Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | BENGALURU NEWS | ಬಿಬಿಎಂಪಿ ಎಂಜಿನಿಯರ್ ಗಳ ಯಡವಟ್ಟು : ಹೊಸಕೆರೆಹಳ್ಳಿ ಜಂಕ್ಷನ್ ಮೇಲ್ಸೇತುವೆ ಪೂರ್ಣವಾಗಲು ಇನ್ನು 1 ವರ್ಷ ಕಾಯಬೇಕು!!! – ತಪ್ಪದ ಟ್ರಾಫಿಕ್ ಕಿರಿಕಿರಿ

ಯೋಜನೆಗೆ ಅಗತ್ಯವಾದ ಜಾಗವನ್ನು ನೈಸ್ ಸಂಸ್ಥೆಯಿಂದ ಪಡೆಯುವಲ್ಲಿ ವಿಳಂಬವಾಗಿದ್ದು, ಇಡೀ ಮೇಲ್ಸೇತುವೆ ಯೋಜನೆ ಹಳ್ಳ ಹಿಡಿಯಲು ಪ್ರಮುಖ ಕಾರಣವಾಗಿದೆ. | ಬಿಬಿಎಂಪಿ ಎಂಜಿನಿಯರ್ ಗಳ ನಿರ್ಲಕ್ಷ್ಯ ಮತ್ತು ಕಾಲಹರಣ ಧೋರಣೆಗೆ ವಾಹನ ಸವಾರರ ಹಿಡಿಶಾಪ | 380 ಮೀಟರ್ ಉದ್ದದ ಮೇಲ್ಸೇತುವೆ ಕಟ್ಟಲು ಸುಧೀರ್ಘ ಮೂರು ಮುಕ್ಕಾಲು ವರ್ಷ ಬೇಕಾ? | ಇದೇನು ವಿಶ್ವದ ಪರಮಾದ್ಭುತ ಎಂಜಿನಿಯರಿಂಗ್ ರಚನೆಯಾ?

by Bengaluru Wire Desk
December 23, 2023
in Bengaluru Focus, BW Special, Public interest
Reading Time: 2 mins read
1
ಹೊಸಕೆರೆಹಳ್ಳಿ ಜಂಕ್ಷನ್ ಕೆರೆಕೋಡಿ ರಸ್ತೆ ಬಳಿಯ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವ ಸಾಂದರ್ಭಿಕ ಚಿತ್ರ.

ಹೊಸಕೆರೆಹಳ್ಳಿ ಜಂಕ್ಷನ್ ಕೆರೆಕೋಡಿ ರಸ್ತೆ ಬಳಿಯ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವ ಸಾಂದರ್ಭಿಕ ಚಿತ್ರ.

ಬೆಂಗಳೂರು, ಡಿ.22 www.bengaluruwire.com : ರಾಜಧಾನಿಯ ಹೊರವರ್ತುಲ ರಸ್ತೆಯಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಿಸುವ ನಿಟ್ಟಿನಲ್ಲಿ ಹೊಸಕೆರೆ ಜಂಕ್ಷನ್ ಬಳಿಯ ಕೆರೆಕೋಡಿ ರಸ್ತೆಯಲ್ಲಿ ಬಿಬಿಎಂಪಿ ನಿರ್ಮಿಸುತ್ತಿರುವ ಮೇಲ್ಸೇತುವೆ ಯೋಜನೆ ರೂಪಿಸುವಾಗ ಕೈಗೊಂಡ ಯಡವಿಟ್ಟಿನಿಂದ ಇಲ್ಲಿನ ಮೇಲ್ಸೇತುವೆ ಪ್ರಾಜೆಕ್ಟ್ 15 ತಿಂಗಳ ಒಳಗೆ ಮುಗಿಯುವ ಬದಲು ಎರಡು ಮುಕ್ಕಾಲು ವರ್ಷವಾದರೂ ಇನ್ನು ಮುಗಿದಿಲ್ಲ.

