Friday, June 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

    ಎನ್‌ಎಸ್‌ಇಯಿಂದ ₹30,000 ಕೋಟಿ ಮೊತ್ತದ ಐಪಿಒ ಸಲ್ಲಿಕೆ: ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆ

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

  • Bengaluru Focus

    BWSSB News | ವರ್ತೂರು ಎಸ್‌ಟಿಪಿ ದುರ್ಘಟನೆ: 40 ಅಡಿ ಆಳದ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಸಾವು, ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಸಾಥ್

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    GBA News | ಗ್ರೇಟರ್ ಬೆಂಗಳೂರು: ಕಸದ ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ, ವಾರ್ಡ್ ರಸ್ತೆಗಳ ಅಭಿವೃದ್ಧಿಗೆ ₹2000 ಕೋಟಿ ಅನುದಾನ

    ಬೆಂಗಳೂರಿನಲ್ಲಿ ಬೇಕರಿ ಮತ್ತು ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ: ಅಧಿಕಾರಿಗಳ ಕಿರುಕುಳಕ್ಕೆ ತೀವ್ರ ಆಕ್ರೋಶ

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW Special | Ancient sculpture | ಬೆಂಗಳೂರಿನಲ್ಲಿ 11ನೇ ಶತಮಾನದ ಮಹಾಸತಿ ಆಚರಣೆಯ ಅತ್ಯಪರೂಪದ ಮಾಸ್ತಿಗಲ್ಲು ಪತ್ತೆ : ಇದರ ವಿಶೇಷತೆಯೇನು ಗೊತ್ತಾ?

ದೊಡ್ಡನೆಕ್ಕುಂದಿಯಲ್ಲಿ ಸಿಕ್ಕ ಮಹಾಸತಿ ಆಚರಣೆಯ ಚಿತ್ರಣವನ್ನು ನೀಡುವ ಅಪರೂಪದ ಶಿಲ್ಪ | ಮಹಾಸತಿ ಪದ್ಧತಿಯಲ್ಲಿ ಸಹಗಮನ ಹಾಗೂ ಅನುಗಮನ ಎಂಬ ಎರಡು ವಿಧಾನಗಳಿವೆ | ಆ ಪೈಕಿ ಅನುಗಮನ ಪ್ರಕಾರದಲ್ಲಿ ಅಪ್ಸರೆಯರು ಸತಿಯನ್ನು ವೀರನಿಂದ ಪ್ರತ್ಯೇಕವಾಗಿ ಸ್ವರ್ಗಕ್ಕೆ ಕರೆದೊಯ್ಯುವ ಚಿತ್ರಣವನ್ನು ಈ ಪ್ರಾಚೀನ ಶಿಲ್ಪ ಒಳಗೊಂಡಿದೆ.

by Bengaluru Wire Desk
April 3, 2023
in Bengaluru Focus, BW Special
Reading Time: 1 min read
0
ಬೆಂಗಳೂರಿನ ದೊಡ್ಡನೆಕ್ಕುಂದಿಯಲ್ಲಿ ಪತ್ತೆಯಾದ 11ನೇ ಶತಮಾನದ ಗಂಗರ ಕಾಲದ ಮಹಾಸತಿ ಶಿಲಾ ಶಾಸನದ ಚಿತ್ರ

ಬೆಂಗಳೂರಿನ ದೊಡ್ಡನೆಕ್ಕುಂದಿಯಲ್ಲಿ ಪತ್ತೆಯಾದ 11ನೇ ಶತಮಾನದ ಗಂಗರ ಕಾಲದ ಮಹಾಸತಿ ಶಿಲಾ ಶಾಸನದ ಚಿತ್ರ

