Wednesday, June 17, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

National Green Hydrogen Mission | ಇನ್ನು ಎರಡೇ ವರ್ಷದಲ್ಲಿ ಭಾರತದ ರಸ್ತೆಗೆ ಇಳಿಯಲಿವೆ ಹಸಿರು ಜಲಜನಕ ಇಂಧನ ಆಧಾರಿತ ವಾಹನ

by Bengaluru Wire Desk
March 4, 2025
in News Wire, Public interest
Reading Time: 2 mins read
0

ನವದೆಹಲಿ, ಮಾ.04 www.bengaluruwire.com : ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಜತೆಗೆ ಜಾಗತಿಕ ನಾಯಕತ್ವದತ್ತ ದಾಪುಗಾಲಿಟ್ಟ ಭಾರತ ಇದೀಗ ದೇಶದ ಹತ್ತು ಮಹಾನ್ ನಗರಗಳಲ್ಲಿ ಹಸಿರು ಹೈಡ್ರೋಜನ್ (ಜಲಜನಕ) ಇಂಧನ ಆಧಾರಿತ ವಾಹನಗಳನ್ನು ಓಡಿಸಲು ಸಜ್ಜಾಗಿದೆ.

ಸಾರಿಗೆ ವಲಯವನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ ಭಾರತ ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ ನೀಡಿದ ಬೆನ್ನಲ್ಲೇ ಈಗ ಜಲಜನಕ ಇಂಧನ ಚಾಲಿತ ಸಾರಿಗೆಗೆ ಹೆದ್ದಾರಿ ತೋರಿದೆ.

2023ರ ಪ್ರಥಮದಲ್ಲೇ “ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್” (National Green Hydrogen Mission) ಆರಂಭಿಸಿ ಇದಕ್ಕೆ ಮುನ್ನುಡಿ ಬರೆದಿದ್ದ ಭಾರತ ಎರಡೇ ವರ್ಷದಲ್ಲಿ ಹಸಿರು ಹೈಡ್ರೋಜನ್ ತುಂಬಿದ ವಾಹನ ಸಾರಿಗೆಗೆ  ಚಾಲನೆ ನೀಡುವ ಅಭೂತಪೂರ್ವ ಸಾಧನೆಯತ್ತ ಹೆಜ್ಜೆ ಹಾಕಿದೆ.

ಜಲಜನಕದ 5 ಪೈಲಟ್ ಯೋಜನೆ : 

ದೇಶದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೇ ನವೀಕರಿಸಬಹುದಾದ ಇಂಧನಕ್ಕೆ ಒತ್ತು ಕೊಟ್ಟು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಶನ್ ಸ್ಥಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ (NDA) ಸರ್ಕಾರ, ಈಗ ಈ ಮಿಶನ್ ನ ಒಂದು ಭಾಗವಾಗಿ ₹ 208 ಕೋಟಿ ಆರ್ಥಿಕ ನೆರವು ಕಲ್ಪಿಸಿ ಜಲಜನಕ ಇಂಧನ ಚಾಲಿತ 5 ಹೊಸ ಪೈಲಟ್ ಯೋಜನೆಗಳಿಗೆ ಚಾಲನೆ ನೀಡಿದೆ.

ಸಾರಿಗೆ ವಲಯದಲ್ಲಿ ಪ್ರಮುಖವಾಗಿ ಬಸ್ ಮತ್ತು ಟ್ರಕ್‌ಗಳಲ್ಲಿ ಇಂಧನವಾಗಿ ಹಸಿರು ಹೈಡ್ರೋಜನ್ ಬಳಕೆ ಮತ್ತು ಹೈಡ್ರೋಜನ್ ಇಂಧನ ತುಂಬುವ ಕೇಂದ್ರಗಳ ಸ್ಥಾಪನೆಗೆ ಮುಂದಡಿ ಇಟ್ಟಿರುವ ಸರ್ಕಾರ, ಹಸಿರು ಹೈಡ್ರೋಜನ್ ವಲಯದಲ್ಲಿ ವಾಣಿಜ್ಯಿಕವಾಗಿ ಕಾರ್ಯ ಸಾಧುವಾಗುವಂತಹ ತಂತ್ರಜ್ಞಾನ ಅಳವಡಿಸಿ, ಅಗತ್ಯ ಮೂಲಸೌಕರ್ಯ ದೊಂದಿಗೆ ಮತ್ತಷ್ಟು ಅಭಿವೃದ್ಧಿಪಡಿಸಲು ಸಹ ಕಾರ್ಯ ಯೋಜನೆ ರೂಪಿಸಿದೆ.

