Friday, September 11, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

    ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

  • Bengaluru Focus

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

    ಓಲಾ, ಊಬರ್ ಗೂ ಬಿಎಂಟಿಸಿ ಲೈವ್ ಟ್ರ್ಯಾಕಿಂಗ್ ಆಪ್: ಮೆಟ್ರೋಗೆ 200 ಮಿನಿ ಎಸಿ ಬಸ್ ಸಂಪರ್ಕ

    ಯಶವಂತಪುರ ಎಪಿಎಂಸಿಗೆ ಸಿಎಂ ದಿಢೀರ್ ಭೇಟಿ: ವಿಮೆ ವಂಚಿಸಿದ ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಡಿಕೆಶಿ ಸೂಚನೆ

    ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

    Railway News | ಶಿವಮೊಗ್ಗ-ಬೆಂಗಳೂರು-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಶೀಘ್ರ?

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Vande Bharath Express Rail | ಹೊಸದಾಗಿ 120 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು ಉತ್ಪಾದಿಸುವ ಯೋಜನೆಗೆ ಆರಂಭದಲ್ಲೇ ವಿಘ್ನ?

120 ಸೆಮಿ ಹೈಸ್ಪೀಡ್ ರೈಲುಗಳ ಉತ್ಪಾದಿಸುವ ಯೋಜನೆ ರಷ್ಯಾ ಸಾರಿಗೆ ದೈತ್ಯ ಕಂಪನಿ ಟಿಎಂಎಚ್ ಹಾಗೂ ದೇಶದ ಸಾರ್ವಜನಿಕ ಉದ್ದಿಮೆ ಆರ್ ವಿಎನ್ಎಲ್ ಜಂಟಿ ಸಹಭಾಗಿತ್ವದ ಕಂಪನಿಗಳು ಪಡೆದುಕೊಂಡಿವೆ | ಆದಾಯ ಪಾಲು ಹಂಚಿಕೆ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ ರೈಲು ಉತ್ಪಾದನಾ ಯೋಜನೆಗೆ ತೊಡಕಾಗಿದೆ ಎಂದು ತಿಳಿದು ಬಂದಿದೆ.

by Bengaluru Wire Desk
June 1, 2023
in News Wire, Public interest
Reading Time: 1 min read
0
ಚೆನ್ನೈ ನಲ್ಲಿರುವ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಚಿತ್ರ (ಚಿತ್ರ ಕೃಪೆ : ಚೆನ್ನೈ ಐಸಿಎಫ್)

ಚೆನ್ನೈ ನಲ್ಲಿರುವ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಚಿತ್ರ (ಚಿತ್ರ ಕೃಪೆ : ಚೆನ್ನೈ ಐಸಿಎಫ್)

