Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

  • Bengaluru Focus

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

HSRP Number Plate | ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಎಂಬ ಕೋಟಿ ಕೋಟಿ ಲೂಟಿ ಸ್ಕೆಚ್…! : ಸಿಎಂಗೆ ದೂರು

ಪರ್ಸಂಟೇಜ್ ಆರೋಪಗಳ ಬೆನ್ನಲ್ಲೇ 'ನಂಬರ್ ಪ್ಲೇಟ್' ಕರ್ಮಕಾಂಡ‌ | 20,000 ಕುಟುಂಬಗಳು ಬೀದಿಪಾಲು ಆತಂಕ...! | ಹೆಚ್.ಎಸ್.ಆರ್.ಪಿ ಅಕ್ರಮದ ಸಂಚು ಬಯಲು | ಸಾರಿಗೆ ಇಲಾಖೆಯಲ್ಲಿ ಕೋಟಿ ಲೂಟಿಗೆ ರಹಸ್ಯ ಸಂಚು?

by Bengaluru Wire Desk
June 27, 2023
in News Wire, Public interest
Reading Time: 1 min read
0

ಬೆಂಗಳೂರು, ಜೂ.27 www.bengaluruwire.com : ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆ ಹಳಿತಪ್ಪುತ್ತಿದೆ. ಅತೀ ಸುರಕ್ಷಾ ನೋಂದಣಿ ಫಲಕ  ಯೋಜನೆಯು ಜಾರಿಗೆ ಮುನ್ನವೇ ಕೋಟ್ಯಾಂತರ ರೂಪಾಯಿ ಅವ್ಯವಹಾರಕ್ಕೆ ನಾಂದಿ ಹಾಡಿರುವ ಬಗ್ಗೆ ಮುಖ್ಯಮಂತ್ರಿ ಕಚೇರಿಯಲ್ಲಿ ದೂರು ಸಲ್ಲಿಕೆಯಾಗಿದೆ.

ಭ್ರಷ್ಟಾಚಾರ ವಿರುದ್ಧ ಸಮರ ಸಾರಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಈ ಭ್ರಷ್ಟಾಚಾರವು ಸವಾಲೆಂಬಂತಿದೆ. ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ನೀಡಿರುವ ಈ ದೂರು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಏನಿದು ಹೈ ಸೆಕ್ಯುರಿಟಿ‌ ನಂಬರ್ ಪ್ಲೇಟ್ ಕರ್ಮಕಾಂಡ? :
ವಾಹನ ಕಳ್ಳತನ ತಡೆಯುವುದು, ಕದ್ದ ವಾಹನಗಳನ್ನು ಬಳಸಿ ಕೃತ್ಯಗಳನ್ನು ನಡೆಸುವುದನ್ನು ತಡೆಯಲು ಹಾಗೂ ಕಾನೂನು ಉಲ್ಲಂಘನೆಯಂತಹಾ ಪ್ರಕರಣಗಳನ್ನು ಬೇಧಿಸಲು ಅನುಕೂಲವಾಗುವಂತೆ ಆಧುನಿಕ ವ್ಯವಸ್ಥೆಯಾಗಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ ಅಳವಡಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ವಾಹನಗಳ ನಂಬರ್ ಪ್ಲೇಟ್ ನಲ್ಲಿಯೇ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಈ ಪ್ರಕ್ರಿಯೆ ರಾಜ್ಯದಲ್ಲೂ ಜಾರಿಗೆ ಬರುತ್ತಿದೆ. ಆದರೆ ಈ ಯೋಜನೆ ಅನುಷ್ಠಾನ ಸಂದರ್ಭದಲ್ಲೇ ಅಕ್ರಮದ ವಾಸನೆ ಬಡಿದಿದೆ.

ಅತೀ ಸುರಕ್ಷಾ ನೋಂದಣಿ ಫಲಕ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಂಬಂಧ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ನಿಯಮಗಳನ್ನು ಸಿದ್ದಪಡಿಸಿದ್ದು, ಇದು ಕೇಂದ್ರ ಸರ್ಕಾರದ ಸೂಚನೆಗಳಿಗೆ ವಿರುದ್ಧವಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಸಾರಿಗೆ ಇಲಾಖೆ ಸಿದ್ಧಪಡಿಸಿರುವ ನಿಯಮಗಳಿಂದಾಗಿ ಇಡೀ ಯೋಜನೆಯೇ ಬುಡಮೇಲಾಗಲಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ ಎಂಬ ಆತಂಕವೂ ಎದುರಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಆರೋಪಿಸಿದೆ.

ವಿಶಿಷ್ಟ ತಂತ್ರಜ್ಞಾನದ ನಂಬರ್ ಪ್ಲೇಟ್ ತಯಾರಿಕೆಗೆ 20 ಕಂಪನಿಗಳಿಗೆ ಅವಕಾಶವಿದೆ :
ಹೆಚ್.ಎಸ್.ಆರ್.ಪಿ ಯೋಜನೆ ಜಾರಿಗೆ ಪೂರಕವಾಗಿ ದೇಶದಲ್ಲಿ ಹಲವಾರು ಕಂಪನಿಗಳು ಈ ವಿಶಿಷ್ಟ ತಂತ್ರಜ್ಞಾನದ ನಂಬರ್ ಪ್ಲೇಟ್ ಗಳನ್ನು ತಯಾರಿಸುತ್ತಿವೆ. ಈ ಪೈಕಿ ಸುಮಾರು 20 ಕಂಪನಿಗಳಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಆದರೆ ಕರ್ನಾಟಕದಲ್ಲಿ ಕೇವಲ ನಾಲ್ಕು ಸಂಸ್ಥೆಗಳಿಗೆ ಈ ಹೆಚ್.ಎಸ್.ಆರ್.ಪಿ ಫಲಕ ಪೂರೈಕೆಗೆ ಅನುಮತಿ ನೀಡಲು ರಹಸ್ಯ ಸಿದ್ಧತೆ ನಡೆದಿದೆ ಎಂಬ ಸುದ್ದಿಯೇ ವಿವಾದದ ಕೇಂದ್ರಬಿಂದು. ಭಾರೀ ಭ್ರಷ್ಟಾಚಾರದ ಉದ್ದೇಶದಿಂದ ಈ ರೀತಿಯ ಅಕ್ರಮಕ್ಕೆ ಹುನ್ನಾರ ನಡೆದಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವ್ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ರಾಮ್ ಅವರು ನೀಡಿರುವ ದೂರಿನಲ್ಲಿ ಬೆಳಕು ಚೆಲ್ಲಿದ್ದಾರೆ.

ಎಲ್ಲಾ ವಾಹನಗಳಲ್ಲಿ ಹೆಚ್.ಎಸ್.ಆರ್.ಪಿ ಸಾಧನ ಅಳವಡಿಕೆ ಕಡ್ಡಾಯವಾಗಿದ್ದು, ಅದನ್ನು ಪೂರೈಸಲು ವಾಹನ ತಯಾರಿಕಾ ಸಂಸ್ಥೆ ಅಥವಾ ಡೀಲರ್ ಗಳಿಗೆ ಅವಕಾಶ ಕಲ್ಪಿಸಲು ಸಾರಿಗೆ ಇಲಾಖೆಯಿಂದ ವೇದಿಕೆ ಸಿದ್ಧವಾಗಿದೆ ಎನ್ನಲಾಗಿದೆ. ವಾಸ್ತವ ಏನೆಂದರೆ, ವಾಹನ ತಯಾರಕಾರು ಹೆಚ್.ಎಸ್.ಆರ್.ಪಿ ತಯಾರಿಸುವುದಿಲ್ಲ, ಬದಲಾಗಿ ಇತರರ ತಯಾರಕರಿಂದ ಪಡೆದು ವಾಹನಗಳಿಗೆ ಅಳವಡಿಸಿ ಪೂರೈಸಬೇಕಿದೆ.

ಕೆಲವೇ ಕಂಪನಿಗಳಿಗೆ ಮಣೆ ಹಾಕಲು ರಹಸ್ಯ ತಯಾರಿ :
ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ 20 ಹೆಚ್.ಎಸ್.ಆರ್.ಪಿ ತಯಾರಿಕಾ ಸಂಸ್ಥೆಗಳ ಪೈಕಿ ಒಬ್ಬರ ನಿಯಂತ್ರಣದಲ್ಲೇ ಇರುವ ಕೇವಲ 4-5 ಕಂಪನಿಗಳ ಉತ್ಪನ್ನಗಳಿಗಷ್ಟೇ ಸಾರಿಗೆ ಇಲಾಖೆ ಅನುಮತಿ ನೀಡಲು ರಹಸ್ಯ ತಯಾರಿ ನಡೆದಿದೆ. ಈ ವಿಚಾರದಲ್ಲಿ ಪಾರದರ್ಶಕ ನಡೆ ಅನುಸರಿಸದೆ ಭಾರೀ ಪ್ರಮಾಣದ ಲಂಚದ ಆಸೆಗೆ ಬಿದ್ದು ಅಧಿಕಾರಿಗಳು ಹಾಗೂ ಪ್ರಭಾವಿಗಳ ಸಂಚಿನಿಂದಾಗಿ ಇಡೀ ಯೋಜನೆಯೇ ಹಾದಿ ತಪ್ಪುವ ಸಾಧ್ಯತೆಗಳಿವೆ ಎಂದು ಲೋಕೇಶ್ ರಾಮ್ ಅವರು ಈ ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿಗೆ ದೂರು ಸಲ್ಲಿಕೆಯಾದ ದಾಖಲೆ

