Wednesday, June 17, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW SPECIAL | Chandrayaan-3 | ಚಂದ್ರಯಾನ-3 ಯೋಜನೆ ಉದ್ದೇಶ,‌ ಗಗನ ನೌಕೆ ಮತ್ತು ರಾಕೆಟ್ ಕುರಿತ ಮಹತ್ವದ ವೈಜ್ಞಾನಿಕ ಮಾಹಿತಿ ಇಲ್ಲಿದೆ

ರಾಕೆಟ್ ಎತ್ತರ ಬರೋಬ್ಬರಿ 142.24 ಅಡಿ | ರಾಕೆಟ್ ಒಟ್ಟಾರೆ ಭಾರ 6.42 ಲಕ್ಷ ಕೆ.ಜಿ | ಚಂದ್ರಯಾನ-3 ಲ್ಯಾಂಡರ್ ಮತ್ತು ರೋವರ್ ಜೀವಾತಾವಧಿ 1 ಚಂದ್ರನ ದಿನ (14 ಭೂಮಿಯ ದಿನಕ್ಕೆ ಸಮ)

by Bengaluru Wire Desk
July 12, 2023
in BW Special, News Wire, Public interest
Reading Time: 3 mins read
0

ಶ್ರೀಹರಿಕೋಟಾ, ಜು.10 www.bengaluruwire.com : ದೇಶದ ನಾಗರೀಕರ ಬಹುನಿರೀಕ್ಷರಿತ ಯೋಜನೆಯಾದ ಚಂದ್ರಯಾನ-3 (Chndrayaan-3) ಸಾಕಾರಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಏಕೆಂದರೆ ಜು.14ರಂದು ಮಧ್ಯಾಹ್ನ 2.35ಕ್ಕೆ ಎಲ್ಲವೂ ಅಂದುಕೊಂಡಂತೆ ಆದಲ್ಲಿ ಚಂದ್ರಯಾನ ಗಗನ ನೌಕೆಯನ್ನು ಹೊತ್ತು ಎಲ್ ವಿಎಮ್3 (LVM3) ರಾಕೆಟ್ ನಭಕ್ಕೆ ಜಿಗಿಯಲಿದೆ.

ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯು ಈ ಹಿಂದಿನ ಯೋಜನೆಯಾದ ಚಂದ್ರಯಾನ-2 ರಲ್ಲಿನ ವೈಫಲ್ಯಗಳಿಂದ ಪಾಠ ಕಲಿತು ಚಂದ್ರನ ಅಂಗಳಕ್ಕೆ ಹಗುರವಾಗಿ ಮತ್ತು ಸುರಕ್ಷಿತವಾಗಿ ಇಳಿಯಲು ಅಗತ್ಯ ತಂತ್ರಜ್ಞಾನ, ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಹುಮ್ಮಸ್ಸಿನಲ್ಲಿದೆ.

ಚಂದ್ರಯಾನ-3, ಭಾರತದ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯು LVM3 ರಾಕೆಟ್ ಲಾಂಚರ್‌ನ ನಾಲ್ಕನೇ ಕಾರ್ಯಾಚರಣೆಯಲ್ಲಿ (M4) ಟೇಕ್ ಆಫ್ ಆಗಲು ಸಿದ್ಧವಾಗಿದೆ. ಇಸ್ರೋ ಈ ಮೂಲಕ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡುವ ಮೂಲಕ ಹೊಸ ಗಡಿಗಳನ್ನು ದಾಟಲು ಮತ್ತು ಚಂದ್ರನ ಭೂಪ್ರದೇಶದಲ್ಲಿ ರೋವರ್ ಮೂಲಕ ಚಲಿಸುತ್ತಾ ವೈಜ್ಞಾನಿಕ ಅಧ್ಯಯನ ನಡೆಸಲು ಸಿದ್ದವಾಗಿದೆ. ಈ ಚಂದ್ರಯಾನವು ಇಸ್ರೋದ ಭವಿಷ್ಯದ ಅಂತರ್ ಗ್ರಹ ಕಾರ್ಯಾಚರಣೆಗಳಿಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ರಾಕೆಟ್ ಮೇಲ್ಭಾಗದ ಚಿತ್ರ (ಇದರೊಳಗೆ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಇರಿಸುವ ಭಾಗ)

