Monday, September 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

  • Bengaluru Focus

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW Special | ಬ್ರಹ್ಮರಥಗಳ ಶಿಲ್ಪ ಬ್ರಹ್ಮ – ರಥಶಿಲ್ಪ ಕಲಾಕಾರ, ಕೋಟೇಶ್ವರದ ಕಲಾವಿದ ಲಕ್ಷಿನಾರಾಯಣ ಆಚಾರ್ಯ

ಶಿಲ್ಪಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿರುವ ಆಚಾರ್ಯರು | ಅವರ ಕೈಚಳಕದಲ್ಲರಳಿದೆ ನೂರಾರು ದೇವಸ್ಥಾನದ ರಥಗಳು | ಮುಂದೆ ಅಯೋಧ್ಯೆ ಶ್ರೀರಾಮ ಮಂದಿರದ ಬ್ರಹ್ಮರಥವೂ ನಿರ್ಮಾಣವಾಗಲಿದೆ

by Bengaluru Wire Desk
October 16, 2025
in Bengaluru Focus, BW Special
Reading Time: 2 mins read
0

ಕೋಟೇಶ್ವರ (ಉಡುಪಿ), ಅ.16 www.bengaluruwire.com : ಶಿಲ್ಪ ಕಲೆಯಲ್ಲಿ ಮೂಡಿಬಂದ ಕೃತಿಗಳು ನೋಡಲು ಬಲು ಸುಂದರ. ಮನಸ್ಸಿಗೆ ಸಂತೋಷ. ಇಂತಹ ಸೃಜನಶೀಲ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರಿವರು, ಕೋಟೇಶ್ವರದ ರಥಶಿಲ್ಪಿ ಲಕ್ಷಿನಾರಾಯಣ ಆಚಾರ್ಯ (83). 

ದೇವಸ್ಥಾನದ ರಥ ನಿರ್ಮಾಣದಲ್ಲಿ ದೇಶದಲ್ಲಿಯೇ ಅಪರೂಪದ ಕೌಶಲ್ಯತೆಯನ್ನು ಹೊಂದಿರುವ ರಥಶಿಲ್ಪಿ ಲಕ್ಷಿನಾರಾಯಣ ಆಚಾರ್ಯ ಉಡುಪಿ ಜಿಲ್ಲೆಯಾದ್ಯಂತ ಮನೆ ಮಾತಾಗಿದ್ದಾರೆ. ಶಿಲ್ಪಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ ನಾಡಿನ ನೂರಾರು ದೇವಸ್ಥಾನಗಳಿಗೆ ಇವರು ನಿರ್ಮಿಸಿದ ರಥಗಳಲ್ಲಿ ರಥೋತ್ಸವಗಳು ಸಾಂಗವಾಗಿ ನಡೆಯುತ್ತಿವೆ. ಇವರ ಕಲಾಕೌಶಲ್ಯಕ್ಕೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ರಾಷ್ಟ್ರೀಯ ಶಿಲ್ಪಗುರು ಮತ್ತು ಜಕಣಾಚಾರಿ ಪ್ರಶಸ್ತಿಗಳಂತಹ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಅರಸಿಬಂದಿವೆ.

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು, ರಾಮಾಚಾರ್ಯ ಮತ್ತು ಜಾನಕಿಯಮ್ಮನವರ ಜ್ಯೇಷ್ಠ ಪುತ್ರನಾಗಿ 1942ರ ಅಕ್ಟೋಬರ್ 16ರಂದು ರಥಶಿಲ್ಪಿ ಲಕ್ಷಿನಾರಾಯಣ ಆಚಾರ್ಯ ಜನಿಸಿದರು. 5ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಆಚಾರ್ಯರು, ಮರದ ಕೆತ್ತನೆ ಕೆಲಸ ಮಾಡುತ್ತಿರುವ ತಂದೆಯವರೊಂದಿಗೆ ತನ್ನ 11ನೇ ವಯಸ್ಸಿನಲ್ಲಿಯೇ ಕೆಲಸ ಕಲಿಕೆಗೆ ಪ್ರಾರಂಭಿಸಿದರು. ಹೀಗೆಯೇ ಕಲಿತು ತಮ್ಮ 18ನೇ ವಯಸ್ಸಿನಲ್ಲಿ ಸ್ವತಂತ್ರವಾಗಿ ದೇವರ ಮಂಟಪ, ಪಲ್ಲಕಿ ಇತ್ಯಾದಿಗಳ ಕೆಲಸವನ್ನು ತನ್ನ ಸಹೋದರ ಶಂಕರ ಆಚಾರ್ಯನನ್ನು ಜೊತೆಗೂಡಿ ಕೆಲಸ ಆರಂಭಿಸಿದರು. 

