Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW Special | Forest Cover | ರಾಜ್ಯದಲ್ಲಿನ ಟಾಪ್-5 ಅತಿ ಕಡಿಮೆ ಹಾಗೂ ಅತಿಹೆಚ್ಚು ಅರಣ್ಯ ಪ್ರದೇಶ ಈ ಜಿಲ್ಲೆಗಳಲ್ಲಿವೆ ; ಹಸಿರು ಹೊದಿಕೆ ನಮ್ಮಲ್ಲಿ ಎಷ್ಟಿದೆ ಗೊತ್ತಾ? ಈ ವರದಿ ಓದಿ

ರಾಜ್ಯದ 30 ಜಿಲ್ಲೆಗಳ ಭೂ ಪ್ರದೇಶದಲ್ಲಿ ಅರಣ್ಯ ವ್ಯಾಪ್ತಿಯ ಸರಾಸರಿ ನೋಡಿದಾಗ ಶೇ.21.19 ರಷ್ಟಿದೆ. ಈ ಪ್ರಮಾಣವು ದೇಶದಲ್ಲಿನ ಒಟ್ಟಾರೆ ಅರಣ್ಯ ಪ್ರದೇಶದ ಸರಾಸರಿಗಿಂತ ಶೇ.0.52ನಷ್ಟು ಮಾತ್ರ ಕಡಿಮೆಯಿದೆ.

by Bengaluru Wire Desk
October 18, 2023
in BW Special, News Wire, Public interest
Reading Time: 1 min read
0

ಬೆಂಗಳೂರು, ಅ.18 www.bengaluruwire.com : ರಾಜ್ಯದಲ್ಲಿ ಒಟ್ಟು 1.91 ಲಕ್ಷ ಚದರ ಕಿ.ಮೀ ಭೌಗೋಳಿಕ ಪ್ರದೇಶದ ಪೈಕಿ ಕೇವಲ 40,649.30 ಚ.ಕಿ.ಮೀ ಅರಣ್ಯ ಪ್ರದೇಶ ಮಾತ್ರ ಇರೋದು. 

ಕರ್ನಾಟಕದ 30 ಜಿಲ್ಲೆಗಳಲ್ಲಿ ಒಟ್ಟು ಭೂಪ್ರದೇಶದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶವಿರುವ ಟಾಪ್-5 ಜಿಲ್ಲೆಗಳ ಪಟ್ಟಿಯಲ್ಲಿ ಬೀಜಾಪುರ ಒಟ್ಟಾರೆ ಭೂ ಪ್ರದೇಶದ ಪೈಕಿ ಅರಣ್ಯ ಪ್ರದೇಶ ಕೇವಲ ಶೇ.0.77ನಷ್ಟಿದ್ದು ಮೊದಲ ಸ್ಥಾನದಲ್ಲಿದೆ. ನಂತರ ಗುಲ್ಬರ್ಗಾ (3.10%), ರಾಯಚೂರು (4.39%), ಬೆಂಗಳೂರು ನಗರ (6.88%), ಮೈಸೂರು (7.01%) ಜಿಲ್ಲೆ ಅತಿ ಕಡಿಮೆ ಅರಣ್ಯ ಪ್ರದೇಶವಿರುವ ಜಿಲ್ಲೆಗಳ ಟಾಪ್-5 ಸ್ಥಾನದಲ್ಲಿದೆ.

ರಾಜ್ಯದ ನಿತ್ಯಹರಿದ್ವರ್ಣ ಕಾಡಿನ ಪರ್ವತ ಶ್ರೇಣಿಯ ಆಕರ್ಷಕ ನೋಟ.

