“ಬೆಂಗಳೂರು ವೈರ್” ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿ ಐದನೇ ವಸಂತಕ್ಕೆ ಕಾಲಿಡುತ್ತಿದೆ. ಈ ಅವಧಿಯಲ್ಲಿ ನಮ್ಮ ಮಾಧ್ಯಮ ಸಂಸ್ಥೆಯ ಸುದ್ದಿಗಳು, ರಾಜ್ಯದಲ್ಲಿನ ಪ್ರಮುಖ ಮಾಧ್ಯಮಗಳಿಗೆ ಪ್ರೇರಣೆಯಾಗಿದೆ ಎಂಬುದು ನಮಗೂ ಹೆಮ್ಮೆ. 4ನೇ ವರ್ಷದ ಅವಧಿಯಲ್ಲಿ ತನಿಖಾ ವರದಿಗಳು, ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಪ್ರಕಟಿಸಿದೆ. ಇವುಗಳ ಲಿಂಕ್ ಅನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು ವೈರ್ ತನಿಖಾ ವರದಿ :
ರಾಜಕಾಲುವೆ ಹೂಳೆತ್ತುವುದು ಹಾಗೂ ಅದರ ವಾರ್ಷಿಕ ನಿರ್ವಹಣೆ ಎಂಬದು ಬಿಬಿಎಂಪಿಯ ಬೃಹತ್ ನೀರುಗಾಲುವೆ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸಾರ್ವಜನಿಕರ ಹಣ ಬಾಚಲು ಇರುವ ದೊಡ್ಡ ತಿಜೋರಿ ಎಂಬುದನ್ನು ಬೆಂಗಳೂರು ವೈರ್ ತನಿಖಾ ವರದಿಯಿಂದ ಬಹಿರಂಗಪಡಿಸಿತ್ತು. ವಿಜಯನಗರ ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ವೈರ್ ಕೈಗೊಂಡ ತನಿಖೆ ಹಾಗೂ ಟಿವಿಸಿಸಿ ನಡೆಸಿದ ಸ್ಥಳ ಪರಿಶೀಲನೆಯಿಂದ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡದೆ ಬಿಲ್ ಸಲ್ಲಿಸಿದರೂ ಅದನ್ನು ಬೃಹತ್ ನೀರುಗಾಲುವೆ ಅಧಿಕಾರಿಗಳು ಅನುಮೋದಿಸಿ ಭ್ರಷ್ಟಾಚಾರಕ್ಕೆ ಕೈಜೋಡಿಸಿರುವುದು ಕಂಡು ಬಂದಿತ್ತು.
ಕಾಮಗಾರಿಯಲ್ಲಿ ವ್ಯಾಪಕ ಅಕ್ರಮ, ನ್ಯೂನ್ಯತೆಗಳ ಬಗ್ಗೆ ದಾಖಲೆ ಸಮೇತ ಹಾಗೂ ತನಿಖಾ ವರದಿ ಮೂಲಕ 2024ರ ಫೆಬ್ರವರಿ 17ರಂದು ಸುದ್ದಿ ಪ್ರಕಟಿಸುವ ಮೂಲಕ ಬೆಂಗಳೂರು ವೈರ್ ಬಿಬಿಎಂಪಿಯ ಗಮನ ಸೆಳೆದಿತ್ತು. ಈ ವರದಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಗಂಭೀರವಾಗಿ ಪರಿಗಣಿಸಿ ಆಂತರಿಕ ಇಲಾಖೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
BW INVESTIGATION | CORRUPTION IN SWD MAINTENANCE | ರಾಜಕಾಲುವೆ ಹೂಳೆತ್ತುವಿಕೆ ಹೆಸರಲ್ಲಿ ನಗರದಾದ್ಯಂತ ನಡೆದಿದ್ಯಾ 142 ಕೋಟಿ ರೂ. ಹಗರಣ ? ವಿಜಯನಗರ, ಬಸವನಗುಡಿ ಕ್ಷೇತ್ರದಲ್ಲಿ ಮಾಡದ ಕೆಲಸಕ್ಕೆ ನಕಲಿ ಬಿಲ್?!!
