Thursday, July 30, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

    Kargil Vijay Diwas | ಕಾರ್ಗಿಲ್ ವಿಜಯ್ ದಿವಸ್: ದೇಶದ ವೀರ ಯೋಧರಿಗೆ ಪ್ರಧಾನಿ ನಮನ

    ನೀಟ್ ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರ; ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ

  • Bengaluru Focus

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

    ಜಕ್ಕೂರು ವೈಮಾನಿಕ ತರಬೇತಿ ಶಾಲೆ ಲೈಸೆನ್ಸ್‌ ನವೀಕರಣ: ಮೈಸೂರು, ಹಾಸನದಲ್ಲಿ ಸ್ಯಾಟಲೈಟ್ ಬೇಸ್

    ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರ; ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ

    GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Karnataka Tourism | ಕಲ್ಯಾಣ ಕರ್ನಾಟಕದ ಸ್ಮಾರಕಗಳ ಸಂರಕ್ಷಣೆ, ಅಭಿವೃದ್ಧಿಗಾಗಿ ಖಾಸಗಿಗೆ ದತ್ತು : ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌

ಮೊದಲನೇ ಹಂತದಲ್ಲಿ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸ್ಮಾರಕಗಳ ದರ್ಶನ ಮಾಡಿದ ಬಹುತೇಕ ಸ್ಮಾರಕಗಳನ್ನು ಅಭಿವೃದ್ಧಿಗಾಗಿ ದತ್ತು ನೀಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

by Bengaluru Wire Desk
November 15, 2023
in News Wire, Public interest
Reading Time: 1 min read
0
ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ “ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ" ಕಾರ್ಯಕ್ರಮದ ಕುರಿತಂತೆ ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ “ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ" ಕಾರ್ಯಕ್ರಮದ ಕುರಿತಂತೆ ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು, ನ.15 www.bengaluruwire.com : ರಾಜ್ಯದಲ್ಲಿ “ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ” ಕಾರ್ಯಕ್ರಮದ ಮೊದಲ ಹಂತದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಪ್ರವಾಸದ ವೇಳೆ ಬಸವನಾಡು ಕಲ್ಯಾಣ ಕರ್ನಾಟಕದಲ್ಲಿ ವೀಕ್ಷಿಸಿದ ಸ್ಮಾರಕಗಳಲ್ಲಿ ಸ್ವಚ್ಛತೆ, ಮೂಲಭೂತ ಸೌಲಭ್ಯ, ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದ ಸಚಿವರು, “ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ” ಕಾರ್ಯಕ್ರಮದಡಿ, ಮೂರು ದಿನಗಳ ಪ್ರವಾಸದಲ್ಲಿ ಮೊದಲನೇ ಹಂತದಲ್ಲಿ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸ್ಮಾರಕಗಳ ದರ್ಶನ ಮಾಡಲಾಯಿತು. ಭೇಟಿ ನೀಡಿದ ಬಹುತೇಕ ಸ್ಮಾರಕಗಳನ್ನು ಆಸಕ್ತ, ಖಾಸಗಿ ವ್ಯಕ್ತಿಗಳಿಗೆ ದತ್ತು ನೀಡಲಾಗಿದೆ. ಈ ಸ್ಮಾರಕಗಳ ರಕ್ಷಣೆ ಹಾಗೂ ನಿರ್ವಹಣೆಗೆ ಹಲವಾರು ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಸರ್ಕಾರದ ದತ್ತು ಯೋಜನೆಗೆ ಸ್ಪಂದಿಸಿವೆ ಎಂದರು.

ಬೀದರ್‌ ಜಿಲ್ಲೆಯ ಸ್ಮಾರಕಗಳಿಗೆ ಭೇಟಿ- ಪರಿಶೀಲನೆ :