ಬೆಂಗಳೂರು, ಏ.2 www.bengaluruwire.com : ರಾಜಧಾನಿಯ ಎಚ್‌.ಎ.ಎಲ್‌. ಸಮೀಪದ ದೊಡ್ಡನೆಕ್ಕುಂದಿಯಲ್ಲಿ ಗಂಗರ ಕಾಲದ ಶಿಲಾಶಾಸನ ಪತ್ತೆಯಾಗಿದೆ. ಇದು 11ನೇ ಶತಮಾನದ ಮಹಾಸತಿ ಆಚರಣೆಯ ಅಪರೂಪದ ಮಾಸ್ತಿಗಲ್ಲಾಗಿದೆ. ರಾಜ್ಯ ಸರ್ಕಾರದ ಭಾಷಾಂತರ ನಿರ್ದೇಶನಾಲಯದ ಉಪನಿರ್ದೇಶಕಿ ಡಾ.ಸ್ಮಿತಾ ರೆಡ್ಡಿ ಅವರು ಈ ಮಾಸ್ತಿಗಲ್ಲಿನ ಮಾಹಿತಿಯನ್ನು ಹೊರಗೆಡವಿದ್ದಾರೆ.

10 ದಿನದ ಕೆಳಗೆ ಡಾ.ಸ್ಮಿತಾರೆಡ್ಡಿಯವರ ಹಳೆಯ ವಿದ್ಯಾರ್ಥಿ ದೊಡ್ಡನೆಕ್ಕುಂದಿ ಕೆರೆ ಪುನಶ್ಚೇತನ ಕಾಮಗಾರಿ ನಡೆಸುತ್ತಿದ್ದಾಗ 6 ಅಡಿ ಎತ್ತರದ ಪ್ರಾಚೀನ ಶಿಲ್ಪ ಪತ್ತೆಯಾಗಿದೆ ಎಂದು ಅದರ ಫೋಟೋಗಳನ್ನು ಇವರಿಗೆ ಕಳುಹಿಸಿದ್ದರು. ಅದನ್ನು ಕಂಡೊಡನೆ ಇದು ಅಪರೂಪದ ಶಿಲ್ಪವೆಂದು ಮನದಟ್ಟಾಗುತ್ತಿದಂತೆ ಇದನ್ನು ಖುದ್ದಾಗಿ ಕಂಡು ಅಧ್ಯಯನ ಕೈಗೊಂಡಾಗಲೇ ಇದೊಂದು 11ನೇ ಶತಮಾನದ ಮಧ್ಯಭಾಗದ ಮಹಾಸತಿ ಶಿಲಾ ಶಾಸನವೆಂದು ಅವರಿಗೆ ಮನವರಿಕೆಯಾಗಿದ್ದು. ಇದನ್ನು ಸ್ಥಳೀಯರಾದ ರಾಧಾಕೃಷ್ಣರೆಡ್ಡಿ ದೇವಾಲಯದಲ್ಲಿ ಸುರಕ್ಷಿತವಾಗಿಟ್ಟಿದ್ದಾರೆ.

“ಸಾಮಾನ್ಯವಾಗಿ ಮಹಾಸತಿ ಮಾಸ್ತಿಗಲ್ಲುಗಳು ಶಿವಮೊಗ್ಗ, ಚಿಕ್ಕಮಗಳೂರು ಮಲೆನಾಡು ಪ್ರದೇಶದಲ್ಲಿ, ಬೆಂಗಳೂರಿನಲ್ಲಿ ಕಂಡು ಬರುತ್ತದೆ. ಅಲ್ಲಿ ಒಂದು ಕೈ ಹಾಗೂ ಎರಡು ಕೈ ಎತ್ತಿರುವ ಶಿಲ್ಪಗಳನ್ನು ಕಾಣಬಹುದು. ಒಬ್ಬ ಸತಿ ಸಹಗಮನವಾದರೆ ಒಕ್ಕೈಮಾಸ್ತಿಕಲ್ಲು ಎಂದು, ಇಬ್ಬರು ಸತಿಯರು ಪತಿಯೊಂದಿಗೆ ಸಹಗಮನ ಪದ್ದತಿಯಡಿ ಚಿತೆಯೇರಿ ಮರಣ ಹೊಂದಿದ್ದರೆ ಎರಡು ಕೈ ಸಂಕೇತವಾಗಿ ಶಿಲ್ಪ ಮಾಡುತ್ತಿದ್ದರು. ಇದನ್ನು ಇಕ್ಕೈಮಸ್ತಿ ಎನ್ನುತ್ತಾರೆ. ಆದರೆ ದೊಡ್ಡನೆಕ್ಕುಂದಿಯಲ್ಲಿ ಸಿಕ್ಕ ಈ ಪ್ರಾಚೀನ ಶಿಲ್ಪದಲ್ಲಿ ಮಹಾಸತಿ ಆಚರಣೆಯ ಕೆತ್ತನೆಯನ್ನು ಕಾಣಬಹುದು. ಈ ದೃಷ್ಟಿಯಿಂದ ಇದೊಂದು ಅಪರೂಪದ ಶಿಲ್ಪವಾಗಿದೆ” ಎಂದು ಬೆಂಗಳೂರು ವೈರ್ ಗೆ ಡಾ.ಸ್ಮಿತಾರೆಡ್ಡಿ ತಿಳಿಸಿದ್ದಾರೆ.