ಬೆಂಗಳೂರು ವೈರ್ ವರದಿ ಪರಿಣಾಮ :
ಭಕ್ತರ ಅನುಕೂಲಕ್ಕೆಂದು ಕರ್ನಾಟಕದ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ 2022ರಲ್ಲಿ ಉದ್ಘಾಟಿಸಿರುವ 50 ಕೊಠಡಿಗಳ ನೂತನ ಅತಿಥಿಗೃಹ ಹಲವು ಅವ್ಯವಸ್ಥೆಗಳ ಅಗರವಾಗಿದೆ. ಕಟ್ಟಡ ನಿರ್ಮಾಣದಲ್ಲಿ ಕಳಪೆ ಸಾಮಗ್ರಿ ಬಳಸಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇಡೀ ಕಟ್ಟಡಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ. ವೆಚ್ಚದ ಮಾಡಿದರೂ ಇಡೀ ಕಟ್ಟಡ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ಕಣ್ಣಿಗೆ ರಾಚುತ್ತದೆ. ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಸಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂಬುದರ ಬಗ್ಗೆ ಬೆಂಗಳೂರು ವೈರ್ ರಿಯಾಲಿಟಿ ಚೆಕ್ ಕೈಗೊಂಡು ಈ ಬಗ್ಗೆ 2024ರ ಜೂನ್ 15ರಂದು ಸವಿವರವಾಗಿ ವರದಿ ಪ್ರಕಟಿಸಿತ್ತು.
BW Reality Check | Karnataka Guest House | ಮಂತ್ರಾಲಯದಲ್ಲಿ ಕರ್ನಾಟಕದ ಲೋಕೋಪಯೋಗಿ ಕಾಂಟ್ರಾಕ್ಟರ್ ಮಹಾತ್ಮೆ : ಮುಜರಾಯಿ ಇಲಾಖೆ ಕಳಪೆ ಅತಿಥಿಗೃಹ ಕಟ್ಟಡ ನಿರ್ಮಾಣದಲ್ಲಿ ಕೋಟಿ ಕೋಟಿ ಲೂಟಿ ಶಂಕೆ!!
ಈ ರಿಯಾಲಿಟಿ ಚೆಕ್ ವರದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಬಳಿಯ ಮುಜರಾಯಿ ಇಲಾಖೆಯು 5 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಅತಿಥಿಗೃಹ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿರುವ ಲೋಕಾಯುಕ್ತ ತನಿಖೆಗೆ ನೀಡುವಂತೆ ಆದೇಶಿಸಿದರು. “ಈ ರೀತಿಯ ಕಳಪೆ ಕಾಮಾಗಾರಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವಾಗಿರುವುದಲ್ಲದೇ, ಸಾರ್ವಜನಿಕ ಹಣವನ್ನು ಪೋಲು ಮಾಡಿರುವುದು ಹಾಗೂ ಭಕ್ತಾಧಿಗಳಿಗೆ ಅನಾನೂಕೂಲವಾಗಲು ಕಾರಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ಈ ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಹಾಗೂ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲು ಪ್ರಕರಣವನ್ನು ಲೋಕಾಯುಕ್ತರವರಿಗೆ ವಹಿಸಲು ಆದೇಶಿಸಿದೆ” ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಟಿಪ್ಪಣಿಯಲ್ಲಿ ತಿಳಿಸಿದ್ದರು. ಇದು ಬೆಂಗಳೂರು ವೈರ್ ವರದಿ ಪರಿಣಾಮವಾಗಿದೆ.
