Wednesday, October 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ​ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ: ರಾಜ್ಯಪಾಲರಿಗೆ ಎನ್‌ಡಿಎ ನಿಯೋಗ ದೂರು

    Science News | 2026ನೇ ನೊಬೆಲ್ ವೈದ್ಯಕೀಯ ಪ್ರಶಸ್ತಿ: ಮಿದುಳಿನ ನಿಗೂಢ ಶೋಧಕ್ಕೆ ಮೂವರು ವಿಜ್ಞಾನಿಗಳಿಗೆ ಗೌರವ

    ದೆಹಲಿಯಲ್ಲಿ ಪ್ರತಿಭಟನಾಕಾರರ ಬಂಧನ ಭೀತಿ: ಪತ್ರಕರ್ತರ ಮೇಲಿನ ಹಲ್ಲೆಗೆ KUWJ ತೀವ್ರ ಆಕ್ರೋಶ

    ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

    ಅಯೋಧ್ಯೆ ರಾಮ ಮಂದಿರದಲ್ಲಿ ಭದ್ರತೆ ಹೆಚ್ಚಳ: ಜೇಬಿಲ್ಲದ ಸಮವಸ್ತ್ರ, ಕಠಿಣ ನಿಯಮ!

    ರಾಜ್ಯಕ್ಕೆ ₹3705 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ಅಧ್ಯಯನ ತಂಡಕ್ಕೆ ಸಿಎಂ ಮನವಿ

    Revenue News | ಕರ್ನಾಟಕದಲ್ಲಿ ಜಮೀನು ಸರ್ವೆ ಶುಲ್ಕ ದಿಢೀರ್ ಹೆಚ್ಚಳ: ಇಲ್ಲಿದೆ ಹೊಸ ದರಗಳ ಮಾಹಿತಿ

    BDA News | 100ನೇ ಓಪನ್ ಹೌಸ್ ಪೂರೈಸಿದ ಬಿಡಿಎ: 4,759 ಸಾರ್ವಜನಿಕ ಸಮಸ್ಯೆ ಇತ್ಯರ್ಥ

    ಅಕ್ರಮ ಚಿನ್ನ ಸಾಗಾಟ: ನಟಿ ರನ್ಯಾ ರಾವ್‌ಗೆ ₹89 ಕೋಟಿ ದಂಡ

  • Bengaluru Focus

    ​ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ: ರಾಜ್ಯಪಾಲರಿಗೆ ಎನ್‌ಡಿಎ ನಿಯೋಗ ದೂರು

    ವೃತ್ತಿ ಬದುಕಿನ ಯಶಸ್ಸಿಗೆ ಪ್ರಾಮಾಣಿಕತೆ, ವಿನಯತೆ ಅನಿವಾರ್ಯ: ನಟ ದೊಡ್ಡಣ್ಣ

    ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

    Bescom News | ಬೆಸ್ಕಾಂಗೆ 2025-26ನೇ ಹಣಕಾಸು ವರ್ಷದಲ್ಲಿ ₹293.62 ಕೋಟಿ ಭರ್ಜರಿ ಲಾಭ

    ರಾಜ್ಯಕ್ಕೆ ₹3705 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ಅಧ್ಯಯನ ತಂಡಕ್ಕೆ ಸಿಎಂ ಮನವಿ

    ರೇಷನ್ ಕಾರ್ಡ್ ಇ-ಕೆವೈಸಿ: ‘ಅನ್ನ ಸೇವೆ’ ಆ್ಯಪ್ ಬಿಡುಗಡೆ

    BDA News | 100ನೇ ಓಪನ್ ಹೌಸ್ ಪೂರೈಸಿದ ಬಿಡಿಎ: 4,759 ಸಾರ್ವಜನಿಕ ಸಮಸ್ಯೆ ಇತ್ಯರ್ಥ

    ಅಕ್ರಮ ಚಿನ್ನ ಸಾಗಾಟ: ನಟಿ ರನ್ಯಾ ರಾವ್‌ಗೆ ₹89 ಕೋಟಿ ದಂಡ

    LPG Price Hike | ​ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ತಿಂಗಳ ಮೊದಲ ದಿನವೇ ಬೆಲೆ ಏರಿಕೆಯ ಶಾಕ್!

