Tuesday, June 16, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

  • Bengaluru Focus

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | BWSSB | ಕಾವೇರಿ 5ನೇ ಹಂತ ಯೋಜನೆ : ಬೆಂಗಳೂರಿನ 110 ಹಳ್ಳಿಗಳಿಗೆ ಏಪ್ರಿಲ್ ನಿಂದ ನೀರು ಪೂರೈಕೆ

ನಗರಕ್ಕೆ ಹೆಚ್ಚುವರಿ 10 ಟಿಎಂಸಿ‌ನೀರಿನ ಸಂಗ್ರಹ- ಪೂರೈಕೆಗೆ ಸರ್ಕಾರ ಒಪ್ಪಿಗೆ | ಸದ್ಯದಲ್ಲೆ ಕಾಮಗಾರಿ ಆರಂಭಿಸಲು ಜಲಮಂಡಳಿ ಸಿದ್ಧತೆ | ರಾಜಧಾನಿಗೆ ಒಟ್ಟಾರೆ ವಾರ್ಷಿಕ 34 ಟಿಎಂಸಿ ಅಡಿ ನೀರು ಹಂಚಿಕೆ

by Bengaluru Wire Desk
January 5, 2024
in Bengaluru Focus, BW Special, Public interest
Reading Time: 1 min read
2
ಕಾವೇರಿ 5ನೇ ಹಂತದ ಯೋಜನೆ ಜಲ ಶುದ್ಧೀಕರಣ ಘಟಕದ ಸಾಂದರ್ಭಿಕ ಚಿತ್ರ.

ಕಾವೇರಿ 5ನೇ ಹಂತದ ಯೋಜನೆ ಜಲ ಶುದ್ಧೀಕರಣ ಘಟಕದ ಸಾಂದರ್ಭಿಕ ಚಿತ್ರ.

ಬೆಂಗಳೂರು, ಜ.4 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಸೇರ್ಪಡೆಯಾದ 110 ಹಳ್ಳಿಗಳ ಪ್ರದೇಶಗಳಿಗೆ 775 ದ.ಲ.ಲೀ ಹೆಚ್ಚುವರಿ ಕುಡಿಯುವ ನೀರನ್ನು ಪೂರೈಸುವ ಕಾವೇರಿ 5ನೇ ಹಂತ (Kaveri 5th Phase)ದ ಕಾಮಗಾರಿ ಇದೇ ಮಾರ್ಚ್ ನಲ್ಲಿ ಪೂರ್ಣಗೊಳ್ಳಲಿದೆ. ಏಪ್ರಿಲ್‌ನಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಕೆ ಆರಂಭವಾಗಲಿದೆ. ಮೇ ತಿಂಗಳಿನಿಂದ ಪೂರ್ಣ ಪ್ರಮಾಣದ ಹೆಚ್ಚುವರಿ ಕುಡಿಯುವ ನೀರು ಪೂರೈಕೆಯಾಗಲಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ (ಹಂತ-3) ಕಾವೇರಿ 5ನೇ ಹಂತದ ಕಾಮಗಾರಿಯನ್ನು ಜೈಕಾ (JICA) ಸಂಸ್ಥೆಯು ನೀಡಿದ 5,550 ಕೋಟಿ ರೂ. ಸಾಲದ ಅನುದಾನದಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಯೋಜನೆಯಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ 225 ಚ.ಕಿ.ಮೀ ವ್ಯಾಪ್ತಿಯಲ್ಲಿ ಬರುವ ಸುಮಾರು 50 ಲಕ್ಷಕ್ಕೂ ಹೆಚ್ಚಿನ ನಾಗರೀಕರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವುದು ಸರ್ಕಾರದ ಯೋಜನೆಯ ಪೂರ್ಣ ಉದ್ದೇಶವಾಗಿದೆ.

ಈ ಯೋಜನೆಯಿಂದಾಗಿ 110 ಹಳ್ಳಿಗಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಸ್ಥಿತಿಯು ಸುಧಾರಿಸಲಿದೆ. 

ಕಾವೇರಿ ನೀರು ಪೂರೈಕೆಗಾಗಿ ನೀರಿನ ಬೃಹತ್ ಪೈಪ್ ಅಳವಡಿಸುತ್ತಿರುವ ಪಕ್ಷಿನೋಟ.

