Friday, April 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    Karnataka Lokayukta | ಕರ್ನಾಟಕ ಲೋಕಾಯುಕ್ತಕ್ಕೆ 40ರ ಸಂಭ್ರಮ: ಏಪ್ರಿಲ್ 18ರಂದು ಸಾರ್ಥಕ ಪಯಣದ ಕಾರ್ಯಕ್ರಮ

  • Bengaluru Focus

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

    ಬಿಟ್‌ಕಾಯಿನ್ ಹಗರಣದ ಕಿಚ್ಚು: ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರರ ನಿವಾಸದ ಮೇಲೆ ಇಡಿ ದಾಳಿ, ಪರಿಶೀಲನೆ

    CLEA Conference | ಬೆಂಗಳೂರು ಘೋಷಣೆ: 2047ರ ವೇಳೆಗೆ ಸುಸ್ಥಿರ ಇಂಧನ ಮತ್ತು ಇಂಧನ ನ್ಯಾಯಕ್ಕೆ ಸಂಕಲ್ಪ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಭುವನಗಿರಿಯಲ್ಲಿ ಕನ್ನಡ ಜ್ಯೋತಿ ಹೊತ್ತ ‘ಕನ್ನಡ ರಥ’ಕ್ಕೆ ಗುರುವಾರ ವಿದ್ಯುಕ್ತ ಚಾಲನೆ– ಅ.ಭಾ.ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಭಾಗಿವಹಿಸಲು ನೋಂದಣಿ ಡಿ.1ರಿಂದ ಆರಂಭ

by Bengaluru Wire Desk
November 30, 2022
in News Wire, Others, Public interest
Reading Time: 4 mins read
0
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ  “ಕನ್ನಡ ಜ್ಯೋತಿ”ಯನ್ನು ಹೊತ್ತು ರಾಜ್ಯದಾದ್ಯಂತ ತೆರಳಲಿರುವ “ಕನ್ನಡ ರಥ”ದ ಚಿತ್ರ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ “ಕನ್ನಡ ಜ್ಯೋತಿ”ಯನ್ನು ಹೊತ್ತು ರಾಜ್ಯದಾದ್ಯಂತ ತೆರಳಲಿರುವ “ಕನ್ನಡ ರಥ”ದ ಚಿತ್ರ

ಬೆಂಗಳೂರು, ನ.30 www.bengaluruwire.com : ಹಾವೇರಿಯಲ್ಲಿ 2023ರ ಜನವರಿ 6, 7 ಹಾಗೂ 8ರಂದು ಮೂರು ದಿನಗಳ ಕಾಲ ನಡೆಯುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಆಯೋಜಿಸಿರುವ “ಕನ್ನಡ ಜ್ಯೋತಿ”ಯನ್ನು ಹೊತ್ತ “ಕನ್ನಡ ರಥ”ದ ಜಾಥಾಗೆ ಡಿಸೆಂಬರ್ 1ರಂದು ಬೆಳಗ್ಗೆ 10 ಗಂಟೆಗೆ ಚಾಲನೆ ದೊರೆಯಲಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭುವನಗಿರಿಯಲ್ಲಿರುವ ಕನ್ನಡ ತಾಯಿ ಭುವನೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ “ಕನ್ನಡ ಜ್ಯೋತಿ”ಯನ್ನು ಹೊತ್ತ “ಕನ್ನಡ ರಥ”ದ ಜಾಥಾಗೆ ವಿಧ್ಯುಕ್ತ ಚಾಲನೆ ನೀಡಲಾಗುವುದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ

ಭುವನಗಿರಿಯಿಂದ ಹೊರಟ ಕನ್ನಡ ರಥದ ಜಾಥಾವು ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಲಿದೆ. ಸಮ್ಮೇಳನ ಉದ್ಘಾಟನೆ ಸಂದರ್ಭದಲ್ಲಿ ಕನ್ನಡ ರಥವು ವಿಶೇಷವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡು, ಇದರಲ್ಲಿನ ಕನ್ನಡ ಜ್ಯೋತಿಯಿಂದಲೇ 2023ರ ಜನವರಿ 6ರಂದು ನಡೆಯುವ ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಹಾವೇರಿಯಲ್ಲಿ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನವು ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ “ಕನ್ನಡ ಜ್ಯೋತಿ”ಯನ್ನು ಹೊತ್ತ ಕನ್ನಡದ ಸ್ವಾಭಿಮಾನದ ಸಂಕೇತವಾದ “ಕನ್ನಡ ರಥ”ದ ಜಾಥಾವನ್ನು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದು, ಹೊಸ ಪರಂಪರೆಗೆ ನಾಂದಿ ಹಾಡಲಾಗುತ್ತಿದೆ. ಸಮ್ಮೇಳನವನ್ನು ಐತಿಹಾಸಿಕ ದಾಖಲೆಯನ್ನಾಗಿಸುವ ಸದುದ್ದೇಶದಿಂದ ಕೈಗೊಳ್ಳುತ್ತಿರುವ ಈ ಹೊಸ ಯೋಜನೆಯನ್ನು ಮುಂದಿನ ಎಲ್ಲ ಸಮ್ಮೇಳನಗಳಲ್ಲೂ ಆಚರಿಸುವಂತೆ ಈ ಜಾಥಾವನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಕನ್ನಡ ರಥದ ಜಾಥಾವು ಆಯಾ ಜಿಲ್ಲೆಗಳಲ್ಲಿ ಸಂಚರಿಸುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳು, ರೈತರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿದ್ಯಾಸಂಸ್ಥೆಗಳು, ಮಠಗಳು, ರೋಟರಿ ಕ್ಲಬ್, ಸ್ತ್ರೀ ಶಕ್ತಿ ಸಂಘಗಳು, ಇತರ ಎಲ್ಲ ಕನ್ನಡ ಸಂಘ-ಸಂಸ್ಥೆಗಳನ್ನು ಜೊತೆಗೂಡಿಸಿಕೊಂಡು “ಕನ್ನಡ ರಥ”ಕ್ಕೆ ಭವ್ಯ ಸ್ವಾಗತವನ್ನು ಕೋರಿ ಬೀಳ್ಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.  ಕನ್ನಡ ರಥ ಜಾಥವು ಅದ್ಭುತವಾಗಿ ಯಶಸ್ವಿಗೊಳಿಸಲು ಸಮಸ್ತ ಕನ್ನಡಿಗರು ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಮನವಿ ಮಾಡಿಕೊಳ್ಳುತ್ತಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಭಾಗವಹಿಸುವವರ ಪ್ರತಿನಿಧಿ ನೋಂದಣಿ, ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳ ನೋಂದಣಿ, ಸಮ್ಮೇಳನದ ಆಮಂತ್ರಣ ಪತ್ರಿಕೆ, ವಿವಿಧ ಸಮಿತಿಗಳು ಮತ್ತು ಸಮಿತಿಯ ಸದಸ್ಯರ ವಿವರಗಳು, ಹಾವೇರಿ ಕುರಿತಂತೆ ಮಾಹಿತಿ, ಸಾರಿಗೆ, ಸಂಪರ್ಕ, ವಸತಿ ವಿವರ, ಸಹಾಯವಾಣಿ ಸೇರಿದಂತೆ ಸಮ್ಮೇಳನದ ಸಂಪೂರ್ಣ ಮಾಹಿತಿ, ವಿವರಗಳನ್ನು ಒದಗಿಸಲು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಧುನಿಕ ಮೊಬೈಲ್ ಆ್ಯಪ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮ್ಮೇಳನದ ಪ್ರತಿನಿಧಿ ನೋಂದಣಿಗಾಗಿ :

ಕನ್ನಡ ಸಾಹಿತ್ಯ ಪರಿಷತ್

ಈ ಅಕ್ಷರ ಜಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭಿಮಾನಿಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ”  ಆ್ಯಪ್ https://play.google.com/store/apps/details?id=com.tritantra.kasapa ಮೂಲಕ ಮಾತ್ರವೇ ರೂ. 500/- (ಐದು ನೂರು ರೂಪಾಯಿ)ಗಳ ಶುಲ್ಕವನ್ನು ಆ್ಯಪ್ ಮೂಲಕವೇ ಪಾವತಿಸಿ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ವಿವರಗಳು ಈ ಕೆಳಕಡಂತಿದೆ.