ಐತಿಹಾಸಿಕ ಬೀದರ್ ಜಿಲ್ಲೆಯ ನರಸಿಂಹ ಝರಣಾ ದೇಗುಲ ದರ್ಶನದೊಂದಿಗೆ ಆರಂಭವಾದ ಸಚಿವರ ತಂಡದ ಪ್ರವಾಸ ಕಾರ್ಯಕ್ರಮ ಬೀದರ್‌ನ ಅಷ್ಟಕೋನಾಕಾರದ ಬಾವಿಯ ವೀಕ್ಷಣೆ ಮಾಡಲಾಯಿತು. ಇದಾದ ನಂತರ ಇರಾನ್ ದೇಶದ ಸುರಂಗ ಕಾಲುವೆಗಳನ್ನು ಹೋಲುವ ನೀರಿನ ಕರೇಜ್ (Karez)ನ್ನು ತಂಡ ವೀಕ್ಷಿಸಿತು. ಈ ರೀತಿಯ ನೀರಿನ ಕಾಲುವೆಗಳು ಬೀದರಿನಲ್ಲಿ ವಿಶೇಷಗಳಾಗಿವೆ. ನೂರಾರು ವರ್ಷಗಳ ಹಿಂದೆ ನಿರ್ಮಿಸಿರುವ ಈ ಸುರಂಗ ಕಾಲುವೆಗಳನ್ನು ಅಭಿವೃದ್ಧಿ ಪಡಿಸಿ ಸಂರಕ್ಷಿಸುವ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಸವ ಕಲ್ಯಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಅನುಭವ ಮಂಟಪಕ್ಕೆ ಭೇಟಿ ನೀಡಲಾಯಿತು. ಬಸವಕಲ್ಯಾಣ ಕೋಟೆಗೆ ಭೇಟಿ ನೀಡಿ ‘ಲೇಸರ್ ಶೋ ವೀಕ್ಷಿಸಿ ತಂಡ ನಿರೂಪಣೆ ಬಗ್ಗೆ ಹರ್ಷ ವ್ಯಕ್ತಪಡಿಸಿತು. ಬಸವ ಕಲ್ಯಾಣದ ಕೋಟೆ ದತ್ತು ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಮತ್ತು ಸಚಿವರಾದ ರಹೀಮ್ ಖಾನ್ ಹಾಗೂ ಶಾಸಕರು, ಜನಪ್ರತಿನಿಧಿಗಳು ಹಾಜರಿದ್ದರು.

ವಿಶ್ವವಿದ್ಯಾಲಯ ಅಸ್ತಿತ್ವದ ಮೊದಲ ಕನ್ನಡ ವಿವಿ ನಾಗಾವಿ :

ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನ

ಕಲಬುರಗಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರದ್ಧಾ ಕೇಂದ್ರ ನಾಗಾವಿ ಶ್ರೀ ಯಲ್ಲಮ್ಮ ದೇವಿ ದೇವಾಸ್ಥಾನದ ಐತಿಹಾಸಿಕ ತಾಣಕ್ಕೆ ಭೇಟಿ ನೀಡಲಾಯಿತು ಎಂದು ಹೇಳಿದ ಸಚಿವ ಎಚ್.ಕೆ. ಪಾಟೀಲ್‌ ಅವರು, ರಾಷ್ಟಕೂಟರ ಆಳ್ವಿಕೆಯ ಕಾಲದಲ್ಲಿ ನಾಗಾವಿ ವಿಶ್ವವಿದ್ಯಾಲಯದ ಕೇಂದ್ರವಾಗಿತ್ತು ಎಂಬುದು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಇಲ್ಲಿರುವ 60 ಕಂಬಗಳ ಮಂಟಪವನ್ನು ಅಂದಿನ “ಘಟಿಕಾಸ್ಥಾನ” ಎಂದು ಶಾಸದಲ್ಲಿ ಹೆಸರಿಸಲಾಗಿದ್ದು, ವಿಶ್ವವಿದ್ಯಾಲಯ ಅಸ್ತಿತ್ವದ ಮೊದಲ ಕನ್ನಡ ವಿಶ್ವವಿದ್ಯಾಲಯ ದೇಶದ ಮೊದಲ ವಿಶ್ವವಿದ್ಯಾಲಯ ಎಂದು ಇತಿಹಾಸಕಾರರು ಹೆಮ್ಮೆಯಿಂದ ಹೇಳುತ್ತಿದ್ದಾರೆ ಎಂದರು.

