Wednesday, June 17, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Nandini Duplicate Ghee | ಮೈಸೂರಾಯ್ತು ಈಗ ಬೆಂಗಳೂರಲ್ಲೂ ನಕಲಿ ನಂದಿನಿ ತುಪ್ಪದ ಹಾವಳಿ : ಆನ್ ಲೈನ್ ನಲ್ಲೂ ಡೂಪ್ಲಿಕೇಟ್ ತುಪ್ಪ ಮಾರಾಟ..!

ಮತ್ತೆ ಮೂರು ಕಡೆ ಡೂಪ್ಲಿಕೇಟ್ ನಂದಿನಿ ತುಪ್ಪ ಪತ್ತೆ | ಬೆಂಗಳೂರಲ್ಲಿ ಎರಡು ಕಡೆ, ಹೊಸಕೋಟೆಯಲ್ಲಿ ಒಂದು ಕಡೆ ನಕಲಿ ನಂದಿನಿ ತುಪ್ಪ ಮಾರಾಟ | ಮೂರು ಅಂಗಡಿ ಸೀಜ್ |

by Bengaluru Wire Desk
December 22, 2021
in Bengaluru Focus, BW Special, Public interest
Reading Time: 2 mins read
0

ಬೆಂಗಳೂರು, (www.bengaluruwire.com) : ಮೈಸೂರಿನ ಹೊಸ ಹುಂಡಿಯ ಖಾಸಗಿ ಗೋದಾಮಿನಲ್ಲಿ ನಕಲಿ ನಂದಿನಿ ತುಪ್ಪ ಜಾಲ ಪತ್ತೆಯಾದ ಬಳಿಕ ಇದೀಗ ಬೆಂಗಳೂರು ಹಾಗೂ ಹೊಸಕೋಟೆಯಲ್ಲಿ ನಕಲಿ ನಂದಿನಿ ತುಪ್ಪ ಮಾರುತ್ತಿದ್ದ ಮೂರು ಅಂಗಡಿಗಳನ್ನು ಕರ್ನಾಟಕ ಹಾಲು ಮಹಾಮಂಡಳಿ (KMF)‌ ಅಧಿಕಾರಿಗಳು ಸೋಮವಾರ ಸೀಜ್ ಮಾಡಿದ್ದಾರೆ.

ಬೆಂಗಳೂರಿನ ಹನುಮಂತನಗರದ ಎರಡು ಅಂಗಡಿಗಳಲ್ಲಿ ಹಾಗೂ ಹೊಸಕೋಟೆಯ ಒಂದು ಅಂಗಡಿಯಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಕೆಎಂಎಫ್ ಜಾಗೃತ ದಳ ಪತ್ತೆ ಹಚ್ಚಿದೆ ಎಂದು ಕೆಎಂಎಫ್ ಉನ್ನತ ಮೂಲಗಳ “ಬೆಂಗಳೂರು ವೈರ್” ಗೆ ಖಚಿತಪಡಿಸಿವೆ.

ಸಾಂದರ್ಭಿಕ ಚಿತ್ರ

ಹೊಸಹುಂಡಿ ಪ್ರಕರಣದ ಬಳಿಕ ಕೆಎಂಎಫ್ ರಾಜ್ಯದಾದ್ಯಂತ ತನ್ನ 14 ಹಾಲು ಒಕ್ಕೂಟಗಳಲ್ಲಿ ಜಾಗೃತ ತಂಡಗಳನ್ನು ರಚಿಸಿ ಪರಿಶೀಲನೆ ಕಾರ್ಯವನ್ನು ಚುರುಕುಗೊಳಿಸಿದೆ. ಈ ಹಿನ್ನಲೆಯಲ್ಲಿ ಈಗಾಗಲೇ 150 ತಂಡಗಳು ಕಾರ್ಯಾಚರಣೆ ಸಕ್ರಿಯಗೊಳಿಸಿದೆ.

