Sunday, August 2, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Mysore Dasara-2025 | ಮೈಸೂರು ದಸರಾ: ಶ್ವಾನ ಪ್ರದರ್ಶನದಲ್ಲಿ ವಿಶ್ವಾಸದ ನಡಿಗೆ : ಸ್ಪರ್ಧೆಯಲ್ಲಿ 600ಕ್ಕೂ ಹೆಚ್ಚು ನಾಯಿಗಳು ಭಾಗಿ

ಅಪರೂಪದ ತಳಿಗಳ ಸಾಹಸ, ಪೊಲೀಸ್ ಇಲಾಖೆಯ ಶ್ವಾನದಳದ ಯೋಧ ಸೇರಿ ಐದು 'ಶ್ವಾನ'ಗಳು ಪಾಲ್ಗೊಂಡಿದ್ದವು.

by Bengaluru Wire Desk
September 28, 2025
in News Wire, Public interest
Reading Time: 2 mins read
0

ಮೈಸೂರು, ಸೆ. 27 www.bengaluruwire.com: ಮೈಸೂರು ರೈತ ದಸರಾ ಮಹೋತ್ಸವ-2025ರ ಅಂಗವಾಗಿ ನಡೆದ ಶ್ವಾನ ಮತ್ತು ಮುದ್ದು ಪ್ರಾಣಿಗಳ ಪ್ರದರ್ಶನ ಹಾಗೂ ಸ್ಪರ್ಧೆ ನೋಡುಗರ ಮನಸೂರೆಗೊಂಡಿತು. ಸ್ಪರ್ಧೆಯಲ್ಲಿ ಜರ್ಮನ್ ಶಫರ್ಡ್ ತಳಿಯ ಮೈಸೂರು ಶ್ವಾನಕ್ಕೆ ಮೊದಲ ಸ್ಥಾನ ದೊರೆಯಿತು.

ರಾಜ್ಯ ಪಶುಸಂಗೋಪನೆ ಇಲಾಖೆಯ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ಮೈಸೂರು, ಮಂಡ್ಯ, ಬೆಂಗಳೂರು, ಹೊರ ರಾಜ್ಯ ಕೇರಳ ಹಾಗೂ ಊಟಿ ಸೇರಿದಂತೆ ವಿವಿಧ ಭಾಗಗಳಿಂದ ಒಟ್ಟು 640 ಶ್ವಾನಗಳು ನೋಂದಣಿಯಾಗಿದ್ದವು. ಸೈಬಿರಿಯಾ ಹಷ್ಕಿ, ಜರ್ಮನ್ ಶಫರ್ಡ್ , ಮುಧೋಳ ಹಾಗೂ ಪಾರಿನ್ ನ ಒಟ್ಟು 51 ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಲೊಂಡಿದ್ದವು ಅಂತಿಮವಾಗಿ 7 ತಳಿಗಳು ಜಯಶೀಲ ಆದವು ಅವುಗಳ ಮಾಲೀಕರಿಗೆ ಪ್ರಮಾಣ ಪತ್ರ ಹಾಗೂ ಆಕರ್ಷಕ ಟ್ರೋಪಿಯನ್ನು ನೀಡಲಾಯಿತು.

ತಳಿಗಳ ಮಹಾಪೂರ: ಅಪರೂಪದ ನಾಯಿಗಳ ದರ್ಶನ :

ಸೈಬೀರಿಯನ್ ಹಸ್ಕಿ ತಳಿಯೊಂದಿಗೆ ಪುಟ್ಟ ಬಾಲಕಿ.

ಸ್ಪರ್ಧೆಯಲ್ಲಿ ಪ್ರತಿ ತಳಿಯಲ್ಲಿ ಪಪ್ಪಿ (ಮರಿ ನಾಯಿ), ವಯಸ್ಕ ಗಂಡು ಮತ್ತು ಹೆಣ್ಣು ನಾಯಿ ಎಂಬ ಮೂರು ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲೂ ತಲಾ ಎರಡು ಬಹುಮಾನ ನೀಡಲಾಯಿತು. ಶ್ವಾನಗಳ ತಳಿ ಗುಣಲಕ್ಷಣ, ಬಣ್ಣ, ನಡಿಗೆ, ಆರೋಗ್ಯ ಮತ್ತು ಮಾಲೀಕರಿಗೆ ತೋರುವ ವಿಧೇಯತೆಯನ್ನು ಮಾನದಂಡವಾಗಿರಿಸಿ ಪ್ರಶಸ್ತಿಗಳನ್ನು ಘೋಷಿಸಲಾಯಿತು.

ಸ್ಪರ್ಧೆಯಲ್ಲಿ ವಿಜೇತರಾದ ಶ್ವಾನ ಮಾಲೀಕರಿಗೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಆರ್.ಮಹದೇವ್ ಬಹುಮಾನ ವಿತರಿಸಿದರು.