ಬ್ರಹ್ಮಾಂಡ ಭ್ರಷ್ಟಾಚಾರದ ಹಾದಿ ಈ ರೀತಿ ಇದೆ..!
‘ಹೊಸ ವಾಹನಗಳಲ್ಲಿ ಹೆಚ್.ಎಸ್.ಆರ್.ಪಿ ಗೊಂದಲ ಇಲ್ಲ. ಆದರೆ ಹಳೆಯ ವಾಹನಗಳಿಗಷ್ಟೇ ಹೆಚ್.ಎಸ್.ಆರ್.ಪಿ ಸವಾಲು ಇರುವುದು. ದೇಶದಲ್ಲಿ ಪ್ರಸಕ್ತ ಇರುವ ಸುಮಾರು 30 ಕೋಟಿ ಹಳೆಯ ವಾಹನಗಳ ಪೈಕಿ ಕರ್ನಾಟಕದಲ್ಲೇ 2 ಕೋಟಿಗಳಷ್ಟು ವಾಹನಗಳಿವೆ ಎಂದು ಅಂದಾಜಿಸಲಾಗಿದೆ’.

‘ಇಷ್ಟೂ ವಾಹನಗಳಿಗೆ ಹೆಚ್.ಎಸ್.ಆರ್.ಪಿ ಅಳವಡಿಸಬೇಕಿದ್ದು, ಇದರ ಬೆಲೆ 400ರಿಂದ 950 ರೂಪಾಯಿವರೆಗೆ ಇದೆ. ಪ್ರತೀ ಹೆಚ್.ಎಸ್.ಆರ್.ಪಿಯಲ್ಲಿ ಶೇಕಡಾ 50ರಷ್ಟು ಲಾಭವಿದ್ದು ಸುಮಾರು 500 ಕೋಟಿ ರೂಪಾಯಿ ಲಾಭವನ್ನು ದೋಚಲು ಕೆಲವು ಕಂಪನಿಗಳು ಅಡ್ಡ ದಾರಿ ಹಿಡಿದಿವೆ. ಲಂಚದ ಆಸೆಗೆ ಬಿದ್ದು ಕೆಲವು ಅಧಿಕಾರಿಗಳು ಹಾಗೂ ಪ್ರಭಾವಿಗಳು ಭಾರೀ ಅಕ್ರಮಕ್ಕೆ ಮುಂದಾಗಿದ್ದಾರೆ’ ಎಂದು ಲೋಕೇಶ್ ರಾಮ್ ಅವರ ಆರೋಪ.

ಈ ನಡುವೆ, ‘ಹೆಚ್.ಎಸ್.ಆರ್.ಪಿಯನ್ನು ವಾಹನ ತಯಾರಿಕಾ ಸಂಸ್ಥೆಗಳು ಅಥವಾ ನಿರ್ದಿಷ್ಟ ಡೀಲರುಗಳೇ ವಿತರಿಸಬೇಕೆಂಬ ನಿಯಮ ಜಾರಿಗೆ ಬಂದರೆ ಅದು ಕೂಡಾ ಕಾನೂನು ಬಾಹಿರ. ಇದರಿಂದಾಗಿ ಸಾರ್ವಜನಿಕರು ತೊಂದರೆಗೊಳಗಾಗುತ್ತಾರೆ. ಹಾಗೂ ಕೆಲ ಮಧ್ಯವರ್ತಿ ನಿಯಂತ್ರಣಾ ಮಾಫಿಯಾ ಹುಟ್ಟಿಕೊಂಡು ಮಾರುಕಟ್ಟೆಯಲ್ಲಿ ಏಕಸ್ವಾಮ್ಯದ ಅಧಿಪತ್ಯ ಸ್ಥಾಪಿಸುತ್ತದೆ’ ಎಂಬ ಆತಂಕವನ್ನು ಲೋಕೇಶ್ ರಾಮ್ ವ್ಯಕ್ತಪಡಿಸಿದ್ದಾರೆ.