ಇನ್ನು ಕರ್ನಾಟಕದಲ್ಲಿ ಒಟ್ಟು ಭೂ ಪ್ರದೇಶದ ಪೈಕಿ ಅತಿಹೆಚ್ಚು ಅರಣ್ಯಭೂಮಿ ಹೊಂದಿರುವ ಟಾಪ್-5 ಜಿಲ್ಲೆಗಳಲ್ಲಿ ಉತ್ತರ ಕನ್ನಡ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಒಟ್ಟಾರೆ 10,277 ಚ.ಕಿ.ಮೀ ವಿಸ್ತೀರ್ಣದ ಭೂಮಿಯ ಪೈಕಿ 8,303.77 ಚ.ಕಿ.ಮೀ ಅರಣ್ಯ ಪ್ರದೇಶದವಿದೆ. ಒಟ್ಟು ಭೂ ಪ್ರದೇಶದಲ್ಲಿ ಶೇಕಡವಾರು ಅರಣ್ಯ ಪ್ರದೇಶ 80.80ರಷ್ಟಿದೆ. ಇದರ ನಂತರದ ಸ್ಥಾನದಲ್ಲಿ ಶಿವಮೊಗ್ಗ (67.11%), ಚಾಮರಾಜನಗರ (65.03%), ಕೊಡಗು (47.87%), ಚಿಕ್ಕಮಗಳೂರು (42.72%) ಟಾಪ್ ಐದನೇ ಸ್ಥಾನದಲ್ಲಿದೆ ಎಂದು 2022-23ನೇ ಸಾಲಿನ ಅರಣ್ಯ ಇಲಾಖೆ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಒಟ್ಟಾರೆ ರಾಜ್ಯದ 30 ಜಿಲ್ಲೆಗಳ ಭೂ ಪ್ರದೇಶದಲ್ಲಿ ಅರಣ್ಯ ವ್ಯಾಪ್ತಿಯ ಸರಾಸರಿ ನೋಡಿದಾಗ ಶೇ.21.19 ರಷ್ಟಿದೆ. ಈ ಪ್ರಮಾಣವು ದೇಶದಲ್ಲಿನ ಒಟ್ಟಾರೆ ಅರಣ್ಯ ಪ್ರದೇಶದ ಸರಾಸರಿಗಿಂತ ಶೇ.0.52ನಷ್ಟು ಮಾತ್ರ ಕಡಿಮೆಯಿದೆ. ದೇಶದ ಒಟ್ಟು ಭೌಗೋಳಿಕ ಪ್ರದೇಶದಲ್ಲಿನ ಅರಣ್ಯ ಪ್ರದೇಶದ ಸರಾಸರಿ ಶೇ.21.71 ನಷ್ಟಿದೆ. ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವ  ಟಾಪ್ -5 ರಾಜ್ಯಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಹಾಗೂ ಜಾರ್ಖಂಡ್ ಸ್ಥಾನಗಳಿಸಿವೆ ಎಂದು ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2021ರ ವರದಿಯಲ್ಲಿ ತಿಳಿಸಿದೆ.

ಕಳ್ಳಬೇಟೆ, ಶ್ರೀಗಂಧ, ರಕ್ತಚಂದನ ಕಳ್ಳ ಸಾಗಾಣೆ ಪ್ರಕರಣಗಳು :

ಅರಣ್ಯದಲ್ಲಿ ಅಕ್ರಮವಾಗಿ ಶ್ರೀಗಂಧ, ರಕ್ತಚಂದನ, ಬೀಟೆ, ವನ್ಯಜೀವಿ ಬೇಟೆ, ಕಳ್ಳಸಾಗಣೆಯಂತಹ ಕೃತ್ಯಗಳು ಪರಿಣಾಮಕಾರಿಯಾಗಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. 2022-23ನೇ ಸಾಲಿನ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟಾರೆ 877 ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ ವನ್ಯಜೀವಿ ಅಪರಾಧ ಪ್ರಕರಣಗಳು 123, ಶ್ರೀಗಂಧ ಕಳ್ಳತನ- ಕಳ್ಳ ಸಾಗಾಣೆಯಂತಹ 85 ಪ್ರಕರಣ, ಬೀಟೆ 32, ರಕ್ತಚಂದನ 8 ಕೇಸ್ ಗಳು ಬುಕ್ ಆಗಿವೆ.

ದಟ್ಟ ಕಾನನದ ಮಧ್ಯೆ ಜರಿಯ ಝೇಂಕರಿಸಿ ಹರಿಯುತ್ತಿರುವ ಚಿತ್ರ.

