Monday, June 15, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

  • Bengaluru Focus

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BJP Vijaya Sankalpa Convention | “24*7 ಮತ್ತು 2047 ನನ್ನ ಸಂಕಲ್ಪ, ಏ.26ರಂದು ಗರಿಷ್ಠ ಮತದಾನ ಮಾಡಿ” : ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ

ಕಾಂಗ್ರೆಸ್, ಇಂಡಿಯಾ ಒಕ್ಕೂಟ ಮೋದಿ ವಿರುದ್ಧ ಆರೋಪ ಮಾಡುತ್ತಿದೆ. ಆದರೆ ಮೋದಿ, 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿ, ಭಾರತದ ಗ್ಲೋಬಲ್ ಇಮೇಜ್ ಕಡೆ ಗಮನ ನೀಡಿದ್ದಾರೆ – ನರೇಂದ್ರ ಮೋದಿ

by Bengaluru Wire Desk
April 20, 2024
in Bengaluru Focus, News Wire, Public interest
Reading Time: 1 min read
0
ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ‘ವಿಜಯ ಸಂಕಲ್ಪ’ ಸಮಾವೇಶದ ಬಳಿಕ ಬಿಜೆಪಿ ಅಭ್ಯರ್ಥಿಗಳ ಜೊತೆ ಸಾರ್ವಜನಿಕರತ್ತ ಕೈಬೀಸಿದ ಪ್ರಧಾನಿ ನರೇಂದ್ರ ಮೋದಿ. ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರು ಇದೇ ಸಂದರ್ಭದಲ್ಲಿ ಜೊತೆಗಿದ್ದರು.

ಬೆಂಗಳೂರು, ಏ.20 www.bengaluruwire.com : ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯನ್ನು ಕಾಂಗ್ರೆಸ್ ಹಾಳುಮಾಡಿದೆ. ಈ ನಗರವನ್ನು ಟ್ಯಾಂಕರ್ ಸಿಟಿ ಮಾಡಿದೆ.  ಭ್ರಷ್ಟಾಚಾರದ ಕಡೆ ಕಾಂಗ್ರೆಸ್ಸಿಗರು ಗಮನ ಕೊಟ್ಟಿದ್ದಾರೆ ಎಂದು  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟೀಕಿಸಿದರು.

ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ‘ವಿಜಯ ಸಂಕಲ್ಪ’ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಇಂಡಿಯಾ ಒಕ್ಕೂಟ ತಂತ್ರಜ್ಞಾನದ ವಿರೋಧಿ. ಕಾಂಗ್ರೆಸ್ ಪಕ್ಷ ಆಧಾರ್, ಜನ್‍ಧನ್ ಖಾತೆ ವಿರೋಧಿಸಿತ್ತು. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಭಾರತದಲ್ಲಿ ತಯಾರಾದ ಲಸಿಕೆಯನ್ನೂ ವಿರೋಧಿಸಿತ್ತು ಎಂದು ನೆನಪಿಸಿಕೊಂಡರು. ಬೆಂಗಳೂರು ಮತ್ತು ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆ ಸವಿವರವಾಗಿ ತಮ್ಮ ಭಾಷಣದಲ್ಲಿ ತಿಳಿಸಿದರು.

ದೇಶದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಇಲ್ಲಿ ಮೆಟ್ರೋ ವಿಸ್ತರಣೆ ನಡೆದಿದ್ದು, ಹಳದಿ ಮಾರ್ಗವೂ ಕೂಡ ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಮೋದಿ ಸೋಲಿಸುವುದೊಂದೇ ‘ಇಂಡಿ’ಯ ಧ್ಯೇಯವಾಗಿದೆ. ಕಾಂಗ್ರೆಸ್ ಪಕ್ಷ ಯುವಜನರ ವಿರೋಧಿ, ಹೂಡಿಕೆಗೆ ವಿರೋಧಿ, ಉದ್ಯಮಗಳ ವಿರೋಧಿ ಪಕ್ಷ. ಕಾಂಗ್ರೆಸ್ ಆಡಳಿತದಲ್ಲಿ ಬಾಂಬ್ ಸ್ಫೋಟವಾಗುತ್ತಿದೆ. ಯುವತಿಯರ ಹತ್ಯೆ ಆಗುತ್ತಿದೆ. ಕಾಂಗ್ರೆಸ್ ಬಗ್ಗೆ ಎಚ್ಚರದಿಂದಿರಿ ಎಂದು ತಿಳಿಸಿದರು.