ಹನುಮಂತನಗರದ ಎರಡು ರಿಟೇಲ್ ಅಂಗಡಿಗಳಲ್ಲಿ ಕ್ರಮವಾಗಿ 150 ಲೀಟರ್ ಹಾಗೂ 11 ಲೀಟರ್ ನಕಲಿ ತುಪ್ಪವನ್ನು ಸೀಜ್ ಮಾಡಲಾಗಿದೆ.‌ ಅದೇ ರೀತಿ ಆನ್ ಲೈನ್ ಶಾಪಿಂಗ್ ಮೂಲಕ ನಕಲಿ ತುಪ್ಪ ಮಾರುತ್ತಿದ್ದ ಅಂಗಡಿ ಸೀಜ್ ಮಾಡಿ ಕೆಎಂಎಫ್ ಜಾಗೃತ ದಳ ಆ ಅಂಗಡಿಯಿಂದ 60 ಲೀಟರ್ ತುಪ್ಪವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆ ಅಂಗಡಿ ಮಾಲೀಕ ಹಾಗೂ ಆನ್ ಲೈನ್ ಶಾಪಿಂಗ್ ಆಪ್ ಕಂಪನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೆಎಂಎಫ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ಹೊಸಹುಂಡಿ ಗೋದಾಮಿನಲ್ಲಿ ಪತ್ತೆಯಾದ ನಂದಿನಿ‌ ನಕಲಿ ಪ್ಯಾಕೇಟ್ ತಯಾರಿಕಾ ಯಂತ್ರ

ಕೆಎಂಎಫ್ ಗೆ ರಾಜಧಾನಿ ಬೆಂಗಳೂರು ತನ್ನ ಎಲ್ಲಾ ಉತ್ಪನ್ನಗಳ ಮಾರಾಟಕ್ಕೆ ಪ್ರಮುಖ ಮಾರುಕಟ್ಟೆಯಾಗಿದೆ. ನಗರದಲ್ಲೇ ಕೆಎಂಎಫ್ ವಿವಿಧ ಉತ್ಪನ್ನ ಮಾರಾಟ ಮಾಡುವ 10 ಸಾವಿರಕ್ಕೂ ಅಧಿಕ‌ ಮಾರಾಟ ಕೇಂದ್ರಗಳಲ್ಲಿ ಹಾಗೂ ಸಾವಿರಾರು ರಿಟೇಲ್ ಶಾಪ್ ಗಳಲ್ಲಿ ನಂದಿನಿ ತುಪ್ಪ ಮಾರಾಟವಾಗುತ್ತಿದೆ. ಹಾಗಾಗಿ ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ತಂಡಗಳನ್ನು ಅನುಮಾನ ಬಂದ ಕಡೆ ಕಳುಹಿಸಿ ತುಪ್ಪದ ಮಾದರಿಗಳನ್ನು ಲ್ಯಾಬ್ ನಲ್ಲಿ ಪರೀಕ್ಷಿಸಿ ನಕಲಿ ತುಪ್ಪ ಎಂದು ಖಚಿತವಾದ ಬಳಿಕ ಆ ಅಂಗಡಿಗಳನ್ನು ಜಪ್ತಿ ಮಾಡಲಾಗುವುದು ಎಂದು ಕೆಎಂಎಫ್ ವಿಶ್ವಸನೀಯ ಮೂಲಗಳು ತಿಳಿಸಿವೆ.

ತುಪ್ಪದ ಪ್ಯಾಕೇಟ್ ಗಳಿಗೆ ಕ್ಯುಆರ್ ಕೋಡ್ ಹಾಗೂ ಹಾಲೊಗ್ರಾಂ ಬಳಕೆಗೆ ಕ್ರಮ :

ಕೆಎಂಎಫ್ ತನ್ನ ಪ್ರಸಿದ್ಧ ನಂದಿನಿ ಬ್ರಾಂಡ್ ತುಪ್ಪ ನಕಲಿಯಾಗುವುದನ್ನು ತಪ್ಪಿಸಲು ಎಲ್ಲಾ ಮಾದರಿಯ ತುಪ್ಪದ ಪ್ಯಾಕೇಟ್ ಗಳಿಗೆ ಕ್ಯುಆರ್ ಕೋಡ್ ಹಾಗೂ ಹಾಲೊಗ್ರಾಂ ಬಳಕೆ ಮಾಡಲು ನಿರ್ಧರಿಸಿದೆ.