ವಿವಿಧ ನ್ಯಾಯಾಲಯಗಳಲ್ಲಿದೆ 6,068 ಪ್ರಕರಣಗಳು :

5 ರಾಷ್ಟ್ರೀಯ ಉದ್ಯಾನವನ, 36 ಅಭಯಾರಣ್ಯಗಳು (5 ಹುಲಿ ಸಂರಕ್ಷಿತ ಪ್ರದೇಶಗಳು ಒಳಗೊಂಡಂತೆ), 17 ಸಂರಕ್ಷಣಾ ಮೀಸಲು ಪ್ರದೇಶ ಹಾಗೂ 1 ಸಮುದಾಯ ಮೀಸಲು ಪ್ರದೇಶಗಳ ರಕ್ಷಣೆ ಮತ್ತು ನಿರ್ವಹಣೆಯನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಕಿರಿಯ ನ್ಯಾಯಾಲಯ, ಜೆಎಂಎಫ್ ಸಿ ಹಂತದಿಂದ ಸುಪ್ರೀಂಕೋರ್ಟ್ ವೆರೆಗೆ ಒಟ್ಟಾರೆ 6,068 ಪ್ರಕರಣಗಳು ವಿವಿಧ ಹಂತದಲ್ಲಿ ಇನ್ನೂ ಬಾಕಿ ಉಳಿದಿದೆ. ಕೆಲವೊಮ್ಮೆ ರಾಜ್ಯದ ಸರ್ಕಾರಿ, ಖಾಸಗಿ ಪ್ರಮುಖ ಯೋಜನೆಗಳಿಗೆ ರಾಜ್ಯದ ಸಸ್ಯ ಸಂಪತ್ತನ್ನು ಬಲಿ ಕೊಡುತ್ತಿರುವುದು ಕಳವಳಕಾರಿ ವಿಚಾರವಾಗಿದೆ.

ರಾಜ್ಯದಲ್ಲಿದೆ 87 ದೇವರಕಾಡುಗಳು :

ಮಳೆಗಾಲದಲ್ಲಿ ಭೋರ್ಗೆರೆಯುವ ಜಲಪಾತವೊಂದರ ಚಿತ್ರ.

ಧಾರ್ಮಿಕ ಮತ್ತು ಪರಿಸರ ವ್ಯವಸ್ಥೆಗಳಿಂದ ಬಹಳ ವಿಶಿಷ್ಟ ಮತ್ತು ಮಹತ್ವದ್ದಾಗಿರುವ ದೇವರಕಾಡು (ದೈವಿವನ)ಗಳನ್ನು ಪ್ರತಿ ಜಿಲ್ಲೆಗೊಂದರಂತೆ ಅಭಿವೃದ್ಧಿಪಡಿಸುವ ಯೋಜನೆ 2010-11ನೇ ಸಾಲಿನಿಂದ ಆರಂಭಿಸಲಾಗಿದೆ. ಮಾರ್ಚ್ 2023ರ ವರೆಗೆ ರಾಜ್ಯದಲ್ಲಿ 87 ದೇವರಕಾಡುಗಳನ್ನು ಅಭಿವೃದ್ಧಿಪಡಿಸಿ ಸಂರಕ್ಷಣೆ ಮಾಡಲಾಗುತ್ತಿದೆ.  ಈ ಕಾಡುಗಳು ಅಮೂಲ್ಯವಾದ ಪರಿಸರ ವ್ಯವಸ್ಥೆಗಳನ್ನು ಅವುಗಳ ಪ್ರಾಚೀನ ಪರಿಸ್ಥಿತಿಗಳಲ್ಲಿ ಪವಿತ್ರ ತೋಪುಗಳಾಗಿ ಸಂರಕ್ಷಸಲು ಹಾಗೂ ಅವುಗಳ ನೈಸರ್ಗಿಕ ವಿಕಸನ ಪ್ರಕ್ರಿಯೆಯನ್ನು ಯಾವುದೇ ಅಡಚಣೆಯಿಲ್ಲದೆ ಮುಂದುವರೆಸಲು ಈ ಯೋಜನೆಯನ್ನು ಅರಣ್ಯ ಇಲಾಖೆ ಜಾರಿಗೆ ತಂದಿದೆ.