ದೊಡ್ಡನೆಕ್ಕುಂದಿಯ ದೇವಸ್ಥಾನದಲ್ಲಿ ಸಂರಕ್ಷಿಸಿಟ್ಟಿರುವ ಮಹಾಸತಿ ಶಿಲ್ಪ

“ಮಹಾಸತಿ ಆಚರಣೆಯಲ್ಲಿ ಎರಡು ವಿಧಾನಗಳಿವೆ. ಸಹಗಮನ ಹಾಗೂ ಅನುಗಮನ. ಸಹಗಮನದಲ್ಲಿ ವೀರನು ಮರಣ ಹೊಂದಿದಾಗ ಆತನ ಸತಿಯೂ ಆತನೊಂದಿಗೆ ಚಿತೆಯಲ್ಲಿ ಬಿದ್ದು ಮರಣ ಹೊಂದುವುದಾಗಿದೆ. ಇನ್ನು ಅನುಗಮನ ಪದ್ಧತಿ ವಿಧಾನದಲ್ಲಿ, ವೀರನು ಯುದ್ಧ ಮಾಡುತ್ತಿದ್ದಾಗ ಅಥವಾ ಬೇರೆ ಕಡೆ ಮರಣ ಹೊಂದಿದಾಗ, ವೀರನ ಪತ್ನಿಯು ಆತನ ಇಷ್ಟಪಡುವ ವಸ್ತುವನ್ನು ಹಿಡಿದುಕೊಂಡು ಚಿತೆಗೆ ಏರುವುದನ್ನು ಅನುಗಮನ ವಿಧಾನ ಎನ್ನುತ್ತಾರೆ. ದೊಡ್ಡನೆಕ್ಕುಂದಿಯಲ್ಲಿ ಸಿಕ್ಕ ಮಾಸ್ತಿಗಲ್ಲು ಹಾಗೂ ದೇಕಬ್ಬೆ ಶಾಸನ ಎರಡು ಅನುಗಮನ ಪ್ರಕಾರಕ್ಕೆ ಸೇರಿದ್ದಾಗಿದೆ” ಎಂದು ಅವರು ಹೇಳಿದ್ದಾರೆ.

ಮೂರು ಭಾಗಗಳಲ್ಲಿ ಮಹಾಸತಿ ಚಿತ್ರಣ :