20 ಸಾವಿರ ಕುಟುಂಬ ಬೀದಿಗೆ ಬೀಳುವ ಆತಂಕ :
‘ರಾಜ್ಯದಲ್ಲಿ ಪ್ರಸ್ತುತ ಸುಮಾರು 20 ಸಾವಿರ ಮಂದಿ ಜೀವನೋಪಾಯಕ್ಕಾಗಿ ವಾಹನಗಳ ನಂಬರ್ ಪ್ಲೇಟ್ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಇದೀಗ ವಾಹನ ತಯಾರಕರು ಹಾಗೂ ಡೀಲರುಗಳೇ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ವಿತರಿಸಬೇಕೆಂಬ ನಿಯಮ ಜಾರಿಯಾದಲ್ಲಿ ಈ 20 ಸಾವಿರ ಕುಟುಂಬಗಳೂ ಬೀದಿಗೆ ಬೀಳಬಹುದು’ ಎನ್ನುತ್ತಾರೆ ಅವರು.

ಅಷ್ಟೇ ಅಲ್ಲ, ವಾಹನ ತಯಾರಕರು, ವಿತರಕರಷ್ಟೇ ಹೆಚ್.ಎಸ್.ಆರ್.ಪಿ ಪೂರೈಸುವ ನಿಯಮ ಜಾರಿಯಾಗಿದ್ದೇ ಆದಲ್ಲಿ ಅಂತಹಾ ವಾಹನ ಮಾಲೀಕರು ಬದಲಿ ಹೆಚ್.ಎಸ್.ಆರ್.ಪಿಗಾಗಿ ತಾವು ಹಿಂದೆ ಖರೀದಿಸಿದ ಸ್ಥಳಕ್ಕೆ ಹೋಗಬೇಕಾಗುತ್ತದೆ. ಇದರಿಂದಾಗಿ 500 ರೂಪಾಯಿಯ ಹೆಚ್.ಎಸ್.ಆರ್.ಪಿ ಖರೀದಿಸಲು ಸಾವಿರಾರು ರೂಪಾಯಿ ಖರ್ಚುಮಾಡಬೇಕೆ ಎಂಬ ಪ್ರಶ್ನೆ ಮೂಡಿದೆ.  ಒಂದೊಮ್ಮೆ ವಿತರಕರು ತಮ್ಮ ಸಂಸ್ಥೆಯನ್ನು ಮುಚ್ಚಿದ್ದರೆ ವಾಹನ ಮಾಲೀಕರಿಗೆ ಪರ್ಯಾಯ ಮಾರ್ಗ ಇಲ್ಲದಂತಾಗುತ್ತದೆ ಎಂಬುದು ಅವರ ಅಭಿಪ್ರಾಯ.

2001ರಲ್ಲೇ ಸುರಕ್ಷಾ ಕ್ರಮ ಜಾರಿ ಬಗ್ಗೆ ಚಿಂತನೆ :
2001ರಲ್ಲೇ ಈ ಸುರಕ್ಷಾ ಕ್ರಮ ಜಾರಿ ಬಗ್ಗೆ ಚಿಂತನೆ ನಡೆದಿತ್ತು. ಕಳೆದೊಂದು ದಶಕದಲ್ಲಿ ಈ ಯೋಜನೆ ಜಾರಿಯ ಪ್ರಕ್ರಿಯೆ ನಡೆಯಿತಾದರೂ, ಅಕ್ರಮದ ಆರೋಪ ಹಿನ್ನಲೆಯಲ್ಲಿ ಕಾನೂನು ಹೋರಾಟ ಹಾಗೂ ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ಅಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಈ ನಡುವೆ ವರ್ಷದ ಹಿಂದಷ್ಟೇ, ತಪ್ಪುಗಳನ್ನು ಸರಿಪಡಿಸುವುದಾಗಿ ಸರ್ಕಾರವು ಹೈಕೋರ್ಟಿಗೆ ತಿಳಿಸಿದೆ. ಆದರೆ, ಪ್ರಭಾವಿಗಳ ಗುಂಪು ನಿಗೂಢವಾಗಿ ತಂತ್ರಗಾರಿಕೆ ಮೂಲಕ ಯೋಜನೆಯನ್ನು ಕಬಳಿಸಲು ಪ್ರಯತ್ನವನ್ನು ಮುಂದುವರಿಸಿದೆ ಎಂದು ಅವರು ಈ ದೂರಿನ ಮೂಲಕ ನೂತನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ  ಗಮನಸೆಳೆದಿದ್ದಾರೆ.

