Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Bengaluru Tech Summit 2023 | ICMR Mobilab | ಗಂಭೀರ ರೋಗ ಪರೀಕ್ಷೆಯಲ್ಲಿ ಈ ಪುಟ್ಟ ಯಂತ್ರದ ಪಾತ್ರ ಬಹುಮುಖ್ಯ : ಗಂಟೆಗಟ್ಟಲೆ ಕಾಯಬೇಕಿಲ್ಲ 5 ನಿಮಿಷದಲ್ಲಿ ರಕ್ತ ಪರೀಕ್ಷೆ ರಿಸಲ್ಟ್ ನೀಡುತ್ತೆ!!

ಹೃದಯ, ಕಿಡ್ನಿ, ಲಿವರ್, ಪ್ಯಾಂಕ್ರಿಯಾಸ್ ಹಾಗೂ ಇನ್ನಿತರ ಗಂಭೀರ ಸ್ವರೂಪದ ಖಾಯಿಲೆಗಳ ಬಗ್ಗೆ ರಕ್ತ ಪರೀಕ್ಷೆ ಮಾಡಿ 5-6 ನಿಮಿಷದಲ್ಲಿ ಫಲಿತಾಂಶವನ್ನು ಡಿಜಿಟಲ್ ರೂಪದಲ್ಲಿ ನೀಡಲಿದೆ.

by Bengaluru Wire Desk
December 1, 2023
in Bengaluru Focus
Reading Time: 1 min read
0
ಪ್ರೈಮರಿ ಹೆಲ್ತ್ ಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಮೊಬೈಲ್ ಆಧಾರಿತ ಪೋರ್ಟಬಲ್ ಲ್ಯಾಬ್ ಅರ್ಥಾತ್ ಮೊಬಿಲ್ಯಾಬ್ ಸಾಂದರ್ಭಿಕ ಚಿತ್ರ.

ಪ್ರೈಮರಿ ಹೆಲ್ತ್ ಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಮೊಬೈಲ್ ಆಧಾರಿತ ಪೋರ್ಟಬಲ್ ಲ್ಯಾಬ್ ಅರ್ಥಾತ್ ಮೊಬಿಲ್ಯಾಬ್ ಸಾಂದರ್ಭಿಕ ಚಿತ್ರ.

ಬೆಂಗಳೂರು, ಡಿ.1 www.bengaluruwire.com : ಒಂದು ಅಂಗೈಯಲ್ಲಿ ಹಿಡಿಯಬಹುದಾದ ಈ ಪುಟ್ಟ ಯಂತ್ರ ರೋಗಿಗಳ ಪಾಲಿಗೆ ಜೀವ ಉಳಿಸುವ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.

ಹೌದು ಭಾರತೀಯ ವೈದ್ಯಕೀಯ ಪರಿಷತ್ (ICMR-ಐಸಿಎಂಆರ್)  ಬೆಂಬಲದಲ್ಲಿ ಐಐಟಿ ಗೌಹಾತಿಯಲ್ಲಿನ ಸಾಹಿಲ್ ಎಂಬ ಪಿಎಚ್ ಡಿ ವಿದ್ಯಾರ್ಥಿ ಸಂಶೋಧನೆ ನಡೆಸಿ ಮೊಬಿಲ್ಯಾಬ್ (Mobilab) ಎಂಬ ಪುಟ್ಟಯಂತ್ರವನ್ನು ತಯಾರಿಸಿದ್ದಾರೆ. ಈ ಯಂತ್ರದ ಮೂಲಕ 25 ವಿವಿಧ ರೀತಿಯ ರಕ್ತ ಪರೀಕ್ಷೆ ಮಾಡಬಹುದು. ಸ್ಮಾರ್ಟ್ ಮೊಬೈಲ್ ಆಧಾರಿತ ಈ ಮೊಬಿಲ್ಯಾಬ್ ಯಂತ್ರವನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಕಳೆದ ವರ್ಷ ಈ ಯಂತ್ರದ ಉತ್ಪಾದನೆಗೆ ಲೈಸೆನ್ಸ್ ಸಿಕ್ಕಿದೆ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಹಲವಾರು ತಂತ್ರಜ್ಞಾನ ಸಂಸ್ಥೆಗಳು ತಮ್ಮ ಉತ್ಪನ್ನ, ವಸ್ತುಗಳು ಹಾಗೂ ಸೇವೆಗಳ ಬಗೆಗೆ ವಿವಿಧ ರೀತಿಯ ಮಳಿಗೆಗಳನ್ನು ತೆರೆದಿದ್ದವು. ಅವುಗಳ ಪೈಕಿ ಐಸಿಎಂಆರ್ ಮಳಿಗೆಯಲ್ಲಿ ಮೊಬಿಲ್ಯಾಬ್ ರಕ್ತ ಪರೀಕ್ಷೆ ಮಾಡುವ ಪುಟ್ಟ ಯಂತ್ರ ಎಲ್ಲರ ಗಮನ ಸೆಳೆದಿತ್ತು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿನ ವಸ್ತುಪ್ರದರ್ಶನ ಪ್ರದೇಶದಲ್ಲಿ ಜನಜಂಗುಳಿ ಸಾಮಾನ್ಯವಾಗಿತ್ತು.