ಜರ್ಮನ್ ಶಫರ್ಡ್ ತಳಿಗೆ ಮೊದಲ, ಬಾಕ್ಸರ್ ತಳಿಗೆ  ದ್ವೀತೀಯ,  ರಾಟ್ ವಲರ್ ತಳಿಗೆ ಮೂರನೇ, ಡಾಬರ್ ವೆಲಸ್ ನಾಲ್ಕನೆ, ಮಾಲ್ವಿಸ್ ತಳಿಗೆ ಐದನೇ, ಮುಧೋಳ್ ತಳಿಗೆ ಆರನೇ ಹಾಗೂ ಸೈಬೇರಿಯನ್ ಹಸ್ಕಿ ತಳಿಗೆ ಏಳನೇ ಸ್ಥಾನ ದೊರೆಯಿತು.

ವಿದೇಶಿ ತಳಿಯ ಶ್ವಾನದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದವರು.

ವಿಶೇಷ ತಳಿಗಳ ಶ್ವಾನಗಳು ಸ್ಪರ್ಧೆಯಲ್ಲಿ ಭಾಗಿ :

ಬೆಲ್ಜಿಯಮ್ ಶಫರ್ಡ್ ನಾಯಿಗಳ ಪ್ರದರ್ಶನ.

ಈ ಬಾರಿಯ ಪ್ರದರ್ಶನದಲ್ಲಿ ಡಚ್ ಶಫರ್ಡ್, ಸೌತ್ ಆಫ್ರಿಕಾ ಮಾಸ್ಟಿಫ್, ಚೌಚೌ, ಬಾರ್ಡರ್ ಕೂಲಿ, ಓಲ್ಡ್ ಶೀಪ್ ಡಾಗ್, ಬೆಲ್ಜಿಯಂ ಮೆಲೊನಿಸ್, ಬೆಲ್ಜಿಯಂ ಶಫರ್ಡ್ ಮತ್ತು ಕೋಕಾಪೂನಂತಹ ಅಪರೂಪದ ತಳಿಗಳು ಗಮನ ಸೆಳೆದವು. ಈ ಕುರಿತು ಮಾಹಿತಿ ನೀಡಿದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರಾಮು, “ವಿವಿಧ ತಳಿಗಳ ಪ್ರದರ್ಶನ ಶ್ವಾನ ಪ್ರೇಮಿಗಳಿಗೆ ಹಬ್ಬದಂತಿತ್ತು” ಎಂದು ಹರ್ಷ ವ್ಯಕ್ತಪಡಿಸಿದರು.

ಯೋಧ ಶ್ವಾನಗಳ ವೇಗದ ಗುಟ್ಟು :

ಭಾಗವಹಿಸಿದ ತಳಿಗಳ ಪೈಕಿ ಬೆಲ್ಜಿಯಂ ಮೆಲೊನಿಸ್ ಮತ್ತು ಬೆಲ್ಜಿಯಂ ಶಫರ್ಡ್ ತಳಿಗಳು ಪ್ರಮುಖ ಆಕರ್ಷಣೆಯಾಗಿದ್ದವು. “ಬೆಲ್ಜಿಯಂ ಮೆಲೊನಿಸ್ ತಳಿಯ ನಾಯಿಯ ವೇಗವು ವಿಶ್ವದಲ್ಲೇ ಅತಿ ಹೆಚ್ಚು. ಇವು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಉಗ್ರಗಾಮಿಗಳ ಪತ್ತೆ ಮತ್ತು ಮಿಲಿಟರಿ ಆಪರೇಷನ್‌ಗಳಲ್ಲಿ ಬಳಕೆಯಾಗುತ್ತವೆ” ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಬಸವರಾಜು ವಿವರಿಸಿದರು. ಬೆಲ್ಜಿಯಂ ಶಫರ್ಡ್ ತಳಿಯು ಕೂಡ ಉತ್ತಮ ವಾಸನೆ ಗ್ರಹಿಕೆ ಮತ್ತು ವೇಗದ ಓಟದಿಂದಾಗಿ ಅಪರಾಧ ತನಿಖೆ ಹಾಗೂ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಪೊಲೀಸ್ ಇಲಾಖೆ ಶ್ವಾನದಳದ ನಾಯಿಗಳ ಪ್ರದರ್ಶನ.

ದೇಶಿ ಹೆಮ್ಮೆ: ಮುಧೋಳ ತಳಿಯ ನಡಿಗೆ :

ಭಾರತೀಯ ತಳಿಯಾದ ಮುಧೋಳ ನಾಯಿಯೂ ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆಯಿತು. ಈ ತಳಿಯನ್ನು ರಾಜ್ಯದಲ್ಲಿ ಮಹಾರಾಜರು ಬೇಟೆಗಾಗಿ ಬಳಸುತ್ತಿದ್ದರು. ಇದೀಗ ಇದನ್ನು ರಕ್ಷಣಾ ಇಲಾಖೆಯಲ್ಲಿ ತರಬೇತಿ ನೀಡಿ ಬಳಸುತ್ತಿರುವುದು ಹೆಮ್ಮೆಯ ವಿಷಯ ಎಂದು ಡಾ. ಬಸವರಾಜು ಹೇಳಿದರು.