BW BIG IMPACT | ಮಂತ್ರಾಲಯದಲ್ಲಿನ ಮುಜರಾಯಿ ಇಲಾಖೆ ನೂತನ ಅತಿಥಿಗೃಹ ಕಟ್ಟಡ ಕಳಪೆ ಕಾಮಗಾರಿ : ಲೋಕಾಯುಕ್ತ ತನಿಖೆಗೆ ; “ಬೆಂಗಳೂರು ವೈರ್” ವರದಿ ಪರಿಣಾಮ
ಬೆಂಗಳೂರು ವೈರ್ ಎಕ್ಸ್ ಕ್ಲೂಸಿವ್ ಸುದ್ದಿಗಳು :
- BW EXCLUSIVE | ಪ್ರಧಾನಿ ಮೋದಿಗೆ ಆದಾಯ ತೆರಿಗೆ ಪಾವತಿದಾರರ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಐಟಿಪಿಎಫ್ ಪತ್ರ
- BW EXCLUSIVE | ಬಿಬಿಎಂಪಿ ವ್ಯಾಪ್ತಿಯಲ್ಲಿ ಜನರ ಜೋಬಿಗೆ ಭಾರವಾಗಲಿದೆ ತ್ಯಾಜ್ಯ ಬಳಕೆದಾರರ ಶುಲ್ಕ : ಅವೈಜ್ಞಾನಿಕ ಶುಲ್ಕ ನಿಗದಿ ಬಗ್ಗೆ ವ್ಯಾಪಕ ವಿರೋಧ : ಇಲ್ಲಿದೆ ಅಸಲಿ ಸತ್ಯ
- BW EXCLUSIVE | ರಾಜ್ಯ ಸರ್ಕಾರ- ಬೆಂಗಳೂರು ವಿವಿ ನಿಯಮ ಉಲ್ಲಂಘನೆ : ಜ್ಞಾನಭಾರತಿ ಕ್ಯಾಂಪಸ್ 673 ಎಕರೆ ಜೀವ ವೈವಿಧ್ಯತಾ ವನಕ್ಕೆ ಗಂಡಾಂತರ!!
- BW EXCLUSIVE | 83 ಕೆರೆಗಳು ತುಂಬಿದರೂ ಸಂತೋಷಪಡುವ ಸ್ಥಿತಿಯಲ್ಲಿಲ್ಲ ಬೆಂಗಳೂರು : ಯಲಹಂಕ, ಮಹದೇವಪುರ ವಲಯಗಳಲ್ಲಿ ಮಳೆಹಾನಿಗೆ ನಿಖರ ಕಾರಣಗಳೇನು? ಪಾಲಿಕೆ ಎಡವಿದ್ದೆಲ್ಲಿ?
- BW EXCLUSIVE | ಬಿಬಿಎಂಪಿ ವೆಬ್ ಸೈಟ್ ಡೊಮೈನ್ ಸಮಸ್ಯೆ : ಪರಿಹಾರಕ್ಕೆ ಗೂಗಲ್ ಮೊರೆ ; ಅಸ್ತವ್ಯಸ್ತವಾದ ನಾಗರೀಕ ಸೇವೆಗಳು
- BW EXCLUSIVE REPORT | Karnataka Landslide | ನಾಡಿನಲ್ಲಿ ಈ ಬಾರಿ 46 ಕಡೆ ಭೂ ಕುಸಿತ – ಸರ್ಕಾರದ ಇಚ್ಛಾಶಕ್ತಿಯ ಕುಸಿತ : 720 ಮಳೆ ಮಾಪನ ಕೇಂದ್ರಗಳೇ ಸ್ಥಗಿತ!! 7 ಜಿಲ್ಲೆಗಳ ಭವಿಷ್ಯದ ಬಗ್ಗೆ ಏನಂತಾರೆ ತಜ್ಞರು?
- BW EXCLUSIVE | BDA PRR TENDER FLOP | ಬಿಡಿಎ ಪೆರಿಫಿರಲ್ ರಿಂಗ್ ರೋಡ್ ಮೂರನೇ ಬಾರಿ ಕರೆದ ಟೆಂಡರ್ ವಿಫಲ : ಪ್ರಾಧಿಕಾರ ಎಡವುತ್ತಿರುವುದು ಎಲ್ಲಿ?
- BW EXCLUSIVE | ಬಿಎಚ್ ಇಎಲ್ ಜಂಕ್ಷನ್ ನಿರ್ಮಾಣ ಹಂತದ ನೈಸ್ ಲಿಂಕ್ ರಸ್ತೆ, ಮೈಸೂರು ರೋಡ್ ಟ್ರಾಫಿಕ್ ಗೆ ಸಿಗಲಿದೆಯಾ ಮುಕ್ತಿ? : ನಿಮ್ಮ 55 ನಿಮಿಷ ಸಮಯ ಉಳಿತಾಯ ಹೇಗೆ?