ನೋಂದಣಿ ಪ್ರಕ್ರಿಯೆಗಳು :

1)  ಪ್ರತಿನಿಧಿಗಳಾಗಿ ಭಾಗವಹಿಸಲು ನೋಂದಾಯಿಸಲು ಇಚ್ಛಿಸುವವರು ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ  ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ https://bit.ly/kasapapp ಆ್ಯಪ್ ಮೂಲಕ / ಆ್ಯಪಲ್ (ಐಓಎಸ್) ಸ್ಟೋರ್‌ನಲ್ಲಿ  https://apple.co/3zaw231 ಮೊದಲು ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದ ತಕ್ಷಣವೇ ದೊರೆಯುವ ಸದಸ್ಯತ್ವ ಸಂಖ್ಯೆಯನ್ನು ಸಮ್ಮೇಳನದ ಆ್ಯಪ್‌ನಲ್ಲಿ https://play.google.com/store/apps/details?id=com.tritantra.kasapa ನಮೂದಿಸಿ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳತಕ್ಕದ್ದು.

2)  ದಿನಾಂಕ 01-12- 2022 ರ ಮಧ್ಯರಾತ್ರಿ 12.೦೦ ರಿಂದ ನೋಂದಣಿ ಲಭ್ಯವಿದ್ದು, ದಿನಾಂಕ 18-12- 2022 (ರಾತ್ರಿ    12.೦೦ರ ವರೆಗೆ) ಅಂತಿಮ ದಿನವಾಗಿರುತ್ತದೆ.

3)  ಅವಧಿ ಮೀರಿ ಬರುವ ಕೋರಿಕೆಗಳಿಗೆ ಹಾಗೂ ಸಮ್ಮೇಳನ ನಡೆಯುವ ಸ್ಥಳದಲ್ಲಿ ಪ್ರತಿನಿಧಿಗಳ ನೋಂದಣಿಗೆ ಅವಕಾಶವಿರುವುದಿಲ್ಲ.

ನೋಂದಾಯಿತ ಪ್ರತಿನಿಧಿಗಳಿಗೆ ಸಿಗುವ ಅನುಕೂಲತೆಗಳು / ಸೌಲಭ್ಯಗಳು :

1) ಹಾವೇರಿ ಜಿಲ್ಲೆಯಿಂದ ನೋಂದಾಯಿಸುವ ಪ್ರತಿನಿಧಿಗಳಿಗೆ ಹೊರತುಪಡಿಸಿ, ಮಿಕ್ಕುಳಿದ ಎಲ್ಲಾ ಜಿಲ್ಲೆಗಳ, ಹೊರ ರಾಜ್ಯಗಳ ನೋಂದಾಯಿತ ಪ್ರತಿನಿಧಿಗಳಿಗೆ ಲಭ್ಯವಿರುವ ವಸತಿ ಏರ್ಪಾಟುಗೊಳಿಸಲಾಗುವುದು.

2) ವಸತಿ ಸ್ಥಳದಿಂದ ಸಮ್ಮೇಳನದ ಸ್ಥಳಕ್ಕೆ ಲಭ್ಯವಿರುವ ಸಾರಿಗೆ ವ್ಯವಸ್ಥೆ ಮಾಡಲಾಗುವುದು.

3) ನೋಂದಾಯಿತ ಎಲ್ಲಾ ಪ್ರತಿನಿಧಿಗಳಿಗೆ ಊಟ/ಉಪಾಹಾರದ ವ್ಯವಸ್ಥೆ ಕೈಗೊಳ್ಳಲಾಗುವುದು.

4) ಕಿಟ್ ಮತ್ತು ಬ್ಯಾಡ್ಜ್ ನೀಡಲಾಗುವುದು.

5) ಓ.ಓ.ಡಿ. ಹಾಜರಾತಿ ಪ್ರಮಾಣ ಪತ್ರ ನೀಡಲಾಗುವುದು.