ಸದ್ಯದಲ್ಲೇ ಕೆಎಂಎಫ್ ನಂದಿನಿ ತುಪ್ಪದ ಪ್ಯಾಕೇಟ್ ಗಳಿಗೆ ಈ ಅತ್ಯಾಧುನಿಕ ಪದ್ಧತಿ ಅಳವಡಿಸುತ್ತೇವೆ. ಈ ಕಾರ್ಯ ಪ್ರಗತಿಯಲ್ಲಿದೆ. ಗುಣಮಟ್ಟದ ತುಪ್ಪ ನಕಲಿ ಮಾಡುವುದನ್ನು ತಡೆಯಲು ಈ ಹೊಸ ವ್ಯವಸ್ಥೆ ಸಹಾಯಕವಾಗಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ತಿಳಿಸಿದ್ದಾರೆ.

ಮೈಸೂರು ಬಳಿಯ ಹೊಸ ಹುಂಡಿಯ ಖಾಸಗಿ ಗೋದಾಮಿನಲ್ಲಿ ಡಿ.16 ರಂದು ನಕಲಿ ನಂದಿನಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಆ ಗೋಡೌನ್ ಮೇಲೆ‌ ದಾಳಿ ನಡೆಸಿದಾಗ ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ನಂದಿನಿ ತುಪ್ಪ ಕಲಬೆರೆಕೆಗೆ ಡಾಲ್ಡಾ, ಬಣ್ಣ, ಯಂತ್ರಗಳು, ಪಾಮ್ ಆಯಿಲ್‌, ನಕಲಿ ನಂದಿನಿ ಪ್ಯಾಕೇಟ್, ಟಿನ್ ಮುಚ್ಚುವ ಕ್ಯಾಪ್ ಸೇರಿದಂತೆ ನಾನಾ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಗ್ರಾಹಕರು ನಂದಿನಿಯ ಗುಣಮಟ್ಟದ ತುಪ್ಪವನ್ನು ಮಾರುಕಟ್ಟೆಯಲ್ಲಿ ಯಾವುದೇ ಆತಂಕವಿಲ್ಲದೆ ಖರೀದಿಸಬಹುದು. ನಕಲಿ ನಂದಿನಿ ತುಪ್ಪ ಪತ್ತೆಯ ನಂತರ ರಾಜ್ಯದ‌ ಎಲ್ಲೆಡೆ ಎಲ್ಲಾ ಒಕ್ಕೂಟಗಳಲ್ಲಿ ಜಾಗೃತದಳ ರಚನೆ ಮಾಡಿ, ಆಗಾಗ 14 ಒಕ್ಕೂಟಗಳ ವ್ಯಾಪ್ತಿಯ ನಂದಿನಿ ತುಪ್ಪದ ಮಾರಾಟ ಮಾಡುವ 21,000 ಮಾರಾಟ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಬಿ.ಸಿ.ಸತೀಶ್ ತಿಳಿಸಿದ್ದಾರೆ.

ನಂದಿನಿ ತುಪ್ಪದ ಒಂದು ಕೆಜಿಯ ಗರಿಷ್ಠ ಮಾರಾಟ ಬೆಲೆ ಪ್ರಸ್ತುತ 470 ರೂ. ಗಳಾಗಿದೆ. ಇನ್ನು ಮುಂದೆ ನಂದಿನಿ ತುಪ್ಪದ ಎಲ್ಲಾ ಪ್ಯಾಕ್ ಗಳಿಗೆ ಕ್ಯುಆರ್ ಕೋಡ್ ಹಾಗೂ ಹಾಲೊಗ್ರಾಂ ಅಳವಡಿಸುತ್ತೇವೆ ಎಂದಿದ್ದಾರೆ.