ಸ್ಪೀಡ್ ಗವರ್ನರ್, ಸುರಕ್ಷಾ ಗ್ಲಾಸ್, ಇಂಧನ ಟ್ಯಾಂಕ್, ಟೈರ್ ರೀತಿಯಲ್ಲೇ ಹೆಚ್.ಎಸ್.ಆರ್.ಪಿ ಕೂಡಾ ವಾಹನಗಳ ಸುರಕ್ಷಾ ಸಾಧನ. ಹೀಗಿರುವಾಗ ಇದನ್ನು ಪೂರೈಸುವ ಅವಕಾಶ ಕೆಲವೇ ಕಂಪನಿಗಳಿಗಷ್ಟೇ ಸೀಮಿತಗೊಳಿಸುವ ಕ್ರಮ ಸರಿಯಾದುದಲ್ಲ. ಎಲ್ಲಾ ಅನುಮೋದಿತ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ನೀಡುವ ಅವಕಾಶ ಸಿಗಬೇಕಿದೆ.

ಒಂದು ವೇಳೆ ಸರ್ಕಾರ ಅಥವಾ ಅಧಿಕಾರಿಗಳು ಒಳ ಒಪ್ಪಂದ ಮಾಡಿ ನಿರ್ದಿಷ್ಟ ಕಂಪೆನಿಗಳಿಗಷ್ಟೇ ಹೆಚ್ ಎಸ್ ಆರ್ ಪಿ ಪೂರೈಸುವ ಅವಕಾಶ ನೀಡಿದಲ್ಲಿ, ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಸಾಧನವನ್ನು ಖರೀದಿಸುವ ಗ್ರಾಹಕನ ಆಯ್ಕೆ ಸ್ವಾತಂತ್ರವನ್ನೂ ಮೊಟಕುಗೊಳಿಸಿದಂತಾಗುತ್ತದೆ ಎಂದಿರುವ ಲೋಕೇಶ್ ರಾಮ್, ಈ ಸಂಬಂಧ ಭ್ರಷ್ಟಾಚಾರ ಮುಕ್ತವಾಗಿ ಯೋಜನೆ ಜಾರಿಯಾಗಬೇಕು, ಎಲ್ಲಾ ಅನುಮೋದಿತ ಕಂಪನಿಗಳ ಹೆಚ್ ಎಸ್ ಆರ್ ಪಿ ವಿತರಣೆಗೆ ರಾಜ್ಯದಲ್ಲಿ ಅವಕಾಶ ಸಿಗಬೇಕು, ಜನಸ್ನೇಹಿ ವ್ಯವಸ್ಥೆಯಲ್ಲಿ ಸ್ವಉದ್ಯೋಗಾಕಾಂಕ್ಷಿಗಳಿಗೂ ಅವಕಾಶ ಸಿಗುವಂತೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ವಿವಿ ವಿದ್ಯಾರ್ಥಿಗಳ ಒಕ್ಕೂಟ ಸಿಎಂ ಹಾಗೂ ಸರ್ಕಾರವನ್ನು ಆಗ್ರಹಿಸಿದೆ.

WhatsApp Join our WhatsApp Channel
Previous Post

BJP Govt. Corruption Enquiry | ಹಿಂದಿನ ಸರ್ಕಾರದ ಪ್ರಮುಖ ಹಗರಣಗಳ ತನಿಖೆ ನಡೆಸುತ್ತೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Next Post

Gruha Jyothi Scheme | ಗೃಹ ಜ್ಯೋತಿ ಯೋಜನೆ : ಕಳೆದ 10 ದಿನಗಳಲ್ಲಿ 70.05 ಲಕ್ಷ ಗ್ರಾಹಕರ ನೋಂದಣಿ

Next Post

Gruha Jyothi Scheme | ಗೃಹ ಜ್ಯೋತಿ ಯೋಜನೆ : ಕಳೆದ 10 ದಿನಗಳಲ್ಲಿ 70.05 ಲಕ್ಷ ಗ್ರಾಹಕರ ನೋಂದಣಿ

KMF New MD | ಕೆಎಂಎಫ್ ವ್ಯವಸ್ಥಾಪಕ‌ ನಿರ್ದೇಶಕರಾಗಿ‌ ಎಂ.ಕೆ.ಜಗದೀಶ್ ನೇಮಕ

Please login to join discussion

Like Us on Facebook

Follow Us on Twitter

Recent News

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026

ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

April 27, 2026
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group