ಎರಡು ಗಡುವುಗಳು ಪೂರ್ಣವಾದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಇದರಿಂದಾಗಿ ಬನಶಂಕರಿಯಿಂದ ಮೈಸೂರು ರಸ್ತೆ ನಾಯಂಡಹಳ್ಳಿ ಕಡೆ ಹೋಗಿ ಬರುವ ವಾಹನ ಸವಾರರು ರೋಸಿ ಹೋಗಿದ್ದಾರೆ. ಬೆಳಗ್ಗೆ ಮತ್ತು ರಾತ್ರಿಯ ಪೀಕ್ ಹವರ್ ನಲ್ಲಿ ಈ ರಸ್ತೆಯಲ್ಲಿ ವಾಹನಗಳು ತೆವಳಿಕೊಂಡು ಓಡಾಡುತ್ತವೆ. ಈ ರಸ್ತೆಯ ಟ್ರಾಫಿಕ್ ನಲ್ಲಿ ವಾಹನ ಓಡಾಡುವವರಿಗೆ ಇಲ್ಲಿನ ಸಿಗ್ನಲ್ ಫ್ರೀ ಕಾರಿಡಾರ್ ದುಸ್ವಪ್ನದಂತೆ ಭಾಸವಾಗುತ್ತಿದೆ.

ಹೊರಕೆರೆಹಳ್ಳಿ ಜಂಕ್ಷನ್ ಬಳಿಯ ಸರ್ವೀಸ್ ರಸ್ತೆಯಲ್ಲಿ ವಾಹನ ದಟ್ಟಣೆ ಅವಧಿ ಸಂದರ್ಭ ಆಮೆಗತಿಯಲ್ಲಿ ಸಂಚರಿಸುತ್ತಿರುವ ವಾಹನಗಳ ಚಿತ್ರ.

ಆಮೆಯ ಜೊತೆಗೆ ಸ್ಪರ್ಧೆ ಏರ್ಪಡಿಸಿದರೆ ಬಹುಶ:  ಈ ರಸ್ತೆಯಲ್ಲಿ ಪೀಕ್ ಹವರ್ ನಲ್ಲಿ ಓಡಾಡುವ ವಾಹನಗಳು ಸೋಲಬಹುದು. ಆ ಪಾಟಿಯಲ್ಲಿ ವಾಹನ ಸವಾರರು ಬಂಪರ್ ಟು ಬಂಪರ್ ಟ್ರಾಫಿಕ್ ನಲ್ಲಿ ಸಾಗುತ್ತಿದ್ದಾರೆ. ಪಿಜೆಬಿ ಇಂಜಿನಿಯರಿಂಗ್ ಎಂಬ ಸಂಸ್ಥೆಗೆ 20.17 ಕೋಟಿ ರೂ. ಮೊತ್ತದ ಮೇಲ್ಸೇತುವೆ ನಿರ್ಮಾಣದ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿತ್ತು. ಈ ಸಂಸ್ಥೆಯವರು 2021ರ ಇಸವಿಯ ಮೇ 14ರಂದು ಕಾಮಗಾರಿ ಆರಂಭಿಸಿದ್ದರು. ಈ ಕಾಮಗಾರಿ ಪೂರ್ಣಗೊಳಿಸಲು 15 ತಿಂಗಳು ಕಾಲಾವಕಾಶ ನೀಡಿ 14-08-2022ರ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ ಈ ಸಂಸ್ಥೆಯವರಿಗೆ ಪುನಃ 15-10-2023ರ ಒಳಗಾಗಿ 16 ಮೀಟರ್ ಅಗಲದ 380 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಎರಡನೇ ಅವಧಿಗೆ ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗ ಡೆಡ್ ಲೈನ್ ನೀಡಿತ್ತು.

