Saturday, June 13, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

    ಡಿಎಲ್ ಎಂಎಸ್ ಸ್ಟಾಟಿಕ್ ಡಿಜಿಟಲ್ ಮೀಟರ್ ಚಿತ್ರ

    ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ: ಹೊಸ ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯವಲ್ಲ, ಆದರೆ…

    BDA News | ಉದ್ಯಾನ ನಗರಿ ಮರುಸೃಷ್ಟಿಗೆ ಬಿಡಿಎ ಹೊಸ ಹೆಜ್ಜೆ: ‘ಗ್ರೀನ್ ಬೆಂಗಳೂರು’ ಜಾಲತಾಣ ಲೋಕಾರ್ಪಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

IllegalMining | ಉಡುಪಿ ಜಿಲ್ಲೆಯ ಕಡಲತಡಿಯಲ್ಲಿ ನಿಲ್ಲದ ಅಕ್ರಮ ಮರಳುಗಾರಿಕೆ : ಕೋಟತಟ್ಟು ಗ್ರಾಮಸ್ಥರ ಆಕ್ಷೇಪ

ಕಡಲತೀರ ಭಾರ್ಗವರೆಂದು ಖ್ಯಾತಿ ಪಡೆದ ಕೋಟ ಶಿವರಾಮ ಕಾರಂತರ ಊರಿಗೆ ಕಳಂಕ ತರುವ ಅಕ್ರಮ ಗಣಿಗಾರಿಕೆ ಪ್ರಕರಣ

by Bengaluru Wire Desk
December 1, 2022
in News Wire
Reading Time: 1 min read
0

ಉಡುಪಿ, ಡಿ.1 www.bengaluruwire.com : ಗಣಿ ಮತ್ತು ವಿಜ್ಞಾನ ಇಲಾಖೆ (Mines And Geology Department) ಯ ಸಾಕಷ್ಟು ಕಠಿಣ ಕಾನೂನು ಜಾರಿಯಲ್ಲಿದ್ದಗ್ಯೂ ಜಿಲ್ಲೆಯಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಕಾರಿಕೆ ಹಲವು ಕಡೆ ನಡೆಯುತ್ತಿದೆ. ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮದ ಪಡುಕೆರೆಯಲ್ಲಿ ಅಕ್ರಮ ಗಣಿಕಾರಿಕೆ ವಿರುದ್ಧ ಗ್ರಾಮಸ್ಥರು ಬುಧವಾರ ತಿರುಗಿ ಬಿದ್ದಿದ್ದಾರೆ.

ಕೋಟತಟ್ಟು ಗ್ರಾಮದ ಸರ್ವೆ ನಂಬರ್ 211/8 ರಲ್ಲಿ ಸತ್ಯನಾರಾಯಣ ಬಾಸ್ರಿ ಮತ್ತು ಸಹೋದರರಿಗೆ ಸೇರಿದ ಸುಮಾರು ಒಂದೂವರೆ ಎಕರೆ ಜಾಗದಲ್ಲಿದ್ದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೆಲಮಟ್ಟದಿಂದ 18 ಅಡಿ ಆಳದವರೆಗೆ ಅನಧಿಕೃತವಾಗಿ ಮರಳು ತೆಗೆದು ಕೆಂಪು ಮಣ್ಣನ್ನು ತಂದು ಆ ಆಳದ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡುತ್ತಿದ್ದಾರೆ.

ಮರಳು ಗಣಿಗಾರಿಕೆ ನಡೆಯುತ್ತಿರುವ ಸ್ಥಳದಲ್ಲಿ ಜಮಾಯಿಸಿರುವ ಕೋಟತಟ್ಟು ಗ್ರಾಮಸ್ಥರು

ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಮಳೆಗಾಲದಲ್ಲಿ ಬಾವಿಯ ನೀರು ಕಲುಷಿತವಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬ್ರಹ್ಮಾವರ ತಾಲೂಕು ತಹಸೀಲ್ದಾರ್ ಹಾಗೂ ಕೋಟ ಪೊಲೀಸ್ ಠಾಣೆಗೆ ಈ ಬಗ್ಗೆ ಗ್ರಾಮಸ್ಥರು ಲಿಖಿತ ದೂರು ನೀಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಇಲ್ಲಿಂದ ಅಕ್ರಮವಾಗಿ ಮರಳನ್ನು ತೆಗೆದು ಲಾರಿಯ ಮುಖಾಂತರ ಕುಂದಾಪುರದ ಕುಂಭಾಷಿ ಬಳಿಯ ಕೊರಾಡಿಗೆ ಕಾನೂನು ಬಾಹಿರವಾಗಿ ಮರಳು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಆ ಜಾಗದ ಮಾಲೀಕರಿಗೆ ಅಕ್ರಮವಾಗಿ ಮರಳು ತೆಗೆಯದಂತೆ ಗ್ರಾಮಸ್ಥರು‌ ತಿಳಿಹೇಳಿದ್ದರು. ಆದರೂ ಕೆಲವು ದಿನ ಮರಳು ತೆಗೆಯುವುದನ್ನು ನಿಲ್ಲಿಸಿ ಪುನಃ ಮರಳು ಬಗೆದು ಸಾಗಿಸುವುದನ್ನು ಮುಂದುವರೆಸಿದ್ದರು. ಹಾಗಾಗಿ ಈ ಬಗ್ಗೆ ತಹಸೀಲ್ದಾರ್ ಕಚೇರಿಗೆ ದೂರು ನೀಡಿದ್ದೇವೆ ಎಂದು ಸ್ಥಳೀಯರಾದ ರಾಮ ಬಂಗೇರ ‘ಬೆಂಗಳೂರು ವೈರ್’ ಗೆ ತಿಳಿಸಿದ್ದಾರೆ.

