Saturday, June 13, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW Special | ಬೆಂಗಳೂರಿನ ತ್ಯಾಜ್ಯ ನೀರಿಗೆ ಜೀವ ತುಂಬುವ ‘ವೃಷಭಾವತಿ ಕಣಿವೆ ಯೋಜನೆ’: ಮೊದಲ ಹಂತ ಶೇ.50ರಷ್ಟು ಪೂರ್ಣ

ಮೊದಲ ಹಂತದ ಯೋಜನಾ ಮೊತ್ತ ​ರೂ. 1,081 ಕೋಟಿ : ಮೂರು ಹಂತಗಳಿಂದ 244 ಕೆರೆಗಳಿಗೆ ನೀರು ಹರಿಸುವ ಗುರಿ; 2026ರ ಜುಲೈಗೆ ಮೊದಲ ಹಂತ ಪೂರ್ಣದ ಗಡುವು

by Bengaluru Wire Desk
October 28, 2025
in BW Special, News Wire
Reading Time: 2 mins read
0

ಬೆಂಗಳೂರು, ಅ.28 www.bengaluruwire.com : ಜಲಸಂರಕ್ಷಣೆ ಮತ್ತು ಅಂತರ್ಜಲ ಅಭಿವೃದ್ಧಿಗೆ ಬೃಹತ್ ಹೆಜ್ಜೆ ಇಟ್ಟಿರುವ ಸಣ್ಣ ನೀರಾವರಿ ಇಲಾಖೆಯ ಮಹತ್ವದ ‘ವೃಷಭಾವತಿ ಕಣಿವೆ ಯೋಜನೆ’ಯು ನಿರೀಕ್ಷಿತ ವೇಗದಲ್ಲಿ ಪ್ರಗತಿ ಕಾಣುತ್ತಿದೆ. ಮೂರು ಹಂತಗಳ ಪೈಕಿ ಮೊದಲ ಹಂತವು ಈತನಕ ಶೇ.50ರಷ್ಟಕ್ಕೂ ಹೆಚ್ಚಿನ ಪ್ರಗತಿ ಕಂಡಿದೆ.

ಬೆಂಗಳೂರು ಜಲಮಂಡಳಿ (BWSSB) ವತಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ದಶಲಕ್ಷ ಲೀ. ನೀರನ್ನು ಅಂದರೆ ಸುಮಾರು 4 ಟಿಎಂಸಿ ನೀರು ಬಳಸಿಕೊಂಡು ಈ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು ಒಟ್ಟು 3 ಹಂತಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಒಟ್ಟು 244 ಕೆರೆಗಳಿಗೆ ನೀರನ್ನು ಹರಿಸಲು ಉದ್ದೇಶಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶ ಅಂತರ್ಜಲ ಮಟ್ಟವನ್ನು ಅಭಿವೃದ್ಧಿಪಡಿಸುವುದಾಗಿದೆ.

ಮೊದಲನೇ ಹಂತದ ಯೋಜನೆಯಡಿ ಪಂಪಿಂಗ್ ಸ್ಟೇಷನ್ ಹಾಗೂ ಪೈಪ್ ಲೈನ್ ಹಾದುಹೋಗುವ ನಕ್ಷೆ.

ಮೊದಲ ಹಂತದ ಪ್ರಗತಿ :

ಯೋಜನೆಯ ಮೊದಲನೇ ಹಂತವು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿನ 70 ಕೆರೆಗಳಿಗೆ 2 ಲಿಫ್ಟ್‌ಗಳ ಮೂಲಕ ನೀರನ್ನು ಹರಿಸುವ ಕಾಮಗಾರಿಯನ್ನು ಒಳಗೊಂಡಿದೆ.

 ವೆಚ್ಚ ಮತ್ತು ಗುತ್ತಿಗೆದಾರರು: ಮೊದಲ ಹಂತದ ಯೋಜನೆಯ ಅಂದಾಜು ಮೊತ್ತ ₹1,081.00 ಕೋಟಿ. ಈ ಕಾಮಗಾರಿಯ ಗುತ್ತಿಗೆಯನ್ನು ಶಂಕರನಾರಾಯಣ ಕನ್ಸ್‌ಟ್ರಕ್ಷನ್‌ ಸಂಸ್ಥೆಗೆ ನೀಡಲಾಗಿದೆ.

ನಾಯಂಡಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಪಂಪಿಂಗ್ ಸ್ಟೇಷನ್.

 ಯೋಜನೆಯ ಅವಧಿ: ಒಪ್ಪಂದದ ಪ್ರಕಾರ ಯೋಜನೆಯ ಅವಧಿ 36 ತಿಂಗಳುಗಳು ಮತ್ತು 5 ವರ್ಷಗಳ ನಿರ್ವಹಣೆಯನ್ನು ಒಳಗೊಂಡಿದೆ. ಟೆಂಡರ್ ಕರಾರಿನಂತೆ ಮೊದಲನೇ ಹಂತದ ಯೋಜನೆಯನ್ನು ಜುಲೈ-2026 ರಲ್ಲಿ ಪೂರ್ಣಗೊಳಿಸಬೇಕಾಗಿದೆ.

ಪ್ರಸ್ತುತ ಪ್ರಗತಿ: ಯೋಜನೆಯು ಜುಲೈ 2023 ರಲ್ಲಿ ಪ್ರಾರಂಭವಾಗಿದ್ದು, ಈತನಕ ಶೇ.50 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದೆ. ಒಟ್ಟಾರೆ 103.20 ಕಿ.ಮೀ ಪೈಪ್‌ಲೈನ್ ಉದ್ದದಲ್ಲಿ, 81.3 ಕಿ.ಮೀ ಉದ್ದದ ಪೈಪ್‌ಗಳನ್ನು ಪೂರೈಕೆ ಮಾಡಲಾಗಿದ್ದು, 39.50 ಕಿ.ಮೀ ಉದ್ದದ ಪೈಪ್‌ಲೈನ್ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.

ವೃಷಭಾವತಿ ಕಣಿವೆ ಯೋಜನೆಯಡಿ ಪೈಪ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವ ದೃಶ್ಯ.

ನಾಯಂಡಹಳ್ಳಿ ಎಸ್‌ಟಿಪಿ ಪಂಪ್‌ಹೌಸ್‌ನ ಕಾಮಗಾರಿ ಪ್ರಗತಿಯಲ್ಲಿದೆ. ಹುರುಳೀಹಳ್ಳಿ ಕೆರೆಯ ಬಳಿ ಪಂಪ್‌ಹೌಸ್ ನಿರ್ಮಾಣಕ್ಕೆ ಭೂಸ್ವಾಧೀನ ಸಮಸ್ಯೆ ಬಗೆಹರಿದಿದೆ. ಅನ್ಯ ಇಲಾಖೆಗಳಿಂದ ಅನುಮತಿ ವಿಳಂಬದಿಂದಾಗಿ ಕಾಮಗಾರಿಗೆ ತೊಡಕಾಗಿದ್ದು, ಪ್ರಸ್ತುತ 89.50 ಕಿ.ಮೀ ಉದ್ದಕ್ಕೆ ಅನುಮತಿ ಪಡೆದು ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ. ಅಧಿಕಾರಿಯೊಬ್ಬರ ಹೇಳಿಕೆಯಂತೆ, ಡೆಡ್‌ಲೈನ್‌ಗಿಂತ ನಾಲ್ಕೈದು ತಿಂಗಳು ಮೊದಲ ಹಂತ ತಡವಾಗುವ ಸಾಧ್ಯತೆಯಿದೆ.

ಸಂಸ್ಕರಿತ ನೀರು ಕೈಗಾರಿಕೆಗಳಿಗೆ : 

ಈ ಯೋಜನೆಯಿಂದ ಸುಮಾರು 15 ಎಂಎಲ್ ಡಿ ನೀರನ್ನು ನೆಲಮಂಗಲ ತಾಲ್ಲೂಕಿನ ಸೋಂಪುರ ಮತ್ತು ದಾಬಾಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಒದಗಿಸಲಾಗುತ್ತಿದ್ದು, ಕೈಗಾರಿಕೆಗಳ ನೀರಿನ ಬೇಡಿಕೆಯನ್ನು ಪೂರೈಸಲು ಸಹಾಯವಾಗಲಿದೆ.

ಅಳವಡಿಸಲಾದ ಆಳೆತ್ತರದ ಪೈಪ್ ಒಳಗೆ ತಾಂತ್ರಿಕ ಪರೀಕ್ಷೆ ನಡೆಸುತ್ತಿರುವ ಚಿತ್ರ.