ಹೃದಯ, ಕಿಡ್ನಿ, ಲಿವರ್, ಪ್ಯಾಂಕ್ರಿಯಾಸ್ ಹಾಗೂ ಇನ್ನಿತರ ಗಂಭೀರ ಸ್ವರೂಪದ ಖಾಯಿಲೆಗಳ ಬಗ್ಗೆ ರಕ್ತ ಪರೀಕ್ಷೆ ಮಾಡಿ 5-6 ನಿಮಿಷದಲ್ಲಿ ಫಲಿತಾಂಶವನ್ನು ಡಿಜಿಟಲ್ ರೂಪದಲ್ಲಿ ನೀಡಲಿದೆ. ಇದಕ್ಕಾಗಿ ಮೊಬಿಲ್ಯಾಬ್ ಆಂಡ್ರಾಯ್ಡ್ ಆಪ್ ಅನ್ನು ರಕ್ತ ಪರೀಕ್ಷೆ ಕೈಗೊಳ್ಳುವವರು ಡೌನ್ ಲೋಡ್ ಮಾಡಿಕೊಂಡಿರಬೇಕು. ಈ ಆಪ್ ಅಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಾಗಲಿದೆ. ಉಪಕರಣದ ಬೆಲೆ 25,000 ರೂ. ನಷ್ಟು ಇರಲಿದ್ದು, ಪ್ರಸ್ತುತ ಐಸಿಎಂಆರ್ ಪ್ರಾಯೋಗಿಕ ವಿಶ್ಲೇಷಣೆ ನಡೆಸುತ್ತಿದ್ದು, ಆ ಬಳಿಕ ಆನ್ ಲೈನ್ ನ ಮೂಲಕ ಇನ್ನು 5-6 ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. ಕೇವಲ 312 ಗ್ರಾಮ್ ತೂಕದ ಈ ಯಂತ್ರದಲ್ಲಿ ಪರೀಕ್ಷೆಯಾದ ರಕ್ತ ಮಾದರಿಯ ವರದಿಗಳು ಮೊಬಿಲ್ಯಾಬ್ ಆಪ್ ನಲ್ಲಿ ಬಹುಭಾಷೆಯಲ್ಲಿ ಲಭ್ಯವಾಗಲಿದೆ. ಇದರ ಎಲೆಕ್ಟ್ರಾನಿಕ್ ವರದಿಗಳನ್ನು ಸುಲಭವಾಗಿ ವೈದ್ಯರೊಂದಿಗೆ ಹಂಚಿಕೊಳ್ಳಬಹುದು.

ಕೇವಲ 5-6 ನಿಮಿಷದಲ್ಲಿ ಪರೀಕ್ಷೆಯ ಡಿಜಿಟಲ್ ವರದಿ ಫಲಿತಾಂಶವು ಲಭ್ಯವಾಗಲಿದೆ. ಇದರಿಂದ ಸಣ್ಣ ಮಟ್ಟದ ಲ್ಯಾಬ್, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಹಳ್ಳಿಗಾಡಿನಲ್ಲಿ ಬಳಸಲು ಇದು ಅನುಕೂಲವಾಗಲಿದೆ. ಗಂಭೀರ ಕಾಯಿಲೆಗಳ ಚಿಕಿತ್ಸೆ ಹಾಗೂ ರೋಗದ ಸ್ಥಿತಿಗತಿ ತಿಳಿಯುವಲ್ಲಿ ಈ ಪೋರ್ಟಬಲ್ ಯಂತ್ರ ಹೊಸ ಭಾಷ್ಯ ಬರೆಯಲಿದೆ. ಈ ಯಂತ್ರವನ್ನು ಮುಂದೆ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಸೇರಿಸಲು ಕೇಂದ್ರ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಈ ಮೌಬಿಲ್ಯಾಬ್ ಅನ್ನು ಯಾವುದೇ ಮೊಬೈಲ್ ಫೋನ್ ಚಾರ್ಜರ್ ಡಿವೈಸ್ ನಿಂದಲೂ ಚಾರ್ಜ್ ಮಾಡಬಹುದು. ಒಮ್ಮೆ ಚಾರ್ಜ್ ಮಾಡಿದರೆ 150 ರಕ್ತ ಪರೀಕ್ಷೆಗಳನ್ನು ಮಾಡಬಹುದು.

