Saturday, August 1, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

  • Bengaluru Focus

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

    ಜಕ್ಕೂರು ವೈಮಾನಿಕ ತರಬೇತಿ ಶಾಲೆ ಲೈಸೆನ್ಸ್‌ ನವೀಕರಣ: ಮೈಸೂರು, ಹಾಸನದಲ್ಲಿ ಸ್ಯಾಟಲೈಟ್ ಬೇಸ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Ullal Lake | ಬಿಬಿಎಂಪಿಯ ಉಲ್ಲಾಳ ಕೆರೆಯಲ್ಲಿ ಮೀನುಗಳ‌ ಮಾರಣಹೋಮ…!! ಹೇಳೋರಿಲ್ಲ ಕೇಳೋರಿಲ್ಲ!! ಅಧಿಕಾರಿಗಳೇನು ಮಾಡ್ತಿದ್ದಾರೆ!!?

ವಿದೇಶಿ ಹಕ್ಕಿಗಳು ಸೇರಿದಂತೆ 20ಕ್ಕೂ ವಿವಿಧ ಜಾತಿಯ, ರಾಷ್ಟ್ರಪಕ್ಷಿ ನವಿಲುಗಳಿಗೆ ಆಶ್ರಯ ತಾಣವಾಗಿದ್ದ ಉಲ್ಲಾಳು ಕೆರೆ ಅವಸಾನದ ಅಂಚಿಗೆ ಬಂದು‌ ನಿಲ್ಲುವಂತಾಗಿದೆ.

by Bengaluru Wire Desk
August 30, 2023
in Bengaluru Focus
Reading Time: 1 min read
1

ಬೆಂಗಳೂರು, ಆ.28 www.bengaluruwire.com : ನಗರದ ಉಲ್ಲಾಳು ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿವೆ. ಇದಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಹೀಗೆ ಸತ್ತು ಹೋದ ಸಾವಿರಾರು ಮೀನುಗಳು ನೀರಿನಲ್ಲಿ ತೇಲುತ್ತಿದ್ದರೆ, ಕೆಲವು ದಡದಲ್ಲಿರುವುದು ಕಂಡು ಬಂದಿದೆ.

ಬೆಳಗಿನ ಹೊತ್ತು ವಾಯು ವಿಹಾರಕ್ಕೆ ಬರುವ ನಡಿಗೆದಾರರಿಗೆ, ಸತ್ತು ಮೀನುಗಳು ಕೊಳೆತು ನಾರುತ್ತಿರುವ ಕಾರಣ ಮೂಗು ಹಿಡಿದೇ ನಡಿಗೆ ಮಾಡುವಂತಾಗಿದೆ. ಈ ಮೀನುಗಳ ಮಾರಣ ಹೋಮವಾಗಿ ನಾಲ್ಕೈದು ದಿನಗಳು‌ ಕಳೆದರೂ ಉಲ್ಲಾಳ ಕೆರೆಯ ಹೊಣೆ ಹೊತ್ತ ಬಿಬಿಎಂಪಿ‌ಕೆರೆ ವಿಭಾಗದ ಎಂಜಿನಿಯರ್ ಗಳಾಗಲಿ, ಕೆರೆಯ ನಿರ್ವಹಣೆ ಹೊಣೆಹೊತ್ತ ಗುತ್ತಿಗೆದಾರರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಸತ್ತು ಬಿದ್ದಿರುವ ಮೀನಿನ ಕಳೇಬರ

ಈ ಬಾರಿಯ ಮಳೆಗಾಲದಲ್ಲಿ ಆಗಸ್ಟ್ ತಿಂಗಳಲ್ಲಿ ನಿಗದಿತ ರೀತಿ ಮಳೆ ಬಾರದ ಕಾರಣ ಈಗಾಗಲೇ ಕೊಳಚೆ ನೀರು ಹರಿಯುವ ಕೆರೆಗಳನ್ನು ಬಿಟ್ಟು ನಗರದ ಹಲವು ಕೆರೆಗಳಲ್ಲಿ ನೀರಿಲ್ಲದೆ ಬರಗಾಲದ ಛಾಯೆ ರೀತಿ ನೆಲ ಕಾಣುವಂತಾಗಿದೆ. ಸಕಾಲದಲ್ಲಿ ಈ ಕೆರೆಗಳಲ್ಲಿ ಸಾಕಷ್ಟು ಹೂಳು ತುಂಬಿದ್ದರೂ ಅವುಗಳನ್ನು ಅಮೃತ ನಗರೋತ್ಥಾನ ಮತ್ತಿತರ ಸರ್ಕಾರದ ಅನುದಾನಗಳನ್ನು ಬಳಸಿ ಹೂಳೆತ್ತುವ ಕೆಲಸವಾಗಿಲ್ಲ.

