Thursday, April 30, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

  • Bengaluru Focus

    ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

    ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

    ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: ‘ಸೆನ್ಸಿಟಿವ್ ವಲಯ’ ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

    Vidhana Soudha

    ಸರ್ಕಾರಿ ಕಟ್ಟಡಗಳ ಕೋಟ್ಯಂತರ ರೂ. ಸೇವಾ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಜಿಬಿಎ ವಿಶೇಷ ಆಯುಕ್ತರ ಖಡಕ್ ಆದೇಶ

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW Special | 75 Heritage Water Sites | ದೇಶದ 75 ಪಾರಂಪರಿಕ ಜಲಮೂಲ ಪಟ್ಟಿ : ಹೆಸರಘಟ್ಟ ಕೆರೆ ಸೇರಿ ರಾಜ್ಯದ 5 ಜಲತಾಣಗಳಿಗೆ ಪಟ್ಟ

ಕೇಂದ್ರ ಜಲಶಕ್ತಿ ಸಚಿವಾಲಯ 75ನೇ ಸ್ವಾತಂತ್ರ್ಯ ಮಹೋತ್ಸವದ ಸವಿ ನೆನಪಿಗಾಗಿ ದೇಶದಲ್ಲಿನ 75 ಜಲ ಪರಂಪರೆಯ ರಚನೆ (Water Heritage Sites) ಗುರುತಿಸಲು ಸಮಿತಿ ರಚನೆ | 29 ರಾಜ್ಯಗಳ 75 ಪಾರಂಪರಿಕ ಜಲತಾಣಗಳು ಈ ಪಟ್ಟಿಯಲ್ಲಿ ಸ್ಥಾನಪಡೆದಿದೆ

by Bengaluru Wire Desk
March 21, 2023
in BW Special, Public interest
Reading Time: 2 mins read
0
ಬೆಂಗಳೂರಿನ ಹೆಸರಘಟ್ಟ ಕೆರೆಯ ಚಿತ್ರ

ಬೆಂಗಳೂರಿನ ಹೆಸರಘಟ್ಟ ಕೆರೆಯ ಚಿತ್ರ

ಬೆಂಗಳೂರು, ಮಾ.21 www.bengaluruwire.ocm : ಜಲಮೂಲಗಳ ಸಂರಕ್ಷಣೆ ದೃಷ್ಟಿಯಿಂದ ಮಹತ್ವವಾಗಿರುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯವು ಪಟ್ಟಿ ಮಾಡಿರುವ ದೇಶದ 75 ಪಾರಂಪರಿಕ ಜಲ ಮೂಲಗಳ ಪಟ್ಟಿಯಲ್ಲಿ ಬೆಂಗಳೂರಿನ ಹೆಸರಘಟ್ಟ ಕೆರೆಯೂ ಸೇರಿದಂತೆ ಕರ್ನಾಟಕದ 5 ಜಲಕಾಯಗಳು ಸ್ಥಾನ ಪಡೆದುಕೊಂಡಿದೆ.

ಶತಮಾನಗಳಷ್ಟು ಇತಿಹಾಸ ಹೊಂದಿರುವ ದೇಶದ 29 ರಾಜ್ಯಗಳಲ್ಲಿನ ಜಲ ತಾಣಗಳನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಜಲಶಕ್ತಿ ಸಚಿವಾಲಯ 75ನೇ ಸ್ವಾತಂತ್ರ್ಯ ಮಹೋತ್ಸವದ ಸವಿ ನೆನಪಿಗಾಗಿ ದೇಶದಲ್ಲಿನ 75 ಜಲ ಪರಂಪರೆಯ ರಚನೆಯನ್ನು (Water Heritage Sites) ಗುರುತಿಸಲು ಸಮಿತಿ ರಚಿಸಿತ್ತು. ಈ ಸಮಿತಿಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಏಜೆನ್ಸಿಗಳು, ಎನ್‌ಜಿಒಗಳು ಮತ್ತು ಸಾರ್ವಜನಿಕರ ಮೂಲಕ ಒಟ್ಟು 421 ನಾಮನಿರ್ದೇಶನಗಳನ್ನು ಸ್ವೀಕರಿಸಿತ್ತು. ತದನಂತರ ಸಮಿತಿಯು ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ 75 ಜಲ ತಾಣಗಳನ್ನು ಅಧಿಕೃತಾಗಿ ಪಾರಂಪರಿಕ ಜಲ ಮೂಲಗಳೆಂದು ಘೋಷಿಸಿದೆ. ರಾಜಸ್ಥಾನ, ತಮಿಳುನಾಡಿನ ತಲಾ 7, ಮಧ್ಯಪ್ರದೇಶದ 6 ಜಲಮೂಲಗಳು, ಕರ್ನಾಟಕ ಹಾಗೂ ಗುಜರಾತಿನ ತಲಾ 7 ಜಲತಾಣಗಳು ಸೇರಿದಂತೆ 29 ರಾಜ್ಯಗಳ 75 ಪಾರಂಪರಿಕ ಜಲತಾಣಗಳು ಈ ಪಟ್ಟಿಯಲ್ಲಿ ಸ್ಥಾನಪಡೆದಿದೆ.