ನವದೆಹಲಿ, ಜೂ.1 www.bengaluruwire.com : ದೇಶಾದ್ಯಂತ 18 ಮಾರ್ಗಗಳಲ್ಲಿ ಪ್ರಾರಂಭವಾಗಿರುವ ವಂದೇ ಭಾರತ್ ರೈಲು ಈತನಕ 36 ಕಡೆಗಳಲ್ಲಿ ಸೇವೆ ಆರಂಭಿಸಿದೆ. ಉಳಿದಂತೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲಿನ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲು ರಷ್ಯಾ ದೇಶದ ಸಾರಿಗೆ ದೈತ್ಯ ಕಂಪನಿ ಟಿಎಂಎಚ್ (Transmashholding – TMH) ಜೊತೆಗೆ ದೇಶದ ರೈಲು ವಿಕಾಸ ನಿಗಮ (RVNL) 120 ವಂದೇ ಭಾರತ್ ರೈಲುಗಳನ್ನು ಜಂಟಿಯಾಗಿ ಉತ್ಪಾದಿಸುವ ಯೋಜನೆಗೆ ಆರಂಭದಲ್ಲೇ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ದೇಶಾದ್ಯಂತ ಪ್ರಸ್ತುತ 22 ರಾಜ್ಯಗಳಲ್ಲಿ ಹಾಗೂ 100ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು ಇದೀಗ ದೇಶೀಯ ಜನರ ಹೆಮ್ಮೆಯ ಪ್ರತೀಕವಾಗಿದೆ. ಇದರಿಂದ ಸ್ಪೂರ್ತಿ ಪಡೆದ ಕೇಂದ್ರ ಸರ್ಕಾರ ಈ ಸೇವೆಯನ್ನು ದೇಶದ ಇತರ ರಾಜ್ಯಗಳಿಗೂ ವಿಸ್ತಿರಿಸಲು ಹೊಸದಾಗಿ 120 ವಂದೇ ಭಾರತ್ ರೈಲುಗಳನ್ನು ಉತ್ಪಾದಿಸಲು ಸುಮಾರು 40 ಸಾವಿರ ಕೋಟಿ ರೂ. ಬೃಹತ್ ಮೊತ್ತ ಯೋಜನೆಯನ್ನು ರೂಪಿಸಿತ್ತು. ಈ ಯೋಜನೆಯನ್ನು ರಷ್ಯಾದ ಟೆಎಂಎಚ್ ಹಾಗೂ ಕೇಂದ್ರ ಸಾರ್ವಜನಿಕ ಉದ್ದಿಮೆಯಾದ ಆರ್ ವಿಎನ್ಎಲ್ ಪಡೆದು 45 ದಿನಗಳಾಗುತ್ತಾ ಬಂದರೂ ಈ ನಿಟ್ಟಿನಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆರಂಭವಾಗಿಲ್ಲ.

ಮಾಧ್ಯಮಗಳ ವರದಿಯಂತೆ ಜಂಟಿ ಸಹಭಾಗಿತ್ವದಲ್ಲಿ 120 ರೈಲುಗಳ ಉತ್ಪಾದನೆಗೆ ಕಾರ್ಯಕ್ಷಮತಾ ಬ್ಯಾಂಕ್ ಖಾತ್ರಿಯನ್ನು ಈತನಕ ಈ ಸಂಸ್ಥೆಗಳು ಪಾವತಿಸಿಲ್ಲ. ಜಂಟಿ ಸಹಭಾಗಿತ್ವದ ಈ ಗುತ್ತಿಗೆ ಯೋಜನೆಯಲ್ಲಿ ಪಾಲಿಗೆ ಸಂಬಂಧಿಸಿದಂತೆ ಮಾತುಕತೆ ಬಗೆಹರಿಯದ ಕಾರಣ ರಷ್ಯಾದ ಟಿಎಂಎಚ್ ತನ್ನ ಪಾಲಿನ ಬ್ಯಾಂಕ್ ಖಾತ್ರಿಯಾದ 200 ಕೋಟಿ ರೂ. ಹಣವನ್ನು ಇನ್ನೂ ಪಾವತಿಸಿಲ್ಲ. ಇದರಿಂದಾಗಿ ಈ ಕಂಪನಿಗೆ ಭಾರತೀಯ ರೈಲ್ವೆಯು ದಂಡ ಹಾಕುವ ಸಾಧ್ಯತೆಯಿದೆ. ಆರ್ ವಿಎನ್ಎಲ್ ಸಂಸ್ಥೆಯು ಈ ಜಂಟಿ ಸಹಭಾಗಿತ್ವ ಯೋಜನೆಯಲ್ಲಿ ಸಣ್ಣ ಪಾಲುದಾರನಾಗಿದ್ದರೆ, ರಷ್ಯಾದ ಟಿಎಮ್ಎಚ್ ಅತಿದೊಡ್ಡ ಷೇರು ಹೊಂದಿದ ಉದ್ದಿಮೆಯಾಗಿದೆ. ಈ ಹಿಂದೆ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಮಲಗುವ ಸೌಲಭ್ಯವನ್ನು ಒಳಗೊಂಡಂತೆ ಪ್ರತಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ 120 ಕೋಟಿ ರೂ. ವೆಚ್ಚದಲ್ಲಿ ಉತ್ಪಾದಿಸುವುದಾಗಿ ಅತಿ ಕಡಿಮೆ ಬಿಡ್ ಮಾಡಿ ಈ ಯೋಜನೆಯನ್ನು ಪಡೆದುಕೊಂಡಿತ್ತು. ಆದರೀಗ ಎರಡು ಸಂಸ್ಥೆಗಳ ನಡುವಣ ಗೊಂದಲ ಬಗೆಹರಿದಿಲ್ಲ.