ಯೋಜನೆಯಡಿ ಯಾವೆಲ್ಲಾ ಕಾಮಗಾರಿ ಕೈಗೊಳ್ಳಲಾಗಿದೆ?:

ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಅಂಶ (Water Component)ವನ್ನು 10 ಪ್ಯಾಕೇಜ್ ಗಳಾಗಿ ವಿಂಗಡಿಸಿ ಟಿ.ಕೆ.ಹಳ್ಳಿ 775 ದ.ಶ.ಲೀ ಜಲಶುದ್ದೀಕರಣ ಸಾಮರ್ಥ್ಯದ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ ಜಲಸಂಗ್ರಾಹಗಾರ ಕಾರ್ಯಗಳು ನಡೆದಿದೆ. ಹಾಗೆಯೇ ಜಲರೇಚಕ ಯಂತ್ರಾಗಾರ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ ಕಾಮಗಾರಿ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿಯೂ ನಡೆಯುತ್ತಿದೆ. ಟಿ.ಕೆ.ಹಳ್ಳಿಯಿಂದ ಹಾರೋಹಳ್ಳಿಯವರೆಗೆ ಹಾಗೂ ಹಾರೋಹಳ್ಳಿಯಿಂದ ವಾಜರಹಳ್ಳಿಯವರೆಗೆ ತಲಾ 3,000 ಮಿ.ಮೀ ವ್ಯಾಸದ ಕೊಳವೆ ಮಾರ್ಗದ ಕಾಮಗಾರಿ ಕೈಗೊಳ್ಳಲಾಗಿದೆ.

ಬೃಹತ್ ನೀರು ಕೊಳವೆ ಅಳವಡಿಸುವ ಕಾಮಗಾರಿ ನಡೆಯುತ್ತಿರುವ ಚಿತ್ರ.

ಅದೇ ರೀತಿ ಸ್ಕಾಡಾ ಸೆಂಟ್ರಲ್ ಲ್ಯಾಜ್ ಸಿಸ್ಟಮ್ ಬೆಂಗಳೂರು ನಗರದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಕುಡಿಯುವ ನೀರಿನ ಕೊಳವೆ ಮಾರ್ಗ ಹಾಗೂ ಜಲಸಂಗ್ರಹಾಗಾರಗಳ ನಿರ್ಮಾಣ ಯೋಜನೆ ಕಾಮಗಾರಿಗಳನ್ನು ಜಲಮಂಡಳಿ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಈ ಎಲ್ಲಾ ಕಾಮಗಾರಿಗಳು ಮಾರ್ಚ್ ನಲ್ಲಿ ಪೂರ್ಣಗೊಂಡು ಕಾರ್ಯಾರಂಭ ಮಾಡಲಿವೆ.

ಈ ಕಾಮಗಾರಿಗಳು ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ರಾಷ್ಟ್ರೀಯ ಹೆದ್ದಾರಿ ಮತ್ತು ಇತರೆ ಇಲಾಖೆಗಳ ಅನುಮತಿಯ ವಿಳಂಬದಿಂದ ಕಾಮಗಾರಿಗಳ ಪೂರ್ಣಗೊಳ್ಳುವಿಕೆಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವಾಗಿರುತ್ತದೆ ಎಂದು ಬಿಡಬ್ಲ್ಯುಎಸ್ ಎಸ್ ಬಿ ಅಧಿಕಾರಿಗಳು ತಿಳಿಸಿದ್ದಾರೆ. 

“ಬೆಂಗಳೂರು ಜಲಮಂಡಳಿಯ ನಿರಂತರ ಮೇಲ್ವಿಚಾರಣೆಯಿಂದ ಬೆಂಗಳೂರು ನಗರದ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕಾಮಗಾರಿಗಳು ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಎಲ್ಲವೂ ಅಂತಿಮ ಹಂತದಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಪ್ರಾಯೋಗಿಕ ಚಾಲನೆ ನಡೆಸಿ ಮೇ ನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಯಾದ 110 ಹಳ್ಳಿಗಳ ಪ್ರದೇಶಗಳಿಗೆ ಹೆಚ್ಚುವರಿ ಕುಡಿಯುವ ನೀರನ್ನು ಪೂರೈಸಲಾಗುವುದು” ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