ಯೋಜನೆಯ ಪ್ರಮುಖ ಅನುಕೂಲಗಳೇನು ? :

 * ವ್ಯರ್ಥವಾಗುತ್ತಿದ್ದ ಸಂಸ್ಕರಿತ ನೀರನ್ನು ಬರಪೀಡಿತ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಗೆ ಬಳಸಲಾಗುತ್ತಿದೆ.

 * ಅತೀಯಾದ ಅಂತರ್ಜಲ ಬಳಕೆಯಿಂದ ಬರಿದಾಗಿದ್ದ ಭೂಮಿಯಲ್ಲಿ ಅಂತರ್ಜಲ ಮಟ್ಟವು ಮರುಪೂರಣಗೊಳ್ಳಲಿದೆ.

 * ಕೊಳವೆಬಾವಿ ಅವಲಂಬಿತ ಕೃಷಿ ಕ್ಷೇತ್ರ ವೃದ್ಧಿಸಲಿದೆ.

 * ಆಳದಿಂದ ನೀರನ್ನು ಎತ್ತಲು ಬಳಕೆಯಾಗುತ್ತಿದ್ದ ಇಂಧನ (ವಿದ್ಯುತ್) ಉಳಿತಾಯವಾಗಲಿದೆ.

 * ವಾರ್ಷಿಕ ಸುಮಾರು 4.00 TMC ನೀರನ್ನು ಹೊರಸಾಗಿಸುವುದರಿಂದ ಬೆಂಗಳೂರು ನಗರದ ಮಳೆ ನೀರಿನ ಕಾಲುವೆಗಳ ಮೇಲಿನ ಒತ್ತಡ ಕಡಿಮೆಯಾಗಿ ನಗರದ ಪ್ರವಾಹ ನಿಯಂತ್ರಣದಲ್ಲಿ ಸಹಕಾರಿಯಾಗಲಿದೆ.

 * ದೇಶದಲ್ಲಿ ಶುದ್ಧೀಕರಿಸಿದ ನೀರಿನ ಮರುಬಳಕೆ ಮಾಡಿಕೊಳ್ಳುವ ರಾಜ್ಯಗಳ ಪೈಕಿ ಕರ್ನಾಟಕವು ಅಗ್ರಮಾನ್ಯ ರಾಜ್ಯವಾಗಿ ಹೊರಹೊಮ್ಮಲು ಈ ಯೋಜನೆ ಸಹಕಾರಿಯಾಗಲಿದೆ.

ನಾಯಂಡಹಳ್ಳಿ ಪಂಪಿಂಗ್ ಸ್ಟೇಷನ್ ನಿಂದ, ಸಂಸ್ಕರಿತ ನೀರು ಸಾಗಿಸುವ ಕಾಂಕ್ರಿಟ್ ಕಾಲುವೆ ನಿರ್ಮಾಣವಾಗುತ್ತಿರುವ ಚಿತ್ರ.

ನೀರಿನ ಗುಣಮಟ್ಟದ ಮೇಲ್ವಿಚಾರಣೆ :

ಯೋಜನೆಯ ಯಶಸ್ಸಿಗೆ ನೀರಿನ ಗುಣಮಟ್ಟ ಬಹಳ ಮುಖ್ಯವಾಗಿದೆ. ಈ ಸಂಬಂಧ, ಬೆಂಗಳೂರು ಜಲಮಂಡಳಿ (BWSSB) ಯಿಂದ ಸಂಸ್ಕರಣಾ ಘಟಕದಲ್ಲಿನ ನೀರಿನ ಗುಣಮಟ್ಟ ಪರೀಕ್ಷೆಗೆ ಕ್ರಮ ಕೈಗೊಂಡಿದ್ದು, ಸಣ್ಣ ನೀರಾವರಿ ಇಲಾಖೆಯಿಂದಲೂ ಪ್ರತ್ಯೇಕ ಸಂಸ್ಥೆಗೆ ಗುತ್ತಿಗೆ ನೀಡಿ ಪರೀಕ್ಷೆಗಳನ್ನು ನಡೆಸಲು ಕ್ರಮವಹಿಸಲಾಗುತ್ತಿದೆ. ಇದರ ಜೊತೆಗೆ, ಯೋಜನೆಯ ಪ್ರಾರಂಭದ ಮುನ್ನ ಮತ್ತು ಅನುಷ್ಠಾನದ ನಂತರದ ಪರಿಣಾಮದ ಕುರಿತು ಅಧ್ಯಯನ ಕೈಗೊಳ್ಳಲು ಭಾರತೀಯ ವಿಜ್ಞಾನ ಸಂಸ್ಥೆಗೆ (IISc) ಆ ನೀಡಲಾಗಿದೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಈ ಯೋಜನೆಯ ಮೂಲಕ ‘ಓಡುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ’ ಎಂಬ ಧ್ಯೇಯದೊಂದಿಗೆ ಅಂತರ್ಜಲವನ್ನು ಮರುಪೂರಣಗೊಳಿಸಿ, ಗ್ರಾಮೀಣ ಭಾಗ ಮತ್ತು ಕೃಷಿ ಕ್ಷೇತ್ರಕ್ಕೆ ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದಾಗ ಸಚಿವ ಎನ್.ಎಸ್.ಬೋಸರಾಜು, ವೃಷಭಾವತಿ ವ್ಯಾಲಿ ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುತ್ತದೆ.