ಕರ್ನಾಟಕದ ಕಾಂಗ್ರೆಸ್ ಸರಕಾರವು ರೈತರ ವಿರೋಧಿ ಎಂದು ಆಕ್ಷೇಪಿಸಿದ ಅವರು, ಕೇಂದ್ರ ಸರಕಾರವು ರೈತರ ಉತ್ಪನ್ನಗಳನ್ನು ಶೇಖರಿಸಲು ಗೋದಾಮುಗಳನ್ನು ನಿರ್ಮಿಸುತ್ತಿದೆ. ರಾಗಿಯನ್ನು ಜಗತ್ತಿನ ವಿವಿಧ ದೇಶಗಳಿಗೆ ಪರಿಚಯಿಸಿದ್ದೇವೆ. ನಿಮ್ಮ ಸಂಕಲ್ಪಗಳನ್ನು ಈಡೇರಿಸಲು ಬಿಜೆಪಿ- ಜೆಡಿಎಸ್ ಒಟ್ಟಾಗಿವೆ. ನಿಮ್ಮ ಕನಸು ನನಸಾಗಿಸುವುದೇ ನನ್ನ ಸಂಕಲ್ಪ. 24*7 ಮತ್ತು 2047 ನನ್ನ ಸಂಕಲ್ಪ. ವಿಕಸಿತ ಭಾರತಕ್ಕಾಗಿ 26ರಂದು ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಗರಿಷ್ಠ ಮತದಾನ ಮಾಡಿ; ಮನೆಮನೆಗೆ ತೆರಳಿ ‘ಮೋದಿಯವರು ಬಂದಿದ್ದರು; ನಿಮಗೆ ನಮಸ್ಕಾರ ಹೇಳಿದ್ದಾರೆ’ ಎಂದು ತಿಳಿಸಲು ವಿನಂತಿಸಿದರು.

ಪ್ರಧಾನಿ ನರೇಂದ್ರ ಮೋದಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರೊಬ್ಬರು ತಮ್ಮ ತೋಳಿನಲ್ಲಿ ಹಾಕಿಕೊಂಡಿದ್ದ ಪಕ್ಷದ ಕಮಲ ಚಿಹ್ನೆಯನ್ನು ಅಭಿಮಾನದಿಂದ ಪ್ರದರ್ಶಿಸಿದರು. ಮತ್ತೊಬ್ಬ ಪ್ರೇಕ್ಷಕರೊಬ್ಬರು ಮೋದಿ ಕುರಿತು ಭಿತ್ತಿಪತ್ರ ಹಿಡಿದು ಅಭಿಮಾನ ವ್ಯಕ್ತಪಡಿಸಿದರು.

ಸಾಧನೆಯ ಟ್ರ್ಯಾಕ್ ರೆಕಾರ್ಡ್ ಮೂಲಕ ಮತ್ತೆ ಮತ ಕೇಳಲು ಬಂದಿದ್ದೇನೆ :