ಮೊದಲು ದೇಶದ 10 ಮಾರ್ಗಗಳಲ್ಲಿ ಜಲಜನಕ ಇಂಧನ ಚಾಲಿತ ವಾಹನ :  

ದೇಶದ ಹತ್ತು ಮಹಾ ನಗರಗಳ ಮಧ್ಯೆ ಜಲಜನಕ ಇಂಧನ ಪೂರಿತ ವಾಹನಗಳನ್ನು ಚಲಾಯಿಸಲು ಸರ್ಕಾರ ಮುಂದಾಗಿದೆ. ಇನ್ನೆರೆಡು ವರ್ಷದೊಳಗೆ ದೇಶಾದ್ಯಂತ 10 ವಿಭಿನ್ನ ಮಾರ್ಗಗಳಲ್ಲಿ ಈ ವಾಹನ ಚಲಿಸಲಿವೆ. ಗ್ರೇಟರ್ ನೋಯ್ಡಾ – ದೆಹಲಿ – ಆಗ್ರಾ, ಭುವನೇಶ್ವರ – ಕೊನಾರ್ಕ್ – ಪುರಿ, ಅಹಮದಾಬಾದ್ – ವಡೋದರಾ – ಸೂರತ್, ಸಾಹಿಬಾಬಾದ್ – ಫರಿದಾಬಾದ್ – ದೆಹಲಿ, ಪುಣೆ – ಮುಂಬೈ, ಜಮ್ಶೆಡ್ಪುರ – ಕಳಿಂಗ ನಗರ, ತಿರುವನಂತಪುರಂ – ಕೊಚ್ಚಿ, ಕೊಚ್ಚಿ – ಎಡಪ್ಪಳ್ಳಿ, ಜಾಮ್ನಗರ – ಅಹಮದಾಬಾದ್ ಮತ್ತು NH-16 ವಿಶಾಖಪಟ್ಟಣ – ಬಯ್ಯವರಂ ಮಾರ್ಗಗಳನ್ನು ಆಯ್ಕೆ ಮಾಡಲಾಗಿದೆ.

ಆರಂಭದಲ್ಲಿ 37 ಹೈಡ್ರೋಜನ್ ವಾಹನ : 

ವಿವಿಧ ರಾಜ್ಯಗಳ ಈ ಮಹಾನ್ ನಗರಗಳಲ್ಲಿ ಮೊದಲ ಹಂತದಲ್ಲಿ ಒಟ್ಟು 37 ಹೈಡ್ರೋಜನ್ ಇಂಧನ ತುಂಬಿದ ಬಸ್ ಮತ್ತು ಟ್ರಕ್ ಗಳು ಸಂಚರಿಸಲಿವೆ. ಪ್ರಾಯೋಗಿಕವಾಗಿ 15 ಹೈಡ್ರೋಜನ್ ಇಂಧನ ಕೋಶ ಆಧಾರಿತ ಮತ್ತು 22 ಹೈಡ್ರೋಜನ್ ಆಂತರಿಕ ಎಂಜಿನ್ ಆಧಾರಿತ ವಾಹನಗಳು ಸೇರಿವೆ.

9 ಹೈಡ್ರೋಜನ್ ಇಂಧನ ಕೇಂದ್ರ ಸ್ಥಾಪನೆ:

 ಈ 37 ವಾಹನಗಳಿಗೆ ಹೈಡ್ರೋಜನ್ ಇಂಧನ ತುಂಬಲು 9 ಕಡೆ ಹಸಿರು ಹೈಡ್ರೋಜನ್ ಇಂಧನ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಪ್ರಲ್ಹಾದ ಜೋಶಿ ಅವರ ಮಾರ್ಗದರ್ಶನದಂತೆ  ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಈ ಪಂಚ (5) ಪೈಲಟ್ ಯೋಜನೆಗಳನ್ನು ಅನುಮೋದಿಸಿದೆ.

ಎಂಟು ಪ್ರಮುಖ ಕಂಪನಿಗಳಿಗೆ ಹೊಣೆ :

 ದೇಶದ ಹತ್ತು ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ಇಂಧನ ಚಲಾಯಿಸುವ 5 ಪೈಲಟ್ ಯೋಜನೆಗಳ ಹೊಣೆಯನ್ನು TATA ಮೋಟಾರ್ಸ್ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited), ಎನ್ ಟಿಪಿಸಿ (NTPC), ಎಎನ್ ಇಆರ್ ಟಿ (ANERT), ಅಶೋಕ್ ಲೇಲ್ಯಾಂಡ್, ಎಚ್ ಪಿಸಿಎಲ್ (HPCL), ಬಿಪಿಸಿಎಲ್ (BPCL) ಮತ್ತು ಐಒಸಿಎಲ್ (IOCL) ನಂತಹ ಪ್ರಮುಖ ಕಂಪನಿಗಳಿಗೆ ನೀಡಲಾಗಿದೆ.

ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಶನ್ ಅಡಿ ಸಾರಿಗೆ ವಲಯದಲ್ಲಿ ಪೈಲಟ್ ಯೋಜನೆಗಳ ಅನುಷ್ಠಾನಕ್ಕೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಈ ಹಿಂದೆಯೇ ಮಾರ್ಗಸೂಚಿ ಹೊರಡಿಸಿತ್ತು. ವಿವಿಧ ರೀತಿಯ ಹೈಡ್ರೋಜನ್ ಆಧಾರಿತ ವಾಹನಗಳು, ಮಾರ್ಗಗಳು ಮತ್ತು ಇಂಧನ ಕೇಂದ್ರಗಳಿಗೆ ಪ್ರಸ್ತಾವನೆ ಸಹ ಆಹ್ವಾನಿಸಿತ್ತು. ಈ ಕಂಪನಿಗಳ ಕ್ಷಿಪ್ರ ಕಾರ್ಯಾಚರಣೆಗೆ ಗಡುವು ನೀಡಿದ್ದು, ಮುಂದಿನ 18 ರಿಂದ 24 ತಿಂಗಳುಗಳಲ್ಲಿ “ಹಸಿರು ಹೈಡ್ರೋಜನ್ ಚಾಲಿತ ವಾಹನ”ಗಳ ಸಂಚಾರ ಆರಂಭಗೊಳ್ಳುವ ಸಾಧ್ಯತೆಯಿದೆ.

ರಾಷ್ಟ್ರೀಯ ಹೈಡ್ರೋಜನ್ ಮಿಶನ್ ಗೆ ₹19,744 ಕೋಟಿ ಅನುದಾನ :

ದೇಶದಲ್ಲಿ 2023ರ ಜನವರಿ 4 ರಂದು ಸ್ಥಾಪಿಸಿದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಗೆ  2029-30ರ ಹಣಕಾಸು ವರ್ಷದವರೆಗೆ ₹ 19,744 ಕೋಟಿ ಅನುದಾನ ಒದಗಿಸಿದೆ ಮೋದಿ ಸರ್ಕಾರ. ಇದು ಶುದ್ಧ ಇಂಧನದ ಮೂಲಕ ಆತ್ಮನಿರ್ಭರ್ ಆಗುವ ಭಾರತದ ಗುರಿಗೆ ಅನನ್ಯ ಕೊಡುಗೆ ನೀಡಲಿದೆ. ಜಾಗತಿಕ ಶುದ್ಧ ಇಂಧನ ಪರಿವರ್ತನೆಗೆ ಸ್ಫೂರ್ತಿಯಾಗಿ ಈ ಮಿಶನ್ ಕಾರ್ಯ ನಿರ್ವಹಿಸುತ್ತದೆ. ಭಾರತ ಜಾಗತಿಕವಾಗಿ ಹಸಿರು ಹೈಡ್ರೋಜನ್‌ನಲ್ಲಿ ತಂತ್ರಜ್ಞಾನ ಮತ್ತು ಮಾರುಕಟ್ಟೆ ನಾಯಕತ್ವ ವಹಿಸಿಕೊಳ್ಳಲು ಪೂರಕವಾಗಿದೆ.

ಸಾರಿಗೆ ವಲಯದಲ್ಲಿ ಪ್ರಮುಖವಾಗಿ 

ಬಸ್ ಮತ್ತು ಟ್ರಕ್‌ಗಳಲ್ಲಿ ಹಂತ ಹಂತವಾಗಿ ಹಸಿರು ಹೈಡ್ರೋಜನ್ ಅನ್ನು ಇಂಧನವಾಗಿ  ನಿಯೋಜಿಸಿ ಬೆಂಬಲಿಸುವುದು ರಾಷ್ಟ್ರೀಯ ಹೈಡ್ರೋಜನ್ ಅಭಿಯಾನದ ನ ಉದ್ದೇಶಗಳಲ್ಲಿ ಒಂದಾಗಿದೆ. ಅದರಂತೆ ಈಗ ಚಾಲನೆ ನೀಡಲಾಗಿರುವ ಹೈಡ್ರೋಜನ್ ಆಧಾರಿತ ವಾಹನಗಳು ಮತ್ತು ಇಂಧನ ತುಂಬುವ ಕೇಂದ್ರಗಳ ಪೈಲಟ್ ಯೋಜನೆ ಪರಿಣಾಮಕಾರಿ ಆಗಿರಲಿದೆ ಮತ್ತು ತಾಂತ್ರಿಕ ಕಾರ್ಯಸಾಧ್ಯತೆ, ನೈಜ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲಿದೆ.