ಹಾಗೂ ಕೊಳಚೆ ನೀರು ಹರಿಯುವುದನ್ನು ತಪ್ಪಿಸಿ, ಕೆರೆ ನಿರ್ವಹಣೆ ಸೂಕ್ತ ರೀತಿ ಆಗುತ್ತಿಲ್ಲ. ಇದರ ಪರಿಣಾಮ ಉಲ್ಲಾಳ ಕೆರೆಯಲ್ಲಿ ಕಾಣುವಂತಾಗಿದೆ. ಕೆರೆಯ ಅಳಿದುಳಿದ ನೀರಿನಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾದರೆ, ನೀರು ಕಲುಷಿತವಾದರೆ ಸಾಮಾನ್ಯವಾಗಿ ಹೀಗೆ ಮೀನುಗಳು ಒಂದೇ ಸಮನೇ ಸತ್ತು ಬೀಳುತ್ತವೆ ಎನ್ನುತ್ತಾರೆ ಪರಿಸರ‌ಪ್ರೇಮಿಯೊಬ್ಬರು.

ಹೂಳು – ಜೊಂಡು ಹುಲ್ಲಿನಿಂದ ಕೂಡಿರುವ ಉಲ್ಲಾಳ‌ ಕೆರೆಯ ವಿಹಂಗಮ ನೋಟ.

ಮೀನು ಸಾಕಿ- ಮಾರಾಟ ಮಾಡಲು ಖಾಸಗಿ ಗುತ್ತಿಗೆ – ಪಾಲಿಕೆಗೆ ಮಾಹಿತಿಯೇ ಇಲ್ಲ :
ಇದು ಸಾಲದು ಎಂಬಂತೆ ಇರೋ 27 ಎಕರೆ ವಿಸ್ತೀರ್ಣದ ಉಲ್ಲಾಳ ಕೆರೆಯನ್ನು ಬೆಂಗಳೂರು ನಗರ ಜಿಲ್ಲಾಡಳಿತ ಮೀನುಗಾರಿಕೆ ಇಲಾಖೆಯ ಕೋರಿಕೆ ಮೇರೆಗೆ ಖಾಸಗಿ ಗುತ್ತಿಗೆದಾರರಿಗೆ ಮೀನು ಹಿಡಿಯಲು 2022ರಲ್ಲಿ ಅನುಮತಿ‌ ನೀಡಿತ್ತು. ಆದರೆ ಈ ವಿಚಾರ ಪಾಲಿಕೆಯ ಕೆರೆ ವಿಭಾಗದ ಎಂಜಿನಿಯರ್ ಗಳ ಗಮನಕ್ಕೇ ಬಂದಿಲ್ಲ. ಇನ್ನು ಈ ಕೆರೆಯಲ್ಲಿನ ಹೂಳೆತ್ತಿ ಈ ಜಲಮೂಲವನ್ನು ಅಭಿವೃದ್ಧಿಪಡಿಸಿ ಅಂತ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ ನಿವಾಸಿಗಳು ಮನವಿ ಮಾಡಿದ್ದರೂ, ಅದಕ್ಕೆ ಕ್ಯಾರೇ ಅನ್ನದ ಅಧಿಕಾರಿಗಳು ಉಲ್ಲಾಳ ಕೆರೆಯನ್ನು ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಜೌಗು ಭೂಮಿಯಲ್ಲಿನ ಹೂಳೆತ್ತುವ ಕಾಮಗಾರಿಯನ್ನು ಖಾಸಗಿ ಗುತ್ತಿಗೆದಾರನಿಗೆ ನೀಡಿತ್ತು.