ಆದರೆ ಡಿಸೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಈವರೆಗೆ ಒಟ್ಟಾರೆ ಮೇಲ್ಸೇತುವೆ ಕಾಮಗಾರಿಯಲ್ಲಿ ಶೇ.72ರಷ್ಟು ಭೌತಿಕ ಪ್ರಗತಿ ಹಾಗೂ ಶೇ.63ರಷ್ಟು ಹಣಕಾಸು ಪ್ರಗತಿಯನ್ನಷ್ಟೇ ಸಾಧಿಸಲಾಗಿದೆ. ಹೀಗಾಗಿ ಬನಶಂಕರಿಯಿಂದ ನಾಯಂಡಹಳ್ಳಿ ಮಧ್ಯೆಯಿರುವ ಈ ರಸ್ತೆಯಲ್ಲಿ ಸಿಗ್ನಲ್ ಫ್ರೀ ಇರಲಿ, ಹೆಜ್ಜೆ ಹೆಜ್ಜೆಗೂ ಹೊಸಕೆರೆ ಹಳ್ಳಿ ಜಂಕ್ಷನ್ ದಾಟುವಷ್ಟರಲ್ಲಿ ವಾಹನ ಸವಾರರು ಹೈರಾಣಾಗಿರುತ್ತಾರೆ.

ಬಿಬಿಎಂಪಿ ಎಂಜಿನಿಯರ್ ಗಳ ಯಡವಟ್ಟು :

ಅಸಲಿಗೆ ಹೊಸಕೆರೆ ಹಳ್ಳಿ ಜಂಕ್ಷನ್ ನಾಲ್ಕು ರಸ್ತೆಗಳನ್ನು ಹೊಂದಿದ ಇಂಗ್ಲೀಷಿನ ಎಕ್ಸ್ ಆಕಾರವನ್ನು ಪ್ರತಿನಿಧಿಸುವಂತಿದೆ. ಈ ರಸ್ತೆಯಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ಹಿನ್ನಲೆಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಯೋಜನೆ ರೂಪಿಸುವಾಗ ಬಿಬಿಎಂಪಿಯ ಎಂಜಿನಿಯರ್ ಗಳು ಹಾಗೂ ಹಿರಿಯ ಅಧಿಕಾರಿಗಳು ಮಾಡಿದ ಆ ಒಂದು ಯಡವಟ್ಟು ಈ ಯೋಜನೆ ಪೂರ್ಣಗೊಳ್ಳಲು ಮತ್ತೆ ಕನಿಷ್ಠ ಒಂದು ವರ್ಷ ಬೇಕಾಗಬಹುದು. ಏಕೆಂದರೆ ಸದ್ಯ ಹೊಸಕೆರೆಹಳ್ಳಿ ಕಡೆಯಿಂದ ಹಾಗೂ ಗಿರಿನಗರ ಕಡೆಯಿಂದ ಬಂದು ನಾಯಂಡಹಳ್ಳಿ ಕಡೆಗೆ ಹೋಗುವ ವಾಹನ ಸವಾರರ ಅನುಕೂಲಕ್ಕಾಗಿ ಪ್ರಸ್ತುತ ಮೇಲ್ಸೇತುವೆ ಜಾಗದ ಪಕ್ಕದಲ್ಲಿ ರಸ್ತೆ ವಿಸ್ತರಿಸಿ ಅಲ್ಲಿ 8 ಮೀಟರ್ ಅಗಲ ಹಾಗೂ 40 ಮೀಟರ್ ಉದ್ದದ ಏಕಮುಖ ಮಾರ್ಗದ ಮತ್ತೊಂದು ಪುಟ್ಟ ಮೇಲ್ಸೇತುವೆಯನ್ನು ನಿರ್ಮಿಸಬೇಕಿದೆ. ಈ ಕಿರು ಮೇಲ್ಸೇತುವೆ ಬರುವ ಜಾಗ ನೈಸ್ ರಸ್ತೆಯ ಆಸ್ತಿಯಾಗಿದ್ದು, ಆ ಸಂಸ್ಥೆಯ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡು ಜಾಗವನ್ನು ಬಿಬಿಎಂಪಿಯ ಯೋಜಿತ ಕಾಮಗಾರಿಗೆ ಕೊಡಿಸಲು ವಿಳಂಬವಾಯಿತು.