‘ಮಹಾಸತಿ ಅಥವಾ ಮಾಸ್ತಿ ಶಿಲ್ಪಗಳಲ್ಲಿ ಮಹಾಸತಿ ಆಚರಣೆಯ ಇಂತಹ ಶಿಲ್ಪಗಳು ಕರ್ನಾಟಕದಲ್ಲಿ ತುಂಬಾ ವಿರಳ. ಹೆಗ್ಗಡದೇವನ ಕೋಟೆಯ ಬೆಳತೂರಿನ ದೇಕಬ್ಬೆಯ ಶಿಲ್ಪವ ಕ್ರಿಸ್ತಶಕ 1058ನೇ ಶತಮಾನದ್ದೆಂದು ಹೇಳಲಾಗುತ್ತದೆ. ಆದರೆ ಅದಕ್ಕಿಂತಲೂ ಈ ಮಹಾಸತಿ ಆಚರಣೆಯ ಶಿಲ್ಪವು ಹಳೆಯ ಶಾಸನವಾಗಿದೆ. ಈ ಶಿಲ್ಪದಲ್ಲಿ ಕಥಾಶಿಲ್ಪ ರೀತಿಯಲ್ಲಿ ಪೂರ್ಣ ಕತೆಯಿಲ್ಲ. ಆದರೆ 6 ಅಡಿ ಎತ್ತರದ ಶಾಸನವನ್ನು ಮೂರು ಹಂತದಲ್ಲಿ ಕೆತ್ತನೆ ಮಾಡಲಾಗಿದೆ. ಕೆಳಭಾಗದಲ್ಲಿ ಸತಿಯು ವಾದ್ಯಗಳೊಂದಿಗೆ ಮರೆವಣಿಗೆಯಲ್ಲಿ ಸಾಗಿ ಪ್ರಜ್ವಲಿಸುವ ಅಗ್ನಿಕುಂಡದಲ್ಲಿ ಕೂತಿದ್ದಾಳೆ. ಆಕೆ ವೀರನ ಜೊತೆ ಸಹಗಮನ ಮಾಡಿಲ್ಲ ಎಂಬುದಕ್ಕೆ ಸಾಂಕೇತಿಕವಾಗಿ ಪಕ್ಕದಲ್ಲೇ ಕುದುರೆ ಶಿಲ್ಪವನ್ನು ಚಿತ್ರಸಲಾಗಿದೆ.

ಶಿಲಾ ಶಾಸನದ ಮಧ್ಯಭಾಗದಲ್ಲಿ ಮುಖ್ಯವಾಗಿ ವೀರ ಮತ್ತು ಆತನ ಚಿತ್ರವನ್ನು ಕೆತ್ತಲಾಗಿದೆ. ಇಲ್ಲಿ ವೀರನು ಕೈ ಮುಗಿದುಕೊಂಡು ಕುಳಿತಿರುವ ಭಂಗಿಯಲ್ಲಿದೆ. ಆತನ ಬಲಭಾಗದಲ್ಲಿ ಪತ್ನಿಯು ಬಲಗೈಯಲ್ಲಿ ಶುಭ ಸೂಚನೆಗಳಾದ ಕನ್ನಡಿಯನ್ನು ಹಾಗೂ ಎಡಗೈನಲ್ಲಿ ಸಣ್ಣ ಕಳಶ ಹಾಗೂ ನಿಂಬೆಹಣ್ಣಿನಂತಹ ವಸ್ತು ಹಿಡಿದಿರುವುದು ಕಂಡು ಬಂದಿದೆ. ಮೂರನೇ ಹಂತವಾದ ಮೇಲ್ಭಾಗದಲ್ಲಿ ವೀರ ಹಾಗೂ ವೀರನ ಪತ್ನಿಯನ್ನು ಅಪ್ಸರೆಯರು ಪ್ರತ್ಯೇಕ ಪ್ರತ್ಯೇಕವಾಗಿ ಸ್ವರ್ಗಕ್ಕೆ ಕರೆದೊಯ್ಯುವ ರೀತಿಯಲ್ಲಿ ಶಿಲ್ಪವಿದೆ. ಅನುಗಮನ ಪ್ರಕಾರದಲ್ಲಿ ಪತ್ನಿಯು ಪತಿಯ ಜೊತೆ ಮರಣ ಹೊಂದಿರದ ಕಾರಣ ಪ್ರತ್ಯೇಕವಾಗಿ ಅಪ್ಸರೆಯರು ಕರೆದೊಯ್ಯುತ್ತಿದ್ದಾರೆ. ಸಾಮಾನ್ಯವಾಗಿ ಸಹಗಮನ ಪದ್ಧತಿಯಲ್ಲಿ ವೀರನು ಮರಣ ಹೊಂದಿದಾಗಿ ಅಪ್ಸೆಯರು ಜೊತೆಯಲ್ಲಿ ಪತ್ನಿಯನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಾರೆ. ಆದರೆ ಇದು ಅನುಗಮನ ಪ್ರಕಾರ ಕಾರಣಕ್ಕೆ ವಿಶೇಷವಾಗಿದೆ  ಎಂದು ಸ್ಮಿತಾ ರೆಡ್ಡಿ ವಿವರಿಸಿದ್ದಾರೆ.