ಕರ್ನಾಟಕಕ್ಕೂ ಬುಲೆಟ್ ಟ್ರೈನ್ ಸಿಗಲಿದೆ. ಯುವಜನರಿಗೆ ಉದ್ಯೋಗಾವಕಾಶ ಸಿಗುತ್ತಿದೆ. ಹೂಡಿಕೆ ಅವಕಾಶಗಳು ಹೆಚ್ಚಾಗಿವೆ. ಡ್ರೋಣ್ ಉಪಯೋಗದ ಅವಕಾಶಗಳು ಹೆಚ್ಚಿಸಿದ್ದೇವೆ. ಡಿಜಿಟಲ್ ಇಂಡಿಯಾದಿಂದ ಹೊಸ ಉದ್ಯಮಗಳು ಬಂದಿವೆ.  ಎಚ್‍ಎಎಲ್‍ಗೆ ಗರಿಷ್ಠ ದಾಖಲೆಯ ಲಾಭ ದೊರಕಿದೆ. ಇದೆಲ್ಲವನ್ನೂ ಕಾಂಗ್ರೆಸ್ ಮಾಡಲು ಸಾಧ್ಯವಿತ್ತೇ? ಇಂದು ವಿದೇಶಿಗರೆಲ್ಲರೂ ಭಾರತದ ಸ್ನೇಹ ಬಯಸುತ್ತಾರೆ. ಹೂಡಿಕೆದಾರರು ಗರಿಷ್ಠ ಹಣ ಹೂಡುತ್ತಿದ್ದಾರೆ. ರಫ್ತಿನಲ್ಲಿ ಗಮನಾರ್ಹ ಸಾಧನೆ ನಮ್ಮದಾಗಿದೆ. ವಿಶ್ವದ 11ನೇ ಆರ್ಥಿಕ ಸ್ಥಾನದಿಂದ ಇದೀಗ ಭಾರತವು 5ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈ ಬದಲಾವಣೆಯನ್ನು ನೀವೆಲ್ಲರೂ ನೋಡಿದ್ದೀರಿ. ಇದೆಲ್ಲವೂ 10 ವರ್ಷಗಳಲ್ಲಿ ಆಗಿದೆ. ಈ ಪರಿವರ್ತನೆಗೆ ಯಾರು ಕಾರಣರು ಎಂದಾಗ ‘ಮೋದಿ ಮೋದಿ’ ಎಂದು ಜನರು ಘೋಷಣೆ ಕೂಗಿದರು. ನಿಮ್ಮ ಒಂದು ಮತವು ಇದಕ್ಕೆ ಕಾರಣ. ಸಾಧನೆಯ ಟ್ರ್ಯಾಕ್ ರೆಕಾರ್ಡ್ ಮೂಲಕ ಮತ್ತೆ ಮತ ಕೇಳಲು ಬಂದಿದ್ದೇನೆ. ಎನ್‍ಡಿಎ- ಇಂಡಿಯಾ ಒಕ್ಕೂಟದ ಪ್ರಚಾರ ನೋಡಿದ್ದೀರಿ. ಕಾಂಗ್ರೆಸ್, ಇಂಡಿಯಾ ಒಕ್ಕೂಟ ಮೋದಿ ವಿರುದ್ಧ ಆರೋಪ ಮಾಡುತ್ತಾರೆ. ಆದರೆ ಮೋದಿ, 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿ, ಭಾರತದ ಗ್ಲೋಬಲ್ ಇಮೇಜ್ ಕಡೆ ಗಮನ ನೀಡಿದ್ದಾರೆ ಎಂದು ತಿಳಿಸಿದರು.

ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಫಿರ್ ಏಕ್ ಬಾರ್ ಮೋದಿ ಸರಕಾರ ಎಂಬ ಸಂದೇಶ ಇದರಿಂದ ಲಭಿಸಿದೆ ಎಂದು ತಿಳಿಸಿದ ಅವರು, 2014ರ ಪೂರ್ವದಲ್ಲಿ ಭಾರತವು ಆರ್ಥಿಕವಾಗಿ ಹಿಂದುಳಿದ ದೇಶವಾಗಿತ್ತು. 2014, 2019ರಲ್ಲಿ ಎನ್‍ಡಿಎ ಸರ್ಕಾರವನ್ನು ಜನರು ಆಯ್ಕೆ ಮಾಡಿದ್ದು, ಭಾರತವು ಸಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದೆ. ನಾವು ನುಡಿದಂತೆ ನಡೆದಿದ್ದೇವೆ.