ಚೆನ್ನೈನಲ್ಲಿನ ಇಂಟಿಗ್ರೇಟೆಡ್ ಕೋಚ್ ತಯಾರಿಕಾ ಕಾರ್ಖಾನೆ ಒಳಗಿನ ಚಿತ್ರ (ಚಿತ್ರಕೃಪೆ : ಚೆನ್ನೈ ಐಸಿಎಫ್)

ಯೋಜನೆ ಅನುಷ್ಠಾನಕ್ಕೆ ತೊಡಕಾದ ರಷ್ಯಾ- ಉಕ್ರೇನ್ ಯುದ್ಧ? :

ಇನ್ನೊಂದೆಡೆ ರಷ್ಯಾ- ಉಕ್ರೇನ್ ರಾಷ್ಟ್ರಗಳ ನಡುವಣ ಕದನದಿಂದಾಗಿ ವಿವಿಧ ದೇಶಗಳು ರಷ್ಯಾ ಮೇಲೆ ಸಾಕಷ್ಟು ದಿಗ್ಭಂಧನ ವಿಧಿಸಿರುವುದರಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉತ್ಪಾದನೆಗೆ ಅಗತ್ಯವಾದ ಬಿಡಿ ಭಾಗಗಳ ಪೂರೈಕೆಯಾಗುತ್ತಿಲ್ಲ. ಕಳೆದ ಮಾರ್ಚ್ ಆರಂಭದಲ್ಲಿ 120 ವಂದೇ ಭಾರತ್ ರೈಲು ಉತ್ಪಾದನೆಗೆ ಟ್ರಾನ್ಸ್ ಮಾಷ್ ಹೋಲ್ಡಿಂಗ್ ಮತ್ತು ರೈಲು ವಿಕಾಸ ನಿಗಮವು ಯಶಸ್ವಿಯಾಗಿ ಟೆಂಡರ್ ತಮ್ಮದಾಗಿಸಿಕೊಂಡರೂ, ರೈಲು ಉತ್ಪಾದನೆಗೆ ಆರಂಭಿಕ ವಿಘ್ನ ಎದುರಾಗಿದೆ ಎಂದು ಮಾಧ್ಯಮಗಳು ತಮ್ಮ ವರದಿಯಲ್ಲಿ ತಿಳಿಸಿವೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತ್ವರಿತ ವೇಗವರ್ಧನೆ ಮತ್ತು ಸಮಕಾಲೀನ ಪ್ರಯಾಣಿಕರ ಸೌಕರ್ಯಗಳೊಂದಿಗೆ ಭಾರತದ ಮೊದಲ ಸೆಮಿ ಹೈಸ್ಪೀಡ್ ರೈಲು.  ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 15 ಫೆಬ್ರವರಿ 2019 ರಂದು ನವದೆಹಲಿ ಮತ್ತು ಯುಪಿಯ ವಾರಣಾಸಿ ನಡುವೆ ಉದ್ಘಾಟಿಸಿದ್ದರು. ಫ್ಲ್ಯಾಗ್ ಆಫ್ ಮಾಡಿದರು.  ವಂದೇ ಭಾರತ್ ರೈಲುಗಳು ಮೇಕ್ ಇನ್ ಇಂಡಿಯಾ (Make In India) ಉಪಕ್ರಮದ ಪ್ರಮುಖ ಉದಾಹರಣೆಯಾಗಿದೆ. ಈ ಅತ್ಯಾಧುನಿಕ ಸೆಮಿ ಹೈ ಸ್ಪೀಡ್ ಡಿಸ್ಟ್ರಿಬ್ಯೂಟ್ ಪವರ್ ಟ್ರೈನ್‌ಗಳನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಪ್ರಸ್ತುತ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆ.