ಗಂಗರ ಪ್ರಾರಂಭ ಕಾಲದಲ್ಲಿ ಸ್ವರ್ಗದ ಕಲ್ಪನೆಯಿರಲಿಲ್ಲ :

ಗಂಗರ ಪ್ರಾರಂಭದ ಕಾಲವಾದ 3-4ನೇ ಶತಮಾನದಲ್ಲಿ ಅವರಲ್ಲಿ ಸ್ವರ್ಗದ ಕಲ್ಪನೆಯಿರಲಿಲ್ಲ. ಆದರೆ ಏಳು- ಎಂಟನೇ ಶತಮಾನದ ನಂತರ ಸ್ವರ್ಗದ ಪರಿಕಲ್ಪನೆ ಕಂಡು ಬಂದಿತ್ತು. ಅದಕ್ಕೆ ಈ ಶಿಲ್ಪವೇ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಮೊದಲಿಗೆ ಕ್ರಿ.ಶ 972ರ ಶಿಲಾ ಶಾಸನ ಲಭ್ಯವಾಗಿತ್ತು ಎಂದು ಸಾಹಿತಿ ಮತ್ತು ಸಂಶೋಧಕರಾದ ಚಿದಾನಂದಮೂರ್ತಿಯವರು ತಮ್ಮ ಪುಸ್ತಕವೊಂದರಲ್ಲಿ ಉಲ್ಲೇಖ ಮಾಡಿದ್ದಾರೆ.

11ನೇ ಶತಮಾನದ ಈ ಮಾಸ್ತಿಗಲ್ಲು ಶೋಧ ಹಾಗೂ ಸಂರಕ್ಷಣೆಯಲ್ಲಿ ಸ್ಥಳೀಯರಾದ ಎಸ್.ರಾಹುಲ್ ರೆಡ್ಡಿ ಹಾಗೂ ಗೋಪಾಲರೆಡ್ಡಿ ಸಹಾಯಹಸ್ತ ಚಾಚಿದ್ದರು. ಹೀಗಾಗಿಯೇ ಇಂತಹ ಅಪರೂಪದ ಶಿಲ್ಪವನ್ನು ಶೋಧಿಸಲು ಸಾಧ್ಯವಾಯಿತು ಎಂದು ಸ್ಮಿತಾರೆಡ್ಡಿಯವರು ತಿಳಿಸಿದ್ದಾರೆ.

ದೊಡ್ಡನೆಕ್ಕುಂದಿ ಹಿಂದೆ ಕೋಟೆಯ ನಗರವಾಗಿತ್ತು :