  • Public interest
  • BW Special
  • Life Style
  • Photo Gallery
  • Video
No Result
View All Result

Home Public interest

Human Interest Story | ಕೇವಲ 3 ನಿಮಿಷ ನಿದ್ದೆಗೆ ಜಾರಿದ, ಕಸಿದಿತ್ತು 8 ವರ್ಷದ ಘನತೆ: ಇದು ರಾತ್ರಿ ಕಾವಲುಗಾರನೊಬ್ಬನ ಮನಕಲಕುವ ಕಥೆ

ವಾಟ್ಸಾಪ್ ಗುಂಪಿನಲ್ಲಿ ಸೆಕ್ಯುರಿಟಿ ಗಾರ್ಡ್ ವಿಡಿಯೋ ವೈರಲ್; ಕಾವಲುಗಾರನ ನೈಜ ಕಷ್ಟ ಅರಿತು ಬದಲಾದ ಸೊಸೈಟಿಯ ನಿಯಮಗಳು.

by Bengaluru Wire Desk
June 12, 2026
in Public interest
Reading Time: 1 min read
0

ಪ್ರತಿದಿನ ನಾವು ಎಷ್ಟೋ ಜನರನ್ನು ನೋಡುತ್ತೇವೆ. ಆದರೆ ಅವರ ಹಿಂದಿರುವ ಕಷ್ಟಗಳು ನಮಗೆ ತಿಳಿದಿರುವುದಿಲ್ಲ. ದೇಶದ ಬಹುತೇಕ ನಗರಗಳಲ್ಲಿ ಬದುಕು ಕಟ್ಟಿಕೊಳ್ಳಲು ಬರುವ ಇಂತಹ ಅನೇಕರ ಪರಿಸ್ಥಿತಿ ಇದಕ್ಕಿಂತ ಕಳವಳಕಾರಿಯಾಗಿದೆ. ಮನುಷ್ಯತ್ವದ ದೃಷ್ಟಿಯಿಂದಲೂ ನೋಡುವಂತಾಗಬೇಕು. ಆಗ ಅಂತಸ್ತಿನ ಸ್ತರವಿಲ್ಲದೆ ವಾಸ್ತವ ಬದುಕಿನ ಅರಿವು, ಬೇರೆಯವರ ಕಷ್ಟ ಅರ್ಥವಾಗುತ್ತದೆ. ‘ಭೂಮಿಕಾ’ ಎಂಬ ಎಕ್ಸ್ (X) ಬಳಕೆದಾರರೊಬ್ಬರು ಹಂಚಿಕೊಂಡಿರುವ, ಸೆಕ್ಯುರಿಟಿ ಗಾರ್ಡ್ ರಾಮ್‌ಕಿಶನ್ ಎಂಬುವವರ ಮನ ಕರಗುವ ಘಟನೆಯೊಂದು ಈಗ ಎಲ್ಲೆಡೆ ವೈರಲ್ ಆಗಿದೆ.

​ಬೆಳಗಿನ ಜಾವ 2:13 – ಕೇವಲ ಮೂರು ನಿಮಿಷದ ನಿದ್ದೆ:

​ಸಿಲ್ವರ್ ಓಕ್ ರೆಸಿಡೆನ್ಸಿಯ ಮುಖ್ಯ ಗೇಟ್ ಬಳಿ ಸೆಕ್ಯುರಿಟಿ ಗಾರ್ಡ್ ರಾಮ್‌ಕಿಶನ್ ಕುಳಿತಿದ್ದರು. ಎಂಟು ವರ್ಷಗಳ ಸುದೀರ್ಘ ಸೇವೆಯಲ್ಲಿ ಮೊದಲ ಬಾರಿಗೆ ಆಯಾಸದಿಂದ ಅವರ ಕಣ್ಣುಗಳು ಮುಚ್ಚಿದ್ದವು. ಕೇವಲ ಮೂರು ನಿಮಿಷಗಳ ಕಾಲ ಅವರು ನಿದ್ದೆಗೆ ಜಾರಿದ್ದರು. ಸರಿಯಾಗಿ ಅದೇ ಸಮಯಕ್ಕೆ ಸೊಸೈಟಿ ಅಧ್ಯಕ್ಷರ ಮಗ ಕಾರಿನಲ್ಲಿ ಬಂದ. ಗಾರ್ಡ್ ನಿದ್ದೆ ಮಾಡುತ್ತಿರುವುದನ್ನು ನೋಡಿ, ಮೊಬೈಲ್ ತೆಗೆದು ವಿಡಿಯೋ ಮಾಡಲು ಶುರುಮಾಡಿದ.