- BW EXCLUSIVE | Bangalore Lakes Status Analysis | ಸಂಪೂರ್ಣ ಬತ್ತಿದೆ ಬೆಂಗಳೂರಿನ 46 ಕೆರೆಗಳು : ನಗರದ ಕೆರೆಗಳಲ್ಲಿ ನೀರಿನ ಸಂಗ್ರಹವಿರೋದು ಶೇ.46ರಷ್ಟು ಮಾತ್ರ!! ಇಲ್ಲಿದೆ ಬೆಂಗಳೂರು ವೈರ್ ವಿಶ್ಲೇಷಣಾತ್ಮಕ ವರದಿ
BW EXCLUSIVE | Illegal Bulk Waste Mixing | ಕಸದ ಆಟೋ ಟಿಪ್ಪರ್, ಕಾಂಪ್ಯಾಕ್ಟರ್ ನಲ್ಲಿ ಬೃಹತ್ ಕಸ ಉತ್ಪಾದಕರ ಘನತ್ಯಾಜ್ಯ ಅಕ್ರಮ ಸೇರ್ಪಡೆ : ನಗರದ ಕಸ ವಿಂಗಡಣಾ ಕಾರ್ಯ ಶೇ.37ರಷ್ಟು ಮಾತ್ರ!! ಏನಿದರ ಹಿಂದಿನ ಸತ್ಯ!!??
BW EXCLUSIVE | BBMP Solid Waste | ಬೆಂಗಳೂರಿನ ಕಸಕ್ಕೆ ಆಶ್ರಯ ತಾಣಗಳಿವು : ಹಳ್ಳಿಗಳ ಅಭಿವೃದ್ಧಿ ಹೆಸರಲ್ಲಿ 6 ವರ್ಷದಲ್ಲಿ ಬಿಬಿಎಂಪಿಯಿಂದ ಬಿಡುಗಡೆಯಾಗಿತ್ತು 1052 ಕೋಟಿ ರೂ. : ಈಗಲೂ ನಿಂತಿಲ್ಲ ಗ್ರಾಮಸ್ಥರ ಪ್ರತಿಭಟನೆ ; ಇದರ ಅಸಲಿಯತ್ತೇನು?
- BW EXCLUSIVE | Karnataka Administrative Reforms Commission-2 | ಎರಡನೇ ಆಡಳಿತ ಸುಧಾರಣಾ ಆಯೋಗದ ವರದಿ ಅನುಷ್ಠಾನ : ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಾರಿಯಾಗಿಲ್ಲ ಶೇ.97.43ರಷ್ಟು ಶಿಫಾರಸುಗಳು
- BW EXCLUSIVE | ಬಿಬಿಎಂಪಿ ದಾಸರಹಳ್ಳಿ ವಲಯ : ಅಧಿಕಾರದ ಲಾಲಸೆಗೆ ಜಂಟಿ ಆಯುಕ್ತರ ಹುದ್ದೆಯೇ ಬದಲು!! – ಚೀಫ್ ಕಮಿಷನರ್ ಆಕ್ಷೇಪಕ್ಕೂ ಮೀರಿದ ಪ್ರಭಾವದ ಹಿಂದೆ ಯಾರಿದ್ದಾರೆ?
- BW EXCLUSIVE | BBMP White topping Roads | ಬೆಂಗಳೂರಿನ ಉದ್ಯಾನನಗರಿ ಪಟ್ಟಕ್ಕೆ ಕುತ್ತು : ಬಿಳಿ ಆನೆ ಸಾಕಲು ಹೊರಟ ಬಿಬಿಎಂಪಿ ; 1200 ಕೋಟಿ ರೂ. ಬೃಹತ್ ವೆಚ್ಚದಲ್ಲಿ ಮತ್ತೆ ಕಾಂಕ್ರೀಟ್ ರಸ್ತೆ
- BW EXCLUSIVE | BIG NEWS | ಬಿಬಿಎಂಪಿ ಕಂದಾಯ ಇಲಾಖೆ ಕೇಂದ್ರ ಕಚೇರಿಯಲ್ಲಿ ಏಕ ವ್ಯಕ್ತಿಯ 28 ವರ್ಷ ಚಕ್ರಾಧಿಪತ್ಯ : ವರ್ಗಾವಣೆ ರೂಲ್ಸ್ ಗೆ ಡೋಂಟ್ ಕೇರ್ – ಇಲ್ಲಿದೆ ಸಾಲಿಡ್ ಪ್ರೂಫ್!!