ಹೊಸಕೆರೆ ಹಳ್ಳಿ ಜಂಕ್ಷನ್ ಮೇಲ್ಸೇತುವೆ ನಿರ್ಮಾಣ ಸ್ಥಳದ ನಕ್ಷೆ

ಸರ್ಕಾರದಲ್ಲೇ ಬಾಕಿ ಉಳಿದ ಫೈಲ್ :

ಸುಮಾರು 7 ಕೋಟಿ ರೂ. ಮೊತ್ತದ ಈ ಸಣ್ಣ ಮೇಲ್ಸೇತುವೆ ಕಾಮಗಾರಿ ಒಪ್ಪಿಗೆ ಪಡೆಯಲು ಬಿಬಿಎಂಪಿಯು ಇದರ ಕಡತವನ್ನು ಸರ್ಕಾರಕ್ಕೆ ಕಳುಹಿಸಿ ಐದಾರು ತಿಂಗಳಾದರೂ ಇನ್ನು ಅಲ್ಲಿಂದ ಕಡತ ಪಾಲಿಕೆಗೆ ಬಂದಿಲ್ಲ ಎಂದು ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ. ಈ ಪುಟ್ಟ ಮೇಲ್ಸೇತುವೆ ಕಾಮಗಾರಿ ಒಂದೊಮ್ಮೆ ಆರಂಭವಾದರೆ ಪೂರ್ಣಗೊಳ್ಳಲು ಕನಿಷ್ಠ 6 ತಿಂಗಳು ಸಮಯಾವಕಾಶ ಬೇಕಾಗುತ್ತದೆ. ಸದ್ಯ ಪ್ರಸ್ತಾವಿತ ಸಣ್ಣ ಮೇಲ್ಸೇತುವೆ ಜಾಗ ಪಕ್ಕದಲ್ಲೇ ಸರ್ವೀಸ್ ರಸ್ತೆಯಲ್ಲಿ ಬನಶಂಕರಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ಸಾಗುವ ವಾಹನಗಳು ಓಡಾಡುತ್ತಿವೆ. ಈ ಮೇಲ್ಸೇತುವೆ ಆರಂಭವಾಗಿ ಪೂರ್ಣಗೊಂಡ ಬಳಕವಷ್ಟೇ ಮುಖ್ಯ ಮೇಲ್ಸೇತುವೆ ಭಾಗದಿಂದ ನಾಯಂಡಹಳ್ಳಿ ಕಡೆಗೆ ಡೌನ್ ರಾಂಪ್ ಕಟ್ಟಲು ಪಿಜೆಬಿ ಇಂಜಿನಿಯರಿಂಗ್ ಸಂಸ್ಥೆಗೆ ಸಾಧ್ಯವಾಗಲಿದೆ. ಈ ಪುಟ್ಟ ಮೇಲ್ಸೇತುವೆ ತಡವಾದಷ್ಟು ಒಟ್ಟಾರೆ ಹೊಸಕೆರೆಹಳ್ಳಿ ಜಂಕ್ಷನ್ ಫ್ಲೈ ಓವರ್ ನಿರ್ಮಾಣ ಕಾರ್ಯ ಪೂರ್ಣವಾಗಲ್ಲ ಎಂದು ಹೇಳುತ್ತಾರೆ ಪಿಜೆಬಿ ಇಂಜಿನಿಯರಿಂಗ್ ಸಂಸ್ಥೆಯ ಎಂಜಿನಿಯರ್ ಒಬ್ಬರು.

ವಿಸ್ತರಿತ ಕಿರು ಮೇಲ್ಸೇತುವೆ ಮುಗಿದರಷ್ಟೆ ಮುಖ್ಯ ಮೇಲ್ಸೇತುವೆ ಪೂರ್ಣ :