“ದೊಡ್ಡನೆಕ್ಕುಂದಿಯಲ್ಲಿ ಕಂಡು ಬಂದ ಪ್ರಾಚೀನ ಶಿಲಾ ಶಾಸನ ಮಹಾಸತಿ ಆಚರಣೆಯನ್ನು ಶಿಲ್ಪರೂಪದಲ್ಲಿ ಚಿತ್ರಿಸಿರುವುದು ಕಂಡು ಬಂದಿದ್ದು, ಇದೊಂದು ಅಪರೂದ ಶಿಲ್ಪವಾಗಿದೆ. ಬೆಂಗಳೂರನ್ನು ಕಟ್ಟುವ ಮುನ್ನ ಬೇಗೂರು ಸೀಮೆಯಲ್ಲಿನ ದೊಡ್ಡನೆಕ್ಕುಂದಿ ಕೋಟೆ ನಗರವಾಗಿತ್ತು ಎಂಬುದು ಹಲವು ಶಾಸನಗಳಿಂದ ತಿಳಿದು ಬರುತ್ತದೆ. ಈ ಭಾಗವು ವಾಣಿಜ್ಯ ಮತ್ತು ವ್ಯಾಪಾರ ಸ್ಥಳವಾಗಿದ್ದು, ಮಹಾಸತಿ ಪದ್ಧತಿ ಆಚರಣೆಗಳನ್ನು ಕಾಣಬಹುದು. ಈಗ ಸಿಕ್ಕಿರುವ ಶಾಸನ ಬಹುಶಃ ಕ್ರಿ.ಶ 1030ನೇ ಮಧ್ಯಾಭಾಗದ್ದಾಗಿರಬಹುದು. ಸಾಮಾನ್ಯವಾಗಿ ಶಿಲಾ ಶಾಸನದ ಶಿಲ್ಪಗಳಲ್ಲಿ ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ಶಿಲ್ಪ ಶೈಲಿ, ಸ್ವರೂಪ, ಶಿಲ್ಪದಲ್ಲಿನ ಭಾವ ಭಂಗಿ, ಹಾವ ಭಾವ ಎಲ್ಲವೂ ಬದಲಾಗುತ್ತಿರುತ್ತದೆ.”

ಡಾ.ಅರುಣಿ, ನಿರ್ದೇಕರು, ಭಾರತೀಯ ಇತಿಹಾಸ ಅನುಸಂಧಾನ ಪರಿಷತ್
WhatsApp Join our WhatsApp Channel
Previous Post

Assembly Election 2023 | ಚುನಾವಣಾ ಭ್ರಷ್ಟಾಚಾರ ಕಂಡುಬಂದರೆ ದೂರು ಕೊಡೋಕೆ ಹೀಗೆ ಮಾಡಿ

Next Post

Karnataka Reservation | ಎಸ್ ಸಿ ಎಸ್ ಟಿ ಮೀಸಲಾತಿ ಕುರಿತು ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Next Post
ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮ ಕಚೇರಿಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರರು ಚಿತ್ರದಲ್ಲಿದ್ದಾರೆ.

Karnataka Reservation | ಎಸ್ ಸಿ ಎಸ್ ಟಿ ಮೀಸಲಾತಿ ಕುರಿತು ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Viral Video News | ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ನಟಿಯರಾದ ಅಲಿಯಾ ಭಟ್ – ರಶ್ಮಿಕಾ ಮಂದಣ್ಣ ಥ್ರಿಲ್ಲಿಂಗ್ ಡ್ಯಾನ್ಸ್ ವಿಡಿಯೋ ವೈರಲ್

Please login to join discussion

Like Us on Facebook

Follow Us on Twitter

Recent News

BWSSB News | ವರ್ತೂರು ಎಸ್‌ಟಿಪಿ ದುರ್ಘಟನೆ: 40 ಅಡಿ ಆಳದ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಸಾವು, ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಸಾಥ್

June 19, 2026
Vidhana Soudha

IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

June 19, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BWSSB News | ವರ್ತೂರು ಎಸ್‌ಟಿಪಿ ದುರ್ಘಟನೆ: 40 ಅಡಿ ಆಳದ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಸಾವು, ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಸಾಥ್

June 19, 2026
Vidhana Soudha

IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

June 19, 2026

GBA News | ಗ್ರೇಟರ್ ಬೆಂಗಳೂರು: ಕಸದ ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ, ವಾರ್ಡ್ ರಸ್ತೆಗಳ ಅಭಿವೃದ್ಧಿಗೆ ₹2000 ಕೋಟಿ ಅನುದಾನ

June 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group