ಗ್ರೀನ್ ಹೈಡ್ರೋಜನ್ ಭಾರತ ಮುಂಚೂಣಿ :

“ಗ್ರೀನ್ ಹೈಡ್ರೋಜನ್ ಉತ್ಖನನ, ಉತ್ಪಾದನೆ ಮತ್ತು ಬಳಕೆಯಲ್ಲಿ ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಮೊನ್ನೆ ಮೊನ್ನೆ ಭಾರತಕ್ಕೆ ಭೇಟಿ ನೀಡಿದ  27 ಯುರೋಪಿಯನ್ ರಾಷ್ಟ್ರಗಳ ಒಕ್ಕೂಟದ ಸದಸ್ಯರೂ ನವೀಕರಿಸಬಹುದಾದ ಇಂಧನದಲ್ಲಿ ಭಾರತದ ಮಹತ್ಸಾಧನೆ ಕಂಡು ಬೆರಗಾದರು. ಹೈಡ್ರೋಜನ್ ವಾಹನ ಸಾರಿಗೆ ವ್ಯವಸ್ಥೆಯ ಈ ಕ್ರಮ ಆತ್ಮನಿರ್ಭರ ಭಾರತಕ್ಕೆ ಭವಿಷ್ಯದ ದಿಕ್ಸೂಚಿಯಾಗಿದೆ”.

– ಪ್ರಲ್ಹಾದ ಜೋಶಿ, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ

WhatsApp Join our WhatsApp Channel
Previous Post

Railway News | ಬೆಂಗಳೂರು ಪೂರ್ವ ನಿಲ್ದಾಣದಲ್ಲಿ ಮಾ.13ರಿಂದ 41 ರೈಲುಗಳ ನಿಲುಗಡೆ ತಾತ್ಕಾಲಿಕ ರದ್ದು

Next Post

CBI News | ರೈಲ್ವೆ ಇಲಾಖಾ ಪರೀಕ್ಷಾ ಪತ್ರಿಕೆ ಸೋರಿಕೆ ಹಗರಣ ಭೇದಿಸಿದ ಸಿಬಿಐ : 25 ರೈಲ್ವೆ ಅಧಿಕಾರಿಗಳ ಬಂಧನ

Next Post

CBI News | ರೈಲ್ವೆ ಇಲಾಖಾ ಪರೀಕ್ಷಾ ಪತ್ರಿಕೆ ಸೋರಿಕೆ ಹಗರಣ ಭೇದಿಸಿದ ಸಿಬಿಐ : 25 ರೈಲ್ವೆ ಅಧಿಕಾರಿಗಳ ಬಂಧನ

Big Breaking News | ಬಸ್, ಮೆಟ್ರೋ ದರ ಏರಿಕೆ ಆಯ್ತು : ಈಗ ಬೆಂಗಳೂರು ಆಟೋ ಮೀಟರ್ ದರ ಏರಿಕೆ ಸಾಧ್ಯತೆ?

Please login to join discussion

Like Us on Facebook

Follow Us on Twitter

Recent News

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026

Space News | ಬಾನಂಗಳದಲ್ಲಿ ಇಂದು ವಿಸ್ಮಯ: ಗುರು, ಶುಕ್ರನ ನಡುವೆ ಬಾಲಚಂದ್ರನ ದರ್ಶನ, ಬರಿಗಣ್ಣಿನಿಂದಲೇ ಕಣ್ತುಂಬಿಕೊಳ್ಳಿ

June 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026

Space News | ಬಾನಂಗಳದಲ್ಲಿ ಇಂದು ವಿಸ್ಮಯ: ಗುರು, ಶುಕ್ರನ ನಡುವೆ ಬಾಲಚಂದ್ರನ ದರ್ಶನ, ಬರಿಗಣ್ಣಿನಿಂದಲೇ ಕಣ್ತುಂಬಿಕೊಳ್ಳಿ

June 17, 2026

ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

June 16, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group