Saturday, August 1, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BBMP Breaking News | ಬೊಮ್ಮನಹಳ್ಳಿ ವಲಯದ ಆಸ್ತಿ ತೆರಿಗೆ ಸಂಗ್ರಹ ಲೋಪ : ಜಂಟಿ ಆಯುಕ್ತರಿಗೆ ಶೋಕಾಸ್ ನೋಟಿಸ್ – ಡಿಸಿ ವಿರುದ್ದ ವಿಚಾರಣೆ ; 6 ಎಆರ್ ಒ ಅಮಾನತಿಗೆ ಶಿಫಾರಸ್ಸು

ಟಾಪ್- 50 ವಸತಿ ಮತ್ತು ವಸತಿಯೇತರ ಕಟ್ಟಡಗಳಿಂದ ಬಾಕಿ ತೆರಿಗೆ, ಪರಿಷ್ಕೃತ ತೆರಿಗೆ ಸಂಗ್ರಹದಲ್ಲಿ‌ ನಿರ್ಲಕ್ಷ್ಯ | ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿರುವ ಕಂದಾಯ ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್

by Bengaluru Wire Desk
January 31, 2024
in Bengaluru Focus, BW Special, Public interest
Reading Time: 1 min read
0

ಬೆಂಗಳೂರು, ಜ.31 www.bengaluruwire.com : ಬೊಮ್ಮನಹಳ್ಳಿ ವಲಯದಲ್ಲಿ ಆಸ್ತಿ ತೆರಿಗೆ ಸಂಬಂಧಿತ ಲೋಪಗಳ ಹಿನ್ನಲೆಯಲ್ಲಿ ಜಂಟಿ ಆಯುಕ್ತ ಅಜಿತ್ ಅವರಿಗೆ ಕಾರಣ ಕೇಳಿ ನೋಟಿಸ್ ಹಾಗೂ ಕಂದಾಯ ಉಪಆಯುಕ್ತ (Deputy Commissioner) ಡಿಕೆ ಬಾಬು ಅವರ ವಿರುದ್ಧ ಇಲಾಖೆ ವಿಚಾರಣೆ (Department Enquiry -DE)  ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್ ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ.

6 ಮಂದಿ ಎಆರ್ ಒ (Assistant Revenue Officer – ARO)ಗಳನ್ನು ಸಸ್ಪೆಂಡ್ ಹಾಗೂ ಇಬ್ಬರು ಆರ್ ಒ (Revenue Officer) ಗಳ ವಿರುದ್ಧ ಇಲಾಖಾ ವಿಚಾರಣೆಗೆ ವಿಶೇಷ ಆಯುಕ್ತರು ಆದೇಶಿಸಿದ್ದಾರೆ.

ಜ.30 ರಂದು ಬೊಮ್ಮನಹಳ್ಳಿ ವಲಯದಲ್ಲಿ ಆಸ್ತಿ ತೆತಿಗೆ ಸಂಗ್ರಹ, ತೆರಿಗೆ ಬಾಕಿ, ಟಾಪ್ 50 ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಗೃಹ ಹಾಗೂ ಗೃಹೇತರ ಕಟ್ಟಡಗಳ ಮಾಲೀಕರ ಆಸ್ತಿಗಳನ್ನು ಮುಟ್ಟುಗೋಲು ಹಾಗೂ ಬೀಗಮುದ್ರೆ ಹಾಕದ ಪ್ರಕರಣಗಳು ಪರಿಶೀಲನೆ ವೇಳೆ ಕಂಡು ಬಂದಿದ್ದವು. ಈ ಹಿನ್ನಲೆಯಲ್ಲಿ ಜಂಟಿ ಆಯುಕ್ತರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಹಾಗೂ ಡಿಸಿ ಡಿಕೆ ಬಾಬು ಅವರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದಾರೆ.

“ಡಿಸಿ ಡಿಕೆ ಬಾಬು ಕಳೆದ ಎರಡು ತಿಂಗಳಲ್ಲಿ ಟಾಪ್-50 ಗೃಹೇತರ ಕಟ್ಟಡಗಳಲ್ಲಿ ಒಂದು ಕಟ್ಟಡವನ್ನು ಸೀಲ್ ಮಾಡಿಲ್ಲ. ಅದೇ ರೀತಿ ಟಾಪ್ -50 ವಸತಿ ಕಟ್ಟಡಗಳಲ್ಲಿ ಒಂದು ಆಸ್ತಿಯನ್ನು ಅಟ್ಯಾಚ್ ಮೆಂಟ್ ಮಾಡಿಲ್ಲ. ಈ ಕುರಿತಂತೆ ಡಿಕೆ ಬಾಬು ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕಿದೆ” ಎಂದು ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್ ತಮ್ಮ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