ಕೋಟತಟ್ಟು ಗ್ರಾಮಸ್ಥರು ಬ್ರಹ್ಮಾವರ ತಹಸೀಲ್ದಾರ್ ಅವರಿಗೆ ನೀಡಿರುವ ದೂರಿನ ಪ್ರತಿ

ಪ್ರತಿ ಲೋಡಿನ ಈ ಮರಳಿಗೆ ಮಾರುಕಟ್ಟೆಯಲ್ಲಿ 45 ಸಾವಿರ ರೂ.ಗಳನ್ನು ಬ್ರೋಕರ್ ಗಳಿಸುತ್ತಿದ್ದ. ಆದರೆ ಜಾಗದ ಮಾಲೀಕರಿಗೆ ಪ್ರತಿ ಲೋಡಿಗೆ 8 ಸಾವಿರ ರೂ. ಹಣವನ್ನು ನೀಡುತ್ತಿದ್ದರು. ಮರಳು ತೆಗೆದ ಜಾಗದಲ್ಲಿ ಹೊರಗಿನಿಂದ ಕೆಂಪು ಮಣ್ಣನ್ನು ತಂದು ತುಂಬುತ್ತಿದ್ದರು. ನೈಸರ್ಗಿಕವಾಗಿ ನೂರಾರು ವರ್ಷಗಳಿಂದ ನಿರ್ಮಾಣವಾಗಿರುವ ಮರಳಿನ ರಚನೆಗೆ ಅಕ್ರಮ ಮರಳು ಗಣಿಕಾರಿಕೆ ಕೊಡಲಿ ಪೆಟ್ಟು ನೀಡಿದೆ. ಮುಂದೆ ಇದರಿಂದಾಗಿ ನಮ್ಮ ಮನೆ ಸುತ್ತಮುತ್ತಲ ಜಾಗದಲ್ಲಿನ ಬಾವಿ ನೀರಿಗೆ ಸಂಚಕಾರ ಬಂದರೂ ಆಶ್ಚರ್ಯವಿಲ್ಲ ಎಂದು ಬಂಗೇರ ವಿವರಿಸಿದರು.

ಇಲ್ಲಿನ ಒಂದೂವರೆ ಎಕರೆ ಜಾಗದಲ್ಲಿದ್ದ ಮರಳು ಬಹಳ‌ ನುಣುಪಾಗಿದ್ದು ಗಾಜು ತಯಾರಿಕೆ, ಪಿಂಗಾಣಿ ಸಾಮಗ್ರಿಗಳ ತಯಾರಿಕೆ ಅನುಕೂಲವಾಗಿತ್ತು. ಆದ ಕಾರಣ ಅಕ್ರಮವಾಗಿ ಇಲ್ಲಿದ್ದ ಬೆಲೆ ಬಾಳುವ ಮರಳನ್ನು ಸಾಗಿಸಲಾಗಿದೆ. ಸಮತಟ್ಟಾಗಿದ್ದ ಈ ಜಾಗದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದ್ದು, ಮಣ್ಣು ಕುಸಿತ ಸಂಭವಿಸಿ ಈ ಭಾಗದಲ್ಲಿ ಓಡಾಟ ಕಷ್ಟವಾಗಿದೆ ಎಂದು ಮತ್ತೊಬ್ಬ ಗ್ರಾಮಸ್ಥರು ಪರಿಸ್ಥಿತಿಯ ಬಗ್ಗೆ ಹೇಳಿದ್ದಾರೆ.

ಈ ಪ್ರಕರಣದ ಕುರಿತಂತೆ ಬ್ರಹ್ಮಾವರ ತಹಸೀಲ್ದಾರ್ ರಾಜಶೇಖರ್ ಮೂರ್ತಿ, ಗಣಿ‌ ಮತ್ತು ಭೂವಿಜ್ಞಾನ ಇಲಾಖೆಯ ಜೊತೆಗೆ ಮಾತನಾಡಿ, ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ಮಾಡಿ ಕ್ರಮವಹಿಸಲು ತಿಳಿಸಿದ್ದಾಗಿ ‘ಬೆಂಗಳೂರು ವೈರ್’ ಪ್ರತಿಕ್ರಿಯೆ ನೀಡಿದ್ದಾರೆ.