ನಂದಿನಿ ತುಪ್ಪದ ಬ್ರಾಂಡ್ ದೇಶ ವಿದೇಶಗಳಲ್ಲೂ ಹೆಸರುವಾಸಿಯಾಗಿದ್ದು, ಭಾರತೀಯ ರಕ್ಷಣಾ ಇಲಾಖೆ, ತಿರುಪತಿ‌ ದೇವಸ್ಥಾನಕ್ಕೆ ನಂದಿನಿ ತುಪ್ಪ ಪೂರೈಕೆಯಾಗುತ್ತಿದೆ. ಅಯೋಧ್ಯೆಯಲ್ಲಿ ವರ್ಷಪೂರ್ತಿ ನಂದಿನಿ ತುಪ್ಪದಿಂದ ಅಖಂಡ ಜ್ಯೋತಿ ಬೆಳಗಿಸಲಾಗುತ್ತಿದೆ. ಅಮರಿಕ, ಕತಾರ್, ಸಿಂಗಾಪುರ, ದುಬೈ, ಆಸ್ಟ್ರೇಲಿಯಾ, ಓಮನ್ ಸೇರಿದಂತೆ ವಿವಿಧ ರಾಷ್ಟ್ರಗಳಿಗೂ ಕೆಎಂಎಫ್ ತುಪ್ಪ ರಫ್ತಾಗುತ್ತಿದೆ ಎಂದು ಸತೀಶ್ ಮಾಹಿತಿ ನೀಡಿದ್ದಾರೆ.

ಪ್ರತಿದಿನ ಮಾರುಕಟ್ಟೆಯಲ್ಲಿ ಮಾರಟವಾಗುವ ನಂದಿನಿ ತುಪ್ಪದ ಮಾದರಿಗಳನ್ನು ಪರೀಕ್ಷೆ ನಡೆಸಲಾಗುತ್ತದೆ. ಸಾರ್ವಜನಿಕರಿಗೆ ಅನುಮಾನ ಬಂದರೆ ಕೆಎಂಎಫ್ ಕೇಂದ್ರ ಪ್ರಯೋಗಾಲಯದಲ್ಲಿ ತುಪ್ಪದ ಮಾದರಿಗಳನ್ನು ನೀಡಿ ಖಚಿತಪಡಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗೆ ಟೋಲ್‌ಫ್ರೀ ಸಂಖ್ಯೆ : 18004258030, ಅಥವಾ ನಂದಿನಿ ಸಹಾಯವಾಣಿ : 080-66660000 ಸಂಪರ್ಕಿಸಬಹುದು. ಇ-ಮೇಲ್ : customercare.nandini@kmf.coop ಮಾಡಬಹುದು.

WhatsApp Join our WhatsApp Channel
Previous Post

Industry News | ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿಂದ ಇಂದು ಪ್ರತಿಭಟನೆ

Next Post

ಇಂದಿನಿಂದ ಕಂಟೋನ್ಮೆಂಟ್ ನಿಂದ – ಪಾಟರಿ ಟೌನ್ ಮಾರ್ಗದ ಮೆಟ್ರೊ ಸುರಂಗ ಕಾಮಗಾರಿ ಆರಂಭ

Next Post

ಇಂದಿನಿಂದ ಕಂಟೋನ್ಮೆಂಟ್ ನಿಂದ - ಪಾಟರಿ ಟೌನ್ ಮಾರ್ಗದ ಮೆಟ್ರೊ ಸುರಂಗ ಕಾಮಗಾರಿ ಆರಂಭ

Chikkaballapura Earthquake | ಚಿಕ್ಕಾಬಳ್ಳಾಪುರದಲ್ಲಿ ಎರಡು ಬಾರಿ ಭೂಕಂಪನ...!

Please login to join discussion

Like Us on Facebook

Follow Us on Twitter

Recent News

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026

Space News | ಬಾನಂಗಳದಲ್ಲಿ ಇಂದು ವಿಸ್ಮಯ: ಗುರು, ಶುಕ್ರನ ನಡುವೆ ಬಾಲಚಂದ್ರನ ದರ್ಶನ, ಬರಿಗಣ್ಣಿನಿಂದಲೇ ಕಣ್ತುಂಬಿಕೊಳ್ಳಿ

June 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group