ಅರಕೆರೆ ಉಪ ವಿಭಾಗದಲ್ಲಿ ಆರ್ ಒ ಶ್ರೀನಿವಾಸ್ , ಎಆರ್ ಒ ಸೋಮಶೇಖರ್ ಅವರ ವಿರುದ್ಧ ಡಿಇ ನಡೆಸುವಂತೆ ಹಾಗೂ ಶ್ರೀನಿವಾಸ್ ಅವರನ್ನು ಅಮಾನತು ಮಾಡಲು ವಿಶೇಷ ಆಯುಕ್ತರು ಶಿಫಾರಸ್ಸು ಮಾಡಿದ್ದಾರೆ. ಬೇಗೂರು ಎಆರ್ ಒ ಉಪವಿಭಾಗದಲ್ಲಿ ಎಆರ್ ಒ ಸಂತೋಷ ಅವರ ವಿರುದ್ಧ ಇಲಾಖಾ ತನಿಖೆ ಹಾಗೂ ಅವರನ್ನು ಅಮಾನತು ಮಾಡುವಂತೆ ವಿಶೇಷ ಆಯುಕ್ತರು ಆದೇಶಿಸಿದ್ದಾರೆ. ಅದೇ ರೀತಿ ಆರ್ ಒ ಚಂದ್ರಶೇಖರ್ ವಿರುದ್ಧ ಡಿಇ ನಡೆಸಲು ಫರ್ಮಾನು ಹೊರಡಿಸಿದ್ದಾರೆ.

ಎಆರ್ ಒ ಸಂತೋಷ್ ಅತಿ ಹೆಚ್ಚು ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿದ ಮೊದಲ ಆಸ್ತಿಗೆ ಬೀಗಮುದ್ರೆ ಮಾಡಿರಲಿಲ್ಲ. ಹಾಗೂ ಕೆ.ಎನ್.ಲಲಿತ ಎಂಬ ಕಟ್ಟಡ ಮಾಲೀಕರ ಜೊತೆ ಕೈಜೋಡಿಸಿ, ಉದ್ದೇಶಪೂರ್ವಕವಾಗಿ ಅವರು‌ ನೀಡಿದ 31 ಲಕ್ಷ ರೂ. ಚೆಕ್ ಅನ್ನು ಜ.1ರಿಂದ ಈತನಕ ಪಾಲಿಕೆಗೆ ಕಟ್ಟಿಲ್ಲ. ಎರಡನೇ ಅತಿ ದೊಡ್ಡ ಸುಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹವಾಗಲಿ, ಟಾಪ್-2 ಕಟ್ಟಡದಿಂದ ತೆರಿಗೆ ಸಂಗ್ರಹ, ಸೀಲ್ ಮಾಡುವ ಕೆಲಸ ಮಾಡಿಲ್ಲ. ಟಾಪ್ -50ರಲ್ಲಿನ ಗೃಹೇತರ ಕಟ್ಟಡಗಳನ್ನು ಸೀಲ್ ಮಾಡುವುದಾಗಲಿ ಮಾಡಿಲ್ಲ. 20 ಲಕ್ಷಕ್ಕಿಂತ ಹೆಚ್ಚು ಬಾಕಿ ತೆರಿಗೆದಾರರ ವಿರುದ್ಧ ಯಾವ ಕ್ರಮ ಕೈಗೊಳ್ಳದೇ ಹಿರಿಯ ಅಧಿಕಾರಿಗಳು ನೀಡದ ಸೂಚನೆಗಳನ್ನು ಪಾಲಿಸದೆ ನಿರ್ಲಕ್ಷಿಸಿದ್ದಾರೆ ಎಂದು ಮುನೀಷ್ ತಮ್ಮ ದಾಖಲಾತಿಯಲ್ಲಿ‌ ತಿಳಿಸಿದ್ದಾರೆ.

ಅದೇ ರೀತಿ ಬೊಮ್ಮನಹಳ್ಳಿ ಉಪ ವಿಭಾಗದಲ್ಲಿ ಎಆರ್ ಒ ರೇಣುಕಾ ಪ್ರಸಾದ್ ಅಮಾನತು, ಯಲಚೇನಹಳ್ಳಿಯಲ್ಲಿ ಎಆರ್ ಒ ಶಂಕರ್, ಉತ್ತರಹಳ್ಳಿಯ ಎಆರ್ ಒ ನಾಗವೇಣಿ ಅವರನ್ನು ಸಸ್ಪೆಂಡ್ ಮತ್ತು ಇಲಾಖಾ ವಿಚಾರಣೆಗೆ ಸೂಚಿಸಿದ್ದಾರೆ‌. ಆರ್ ಒ ಕಮಲಾ ವಿರುದ್ಧ ಡಿಇ ನಡೆಸಲು ಆದೇಶಿಸಿದ್ದಾರೆ.