1991ರಲ್ಲಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರಿಂದ ರಾಷ್ಟ್ರ ಪ್ರಶಸ್ರಿ ಪಡೆಯುತ್ತಿರುವ ರಥಶಿಲ್ಪಿ ಲಕ್ಷ್ಮಿನಾರಾಯಣ ಆಚಾರ್ಯ.

ಪ್ರಥಮವಾಗಿ ದೊಡ್ಡಮಟ್ಟದಲ್ಲಿ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಹಿಂದಿನ ಹೆಬ್ಬಾಗಿಲಿನ ಕೆಲಸ ಪ್ರಾರಂಭವಾಯಿತು. ಕುಂದಾಪುರ ತಾಲೂಕಿನ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ಬೃಹತ್ ಹೆಬ್ಬಾಗಿಲಿನ ಕೆಲಸವನ್ನು ಸತತವಾಗಿ 3 ವರ್ಷಗಳ ಕಾಲ ಅವಧಿಯಲ್ಲಿ ಪೂರ್ಣಗೊಳಿಸಲಾಯಿತು.

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಪುಷ್ಪರಥವನ್ನು ಗುರುಗಳಾದ ರಾಷ್ಪ್ರಪ್ರಶಸ್ತಿ ಪುರಸ್ಕೃತ ಗೋಪಾಡಿ ಶಿಲ್ಪಿ ವೆಂಕಟರಮಣ ಆಚಾರ್ಯರಿಂದ ದೀಕ್ಷೆ ಪಡೆದು ರಥದ ಕೆಲಸವನ್ನು 1969ರಲ್ಲಿ ಪ್ರಾರಂಭಿಸಿ ಕರ್ನಾಟಕ ಸೇರಿ ನೆರೆ ರಾಜ್ಯಗಳಾದ ಕೇರಳ, ಮಹರಾಷ್ಟ್ರ, ತಮಿಳುನಾಡು, ಆಂಧ್ರ ಇನ್ನೂ ಹಲವಾರು ಪುಣ್ಯಕ್ಷೇತ್ರಗಳ ರಥಗಳು ಇಲ್ಲಿನ ಶಿಲ್ಪ ಕೇಂದ್ರದಲ್ಲಿ ಮೂಡಿಬಂದಿವೆ.

2018ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರತಿಷ್ಠಿತ ಜಕಣಾಚಾರಿ ಪ್ರಶಸ್ತಿಯನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರದಾನ ಮಾಡಿದರು. ಆಗಿನ ಇಲಾಖೆಯ ನಿರ್ದೇಶಕರಾಗಿದ್ದ ರಂಗನಾಥ್, ಸಚಿವರಾಗಿದ್ದ ಸಿ.ಟಿ.ರವಿ ಅವರು ಚಿತ್ರದಲ್ಲಿದ್ದಾರೆ.

ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ನೂತನ ಕಟ್ಟಡವನ್ನು 2021 ಇಸವಿಯಲ್ಲಿ ಪ್ರಾರಂಭಿಸಲಾಯಿತು. ಸುತ್ತಮುತ್ತಲ ಜಿಲ್ಲೆಗಳಲ್ಲೇ ಇದೊಂದು ದೊಡ್ಡ ಶಿಲ್ಪಕಲಾ ಕೇಂದ್ರವಾಗಿದೆ.

ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಹೊರನೋಟ.
ಶಿಲ್ಪಕೇಂದ್ರದ ಒಳನೋಟ.

ಈತನಕ ಒಟ್ಟು 69 ಬ್ರಹ್ಮರಥ, 108 ಪುಷ್ಪರಥ, 15 ಬೆಳ್ಳಿಯ ರಥ,  1 ಇಂದ್ರರಥ, 1 ಚಂದ್ರರಥ, 11 ಬಂಡಿರಥ, 2 ಚಂದ್ರಮಂಡಲ ಸೇರಿ ಸುಮಾರು 207 ರಥಗಳ ನಿರ್ಮಾಣ ಕಾರ್ಯವನ್ನು ಈತನಕ ಕೈಗೊಳ್ಳಲಾಗಿದೆ.

