಯಲು ಅಧಿಕಾರಿ ಮತ್ತು ಜನಪ್ರತಿನಿಧಿಗಳು ಪರ್ಸೆಂಟೇಜ್ ಪಡೆಯುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪದ ನಡುವೆಯೇ ಬೆಂಗಳೂರಿನ ನಗರ ಯೋಜನಾ ತಜ್ಞರು, ಪರಿಸರ ತಜ್ಞರು ರಸ್ತೆಗಳಿಗೆ ಕಾಂಕ್ರಿಟ್ ಹಾಕುವ ವೈಟ್ ಟಾಪಿಂಗ್ ಯೋಜನೆ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಪ್ರತಿ ಕಿಲೋಮೀಟರ್‌ಗೆ 75 ಲಕ್ಷದಿಂದ 1 ಕೋಟಿ ರೂಪಾಯಿ ವೆಚ್ಚದ ಡಾಂಬರೀಕರಣಕ್ಕೆ ಹೋಲಿಸಿದರೆ ಪ್ರಸ್ತುತ ಬಿಬಿಎಂಪಿಯು ಒಂದು ಕಿಲೋಮೀಟರ್ ರಸ್ತೆಯ ವೈಟ್-ಟಾಪ್‌ಗೆ ಸರಾಸರಿಯಾಗಿ 9 ರಿಂದ 10 ಕೋಟಿ ರೂ. ವೆಚ್ಚ ಮಾಡುತ್ತಿದೆ. ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಹಿಂಬಾಗಿಲಿನಿಂದ ಸಾರ್ವಜನಿಕರು ಹಾಗೂ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಮೂಲಸೌಕರ್ಯ ಕಲ್ಪಿಸುವ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಅನವಶ್ಯಕವಾಗಿ ವ್ಯರ್ಥ ಮಾಡಲು ಹೊರಟಿದೆ.

ಆತುರಾತುರವಾಗಿ ಟೆಂಡರ್ ಕರೆದು ಕಾಮಗಾರಿಗೆ ಕ್ರಮ :

ಈ ಯೋಜನೆಗೆ ಆದಷ್ಟು ಶೀಘ್ರದಲ್ಲೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಟೆಂಡರ್ ಕರೆದು, ಆ ಸಂದರ್ಭದಲ್ಲೇ ತಾಂತ್ರಿಕ ಮೌಲ್ಯಮಾಪನ ನಡೆಸಿ, ಒಂದೇ ಬಾರಿಗೆ ಟೆಂಡರ್ ಹಾಗೂ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆಯಬೇಕೆಂದು ಜ.12ರ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

ಎಸ್ಕ್ರೂ ಖಾತೆಯಲ್ಲಿಟ್ಟ ಹಣ ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ :

ಈ ಯೋಜನೆ ಕಾರ್ಯಾರಂಭ ಮಾಡಿದ ದಿನಾಂಕದಿಂದ ಪಾಲಿಕೆ ಕಂದಾಯ ವಿಭಾಗದಲ್ಲಿ ಸಂಗ್ರಹವಾಗುವ ಹೆಚ್ಚುವರಿ ಆಸ್ತಿ ತೆರಿಗೆ ಹಣವನ್ನು ಪ್ರತ್ಯೇಕವಾಗಿ ಈ ಯೋಜನೆಗಾಗಿಯೇ ಎಸ್ಕ್ರೂ ಖಾತೆ ತೆರೆದು ಪ್ರತಿ ತಿಂಗಳು 1/12 ಭಾಗದಷ್ಟು ಹಣವನ್ನು ವರ್ಗಾಯಿಸಬೇಕು. ಯಾವುದೇ ಕಾರಣಕ್ಕೂ ಇದರಲ್ಲಿನ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಹಾಗೊಮ್ಮೆ ಬಳಸಬೇಕಾದ ಪರಿಸ್ಥಿತಿ ಬಂದರೆ ಆರ್ಥಿಕ ಇಲಾಖೆ ಹಾಗೂ ಸಚಿವ ಸಂಪುಟದ ಪೂರ್ವಾನುಮತಿ ಪಡೆಯಬೇಕೆಂದು ಷರತ್ತಿನಲ್ಲಿ ತಿಳಿಸಲಾಗಿದೆ.