​”ನೋಡಿ, ನಮ್ಮ ರಕ್ಷಣೆ ಮಾಡಬೇಕಾದವನು ನಿದ್ದೆ ಮಾಡಲು ಸಂಬಳ ಪಡೆಯುತ್ತಿದ್ದಾನೆ” ಎಂದು ಹೇಳುತ್ತಾ, ಆ ವಿಡಿಯೋವನ್ನು ಸೊಸೈಟಿಯ ವಾಟ್ಸಾಪ್ (WhatsApp) ಗ್ರೂಪ್‌ಗೆ ಹಾಕಿದ.

​ವಾಟ್ಸಾಪ್‌ ಗುಂಪಿನಲ್ಲಿ ಆಕ್ರೋಶದ ಮಳೆ:

​ಬೆಳಗಾಗುವಷ್ಟರಲ್ಲಿ ವಾಟ್ಸಾಪ್ ಗುಂಪಿನಲ್ಲಿ ಕಾಮೆಂಟ್‌ಗಳ ಸುರಿಮಳೆಯೇ ಹರಿದಿತ್ತು.

​”ಅವನನ್ನು ಕೂಡಲೇ ಕೆಲಸದಿಂದ ತೆಗೆದುಹಾಕಿ.”

​”ಇದು ಶುದ್ಧ ನಿರ್ಲಕ್ಷ್ಯ.”

​”ಇಂಥವರಿಗೆ ಕೆಲಸ ಕೊಡುವುದು ವೇಸ್ಟ್.”

​ಹೀಗೆ 150ಕ್ಕೂ ಹೆಚ್ಚು ಸಂದೇಶಗಳು ಬಂದಿದ್ದವು. ಆದರೆ, ಯಾರೊಬ್ಬರೂ ಆತ ಏಕೆ ನಿದ್ದೆ ಮಾಡಿದ ಎಂದು ಕೇಳುವ ಗೋಜಿಗೆ ಹೋಗಲಿಲ್ಲ.

​ಬೆಳಿಗ್ಗೆ 6:05 – ಕಣ್ಣೀರು ತರಿಸುವ ಸತ್ಯ:

​ಬೆಳಿಗ್ಗೆ ರಾಮ್‌ಕಿಶನ್‌ರನ್ನು ಸೊಸೈಟಿಯ ಕಚೇರಿಗೆ ಕರೆಯಿಸಲಾಯಿತು. “ನಿನಗೆ ಕೆಲಸ ಮಾಡುವ ಆಸಕ್ತಿ ಇದೆಯಾ?” ಎಂದು ಅಧ್ಯಕ್ಷರು ಟೇಬಲ್ ಗುದ್ದಿ ಗದರಿದರು. ರಾಮ್‌ಕಿಶನ್ ಮೌನವಾಗಿ ತಮ್ಮ ಟೋಪಿ ತೆಗೆದರು. ನಿದ್ದೆಯಿಲ್ಲದೆ ಆಯಾಸದಿಂದ ಅವರ ಕಣ್ಣುಗಳು ಊದಿಕೊಂಡು ಕೆಂಪಾಗಿದ್ದವು.

​”ಸರ್, ನಾನು ನಿನ್ನೆ ಮಧ್ಯಾಹ್ನ 2 ಗಂಟೆಯಿಂದಲೇ ಕೆಲಸದಲ್ಲಿದ್ದೇನೆ. ಮತ್ತೊಬ್ಬ ಗಾರ್ಡ್‌ಗೆ ಹುಷಾರಿಲ್ಲದ ಕಾರಣ, ಏಜೆನ್ಸಿಯವರು ಕೇವಲ 300 ರೂ. ಹೆಚ್ಚುವರಿ ನೀಡಿ ನನ್ನನ್ನೇ ಎರಡು ಪಾಳಿಯಲ್ಲಿ ಕೆಲಸ ಮಾಡಲು ಹೇಳಿದರು. ರಾತ್ರಿ 1 ಗಂಟೆಗೆ ಗೋಡೆ ಹಾರುತ್ತಿದ್ದ ಮೂವರು ಹುಡುಗರನ್ನು ಓಡಿಸಿದೆ. 1:45ಕ್ಕೆ ನಿವಾಸಿಯೊಬ್ಬರ ನಾಯಿಗೆ ಹಾಲು ಬಿಸಿ ಮಾಡಿಕೊಟ್ಟೆ. 2:10ಕ್ಕೆ ಒಂದೆರಡು ನಿಮಿಷ ಕೂರೋಣ ಎಂದು ಕುಳಿತೆ, ಅಷ್ಟರಲ್ಲಿ ಕಣ್ಣು ಮುಚ್ಚಿಹೋಯಿತು.”