ದೇಶದ 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುರ್ತಿಸಿರುವ ಪಾರಂಪರಿಕ ಜಲತಾಣಗಳ ನಕ್ಷೆಯ ಚಿತ್ರ

ಇದುವರೆಗೆ ದೇಶದಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆ (ASI) ಅಡಿಯಲ್ಲಿ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ 1958ರ ಕಾಯಿದೆ ಅಡಿಯಲ್ಲಿ “ಜಲ ಪರಂಪರೆಯ ತಾಣ” ಎಂದು ಘೋಷಿಸಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಕೇಂದ್ರ ಜಲಶಕ್ತಿ ಸಚಿವಾಲಯವು ಜಲ ಪರಂಪರೆಯ ತಾಣಗಳನ್ನು ಗುರ್ತಿಸಲೆಂದೇ ಸಮಿತಿ ರಚಿಸಿ ಈ ಕಾರ್ಯಕ್ಕೆ ಮುಂದಾಗಿತ್ತು. ಈಗಾಗಲೇ ಜಲಸಂಪನ್ಮೂಲ ಮಾಹಿತಿ ವ್ಯವಸ್ಥೆ ಪೋರ್ಟಲ್ (WRIS Portal) ಅಡಿಯಲ್ಲಿ “ಜಲ್-ಇತಿಹಾಸ್” ಉಪ-ಪೋರ್ಟಲ್ ಅನ್ನು ತೆರೆಯಲಾಗಿದ್ದು, ಅದರಲ್ಲಿ ದೇಶದ 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿನ 75 ಪಾರಂಪರಿಕ ಜಲತಾಣಗಳ ಇತಿಹಾಸ, ಛಾಯಚಿತ್ರ ಹಾಗೂ ವಿಡಿಯೋಗಳನ್ನು ಅಪಲೋಡ್ ಮಾಡಲಾಗಿದೆ.

ಹೆಸರಘಟ್ಟದಲ್ಲಿನ 1500 ಕೆರೆ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ನೂರಾರು ಎಕರೆ ಹುಲ್ಲುಗಾವಲು ಪ್ರದೇಶವನ್ನು ಸಂರಕ್ಷಿತ ಪ್ರದೇಶವನ್ನು ಘೋಷಿಸುವಂತೆ ಸಾರ್ವಜನಿಕ ವಲಯದ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರದಿಂದ ಹೆಸರಘಟ್ಟ ಕರೆಯನ್ನು ಪಾರಂಪರಿಕ ಜಾಲ ತಾಣದ ಪಟ್ಟಿಗೆ ಸೇರಿಸಿರುವುದರಿಂದ ಹೆಸರಘಟ್ಟ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕೆಂಬ ಹೋರಾಟಕ್ಕೆ ಬಲ ಬಂದಂತಾಗಿದೆ.

ಕರ್ನಾಟದಲ್ಲಿನ ಜಲ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ 5 ಜಲ ಮೂಲಗಳ ಮಾಹಿತಿ ಈ ಕೆಳಕಂಡಂತಿದೆ :

1.ಹೆಸರಘಟ್ಟ ಕೆರೆ​ (ಬೆಂಗಳೂರು)

ಹೆಸರಘಟ್ಟ ಕೆರೆಯ ಸವಿಸ್ತಾರ ನೋಟ

1500 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿರವ ಹೆಸರಘಟ್ಟ ಕೆರೆ​ ಜಲ ಪಾರಂಪರಿಕ ಪಟ್ಟಿಗೆ ಸೇರಿದೆ. ಜಲ ಶಕ್ತಿ ಸಚಿವಾಲಯದ ಪ್ರಕಾರ, ಶಾಸನಗಳ ಆಧಾರದ ಮೇಲೆ, ಹೆಸರಘಟ್ಟ ಕೆರೆ 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಬೆಂಗಳೂರಿನ ಹೆಸರಘಟ್ಟದಲ್ಲಿದೆ. ಅರ್ಕಾವತಿ ನದಿಗೆ ಸಂಪರ್ಕವಿರುವ ಈ ಹೆಸರಘಟ್ಟ ಕೆರೆಯನ್ನು 1894ರಲ್ಲಿ ಚಾಮರಾಜೇಂದ್ರ ನೀರು ಯೋಜನೆಯಡಿ ವಿಸ್ತರಿಸಲಾಗಿತ್ತು. ಇದರಿಂದ ಬೆಂಗಳೂರಿಗೆ ಆಗ 3 ವರ್ಷಗಳ ಕಾಲ ನೀರು ಪೂರೈಸುವಂತೆ ರೂಪಿಸಲಾಗಿತ್ತು. ಸದ್ಯ ಹೆಸರಘಟ್ಟ ಕೆರೆ​ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸುಪರ್ದಿಯಲ್ಲಿದೆ.

