Friday, October 23, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ‘ಆಲಿಸು ಕಂದಾ’: 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಭಾಗ್ಯ

    ಮೈಸೂರು ನಂದಿಧ್ವಜ ಪೂಜೆಗೆ ಸಚಿವರ ಪ್ರವೇಶಕ್ಕೆ ತಡೆ: ವಿಚಾರಣೆಗೆ ಸಿಎಂ ಆದೇಶ; ದೆಹಲಿಯಲ್ಲಿ ಬರಗಾಲ, ನೀರಾವರಿ ಯೋಜನೆಗಳ ಚರ್ಚೆ

    ಶಿವಮೊಗ್ಗ ದಸರಾದಲ್ಲಿ ಭಾರೀ ಅವಾಂತರ: ಬೆಳ್ಳಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ದಿಢೀರ್ ಓಟ, ಅಂಬಾರಿ ಧ್ವಂಸ

    ಬೆಂಗಳೂರು ದಕ್ಷಿಣದಲ್ಲಿ ಸಂಜೆ ವೇಳೆಯೂ ಕಸ ಸಂಗ್ರಹಣೆ ಆರಂಭ: ಉದ್ಯೋಗಿಗಳಿಗೆ ಬಿಗ್ ರಿಲೀಫ್

    ಅಲೆಯಲ್ಲಿ ಕೊಚ್ಚಿಹೋಗುತ್ತಿದ್ದರೂ ಮಗುವನ್ನು ಗಮನಿಸದೆ ರೀಲ್ಸ್ ಮಾಡಿದ ದಂಪತಿ: ವಿಡಿಯೋ ವೈರಲ್!

    Defence News | ಹಿಮಾಲಯ ಸೀಳಿ 16,700 ಅಡಿ ಎತ್ತರದಲ್ಲಿ ‘ನಿಮ್ಮು–ಪದಮ್–ದಾರ್ಚಾ’ ರಸ್ತೆ ಲೋಕಾರ್ಪಣೆ: ಇತಿಹಾಸ ಬರೆದ ಬಿಆರ್‌ಒ

    ಮೈಸೂರು ದಸರಾದಲ್ಲಿ ಐತಿಹಾಸಿಕ ಕಂಬಳ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್: ದಸರಾ ರೀಲ್ಸ್ ಸ್ಪರ್ಧೆ ಘೋಷಣೆ

    ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಇನ್ಮುಂದೆ ‘ಕರ್ತವ್ಯ’ ಆ್ಯಪ್ ಹಾಜರಾತಿ ಕಡ್ಡಾಯ: ಆ್ಯಪ್ ಬಳಸದಿದ್ದರೆ ವೇತನ ಕಡಿತ

    ಸಕಾಲ ಸೇವೆ ವಿಳಂಬಕ್ಕೆ ಅಧಿಕಾರಿಗಳಿಗೆ 1,500 ರೂ. ದಂಡ: ಸುಳ್ಳು ದೂರು ಕೊಟ್ಟರೆ ನಾಗರಿಕರಿಗೂ ತಪ್ಪಿದ್ದಲ್ಲ ಬರೆ

  • Bengaluru Focus

    ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

    ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

    ಬೆಂಗಳೂರಿನ ಜಂಟಿ ಆಸ್ತಿ ಮಾಲೀಕರೇ ಇನ್ನು ಮುಂದೆ ಇ-ಆಸ್ತಿ 2.0 ನಲ್ಲಿ ನಿವೇಶನ ಉಪ-ವಿಭಜನೆಗೆ ಅವಕಾಶ

    ಹಬ್ಬದ ಸೀಸನ್‌ನಲ್ಲಿ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ: 80 ಸಿಹಿ ತಿಂಡಿ ಮಳಿಗೆಗಳ ಮೇಲೆ ದಾಳಿ, 10 ಘಟಕಗಳಿಗೆ ನೋಟಿಸ್

    ಪ್ರತಿವರ್ಷ ಅಕ್ಟೋಬರ್ 21ಕ್ಕೆ ‘ಶ್ರೀ ಮಧ್ವಾಚಾರ್ಯ ಜಯಂತಿ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

KMF Nandini Ghee & Butter |  ನಂದಿನಿ ತುಪ್ಪ, ಬೆಣ್ಣೆ ದರ ಮತ್ತೆ ಏರಿಕೆ: ನಾಳೆಯಿಂದಲೇ ಜಾರಿ