“ನಗರದ ಜನಸಂಖ್ಯೆ ಹೆಚ್ಚಳ ಮತ್ತು ಪ್ರದೇಶಗಳ ಅಭಿವೃದ್ಧಿಯಿಂದ ನಗರಕ್ಕೆ ಹೆಚ್ಚುವರಿಯಾಗಿ 10 ಟಿಎಂಸಿ ಅಡಿ ನೀರು ಒದಗಿಸುವ ಜಲಮಂಡಳಿ ಪ್ರಸ್ತಾವಕ್ಕೆ ಸರ್ಕಾರ ಸಮ್ಮತಿಸಿದೆ. ಹೀಗಾಗಿ ಈ ಹೆಚ್ಚುವರಿ ನೀರಿನ ಸಂಗ್ರಹ ಹಾಗೂ ಪೂರೈಕೆಗೆ ಅಗತ್ಯ ಕಾಮಗಾರಿಯನ್ನು ಸದ್ಯದಲ್ಲೇ ಆರಂಭವಾಗಲಿದೆ” ಎಂದವರು ವಿವರಿಸಿದ್ದಾರೆ.

ಬಿಡಬ್ಲ್ಯುಎಸ್ ಎಸ್ ಬಿಯ ನೂತನ ಜಲಸಂಗ್ರಹಾಗಾರದ ಚಿತ್ರ.

ಪ್ರಸ್ತುತ ನಗರಕ್ಕೆ ಪ್ರತಿನಿತ್ಯ 1,450 ದಶಲಕ್ಷ ಲೀಟರ್ ಕಾವೇರಿ ನೀರನ್ನು ಪೂರೈಸಲಾಗುತ್ತಿದೆ.‌ ಅಂದರೆ ತಿಂಗಳಿಗೆ 1.6 ಟಿಎಂಸಿ ಅಡಿ‌ ನೀರನ್ನು ಬೆಂಗಳೂರು ಜಲಮಂಡಳಿ ಪೂರೈಸುತ್ತಿದೆ. ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಂಡ ಮೇಲೆ ಪ್ರತಿನಿತ್ಯ 750 ದಶಲಕ್ಷ ಲೀಟರ್ ನೀರು ಹೆಚ್ಚುವರಿಯಾಗಿ ಪೂರೈಕೆಯಾಗಲಿದೆ. ಈ ಯೋಜನೆಯು ಸೇರ್ಡೆಯಾದರೆ ಅಲ್ಲಿಗೆ ಮಾಸಿಕ ನಗರಕ್ಕೆ ಒಟ್ಟಾರೆ 2.4 ಟಿಎಂಸಿ ಅಡಿ ನೀರು ಪೂರೈಸಿದಂತಾಗುತ್ತದೆ.  

ಹೆಚ್ಚವರಿ 10 ಟಿಎಂಸಿ ನೀರು ಪೂರೈಕೆಗೆ ಸರ್ಕಾರ ಒಪ್ಪಿಗೆ :

ಇದೀಗ ಸರ್ಕಾರ ತಾಂತ್ರಿಕ ತಜ್ಞರ ನೇತೃತ್ವದ ಸಮಿತಿ ವರದಿ ಆಧರಿಸಿ, ಕೃಷಿ ಬೆಳೆಗೆ ಅಗತ್ಯಕ್ಕಿಂತ ಹೆಚ್ಚು ನೀರು ಬಳಕೆಯಾಗುವುದನ್ನು ಕಡಿಮೆಗೊಳಿಗೆ ಬೆಂಗಳೂರಿಗೆ ಆ ಹೆಚ್ಚಿನ‌ ನೀರನ್ನು ನೀಡಬಹುದು ಎಂದು ಅಭಿಪ್ರಾಯಪಟ್ಟಿತ್ತು. ಈ ಹಿನ್ನಲೆಯಲ್ಲಿ ಜಲಮಂಡಳಿಯು ಹೆಚ್ಚವರಿ 10 ಟಿಎಂಸಿ ಅಡಿ ನೀರು ಸಂಗ್ರಹ ಹಾಗೂ ಪೂರೈಕೆಗೆ ಅಗತ್ಯ ಸಾಮರ್ಥ್ಯ ವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿದೆ.