ಪುಸ್ತಕ ಮಳಿಗೆಗಳ ನೋಂದಣಿಗಾಗಿ :

ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಪ್ರಕಾಶಕರು, ಮಾರಾಟಗಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಆ್ಯಪ್ https://play.google.com/store/apps/details?id=com.tritantra.kasapa ಮೂಲಕ ಮಾತ್ರವೇ ಪುಸ್ತಕ ಮಳಿಗೆ ಒಂದಕ್ಕೆ ರೂ. 3,೦೦೦/- (ಮೂರು ಸಾವಿರ ರೂಪಾಯಿ) ಶುಲ್ಕವನ್ನು  ಆ್ಯಪ್ ಮೂಲಕವೇ ಪಾವತಿಸಿ ಮಳಿಗೆಗಳನ್ನು ತೆರೆಯಲು ನೋಂದಾಯಿಸಿಕೊಳ್ಳಬಹುದಾಗಿದೆ. ವಿವರಗಳು ಈ ಕೆಳಕಂಡAತಿದೆ.

ನೋಂದಣಿ ಪ್ರಕ್ರಿಯೆಗಳು :

1) ಪುಸ್ತಕ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಲೇಖಕರು, ಪ್ರಕಾಶಕರು, ಮಾರಾಟಗಾರರು, ಪುಸ್ತಕ ಮಳಿಗೆಯ ಮುಖ್ಯಸ್ಥರು / ಮೇಲ್ವಿಚಾರಕರು ವೈಯಕ್ತಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ https://bit.ly/kasapapp ಆ್ಯಪ್ ಮೂಲಕ / ಆ್ಯಪಲ್ (ಐಓಎಸ್) ಸ್ಟೋರ್‌ನಲ್ಲಿ  https://apple.co/3zaw231 ಮೊದಲು ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದ ತಕ್ಷಣವೇ ದೊರೆಯುವ ಸದಸ್ಯತ್ವ ಸಂಖ್ಯೆಯನ್ನು ಸಮ್ಮೇಳನದ ಆ್ಯಪ್‌ನಲ್ಲಿ https://play.google.com/store/apps/details?id=com.tritantra.kasapa ನಮೂದಿಸಿ ಮಳಿಗೆಯನ್ನು ನೋಂದಾಯಿಸಿಕೊಳ್ಳತಕ್ಕದ್ದು.

2) ದಿನಾಂಕ ೦1-12-2022 ರ ಮಧ್ಯರಾತ್ರಿ  12.೦೦ ರಿಂದ ಮಳಿಗೆಗಳ ನೋಂದಣಿ ಲಭ್ಯವಿದ್ದು, ದಿನಾಂಕ 18-12-2022 (ರಾತ್ರಿ 12.೦೦ರ ವರೆಗೆ) ಅಂತಿಮ ದಿನವಾಗಿರುತ್ತದೆ.

3) ಮೂರು ದಿವಸಗಳಿಗೆ ಒಂದು ಹಾಗೂ ಒಂದಕ್ಕಿಂತ ಹೆಚ್ಚು ಪುಸ್ತಕ ಮಳಿಗೆ ಬೇಕಾದಲ್ಲಿ ತಲಾ 3,೦೦೦/- (ಮೂರು ಸಾವಿರ ರೂಪಾಯಿ)ಗಳ ಬಾಡಿಗೆ ನೀಡುವುದು.

4) ಕಡ್ಡಾಯವಾಗಿ ಕನ್ನಡ ಪುಸ್ತಕ ಮಾರಾಟಕ್ಕೆ ಮಾತ್ರ ಅವಕಾಶ. ಬೇರೆ ಭಾಷೆಗಳ ಪುಸ್ತಕ ಮಾರಾಟ ಕಂಡುಬಂದಲ್ಲಿ ಮಾರಾಟಕ್ಕೆ ನೀಡಲಾದ ಪರವಾನಗಿಯನ್ನು ರದ್ದುಪಡಿಸಲಾಗುವುದು.

5) ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಕಂಡುಬAದಲ್ಲಿ ಪರವಾನಗಿಯನ್ನು ರದ್ದುಪಡಿಸಿ, ಮಳಿಗೆಯನ್ನು ತೆರವುಗೊಳಿಸಲಾಗುವುದು.

6) ನೋಂದಣಿಯಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

7) ಮಳಿಗೆಗಳ ಹಂಚಿಕೆಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳ ಸಮ್ಮುಖದಲ್ಲಿ ಲಾಟರಿ ಆಧಾರದ ಮೇಲೆ ನಿರ್ಧರಿಸಲಾಗುವುದು ಮತ್ತು ಹಂಚಿಕೆಯ ದಾಖಲಾತಿ ಚಿತ್ರೀಕರಣ ಮಾಡಲಾಗುವುದು.

8) ಮಳಿಗೆಗಳ ಹಂಚಿಕೆ ಆಗದಿದ್ದರೆ ಅವರ ಹಣವನ್ನು ಸಮ್ಮೇಳನದ ನಂತರ 60 ದಿವಸಗಳಲ್ಲಿ ಮರಳಿಸಲಾಗುವುದು.

9) ಅವಧಿ ಮೀರಿ ಬರುವ ಕೋರಿಕೆಗಳಿಗೆ ಹಾಗೂ ಸಮ್ಮೇಳನ ನಡೆಯುವ ಸ್ಥಳದಲ್ಲಿ ಮಳಿಗೆಗಳ ನೋಂದಣಿಗೆ ಅವಕಾಶವಿರುವುದಿಲ್ಲ.

ನೋಂದಾಯಿತ ಪುಸ್ತಕ ಮಳಿಗೆಯಲ್ಲಿ ಸಿಗುವ ಅನುಕೂಲತೆಗಳು / ಸೌಲಭ್ಯಗಳು :

1) ಪ್ರತಿ ಮಳಿಗೆಗೆ ವಿದ್ಯುತ್ ಸೌಕರ್ಯ ಒದಗಿಸಲಾಗುವುದು.

2) ಮಳಿಗೆಯೊಂದಕ್ಕೆ 2 ಕುರ್ಚಿಗಳು, 2 ಬೆಂಚುಗಳನ್ನು ಒದಗಿಸಲಾಗುವುದು.

3) ಮಳಿಗೆಯೊಂದಕ್ಕೆ ನಾಲ್ವರಿಗೆ ಮಾತ್ರ ಊಟ/ಉಪಾಹಾರದ ವ್ಯವಸ್ಥೆಗೊಳಿಸಲಾಗುವುದು.

ಸೂಚನೆ : ಒಂದು ವೇಳೆ ಮಳಿಗೆಗಳಲ್ಲಿ ಒದಗಿಸಲಾಗಿದ್ದ ಸೌಲಭ್ಯಗಳು ಬೆಂಚು, ಕುರ್ಚಿ, ವಿದ್ಯುತ್ ದೀಪ – ಇವುಗಳನ್ನು ಹಾಳುಮಾಡಿದ್ದಲ್ಲಿ ಮಳಿಗೆದಾರರಿಂದಲೇ ದಂಡ ವಸೂಲಿ ಮಾಡಲಾಗುವುದು.

ವಾಣಿಜ್ಯ ಮಳಿಗೆಗಳ ನೋಂದಣಿಗಾಗಿ :

 ಸಮ್ಮೇಳನದಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಮಾರಾಟಗಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ”  ಆ್ಯಪ್ https://play.google.com/store/apps/details?id=com.tritantra.kasapa ಮೂಲಕ ಮಾತ್ರವೇ ವಾಣಿಜ್ಯ ಮಳಿಗೆ ಒಂದಕ್ಕೆ ರೂ. 5,೦೦೦/- (ಐದು ಸಾವಿರ ರೂಪಾಯಿ) ಶುಲ್ಕವನ್ನು ಆ್ಯಪ್ ಮೂಲಕವೇ ಪಾವತಿಸಿ ಮಳಿಗೆಗಳನ್ನು ತೆರೆಯಲು ನೋಂದಾಯಿಸಿಕೊಳ್ಳಬಹುದಾಗಿದೆ. ವಿವರಗಳು ಈ ಕೆಳಕಂಡಂತಿದೆ.