2. ಚೋಳನಕುಂಟೆ ಕೆರೆ (ಕೋಲಾರ)

ಚೋಳನಕುಂಟೆ ಕೆರೆಯನ್ನು ಕ್ರಿಸ್ತಶಕ 11ನೇ ಶತಮಾನದಲ್ಲಿ ಚೋಳರು ನಿರ್ಮಿಸಿದ್ದಾರೆ. ಈ ಕೆರೆ ಕೂಡ ಜಲ ಪಾರಂಪರಿಕ ತಾಣ ಪಟ್ಟಿಗೆ ಸೇರಿದೆ. ಈ ಕೆರೆಯು ದೇಶದ ಅತಿ ಹಳೆಯ ಮಳೆ ನೀರು ಸಂರಕ್ಷಣಾ ವಿಧಾನಗಳಲ್ಲಿ ರೂಪಿಸಿದ ಕರೆಯಾಗಿದೆ. ವಿಶ್ವಬ್ಯಾಂಕ್ ಜಲಸಂರ್ವಧನೆ ಯೋಜನೆಯಡಿಯಲ್ಲಿ ಈ ಕೆರೆಯನ್ನು ಜೀರ್ಣೋದ್ಧಾರ ಮಾಡಲಾಗಿತ್ತು.

3. ಹೊಸ ಮದಗಾದ ಕೆರೆ (ಚಿಕ್ಕಮಗಳೂರು)

ಚಿಕ್ಕಮಗಳೂರು ಜಿಲ್ಲೆಯ ಮದಗಾದ ಕೆರೆ ಮತ್ತೊಂದು ಜಲ ಪಾರಂಪರಿಕ ತಾಣವಾಗಿದೆ. ಈ ಕೆರೆಗೆ ಬಾಬಾಬುಡನ್ ಗಿರಿ ಬೆಟ್ಟಗಳಿಂದ ನೀರು ಹರಿದು ಬಂದು ಶೇಖರಣೆಯಾಗುತ್ತದೆ. ಇದರಿಂದ ಕೆರೆ ಸದಾ ತುಂಬಿರುತ್ತದೆ. ಈ ಕೆರೆಯನ್ನು 500 ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿತ್ತು ಎನ್ನುತ್ತದೆ ಇತಿಹಾಸ.

4. ಮೆಟ್ಟಿಲುಬಾವಿ (ಬಾಗಲಕೋಟೆ)

ಬಾಗಲಕೋಟೆ ಜಿಲ್ಲೆಯಲ್ಲಿರವ ಐಹೊಳೆಯಲ್ಲಿರುವ ದೊಡ್ಡ ದುರ್ಗಾ ದೇವಾಲಯದ ಆವರಣದಲ್ಲಿರುವ ಮೆಟ್ಟಲುಬಾವಿ, ಜಲ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿದೆ. ದೇವಾಲಯವನ್ನು ಈಗಾಗಲೇ ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಿಸುತ್ತಿದೆ. ವಾರ್ಷಿಕವಾಗಿ ಲಕ್ಷಾಂತರ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ಕೊಡುತ್ತಾರೆ.