ಈತನಕ 38.43 ಲಕ್ಷ ಕಿ.ಮೀ ಕ್ರಮಿಸಿದ ವಂದೇ ಭಾರತ್ ರೈಲು :

ಈ ರೈಲುಗಳು ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ (ಕವಾಚ್) ಸೇರಿದಂತೆ ಎಲ್ಲಾ ಅಂತರರಾಷ್ಟ್ರೀಯ ಸುರಕ್ಷತೆ ಮತ್ತು ಸೌಕರ್ಯ ಸಂಬಂಧಿತ ಮಾನದಂಡಗಳನ್ನು ಪೂರೈಸುತ್ತಿವೆ. ಗಂಟೆಗೆ ಪ್ರತಿ 180 ಕಿ.ಮೀ ವೇಗದಲ್ಲಿ ಪರೀಕ್ಷಿಸಲ್ಪಟ್ಟ ವಂದೇ ಭಾರತ್ ಎಕ್ಸ್‌ಪ್ರೆಸ್ ಗರಿಷ್ಠ ಗಂಟೆಗೆ 160 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ವಿಶಿಷ್ಟ ಲಕ್ಷಣಗಳಾಗಿವೆ. ಪ್ರಸ್ತುತ, ವಂದೇ ಭಾರತ್ 99 ವಿಶಿಷ್ಟ ನಿಲುಗಡೆಗಳಲ್ಲಿ ಜನರಿಗೆ ಸೇವೆ ಸಲ್ಲಿಸುತ್ತಿದೆ. ಇಲ್ಲಿಯವರೆಗೆ (21.05.2023 ರವರೆಗೆ), ವಂದೇ ಭಾರತ್ ರೈಲುಗಳು 38,43,934.12 ಕಿಮೀಗಳನ್ನು ಕ್ರಮಿಸಿದ್ದು, ಇದು ಭೂಮಿಯ 95.64 ಸುತ್ತುಗಳಿಗೆ ಸಮಾನವಾಗಿದೆ.

ಮುಂದಿನ ವಂದೇ ಭಾರತ್ ಸೇವೆಯನ್ನು ಗೋವಾ-ಮುಂಬೈ ಮಾರ್ಗಕ್ಕೆ ನಿಗದಿಪಡಿಸಲಾಗಿದೆ.  ಜೂನ್ 2023 ರ ಅಂತ್ಯದ ವೇಳೆಗೆ, ಎಲ್ಲಾ ರಾಜ್ಯಗಳು ಈ ಪ್ರತಿಷ್ಠಿತ ರೈಲಿನೊಂದಿಗೆ ಸಂಪರ್ಕಗೊಳ್ಳುವ ನಿರೀಕ್ಷೆಯಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BMTC Student Bus Pass | ಬಿಎಂಟಿಸಿ ವಿಧ್ಯಾರ್ಥಿಗಳ ಹಳೆಯ ಬಸ್ ಪಾಸ್ ಅವಧಿ ಜೂ.15ರ ತನಕ ವಿಸ್ತರಣೆ

Next Post

ಬೆಸ್ಕಾಂ ಕೇಂದ್ರ ಕಚೇರಿಗೆ ಇಂಧನ ಸಚಿವ ಕೆ. ಜೆ. ಜಾರ್ಜ್‌ ಭೇಟಿ

Next Post

ಬೆಸ್ಕಾಂ ಕೇಂದ್ರ ಕಚೇರಿಗೆ ಇಂಧನ ಸಚಿವ ಕೆ. ಜೆ. ಜಾರ್ಜ್‌ ಭೇಟಿ

ವಾರ್ತಾ ಇಲಾಖೆಯ ನೂತನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಎನ್.ಜಯರಾಮ್

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೂತನ ಕಾರ್ಯದರ್ಶಿಯಾಗಿ ಎನ್.ಜಯರಾಮ್ ನೇಮಕ

Please login to join discussion

Like Us on Facebook

Follow Us on Twitter

Recent News

GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

September 11, 2026

ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

September 11, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

September 11, 2026

ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

September 11, 2026

BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

September 11, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d