ಪಡುಕೆರೆಯ ಈ ಪರಿಸರದಲ್ಲಿ ನವಿಲು, ಹಕ್ಕಿಪಕ್ಷಿಗಳು, ಸರೀಸೃಪಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಸ್ಥಳದಲ್ಲಿ ಏಕಾಏಕಿ ಮರಳು ಗಣಿಗಾರಿಕೆ ಪ್ರಾರಂಭವಾದ ಮೇಲೆ ಈ ಜೀವಿಗಳ ವಾಸಸ್ಥಾನಕ್ಕೂ ಕುತ್ತು ಬಂದಂತಾಗಿದೆ. ಈ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯ ಅನಧಿಕೃತ ಮರಳುಗಾರಿಕೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಅಶ್ವಿನಿಯವರನ್ನು ದೂರವಾಣಿ ಮುಖಾಂತರ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದರೂ, ಯಾವುದೇ ಪ್ರತಿಕ್ರಿಯೆ ನೀಡಲು ಲಭ್ಯರಾಗಿಲ್ಲ.

ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ವಿವರ :
ಸರ್ಕಾರದ ಅಂಕಿ- ಅಂಶಗಳ ಪ್ರಕಾರ, 2020-21ರಲ್ಲಿ 3,451 ಅಕ್ರಮ ಮರಳುಗಾರಿಕೆ ಪ್ರಕರಣಗಳು ದಾಖಲಾಗಿದ್ದರೆ, ಅದರ ಹಿಂದಿನ ವರ್ಷ 3,193 ಪ್ರಕರಣಗಳು ದಾಖಲಾಗಿವೆ. 2018-19ರಲ್ಲಿ 3,869 ಪ್ರಕರಣಗಳನ್ನು ಗುರುತಿಸಲಾಗಿದೆ. ಜನವರಿ ಮತ್ತು ಆಗಸ್ಟ್ 2021 ರ ನಡುವೆ ರಾಜ್ಯದಲ್ಲಿ 290 ಅಕ್ರಮ ಮರಳು ಸಾಗಣೆ ಪ್ರಕರಣಗಳು ಮತ್ತು 35 ಅಕ್ರಮ ಮರಳು ಗಣಿಗಾರಿಕೆ ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.

WhatsApp Join our WhatsApp Channel
Previous Post

ಭುವನಗಿರಿಯಲ್ಲಿ ಕನ್ನಡ ಜ್ಯೋತಿ ಹೊತ್ತ ‘ಕನ್ನಡ ರಥ’ಕ್ಕೆ ಗುರುವಾರ ವಿದ್ಯುಕ್ತ ಚಾಲನೆ– ಅ.ಭಾ.ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಭಾಗಿವಹಿಸಲು ನೋಂದಣಿ ಡಿ.1ರಿಂದ ಆರಂಭ

Next Post

Bangalore Gold Paint | ರೇಷ್ಮೆ ಸೀರೆಯಲ್ಲಿ ಜಪಾನ್ ಪುರಾತನ ಕಲೆಯ ಅಪರೂಪದ ಕಲಾಲೋಕ ಸೃಷ್ಟಿ : ಈ ಸೀರೆಗಳ ಬೆಲೆ ಲಕ್ಷ ರೂ.ಗಳಲ್ಲಿ!!

Next Post

Bangalore Gold Paint | ರೇಷ್ಮೆ ಸೀರೆಯಲ್ಲಿ ಜಪಾನ್ ಪುರಾತನ ಕಲೆಯ ಅಪರೂಪದ ಕಲಾಲೋಕ ಸೃಷ್ಟಿ : ಈ ಸೀರೆಗಳ ಬೆಲೆ ಲಕ್ಷ ರೂ.ಗಳಲ್ಲಿ!!

BDA News | ಡಾ.ಶಿವರಾಮ ಕಾರಂತ ಬಡಾವಣೆಗೆ
ಜಮೀನು ನೀಡಿರುವ ರೈತರಿಗೆ ನಿವೇಶನ ಅರ್ಹತಾ ಪ್ರಮಾಣ ಪತ್ರ ಹಂಚಿಕೆ

Please login to join discussion

Like Us on Facebook

Follow Us on Twitter

Recent News

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026

ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

June 12, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026

ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

June 12, 2026

Human Interest Story | ಕೇವಲ 3 ನಿಮಿಷ ನಿದ್ದೆಗೆ ಜಾರಿದ, ಕಸಿದಿತ್ತು 8 ವರ್ಷದ ಘನತೆ: ಇದು ರಾತ್ರಿ ಕಾವಲುಗಾರನೊಬ್ಬನ ಮನಕಲಕುವ ಕಥೆ

June 12, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group