Tuesday, September 8, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

    IST | ಒನ್ ನೇಷನ್, ಒನ್ ಟೈಮ್: 6 ತಿಂಗಳಲ್ಲಿ ದೇಶಾದ್ಯಂತ ಕಡ್ಡಾಯವಾಗಲಿದೆ ‘ಭಾರತೀಯ ಪ್ರಮಾಣಿತ ಸಮಯ’

    ಗ್ರಾ.ಪಂ ಸೇವೆ, ಇ-ಸ್ವತ್ತು ಅಹವಾಲಿಗೆ ಶೀಘ್ರವೇ ಆನ್‌ಲೈನ್ ಆ್ಯಪ್: ಸಚಿವ ಈಶ್ವರ ಖಂಡ್ರೆ ಸೂಚನೆ

    Kudremukh Neelakurinji | ​ಕುದುರೆಮುಖ ಬೆಟ್ಟಗಳಲ್ಲಿ ನೀಲಕುರಿಂಜಿ ವೈಭವ

  • Bengaluru Focus

    ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

    Railway News | ಶಿವಮೊಗ್ಗ-ಬೆಂಗಳೂರು-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಶೀಘ್ರ?

    GBA News | ಕೋರಮಂಗಲದಲ್ಲಿ ಅತ್ಯಾಧುನಿಕ ಘನ ತ್ಯಾಜ್ಯ ಕಲಿಕಾ ಕೇಂದ್ರ ಆರಂಭ: ‘ಕಸದಿಂದ ರಸ’ಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

    ಕಾವೇರಿ 6ನೇ ಹಂತ: “₹7,000 ಕೋಟಿ ಲೂಟಿಗೆ ಸ್ಕೆಚ್” –  ಆರ್.ಅಶೋಕ್ ಗಂಭೀರ ಆರೋಪ

    Namma Metro Purple Line

    Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಬೆಂಗಳೂರಿಗೆ ಬಿಗ್ ಗಿಫ್ಟ್: ಬಿಎಂಟಿಸಿಗೆ ಹಂತ ಹಂತವಾಗಿ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    2021ರ ಪಾರ್ಕಿಂಗ್ ನೀತಿಯಡಿ ಹೊಸ ಕರಡು ನಿಯಮ ಪ್ರಕಟ: ಕಟ್ಟಡದಲ್ಲಿ ಪಾರ್ಕಿಂಗ್ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಸಿದ್ರೆ ಕಠಿಣ ಕ್ರಮ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

GBA News | ಜಿಬಿಎ ವ್ಯಾಪ್ತಿಯಲ್ಲಿ ರಸ್ತೆ ಸುಧಾರಣೆಗೆ ಮಾಸ್ಟರ್ ಪ್ಲಾನ್: ನಾಳೆಯಿಂದಲೇ ರಸ್ತೆಯಲ್ಲಿನ ಅನಾಥ ವಾಹನಗಳ ಟೋಯಿಂಗ್ ಆಪರೇಷನ್

ರಸ್ತೆ ಗುಣಮಟ್ಟ ಕಾಪಾಡಲು ಪ್ರತಿ ಪಾಲಿಕೆಗೂ 'ರಸ್ತೆ ಗುಂಡಿ ಮುಚ್ಚುವ ಯಂತ್ರ' ಖರೀದಿ : ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್

by Bengaluru Wire Desk
April 7, 2026
in Bengaluru Focus, Public interest
Reading Time: 1 min read
0

ಬೆಂಗಳೂರು, ಏ.07 www.bengaluruwire.com: ಸಿಲಿಕಾನ್ ಸಿಟಿಯ ರಸ್ತೆಗಳ ಹಣೆಬರಹ ಬದಲಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಜ್ಜಾಗಿದೆ. 

ಜಿಬಿಎ ವ್ಯಾಪ್ತಿಯ ಐದೂ ನಗರ ಪಾಲಿಕೆಗಳಿಗೆ ತಲಾ ಒಂದರಂತೆ ಅತ್ಯಾಧುನಿಕ ರಸ್ತೆ ಗುಂಡಿ ಮುಚ್ಚುವ ಯಂತ್ರಗಳನ್ನು ಖರೀದಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಸೋಮವಾರ ನಡೆದ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಬೆಂಗಳೂರಿನ ಮೂಲಭೂತ ಸೌಕರ್ಯಗಳ ಕುರಿತು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ರಸ್ತೆ ಗುಂಡಿಗಳಿಗೆ ಮುಕ್ತಿ: ಪಾಲಿಕೆಗೊಂದು ಯಂತ್ರ:

ನಗರದಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನು ಶಾಶ್ವತವಾಗಿ ಪರಿಹರಿಸಲು ಮತ್ತು ತುರ್ತು ದುರಸ್ತಿ ಕಾರ್ಯಗಳಿಗಾಗಿ ಆಯಾ ನಗರ ಪಾಲಿಕೆಗಳೇ ಸ್ವಂತ ಯಂತ್ರಗಳನ್ನು ಹೊಂದುವುದು ಅನಿವಾರ್ಯ ಎಂದು ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ. ಜಿಬಿಎ ಅಡಿಯಲ್ಲಿ ಬರುವ ಐದು ಪಾಲಿಕೆಗಳಲ್ಲಿ ಇನ್ನು ಮುಂದೆ ರಸ್ತೆ ಅಗೆಯುವ ಮತ್ತು ಪುನಶ್ಚೇತನ ಮಾಡುವ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಈ ಯಂತ್ರಗಳು ಸಹಕಾರಿಯಾಗಲಿವೆ.

ಅಗೆದ ರಸ್ತೆ ಮುಚ್ಚದಿದ್ದರೆ ದಂಡದ ಬಿಸಿ:

ವಿವಿಧ ಇಲಾಖೆಗಳು (ಬೆಸ್ಕಾಂ, ಜಲಮಂಡಳಿ, ಗೇಲ್ ಗ್ಯಾಸ್ ಇತ್ಯಾದಿ) ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆಯುತ್ತವೆ. ಆದರೆ, ಕೆಲಸ ಮುಗಿದ ಬಳಿಕ ರಸ್ತೆಯನ್ನು ಮೊದಲಿನ ಸ್ಥಿತಿಗೆ ತರುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. “ಮಾರ್ಕ್ಸ್ ಸಾಫ್ಟ್‌ವೇರ್ ಮೂಲಕ ಅನುಮತಿ ಪಡೆದು ರಸ್ತೆ ಅಗೆದ ನಂತರ, ನಿಗದಿತ ಸಮಯದಲ್ಲಿ ದುರಸ್ತಿ ಮಾಡದಿದ್ದರೆ ಪಾಲಿಕೆಯೇ ಆ ಕೆಲಸ ಮಾಡಲಿದೆ. ಆದರೆ, ಅದರ ಸಂಪೂರ್ಣ ವೆಚ್ಚವನ್ನು ಸಂಬಂಧಪಟ್ಟ ಇಲಾಖೆ ಅಥವಾ ಸಂಸ್ಥೆಗಳಿಂದಲೇ ವಸೂಲಿ ಮಾಡಲಾಗುವುದು,” ಎಂದು ಮಹೇಶ್ವರ್ ರಾವ್ ಎಚ್ಚರಿಸಿದ್ದಾರೆ.

ಅನಾಥ ವಾಹನಗಳಿಗೆ ಟೋಯಿಂಗ್ ಬಿಸಿ: ನಾಳೆಯಿಂದಲೇ ಕಾರ್ಯಾಚರಣೆ

ಬೆಂಗಳೂರಿನ ರಸ್ತೆ ಬದಿಗಳಲ್ಲಿ ತಿಂಗಳುಗಟ್ಟಲೆ ನಿಲ್ಲಿಸಿರುವ ಅನಾಥ ವಾಹನಗಳು ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿವೆ. ಇಂತಹ ವಾಹನಗಳನ್ನು ತೆರವುಗೊಳಿಸಲು ನಾಳೆಯಿಂದಲೇ (ಏಪ್ರಿಲ್ 7) ಟೋಯಿಂಗ್ ಕಾರ್ಯ ಆರಂಭವಾಗಲಿದೆ. ಈಗಾಗಲೇ ಉತ್ತರ ಮತ್ತು ಕೇಂದ್ರ ನಗರ ಪಾಲಿಕೆಗಳು ಟೋಯಿಂಗ್ ವಾಹನಗಳನ್ನು ಸಂಚಾರಿ ಪೊಲೀಸರಿಗೆ ಹಸ್ತಾಂತರಿಸಿದ್ದು, ಕಾರ್ಯಾಚರಣೆಗೆ ಚಾಲನೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಳೆಗಾಲದ ಸಿದ್ಧತೆ: ಹೂಳೆತ್ತುವ ಕಾರ್ಯಕ್ಕೆ ಚುರುಕು:

ಮುಂಗಾರು ಪೂರ್ವ ಮಳೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ತಡೆಯಲು ರಾಜಕಾಲುವೆಗಳು ಮತ್ತು ಶೋಲ್ಡರ್ ಡ್ರೈನ್‌ಗಳಲ್ಲಿನ ಹೂಳೆತ್ತುವ ಕಾರ್ಯವನ್ನು ತಕ್ಷಣವೇ ಪೂರ್ಣಗೊಳಿಸಲು ಆದೇಶಿಸಲಾಗಿದೆ.