ಯೋಜನೆ ಜಾರಿಯಿಂದ ಆದಾಯ ಕೊರತೆಯಾದರೆ ಪಾಲಿಕೆಯೇ ಜವಾಬ್ದಾರಿ!! :

ಬಿಬಿಎಂಪಿಯು ತನ್ನ ಆದಾಯದಲ್ಲಿ ವಾರ್ಷಿಕ 400 ಕೋಟಿ ರೂ.ಗಳ ಹೆಚ್ಚುವರಿ ಆದಾಯವನ್ನು ನಿರೀಕ್ಷಿಸಿರುವುದರಿಂದ, ಪಾಲಿಕೆಯು ತನ್ನ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಸೋರಿಕೆಯನ್ನು ತಪ್ಪಿಸಲು ಹೆಚ್ಚು ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ತೆರಿಗೆ ಆದಾಯವನ್ನು ಹೆಚ್ಚಿಸಿಕೊಳ್ಳಲು ಲಭ್ಯವಿರುವ ಎಲ್ಲಾ ಮಾರ್ಗೋಪಾಯಗಳನ್ನು ಕೈಗೊಳ್ಳಬೇಕು. 

ಈ ಯೋಜನೆಯ ಜಾರಿಯಿಂದಾಗಿ ಸಂಬಳ ಮತ್ತು ಇನ್ನಿತರೆ ವೆಚ್ಚಗಳು ಸೇರಿದಂತೆ ಉದ್ಭವಿಸಬಹುದಾದ ಯಾವುದೇ ಅನುದಾನದ ಕೊರತೆ ಎದುರಾದರೆ ಅದಕ್ಕೆ ಬಿಬಿಎಂಪಿಯೇ ಜವಾಬ್ದಾರಿಯಾಗಿರುತ್ತದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಯಾವುದೇ ಬಾಧ್ಯತೆ ಇರುವುದಿಲ್ಲ ಅಂತ ಹೇಳಿ ಸರ್ಕಾರ ಜಾರಿಕೊಂಡಿದೆ.

ಮಳೆ ಬಾರದೆ ರಸ್ತೆಗುಂಡಿ ಸಮಸ್ಯೆ ಅಷ್ಟಾಗಿ ಬಾಧಿಸಿಲ್ಲ :

ವರ್ಷಂಪ್ರತಿ ಸಾವಿರಾರು ಕೋಟಿ ರೂ. ಹಣ ವೆಚ್ಚ ಮಾಡುತ್ತಿದ್ದರೂ ನಗರದ ಮುಖ್ಯ ರಸ್ತೆಗಳು, ಪಾದಚಾರಿ ಮಾರ್ಗ ಹಾಗೂ ಚರಂಡಿಗಳಾಗಲಿ ಸುಸ್ಥಿತಿಯಲ್ಲಿಲ್ಲ. 2023-24ನೇ ಸಾಲಿನ ಮಳೆಗಾಲದಲ್ಲಿ ಮಳೆಯ ಆರ್ಭಟ ಹೆಚ್ಚಿಲ್ಲದ ಕಾರಣ ದೊಡ್ಡ ದುರ್ಘಟನೆಗಳು ಸಂಭವಿಸದೆ, ರಸ್ತೆಗಳಲ್ಲಿ ಸ್ವಲ್ಪ ಮಟ್ಟಿಗೆ ವಾಹನ ಸಂಚರಿಸುವಂತಿದೆ. ಸಾರ್ವತ್ರಿಕ ವಿಧಾನಸಭೆಯ ಕಾರಣಕ್ಕೆ ಹಿಂದಿನ ಸರ್ಕಾರ, ಆಡಳಿತಾಧಿಕಾರಿಗಳ ಆಡಳಿತಾವಧಿಯಲ್ಲಿ ನಗರದ ಪ್ರಮುಖ ರಸ್ತೆಗಳಿಗೆ ಡಾಂಬರ್ ಹಾಕುವ ಶಾಸ್ತ್ರ ಮಾಡಿತ್ತು. ಆದರೂ ಕಾಮಗಾರಿ ಗುಣಮಟ್ಟದ ವಿಚಾರದಲ್ಲಿ ರಾಜಿಯಾಗಿತ್ತು ಎಂದು ಸಾಕಷ್ಟು ಆರೋಪಗಳು ಕೇಳಿಬಂದಿದ್ದವು.