2022-23ನೇ ಸಾಲಿನ ಅಂತ್ಯಕ್ಕೆ ಅರಣ್ಯ ಇಲಾಖೆಯಲ್ಲಿ ಗ್ರೂಪ್ ಎ ನಿಂದ ಗ್ರೂಪ್-ಡಿ ತನಕ ಒಟ್ಟಾರೆ 14,845 ಮಂಜೂರಾತಿಯಾದ ಅಧಿಕಾರಿ, ಸಿಬ್ಬಂದಿ ಹುದ್ದೆಯಿದ್ದು, 8,425 ಹುದ್ದೆಗಳು ಭರ್ತಿಯಾಗಿದ್ದರೆ, 6,410 ಹುದ್ದೆಗಳು ಖಾಲಿಯಿವೆ. ಅಲ್ಲದೆ 2,839 ಮಂದಿ ದಿನಗೂಲಿ ಆಧಾರದ ಮೇಲೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅರಣ್ಯ ಇಲಾಖೆ ವಾರ್ಷಿಕ ವರದಿಯಲ್ಲಿ ತಿಳಿಸಿದೆ. 

40,649.30 ಚ.ಕಿ.ಮೀ ಅರಣ್ಯ ಪ್ರದೇಶವನ್ನು ಹೊಂದಿರುವ ಕರ್ನಾಟಕದಲ್ಲಿ ಅರಣ್ಯ ಸಂರಕ್ಷಣೆ, ವನ್ಯಜೀವಿಗಳು ಹಾಗೂ ಅಮೂಲ್ಯ ಸಸ್ಯ ಸಂಪತ್ತು ಉಳಿಸುವ ದೃಷ್ಟಿಯಿಂದ ಈಗಿರುವ ಅಧಿಕಾರಿಗಳು, ಸಿಬ್ಬಂದಿ ಸಂಖ್ಯೆ ಕಡಿಮೆಯಿದ್ದು, ಕಾರ್ಯನಿರ್ವಹಣೆಗೆ ಏನೇನೂ ಸಾಲದಾಗಿದೆ. ಖಾಲಿಯಿರುವ ಹುದ್ದೆಗೆಳನ್ನು ಸರ್ಕಾರ ಆದಷ್ಟು ಶೀಘ್ರದಲ್ಲಿ ತುಂಬುವ ಅಗತ್ಯವಿದೆ.

WhatsApp Join our WhatsApp Channel
Previous Post

Video News | ಕೋರಮಂಗಲ ಮಡ್ ಪೈಪ್ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ : ಪ್ರಾಣ ಉಳಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ ವ್ಯಕ್ತಿ

Next Post

Ayudha Puja | ಆಯುಧ ಪೂಜೆಯಲ್ಲಿ ಅರಿಶಿನ- ಕುಂಕುಮ ಬಳಕೆ ಕುರಿತ ಗೊಂದಲ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Next Post
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Ayudha Puja | ಆಯುಧ ಪೂಜೆಯಲ್ಲಿ ಅರಿಶಿನ- ಕುಂಕುಮ ಬಳಕೆ ಕುರಿತ ಗೊಂದಲ - ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ವಿಧಾನಸೌಧದ ಸಾಂದರ್ಭಿಕ ಚಿತ್ರ

BW EXCLUSIVE | ಬಿಬಿಎಂಪಿಯಲ್ಲಿ 11 ವರ್ಷಕ್ಕೂ ಹೆಚ್ಚು ಕಾಲಾವಧಿಯಿಂದ ನಿಯಮಬಾಹಿರ ಠಿಕಾಣಿ : ಈ ಲೆಕ್ಕಾಧೀಕ್ಷಕ ಅಧಿಕಾರಿಗೆ ಯಾಕೆ ನಗರಾಭಿವೃದ್ಧಿ ಇಲಾಖೆ ಶ್ರೀರಕ್ಷೆ? ; ಇಲ್ಲಿದೆ ದಾಖಲೆ ಸಹಿತ ವರದಿ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group