ಕುಕ್ಕೆಸುಬ್ರಮಣ್ಯ ದೇವಸ್ಥಾನ, ಬೆಂಗಳೂರಿನ ಬನಶಂಕರಿ ದೇವಾಲಯ, ನಂದಿಬೆಟ್ಟದ ಬಳಿಯ ಭೋಗನಂದೀಶ್ವರ, ಧರ್ಮಸ್ಥಳ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆ, ಮುರುಡೇಶ್ವರ, ಬನವಾಸಿಯ ಉಮಾ ಮಧುಕೇಶ್ವರ ಸೇರಿದಂತೆ ಪ್ರಸಿದ್ಧ ತೀರ್ಥ ಕ್ಷೇತ್ರಗಳು, ಮಠಗಳಲ್ಲಿ ಈ ಶಿಲ್ಪಕೇಂದ್ರದಲ್ಲಿ ನಿರ್ಮಿಸಿದ ರಥಗಳನ್ನು ಬಳಸಲಾಗುತ್ತಿದೆ.

ವಿವಿಧ ರೀತಿಯ ರಥಗಳು ಯಾವ್ಯಾವು? :

ರಥಗಳಲ್ಲಿ ಸಾಕಷ್ಟು ವಿಧಗಳಿವೆ. ಮಹಸ್ಯಂಧನಾ ರಥ, ಸ್ಯಂಧನಾ ರಥ, ಪುಷ್ಪ ರಥ, ಚಂದ್ರಮಂಡಲ ರಥ, ಪುಷ್ಪರಥ, ಬೆಳ್ಳಿರಥ, ಚಿನ್ನದ ರಥ, ಬಂಡಿರಥ ಸೇರಿದಂತೆ ಪ್ರಾಂತ್ಯವಾರು ದೇವಸ್ಥಾನಗಳ ಅನುಗುಣವಾಗಿ ರಥ ನಿರ್ಮಾಣ ಮಾಡಿಕೊಡುತ್ತಿದ್ದಾರೆ. 

ಪ್ರಸ್ತುತ ಕಲಬುರ್ಗಿಯ ಶ್ರೀ ಸದ್ಗುರು ದತ್ತ ದಿಗಂಬರ ಮಾಣಿಕೇಶ್ವರ ಶಂಕರಲಿಂಗ ಆಶ್ರಮ ಇಲ್ಲಿನ ರಥ ತಯಾರಿಯಲ್ಲಿದ್ದು ಇದರೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬೆಳ್ಳಿಯರಥ ಈಗಾಗಲೇ ನಿರ್ಮಿಸಿ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ. ಇನ್ನು ಅಯೋಧ್ಯೆಯ ಶ್ರೀ ರಾಮಮಂದಿರದ ರಥ ನಿರ್ಮಾಣದ ಜವಾಬ್ದಾರಿಯೂ ಈ ಶಿಲ್ಪಕೇಂದ್ರದ ಮೇಲಿದೆ. ತಂದೆ ಲಕ್ಷಿನಾರಾಯಣ ಆಚಾರ್ಯಯವರ ಗರಡಿಯಲ್ಲಿ ಪುತ್ರ ರಾಜಗೋಪಾಲ ಆಚಾರ್ಯ ಈ ಶಿಲ್ಪ ಕೇಂದ್ರದ ಉಸ್ತುವಾರಿಯನ್ನು ಹೊತ್ತು ಕಾಷ್ಠಶಿಲ್ಪದಲ್ಲಿ ಸಂಪ್ರದಾಯದ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಶಿಲ್ಪ ಕೇಂದ್ರದಲ್ಲಿ ಅಳವಡಿಸಿ ರಥಗಳ ನಿರ್ಮಾಣ ಮಾಡಲಾಗುತ್ತಿರುವುದು ಇಲ್ಲಿನ ವಿಶೇಷ.

ಕಲಬುರ್ಗಿಯ ಶ್ರೀ ಸದ್ಗುರು ದತ್ತ ದಿಗಂಬರ ಮಾಣಿಕೇಶ್ವರ ಶಂಕರಲಿಂಗ ಆಶ್ರಮದವರಿಗಾಗಿ ನಿರ್ಮಾಣ ಮಾಡುತ್ತಿರುವ ರಥದೊಂದಿಗೆ ಲಕ್ಷ್ಮಿನಾರಾಯಣ ಆಚಾರ್ಯರ ಪುತ್ರ ರಾಜಗೋಪಾಲ ಆಚಾರ್ಯ.