ಬಡವರ ಕುಟುಂಬದಿಂದ ನಾನು ಬಂದಿದ್ದೇನೆ. ಬಡತನದ ಬಗ್ಗೆ ಅರಿವಿದೆ. ದೇಶದಲ್ಲಿ ವೇಗವಾಗಿ ನಗರೀಕರಣ ನಡೆದಿದೆ. ಜನರಿಗೆ ಉತ್ತಮ ಮೂಲಸೌಕರ್ಯ ಕೊಡಲು ನಾವು ಬದ್ಧತೆ ಪ್ರದರ್ಶಿಸಿದ್ದೇವೆ. 1 ಕೋಟಿ ಮನೆಗಳನ್ನು ಕೊಡಲಾಗಿದೆ. ಮಧ್ಯಮ ವರ್ಗದವರಿಗೆ ಮನೆಗಳಿಗೆ ಬಡ್ಡಿಗೆ ಸಹಾಯಧನ ನೀಡಲಾಗಿದೆ. ರೇರಾ ಕಾಯ್ದೆ ತಂದಿದ್ದೇವೆ ಎಂದು ವಿವರಿಸಿದರು.

ಶೇ.80ರಷ್ಟು ಕಡಿಮೆ ದರಕ್ಕೆ ಔಷಧಿ ಸಿಗುತ್ತಿದೆ :

ಈಗ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಕೊಡಬೇಕಿಲ್ಲ. ಯುಪಿಎ ಇದ್ದಾಗ ಹತ್ತಾರು ತೆರಿಗೆಗಳು ಇದ್ದವು. ಜಿಎಸ್‍ಟಿ ಬಳಿಕ ಪರೋಕ್ಷ ತೆರಿಗೆಗಳು ಕಡಿಮೆ ಆಗಿವೆ. ಎಲ್‍ಇಡಿ ಬಲ್ಬ್ 400 ರೂ. ಇದ್ದುದು 40 ರೂ. ಆಗಿದೆ. ಇದರಿಂದ ವಿದ್ಯುತ್ ಬಿಲ್ ಕಡಿಮೆ ಆಗಿದೆ. ಎನ್‍ಡಿಎ ಈಗ ಪಿಎಂ ಸೂರ್ಯ ಘರ್ ಎಂಬ ಯೋಜನೆ ಜಾರಿ ಮಾಡಿದೆ. ಇದರಿಂದ ವಿದ್ಯುತ್ ಬಿಲ್ ಶೂನ್ಯವಾಗಲಿದೆ; ಇಲೆಕ್ಟ್ರಿಕ್ ವಾಹನಗಳಿಂದ ಚಾರ್ಜಿಂಗ್ ಕೂಡ ಮನೆಯಲ್ಲೇ ಮಾಡಬಹುದು. ಬಡವರು, ಮಧ್ಯಮ ವರ್ಗದ ಆರೋಗ್ಯದ ವೆಚ್ಚ ದೊಡ್ಡದಾಗಿತ್ತು. ಆಯುಷ್ಮಾನ್ ಭಾರತ್ ಮೂಲಕ ಉಳಿತಾಯ ಸಾಧ್ಯವಾಗಿದೆ. ಬಿಜೆಪಿ ಈ ಯೋಜನೆಯನ್ನು ಇದೀಗ ಹಿರಿಯ ನಾಗರಿಕರಿಗೂ ವಿಸ್ತರಿಸಿದೆ. ಎನ್‍ಡಿಎ ಸರಕಾರ ಜನೌಷಧಿ ಕೇಂದ್ರ ತೆರೆದಿದ್ದು, ಇದರಿಂದ ಶೇ. 80ರಷ್ಟು ಕಡಿಮೆ ದರಕ್ಕೆ ಔಷಧಿ ಸಿಗುತ್ತಿದೆ.