ಹೆಬ್ಬಾಳ ಜಂಕ್ಷನ್ ಅಭಿವೃದ್ಧಿ ಮತ್ತು ಕೆ-100 ಸ್ವಚ್ಛತೆ:

ನಗರದ ಪ್ರವೇಶ ದ್ವಾರವಾದ ಹೆಬ್ಬಾಳ ಜಂಕ್ಷನ್‌ನಲ್ಲಿ ಟನಲ್ ರಸ್ತೆ, ಮೆಟ್ರೋ ಮತ್ತು ಸಬ್-ಅರ್ಬನ್ ರೈಲು ಯೋಜನೆಗಳು ಏಕಕಾಲಕ್ಕೆ ನಡೆಯುತ್ತಿವೆ. ಈ ಎಲ್ಲಾ ಕಾಮಗಾರಿಗಳ ನಡುವೆ ಸಮನ್ವಯ ಸಾಧಿಸಲು ಜಂಟಿ ಸಮೀಕ್ಷೆ ನಡೆಸಿ ಸಮಗ್ರ ನಕ್ಷೆ (Integrated Map) ಸಿದ್ಧಪಡಿಸಲು ಸೂಚಿಸಲಾಗಿದೆ. ಅತ್ತ, ಕೆ-100 ರಾಜಕಾಲುವೆಗೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ತಡೆಯಲು ಜಲಮಂಡಳಿಗೆ ನಿರ್ದೇಶನ ನೀಡಲಾಗಿದೆ.

ಸಭೆಯಲ್ಲಿ ಬಿಡಿಎ ಆಯುಕ್ತ ಮಣಿವಣ್ಣನ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವ ಭರವಸೆ ನೀಡಿದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಕೇಂದ್ರದ ಅಸಮರ್ಥತೆಯಿಂದ 5 ಲಕ್ಷ ಆಟೋ ಚಾಲಕರು ಬೀದಿಗೆ: ಮೋದಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ವಾಗ್ದಾಳಿ

Next Post

Interesting news | ಬೆಳಗಾವಿ: ಹೆಣ್ಣು ಮಗು ಹುಟ್ಟಿದರೆ ಈಗ ಹಬ್ಬ: ಹೂಲಿ ಗ್ರಾ.ಪಂನಿಂದ ₹5500 ರಾಯಲ್ ಗಿಫ್ಟ್

Next Post

Interesting news | ಬೆಳಗಾವಿ: ಹೆಣ್ಣು ಮಗು ಹುಟ್ಟಿದರೆ ಈಗ ಹಬ್ಬ: ಹೂಲಿ ಗ್ರಾ.ಪಂನಿಂದ ₹5500 ರಾಯಲ್ ಗಿಫ್ಟ್

GAS OTP | ಬಾವಿಗೆ ಬಿದ್ದ ವೃದ್ಧನ ಪ್ರಾಣ ಉಳಿಸಿದ 'ಗ್ಯಾಸ್ ಓಟಿಪಿ': ಮೂರು ದಿನಗಳ ಬಳಿಕ ಪವಾಡ ಸದೃಶ ರಕ್ಷಣೆ!

Please login to join discussion

Like Us on Facebook

Follow Us on Twitter

Recent News

ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

September 8, 2026

Railway News | ಶಿವಮೊಗ್ಗ-ಬೆಂಗಳೂರು-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಶೀಘ್ರ?

September 8, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

September 8, 2026

Railway News | ಶಿವಮೊಗ್ಗ-ಬೆಂಗಳೂರು-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಶೀಘ್ರ?

September 8, 2026

GBA News | ಕೋರಮಂಗಲದಲ್ಲಿ ಅತ್ಯಾಧುನಿಕ ಘನ ತ್ಯಾಜ್ಯ ಕಲಿಕಾ ಕೇಂದ್ರ ಆರಂಭ: ‘ಕಸದಿಂದ ರಸ’ಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

September 7, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d