“ಕೊಪ್ಪಳದ ಶ್ರೀ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನಿಂದ ಅಯೋಧ್ಯೆಯ ಶ್ರೀ ರಾಮಮಂದಿರದ ರಥ ನಿರ್ಮಾಣದ ಹೊಣೆ ನಮಗೆ ದೊರೆತಿರುವುದು ನಮ್ಮ ಪುಣ್ಯ. ಅಯೋಧ್ಯೆ ದೇವಸ್ಥಾನದ ರಥಬೀದಿ ನಿರ್ಮಾಣ ಪೂರ್ಣವಾದ ಬಳಿಕ ಈ ಕೇಂದ್ರದಲ್ಲಿ ರಥನಿರ್ಮಾಣ ಕಾರ್ಯವನ್ನು ಒಂದೂವರೆ ವರ್ಷದ ಒಳಗಾಗಿ ಪೂರ್ಣಗೊಳಿಸಲಾಗುವುದು. ಈ ರಥ ನಿರ್ಮಾಣಕ್ಕೆ ಅದರದ್ದೇ ಆದ ಕಾನೂನು ಪ್ರಕ್ರಿಯೆಗಳಿದ್ದು, ಭದ್ರತೆಯೊಂದಿಗೆ ನಿರ್ಮಾಣ ಕಾರ್ಯ ಮಾಡಬೇಕಿದೆ” ಎಂದು ರಥಶಿಲ್ಪಿ ಲಕ್ಷಿನಾರಾಯಣ ಆಚಾರ್ಯ ಅವರೊಂದಿಗೆ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅವರ ಪುತ್ರ ರಾಜಗೋಪಾಲ ಆಚಾರ್ಯ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

“ಈಗಾಗಲೇ ರಥ ನಿರ್ಮಾಣಕ್ಕೆ ಅಗತ್ಯವಾದ ಮರಗಳನ್ನು ತರಿಸಿ ಇಡಲಾಗಿದೆ. ಈತನಕ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಿಂದ 206 ವಿವಿಧ ರೀತಿಯ ರಥಗಳನ್ನು ನಿರ್ಮಿಸಿ ಹಲವು ದೇವಸ್ಥಾನಗಳಿಗೆ ಈಗಾಗಲೇ ಹಸ್ತಾಂತರಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಒಟ್ಟಾರೆ ಕಾಷ್ಠ ಶಿಲ್ಪ ಕ್ಷೇತ್ರದಲ್ಲಿ ರಥಗಳ ನಿರ್ಮಾಣದಂತಹ ಅಪರೂಪದ ಕಲೆಯನ್ಙು ತಮ್ಮ ಅಪಾರ ಅನುಭವ, ಸೂಕ್ಷ್ಮ ಕೆತ್ತನೆಯ ಕೌಶಲ್ಯತೆ, ಸೃಜನಶೀಲತೆ, ಅಪಾರ ಸಮಯವನ್ನು ಮೀಸಲಿಟ್ಟು ಕಲಾಸೇವೆ ಮಾಡಿರುವ ಲಕ್ಷಿನಾರಾಯಣ ಆಚಾರ್ಯರ ಈ ಕಲಾಪರಂಪರೆಯನ್ನು ಅವರ ಪುತ್ರ ರಾಜಗೋಪಾಲ ಆಚಾರ್ಯರು ಹಾಗೂ ಸಾವಿರಾರು ಶಿಷ್ಯವರ್ಗದ ಮೂಲಕ ಜೀವಂತವಾಗಿರಿಸಲು ಸಾಧ್ಯವಾಗಿದೆ.

View this post on Instagram

A post shared by Bengaluru Wire (@bengaluruwirenews)

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

GBA News | ಬೃಹತ್ ಬೆಂಗಳೂರು ರಸ್ತೆಗೆ ಡಾಂಬರ್, ಚರಂಡಿ ಅಭಿವೃದ್ಧಿಗೆ ₹2200 ಕೋಟಿ : ಐದು ನಗರ ಪಾಲಿಕೆಗಳಿಗೆ ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ

Next Post

ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ ಹಿನ್ನಲೆ : ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಆಗ್ರಹಿಸಿ ಸಿಎಂಗೆ ಆರ್. ಅಶೋಕ ಪತ್ರ

Next Post

ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ ಹಿನ್ನಲೆ : ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಆಗ್ರಹಿಸಿ ಸಿಎಂಗೆ ಆರ್. ಅಶೋಕ ಪತ್ರ

ದೀಪಾವಳಿ ಹಬ್ಬದ ಸಂಭ್ರಮ: 28,000 ಪೌರಕಾರ್ಮಿಕರಿಗೆ ಸಿಹಿ ವಿತರಣೆ

Please login to join discussion

Like Us on Facebook

Follow Us on Twitter

Recent News

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d