ಇನ್ನು ಎಚ್ ಎಸ್ ಆರ್ ಲೇಔಟ್ ಉಪವಿಭಾಗದಲ್ಲಿ ಎಆರ್ ಒ ಮಂಜುನಾಥ್ ಅವರನ್ನು ಅಮಾನತು ಮಾಡಿ, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸೂಚಿಸಿದ್ದಾರೆ. ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್ ಅರಕೆರೆ ಉಪವಿಭಾಗಕ್ಕೆ ಭೇಟಿ ನೀಡಿದಾಗ ಅವರಿಗೆ ಶಾಕ್ ಕಾದಿತ್ತು. ಕೆಲವೊಂದು ಸುಸ್ತಿದಾರರ ಆಸ್ತಿಗಳನ್ನು ಅಟ್ಯಾಚ್ ಮೆಂಟ್ ಮಾಡಿಕೊಂಡಿರುವ ಬಗ್ಗೆ ಕೆಳ ಹಂತದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರು. ಇದನ್ನು ಪತ್ತೆ ಹಚ್ಚಿದ ಮುನೀಷ್ ಅವರು ಆ ಅಧಿಕಾರಿಗಳ ವಿರುದ್ಧ ತಪ್ಪು ಮಾಹಿತಿ ನೀಡಿದ್ದರ ಬಗ್ಗೆ ಕೆಂಡಕಾರಿದರು. 

ಆಸ್ತಿ ತೆರಿಗೆ ಸಂಗ್ರಹಿಸಿದ, ದೊಡ್ಡ ತೆರಿಗೆ ಸುಸ್ತಿದಾರರ ಮೇಲೆ ಕ್ರಮವಹಿಸದ, ದೊಡ್ಡ ಗೃಹೇತರ ಕಟ್ಟಡಗಳನ್ನು ಪರಿಶೀಲಿಸದ, ಆಸ್ತಿಗಳನ್ನು ಬೀಗಮುದ್ರೆ ಮಾಡದ ಹೀಗೆ ವಿವಿಧ ಲೋಪಗಳ ಹಿನ್ನಲೆಯಲ್ಲಿ ಕಂದಾಯ ಉಪ ಆಯುಕ್ತರು (DC), ಕಂದಾಯ ಅಧಿಕಾರಿ (RO), ಸಹಾಯಕ ಕಂದಾಯ ಅಧಿಕಾರಿ (ARO)ಗಳ ಮೇಲೆ ಬಿಬಿಎಂಪಿ ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್ ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ.

WhatsApp Join our WhatsApp Channel
Previous Post

Kannada News | ಕನ್ನಡ ನಾಮಫಲಕ ಸುಗ್ರೀವಾಜ್ಞೆ ವಾಪಸು ಆದೇಶವನ್ನು ರಾಜ್ಯಪಾಲರು ಪುನರ್ ಪರಿಶೀಲಿಸಬೇಕು : ಡಿಸಿಎಂ ಡಿ.ಕೆ.ಶಿವಕುಮಾರ್

Next Post

RBI Shocking News | Paytm ಪಾವತಿ ಬ್ಯಾಂಕ್ ಸೇವೆಗಳ ಮೇಲೆ ನಿರ್ಬಂಧ : ಈಗ ನಿಮ್ಮ ಹಣ ಏನಾಗುತ್ತದೆ?

Next Post

RBI Shocking News | Paytm ಪಾವತಿ ಬ್ಯಾಂಕ್ ಸೇವೆಗಳ ಮೇಲೆ ನಿರ್ಬಂಧ : ಈಗ ನಿಮ್ಮ ಹಣ ಏನಾಗುತ್ತದೆ?

Union Budget 2024-2025 | ಕೇಂದ್ರ ಬಜೆಟ್ 2024 ಮಂಡನೆ : 3 ಕೋಟಿ ಮನೆ ನಿರ್ಮಾಣ ಗುರಿ ಶೀಘ್ರದಲ್ಲೇ ಸಾಧನೆ ; ಸಚಿವೆ ನಿರ್ಮಲಾ ಸೀತಾರಾಮನ್ 6ನೇ ಬಾರಿ ಆಯವ್ಯಯ ಮಂಡನೆ

Please login to join discussion

Like Us on Facebook

Follow Us on Twitter

Recent News

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026

BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

July 31, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group