ವಿಶೇಷ ಪ್ರದರ್ಶನದಲ್ಲಿ ಮೈಸೂರು ಪೊಲೀಸ್ ಇಲಾಖೆಯ ಶ್ವಾನ ವಿಭಾಗದ ಐದು ತರಬೇತಿಗೊಂಡ ನಾಯಿಗಳು ತಮ್ಮ ಚಾಣಾಕ್ಷತನ ಹಾಗೂ ಪೊಲೀಸರ ಸೂಚನೆಗೆ ತಕ್ಕಂತೆ ಭಂಗಿಗಳನ್ನು ಪ್ರದರ್ಶಿಸಿ ನೆರೆದಿದ್ದವರ ಚಪ್ಪಾಳೆಗೆ ಪಾತ್ರವಾದವು.

ಯೋಧ ಶ್ವಾನದೊಂದಿಗೆ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್.

ಇದೇ ವೇಳೆ, ಪೊಲೀಸ್ ಇಲಾಖೆಯ ಶ್ವಾನ ವಿಭಾಗದ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ ಅವರು ತರಬೇತಿಗೊಳಿಸಿದ ವಿಶೇಷ ಶ್ವಾನ ‘ಯೋಧ’ನ ಬಗ್ಗೆ ಮಾಹಿತಿ ನೀಡಿದರು. ಬೆಲ್ಜಿಯಂ ಷಪರ್ಡ್ ತಳಿಯ ಈ ಐದು ವರ್ಷದ ನಾಯಿಯು ಕೇವಲ ಆರು ತಿಂಗಳ ತರಬೇತಿಯಲ್ಲಿ ನುರಿತಿದೆ. “ಈ ನಾಯಿಯ ಕಣ್ಣಿಗೆ ಬಟ್ಟೆ ಕಟ್ಟಿದರೂ ಬಾಂಬ್ ಪತ್ತೆ ಮಾಡುವ ಚಾಣಾಕ್ಷತೆ ಹೊಂದಿದೆ. ಕಳೆದ ವರ್ಷ ದಕ್ಷಿಣ ಭಾರತದಲ್ಲಿ ನಡೆದ ಪೊಲೀಸ್ ಮೀಟ್‌ನ ಸದರನ್ ರೇಂಜ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾನೆ” ಎಂದರು. 

ಒಟ್ಟಾರೆಯಾಗಿ, ಈ ಬಾರಿಯ ಶ್ವಾನ ಪ್ರದರ್ಶನವು ಕೇವಲ ಸ್ಪರ್ಧೆಗಿಂತ ಹೆಚ್ಚಾಗಿ, ಶ್ವಾನ ತಳಿಗಳ ವೈವಿಧ್ಯತೆ ಮತ್ತು ಅವುಗಳ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.

WhatsApp Join our WhatsApp Channel
Previous Post

Viral Video News | ಕರೂರ್ ನಲ್ಲಿ ಕಾಲ್ತುಳಿತ ದುರಂತ ಕುರಿತ ವಿಡಿಯೋ ವೈರಲ್ : ವಿಜಯ್ ಟಿವಿಕೆ ಸಮಾವೇಶದಲ್ಲಿ 39 ಸಾವು, ತನಿಖೆಗೆ ಸಿಎಂ ಸ್ಟಾಲಿನ್ ಆದೇಶ

Next Post

Mysore Dasara-2025 | ವಿಜಯ್ ಪ್ರಕಾಶ್ ಮ್ಯೂಸಿಕ್ ಫೆಸ್ಟ್: ಮೈಸೂರು ದಸರಾ ಸಂಭ್ರಮದಲ್ಲಿ ರಸಸಂಜೆ

Next Post

Mysore Dasara-2025 | ವಿಜಯ್ ಪ್ರಕಾಶ್ ಮ್ಯೂಸಿಕ್ ಫೆಸ್ಟ್: ಮೈಸೂರು ದಸರಾ ಸಂಭ್ರಮದಲ್ಲಿ ರಸಸಂಜೆ

ಡಾ.ರಾಜ್ ಕುಮಾರ್ ಪ್ರತಿಮೆ ತೆರವಿಗೆ ಸಂಚು: ಬಿಡಿಎ ವಿರುದ್ಧ ಅಭಿಮಾನಿಗಳ ಗರ್ಜನೆ

Please login to join discussion

Like Us on Facebook

Follow Us on Twitter

Recent News

ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

August 1, 2026

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

August 1, 2026

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group