ಚಂದ್ರನಲ್ಲಿ ಹೆಚ್ಚುವರಿಯಾಗಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ರೋವರ್ ನಿಯೋಜಿಸುವ ಮೂಲಕ ಚಂದ್ರನ ದಂಡಯಾತ್ರೆಯಲ್ಲಿ ಹೊಸ ಶಕೆ ಬರೆಯಲಿದೆ. ಹೀಗಾಗಿ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರನ ಬಗ್ಗೆ ಈವರೆಗೆ ಮಾನವ ಜನಾಂಗಕ್ಕೆ ತಿಳಿಯದ ಹಲವಾರು ಅಂಶಗಳನ್ನು ಅರಿಯಲು ಸಹಾಯಕವಾಗಲಿದೆ.

ಚಂದ್ರಯಾನ-3 ಮೂಲೋದ್ದೇಶವೇನು?
ಚಂದ್ರಯಾನ-3 ಮಿಷನ್ ಚಂದ್ರನ ಭೂಕಂಪನ, ಚಂದ್ರನಲ್ಲಿ ಆಚ್ಚಾದಿಸಿರುವ ಆಧಾರ ಶಿಲಾತಲದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಕುರಿತಂತೆ, ಅಲ್ಲಿನ ಮೇಲ್ಮೈ ಪ್ಲಾಸ್ಮಾ ಪರಿಸರ ಮತ್ತು ಧಾತು ರೂಪದ ಸಂಯೋಜನೆಯ ಉಷ್ಣ-ಭೌತಿಕ ಗುಣಲಕ್ಷಣಗಳನ್ನು ಅಧ್ಯಯನ ಮಾಡಲು ವೈಜ್ಞಾನಿಕ ಉಪಕರಣಗಳನ್ನು ಮಾರ್ಕ್ -3 ರಾಕೆಟ್ ಒಳಗಿನ ಚಂದ್ರಯಾನ ನೌಕೆಯು ಹೊಂದಿದೆ.

ನೌಕೆಯಲ್ಲಿನ ಲ್ಯಾಂಡರ್ ನಿರ್ದಿಷ್ಟವಾಗಿ, ಚಂದ್ರನ ಸ್ಥಳದಲ್ಲಿ ಮೃದುವಾಗಿ ಇಳಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ ಲ್ಯಾಂಡರ್ ಐಎಸ್ ಡಿಎನ್, ರೋವರ್, ರೋವರ್ ನನ್ನು ತನ್ನ ಒಡಲಲ್ಲಿಟ್ಟುಕೊಂಡಿರುತ್ತದೆ. ಈ ಲ್ಯಾಂಡರ್ ಮತ್ತು ರೋವರ್ ನ ಜೀವಿತಾವಧಿಯು ಒಂದು ಚಂದ್ರನ ದಿನವಾಗಿರುತ್ತದೆ(ಅಂದರೆ 14 ಭೂಮಿಯ ದಿನಗಳು). ಮತ್ತು ತನ್ನ ಚಲನಶೀಲತೆಯ ಅವಧಿಯಲ್ಲಿ ಚಂದ್ರನ ಮೇಲ್ಮೈ ಸ್ಥಳದಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ಕೈಗೊಳ್ಳುವ ರೋವರ್ ಅನ್ನು ನಿಯೋಜಿಸುತ್ತದೆ.

ಯೋಜನೆಯ ವಿವಿಧ ಹಂತಗಳು ಅನುಕ್ರಮವಾಗಿ ಹೀಗಿದೆ :

ವಿವಿಧ ಮಿಷನ್ ಹಂತಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:

ರಾಕೆಟ್ ಉಡಾವಣೆಯಿಂದ ಗಗನ ನೌಕೆಯು ಬೇರ್ಪಡುವಿಕೆ ತನಕದ ವಿವಿಧ ಹಂತಗಳ ಚಿತ್ರ.