ವಿಜಯನಗರ ರಾಜರ ಆಳ್ವಿಕೆಯಲ್ಲಿ ನಿರ್ಮಿತವಾದ ವಿಜಯನಗರ ಕಾಲುವೆ ಸಾಂದರ್ಭಿಕ ಚಿತ್ರ

5. ವಿಜಯನಗರ ಕಾಲುವೆ

ತುಂಗಭದ್ರಾ ನದಿಗೆ ನಿರ್ಮಿಸಲಾಗಿರುವ ವಿಜಯನಗರ ಕಾಲುವೆ ಜಲ ಪಾರಂಪರಿಕ ತಾಣ ಪಟ್ಟಿಗೆ ಸೇರಿದೆ. 215 ಕಿಮೀ ಉದ್ದ ಕಾಲುವೆ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ನೀರು ಸರಬರಾಜು ಮಾಡುತ್ತದೆ. ಈ ಕಾಲುವೆಯಿಂದ 16,242 ಹೆಕ್ಟರ್​ ಭೂ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತದೆ. ಸುಮಾರು 400 ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ರಾಜರು ಈ ಕಾಲುವೆಯನ್ನು ನಿರ್ಮಾಣ ಮಾಡಿದ್ದಾರೆ. ಒಟ್ಟು 19 ವಿಜಯನಗರ ಕಾಲುವೆಗಳು ಇದ್ದು, ಆ ಪೈಕಿ 18 ಕರ್ನಾಟಕದಲ್ಲಿದ್ದರೆ, ಒಂದು ಕಾಲುವೆ ಆಂಧ್ರಪ್ರದೇಶದಲ್ಲಿದೆ.

ಹೆಸರುಘಟ್ಟ ಸಂರಕ್ಷಿತ ಪ್ರದೇಶದ ಘೋಷಣೆಗಿದು ಸಕಾಲ :

“ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ 75 ಪಾರಂಪರಿಕ ಜಲತಾಣಗಳಲ್ಲಿ ಹೆಸರಘಟ್ಟ ಕೆರೆಯೂ ಸೇರಿದಂತೆ ರಾಜ್ಯದ 5 ಜಲಮೂಲಗಳು ಸ್ಥಾನ ಪಡೆದಿರುವುದು ನಿಜಕ್ಕೂ ಸಂತೋಷದ ವಿಷಯ. ಹೆಸರಘಟ್ಟ ಪ್ರದೇಶ ಸಂರಕ್ಷಿತ ಪ್ರದೇಶವೆಂದು ಘೋಷಿಸುವ ನಿಟ್ಟಿನಲ್ಲಿ ಹೆಸರಘಟ್ಟ ಕೆರೆಯನ್ನು ಪಾರಂಪರಿಕ ತಾಣವೆಂದು ಕೇಂದ್ರ ಸರ್ಕಾರ ಅಧಿಕೃತ ಪಟ್ಟಿಗೆ ಸೇರಿಸಿರುವುದು, ಇಲ್ಲಿನ ಜೀವವೈವಿಧ್ಯತೆ ಸಂರಕ್ಷಣೆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಐತಿಹಾಸಿಕ ಕೆರೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಮುಂದಿನ ವನ್ಯಜೀವಿ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡರೆ ಈ ಸ್ಥಳಕ್ಕೆ ಗೌರವ ತಂದು ಕೊಡಲಿದೆ. ಅಲ್ಲದೆ ಇಲ್ಲಿನ ಪ್ರಾಣಿ, ಪಕ್ಷಿ ಸಂರಕ್ಷಣೆಗೂ ರಾಜ್ಯ ಸರ್ಕಾರ ಒತ್ತು ಕೊಟ್ಟಂತಾಗುತ್ತದೆ”

– ವಿಜಯ್ ನಿಶಾಂತ್, ಮರವೈದ್ಯ ಹಾಗೂ ಪರಿಸರವಾದಿ
WhatsApp Join our WhatsApp Channel
Previous Post

Injaz International Scam | ಇಂಜಾಜ್ ಇಂಟರ್ ನ್ಯಾಷನಲ್ ಬಹುಕೋಟಿ ಹಗರಣ : ಇ.ಡಿ.ಯಿಂದ 20.16 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

Next Post

BBMP Health News | ಬಿಬಿಎಂಪಿ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ 20,100 ಡಯಾಲಿಸಿಸ್

Next Post
ಬಿಬಿಎಂಪಿಯ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರದ ಒಳಗಿನ ಚಿತ್ರ

BBMP Health News | ಬಿಬಿಎಂಪಿ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ 20,100 ಡಯಾಲಿಸಿಸ್

ಬೆಂಗಳೂರು ಕರಗ ಶಕ್ತ್ಯೋತ್ಸವದ ಸಾಂದರ್ಭಿಕ ಚಿತ್ರ

Bangalore Karaga 2023 | ಬೆಂಗಳೂರಿನ ಇತಿಹಾಸ ಪ್ರಸಿದ್ಧ ಕರಗ ಏ.6ಕ್ಕೆ : ಚುನಾವಣಾ ನೀತಿಸಂಹಿತೆ ಮಧ್ಯೆ ಶಕ್ತ್ಯೋತ್ಸವ ಹೇಗೆ ನಡೆಯಲಿದೆ ಗೊತ್ತಾ?

Please login to join discussion

Like Us on Facebook

Follow Us on Twitter

Recent News

ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

April 30, 2026

ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

April 29, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

April 30, 2026

ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

April 29, 2026

ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: ‘ಸೆನ್ಸಿಟಿವ್ ವಲಯ’ ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

April 29, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group