ಹೈದರಾಬಾದ್ ವಸ್ತು ಸಂಗ್ರಹಾಲಯದಲ್ಲಿ ದೊರಕಿರುವ ಸಾಹಿತ್ಯದಲ್ಲಿ ನಾಗಾವಿ ವಿಶ್ವವಿದ್ಯಾಲಯದ ಕುರಿತು ವಿವರ ಬಹಿರಂಗಪಡಿಸುತ್ತದೆ. 1928ರಲ್ಲಿ ಹೈದರಾಬಾದ್‌ನ ನಿಜಾಮ್ ಸರ್ಕಾರ ಸಂಶೋಧನೆ ಪ್ರಾರಂಭಿಸಿ, ನಾಗಾವಿ ವಿಶ್ವವಿದ್ಯಾಲಯದ ಕುರುಹುಗಳ ಕುರಿತು ಪುಸ್ತಕ ಪ್ರಕಟಿಸಿದೆ. ಪತ್ರಿಕೆಯವರು ಪ್ರಕಟಿಸಿರುವ ಹಲವಾರು ಮಾಹಿತಿಗಳು ಸಚಿವರ ತಂಡದ ಪ್ರವಾಸದ ಸಂದರ್ಭದಲ್ಲಿ ಲಭ್ಯವಾಗಿದ್ದವು ಎಂದು ಸಚಿವ ಎಚ್.ಕೆ. ಪಾಟೀಲ್‌ ವಿವರ ನೀಡಿದರು.

ಕೃಷ್ಣಕೃಪಾ ಫೌಂಡೇಶನ್‌ಗೆ ʻಮಳಖೇಡ ಕೋಟೆʼ ದತ್ತು :

ಮಳಖೇಡ ಕೋಟೆಯ ಸಾಂದರ್ಭಿಕ ಚಿತ್ರ

ರಾಷ್ಟಕೂಟರ ರಾಜಧಾನಿಯಾಗಿದ್ದ ಮಾನ್ಯಖೇಟ ಅಂದರೆ ಇಂದಿನ ಮಳಖೇಡಕ್ಕೆ ತಂಡ ಭೇಟಿ ಕೊಟ್ಟಿತು. ಮಳಖೇಡ ಕೋಟೆ, ನೃಪತುಂಗನ ಆಡಳಿತದ ಕೇಂದ್ರವಾಗಿತ್ತು. ಚರಿತ್ರಾರ್ಹ ಘಟನೆಗಳಿಗೆ ಸಾಕ್ಷಿಯಾಗಿದ್ದ ಈ ಕೋಟೆಗೆ ಉತ್ಕೃಷ್ಟವಾದ ಸಾಹಿತ್ಯದ ನೆಲೆಬೀಡಾದ ಈ ಕೋಟೆಗೆ ಭೇಟಿ ಕೊಟ್ಟು ಕೋಟೆಯನ್ನು ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಕಲ್ಬುರ್ಗಿ ಮೂಲದ ವ್ಯಕ್ತಿಯ ಮಾಲೀಕತ್ವದ ಖಾಸಗಿ ಕಂಪನಿ ಕೃಷ್ಣಕೃಪಾ ಫೌಂಡೇಶನ್‌ಗೆ ವಹಿಸಲಾಯಿತು. ಸ್ಥಳದಲ್ಲಿಯೇ ದತ್ತು ಒಪ್ಪಿಗೆ ಪತ್ರವನ್ನು ಕೂಡ ಹಸ್ತಾಂತರಿಸಲಾಯಿತು ಎಂದು ಸಚಿವರು ತಿಳಿಸಿದರು. 

ಶಿರವಾಳದಲ್ಲಿ ಅದ್ಭುತ ಶಿಲ್ಪಕಲಾ ವೈಭವ :

ಯಾದಗಿರಿ ಜಿಲ್ಲೆಯ ಶಿರವಾಳ ಗ್ರಾಮಕ್ಕೆ ಭೇಟಿ ನೀಡಿದ ಸಚಿವರ ತಂಡ ಅಲ್ಲಿಯ ಶಿಲ್ಪಕಲಾ ವೈಭವವನ್ನು ನೋಡಿ ಮೂಕವಿಸ್ಮಿತವಾಯಿತು. ಸ್ಥಳಿಯರ ಮಾಹಿತಿಯಂತೆ ಶಿರವಾಳದಲ್ಲಿ  360 ದೇಗುಲಗಳು, 360 ಬಾವಿಗಳು, ಸಾವಿರಾರು ಲಿಂಗಗಳು ಇರುವ ಪ್ರತೀತಿ ಇದೆ. ‘ನನ್ನಯ್ಯ ನಾದಯ್ಯ’ ಎಂಬ ದೇವಸ್ಥಾನ ಶಿಲ್ಪಕಲೆಯ ವೈವಿಧ್ಯಮಯ ಸಂಸ್ಕೃತಿಯನ್ನು ಹೊರಹೊಮ್ಮಿಸುತ್ತದೆ. ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾದ ಸ್ಮಾರಕಗಳನ್ನು ರಕ್ಷಿಸಲು ಸರ್ಕಾರದೊಂದಿಗೆ ಸಾರ್ವಜನಿಕ ಸಹಭಾಗೀತ್ವ ಅಪೇಕ್ಷಿಸಲಾಗಿದೆ ಎಂದು ಹೇಳಿದರು.