ಭೂ ಕೇಂದ್ರಿತ ಹಂತ (ಹಂತ-1) : ಉಡಾವಣಾ ಪೂರ್ವ ಹಂತ (Pre Launch Stage)
ಉಡಾವಣೆ ಮತ್ತು ಆರೋಹಣ ಹಂತ, ಭೂ ಕೇಂದ್ರಿತ ರಾಕೆಡ್ ಚಾಲನಾ ನಿಯಂತ್ರಣ ಹಂತ

ಚಂದ್ರನಲ್ಲಿಗೆ ವರ್ಗಾವಣೆ ಹಂತ (ಹಂತ-2):
ವರ್ಗಾವಣೆ ಪಥದ ಹಂತ

ಚಂದ್ರ ಕೇಂದ್ರಿತ ಹಂತ :
• ಚಂದ್ರನ ಕಕ್ಷೆಯ ಅಳವಡಿಕೆ ಹಂತ (LOI)-(ಹಂತ-3)
• ಚಂದ್ರ-ಆಧಾರಿತ ಚಾಲನ ನಿರ್ವಹಣಾ ಹಂತ (ಹಂತ-4)
• ರಾಕೆಟ್ ಮತ್ತು ಚಂದ್ರಯಾನ ನೌಕೆ ಪ್ರತ್ಯೇಕತೆ (ಹಂತ-5)
• ಡಿ-ಬೂಸ್ಟ್ ಹಂತ (ಹಂತ-6)
• ಪೂರ್ವ-ಲ್ಯಾಂಡಿಂಗ್ ಹಂತ (ಹಂತ-7)
• ಲ್ಯಾಂಡಿಂಗ್ ಹಂತ (ಹಂತ-8)
• ಲ್ಯಾಂಡರ್ ಮತ್ತು ರೋವರ್‌ಗೆ ಸಾಮಾನ್ಯ ಹಂತ (ಹಂತ-9)
• ಚಂದ್ರ ಕೇಂದ್ರಿತ ಸಾಮಾನ್ಯ ಕಕ್ಷೆಯ ಹಂತ (100 ಕಿಮೀ ವೃತ್ತಾಕಾರದ ಕಕ್ಷೆ) – ಪ್ರೊಪಲ್ಷನ್ ಮಾಡ್ಯೂಲ್‌ಗಾಗಿ (ಹಂತ-10)

ನೋದನಕಾರಿ ಪ್ರೊಪಲ್ಷನ್ ಮಾಡ್ಯೂಲ್ :
ಚಂದ್ರಯಾನ-3 ಸ್ವದೇಶಿ ನಿರ್ಮಿತ ಯೋಜನೆಯಾಗಿದ್ದು ರಾಕೇಟ್ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ ಅನ್ನು ಒಳಗೊಂಡಿದೆ. ಇದರಲ್ಲಿ ಅಗತ್ಯವಿರುವ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ.

ಗಗನ‌ ನೌಕೆಯಲ್ಲಿನ ಪ್ರೊಪಲ್ಷನ್ ಮಾಡ್ಯೂಲ್ ಲ್ಯಾಂಡರ್ ಮತ್ತು ರೋವರ್ ಅನ್ನು ರಾಕೆಟ್ ನಿಂದ ಬೇರ್ಪಟ್ಟ ಬಳಿಕ ಭೂ ಕಕ್ಷೆಯಿಂದ 100 x 100 ಕಿಮೀ ದೂರದ ವರೆಗಿನ ಚಂದ್ರನ ಕಕ್ಷೆಗೆ ಒಯ್ಯುತ್ತದೆ. ಅಲ್ಲದೆ ಭೂಮಿಯ (SHAPE) ಆಕಾರದ ಸ್ಪೆಕ್ಟ್ರೋ-ಪೋಲಾರ್ ಮೆಟ್ರಿ ಪೇಲೋಡ್ ಅನ್ನು ಈ ಗಗನನೌಕೆಯು ಹೊತ್ತೊಯ್ಯಲಿದ್ದು, ಚಂದ್ರನ ಕಕ್ಷೆಯಿಂದ ಭೂಮಿಯ ವರ್ಣಪಟಲ ಮತ್ತು ಧ್ರುವೀಯ ಅಳತೆಗಳನ್ನು ಅಧ್ಯಯನ ಮಾಡಲು ಕೊಂಡೊಯ್ಯಲಿದೆ. ಉಡಾವಣಾ ವಾಹಕದ ಇಂಜೆಕ್ಷನ್ ಕಕ್ಷೆಯಿಂದ ಲ್ಯಾಂಡರ್ ಬೇರ್ಪಡುವವರೆಗೆ ಸಾಗಿಸುವುದು ಪ್ರೊಪಲ್ಷನ್ ಮಾಡ್ಯೂಲ್‌ನ ಮುಖ್ಯ ಕಾರ್ಯವಾಗಿದೆ.