​ಅವರ ಮಾತು ಕೇಳಿ ಇಡೀ ಕೊಠಡಿ ಸ್ತಬ್ಧವಾಯಿತು. “ನನ್ನ ಸಂಬಳ ತಿಂಗಳಿಗೆ 12,000 ರೂ. ಅದರಲ್ಲಿ 4,000 ರೂ. ಬಾಡಿಗೆ, 2,000 ರೂ. ಹಳ್ಳಿಯಲ್ಲಿರುವ ಅಪ್ಪ-ಅಮ್ಮನಿಗೆ ಕಳುಹಿಸುತ್ತೇನೆ. ಉಳಿದ ಹಣದಲ್ಲಿ ಹೆಂಡತಿ, ಮಕ್ಕಳನ್ನು ಸಾಕಬೇಕು. ನನ್ನ ಮಗ 9ನೇ ತರಗತಿಯಲ್ಲಿದ್ದಾನೆ. ‘ಚೆನ್ನಾಗಿ ಓದು ಮಗನೇ, ಇಲ್ಲದಿದ್ದರೆ ಜೀವನ ಪೂರ್ತಿ ಬೇರೆಯವರ ಗೇಟ್ ಬಳಿ ಹೀಗೆ ನಿದ್ದೆ ಬಿಟ್ಟು ಕಾಯಬೇಕಾಗುತ್ತದೆ’ ಎಂದು ಅವನಿಗೆ ಹೇಳುತ್ತೇನೆ” ಎಂದರು.

​ಒಂದು ಕ್ಷಣ ಮೌನವಹಿಸಿದ ಅವರು, “ನೀವು ನನ್ನ ಮೂರು ನಿಮಿಷದ ದೌರ್ಬಲ್ಯವನ್ನು ವಿಡಿಯೋ ಮಾಡಿದ್ರಿ. ಆದರೆ ಎಂಟು ವರ್ಷಗಳಿಂದ ಈ ಸೊಸೈಟಿಯನ್ನು ರಕ್ಷಿಸಲು ನಾನು ಎಚ್ಚರವಾಗಿದ್ದ ಸಾವಿರಾರು ರಾತ್ರಿಗಳನ್ನು ಯಾರೂ ರೆಕಾರ್ಡ್ ಮಾಡಲಿಲ್ಲ. ಮನುಷ್ಯರಿಗೆ ಆಯಾಸವೇ ಆಗಬಾರದು ಎಂದಿದ್ದಿದ್ದರೆ… ದೇವರು ನಮ್ಮನ್ನು ಯಂತ್ರಗಳನ್ನಾಗಿ ಮಾಡುತ್ತಿದ್ದ” ಎಂದರು. ಅಲ್ಲಿದ್ದ ಯಾರೊಬ್ಬರೂ ಅವರ ಕಣ್ಣುಗಳನ್ನು ನೋಡುವ ಸ್ಥಿತಿಯಲ್ಲಿರಲಿಲ್ಲ.

​ಬದಲಾದ ವ್ಯವಸ್ಥೆ ಹಾಗೂ ಮನುಷ್ಯತ್ವದ ಗೆಲುವು:

​ಅದೇ ದಿನ ಸಂಜೆ ಸೊಸೈಟಿಯ ಬೋರ್ಡ್ ಮೇಲೆ ಹೊಸ ನೋಟಿಸ್ ಅಂಟಿಸಲಾಗಿತ್ತು:

​ಪಾಳಿಯೊಂದಕ್ಕೆ ಇಬ್ಬರು ಗಾರ್ಡ್‌ಗಳ ನೇಮಕ

​ಗರಿಷ್ಠ 8 ಗಂಟೆಗಳ ಡ್ಯೂಟಿ

​ಗಾರ್ಡ್‌ಗಳ ಸಂಬಳ ₹18,000 ಕ್ಕೆ ಹೆಚ್ಚಳ

​ಓವರ್‌ಟೈಮ್‌ಗೆ ಪ್ರತ್ಯೇಕ ಹಣ (ಪ್ರತಿ ಫ್ಲಾಟ್‌ಗೆ ಹೆಚ್ಚುವರಿ ₹200)

​ನೋಟಿಸ್‌ನ ಕೊನೆಯಲ್ಲಿ ಒಂದು ಸಾಲನ್ನು ಬರೆಯಲಾಗಿತ್ತು: “ನಾವು ಸೆಕ್ಯುರಿಟಿಯನ್ನು ಹಣ ಕೊಟ್ಟು ತರಬಹುದು, ಆದರೆ ಮನುಷ್ಯನ ಜೀವವನ್ನಲ್ಲ.”

​ರಾತ್ರಿ 10 ಗಂಟೆ. ಬಹು ದಿನಗಳ ಬಳಿಕ ರಾಮ್‌ಕಿಶನ್ ಬೇಗನೆ ಮನೆಗೆ ಹೊರಟಿದ್ದರು. ಗೇಟ್ ಬಳಿ ಬಂದಾಗ ಅಧ್ಯಕ್ಷರ ಮಗ ಅವರನ್ನು ತಡೆದ. ಹೆಲ್ಮೆಟ್ ತೆಗೆದು ಮೆಲ್ಲನೆ ಮಾತನಾಡಿದ, “ಅಂಕಲ್… ನಾನು ಆ ವಿಡಿಯೋ ಡಿಲೀಟ್ ಮಾಡಿದ್ದೇನೆ. ಇನ್ಮುಂದೆ ಪ್ರತಿದಿನ ರಾತ್ರಿ ನಿಮ್ಮ ಟೀ ನನ್ನ ಕಡೆಯಿಂದ.” ರಾಮ್‌ಕಿಶನ್ ಮುಖದಲ್ಲಿ ಒಂದು ಸಣ್ಣ ನಗು ಮೂಡಿತು.

​ಹೌದು, ಕೆಲವೊಮ್ಮೆ ಜನ ನಿರ್ಲಕ್ಷ್ಯದಿಂದ ಇರುವುದಿಲ್ಲ, ಅವರು ಕೇವಲ ಸುಸ್ತಾಗಿರುತ್ತಾರೆ ಅಷ್ಟೇ. ಮನುಷ್ಯತ್ವವನ್ನು ಎಚ್ಚರಿಸಲು ಕೆಲವೊಮ್ಮೆ ಇಂಥದ್ದೊಂದು ಪ್ರಾಮಾಣಿಕ ಸಂಭಾಷಣೆ ಬೇಕಾಗುತ್ತದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

Next Post

ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

Next Post

ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

Please login to join discussion

Like Us on Facebook

Follow Us on Twitter

Recent News

​ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ: ರಾಜ್ಯಪಾಲರಿಗೆ ಎನ್‌ಡಿಎ ನಿಯೋಗ ದೂರು

October 6, 2026

Science News | 2026ನೇ ನೊಬೆಲ್ ವೈದ್ಯಕೀಯ ಪ್ರಶಸ್ತಿ: ಮಿದುಳಿನ ನಿಗೂಢ ಶೋಧಕ್ಕೆ ಮೂವರು ವಿಜ್ಞಾನಿಗಳಿಗೆ ಗೌರವ

October 6, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

​ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ: ರಾಜ್ಯಪಾಲರಿಗೆ ಎನ್‌ಡಿಎ ನಿಯೋಗ ದೂರು

October 6, 2026

Science News | 2026ನೇ ನೊಬೆಲ್ ವೈದ್ಯಕೀಯ ಪ್ರಶಸ್ತಿ: ಮಿದುಳಿನ ನಿಗೂಢ ಶೋಧಕ್ಕೆ ಮೂವರು ವಿಜ್ಞಾನಿಗಳಿಗೆ ಗೌರವ

October 6, 2026

ವೃತ್ತಿ ಬದುಕಿನ ಯಶಸ್ಸಿಗೆ ಪ್ರಾಮಾಣಿಕತೆ, ವಿನಯತೆ ಅನಿವಾರ್ಯ: ನಟ ದೊಡ್ಡಣ್ಣ

October 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d