ಪಾಲಿಕೆ ಒಟ್ಟಾರೆ ಸಂಪನ್ಮೂಲ 6 ಸಾವಿರ ಕೋಟಿ ರೂ.‌ದಾಟಿಲ್ಲ :

ಪಾಲಿಕೆಯ ಎಲ್ಲಾ ಮೂಲಗಳಿಂದ ಲೆಕ್ಕ ಹಾಕಿದರೂ ವರ್ಷಂಪ್ರತಿ ಆರ್ಥಿಕ ಸಂಪನ್ಮೂಲ 6,000 ಕೋಟಿ ರೂ. ಮೀರುವುದಿಲ್ಲ. ಅದರಲ್ಲೂ ಮೂಲಭೂತ ಸೌಕರ್ಯ ಕಲ್ಪಿಸುವ ಈ ಯೋಜನೆಗೆ ಆಸ್ತಿ ತೆರಿಗೆ ಸಂಗ್ರಹದ ಮೇಲೆ ಅವಲಂಬಿತವಾಗಿರೋದರಿಂದ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹ ಸಂಪನ್ಮೂಲವನ್ನು ಇನ್ನಿತರ ಅವಶ್ಯಕ ಕಾರ್ಯಗಳಾದ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ನಗರ ನೈರ್ಮಲ್ಯತೆ, ಕುಡಿಯುವ ನೀರು ಹಾಗೂ ಬೀದಿ ದೀಪಗಳಂತಹ ಕೆಲಸಗಳಿಗೆ ಬಳಸುವುದು ತಪ್ಪುತ್ತದೆ. ಇದರಿಂದ ಆರ್ಥಿಕ ಸಂಪನ್ಮೂಲಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದೆ ದೇಹೀ ಎನ್ನುವಂತೆ ಪಾಲಿಕೆಯನ್ನು ಈ ಕ್ರಮ, ಪರಾವಲಂಬಿ ಮಾಡುವ ಹುನ್ನಾರವಲ್ಲದೆ ಮತ್ತಿನ್ನೇನಲ್ಲ.

WhatsApp Join our WhatsApp Channel
Previous Post

Union Budget 2024-2025 | ಕೇಂದ್ರ ಬಜೆಟ್ 2024 ಮಂಡನೆ : 3 ಕೋಟಿ ಮನೆ ನಿರ್ಮಾಣ ಗುರಿ ಶೀಘ್ರದಲ್ಲೇ ಸಾಧನೆ ; ಸಚಿವೆ ನಿರ್ಮಲಾ ಸೀತಾರಾಮನ್ 6ನೇ ಬಾರಿ ಆಯವ್ಯಯ ಮಂಡನೆ

Next Post

Bangalore Traffic ASTraM App | ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕೃತಕ ಬುದ್ಧಿಮತ್ತೆ ಅಸ್ತ್ರಂ ಬಳಕೆ : ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

Next Post

Bangalore Traffic ASTraM App | ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕೃತಕ ಬುದ್ಧಿಮತ್ತೆ ಅಸ್ತ್ರಂ ಬಳಕೆ : ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

Bharath Ratna 2024 | ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ : ಪ್ರಧಾನಿ ನರೇಂದ್ರ ಮೋದಿ ಘೋಷಣೆ

Please login to join discussion

Like Us on Facebook

Follow Us on Twitter

Recent News

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026

BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

July 31, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group