ಮಾರ್ಕ್-3 ರಾಕೆಟ್ ಬಗ್ಗೆ :
LVM3 ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಯ ಭಾರೀ ತೂಕದ ಉಡಾವಣಾ ವಾಹಕವಾಗಿದೆ. ಅಲ್ಲದೆ ಇದು ಸತತ 6 ಯಶಸ್ವಿ ಮಿಷನ್ ಪೂರ್ಣಗೊಳಿಸಿರುವ ಅದ್ಭುತ ಹಿನ್ನಲೆಯನ್ನು ಹೊಂದಿದೆ. ಜೊತೆಗೆ ಚಂದ್ರಯಾನ-3 ಎಲ್ ವಿಎಮ್ 3 ನ 4 ನೇ ಕಾರ್ಯಾಚರಣೆಯ ಹಾರಾಟವಾಗಿದೆ, ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಭೂಸ್ಥಿರ ವರ್ಗಾವಣೆ ಕಕ್ಷೆ (GTO) ಗೆ ಉಡಾವಣೆ ಮಾಡುವ ಗುರಿಯನ್ನು ಹೊಂದಿದೆ.

ಎಲ್ ವಿಎಂ3 ಅತ್ಯಂತ ಸಂಕೀರ್ಣವಾದ ಕಾರ್ಯಾಚರಣೆಗಳನ್ನು ಕೈಗೊಳ್ಳಲು ತನ್ನ ವೈವಿಧ್ಯೆತೆಯನ್ನು ಈಗಾಗಲೇ ಸಾಬೀತುಪಡಿಸಿದೆ:

• ಬಹು-ಉಪಗ್ರಹಗಳನ್ನು ಇಂಜೆಕ್ಟ್ ಮಾಡುವುದು, ಮಿಷನ್ ಯೋಜನೆ ಮರು ನಿರ್ದೇಶನ ಮತ್ತು ವೇಗ ಸೇರ್ಪಡೆಯ ಮೂಲಕ ಪ್ರತ್ಯೇಕಿತ ಉಪಗ್ರಹಗಳ ನಡುವೆ ಸುರಕ್ಷಿತ ಅಗತ್ತವಾದ ಅಂತರವನ್ನು ಖಚಿತಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

• ಬಹು ಕಕ್ಷೆ (LEO, MEO, GEO) ಮತ್ತು
ಅಂತರಗ್ರಹ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಹಕಾರಿ.

• ಭಾರತೀಯ ಮತ್ತು ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳನ್ನು ಸಾಗಿಸುವ ಭಾರತದ ಅತಿದೊಡ್ಡ ಮತ್ತು ಭಾರವಾದ ಉಡಾವಣಾ ವಾಹನ ಇದಾಗಿದೆ.

LVM3-M4 ವಾಹನದ ಗುಣಲಕ್ಷಣಗಳು:
ರಾಕೆಟ್ ಎತ್ತರ: 43.5 ಮೀಟರ್ (142.24 ಅಡಿ)
ರಾಕೇಟ್ ಒಟ್ಟಾರೆ ಭಾರ: 642 ಟನ್ (6.42 ಲಕ್ಷ ಕೆ.ಜಿ)
ಪೇಲೋಡ್ ಯಂತ್ರಗಳ ಒಟ್ಟಾರೆ ಭಾರ: 3,895 ಕೆ.ಜಿ
ನೋದನಕಾರಿ (ಪ್ರೊಪಲ್ಷನ್) ಹಂತಗಳು
ರಾಕೇಟ್ ಹೊರಭಾಗ ಅಕ್ಕಪಕ್ಕ ಇರುವ ಸ್ಟ್ರಾಪ್-ಆನ್ ಮೋಟಾರ್ಸ್ : 2 x ಎಸ್200 (ಘನ ಇಂಧನ)
ಕೋರ್ ಹಂತ : L110 (ದ್ರವ ಇಂಧನ), ಮೇಲಿನ ಹಂತ : C25 (ಕ್ರಯೋಜನಿಕ್ ಇಂಧನ)