ಬೆಂಗಳೂರಿಗೆ ವಾರ್ಷಿಕ 34 ಟಿಎಂಸಿ ನೀರು ಹಂಚಿಕೆ :

ಇದು ಕಾರ್ಯಗತವಾದರೆ ಒಟ್ಟಾರೆ ನಗರಕ್ಕೆ ಸುಪ್ರೀಂಕೋರ್ಟ್ ತೀರ್ಪಿನಂತೆ ವಾರ್ಷಿಕ 24 ಟಿಎಂಸಿ ಹಂಚಿಕೆಯಾಗಿದ್ದು, ಪ್ರಸ್ತುತ 19 ಅಡಿ ಟಿಎಂಸಿ ನಗರಕ್ಕೆ ಪೂರೈಕೆಯಾಗುತ್ತಿದೆ. ಅಲ್ಲದೆ ಕಾವೇರಿ 5ನೇ ಹಂತದ ಯೋಜನೆಯಿಂದ 5 ಟಿಎಂಸಿ ಹಾಗೂ ಸರ್ಕಾರ ಒಪ್ಪಿಗೆ ನೀಡಿದ ಹೆಚ್ಚುವರಿ 10 ಟಿಎಂಸಿ ಸೇರಿದರೆ ವಾರ್ಷಿಕ ಒಟ್ಟಾರೆ 34 ಟಿಎಂಸಿ ಅಡಿ‌ ನೀರು ನಗರಕ್ಕೆ ಹಂಚಿಕೆಯಾದಂತಾಗುತ್ತದೆ. ಇಷ್ಟಾದರೂ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ನೀರಿನ ಬೇಡಿಕೆ ಜಾಸ್ತಿಯಾಗಿ ಇದು ಸಾಲದೆಂಬಂತಾಗಿದೆ. ನಗರದಲ್ಲಿ ಖಾಸಗಿ ಬೋರ್ ವೆಲ್, ಟ್ಯಾಂಕರ್ ಗಳ ಬಳಕೆಯ ಕಾರಣಕ್ಕೆ 1.45 ಕೋಟಿ ಜನಸಂಖ್ಯೆ ಬೆಂಗಳೂರಿಗೆ ಹಾಗೂ ಹೀಗೂ ಕುಡಿಯುವ ನೀರು ಲಭ್ಯವಾಗುತ್ತಿದೆ.‌ ಹೀಗಿದ್ದರೂ ಶುದ್ಧ ಕುಡಿಯುವ ನೀರಿನ ಕೊರತೆ ಬೆಂಗಳೂರನ್ನು ಬಿಟ್ಟು ಬಿಡದೆ ಕಾಡುತ್ತಿದೆ.

WhatsApp Join our WhatsApp Channel
Previous Post

BBMP News | ಮಹದೇವಪುರ ವಲಯದಲ್ಲಿ “ಬಾಗಿಲಿಗೆ ಬಂತು ಸರ್ಕಾರ – ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮ : ನಾಗರೀಕರಿಂದ ಅಹವಾಲು ಸ್ವೀಕರಿಸಿದ ಡಿಸಿಎಂ

Next Post

BW SPECIAL | Shakthi Scheme | ಶಕ್ತಿ ಯೋಜನೆಗೆ ಮೀಸಲಿಟ್ಟ ಹಣ 2,800 ಕೋಟಿ ರೂ. : ಆದರೆ ಈತನಕ ಕರ್ಚಾಗಿದ್ದು 3,051 ಕೋಟಿ ರೂ. !!! – ಸರ್ಕಾರಕ್ಕೆ ಹೊರೆಯಾಯ್ತಾ ಶಕ್ತಿ ಸ್ಕೀಮ್?

Next Post
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ನಡೆದು ಹೋಗುತ್ತಿರುವ ಮಹಿಳಾ ಪ್ರಯಾಣಿಕರ ಸಾಂದರ್ಭಿಕ ಚಿತ್ರ.

BW SPECIAL | Shakthi Scheme | ಶಕ್ತಿ ಯೋಜನೆಗೆ ಮೀಸಲಿಟ್ಟ ಹಣ 2,800 ಕೋಟಿ ರೂ. : ಆದರೆ ಈತನಕ ಕರ್ಚಾಗಿದ್ದು 3,051 ಕೋಟಿ ರೂ. !!! – ಸರ್ಕಾರಕ್ಕೆ ಹೊರೆಯಾಯ್ತಾ ಶಕ್ತಿ ಸ್ಕೀಮ್?

Agriculture News | ಇಂದಿರಾ ಕ್ಯಾಂಟೀನ್ ಮತ್ತು ಮಧ್ಯಾಹ್ನದ ಶಾಲಾ ಊಟದಲ್ಲಿ ಸಿರಿಧಾನ್ಯ ಬಳಕೆ : ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

Please login to join discussion

Like Us on Facebook

Follow Us on Twitter

Recent News

​ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವ: ಚಿತ್ರನೋಟ

June 16, 2026

​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

June 16, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

​ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವ: ಚಿತ್ರನೋಟ

June 16, 2026

​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

June 16, 2026

Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

June 16, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group