ರಸ್ತೆ ವಿಸ್ತರಿಸಿ ಏಕಮುಖ ಮೇಲ್ಸೇತುವೆ ನಿರ್ಮಾಣ ಕಾರ್ಯ ಆರಂಭವಾದರೆ, ಅದಕ್ಕೆ ಪರ್ಯಾಯವಾಗಿ ನಾಯಂಡಳಹಳ್ಳಿಯಿಂದ ಬನಶಂಕರಿ ಕಡೆಗೆ ಸಾಗುವ ಒಂದು ಭಾಗದಲ್ಲಿ ಪ್ಯಾನಲ್ ನಿರ್ಮಿಸುವ ಕೆಲಸವನ್ನು ನಾವು ಪ್ರಾರಂಭಿಸುತ್ತೇವೆ. ಆಗ ಸಮಯಾವಧಿ ಹೆಚ್ಚು ಹಿಡಿಯುವುದಿಲ್ಲ. ವೈಡನಿಂಗ್ ರೋಡ್ ಫ್ಲೈಓವರ್ ನಿರ್ಮಾಣ ಮುಗಿದ ಬಳಿಕ ಆ ಮೇಲ್ಸೇತುವೆ ಮೇಲೆ ಸರ್ವೀಸ್ ರಸ್ತೆಯಲ್ಲಿ ಚಲಿಸುವ ವಾಹನವನ್ನು ಓಡಾಡಲು ಅವಕಾಶ ಮಾಡಿಕೊಟ್ಟು, ಬಳಿಕ ನಾಯಂಡಹಳ್ಳಿಯಿಂದ ಬನಶಂಕರಿ ಕಡೆಗೆ ಚಲಿಸುವ ಮಾರ್ಗದಲ್ಲಿನ ಮೇಲ್ಸೇತುವೆ ಭಾಗದಲ್ಲಿ ಪ್ಯಾನೆಲ್ ನಿರ್ಮಿಸಿ ರಾಂಪ್ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.

ಒಟ್ಟಾರೆ ಹೊಸಕೆರೆಹಳ್ಳಿ ಜಂಕ್ಷನ್ ಕೆರೆ ಕೋಡಿ ರಸ್ತೆ ಬಳಿ ನಿರ್ಮಿಸುತ್ತಿರುವ ಫ್ಲೈಓವರ್ ಪೂರ್ಣವಾಗಲು ಡಿಸೆಂಬರ್ 2024ರ ತನಕ ಕಾಯಬೇಕಿದೆ ಎಂದು ಬಿಬಿಎಂಪಿ ಮುಖ್ಯ ಪ್ರಧಾನ ಎಂಜಿನಿಯರ್ ಹಾಗೂ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗದ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಅರ್ಧಕ್ಕೆ ನಿಂತಿರುವ ಹೊಸಕೆರೆ ಹಳ್ಳಿ ಮೇಲ್ಸೇತುವೆ ಪಿಲ್ಲರ್ ನಿರ್ಮಾಣ ಕಾಮಗಾರಿಯ ಚಿತ್ರ.

ವಾಹನ ಸವಾರರು ಏನಂತಾರೆ? :

“ಬೆಳಗ್ಗೆ 8 ರಿಂದ 10 ಗಂಟೆ ಹಾಗೂ ಸಂಜೆ 5 ರಿಂದ 8 ಗಂಟೆಯವರೆಗೆ ವಾಹನ ದಟ್ಟಣೆ ಅವಧಿಯಲ್ಲಿ ಕಾರ್, ಟೂವೀಲರ್, ಬಸ್ ನವರು ಬ್ರೇಕ್ ಹಾಕಿ ಹಾಕಿ ಕೈಕಾಲು ನೋಯಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ವಾಹನಗಳು ಒಂದಕ್ಕೊಂದು ಹಿಂಬದಿಯಿಂದ ಡಿಕ್ಕಿ ಹೊಡೆಯುತ್ತಾ, ಜಗಳವಾಗುವ ಸನ್ನಿವೇಶಗಳು ಆಗಾಗ ನಡೆಯುತ್ತಿರುತ್ತದೆ. ಆದಷ್ಟು ಶೀಘ್ರದಲ್ಲೇ ಈ ಮೇಲ್ಸೇತುವೆ ಕಾಮಗಾರಿಯನ್ನು ಬಿಬಿಎಂಪಿಯವರು ಪೂರ್ಣಗೊಳಿಸಬೇಕು” ಎನ್ನುತ್ತಾರೆ ಈ ರಸ್ತೆಯಲ್ಲಿ ಪ್ರತಿದಿನ ಸಾಗುವ ವಾಹನ ಸವಾರ ಗಿರೀಶ್.

“ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” :

“ಬೆಂಗಳೂರು ಹೊರವರ್ತುಲ ರಸ್ತೆಯಲ್ಲಿ ಬರುವ ಹೊಸಕೆರೆಹಳ್ಳಿ ಜಂಕ್ಷನ್ ಬಳಿಯ ಮೇಲ್ಸೇತುವೆ ನಿರ್ಮಾಣ ಕಾರ್ಯ ವಿಳಂಬವಾಗಿರುವುದು ಇದೀಗ ಗಮನಕ್ಕೆ ಬಂದಿದೆ. ಈ ಭಾಗದಲ್ಲಿ ಪ್ರಸ್ತುತ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಪಕ್ಕದಲ್ಲೇ ಏಕಮುಖ ಮಾರ್ಗದ ಮತ್ತೊಂದು ಕಿರು ಗ್ರೇಡ್ ಸಪರೇಟರ್ ನಿರ್ಮಾಣ ಸಂಬಂಧ ಕಡತ ಒಪ್ಪಿಗೆಗಾಗಿ ಸರ್ಕಾರಕ್ಕೆ ಸಲ್ಲಿಸಿದ್ದು, ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಪರಿಶೀಲಿಸಿ ಮೇಲ್ಸೇತುವೆ ಯೋಜನೆ ಪೂರ್ಣಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.”

  • ಹರೀಶ್ ಕುಮಾರ್, ವಿಶೇಷ ಆಯುಕ್ತರು (ಯೋಜನೆ), ಬಿಬಿಎಂಪಿ
WhatsApp Join our WhatsApp Channel
Previous Post

Karnataka Energy News | ಕರ್ನಾಟಕಕ್ಕೆ ಪ್ರತಿಷ್ಠಿತ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ : ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ಕ್ರೆಡಲ್ ಸಂಸ್ಥೆ

Next Post

TTD Vaikunta Ekadasi News | ತಿರುಪತಿ ತಿರುಮಲ ದೇವಾಲಯದಲ್ಲಿ ವೈಭವದ ವೈಕುಂಠ ಏಕಾದಶಿ ದರ್ಶನ : ಡಿ.23ರಿಂದ ಜ.1ರ ತನಕ ವೈಕುಂಠ ದ್ವಾರ ಪ್ರವೇಶಕ್ಕೆ ಅವಕಾಶ!! ಇಲ್ಲಿದೆ ಫುಲ್ ಡಿಟೇಲ್ಸ್

Next Post
ತಿರುಪತಿ ತಿರುಮಲ ದೇವಸ್ಥಾನದ ಮುಂಭಾಗ ಶ್ರೀ ವೆಂಕಟೇಶ್ವರನ ವೈಕುಂಠ ಏಕಾದಶಿ ದರ್ಶನಕ್ಕಾಗಿ ಬೆಳಗ್ಗೆಯೇ ದೇವಸ್ಥಾನದ ಮುಂಭಾಗ ಜಮಾಯಿಸಿದ್ದ ಭಕ್ತರ ಜನಸಾಗರ.

TTD Vaikunta Ekadasi News | ತಿರುಪತಿ ತಿರುಮಲ ದೇವಾಲಯದಲ್ಲಿ ವೈಭವದ ವೈಕುಂಠ ಏಕಾದಶಿ ದರ್ಶನ : ಡಿ.23ರಿಂದ ಜ.1ರ ತನಕ ವೈಕುಂಠ ದ್ವಾರ ಪ್ರವೇಶಕ್ಕೆ ಅವಕಾಶ!! ಇಲ್ಲಿದೆ ಫುಲ್ ಡಿಟೇಲ್ಸ್

Hanuma Jayanthi | ಹನುಮ ಜಯಂತಿ : ಪ್ರಾಣದೇವರು ಜಾಗೃತವಾಗಿರುವ ಹೊಳೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ!!!

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group