ಚಂದ್ರಯಾನ ನೌಕೆಯು ಹೊತ್ತೊಯ್ಯುವ ಉಪಯುಕ್ತ ಹೊರೆ (Payloads) :

ಲ್ಯಾಂಡರ್ ಪೇಲೋಡ್‌ಗಳು :
ರಾಮ್ಭಾ-ಎಲ್ಪಿ (Rambha LP) ಲ್ಯಾಂಗ್ಮುಯಿರ್ ಪ್ರೋಬ್ : ಇದು ಚಂದ್ರನ ಸಮೀಪದ ಮೇಲ್ಮೈ ಪ್ಲಾಸ್ಮಾ (ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳು) ಸಾಂದ್ರತೆ ಮತ್ತು ಸಮಯದೊಂದಿಗೆ ಅದರ ಬದಲಾವಣೆಗಳನ್ನು ಅಳೆಯಲು ಬಳಕೆಯಾಗುತ್ತದೆ.

ಚಾಸ್ಟೆ (ChaSTE) :
ಚಂದ್ರನ ಧ್ರುವ ಪ್ರದೇಶದ ಬಳಿ ಮೇಲ್ಮೈ ಉಷ್ಣ ಭೌತಿಕ ಪ್ರಯೋಗ ಕೈಗೊಳ್ಳಲು ಮತ್ತು ಮಾಪನಕ್ಕಾಗಿ ಈ ಪೇಲೋಡ್ ಬಳಸಲಾಗುತ್ತಿದೆ.

ವಿವಿಧ ರೀತಿಯ ಪೇಲೋಡ್ ಪರೀಕ್ಷಾ ಉಪಕರಣಗಳು

ಇಲ್ಸಾ (ILSA) :
ಚಂದ್ರನ ಭೂಕಂಪನ ಚಟುವಟಿಕೆಗಳನ್ನು ಮಾಪನ ಮಾಡಲು, ಹಾಗೂ ಲ್ಯಾಂಡಿಂಗ್ ಸೈಟ್ ಸುತ್ತಲೂ ಭೂಕಂಪನವನ್ನು ಅಳೆಯಲು ಮತ್ತು ಚಂದ್ರನ ಹೊರಪದರ ರಚನೆಯ ಬಗ್ಗೆ ಅಧ್ಯಯನಕ್ಕಾಗಿ ಈ ಉಪಕರಣ ಬಳಸಲಾಗುತ್ತಿದೆ.

ರೋವರ್ ಪೇಲೋಡ್‌ಗಳು:
ಎಪಿಎಕ್ಸ್ ಎಸ್ (APXS) :
ಆಲ್ಫಾ ಕಣದ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಮೂಲಕ ಚಂದ್ರನಲ್ಲಿ ರಾಸಾಯನಿಕ ಮತ್ತು ಖನಿಜಶಾಸ್ತ್ರೀಯ ಸಂಯೋಜನೆಯನ್ನು ಅಧ್ಯಯನ ನಡೆಸಿ ಅದರಿಂದ, ಚಂದ್ರನ ಮೇಲ್ಮೈಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಈ ಅತ್ಯಾಧುನಿಕ ಉಪಕರಣ ಬಳಕೆ ಮಾಡಲಾಗುತ್ತಿದೆ.

ಎಲ್ ಐಬಿಎಸ್ (LIBS) :
ಲೇಸರ್ ಪ್ರೇರಿತ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಎಂಬ ಉಪಕರಣವು ಚಂದ್ರಯಾನ ನೌಕೆಯ ಲ್ಯಾಂಡಿಂಗ್ ಸೈಟ್ ಸುತ್ತಲೂ ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಯನ್ನು (Mg, Al, Si, K, Ca, Ti, Fe) ಪರೀಕ್ಷಿಸಲು ಬಳಸಲಾಗುತ್ತಿದೆ.