ಶಹಪುರದ ‘ದಿಡ್ಡಿ ಬಾಗಿಲು’ :

ಮುಖ್ಯವಾಗಿ ಶಹಪುರದ ‘ದಿಡ್ಡಿ ಬಾಗಿಲು’ ವೀಕ್ಷಿಸಲಾಯಿತು. ದುರಸ್ತಿಗಾಗಿ ಸೂಕ್ತ ನೆರವು ನೀಡುವ ಭರವಸೆಯನ್ನು ನೀಡಲಾಯಿತು. ಸಚಿವರ ತಂಡದಲ್ಲಿದ್ದ ತಜ್ಞರು, ಇತಿಹಾಸಕಾರರು ಮತ್ತು ಆಸಕ್ತರ ತಂಡ ಬೇರೆ ಬೇರೆ ಸ್ಥಳಗಳಿಗೆ ಭೇಟಿಕೊಟ್ಟು ರಕ್ಷಣೆ ಇಲ್ಲದೇ ಅನೇಕ ಶಾಸನಗಳು ನೆಲಕಚ್ಚಿರುವುದು ಕಂಡು ಬಂದವು. ಯಾದಗಿರಿಯ ಭಾಗಶಃ ಕೋಟೆಯನ್ನು ವೀಕ್ಷಿಸಲಾಯಿತು. ಈ ಎಲ್ಲಾ ಸ್ಮಾರಕಗಳ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ಬುಧವಾರದ ಸುದ್ದಿಗೋಷ್ಠಿಯಲ್ಲಿ  ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Join our WhatsApp Channel
Previous Post

HSRP Number Plate | ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇನ್ನೂ ಅಳವಡಿಸಿಲ್ವಾ? ವಾಹನ ಮಾಲೀಕರಿಗೆ ಇಲ್ಲಿದೆ ಸಂತಸದ ಸುದ್ದಿ 

Next Post

Bangalore Agricultural Fair | ಜಿಕೆವಿಕೆ ಕೃಷಿಮೇಳ 2023 ನ.17ರಿಂದ : ಮೇಳದಲ್ಲಿ ಸಿರಿಧಾನ್ಯಕ್ಕೆ ಈ ಬಾರಿ ವಿಶೇಷ ಒತ್ತು ; ಇನ್ನೇನು ವಿಶೇಷಗಳಿವೆ ಗೊತ್ತಾ?

Next Post
ರಾಗಿ ಬೆಳೆಯ ಪ್ರಾತಿನಿಧಿಕ ಚಿತ್ರ

Bangalore Agricultural Fair | ಜಿಕೆವಿಕೆ ಕೃಷಿಮೇಳ 2023 ನ.17ರಿಂದ : ಮೇಳದಲ್ಲಿ ಸಿರಿಧಾನ್ಯಕ್ಕೆ ಈ ಬಾರಿ ವಿಶೇಷ ಒತ್ತು ; ಇನ್ನೇನು ವಿಶೇಷಗಳಿವೆ ಗೊತ್ತಾ?

ಊಹಾ ಪತ್ರಿಕೋದ್ಯಮ ಅನಾಹುತಕಾರಿ, ಸುದ್ದಿ ಮತ್ತು ವಿಶ್ಲೇಷಣೆಗಳ ನಡುವೆ ಅಂತರವೇ ಇಲ್ಲವಾಗಿದೆ : ಕೆ.ವಿ.ಪ್ರಭಾಕರ್

Please login to join discussion

Like Us on Facebook

Follow Us on Twitter

Recent News

​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

July 30, 2026

ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

July 29, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

July 30, 2026

ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

July 29, 2026

1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

July 29, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group