ನೋಂದಣಿ ಪ್ರಕ್ರಿಯೆಗಳು :

1) ವಾಣಿಜ್ಯ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಮಾರಾಟಗಾರರು, ಮುಖ್ಯಸ್ಥರು / ಮೇಲ್ವಿಚಾರಕರು ವೈಯಕ್ತಿಕವಾಗಿ  ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ https://bit.ly/kasapapp ಆ್ಯಪ್ ಮೂಲಕ / ಆ್ಯಪಲ್ (ಐಓಎಸ್) ಸ್ಟೋರ್‌ನಲ್ಲಿ  https://apple.co/3zaw231 ಮೊದಲು ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದ ತಕ್ಷಣವೇ ದೊರೆಯುವ ಸದಸ್ಯತ್ವ ಸಂಖ್ಯೆಯನ್ನು ಸಮ್ಮೇಳನದ ಆ್ಯಪ್‌ನಲ್ಲಿ https://play.google.com/store/apps/details?id=com.tritantra.kasapa ನಮೂದಿಸಿ ಮಳಿಗೆಯನ್ನು ನೋಂದಾಯಿಸಿಕೊಳ್ಳತಕ್ಕದ್ದು.

2) ದಿನಾಂಕ ೦1-12- 2022 ರ ಮಧ್ಯರಾತ್ರಿ 12.೦೦ ರಿಂದ  ಮಳಿಗೆಗಳ ನೋಂದಣಿ ಲಭ್ಯವಿದ್ದು, ದಿನಾಂಕ 18-12-2022 (ರಾತ್ರಿ 12.೦೦ರ ವರೆಗೆ) ಅಂತಿಮ ದಿನವಾಗಿರುತ್ತದೆ.

3) ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ಪರವಾನಗಿಯನ್ನು ರದ್ದುಪಡಿಸಿ, ಮಳಿಗೆಯನ್ನು ತೆರವುಗೊಳಿಸಲಾಗುವುದು.

4) ನೋಂದಣಿಯಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

5) ಮಳಿಗೆಗಳ ಹಂಚಿಕೆಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳ ಸಮ್ಮುಖದಲ್ಲಿ ಲಾಟರಿ ಆಧಾರದ ಮೇಲೆ ನಿರ್ಧರಿಸಲಾಗುವುದು ಮತ್ತು ಹಂಚಿಕೆಯ ದಾಖಲಾತಿ ಚಿತ್ರಿಕರಣ ಮಾಡಲಾಗುವುದು.

6) ಮಳಿಗೆಗಳ ಹಂಚಿಕೆ ಆಗದಿದ್ದರೆ ಅವರ ಹಣವನ್ನು ಸಮ್ಮೇಳನದ ನಂತರ ೬೦ ದಿವಸಗಳಲ್ಲಿ ಮರಳಿಸಲಾಗುವುದು.

7) ಅವಧಿ ಮೀರಿ ಬರುವ ಕೋರಿಕೆಗಳಿಗೆ ಹಾಗೂ ಸಮ್ಮೇಳನ ನಡೆಯುವ ಸ್ಥಳದಲ್ಲಿ ಮಳಿಗೆಗಳ ನೋಂದಣಿಗೆ ಅವಕಾಶವಿರುವುದಿಲ್ಲ.

ನೋಂದಾಯಿತ ವಾಣಿಜ್ಯ ಮಳಿಗೆಯಲ್ಲಿ ಸಿಗುವ ಅನುಕೂಲತೆಗಳು / ಸೌಲಭ್ಯಗಳು:

1) ಪ್ರತಿ ಮಳಿಗೆಗೆ ವಿದ್ಯುತ್ ಸೌಕರ್ಯ ಒದಗಿಸಲಾಗುವುದು.

2) ಮಳಿಗೆಯೊಂದಕ್ಕೆ 2 ಕುರ್ಚಿಗಳು, 2 ಬೆಂಚುಗಳನ್ನು ಒದಗಿಸಲಾಗುವುದು.

3) ಮಳಿಗೆಯೊಂದಕ್ಕೆ ನಾಲ್ವರಿಗೆ ಮಾತ್ರ ಊಟ/ಉಪಾಹಾರದ ವ್ಯವಸ್ಥೆಗೊಳಿಸಲಾಗುವುದು.