ಪ್ರೊಪಲ್ಷನ್ ಮಾಡ್ಯೂಲ್ ಪೇಲೋಡ್:
ವಾಸಯೋಗ್ಯ ಭೂಮಿಯ ಆಕಾರವಿರುವ ಸ್ಪೆಕ್ಟ್ರೋ ಪೋಲಾರಿಮೆಟ್ರಿ ಉಪಕರಣವನ್ನು,
ಹತ್ತಿರದ ಅತಿನೇರಳೆ (NIR) ತರಂಗಾಂತರ ಶ್ರೇಣಿಯಲ್ಲಿ (1-1.7 μm) ವಾಸಯೋಗ್ಯ ಭೂಮಿಯ ಸ್ಪೆಕ್ಟ್ರೋ-ಪೋಲಾರಿಮೆಟ್ರಿಕ್ ಕುರುಹುಗಳನ್ನು ಅಧ್ಯಯನ ಮಾಡಲು ಪ್ರಾಯೋಗಿಕ ಪೇಲೋಡ್ ಆಗಿ ಉಪಯೋಗಿಸಲಾಗುತ್ತಿದೆ.

ಒಟ್ಟಿನಲ್ಲಿ ಹಿಂದಿನ ಚಂದ್ರಯಾನ-2 ವೈಫಲ್ಯದಿಂದ ಪಾಠ ಕಲಿತಿರುವ ಇಸ್ರೋ ಈ ಬಾರಿ ಯೋಜನೆಯಿಂದ ಯಶಸ್ಸು ಸಾಧಿಸಲು ಇನ್ನಿಲ್ಲದ ಪ್ರಯತ್ನ ಕೈಗೊಂಡಿದೆ. ಇಸ್ರೋ ಹಾಗೂ ಕೋಟ್ಯಾಂತರ ಭಾರತೀಯರ ನಿರೀಕ್ಷೆ ಸಫಲವಾಗಲಿ ಎಂಬುದು ಬೆಂಗಳೂರು ವೈರ್ ಕಾಳಜಿ ಕೂಡ. (ಚಿತ್ರ ಕೃಪೆ : ಇಸ್ರೋ ಸಂಸ್ಥೆ)

WhatsApp Join our WhatsApp Channel
Previous Post

Annabhagya Scheme DBT | ಅನ್ನಭಾಗ್ಯ ಯೋಜನೆ : ಇಂದಿನಿಂದ ನೇರ ನಗದು ವರ್ಗಾವಣೆಗೆ ಚಾಲನೆ

Next Post

Public Grievance Redressal | ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ನೇರವಾಗಿ ಸಿಎಂ ಸಿದ್ದರಾಮಯ್ಯ ಕಚೇರಿಗೆ ತಿಳಿಸಲು ಹೊಸ ವ್ಯವಸ್ಥೆ ಹೀಗಿದೆ ನೋಡಿ

Next Post

Public Grievance Redressal | ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ನೇರವಾಗಿ ಸಿಎಂ ಸಿದ್ದರಾಮಯ್ಯ ಕಚೇರಿಗೆ ತಿಳಿಸಲು ಹೊಸ ವ್ಯವಸ್ಥೆ ಹೀಗಿದೆ ನೋಡಿ

ಕೃಷಿ ಬೆಳೆಯ ಸಾಂದರ್ಭಿಕ ಚಿತ್ರ

Prdhan Mantri Pasal Bhima Yojana | 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ : ರೈತರೇ ಇಲ್ಲಿದೆ ಪೂರ್ಣ ಮಾಹಿತಿ

Please login to join discussion

Like Us on Facebook

Follow Us on Twitter

Recent News

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026

Space News | ಬಾನಂಗಳದಲ್ಲಿ ಇಂದು ವಿಸ್ಮಯ: ಗುರು, ಶುಕ್ರನ ನಡುವೆ ಬಾಲಚಂದ್ರನ ದರ್ಶನ, ಬರಿಗಣ್ಣಿನಿಂದಲೇ ಕಣ್ತುಂಬಿಕೊಳ್ಳಿ

June 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group