ಜಗತ್ತಿನಲ್ಲಿ ಸಾವು ಸಂಭವಿಸುವಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಪಾಲು 41 ದಶಲಕ್ಷದಷ್ಟಿದೆ. ಅಂದರೆ ಶೇ.74ರಷ್ಟು ಪ್ರಮಾಣದಲ್ಲಿದೆ. ಆ ಪೈಕಿ 5.87 ದಶಲಕ್ಷ (ಶೇ.60) ಸಾವುಗಳು ನಮ್ಮ ದೇಶದಲ್ಲಿ ಆಗುತ್ತಿದೆ. ಅನಾರೋಗ್ಯಕರ ಜೀವನ ಪದ್ಧತಿ, ಸೂಕ್ತ ಹಾಗೂ ನಿಯಮಿತ ಪರೀಕ್ಷೆಗಳು ಮಾಡಿಸದ ಕಾರಣ ಲಕ್ಷಾಂತರ ಜನರು ಕಿಡ್ನಿ ವೈಫಲ್ಯ, ಪಿತ್ತಕೋಶ ವೈಫಲ್ಯ ಹಾಗೂ ಹೃದಯ ತೊಂದರೆ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿದೆ. ಇಂತಹ ಮೊಬಿಲ್ಯಾಬ್ ಉಪಕರಣಗಳಿಂದ ನಿಯಮಿತವಾಗಿ ಪರೀಕ್ಷೆ ಮಾಡಿಸುವದರಿಂದ ಹಲವು ಗಂಭೀರ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಹೇಳುತ್ತಾರೆ ಐಸಿಎಂಆರ್ ವಿಜ್ಞಾನಿ ರಾಜೇಶ್ ಕುಮಾರ್ ಸಾಗರ್.

ಐಸಿಎಂಆರ್ ಮಳಿಗೆಗಳಲ್ಲದೆ ವಿಜ್ಞಾನ ತಂತ್ರಜ್ಞಾನ ಇಲಾಖೆಯು ಇಸ್ರೋದ ಮಹತ್ವದ ಬಾಹ್ಯಾಕಾಶ ಯೋಜನೆ ಆದಿತ್ಯ ಎಲ್-1 ಕುರಿತಂತೆ ನೆಹರು ಪ್ಲಾನಿಟೋರಿಯಂ ಸಹಯೋಗದಲ್ಲಿ ಆದಿತ್ಯ ಎಲ್-1 ಯೋಜನೆಯ ಬಗ್ಗೆ ನೀಡಿದ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯಿತು. ಅದೇ ರೀತಿ ರೋಬೋಟಿಕ್ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ, ಬಯೋ ತಂತ್ರಜ್ಞಾನ, ಅತ್ಯಾಧುನಿಕ ತಂತ್ರಜ್ಞಾನ ಬಳಿ ಕೃಷಿ ಭೂಮಿ, ಬೆಳೆಗಳ ವೈಜ್ಞಾನಿಕ ಪರೀಕ್ಷೆ ಕೈಗೊಳ್ಳುವ ಸಂಸ್ಥೆಗಳು ಸೇರಿದಂತೆ ವಿವಿಧ ತಂತ್ರಜ್ಞಾನ ಆಧಾರಿತ ಸಂಸ್ಥೆಗಳು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದವು.

WhatsApp Join our WhatsApp Channel
Previous Post

Bangalore Tech Summit 2023 | ಸಾರಿಗೆಯಲ್ಲಿ ಒಬ್ಬ ಪ್ರಯಾಣಿಕ- ಒಂದು ಕಾರ್ಡ್ ವ್ಯವಸ್ಥೆ ಶೀಘ್ರ ಜಾರಿ : “ಭವಿಷ್ಯದ ಭಾರತದಲ್ಲಿ ವಿಮಾನ ಟ್ಯಾಕ್ಸಿ ಸೇವೆ ಹೆಚ್ಚಳ”

Next Post

Cancellation Of Trains | ರೈಲ್ವೆ ಪ್ರಯಾಣಿಕರೇ ಗಮನಿಸಿ!! ; ಡಿಸೆಂಬರ್ ನಿಂದ 3 ತಿಂಗಳು ಈ 18 ರೈಲುಗಳ ಸಂಚಾರ ರದ್ದು – 30 ರೈಲುಗಳ ಮಾರ್ಗ ಬದಲಾವಣೆ

Next Post
ರೈಲ್ವೇ ನಿಲ್ದಾಣದ ಪ್ರಾತಿನಿಧಿಕ ಚಿತ್ರ

Cancellation Of Trains | ರೈಲ್ವೆ ಪ್ರಯಾಣಿಕರೇ ಗಮನಿಸಿ!! ; ಡಿಸೆಂಬರ್ ನಿಂದ 3 ತಿಂಗಳು ಈ 18 ರೈಲುಗಳ ಸಂಚಾರ ರದ್ದು - 30 ರೈಲುಗಳ ಮಾರ್ಗ ಬದಲಾವಣೆ

ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

FIFO Sakala | ಬಿಬಿಎಂಪಿಗೆ ಬಂತು ಫಿಫೊ ವಿಧಾನ : ಆಸ್ತಿ ಖಾತಾ ಸೇವೆಗೆ ಹಿರಿತನದ ಅರ್ಜಿ ಮೊದಲು ವಿಲೇವಾರಿ - ಲಂಚಕ್ಕೆ ಕಡಿವಾಣ?

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group