ಬೆಂಗಳೂರು ಡಿಜಿಟಲ್ ಇಂಡಿಯದ ದೊಡ್ಡ ಹಬ್ ಆಗಿದೆ. ಭಾರತದಲ್ಲಿ ಮೊಬೈಲ್ ಡೇಟಾ ದರ 2014ರಲ್ಲಿ 1 ಜಿಬಿಗೆ 250 ರೂ. ಹತ್ತಿರ ಇತ್ತು. ಈಗ ಅದು 10 ರೂ. ಗಳಷ್ಟಾಗಿದೆ. ಎಷ್ಟು ಉಳಿತಾಯ ಆಗಿದೆ ಎಂದು ಯೋಚಿಸಿ. ಡೇಟಾ ಸೆಕ್ಯುರಿಟಿಗೆ ನಾವು ಆದ್ಯತೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ರಾಜ್ಯದಿಂದ 28 ಎನ್‍ಡಿಎ ಸಂಸದರನ್ನು ಕೇಂದ್ರಕ್ಕೆ ಕಳಸುತ್ತೇವೆ : ಬಿಎಸ್ ವೈ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯದಿಂದ 28 ಎನ್‍ಡಿಎ ಸಂಸದರನ್ನು ಕಳಿಸಿಕೊಡಲಿದ್ದೇವೆ. ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಆಗಿರುವುದರಿಂದ ಎಲ್ಲ 28 ಸ್ಥಾನಗಳು ಎನ್‍ಡಿಎ ಪರವಾಗಲಿದೆ. ಕಾಂಗ್ರೆಸ್ ಸ್ನೇಹಿತರು ಜನಹಿತ ಮರೆತು ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ದೇಶದಲ್ಲಿ ಕಳೆದ ಬಾರಿಯಷ್ಟು ಅಂದರೆ 52 ಸೀಟನ್ನಾದರೂ ಗೆದ್ದು ತೋರಿಸಿ ಎಂದು ಕಾಂಗ್ರೆಸ್ಸಿಗರಿಗೆ ಸವಾಲು ಹಾಕಿದರು.

ಬೆಂಗಳೂರು ದಕ್ಷಿಣ, ಬೆಂಗಳೂರು ಮಧ್ಯ, ಬೆಂಗಳೂರು ಉತ್ತರ ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಸಭೆ ಇದಾಗಿತ್ತು. ಅಭ್ಯರ್ಥಿಗಳಾದ ಡಾ.ಮಂಜುನಾಥ್, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ವಿಪಕ್ಷ ನಾಯಕ ಅಶೋಕ, ಬಿಜೆಪಿ- ಜೆಡಿಎಸ್ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

WhatsApp Join our WhatsApp Channel
Previous Post

#Bangalorekaraga | ಬೆಂಗಳೂರಿನಲ್ಲಿ ನಾಳೆ ಮಧ್ಯರಾತ್ರಿ ಹಸಿ ಕರಗ ; ವಹ್ನಿಕುಲ ಕ್ಷತ್ರಿಯರಿಂದ ಧಾರ್ಮಿಕ ಆಚರಣೆಗೆ ತಯಾರಿ : ಏ.23 ರಂದು ಕರಗ ಶಕ್ತ್ಯೋತ್ಸವ

Next Post

Viral Video News | ಸಿಡ್ನಿ ಆಕಾಶದಲ್ಲಿ ರಾಕ್ಷಸಾಕಾರದ ನಿಗೂಢ ವಿದ್ಯಮಾನ ಕಂಡು ಹೌಹಾರಿದ ಜನ!!

Next Post

Viral Video News | ಸಿಡ್ನಿ ಆಕಾಶದಲ್ಲಿ ರಾಕ್ಷಸಾಕಾರದ ನಿಗೂಢ ವಿದ್ಯಮಾನ ಕಂಡು ಹೌಹಾರಿದ ಜನ!!

Pakistani Women Gives Birth To 6 Babies | ಅತ್ಯರೂಪದ ಪ್ರಕರಣ : ಪಾಕಿಸ್ತಾನದಲ್ಲಿ ಒಂದೇ ಗಂಟೆಯಲ್ಲಿ 6 ಮಕ್ಕಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ ಮಹಾತಾಯಿ

Please login to join discussion

Like Us on Facebook

Follow Us on Twitter

Recent News

#OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

June 15, 2026

Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

June 15, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

#OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

June 15, 2026

Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

June 15, 2026

ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

June 14, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group