ಅವಸಾನದ ಅಂಚಿಗೆ ತಲುಪಿದ ಉಲ್ಲಾಳ ಕೆರೆ :
ಆ ಜಾಗವಾದರೂ ಅಭಿವೃದ್ಧಿಯಾಗುತ್ತದೆಂಬ ನಿರೀಕ್ಷೆಯಲ್ಲಿರುವಾಗಲೇ 15-20 ದಿನ ಹೂಳೆತ್ತುವ ಶಾಸ್ತ್ರ ಮಾಡಿ ಇದೀಗ ಆ ಕಾಮಗಾರಿಯು ಕುಂಟುತ್ತಾ ಸಾಗಿದೆ. ಇಲ್ಲಿಗೆ ವಿದೇಶಿ ಹಕ್ಕಿಗಳು ಸೇರಿದಂತೆ 20ಕ್ಕೂ ವಿವಿಧ ಜಾತಿಯ, ರಾಷ್ಟ್ರಪಕ್ಷಿ ನವಿಲುಗಳಿಗೆ ಆಶ್ರಯ ತಾಣವಾಗಿದ್ದ ಉಲ್ಲಾಳು ಕೆರೆ ಅವಸಾನದ ಅಂಚಿಗೆ ಬಂದು‌ ನಿಲ್ಲುವಂತಾಗಿದೆ. ಈ ಕೆರೆ ಹೇಳ ಹೆಸರಿಲ್ಲದಂತೆ ಮಂಗಮಾಯವಾಗುವ ಮುನ್ನ ಕೆರೆ ವಿಭಾಗದ “ಜಡತ್ವ”ದ ದಪ್ಪ ಚರ್ಮದ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆರೆ ಉಳಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.

ಮತ್ತೊಂದು ವಿಚಾರ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಶೇ.60ಕ್ಕೂ ಹೆಚ್ಚು ಕೆರೆಗಳು ಮಾಲಿನ್ಯವಾಗಿದೆ. ಹೀಗಿದ್ದಾಗ ಅವುಗಳಲ್ಲಿ ಮೀನು ಸಾಕಾಣೆ ಮಾಡಿ, ಅದನ್ನೇ ಹಿಡಿದು ಸಾರ್ವಜನಿಕರಿಗೆ ಮಾರಾಟ ಮಾಡಿದರೆ ಅದನ್ನು ತಿಂದ‌ ನಾಗರೀಕರ ಆರೋಗ್ಯ ಸ್ಥಿತಿ ಏನಾಗಬೇಡ? ರಾಜ್ಯದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಬಗ್ಗೆ ಗಮನಹರಿಸೋಕೆ ಟೈಮಿಲ್ವಾ?

WhatsApp Join our WhatsApp Channel
Previous Post

Aditya L1 Mission | ಚಂದ್ರಯಾನ-3 ನಂತರ ಆದಿತ್ಯ ಎಲ್1 ಸೆ.2ರಂದು ಉಡಾವಣೆ

Next Post

LPG GAS Price Drop | 33 ಕೋಟಿ ಎಲ್ ಪಿಜಿ ಗ್ರಾಹಕರಿಗೆ ಖುಷಿಯ ಸುದ್ದಿ : ಆ.30ರಿಂದ ಪ್ರತಿ ಅಡುಗೆ ಸಿಲಿಂಡರ್ ಬೆಲೆ 200 ರೂ. ಇಳಿಕೆ

Next Post
ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

LPG GAS Price Drop | 33 ಕೋಟಿ ಎಲ್ ಪಿಜಿ ಗ್ರಾಹಕರಿಗೆ ಖುಷಿಯ ಸುದ್ದಿ : ಆ.30ರಿಂದ ಪ್ರತಿ ಅಡುಗೆ ಸಿಲಿಂಡರ್ ಬೆಲೆ 200 ರೂ. ಇಳಿಕೆ

Gruha Lakshmi Scheme | ರಾಜ್ಯದ 11 ಸಾವಿರ ಸ್ಥಳಗಳಲ್ಲಿ ವರ್ಚುವಲ್ ವಿಡಿಯೋ ಮೂಲಕ “ಗೃಹಲಕ್ಷ್ಮಿ ಯೋಜನೆ”ಗೆ ಚಾಲನೆ

Please login to join discussion

Like Us on Facebook

Follow Us on Twitter

Recent News

BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

July 31, 2026

KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

July 31, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

July 31, 2026

KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

July 31, 2026

​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

July 31, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group