ಮೂರು ಹಂತದ ಯೋಜನೆ ಪೂರ್ಣವಾಗಲು 3 ವರ್ಷ:

“ಮೊದಲ ಹಂತದ ಯೋಜನೆ ಈತನಕ ಶೇ.50 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದೆ. ಎರಡನೇ ಹಂತದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಎರಡನೇ ಹಂತವನ್ನು ಪೂರ್ಣಗೊಳಿಸಲು ಟೆಂಡರ್ ಪ್ರಕ್ರಿಯೆಯ ನಂತರ ಸುಮಾರು ಎರಡೂ ಕಾಲು ವರ್ಷ ಬೇಕಾಗುತ್ತದೆ. ಮೂರನೇ ಹಂತದ ಆರಂಭಕ್ಕೆ ಮುನ್ನ ನಿಧಿಯನ್ನು ಪಡೆದುಕೊಳ್ಳಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಟ್ಟಾರೆ ವೃಷಭಾವತಿ ವ್ಯಾಲಿ ಯೋಜನೆ ಪೂರ್ಣಗೊಳ್ಳಲು ಮೂರು ವರ್ಷಗಳಾಗಬಹುದು. ಎರಡನೇ ಮತ್ತು ಮೂರನೇ ಹಂತದ ಡಿಪಿಆರ್ ತಯಾರಿಕಾ ಕಾರ್ಯವು ಪ್ರಗತಿಯಲ್ಲಿದೆ.”

– ಎನ್.ಎಸ್.ಬೋಸರಾಜು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ

View this post on Instagram

A post shared by Bengaluru Wire (@bengaluruwirenews)

WhatsApp Join our WhatsApp Channel
Previous Post

ರಾಷ್ಟ್ರೋತ್ಥಾನ ಸಾಹಿತ್ಯದಿಂದ ನ. 1 ರಿಂದ ಡಿ. 7 ರವರೆಗೆ ಸಾಹಿತ್ಯ-ಸಂಸ್ಕೃತಿ ಉತ್ಸವ

Next Post

Wildlife News | ಸಮಸ್ಯೆ ಸೃಷ್ಟಿಸಿದ್ದ ಹುಲಿ ಸೆರೆ : ಆರೋಗ್ಯ ತಪಾಸಣೆಗಾಗಿ ಕೂರ್ಗಳ್ಳಿ ರಕ್ಷಣಾ ಕೇಂದ್ರಕ್ಕೆ ರವಾನೆ

Next Post

Wildlife News | ಸಮಸ್ಯೆ ಸೃಷ್ಟಿಸಿದ್ದ ಹುಲಿ ಸೆರೆ : ಆರೋಗ್ಯ ತಪಾಸಣೆಗಾಗಿ ಕೂರ್ಗಳ್ಳಿ ರಕ್ಷಣಾ ಕೇಂದ್ರಕ್ಕೆ ರವಾನೆ

Crime News | ಜೆ.ಪಿ. ನಗರ: ಮನೆಗೆಲಸದಾಕೆ ಕಳವು ಮಾಡಿದ್ದ ₹51.40 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಶ : ಆರೋಪಿ ಬಂಧನ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group