ಸೂಚನೆ : ಒಂದು ವೇಳೆ ಮಳಿಗೆಗಳಲ್ಲಿ ಒದಗಿಸಲಾಗಿದ್ದ ಸೌಲಭ್ಯಗಳು ಬೆಂಚು, ಕುರ್ಚಿ, ವಿದ್ಯುತ್ ದೀಪ – ಇವುಗಳನ್ನು ಹಾಳುಮಾಡಿದ್ದಲ್ಲಿ ಮಳಿಗೆದಾರರಿಂದಲೇ ದಂಡ ವಸೂಲಿ ಮಾಡಲಾಗುವುದು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ಹಾಗೂ ವಸ್ತು ಪ್ರದರ್ಶನ ಸಮಿತಿಗೆ ಮಾಜಿ ಶಾಸಕರಾದ ಶ್ರೀ ಯು.ಬಿ. ಬಣಕಾರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಂ. ಸಾಲಿ ಅವರ ಉಪಾಧ್ಯಕ್ಷತೆಯಲ್ಲಿ ಉಪ ಸಮಿತಿಯನ್ನು ರಚಿಸಲಾಗಿದೆ. ಪುಸ್ತಕ / ವಾಣಿಜ್ಯ ಮಳಿಗೆಯಲ್ಲಿನ ಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿ ಕುರಿತು ಈ ಕೆಳಕಂಡವರನ್ನು ಸಂಪರ್ಕಿಲು ಕೋರಿದೆ.

               1) ಶ್ರೀ ವಿನಾಯಕ ಜೋಶಿ, ಜಂಟಿ ನಿರ್ದೇಶಕರು, ಕೈಗಾರಿಕಾ ಇಲಾಖೆ, ಹಾವೇರಿ. ಮೊ. 8660348505

               2) ಶ್ರೀ ಲಿಂಗಯ್ಯ ಹಿರೇಮಠ, ಅಧ್ಯಕ್ಷರು, ಹಾವೇರಿ ಜಿಲ್ಲಾ ಕ.ಸಾ.ಪ., ಮೊ. 9902768704

               3) ಶ್ರೀ ವೈ.ಬಿ. ಆಲದಕಟ್ಟಿ, ಅಧ್ಯಕ್ಷರು, ಹಾವೇರಿ ತಾಲ್ಲೂಕು ಕ.ಸಾ.ಪ., ಮೊ. 9880268265

               4) ಶ್ರೀ ಪಾರ್ಶ್ವನಾಥ್, ಕ.ಸಾ.ಪ., ಮೊ. 9901059888

               5) ಶ್ರೀ ಧನಂಜಯ, ಕ.ಸಾ.ಪ., ಮೊ. 9980608182

WhatsApp Join our WhatsApp Channel
Previous Post

#Sandalwood Queen Ramya | ಇಸ್ಪೀಟ್ ಕಾರ್ಡ್ ಎಲೆಯ ಮೇಲೆ ಅರಳಿನಿಂತ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಆಳೆತ್ತರದ ಚಿತ್ರ

Next Post

IllegalMining | ಉಡುಪಿ ಜಿಲ್ಲೆಯ ಕಡಲತಡಿಯಲ್ಲಿ ನಿಲ್ಲದ ಅಕ್ರಮ ಮರಳುಗಾರಿಕೆ : ಕೋಟತಟ್ಟು ಗ್ರಾಮಸ್ಥರ ಆಕ್ಷೇಪ

Next Post

IllegalMining | ಉಡುಪಿ ಜಿಲ್ಲೆಯ ಕಡಲತಡಿಯಲ್ಲಿ ನಿಲ್ಲದ ಅಕ್ರಮ ಮರಳುಗಾರಿಕೆ : ಕೋಟತಟ್ಟು ಗ್ರಾಮಸ್ಥರ ಆಕ್ಷೇಪ

Bangalore Gold Paint | ರೇಷ್ಮೆ ಸೀರೆಯಲ್ಲಿ ಜಪಾನ್ ಪುರಾತನ ಕಲೆಯ ಅಪರೂಪದ ಕಲಾಲೋಕ ಸೃಷ್ಟಿ : ಈ ಸೀರೆಗಳ ಬೆಲೆ ಲಕ್ಷ ರೂ.ಗಳಲ್ಲಿ!!

Please login to join discussion

Like Us on Facebook

Follow Us on Twitter

Recent News

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026

 ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group