ಕೆಎಂಎಫ್‌ನಿಂದ ಪ್ರತಿ ಲೀಟರ್ ತುಪ್ಪದ ಮೇಲೆ ₹15 ಹಾಗೂ ಒಂದು ಕೆಜಿ ಬೆಣ್ಣೆ ಮೇಲೆ ₹50 ದಿಢೀರ್ ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ದರಗಳು ಜುಲೈ 24ರಿಂದಲೇ ಜಾರಿಗೆ ಬರಲಿವೆ.

by Bengaluru Wire Desk
July 23, 2026
in Bengaluru Focus, Public interest
Reading Time: 1 min read
0

ಬೆಂಗಳೂರು, ಜು.23 www.bengaluruwire.com: ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ಮತ್ತೆ ತಟ್ಟಿದೆ. ಕರ್ನಾಟಕ ಹಾಲು ಮಹಾಮಂಡಳವು (KMF) ತನ್ನ ಜನಪ್ರಿಯ ‘ನಂದಿನಿ’ ಬ್ರ್ಯಾಂಡ್‌ನ ತುಪ್ಪ ಹಾಗೂ ಬೆಣ್ಣೆ ದರವನ್ನು ದಿಢೀರ್ ಆಗಿ ಹೆಚ್ಚಿಸಿ ಆದೇಶ ಹೊರಡಿಸಿದೆ. ನೂತನ ದರಗಳು ಜುಲೈ 24 ರಿಂದಲೇ ಜಾರಿಗೆ ಬರಲಿವೆ ಎಂದು ಕೆಎಂಎಫ್ ಮೂಲಗಳು ಖಚಿತಪಡಿಸಿವೆ.

​ಹೊಸ ದರಗಳ ವಿವರ ಇಲ್ಲಿದೆ:

​ಗ್ರಾಹಕರು ಇನ್ನು ಮುಂದೆ ಒಂದು ಲೀಟರ್ ಸ್ಯಾಚೆಟ್ ತುಪ್ಪ ಹಾಗೂ ಒಂದು ಕೆಜಿ ಬೆಣ್ಣೆ ಖರೀದಿಸಲು ಜೇಬಿಗೆ ಕತ್ತರಿ ಬೀಳಲಿದೆ.

​ನಂದಿನಿ ತುಪ್ಪ (Ghee): ಪ್ರತಿ ಲೀಟರ್‌ ತುಪ್ಪದ ದರವನ್ನು ₹15 ರಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ ₹700 ಇದ್ದ ಲೀಟರ್ ತುಪ್ಪದ ಬೆಲೆ ಈಗ ₹715 ಕ್ಕೆ ಏರಿಕೆಯಾಗಿದೆ.

​ನಂದಿನಿ ಬೆಣ್ಣೆ (Butter): ಪ್ರತಿ ಕೆಜಿ ಬೆಣ್ಣೆಯ ದರದಲ್ಲಿ ಭಾರಿ ಅಂದರೆ ₹50 ರಷ್ಟು ಹೆಚ್ಚಳ ಮಾಡಲಾಗಿದೆ. ಈ ಹಿಂದೆ ₹610 ಇದ್ದ ಬೆಣ್ಣೆ ದರ ನಾಳೆಯಿಂದ ₹660 ಕ್ಕೆ ಮುಟ್ಟಲಿದೆ.

​ಕಳೆದ ವರ್ಷವೂ ಏರಿಕೆಯಾಗಿದ್ದ ದರ:

​ಕೆಎಂಎಫ್ ಪದೇ ಪದೇ ದರ ಏರಿಕೆ ಮಾಡುತ್ತಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ವರ್ಷ ಅಂದರೆ 2025ರ ನವೆಂಬರ್ 7ರಂದು ಲೀಟರ್ ತುಪ್ಪಕ್ಕೆ ಬರೋಬ್ಬರಿ ₹90 ಹಾಗೂ ಕೆಜಿ ಬೆಣ್ಣೆಗೆ ₹38 ರಷ್ಟು ಏರಿಕೆ ಮಾಡಲಾಗಿತ್ತು. ಆ ಬಳಿಕ ಲೀಟರ್ ತುಪ್ಪದ ದರವು ₹700 ಹಾಗೂ ಬೆಣ್ಣೆ ಕೆಜಿ ದರವು ₹610 ತಲುಪಿತ್ತು. ಇದೀಗ ಕೇವಲ ಕೆಲವೇ ತಿಂಗಳ ಅಂತರದಲ್ಲಿ ಮತ್ತೆ ಬೆಲೆ ಏರಿಕೆ ಮಾಡಲಾಗಿದೆ.

​ಹೋಟೆಲ್, ಬೇಕರಿ ತಿನಿಸುಗಳ ಬೆಲೆ ಏರಿಕೆ ಭೀತಿ:

​ನಂದಿನಿ ತುಪ್ಪ ಹಾಗೂ ಬೆಣ್ಣೆಯನ್ನು ಹೋಟೆಲ್‌ಗಳು, ದರ್ಶಿನಿಗಳು, ಬೇಕರಿಗಳು ಹಾಗೂ ಸಿಹಿತಿಂಡಿ (ಸ್ವೀಟ್ಸ್) ತಯಾರಕರು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಇದೀಗ ಪ್ರಮುಖ ಕಚ್ಚಾವಸ್ತುಗಳ ದರ ಏರಿಕೆಯಾಗಿರುವುದರಿಂದ, ಹೋಟೆಲ್ ಊಟ, ತಿಂಡಿ ಮತ್ತು ಬೇಕರಿ ಉತ್ಪನ್ನಗಳ ಬೆಲೆಯಲ್ಲೂ ಏರಿಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ದರ ಏರಿಕೆ ಪರೋಕ್ಷವಾಗಿ ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರಲಿದೆ.

ನಂದಿನಿ ತುಪ್ಪದ ದರ ಶೇ.3 ರ ಒಳಗಿದೆ, ತಿಂಡಿ ಬೆಲೆ ಏರಿಕೆ ಮಾಡಲ್ಲ:

“ಇತರೆ ಸಂಸ್ಥೆಗಳಿಗೆ ಹೋಲಿಸಿದರೆ ನಂದಿನಿ ತುಪ್ಪದ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆಯಿದೆ. ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟ ಹಾಗೂ ಕಡಿಮೆ ದರದಲ್ಲಿ ದೊರಕುವ ನಂದಿನಿ ತುಪ್ಪದಲ್ಲಿ ಲೀಟರ್ ಗೆ ₹15 ಪರಿಷ್ಕೃತಗೊಳಿಸಿರುವುದು ಶೇ.3ರ ಏರಿಕೆಗಿಂತ ಕಡಿಮೆಯಿದೆ. ಹೀಗಾಗಿ ಹೋಟೆಲ್ ಗಳಲ್ಲಿ ತಿಂಡಿ ದರದಲ್ಲಿ ವ್ಯತ್ಯಾಸ ಮಾಡುವುದಿಲ್ಲ” ಎಂದು ಬೆಂಗಳೂರು ಹೊಟೇಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

Next Post

PM E-Drive | ಪಿಎಂ ಇ-ಡ್ರೈವ್: ಜು.27ರಂದು ಚಾರ್ಜ್ ಪಾಯಿಂಟ್ ಅಪರೇಟರ್‌ಗಳ ಸಮಾಲೋಚನಾ ಸಭೆ ಕರೆದ ಬೆಸ್ಕಾಂ

Next Post

PM E-Drive | ಪಿಎಂ ಇ-ಡ್ರೈವ್: ಜು.27ರಂದು ಚಾರ್ಜ್ ಪಾಯಿಂಟ್ ಅಪರೇಟರ್‌ಗಳ ಸಮಾಲೋಚನಾ ಸಭೆ ಕರೆದ ಬೆಸ್ಕಾಂ

ಗ್ರಾ.ಪಂ. ವ್ಯಾಪ್ತಿಯ ಹೆದ್ದಾರಿ ಬದಿಯ ಮಳಿಗೆ, ಜಾಹೀರಾತುಗಳಿಗೆ ಶೀಘ್ರದಲ್ಲೇ ತಟ್ಟಲಿದೆ ತೆರಿಗೆ ಬಿಸಿ

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

October 23, 2026

‘ಆಲಿಸು ಕಂದಾ’: 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಭಾಗ್ಯ

October 22, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

October 23, 2026

‘ಆಲಿಸು ಕಂದಾ’: 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಭಾಗ್ಯ

October 22, 2026

ಮೈಸೂರು ನಂದಿಧ್ವಜ ಪೂಜೆಗೆ ಸಚಿವರ ಪ್ರವೇಶಕ್ಕೆ ತಡೆ: ವಿಚಾರಣೆಗೆ ಸಿಎಂ ಆದೇಶ; ದೆಹಲಿಯಲ್ಲಿ ಬರಗಾಲ, ನೀರಾವರಿ ಯೋಜನೆಗಳ ಚರ್ಚೆ

October 22, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d